ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಅಭಿಯಾನದ ಪ್ರಗತಿ ಪರಿಶೀಲನೆಗಾಗಿ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಮಂತ್ರಿ


ನಾಗರಿಕರಿಗಾಗಿ ಹೊಸ ಆವಿಷ್ಕಾರಗಳು ಮತ್ತು ವಿವಿಧ ಸೇವೆಗಳೊಂದಿಗೆ ಡಿಜಿಟಲ್ ಆರೋಗ್ಯ ತಂತ್ರಜ್ಞಾನ ಕ್ರಾಂತಿಗೆ ತೆರೆದುಕೊಳ್ಳಲಿರುವ ಎನ್.ಡಿ.ಎಚ್.ಎಂ.

ಎನ್.ಡಿ.ಎಚ್.ಎಂ. ಅಡಿಯಲ್ಲಿ ಕಾರ್ಯಾಚರಣೆ ವಿಸ್ತರಣೆಗೆ ಕ್ರಮಗಳನ್ನು ಚುರುಕುಗೊಳಿಸಿ: ಪ್ರಧಾನಮಂತ್ರಿ

ಎನ್.ಡಿ.ಎಚ್.ಎಂ. ದೊಡ್ಡ ಸಂಖ್ಯೆಯ ಆರೋಗ್ಯ ಸೇವೆ ಪಡೆಯಲು ನಾಗರಿಕರಿಗೆ ಸುಗಮ ಜೀವನಗೊಳಿಸಲಿದೆ: ಪ್ರಧಾನಮಂತ್ರಿ

Posted On: 27 MAY 2021 3:25PM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಅಭಿಯಾನ (ಎನ್.ಡಿ.ಎಚ್.ಎಂ.) ಪರಾಮರ್ಶೆಗಾಗಿ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. 2020ರ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವದ ದಿನದ ಭಾಷಣದಲ್ಲಿ ಮಾನ್ಯ ಪ್ರಧಾನಮಂತ್ರಿಯವರು, ಎನ್.ಡಿ.ಎಚ್.ಎಂ.  ಆರಂಭಿಸುವುದಾಗಿ ಪ್ರಕಟಿಸಿದ್ದರು. ಅಲ್ಲಿಂದೀಚೆಗೆ ಡಿಜಿಟಲ್ ವಿಧಾನಗಳು ಮತ್ತು ದಾಖಲಾತಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಅಭಿಯಾನವನ್ನು ಆರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲಾಗಿದೆ.   ಈವರೆಗೆ ಸುಮಾರು 11.9 ಲಕ್ಷ ಆರೋಗ್ಯ ಐ.ಡಿ.ಗಳನ್ನು ಸೃಷ್ಟಿಸಲಾಗಿದ್ದು, 3106 ವೈದ್ಯರು ಮತ್ತು 1490 ಸೌಲಭ್ಯಗಳು ಈ ವೇದಿಕೆಯಲ್ಲಿ ನೋಂದಾಯಿಸಿಕೊಂಡಿವೆ.

ಏಕೀಕೃತ ಆರೋಗ್ಯ ಮುಖಾಮುಖಿ (ಯು.ಎಚ್.ಐ) - ಡಿಜಿಟಲ್ ಆರೋಗ್ಯಕ್ಕಾಗಿ ಮುಕ್ತ ಮತ್ತು ಅಂತರ ವರ್ಗಾವಣೆಯಾಗಬಲ್ಲ ಮಾಹಿತಿ ತಂತ್ರಜ್ಞಾನ ಜಾಲವನ್ನು ಶೀಘ್ರದಲ್ಲೇ ಹೊರತರಬೇಕು ಎಂದು ಅಪೇಕ್ಷಿಸಲಾಗಿದೆ. ಈ ಮುಖಾಮುಖಿ ಸಾರ್ವಜನಿಕ ಮತ್ತು ಖಾಸಗಿ ಪರಿಹಾರಗಳು ಮತ್ತು ಆನ್ವಯಿಕಗಳನ್ನು ಜೋಡಿಸಲು ಮತ್ತು ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯ ಭಾಗವಾಗಲು ಅನುವು ಮಾಡಿಕೊಡುತ್ತದೆ. ಟೆಲಿ-ಸಮಾಲೋಚನೆ ಅಥವಾ ಪ್ರಯೋಗಾಲಯ ಪರೀಕ್ಷೆಗಳಂತಹ ಅಗತ್ಯ ಆರೋಗ್ಯ ಸೇವೆಗಳನ್ನು ಶೋಧಿಸಲು, ಕಾಯ್ದಿರಿಸಿ ಮತ್ತು ಪಡೆದುಕೊಳ್ಳಲು ಇದು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಪರಿಶೀಲಿಸಿದ ಆರೋಗ್ಯ ಪೂರೈಕೆದಾರರು ಮಾತ್ರ ಈ ಪರಿಸರ ವ್ಯವಸ್ಥೆಗೆ ಸೇರುವುದನ್ನು ವ್ಯವಸ್ಥೆ ಖಚಿತಪಡಿಸುತ್ತದೆ. ಇದು ನಾಗರಿಕರಿಗೆ ಹೊಸ ಆವಿಷ್ಕಾರಗಳು ಮತ್ತು ವಿವಿಧ ಸೇವೆಗಳೊಂದಿಗೆ ಡಿಜಿಟಲ್ ಆರೋಗ್ಯ ತಂತ್ರಜ್ಞಾನ ಕ್ರಾಂತಿಗೆ ತೆರೆದುಕೊಳ್ಳುವ ಸಾಧ್ಯತೆಯಿದೆ. ಈ ವಿಧಾನದಲ್ಲಿ, ಆರೋಗ್ಯ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲಗಳನ್ನು ರಾಷ್ಟ್ರದಾದ್ಯಂತ ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು.

