ಹಣಕಾಸು ಸಚಿವಾಲಯ

2020-21ರ ಆರ್ಥಿಕ ವರ್ಷಕ್ಕೆ ಕೇಂದ್ರ ಸರ್ಕಾರದ (ತಾತ್ಕಾಲಿಕ/ ಲೆಕ್ಕಪರಿಶೋಧಕ) ಲೆಕ್ಕಪತ್ರ

ಪ್ರಕಟಣಾ ದಿನಾಂಕ: 31 MAY 2021 5:06PM by PIB Bengaluru

2020-21ರ ಆರ್ಥಿಕ ವರ್ಷದ ಕೇಂದ್ರ ಸರ್ಕಾರದ (ತಾತ್ಕಾಲಿಕ / ಲೆಕ್ಕಪರಿಶೋಧಕ) ಲೆಕ್ಕಪತ್ರಗಳನ್ನು ಕ್ರೋಡೀಕರಿಸಲಾಗಿದೆ ಮತ್ತು ವರದಿಗಳನ್ನು ಪ್ರಕಟಿಸಲಾಗಿದೆ. ಮುಖ್ಯಾಂಶಗಳನ್ನು ಕೆಳಗೆ ನೀಡಲಾಗಿದೆ: 

2020-21ರ ಅವಧಿಯಲ್ಲಿ ಭಾರತ ಸರ್ಕಾರವು ರೂ.16,89,720 ಕೋಟಿ (ಒಟ್ಟು ಸ್ವೀಕೃತಿಗಳ ಆರ್ಇ 20-21ರಲ್ಲಿ 105.50%) ಪಡೆದಿದೆ. ಇದರಲ್ಲಿ ರೂ.14,24,035 ಕೋಟಿ ತೆರಿಗೆ ಆದಾಯ (ನೆಟ್ ಟು ಸೆಂಟರ್), ರೂ .2,08,059 ಕೋಟಿ ತೆರಿಗೆ ರಹಿತ ಆದಾಯ ಮತ್ತು ಸಾಲ ರಹಿತ ಬಂಡವಾಳದ ಸ್ವೀಕೃತಿಗಳ ರೂ .57,626 ಕೋಟಿ ಸೇರಿವೆ. ಸಾಲ ರಹಿತ ಬಂಡವಾಳ ಸ್ವೀಕೃತಿಗಳಲ್ಲಿ ಸಾಲ ಮರುಪಡೆಯುವಿಕೆ (ರೂ .19,729 ಕೋಟಿ) ಮತ್ತು ಬಂಡವಾಳ ಹಿಂತೆಗೆತೆದ ಹೂಡಿಕೆ (ರೂ .37,897 ಕೋಟಿ) ಒಳಗೊಂಡಿದೆ.

ಈ ವರ್ಷದವರೆಗೆ 5,94,997 ಕೋಟಿ ರೂ.ಗಳನ್ನು ತೆರಿಗೆ ಹಂಚಿಕೆಯಾಗಿ ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಲಾಗಿದೆ. ಇದು ಹಿಂದಿನ ವರ್ಷಕ್ಕಿಂತ ರೂ.55,680 ಕೋಟಿ ಯಷ್ಟು ಕಡಿಮೆಯಿದೆ.

ಭಾರತ ಸರ್ಕಾರದ ಒಟ್ಟು ಖರ್ಚು ರೂ .35,11,181 ಕೋಟಿ (ಅನುಗುಣವಾದ ಆರ್ಇ 20-21ರಲ್ಲಿ 101.76%), ಅದರಲ್ಲಿ ರೂ.30,86,360 ಕೋಟಿ ರಾಜಸ್ವ ವೆಚ್ಚ ಮತ್ತು ರೂ.4,24,821 ಕೋಟಿ ಬಂಡವಾಳ ವೆಚ್ಚವಾಗಿದೆ. ಒಟ್ಟು ರಾಜಸ್ವ ವೆಚ್ಚದಲ್ಲಿ 6,82,079 ಕೋಟಿ ರೂ. ಬಡ್ಡಿ ಪಾವತಿ ಮತ್ತು ರೂ .6,89,545 ಕೋಟಿ ಪ್ರಮುಖ ಸಬ್ಸಿಡಿಯಾಗಿದೆ.

***


(ಪ್ರಕಟಣೆ ಐ.ಡಿ.: 1723200) ವಿಸಿಟರ್ ಕೌಂಟರ್ : 223
ಪ್ರಕಟಣೆಯನ್ನು ಇದರಲ್ಲಿ ಓದಿ: Marathi , English , Urdu , हिन्दी , Punjabi , Tamil