ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ ಪರಿಹಾರ ನೆರವು ಕುರಿತಂತೆ ಅಪ್ಡೇಟ್


ಇದುವರೆಗೆ 17,755 ಆಮ್ಲಜನಕ ಕಾನ್ಸಂಟ್ರೇಟರ್ ಗಳು; 15,961 ಆಮ್ಲಜನಕ ಸಿಲಿಂಡರ್ ಗಳು; 19 ಆಮ್ಲಜನಕ ಉತ್ಪಾದನಾ ಸ್ಥಾವರಗಳು; 12,913 ವೆಂಟಿಲೇಟರುಗಳು/ಬಿ.ಐ.ಪಿ.ಎ.ಪಿ; ~6.9 ಲಕ್ಷ ರೆಮಿಡಿಸಿವಿರ್ ಬಾಟಲಿಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸಲಾಗಿದೆ/ತ್ವರಿತವಾಗಿ ಕಳುಹಿಸಿಕೊಡಲಾಗಿದೆ

Posted On: 24 MAY 2021 3:40PM by PIB Bengaluru

ಭಾರತ ಸರಕಾರವು 2021 ಏಪ್ರಿಲ್ 27 ರಿಂದ ಅಂತಾರಾಷ್ಟ್ರೀಯ ಸಹಕಾರದಲ್ಲಿ ಕೋವಿಡ್ -19 ಪರಿಹಾರಾರ್ಥವಾಗಿ  ವಿವಿಧ ದೇಶಗಳಿಂದ/ ಸಂಘಟನೆಗಳಿಂದ ವೈದ್ಯಕೀಯ ಪೂರೈಕೆ ಮತ್ತು ಸಲಕರಣೆಗಳನ್ನು ಪಡೆಯುತ್ತಿದೆ. ಇವುಗಳನ್ನು ತ್ವರಿತವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅವುಗಳ ಕೋವಿಡ್ -19  ನಿರ್ವಹಣೆಗೆ ಪೂರಕವಾಗಿ ಕಳುಹಿಸಿಕೊಡಲಾಗುತ್ತಿದೆ/ಪೂರೈಸಲಾಗುತ್ತಿದೆ.

ಒಟ್ಟು, 17,755 ಆಮ್ಲಜನಕ ಕಾನ್ಸಂಟ್ರೇಟರ್ ಗಳು; 15,961 ಆಮ್ಲಜನಕ ಸಿಲಿಂಡರುಗಳು; 19 ಆಮ್ಲಜನಕ ಉತ್ಪಾದನಾ ಸ್ಥಾವರಗಳು, 12,913 ವೆಂಟಿಲೇಟರುಗಳು/ಬಿಐ.ಪಿ..ಪಿ; ~6.9 ಲಕ್ಷ ರೆಮಿಡಿಸಿವಿರ್ ಬಾಟಲಿಗಳನ್ನು 2021 ಏಪ್ರಿಲ್ 27 ರಿಂದ 2021 ಮೇ 23 ರವರೆಗೆ ರಸ್ತೆ ಮತ್ತು ವಾಯು ಸಾರಿಗೆ ಮೂಲಕ ಪೂರೈಸಲಾಗಿದೆ/ಕಳುಹಿಸಿಕೊಡಲಾಗಿದೆ

ಒಂಟಾರಿಯೋ (ಕೆನಡ) ಯು.ಕೆ.ಆಸ್ಟ್ರೇಲಿಯಾ, ಮಲೇಶಿಯಾ, ಯು.ಎಸ್..ಎಸ್.ಪಿ.ಎಫ್, ಬುದ್ಧಿಸ್ಟ್ ಸಂಘ (ವಿಯೆಟ್ನಾಂ)ಎಸ್. ಮತ್ತು ಜೆ. ಚಾರಿಟೇಬಲ್ ಟ್ರಸ್ಟ್ (ಯು.ಕೆ.) ಗಳಿಂದ 2021 ಮೇ 22/23ರಂದು ಬಂದಿರುವ ಪ್ರಮುಖ ಸರಕುಗಳಲ್ಲಿ ಕೆಳಗಿನವು ಸೇರಿವೆ

ಸರಕುಗಳು

ಒಟ್ಟು ಸಂಖ್ಯೆ

ಆಮ್ಲಜನಕ ಕಾನ್ಸಂಟ್ರೇಟರ್ ಗಳು

1,125

ವೆಂಟಿಲೇಟರ್ ಗಳು/ಬಿಐ-ಪಿ..ಪಿ/ಸಿ.ಪಿ..ಪಿ

1,397

* ಹೆಚ್ಚುವರಿಯಾಗಿ ಮುಖ ಕವಚಗಳು, ಹಾಗು ವೈರಲ್ ವರ್ಗಾವಣೆ ಮಾಧ್ಯಮ (ವೈರಲ್ ಟ್ರಾನ್ಸ್ಪೋರ್ಟ್ ಮೀಡಿಯಾ) ಬಂದಿರುತ್ತದೆ.

ತಕ್ಷಣವೇ ಅವುಗಳ ಸಮರ್ಪಕ ಮಂಜೂರಾತಿ ಮತ್ತು ಪಡೆದುಕೊಳ್ಳುವ ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತು ಸಂಸ್ಥೆಗಳಿಗೆ ರವಾನೆ ಮಾಡುವುದು ಚಾಲ್ತಿಯಲ್ಲಿರುವ ಪ್ರಕ್ರಿಯೆಯಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ಕಾರ್ಯಚಟುವಟಿಕೆಯನ್ನು ನಿಯಮಿತವಾಗಿ ಸಮಗ್ರವಾಗಿ ಉಸ್ತುವಾರಿ ಮಾಡುತ್ತಿದೆ. ದಾನ, ಸಹಾಯ ಮತ್ತು ದೇಣಿಗೆಗಳ ರೂಪದಲ್ಲಿ ಅಂತಾರಾಷ್ಟ್ರೀಯ ಸಹಕಾರದಡಿ ಬರುತ್ತಿರುವ ವಿದೇಶೀ ಕೋವಿಡ್ ಪರಿಹಾರ ಸಾಮಗ್ರಿಗಳನ್ನು ಪಡೆದು ವಿತರಿಸುವುದಕ್ಕಾಗಿಯೇ ಕೇಂದ್ರ ಆರೋಗ್ಯ ಸಚಿವಾಲಯವು ಪ್ರತ್ಯೇಕ ಸಮನ್ವಯ ಘಟಕವನ್ನು ರೂಪಿಸಿದೆ. ಘಟಕ /ಕೋಶವು 2021 ಏಪ್ರಿಲ್ 26 ರಿಂದ ಕಾರ್ಯಾರಂಭ ಮಾಡಿದೆ. 2021 ಮೇ 2 ರಿಂದ ಆರೋಗ್ಯ ಸಚಿವಾಲಯವು ಗುಣಮಟ್ಟ ಕಾರ್ಯಾಚರಣಾ ಪ್ರಕ್ರಿಯೆಯನ್ನು ರೂಪಿಸಿ ಜಾರಿಗೆ ತಂದಿದೆ.

***


(Release ID: 1721336) Visitor Counter : 223