ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಬಿಐಎಸ್ (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಕುರಿತ "ಒಂದು ದೇಶ ಒಂದು ಮಾನದಂಡ” ಯೋಜನೆ ಅಡಿಯಲ್ಲಿ ʻಎಸ್ಡಿಒʼ ಎಂದು ಘೋಷಿಸಲಾದ ದೇಶದ ಮೊದಲ ಸಂಸ್ಥೆಯಾಗಿ ಹೊರಹೊಮ್ಮಿದ ಆರ್ಡಿಎಸ್ಒ (ರಿಸರ್ಚ್ ಡಿಸೈನ್ & ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್)


ದೇಶದ ಎಲ್ಲಾ ಪ್ರಮುಖ ಸಂಶೋಧನೆ ಮತ್ತು ಪ್ರಮಾಣಿತ ಅಭಿವೃದ್ಧಿ ಸಂಸ್ಥೆಗಳಿಗೆ ವಿಶ್ವ ದರ್ಜೆಯ ಮಾನದಂಡಗಳನ್ನು ಅನುಸರಿಸಲು ಮತ್ತು ಅಳವಡಿಸಿಕೊಳ್ಳಲು ಮಾದರಿಯನ್ನು ನಿಗದಿ

ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ಉಪಕರಣಗಳ ತಯಾರಕ ಸಂಸ್ಥೆಗಳು, ರೈಲು ಸಾರಿಗೆ ವಲಯಕ್ಕೆ ಸೇವಾ ಮತ್ತು ಪ್ರಕ್ರಿಯೆ ಅಭಿವೃದ್ಧಿ ಸಂಸ್ಥೆಗಳು ಈಗ ಮಾನದಂಡಗಳನ್ನು ನಿಗದಿಪಡಿಸಲು ವಿಶೇಷ ಏಜೆನ್ಸಿ ʻಆರ್ಡಿಎಸ್ಒʼನ ಪ್ರಯೋಜನವನ್ನು ಪಡೆಯಬಹುದು

ಮಾನದಂಡ ರೂಪಿಸುವಿಕೆ ಪ್ರಕ್ರಿಯೆಯಲ್ಲಿ ಆರಂಭಿಕ ಹಂತದಿಂದಲೇ ಶೈಕ್ಷಣಿಕ ಕ್ಷೇತ್ರ, ಬಳಕೆದಾರರು, ಮಾನ್ಯತೆ ಪಡೆದ ಪ್ರಯೋಗಾಲಯಗಳು, ಪರೀಕ್ಷಾ ಕೇಂದ್ರಗಳು/ ಉದ್ಯಮ / ಮಾರಾಟಗಾರರು / ʻಎಂಎಸ್ಎಂಇʼ ಗಳು / ಐಆರ್ ಪೂರೈಕೆ ಸರಪಳಿ ಮುಂತಾದವುಗಳ ಪಾಲ್ಗೊಳ್ಳುವಿಕೆಯಿಂದಾಗಿ

ಮಾನದಂಡಗಳ ಅಭಿವೃದ್ಧಿ ಮತ್ತು ಅವುಗಳ ವಾಸ್ತವಿಕ ಅಳವಡಿಕೆ ಅಥವಾ ಬಳಕೆ ನಡುವಿನ ಸಮಯವನ್ನು ಕಡಿಮೆ ಮಾಡುತ್ತದೆ

ಈ ಉಪಕ್ರಮವು, ತಂತ್ರಜ್ಞಾನದ ಅಭಿವೃದ್ಧಿ ಮತ್ತು ಸಂಶೋಧನೆ ಹಂತದಿಂದ ವಾಸ್ತವಿಕ ಪರಿಸ್ಥಿತಿಯಲ್ಲಿ ಬಳಕೆಯತ್ತ ಪರಿವರ್ತನೆಯ ವೇಗವರ್ಧನೆಗೆ ನಾಂದಿ ಹಾಡಲಿದೆ

