ರೈಲ್ವೇ ಸಚಿವಾಲಯ
“ಚಾರ್ ಧಾಮ ಯಾತ್ರಿಗಳು ವೇಗದ, ಸುರಕ್ಷಿತ ಮತ್ತು ಆರಾಮದಾಯಕ ಬ್ರಾಡ್|ಗೇಜ್ ರೈಲು ಸಂಪರ್ಕ ಪಡೆಯುವಂತಾಗಬೇಕು” - ಶ್ರೀ ಪಿಯೂಷ್ ಗೋಯಲ್
ಚಾರ್ ಧಾಮಕ್ಕೆ ನೇರಸಂಪರ್ಕ ಕಲ್ಪಿಸುವ ಕೊನೆಯ ಹಂತದ ಬ್ರಾಡ್|ಗೇಜ್ ರೈಲು ಯೋಜನೆಗಳ ಪರಾಮರ್ಶೆ ಸಭೆ ನಡೆಸಿದ ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವ ಶ್ರೀ ಪಿಯೂಷ್ ಗೋಯಲ್
ಚಾರ್ ಧಾಮದ ಯಮುನೋತ್ರಿ, ಗಂಗೋತ್ರಿ, ಕೇದರನಾಥ ಮತ್ತು ಬದ್ರಿನಾಥಕ್ಕೆ ಹೊಸ ಬ್ರಾಡ್|ಗೇಜ್ ರೈಲು ಸಂಪರ್ಕ ಕಲ್ಪಿಸಲು ನಡೆಯುತ್ತಿರುವ ಅಂತಿಮ ಸ್ಥಳ ಸಮೀಕ್ಷೆ ಸದ್ಯದಲ್ಲೇ ಪೂರ್ಣ
प्रविष्टि तिथि:
27 MAY 2021 3:56PM by PIB Bengaluru
“ಹಿಂದೂಗಳ ಪವಿತ್ರ ಯಾತ್ರಾ ಸ್ಥಳ ಚಾರ್ ಧಾಮಕ್ಕೆ ತೆರಳುವ ಯಾತ್ರಿಗಳು ಚಾರ್ ಧಾಮದವರೆಗೂ ವೇಗದ, ಸುರಕ್ಷಿತ ಮತ್ತು ಆರಾಮದಾಯಕ ರೈಲು ಪ್ರಯಾಣ ಪಡೆಯುವಂತಾಗಬೇಕು”.
ಚಾರ್ ಧಾಮಕ್ಕೆ ಸೇರ ಸಂಪರ್ಕ ಕಲ್ಪಿಸುವ ಕೊನೆಯ ಹಂತದ ರೈಲು ಯೋಜನೆಗಳ ಪರಾಮರ್ಶೆ ಸಭೆಯಲ್ಲಿ ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಈ ವಿಷಯ ತಿಳಿಸಿದ್ದಾರೆ.
ಚಾರ್ ಧಾಮ ಯಾತ್ರಿಗಳು ಮತ್ತು ಭಕ್ತರ ಸುರಕ್ಷತೆ ಮತ್ತು ಆರಾಯದಾಯಕ ಪ್ರಯಾಣವನ್ನು ಗಮನದಲ್ಲಿ ಇಟ್ಟುಕೊಂಡು ಅಗತ್ಯವಿರುವ ಎಲ್ಲಾ ಪರ್ಯಾಯ ಕ್ರಮಗಳ ಪರಿಶೀಲನೆ ನಡೆಸುವಂತೆ ಅವರು, ಅಧಿಕಾರಿಗಳಿಗೆ ಸೂಚನೆ ನೀಡಿದರು. ಚಾರ್ ಧಾಮದವರಿಗೆ ರೈಲು ಸಂಪರ್ಕ ಕಲ್ಪಿಸಲು ತಗುಲುವ ವೆಚ್ಚ, ಕೊನೆಯ ಹಂತದ ಕಾಮಗಾರಿ ಪೂರ್ಣಗೊಳ್ಳಲು ಎದುರಾಗುವ ಎಲ್ಲಾ ಸಾಧಕ ಬಾಧಕಗಳನ್ನು ಪರಿಶೀಲಿಸುವಂತೆ ಅವರು ಸೂಚಿಸಿದರು.
