ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಬ್ರಿಕ್ಸ್  ಕಾರ್ಯನಿರ್ವಾಹಕ ಗುಂಪಿನ ಸಭೆಯಲ್ಲಿ ಹೆಚ್ಚಿನ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ (ಎಚ್ಪಿಸಿ) ಮತ್ತು ಮಾಹಿತಿ ಸಂವಹನ ತಂತ್ರಜ್ಞಾನಗಳ (ಐಸಿಟಿ) ಬಗ್ಗೆ ಚರ್ಚಿಸಲಾಯಿತು

प्रविष्टि तिथि: 30 MAY 2021 9:56AM by PIB Bengaluru

ಹೆಚ್ಚಿನ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ (ಹೈ ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್  - ಎಚ್ಪಿಸಿ) ಮತ್ತು ಅದರ ಹವಾಮಾನ-ವಾತಾವರಣ-ಪರಿಸರ ಆನ್ವಯಿಕೆಗಳಂತಹ ಕ್ಷೇತ್ರಗಳಲ್ಲಿ ಬ್ರಿಕ್ಸ್ ದೇಶಗಳಲ್ಲಿ ಸಂಶೋಧನಾ ಸಹಯೋಗದ ಭವಿಷ್ಯದ ಹಾದಿಗಳು; ಔಷಧ ರೂಪುರೇಷೆ, ಕೃತಕ ಬುದ್ಧಿಮತ್ತೆ, ಮತ್ತು ಎಚ್ಪಿಸಿ ಆಧರಿತ ನಿಖರ ಔಷಧ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಸೂಪರ್ ಕಂಪ್ಯೂಟರ್ಗಳ ಆನ್ವಯಿಕೆ, ವಿಶೇಷವಾಗಿ ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ಮತ್ತು ಸುಸ್ಥಿರ ಅಭಿವೃದ್ಧಿಗೆ ಜಿಯೋಇನ್ಫರ್ಮ್ಯಾಟಿಕ್ಸ್ ಅನ್ನು ಬ್ರಿಕ್ಸ್  ಕಾರ್ಯನಿರ್ವಾಹಕ ಗುಂಪಿನ ಸಭೆಯಲ್ಲಿ ಚರ್ಚಿಸಲಾಯಿತು.

ವಿಜ್ಞಾನ, ತಂತ್ರಜ್ಞಾನ ಮತ್ತು  ಹೊಸಶೋಧ  ಯೋಜನೆ ಅಡಿಯಲ್ಲಿ, ಹೆಚ್ಚಿನ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ (ಎಚ್ಪಿಸಿ) ಮತ್ತು ಮಾಹಿತಿ ಸಂವಹನ ತಂತ್ರಜ್ಞಾನಗಳ (ಐಸಿಟಿ) ಬಗ್ಗೆ ಐದನೇ ಬ್ರಿಕ್ಸ್ ಕಾರ್ಯನಿರ್ವಾಹಕ ಗುಂಪಿನ ಸಭೆಯನ್ನು ಆನ್ ಲೈನ್ ನಲ್ಲಿ  27, 28 ಮೇ 2021 ರಂದು ದಕ್ಷಿಣ ಆಫ್ರಿಕಾದಿಂದ ಏರ್ಪಡಿಸಿ ಆಯೋಜಿಸಲಾಗಿತ್ತು.