Posted On: 01 JUN 2021 1:39PM by PIB Bengaluru

ಬಿಐಎಸ್ ಅನುಮೋದನೆ ಪಡೆದಿರುವ ಅಂತಾಷ್ಟ್ರೀಯ ಗುಣಮಟ್ಟ ನಿರ್ಧರಣ ಸಂಸ್ಥೆಗಳ ಅಡಿಯಲ್ಲಿ ಎಸ್ಡಿಒಆಗಿ ಮಾನ್ಯತೆ ಪಡೆಯುವ ಮೂಲಕ ಮತ್ತು ಜಾಗತಿಕ ಪೂರೈಕೆ ಸರಪಳಿ/ಜಾಗತಿಕ ವ್ಯಾಪಾರದ ಜತೆ ಸಂಯೋಜನೆ ಹೊಂದುವುದರ ಮೂಲಕ ನಿಗಿದತ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಪ್ರಮಾಣೀಕರಣದ ಅಳವಡಿಕೆ ಹಾಗೂ ಅನುಷ್ಠಾನಕ್ಕೆ ದಾರಿಯಾಗಲಿದೆ

ಭಾರತೀಯ ರೈಲ್ವೆಯ ʻಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆʼಯು(ಆರ್ಡಿಎಸ್ಒ) ಗ್ರಾಹಕ ವ್ಯವಹಾರಗಳ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ʻಬಿಐಎಸ್ʼ (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ʻಒಂದು ದೇಶ ಒಂದು ಮಾನದಂಡʼ ಯೋಜನೆ ಅಡಿಯಲ್ಲಿ ʻಎಸ್ಡಿಒʼ ಆಗಿ ಘೋಷಿಸಲ್ಪಟ್ಟ ಮೊದಲ ಸಂಸ್ಥೆಯಾಗಿದೆ.

ಭಾರತ ಸರಕಾರದ ಅಡಿಯಲ್ಲ್ ಕಾರ್ಯ ನಿರ್ವಹಿಸುತ್ತಿರುವ ಎರಡು ಸಂಸ್ಥೆಗಳ ವಿಶಿಷ್ಟ ಉಪಕ್ರಮವು, ದೇಶದಲ್ಲಿರುವ ಇತರೆ ಎಲ್ಲಾ ಪ್ರಮುಖ ಸಂಶೋಧನೆ ಮತ್ತು ಪ್ರಮಾಣೀಕರಣ ಸಂಸ್ಥೆಗಳಿಗೆ ವಿಶ್ವದರ್ಜೆಯ ಮಾನದಂಡಗಳನ್ನು ಅನುಸರಿಸಲು ಮತ್ತು ಅಳವಡಿಸಿಕೊಳ್ಳಲು ಮಾದರಿಯನ್ನು ರೂಪಿಸಲಿದೆ.

ಭಾರತ ಸರಕಾರದ ʻಒಂದು ಒಂದು ಮಾನದಂಡʼ ಧ್ಯೇಯೋದ್ದೇಶವನ್ನು ಸಾಧಿಸಲು, ರಾಷ್ಟ್ರೀಯ ಗುಣಮಟ್ಟ ಸಂಸ್ಥೆಯಾದ ʻಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ʼ (ಬಿಐಎಸ್) "ಎಸ್ಡಿಒ ಮಾನ್ಯತೆ" ಒದಗಿಸುವ ಯೋಜನೆಯನ್ನು ಪ್ರಾರಂಭಿಸಿದೆ ಎಂಬುದನ್ನು ಸ್ಮರಿಸಬಹುದು. ಯೋಜನೆಯ ಮೂಲಕ, ದೇಶದಲ್ಲಿ ನಿರ್ದಿಷ್ಟ ವಲಯಕ್ಕೆ ಸಂಬಂಧಿಸಿದ ಮಾನದಂಡಗಳನ್ನು ಅಭಿವೃದ್ಧಿಪಡಿಸುವಲ್ಲಿ  ತೊಡಗಿರುವ ವಿವಿಧ ಸಂಸ್ಥೆಗಳ  ಹಾಲಿ ಸಾಮರ್ಥ್ಯಗಳನ್ನು ಒಟ್ಟುಗೂಡಿಸುವ ಹಾಗೂ ಅವುಗಳ ವಲಯ ಸಂಬಂಧಿತ ಪರಿಣತಿಯನ್ನು ಸಂಯೋಜಿಸುವ ಗುರಿಯನ್ನು ʻಬಿಐಎಸ್ʼ ಹೊಂದಿದೆಇದರಿಂದ ದೇಶದ ಎಲ್ಲಾ ಮಾನದಂಡ ಅಭಿವೃದ್ಧಿ ಚಟುವಟಿಕೆಗಳನ್ನು ಒಗ್ಗೂಡಿಸಲು, ಪರಿಣಾಮವಾಗಿ ʻಒಂದು ವಿಚಾರದಲ್ಲಿ ಒಂದೇ ರಾಷ್ಟ್ರೀಯ ಮಾನದಂಡʼ ನಿಗದಿಗೆ ಅನುವು ಮಾಡಿಕೊಟ್ಟಂತಾಗಲಿದೆ.