ಪ್ರವಾಸೋದ್ಯಮದ ಅಗತ್ಯಗಳನ್ನು ಪೂರೈಸಲು ಮತ್ತು ಯಾತ್ರಿಗಳು ಸುರಕ್ಷಿತವಾಗಿ ಮತ್ತು ಸಕಾಲದಲ್ಲಿ ನೇರವಾಗಿ ದೇವಾಲಯಗಳಿಗೆ ತಲುಪುವಂತೆ ಅನುಕೂಲಗಳನ್ನು ಕಲ್ಪಿಸಲು ಸಮಗ್ರ ಯೋಜನೆ ರೂಪಿಸುವುದು ಅಗತ್ಯವಿದೆ ಎಂದು ಅವರು ನಿರ್ದೇಶನ ನೀಡಿದರು.
ಚಾರ್ ಧಾಮಕ್ಕೆ ಹೊಸ ಬ್ರಾಡ್|ಗೇಜ್ ರೈಲು ಸಂಪರ್ಕ ಕಲ್ಪಿಸುವ ಅಂತಿಮ ಸ್ಥಳ ಸಮೀಕ್ಷೆ ಕಾರ್ಯ ಪೂರ್ಣವಾಗುವ ಹಂತಕ್ಕೆ ಬಂದಿದೆ. ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರೀನಾಥ ದೇವಾಲಯಗಳಿಗೆ ರೈಲು ಸಂಪರ್ಕ ಕಲ್ಪಿಸಲು ನಡೆಯುತ್ತಿರುವ ಸ್ಥಳ ಸಮೀಕ್ಷೆ ಕಾರ್ಯ ಅಂತಿಮ ಹಂತದಲ್ಲಿದೆ.
ಕರ್ಣಪ್ರಯಾಗ ರೈಲು ನಿಲ್ದಾಣದಿಂದ ಕೇದಾರನಾಥ ಮತ್ತು ಬದರೀನಾಥ ದೇವಾಲಯಗಳಿಗೆ ರೈಲು ಸಂಪರ್ಕ ಸಿಗಲಿದೆ. ಹೃಷಿಕೇಶದಿಂದ ಕರ್ಣಪ್ರಯಾಗಕ್ಕೆ ರೈಲು ಸಂಪರ್ಕ ಕಲ್ಪಿಸುವ 125 ಕಿ.ಮೀ. ಉದ್ದದ ಹೊಸ ಬ್ರಾಡ್|ಗೇಜ್ ರೈಲು ಮಾರ್ಗ ಯೋಜನೆಯ ಭಾಗವಾಗಿ ಕೇದಾರನಾಥ ಮತ್ತು ಬದರೀನಾಥ ದೇವಾಲಯಗಳಿಗೆ ರೈಲು ಸಂಪರ್ಕ ಲಭ್ಯವಾಗಲಿದೆ. ಈ ಯೋಜನೆಯ ಕಾಮಗಾರಿ ಭರದಿಂದ ಸಾಗಿದೆ. ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳಿಗೆ ಈಗಾಗಲೇ ಇರುವ ದೊಯಿವಾಲ ನಿಲ್ದಾಣದಿಂದ ರೈಲು ಸಂಪರ್ಕ ಸಿಗಲಿದೆ.
ಚಾರ್ ಧಾಮ ಬ್ರಾಡ್|ಗೇಜ್ ರೈಲು ಸಂಪರ್ಕ ಸಮೀಕ್ಷೆಯ ಪ್ರಕಾರ, ಚಾರ್ ಧಾಮಕ್ಕೆ ಅತ್ಯಂತ ಸಮೀಪದಲ್ಲಿರುವ ಬರ್ಕೊತ್, ಉತ್ತರಕಾಶಿ, ಸೋನೆಪ್ರಯಾಗ್ ಮತ್ತು ಜೋಷಿಮಠದಲ್ಲಿ ರೈಲು ನಿಲುಗಡೆಯ ಟರ್ಮಿನಲ್|ಗಳು ಸ್ಥಾಪನೆಯಾಗಲಿವೆ. ಚಾರ್ ಧಾಮ ಯಾತ್ರಾಸ್ಥಳವು ತೀರಾ ಕಡಿದಾದ ಭೂ ಪ್ರದೇಶವಾಗಿರುವುರಿಂದ ಸಮೀಪದ ಸ್ಥಳಗಳಲ್ಲಿ ಟರ್ಮಿನಲ್|ಗಳನ್ನು ಸ್ಥಾಪಿಸಲಾಗುತ್ತಿದೆ. ಬ್ರಾಡ್|ಗೇಜ್ ರೈಲು ಯೋಜನೆಯ ನಿಯಮಾವಳಿಗಳ ಪ್ರಕಾರ, ತೀರಾ ಕಡಿದಾದ ಪ್ರದೇಶಗಳಲ್ಲಿ ರೈಲು ಮಾರ್ಗ ನಿರ್ಮಿಸುವಂತಿಲ್ಲ.