ಭಾರತದ ರಾಷ್ಟ್ರೀಯ ಪಾವತಿ ನಿಗಮ (ಎನ್.ಪಿ.ಸಿ.ಐ.)ನಿಂದ ಅಭಿವೃದ್ಧಿಪಡಿಸಲಾದ ಯುಪಿಐ ಇ-ವೋಚರ್ ಕುರಿತೂ ಚರ್ಚಿಸಲಾಯಿತು. ಈ ಡಿಜಿಟಲ್ ಪಾವತಿ ಆಯ್ಕೆಯು ನಿರ್ದಿಷ್ಟ ಉದ್ದೇಶಕ್ಕೆ ಸಂಪರ್ಕ ಮಾಡಲಾದ ಹಣಕಾಸಿನ ವಹಿವಾಟುಗಳನ್ನು ಸಕ್ರಿಯಗೊಳಿಸುತ್ತದೆ, ಅದನ್ನು ಉದ್ದೇಶಿತ ಬಳಕೆದಾರರು ಮಾತ್ರ ಬಳಸಬಹುದಾಗಿದೆ. ಸರ್ಕಾರದ ವಿವಿಧ ಯೋಜನೆಗಳ ಉದ್ದೇಶಿತ ಮತ್ತು ಪರಿಣಾಮಕಾರಿಯಾದ ವಿತರಣೆಗೆ ಇದು ಉಪಯುಕ್ತವಾಗುತ್ತದೆ ಮತ್ತು ಯುಪಿಐ ಇ-ವೋಚರ್‌ ಗಳನ್ನು ತಕ್ಷಣದ ಬಳಕೆಯ ಸಂದರ್ಭಗಳು ಆರೋಗ್ಯ ಸೇವೆಗಳೂ ಆಗಬಹುದು.

ಎನ್.ಡಿ.ಎಚ್.ಎಂ. ಕಾರ್ಯಾಚರಣೆಯನ್ನು ವಿಸ್ತರಿಸಲು ಕ್ರಮಗಳನ್ನು ಚುರುಕುಗೊಳಿಸುವಂತೆ ಪ್ರಧಾನಮಂತ್ರಿಯವರು ನಿರ್ದೇಶಿಸಿದರು. ಎನ್.ಡಿ.ಎಚ್.ಎಂ. ದೊಡ್ಡ ಸಂಖ್ಯೆಯ ಆರೋಗ್ಯ ಸೇವೆಗಳನ್ನು ಪಡೆಯಲು ನಾಗರಿಕರಿಗೆ ಜೀವನ ಸುಗಮಗೊಳಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.  ತಾಂತ್ರಿಕ ವೇದಿಕೆ ಮತ್ತು ದಾಖಲಾತಿ ರೂಪಿಸುವುವುದು ಅನಿವಾರ್ಯ ಅಂಶಗಳಾಗಿದ್ದರೂ. ದೇಶಾದ್ಯಂತ ನಾಗರಿಕರು ವೈದ್ಯರೊಂದಿಗೆ ಟೆಲಿ ಸಮಾಲೋಚನೆ, ಪ್ರಯೋಗಾಲಯಗಳ ಸೇವೆ, ಪರೀಕ್ಷಾ ವರದಿಗಳನ್ನು ಪಡೆಯುವುದು ಅಥವಾ ಆರೋಗ್ಯ ದಾಖಲೆಗಳನ್ನು ಡಿಜಿಟಲ್‌ ಮೂಲಕ ವೈದ್ಯರಿಗೆ ವರ್ಗಾಯಿಸುವುದು ಮತ್ತು ಮೇಲಿನ ಯಾವುದೇ ಸೇವೆಗಳಿಗೆ ಡಿಜಿಟಲ್ ಮೂಲಕ ಹಣ ಪಾವತಿಸುವಂತಹ ಸೇವೆಗಳನ್ನು ಪಡೆಯಲು ಅನುವು ಮಾಡಿಕೊಡುವ ಮೂಲಕ ಮಾತ್ರ ನಾಗರಿಕರಿಗೆ ವೇದಿಕೆಯ ಉಪಯುಕ್ತತೆ ಗೋಚರಿಸುತ್ತದೆ ಎಂದು ಅವರು ಗಮನಿಸಿದರು. ಈ ನಿಟ್ಟಿನ ಪ್ರಯತ್ನಗಳ ಸಹಯೋಗಕ್ಕೆ ಎನ್.ಎಚ್.ಎ.ಯೊಂದಿಗೆ ಆರೋಗ್ಯ ಸಚಿವಾಲಯ ಮತ್ತು ವಿಧ್ಯುನ್ಮಾನ ಮತ್ತು ಐಟಿ ಸಚಿವಾಲಯಗಳಿಗೆ ಅವರು ನಿರ್ದೇಶನ ನೀಡಿದರು.

***



(Release ID: 1722157) Visitor Counter : 234