ರೈಲ್ವೆ ಸಚಿವಾಲಯದ ಏಕೈಕ ಸಂಶೋಧನೆ ಮತ್ತು ಅಭಿವೃದ್ಧಿ (ಆರ್&ಡಿ) ವಿಭಾಗವೆನಿಸಿರುವ ಲಖನೌದ ʻಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆʼಯು (ಆರ್ಡಿಎಸ್ಒ), ರೈಲ್ವೆ ವಲಯಕ್ಕೆ ಪ್ರಮಾಣೀಕರಣ ಕಾರ್ಯವನ್ನು ಕೈಗೊಳ್ಳುತ್ತಿದ್ದು, ಇದು ಭಾರತದ ಪ್ರಮುಖ ಮಾನದಂಡ ನಿಗದಿ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ʻಬಿಐಎಸ್ʼ ʻಎಸ್ಡಿಒʼ ಯೋಜನೆ ಅಡಿಯಲ್ಲಿ ʻಮಾನದಂಡ ಅಭಿವೃದ್ಧಿ ಸಂಸ್ಥೆʼಯಾಗಿ(ಎಸ್ಡಿಒ) ಮಾನ್ಯತೆ ಪಡೆಯಲು ʻಆರ್ಡಿಎಸ್ಒʼ ಉಪಕ್ರಮ ಕೈಗೊಂಡಿತು. ಪ್ರಕ್ರಿಯೆಯಲ್ಲಿ, ಆರ್ಡಿಎಸ್ಒ ತನ್ನ ʻಗುಣಮಟ್ಟ ರೂಪಿಸುವಿಕೆʼ ಕಾರ್ಯವಿಧಾನಗಳನ್ನು ʻಡಬ್ಲ್ಯೂಟಿಒ-ಟಿಬಿಟಿʼ ರೂಪಿಸಿರುವ ʻಉತ್ತಮ ಅಭ್ಯಾಸದ ಸಂಹಿತೆʼಯಲ್ಲಿ ಸೂಚಿಸಲಾಗಿರುವ ಪ್ರಮಾಣೀಕರಣದ ಅತ್ಯುತ್ತಮ ಅಭ್ಯಾಸಗಳೊಂದಿಗೆ ಮರುಹೊಂದಾಣಿಕೆ ಮಾಡುವ ನಿಟ್ಟಿನಲ್ಲಿ ಅವುಗಳ ಮರುಪರಿಶೀಲನೆ ನಡೆಸಿದೆ. ʻಎಸ್ಡಿಒʼ ಎಂದು ಗುರುತಿಸಲು ಅಗತ್ಯ ಮಾನದಂಡವಾಗಿ ʻಬಿಐಎಸ್ʼ ನಿಂದ ಕಡ್ಡಾಯಗೊಳಿಸಲಾಗಿರು ಕಾರ್ಯವಿಧಾನಗಳ ಜತೆಯೂ ಅವು ಹೊಂದಿಕೆಯಾಗುವಂತೆ ಗಮನ ಹರಿಸಿದೆ.

