ಇಂಧನ ಸಚಿವಾಲಯ

ಪವರ್ ಗ್ರಿಡ್ ನಿಂದ ಬೆಂಗಳೂರಿನಲ್ಲಿ ಕೋವಿಡ್ ಲಸಿಕೆ ಶಿಬಿರ

Posted On: 26 MAY 2021 3:05PM by PIB Bengaluru

ಭಾರತ ಸರ್ಕಾರದ ಇಂಧನ ಸಚಿವಾಲಯದ  ಮಹಾರತ್ನ ಸಿ.ಪಿ.ಎಸ್.ಯು. ಭಾರತೀಯ ಪವರ್ ಗ್ರಿಡ್ ನಿಗಮ ನಿಯಮಿತ (ಪವರ್ ಗ್ರಿಡ್) ತನ್ನ ಉದ್ಯೋಗಿಗಳು ಮತ್ತು ಅವರ ಕುಟುಂಬದ ಸದಸ್ಯರನ್ನು ಕೋವಿಡ್ -19 ಸಾಂಕ್ರಾಮಿಕದಿಂದ ರಕ್ಷಿಸಲು ಅವರಿಗಾಗಿ ದೇಶಾದ್ಯಂತ ಹಲವು ಲಸಿಕಾ ಶಿಬಿರಗಳನ್ನು ಆಯೋಜಿಸುತ್ತಿದೆ. ಪವರ್ ಗ್ರಿಡ್ ಎಲ್ಲ ಶಾಖೆಗಳಲ್ಲಿ ಲಸಿಕಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.  

ಲಸಿಕಾ ಶಿಬಿರವನ್ನು ದಕ್ಷಿಣ ವಲಯ -II, ಪ್ರಾದೇಶಿಕ ಪ್ರಧಾನ ಕಚೇರಿ, ಬೆಂಗಳೂರು ಇಲ್ಲಿ .ಎಂ.ಸಿ., ಭದ್ರತಾ ಸಿಬ್ಬಂದಿ, ಚಾಲಕರು, ಕ್ಯಾಂಟೀನ್ ಮತ್ತು ಸಾರಿಗೆ ಶಿಬಿರದ ಸಿಬ್ಬಂದಿಯೊಂದಿಗೆ ಆರ್.ಎಚ್.ಕ್ಯು, ಯಲಹಂಕ ಉಪ ಕೇಂದ್ರ, ಬಿಡದಿ ಉಪ ಕೇಂದ್ರ, ಸೋಮನಹಳ್ಳಿ ಉಪ-ಕೇಂದ್ರ, ತುಮಕೂರು ಉಪ -ಕೇಂದ್ರದ ನೌಕರರ ಮತ್ತು ಅವಲಂಬಿತ/ಅವಲಂಬಿತರಲ್ಲದ ಕುಟುಂಬದ ಸದಸ್ಯರಿಗಾಗಿ ಆಯೋಜಿಸಿದೆ.

ಸುಮಾರು 110 ನೌಕರರು, ಅವಲಂಬಿತ ಕುಟುಂಬದ ಸದಸ್ಯರು ಮತ್ತು ಪಿ..ಎಸ್..ಸಿ. ಮತ್ತು ಎಸ್.ಆರ್.ಪಿ.ಸಿ. ಗುತ್ತಿಗೆ ಕಾರ್ಮಿಕರು ಬೆಂಗಳೂರಿನ ಮಣಿಪಾಲ್ ಆಸ್ಪತೆಯ ಸಹಯೋಗದಲ್ಲಿ ಆಯೋಜಿಸಿರುವ ಶಿಬಿರದ ಭಾಗವಾಗಿರುತ್ತಾರೆ, ಇದರಲ್ಲಿ 250 ಡೋಸ್ ಲಸಿಕೆಯನ್ನು ನೀಡಲಾಗುತ್ತದೆ.

***



(Release ID: 1721884) Visitor Counter : 175