ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಇಪಿಎಫ್ಒ (ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ) ತನ್ನ ಸದಸ್ಯರಿಗೆ ಎರಡನೇ ಕೋವಿಡ್ -19 ಮುಂಗಡ ಹಣವನ್ನು ಪಡೆಯಲು ಅನುಮತಿಸುತ್ತದೆ


ಕೋವಿಡ್ 19 ಸಾಂಕ್ರಾಮಿಕದ ಎರಡನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗಿದೆ

Posted On: 31 MAY 2021 2:03PM by PIB Bengaluru

ಕೋವಿಡ್ -19 ಸಾಂಕ್ರಾಮಿಕದ ಎರಡನೇ ಅಲೆಯಲ್ಲಿ ತನ್ನ ಚಂದಾದಾರರನ್ನು ಬೆಂಬಲಿಸಲು, ಇಪಿಎಫ್ಒ ಈಗ ತನ್ನ ಸದಸ್ಯರಿಗೆ ಮರುಪಾವತಿಸಲು ಅಗತ್ಯವಿಲ್ಲದ ಎರಡನೇ ಕೋವಿಡ್ -19 ಮುಂಗಡವನ್ನು ಪಡೆಯಲು ಅವಕಾಶ ಮಾಡಿಕೊಟ್ಟಿದೆ. ಸಾಂಕ್ರಾಮಿಕ ಸಮಯದಲ್ಲಿ ಸದಸ್ಯರ ಆರ್ಥಿಕ ಅಗತ್ಯವನ್ನು ಪೂರೈಸಲು ವಿಶೇಷ ಹಿಂಪಡೆಯುವಿಕೆಯನ್ನು ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ (ಪಿಎಂಜಿಕೆವೈ) ಅಡಿಯಲ್ಲಿ ಮಾರ್ಚ್ 2020 ರಲ್ಲಿ ಪರಿಚಯಿಸಲಾಯಿತುಅಧಿಕೃತ ಗೆಜೆಟ್ನಲ್ಲಿ ಅಧಿಸೂಚನೆಯ ಮೂಲಕ ಪ್ಯಾರಾಗ್ರಾಫ್ 68 ಎಲ್ ಅಡಿಯಲ್ಲಿ ಉಪ-ಪ್ಯಾರಾ (3) ಅನ್ನು ಸೇರಿಸುವ ಮೂಲಕ ಕಾರ್ಮಿಕರ ಮತ್ತು ಉದ್ಯೋಗ ಸಚಿವಾಲಯದ ನೌಕರರ ಭವಿಷ್ಯ ನಿಧಿ ಯೋಜನೆ 1952 ರಲ್ಲಿ  ತಿದ್ದುಪಡಿ ಮಾಡಲಾಗಿದೆ.

ನಿಬಂಧನೆಯಡಿಯಲ್ಲಿ, ಮೂರು ತಿಂಗಳವರೆಗೆ ಮೂಲ ವೇತನ ಮತ್ತು ತುಟ್ಟಿ ಭತ್ಯೆಗಳ ವ್ಯಾಪ್ತಿಗೆ ಮರುಪಾವತಿಸುವ ಅಗತ್ಯವಿಲ್ಲದ ಹಿಂಪಡೆಯುವಿಕೆ ಅಥವಾ ಇಪಿಎಫ್ ಖಾತೆಯಲ್ಲಿ ಸದಸ್ಯರ ಖಾತೆಯಲ್ಲಿ ಇರುವ  ಮೊತ್ತದ 75% ವರೆಗೆ, ಯಾವುದು ಕಡಿಮೆಯೋ ಅದನ್ನು ಒದಗಿಸಲಾಗುತ್ತದೆ. ಸದಸ್ಯರು ಕಡಿಮೆ ಮೊತ್ತಕ್ಕೂ ಅರ್ಜಿ ಸಲ್ಲಿಸಬಹುದು.

ಸಾಂಕ್ರಾಮಿಕ ಸಮಯದಲ್ಲಿ ಕೋವಿಡ್ -19 ಮುಂಗಡವು ಇಪಿಎಫ್ ಸದಸ್ಯರಿಗೆ ಒಂದು ಉತ್ತಮ ಸಹಾಯವಾಗಿದೆ, ವಿಶೇಷವಾಗಿ ಯಾರಿಗೆ ಮಾಸಿಕ ವೇತನ ರೂ. 15,000 ಇರುವವರಿಗೆ. ಪ್ರಸ್ತುತ ಇಪಿಎಫ್ಒ 76.31 ಲಕ್ಷ ಕೋವಿಡ್ -19 ಮುಂಗಡದ ಕೋರಿಕೆಗಳನ್ನು ಬಿಡುಗಡೆಗೊಳಿಸಿದೆ ಮತ್ತು ಮೂಲಕ ಒಟ್ಟು ರೂ .18,698.15 ಕೋಟಿಗಳನ್ನು ವಿತರಿಸಿದೆ.