ʻಆರ್ಡಿಎಸ್ಒʼ ಮಾನದಂಡ ರಚನೆ ಕಾರ್ಯವಿಧಾನಗಳನ್ನು ಪರಿಶೀಲಿಸಿದ ನಂತರ, 2021 ಮೇ 24 ರಂದು ʻಆರ್ಡಿಎಸ್ಒʼಗೆ ʻಎಸ್ಡಿಒʼ (ಸ್ಟ್ಯಾಂಡರ್ಡ್ ಡೆವಲಪಿಂಗ್ ಆರ್ಗನೈಸೇಷನ್) ಮಾನ್ಯತೆಯನ್ನು ಬಿಐಎಸ್ ನೀಡಿದೆ. ಮಾನ್ಯತೆಯೊಂದಿಗೆ, ʻಬಿಐಎಸ್ʼ ಎಸ್ಡಿಒ ಮಾನ್ಯತೆ ಯೋಜನೆಯಡಿ ಮಾನ್ಯತೆ ಪಡೆದ ದೇಶದ ಮೊದಲ ಪ್ರಮಾಣಿತ ಅಭಿವೃದ್ಧಿಶೀಲ ಸಂಸ್ಥೆಯಾಗಿ ಆರ್ಡಿಎಸ್ಒ ಹೊರಹೊಮ್ಮಿದೆ. ʻಬಿಐಎಸ್ʼ ಅನುಮೋದನೆಯೊಂದಿಗೆ, ʻಎಸ್ಡಿಒʼ ಆಗಿ "ಭಾರತದಲ್ಲಿ ರೈಲ್ವೆ ಸಾರಿಗೆ ವಲಯಕ್ಕೆ ಉತ್ಪನ್ನಗಳು, ಪ್ರಕ್ರಿಯೆಗಳು ಮತ್ತು ಸೇವೆಗಳಿಗಾಗಿ ಮಾನದಂಡಗಳನ್ನು ಅಭಿವೃದ್ಧಿಪಡಿಸುವ ಸಂಸ್ಥೆ" ವ್ಯಾಪ್ತಿಯನ್ನು ʻಆರ್ಡಿಎಸ್ಒʼ ಪಡೆದಿದೆ. ಮಾನ್ಯತೆಯು 3 ವರ್ಷಗಳವರೆಗೆ ಮಾನ್ಯವಾಗಿರುತ್ತದೆ ಮತ್ತು ಸಿಂಧುತ್ವದ ಅವಧಿ ಪೂರ್ಣಗೊಂಡ ನಂತರ ಅದರ ನವೀಕರಣದ ಅಗತ್ಯವಿದೆ.