ಎಲ್ಲಾ ಐದು ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ  ಭಾಗವಹಿಸಿದ್ದವು. ಸಭೆಯಲ್ಲಿ ಸಂಶೋಧಕರು, ಶಿಕ್ಷಣ ತಜ್ಞರು ಮತ್ತು ಸರ್ಕಾರಿ ಅಧಿಕಾರಿಗಳು ಸೇರಿದಂತೆ 50 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಭಾರತದ ಕಡೆಯಿಂದ ಸಭೆಯನ್ನು ಮುನ್ನಡೆಸಿದ ಡಿಎಸ್ ಟಿಯ ಅಂತರರಾಷ್ಟ್ರೀಯ ಸಹಕಾರ ವಿಭಾಗದ ಸಲಹೆಗಾರ ಮತ್ತು ಮುಖ್ಯಸ್ಥರಾದ ಶ್ರೀ ಸಂಜೀವ್ ಕುಮಾರ್ ವರ್ಶ್ನಿ, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ದೊಡ್ಡ ದತ್ತಾಂಶ, ಯಂತ್ರ ಕಲಿಕೆ ಮತ್ತು ಅವುಗಳಂತಹ ಹೊಸ ವಿಭಾಗಗಳು ಮುಂದೆ ಕಾಣಿಸಿಕೊಳ್ಳುವ  ದೃಷ್ಟಿಯಿಂದ   ಕ್ಷೇತ್ರದ ಮಹತ್ವವನ್ನು ಒತ್ತಿ ಹೇಳಿದರು. ಅವುಗಳೆಂದರೆ ವೈದ್ಯಕೀಯ ವಿಜ್ಞಾನ, ಕೃಷಿ, ಭೂ ವಿಜ್ಞಾನ ಮಾದರಿ ಮತ್ತು ಸಿಮ್ಯುಲೇಶನ್ ಕ್ಷೇತ್ರಗಳಲ್ಲಿ ಸಂಭಾವ್ಯ ಆನ್ವಯಿಕೆಗಳುಬ್ರಿಕ್ಸ್ ಬಹುಪಕ್ಷೀಯ ಯೋಜನೆಗಳನ್ನು ಬೆಂಬಲಿಸಲು ಹಣಕಾಸು ಸೇರಿದಂತೆ ಸಂಪನ್ಮೂಲಗಳ ಹೂಡಿಕೆಗಾಗಿ ಭಾರತದ ಬದ್ಧತೆಯನ್ನು ಅವರು ದೃಢಪಡಿಸಿದರು. ಪ್ರತಿ ರಾಷ್ಟ್ರವು ಎಚ್ ಪಿಸಿ ಮೂಲಸೌಕರ್ಯ ಜಾಲವನ್ನು ನಿರ್ಮಿಸುವಲ್ಲಿ ತಮ್ಮ ದೇಶದ ಪ್ರಗತಿಯನ್ನು ಮತ್ತು ಬ್ರಿಕ್ಸ್ ಸಹಯೋಗವನ್ನು ಮುಂದುವರಿಸಲು ಆಸಕ್ತಿಯ ಕ್ಷೇತ್ರಗಳನ್ನು ಹಂಚಿಕೊಂಡಿದೆ.

ಭಾರತದ ಕಡೆಯಿಂದ ಸಿ-ಡಿಎಸಿಯ ಹಿರಿಯ ನಿರ್ದೇಶಕರಾದ ಡಾ. ಸಂಜಯ್ ವಾಂಡ್ಕರ್ ಅವರು ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್ ನಡಿಯಲ್ಲಿ ಸೂಪರ್ ಕಂಪ್ಯೂಟರ್ ಗಳ ಸ್ಥಳೀಯ ಅಭಿವೃದ್ಧಿಯ ಉಪಕ್ರಮವನ್ನು ಮತ್ತು ಔಷಧ ರೂಪುರೇಷೆಯಲ್ಲಿಬಳಕೆದಾರ ಸ್ನೇಹಿ ಮತ್ತು ಪ್ರವಾಹದ ಸಮಗ್ರ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಮತ್ತು ನಿಯೋಜಿಸಲು ಇರುವ ಅವುಗಳ ಆನ್ವಯಿಕೆಗಳನ್ನು ಪ್ರಸ್ತುತಪಡಿಸಿದರು.