ಕೋವಿಡ್ -19 ಸಾಂಕ್ರಾಮಿಕದ ಎರಡನೇ ಅಲೆಯ ಸಮಯದಲ್ಲಿ, ‘ಮ್ಯೂಕರ್ ಮೈಕೋಸಿಸ್ಅಥವಾ ಕಪ್ಪು ಶಿಲೀಂಧ್ರವನ್ನು ಇತ್ತೀಚೆಗೆ ಸಾಂಕ್ರಾಮಿಕ ರೋಗವೆಂದು ಘೋಷಿಸಲಾಗಿದೆಇಂತಹ ಬಿಕ್ಕಟ್ಟಿನ ಸಮಯದಲ್ಲಿ, ಇಪಿಎಫ್ಒ ತನ್ನ ಸದಸ್ಯರಿಗೆ ಅವರ ಹಣಕಾಸಿನ ಅಗತ್ಯಗಳನ್ನು ಪೂರೈಸುವ ಮೂಲಕ ಸಹಾಯ ಹಸ್ತ ನೀಡಲು ಪ್ರಯತ್ನಿಸುತ್ತದೆ. ಈಗಾಗಲೇ ಮೊದಲ ಕೋವಿಡ್ -19 ಮುಂಗಡವನ್ನು ಪಡೆದ ಸದಸ್ಯರು ಈಗ ಎರಡನೇ ಮುಂಗಡವನ್ನು ಸಹ ಆರಿಸಿಕೊಳ್ಳಬಹುದು. ಎರಡನೇ ಕೋವಿಡ್ -19 ಮುಂಗಡವನ್ನು ಹಿಂಪಡೆಯುವ ಅವಕಾಶ ಮತ್ತು ಪ್ರಕ್ರಿಯೆಯು ಮೊದಲ ಮುಂಗಡದಂತೆಯೇ ಇರುತ್ತದೆ.

ಬಿಕ್ಕಟ್ಟಿನ ಸಮಯದಲ್ಲಿ ಆರ್ಥಿಕ ಸಹಾಯಕ್ಕಾಗಿ ಸದಸ್ಯರ ತುರ್ತು ಅಗತ್ಯವನ್ನು ಪರಿಗಣಿಸಿ, ಕೋವಿಡ್ -19 ಕೋರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಕೋರಿಕೆಗಳನ್ನು ಸ್ವೀಕರಿಸಿದ ಮೂರು ದಿನಗಳಲ್ಲಿ ಇತ್ಯರ್ಥಪಡಿಸಲು ಇಪಿಎಫ್ಒ ಬದ್ಧವಾಗಿದೆ. ಇದಕ್ಕಾಗಿ, ಇಪಿಎಫ್ಒ ಎಲ್ಲಾ ರೀತಿಯ ಸದಸ್ಯರಿಗೆ ಸಂಬಂಧಿಸಿದಂತೆ ವ್ಯವಸ್ಥೆ ಸಿಸ್ಟಮ್ ಚಾಲಿತ ಸ್ವಯಂ ಕೋರಿಕೆಯ ಇತ್ಯರ್ಥ ಪ್ರಕ್ರಿಯೆಯನ್ನು ನಿಯೋಜಿಸಿದೆ. ಆಟೋ-ಮೋಡ್ ಆಫ್ ಸೆಟಲ್ಮೆಂಟ್ ವ್ಯವಸ್ಥೆಯು ಮೊದಲಿದ್ದ 20 ದಿನಗಳ ಇತ್ಯರ್ಥದ ಸಮಯದ ಬದಲು ಇಪಿಎಫ್ಒಗೆ ಕೋರಿಕೆಗಳ ಇತ್ಯರ್ಥದ ಸಮಯದ ಚಕ್ರವನ್ನು ಕೇವಲ 3 ದಿನಗಳವರೆಗೆ ಕಡಿಮೆ ಮಾಡಲು ಶಕ್ತಗೊಳಿಸುತ್ತದೆ.

***



(Release ID: 1723111) Visitor Counter : 319