ʻಆರ್ಡಿಎಸ್ಒʼದಲ್ಲಿ ಮಾನದಂಡ ರೂಪಿಸುವಿಕೆ  ಕಾರ್ಯವಿಧಾನಗಳು ಈಗ ಆರಂಭಿಕ ಹಂತಗಳಿಂದ ಅಂದರೆ ಪರಿಕಲ್ಪನೆಯಿಂದ ಮಾನದಂಡಗಳ ಅಂತಿಮಗೊಳಿಸುವಿಕೆಯವರೆಗೆ ಒಮ್ಮತ ಆಧಾರಿತ ನಿರ್ಧಾರಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿರುತ್ತವೆ ಮತ್ತು ಉದ್ಯಮ, ಶೈಕ್ಷಣಿಕ, ಬಳಕೆದಾರರು, ಮಾನ್ಯತೆ ಪಡೆದ ಪ್ರಯೋಗಾಲಯಗಳು, ಪರೀಕ್ಷಾ ಕೇಂದ್ರಗಳು ಸೇರಿದಂತೆ ಎಲ್ಲಾ ಮಧ್ಯಸ್ಥಗಾರರ ವ್ಯಾಪಕ ಪಾಲ್ಗೊಳ್ಳುವಿಕೆಯನ್ನು ಒಳಗೊಂಡಿರುತ್ತವೆ. ಮಾನದಂಡ ರೂಪಿಸುವ ಪ್ರಕ್ರಿಯೆಯಲ್ಲಿ ʻಬಿಐಎಸ್ಎಸ್ʼ ಎಸ್ಡಿಒ ಮಾನ್ಯತೆ ಯೋಜನೆಯಡಿ ʻಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ʼ ಮಾನ್ಯತೆಯಿಂದದಾಗಿ ದೊರೆಯುವ ಕೆಲವು ಪ್ರಮುಖ ಪ್ರಯೋಜನಗಳಲ್ಲಿ: ಭಾರತೀಯ ರೈಲ್ವೆಯ ಪೂರೈಕೆ ಸರಪಳಿಯಲ್ಲಿ ಉದ್ಯಮ / ಮಾರಾಟಗಾರರು / ಎಂಎಸ್ಎಂಇ / ತಂತ್ರಜ್ಞಾನ ಅಭಿವೃದ್ಧಿಪಡಿಸುವವರ ಹೆಚ್ಚಿನ ಪಾಲ್ಗೊಳ್ಳುವಿಕೆ, ಉದ್ಯಮ / ಮಾರಾಟಗಾರರಲ್ಲಿ ಹೆಚ್ಚಿನ ಸ್ಪರ್ಧಾತ್ಮಕತೆ, ವೆಚ್ಚಕಡಿತ, ಉತ್ಪನ್ನ ಮತ್ತು ಸೇವೆಗಳ ಗುಣಮಟ್ಟದಲ್ಲಿ ಅಗಾಧ ಸುಧಾರಣೆ, ಭಾರತೀಯ ರೈಲ್ವೆಯಲ್ಲಿ ಇತ್ತೀಚಿಗೆ ವಿಕಸನಗೊಳ್ಳುತ್ತಿರುವ ತಂತ್ರಜ್ಞಾನಗಳ ಸುಗಮ ಸೇರ್ಪಡೆ, ಆಮದುಗಳ ಮೇಲಿನ ಕಡಿಮೆ ಅವಲಂಬನೆ, ʻಮೇಕ್-ಇನ್-ಇಂಡಿಯಾʼಗೆ ಒತ್ತು, ಸುಲಲಿತ ವ್ಯಾಪಾರ ವಹಿವಾಟು ಪರಿಸ್ಥಿತಿಯಲ್ಲಿ ಸುಧಾರಣೆ, ಅಂತಾರಾಷ್ಟ್ರೀಯ ಗುಣಮಟ್ಟ ತಯಾರಿಕೆ ಸಂಸ್ಥೆಗಳಲ್ಲಿ ಆರ್ಡಿಎಸ್ಒ ಮಾನ್ಯತೆ ಮತ್ತು ಜಾಗತಿಕ ಪೂರೈಕೆ ಸರಪಳಿ / ಜಾಗತಿಕ ವ್ಯಾಪಾರದೊಂದಿಗೆ ಏಕೀಕರಣ ಇವುಗಳು ಸೇರಿವೆ.