ಪ್ರವಾಸೋದ್ಯಮದ ಅಗತ್ಯಗಳನ್ನು ಪೂರೈಸಲು ಮತ್ತು ಯಾತ್ರಿಗಳು ಸುರಕ್ಷಿತವಾಗಿ ಸಕಾಲದಲ್ಲಿ ದೇವಾಲಯಗಳಿಗೆ ತಲುಪುವಂತೆ ಅವಕಾಶ ಕಲ್ಪಿಸಲು ಎಂಜಿನಿಯರಿಂಗ್ ತಂಡದಿಂದ ಮರುಪರಿಶೀಲನಾ ಸಮೀಕ್ಷೆ ನಡೆಸಲಾಗುತ್ತಿದೆ. ಪ್ರವಾಸೋದ್ಯಮ ಆಕರ್ಷಣೆಯಾಗಿ ಪರಿಸ್ರ-ಸ್ನೇಹಿ ವ್ಯವಸ್ಥೆಗಳನ್ನು ನಿರ್ಮಿಸಲು ಆದ್ಯತೆ ನೀಡಲಾಗುತ್ತಿದೆ.
ದೇಶ ವಿದೇಶಗಳಿಂದ ಅಸಂಖ್ಯಾತ ಸಂಖ್ಯೆಯ ಯಾತ್ರಿಗಳು ಮತ್ತು ಪ್ರವಾಸಿಗರ ದಂಡೇ ಚಾರ್ ಧಾಮಕ್ಕೆ ಭೇಟಿ ನೀಡುತ್ತದೆ. ಉತ್ತರಾಖಂಡ ಚಾರಣಕ್ಕೆ ಹೇಳಿ ಮಾಡಿಸಿದ ತಾಣ. ಹಾಗಾಗಿ, ಅಪಾರ ಸಂಖ್ಯೆಯ ಚಾರಣಿಗರು ಇಲ್ಲಿನ ಪ್ರವಾಸಿ ತಾಣಗಳಿಗೆ ಮನಸೋತು ಇಲ್ಲಿಗೆ ಬರುತ್ತಾರೆ. ಹಾಗಾಗಿ, ಚಾರ್ ಧಾಮಕ್ಕೆ ಸಂಪರ್ಕ ಕಲ್ಪಿಸುವ ಹೊಸ ಬ್ರಾಡ್|ಗೇಜ್ ರೈಲು ಯೋಜನೆ ಪೂರ್ಣವಾದರೆ ಪ್ರವಾಸಿಗರು, ಚಾರಣಿಗರು ಮತ್ತು ಯಾತ್ರಿಗಳಿಗೆ ಸುರಕ್ಷಿತ, ಆರಾಮದಾಯಕ, ಮಿತವ್ಯಯಕಾರಿ ಮತ್ತು ಪರಿಸರಸ್ನೇಹಿಯಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ, ವಿಫುಲ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ.
ಚಾರ್ ಧಾಮ ಕ್ಷೇತ್ರ ಕುರಿತು
ದೇವರನಾಡು ಎಂದೇ ಖ್ಯಾತವಾಗಿರುವ ಉತ್ತರಾಖಂಡದ ಗರ್ವಾಲ ಪ್ರದೇಶದಲ್ಲಿ ತಲೆಎತ್ತಿ ನಿಂತಿರುವ ಯುಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳಿರುವ ಪವಿತ್ರ ತಾಣವನ್ನು ಚಾರ್ ಧಾಮ (ನಾಲ್ಕು ಶಕ್ತಿ ತಾಣಗಳು) ಎಂದು ಕರೆಯಲಾಗುತ್ತದೆ. ಈ ದೇವಾಲಯಗಳು ಹಿಂದೂಗಳ ಪವಿತ್ರ ತೀರ್ಥಯಾತ್ರೆಯ ತಾಣವೆನಿಸಿಕೊಂಡಿವೆ. ಪ್ರತಿ ವರ್ಷ ಇಲ್ಲಿಗೆ ಲಕ್ಷಾಂತರ ಸಂಖ್ಯೆಯ ಭಕ್ತರು ಮತ್ತು ಯಾತ್ರಿಗಳು ಭೇಟಿ ನೀಡಿ, ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.
***
(रिलीज़ आईडी: 1722419)
आगंतुक पटल : 241