ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 23 ಕೋಟಿಗಿಂತ ಹೆಚ್ಚಿನ ಕೋವಿಡ್-19 ಲಸಿಕೆ ಡೋಸ್ ನೀಡಿಕೆ
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ 1.75 ಕೋಟಿಗಿಂತ ಹೆಚ್ಚಿನ ಲಸಿಕಾ ಡೋಸ್ ಲಭ್ಯ
Posted On:
31 MAY 2021 10:58AM by PIB Bengaluru
ದೇಶಾದ್ಯಂತ ನಡೆಯುತ್ತಿರುವ ಬೃಹತ್ ಕೋವಿಡ್-19 ಲಸಿಕಾ ಆಂದೋಲನದ ಭಾಗವಾಗಿ, ಭಾರತ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಕೋವಿಡ್-19 ಲಸಿಕೆ ನೀಡುತ್ತಾ, ಆಂದೋಲನವನ್ನು ಬೆಂಬಲಿಸುತ್ತಾ ಬಂದಿದೆ. ಇದರ ಜತೆಗೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಲಸಿಕಾ ತಯಾರಿಕಾ ಕಂಪನಿಗಳಿಂದ ನೇರವಾಗಿ ಲಸಿಕೆ ಖರೀದಿಸಲು ಅನುವು ಮಾಡಿಕೊಟ್ಟಿದೆ. ಕೋವಿಡ್-19 ಸಾಂಕ್ರಾಮಿಕ ಸೋಂಕಿನ ನಿಯಂತ್ರಣ ಮತ್ತು ಸಮರ್ಥ ನಿರ್ವಹಣೆ ಮಾಡುವ ಭಾರತ ಸರ್ಕಾರದ ಸಮಗ್ರ ಕಾರ್ಯತಂತ್ರಕ್ಕೆ ಆಧಾರಸ್ತಂಭವಾಗಿರುವ ಲಸಿಕೆ ನೀಡುವ ಆಂದೋಲನದ ಜತೆಗೆ, ಗಂಟಲು ಮತ್ತು ಮೂಗಿನ ದ್ರವ ಪರೀಕ್ಷೆ, ರೋಗ ಪತ್ತೆ, ಚಿಕಿತ್ಸೆ ಮತ್ತು ಕೋವಿಡ್ ನಿಯಂತ್ರಣದ ಸೂಕ್ತ ನಡವಳಿಕೆ ಪಾಲನೆಗೆ ಅದು ಒತ್ತು ನೀಡಿದೆ.
ಉದಾರೀಕೃತ ಮತ್ತು ವೇಗವರ್ಧಿತ ಮೂರನೇ ಹಂತದ ಲಸಿಕಾ ಆಂದೋಲನ ಕಾರ್ಯತಂತ್ರ ದೇಶಾದ್ಯಂತ ಮೇ 1ರಿಂದ ಆರಂಭವಾಗಿದೆ.
ಈ ಕಾರ್ಯತಂತ್ರದಡಿ, ಕೇಂದ್ರೀಯ ಔಷಧ ಪ್ರಯೋಗಾಲಯ ಪ್ರತಿ ತಿಂಗಳು ಅನುಮೋದಿಸುವ ಯಾವುದೇ ಲಸಿಕೆ ತಯಾರಿಕಾ ಕಂಪನಿಯ ಲಸಿಕೆಯನ್ನು ಕೇಂದ್ರ ಸರ್ಕಾರ ಖರೀದಿಸುತ್ತದೆ. ಈ ಲಸಿಕೆಗಳು ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿರಂತರ ಲಭ್ಯವಾಗುವುದನ್ನು ಖಚಿತಪಡಿಸುವ ಜತೆಗೆ, ಮೊದಲಿನಂತೆ ಕೇಂದ್ರ ಸರ್ಕಾರ ಉಚಿತವಾಗಿ ಪೂರೈಸುತ್ತಿದೆ.
ಕೇಂದ್ರ ಸರ್ಕಾರ ಇಲ್ಲಿಯ ತನಕ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಮತತ್ತು ನೇರ ಖರೀದಿ ಮೂಲಕ ಒಟ್ಟು 23 ಕೋಟಿಗಿಂತ (23,11,68,480) ಹೆಚ್ಚಿನ ಲಸಿಕಾ ಡೋಸ್|ಗಳನ್ನು ಒದಗಿಸಿದೆ.
ಇದರಲ್ಲಿ ನಷ್ಟವಾದ ಲಸಿಕೆ ಪ್ರಮಾಣವೂ ಸೇರಿದಂತೆ ಒಟ್ಟು ಬಳಕೆಯ ಪ್ರಮಾಣ 21,22,38,652 ಡೋಸ್ ಆಗಿದೆ (ಇಂದು ಬೆಳಗ್ಗೆ 8 ಗಂಟೆಗೆ ಲಭ್ಯವಾಗಿರುವ ದತ್ತಾಂಶದ ಪ್ರಕಾರ).
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ 1.75 ಕೋಟಿ ಕೋವಿಡ್ ಲಸಿಕೆ ಡೋಸ್|ಗಳು (1,75,48,648) ಬಳಕೆಗೆ ಲಭ್ಯವಿವೆ.
ಎಲ್ಲಕ್ಕಿಂತ ಮುಖ್ಯವಾಗಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇನ್ನು ಮೂರು ದಿನಗಳಲ್ಲಿ 2.73 ಲಕ್ಷ (2,73,970) ಲಸಿಕಾ ಡೋಸ್|ಗಳನ್ನು ಸ್ವೀಕರಿಸಲಿವೆ.
***
(Release ID: 1723061)
Visitor Counter : 321
Read this release in:
Tamil
,
English
,
Urdu
,
Marathi
,
Hindi
,
Bengali
,
Assamese
,
Punjabi
,
Gujarati
,
Odia
,
Telugu
,
Malayalam