ಆರೋಗ್ಯ, ಕೃಷಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಆಳವಾದ ತಂತ್ರಜ್ಞಾನದಲ್ಲಿ ಬ್ರಿಕ್ಸ್ ನವೋದ್ಯಮ (ಸ್ಟಾರ್ಟ್ ಅಪ್)ಗಳ ನಡುವೆ ಸಹಕಾರದ ಕುರಿತಾದ ಪರಿಕಲ್ಪನಾ ಟಿಪ್ಪಣಿಯನ್ನು ಭಾರತ ಹಂಚಿಕೊಳ್ಳಲಿದೆಚೀನಾವು AI + HPC + 5 G- ಆಧರಿತ ಡಿಜಿಟಲ್ ಅವಳಿ ಪ್ಲಾಟ್ ಫಾರ್ಮ್ ಗಳನ್ನು ಮತ್ತು ಸ್ಮಾರ್ಟ್ ಉತ್ಪಾದನೆ, ನಿಖರ ಕೃಷಿ ಮತ್ತು ಮುಕ್ತ - ಮೂಲ ಪರಿಸರ ವ್ಯವಸ್ಥೆಯನ್ನು ಮತ್ತು ನಿಖರ ಔಷಧದ ಬಗ್ಗೆ.ಪ್ರಸ್ತಾಪಿಸಿತು; ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ಡಿಜಿಟಲ್ ಅರ್ಥ್ ನಲ್ಲಿ ಪ್ರಮುಖ ಯೋಜನೆಯನ್ನು ಪ್ರಸ್ತಾಪಿಸಿದವು.

ಎಲ್ಲಾ ಬ್ರಿಕ್ಸ್ ರಾಷ್ಟ್ರಗಳು ಸರ್ವಾನುಮತದಿಂದ ಒಪ್ಪಿಕೊಂಡಿರುವ  ಕಾರ್ಯನಿರ್ವಾಹಕ ಗುಂಪುಗಳ ಶಿಫಾರಸುಗಳನ್ನು ಮುಂದಿನ ಬ್ರಿಕ್ಸ್  ಯೋಜನೆಗಳಲ್ಲಿ  ಸೇರಿಸಿಕೊಳ್ಳಬಹುದು. ಮುಂದಿನ ಯೋಜನೆಗಳಿಗಾಗಿ ಕರೆಯನ್ನು 2021 ದ್ವಿತೀಯಾರ್ಧದಲ್ಲಿ ಘೋಷಿಸಬಹುದು ಎಂದು  ಬ್ರಿಕ್ಸ್ ಕರೆ ಕಾರ್ಯದರ್ಶಿಯ ಪ್ರತಿನಿಧಿ ಸೂಚಿಸಿದರು.

ಬ್ರಿಕ್ಸ್ ಎಚ್ಪಿಸಿ ಮತ್ತು ಐಸಿಟಿ ಕಾರ್ಯನಿರ್ವಾಹಕ ಗುಂಪು   ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಸಂಶೋಧಕರಿಗೆ ಪರಸ್ಪರ ಆಸಕ್ತಿಯ ಕ್ಷೇತ್ರಗಳ ಬಗ್ಗೆ ಚರ್ಚಿಸಲು ಮತ್ತು   ಪಾಲುದಾರಿಕೆಗಳನ್ನು ರೂಪಿಸಲು, ಸಾಮಾಜಿಕ ಸವಾಲುಗಳಿಗೆ ಆಳವಾದ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಅಂದರೆ ಕೈಗೆಟುಕುವ ಆರೋಗ್ಯ ರಕ್ಷಣೆ, ಸುಸ್ಥಿರ ಕೃಷಿ, ವಿಪರೀತ ಹವಾಮಾನ ಘಟನೆಗಳು ಹವಾಮಾನ, ಮತ್ತು ಹವಾಮಾನ ಮಾದರಿ ಇತ್ಯಾದಿ. ಒಂದು ವೇದಿಕೆಯನ್ನು ಒದಗಿಸುತ್ತದೆ.