ಗುಣಮಟ್ಟ ಪ್ರಮಾಣಿಕರಣ ತಯಾರಿಕೆಯ ಪ್ರಕ್ರಿಯೆಯಲ್ಲಿ ಆರು ತತ್ವಗಳಿಗೆ ಅನುಗುಣವಾಗಿ ಪಾರದರ್ಶಕತೆ, ಮುಕ್ತತೆ, ನಿಷ್ಪಕ್ಷಪಾತತೆ, ಪರಿಣಾಮಕಾರಿತ್ವ, ಸಾಮರಸ್ಯ ಮತ್ತು ಅಭಿವೃದ್ಧಿ ಆಯಾಮವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಒತ್ತು ನೀಡಬೇಕಿದೆ ಮತ್ತು ಇದರ ನಿಯಮಗಳು ಮತ್ತು ಷರತ್ತುಗಳನ್ನು ಅನುಸರಿಸುವ ಹೊಣೆಯು ʻಆರ್ಡಿಎಸ್ಒʼ ಹೊಂದಿರಲಿದೆ. ಇದರಿಂದ ಮಾನದಂಡ ನಿಗದಿ ಮಾಡುವ ಸಂಸ್ಥೆಗಳಲ್ಲಿ ಅಂದರೆ ʻಆರ್ಡಿಎಸ್ಒʼಗಳಲ್ಲಿ ಕೈಗಾರಿಕೆ ಮತ್ತು ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆಗಳ ಒಟ್ಟಾರೆ ವಿಶ್ವಾಸ ಹಾಗೂ ನಂಬಿಕೆ ಸುಧಾರಿಸುತ್ತದೆ. ಜೊತೆಗೆ ರೈಲ್ವೆ ವಲಯಕ್ಕಾಗಿ ಮಾನದಂಡ ರೂಪಿಸುವಿಕೆ ಪ್ರಕ್ರಿಯೆಯಲ್ಲಿ ಕೊಡುಗೆ ನೀಡಲು ದೇಶದಲ್ಲಿ ಎಲ್ಲಾ ಮಧ್ಯಸ್ಥಗಾರರನ್ನು ಪ್ರೇರೇಪಿಸುತ್ತದೆ. ಇದು ಪ್ರಮಾಣೀಕರಣ ಚಟುವಟಿಕೆಯನ್ನು ಸಮನ್ವಯಗೊಳಿಸಲು ಸಹಾಯ ಮಾಡುತ್ತದೆ, ಮೂಲಕ ರಾಷ್ಟ್ರೀಯ ಮಾನದಂಡಗಳ ರಚನೆ ಮತ್ತು ಅನುಷ್ಠಾನದಲ್ಲಿ ಎಲ್ಲಾ ಮಧ್ಯಸ್ಥಗಾರರ ಹೆಚ್ಚಿನ ಪಾಲ್ಗೊಳ್ಳುವಿಕೆಗೆ ಅವಕಾಶ ಒದಗಿಸುತ್ತದೆ. ಜೊತೆಗೆ ದೀರ್ಘಾವಧಿಯಲ್ಲಿ ದೇಶದ ತಯಾರಾದ ಉತ್ಪನ್ನದ ಗುಣಮಟ್ಟಕ್ಕಾಗಿ ಬ್ರಾಂಡ್ ಇಂಡಿಯಾ ಗುರುತನ್ನು ಸೃಷ್ಟಿಸಲು ನೆರವಾಗುತ್ತದೆ.

ಮಾನದಂಡ ರೂಪಿಸುವಿಕೆ ಪ್ರಕ್ರಿಯೆಯಲ್ಲಿ ಆರಂಭಿಕ ಹಂತಗಳಿಂದಲೇ ಸಂಬಂಧ ಪಟ್ಟ ಎಲ್ಲಾ ಮಧ್ಯಸ್ಥಗಾರರು ಪಾಲ್ಗೊಳ್ಳುವಂತಹ ವಿಧಾನವನ್ನು ಅನುವಸರಿಸುವುದರಿಂದ ಮಾನದಂಡಗಳ ಅಭಿವೃದ್ಧಿ ಮತ್ತು ಅವುಗಳ ವಾಸ್ತವಿಕ ಅಳವಡಿಕೆ ಅಥವಾ ಬಳಕೆದಾರರ ಉಪಯೋಗದ ನಡುವಿನ ಸಮಯದ ಅಂತರವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ.

ತಂತ್ರಜ್ಞಾನದ ಅಭಿವೃದ್ಧಿ ಮತ್ತು ಸಂಶೋಧನೆಯ ಹಂತದಿಂದ ವಾಸ್ತವಿಕ ಬಳಕೆಯತ್ತ ಪರಿವರ್ತನೆಯ ವೇಗವರ್ಧನೆಗೆ ಉಪಕ್ರಮವು ನಾಂದಿ ಹಾಡಲಿದೆ.

***



(Release ID: 1723529) Visitor Counter : 258