ಬ್ರಿಕ್ಸ್ ದೇಶಗಳ ಪ್ರಮುಖ ವೈಜ್ಞಾನಿಕ ಸಂಸ್ಥೆಗಳು ಭಾಗವಹಿಸಿದ್ದವು : ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ ಟಿ), ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿ), ಭಾರತದಿಂದ ಅಡ್ವಾನ್ಸ್ ಕಂಪ್ಯೂಟಿಂಗ್ ಅಭಿವೃದ್ಧಿ ಕೇಂದ್ರ (ಸಿ-ಡಿಎಸಿ) ಸೇರಿವೆ; ನ್ಯಾಷನಲ್ ಲ್ಯಾಬೊರೇಟರಿ ಆಫ್ ಸೈಂಟಿಫಿಕ್ ಕಂಪ್ಯೂಟೇಶನ್ (ಎಲ್ಎನ್ಸಿಸಿ), ಬ್ರೆಜಿಲ್, ಸೆನೈ ಸಿಮ್ಯಾಟೆಕ್, ಬ್ರೆಜಿಲ್ನ ಸಂಶೋಧನಾ ಸಂಸ್ಥೆ, ರಿಸರ್ಚ್ ಕಂಪ್ಯೂಟಿಂಗ್ ಸೆಂಟರ್, ಮಾಸ್ಕೋ ಸ್ಟೇಟ್ ಯೂನಿವರ್ಸಿಟಿ (ಆರ್ಸಿಸಿ ಎಂಎಸ್ಯು), ರಷ್ಯಾ, ಗುವಾಂಗ್ ಜೌ ವಿಶ್ವವಿದ್ಯಾಲಯ, ಚೀನಾದಿಂದ ಸನ್ ಯಾಟ್-ಸೆನ್ ವಿಶ್ವವಿದ್ಯಾಲಯ. ಮತ್ತು ವಿಜ್ಞಾನ ಮತ್ತು ನಾವೀನ್ಯತೆ ಇಲಾಖೆ, ದಕ್ಷಿಣ ಆಫ್ರಿಕಾ, ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ (ಎನ್ಆರ್ಎಫ್), ದಕ್ಷಿಣ ಆಫ್ರಿಕಾ, ದಕ್ಷಿಣ ಆಫ್ರಿಕಾದ ಹವಾಮಾನ ಸೇವೆ, ದಕ್ಷಿಣ ಆಫ್ರಿಕಾ.

ಸಭೆಯು ಎಲ್ಲಾ ಬ್ರಿಕ್ಸ್ ದೇಶಗಳು ಅಂಗೀಕರಿಸಿದ ಬ್ರಿಕ್ಸ್ ವಿಜ್ಞಾನ, ತಂತ್ರಜ್ಞಾನ ಮತ್ತು ಚಟುವಟಿಕೆಗಳ ಸಂಶೋಧನೆಯ ವೇಳಾಪಟ್ಟಿಯ 2020-21 ಭಾಗವಾಗಿದೆ. ಭಾರತವು ಜನವರಿ 2021 ರಿಂದ ಬ್ರಿಕ್ಸ್ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ಮಂತ್ರಿ ಮಟ್ಟದ ಸಭೆಗಳು, ಹಿರಿಯ ಅಧಿಕೃತ ಸಭೆಗಳು ಮತ್ತು ವಲಯಾವಾರು ಸಭೆಗಳು / ಸಮ್ಮೇಳನಗಳು ಸೇರಿದಂತೆ ಸುಮಾರು 100 ಕಾರ್ಯಕ್ರಮಗಳನ್ನು ಬ್ರಿಕ್ಸ್ 2021 ವೇಳಾಪಟ್ಟಿಯ ಅಂಗವಾಗಿ ಆಯೋಜಿಸಲಾಗುವುದು.

https://static.pib.gov.in/WriteReadData/userfiles/image/image001FWQY.jpg

***


(रिलीज़ आईडी: 1722998) आगंतुक पटल : 302
इस विज्ञप्ति को इन भाषाओं में पढ़ें: Punjabi , English , Urdu , हिन्दी , Bengali , Tamil