ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 21.80 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳ ಪೂರೈಕೆ 


ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಸಿಕೆ ನೀಡಲು ಇನ್ನೂ  1.80 ಕೋಟಿಗಿಂತಲೂ ಅಧಿಕ ಡೋಸ್‌ಗಳು ಲಭ್ಯ

Posted On: 24 MAY 2021 11:59AM by PIB Bengaluru

ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಭಾಗವಾಗಿ, ಭಾರತ ಸರಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಉಚಿತವಾಗಿ ಒದಗಿಸುವ ಮೂಲಕ ಬೆಂಬಲ ನೀಡುತ್ತಿದೆ. ಇದಲ್ಲದೆ, ಭಾರತ ಸರಕಾರವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆಗಳನ್ನು ನೇರವಾಗಿ ಖರೀದಿಸಲು ಅನುಕೂಲ ಮಾಡಿಕೊಡುತ್ತಿದೆ. ಸಾಂಕ್ರಾಮಿಕದ ನಿಯಂತ್ರಣ ಮತ್ತು ನಿರ್ವಹಣೆಗೆ ಭಾರತ ಸರಕಾರ ಪರೀಕ್ಷೆ, ಪತ್ತೆ, ಚಿಕಿತ್ಸೆ ಮತ್ತು ಕೋವಿಡ್‌-ಸೂಕ್ತ ನಡವಳಿಕೆ ಸೂತ್ರಗಳನ್ನು ಒಳಗೊಂಡ ಸಮಗ್ರ ಕಾರ್ಯತಂತ್ರವನ್ನು ಅನುಸರಿಸುತ್ತಿದ್ದು, ಲಸಿಕೆಯೂ ಇದರ ಅವಿಭಾಜ್ಯ ಅಂಗವಾಗಿದೆ. 

ಕೋವಿಡ್-19 ಲಸಿಕೆಯ ಉದಾರೀಕರಣ ಹಾಗೂ ವೇಗವರ್ಧಿತ 3ನೇ ಹಂತದ ಕಾರ್ಯತಂತ್ರದ ಅನುಷ್ಠಾನವು 2021ರ ಮೇ 1 ರಿಂದ ಆರಂಭವಾಗಿದೆ. 
ಈ ಕಾರ್ಯತಂತ್ರದ ಅಡಿಯಲ್ಲಿ, ಪ್ರತಿ ತಿಂಗಳಲ್ಲಿ ಯಾವುದೇ ತಯಾರಕರು ಉತ್ಪಾದಿಸುವ ಕೇಂದ್ರ ಔಷಧ ಪ್ರಯೋಗಾಲಯದ (ಸಿಡಿಎಲ್) ಅನುಮೋದನೆ ಪಡೆದ ಲಸಿಕೆಯಲ್ಲಿ ಶೇ. 50ರಷ್ಟು ಡೋಸ್‌ಗಳನ್ನು  ಭಾರತ ಸರಕಾರವು ಖರೀದಿಸುತ್ತದೆ. ರಾಜ್ಯ ಸರಕಾರಗಳಿಗೆ ಈ ಹಿಂದಿನಂತೆಯೇ  ಈ ಡೋಸ್‌ಗಳು ಸಂಪೂರ್ಣ ಉಚಿತವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ. 
ಭಾರತ ಸರಕಾರವು ಇಲ್ಲಿಯವರೆಗೆ, ಉಚಿತವಾಗಿ ಮತ್ತು ರಾಜ್ಯ ಸರಕಾರಗಳಿಂದ ನೇರ ಖರೀದಿ ಮಾರ್ಗದ ಮೂಲಕ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 21.80 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು (21,80,51,890) ಒದಗಿಸಿದೆ.
ಇದರಲ್ಲಿ, ಮೇ 23 2021ರವರೆಗಿನ ಸರಾಸರಿ ಲೆಕ್ಕಾಚಾರದ ಆಧಾರದ ಮೇಲೆ ವ್ಯರ್ಥವಾದ ಡೋಸ್‌ಗಳೂ  ಸೇರಿದಂತೆ ಒಟ್ಟು 20,00,08,875 ಡೋಸ್‌ಗಳನ್ನು ಬಳಕೆ ಮಾಡಲಾಗಿದೆ (ಇಂದು ಬೆಳಿಗ್ಗೆ 8 ಗಂಟೆಗೆ ಲಭ್ಯವಿರುವ ದತ್ತಾಂಶದ ಪ್ರಕಾರ).

ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಸಿಕೆ ನೀಡಲು ಇನ್ನೂ 1. 80 ಕೋಟಿಗಿಂತಲೂ ಅಧಿಕ (1,80,43,015) ಡೋಸ್‌ಗಳು ಲಭ್ಯವಿವೆ.

ಇದಲ್ಲದೆ, ಇನ್ನೂ 48 ಲಕ್ಷ (40,00,650) ಲಸಿಕೆ ಡೋಸ್‌ಗಳು ಸಾಗಣೆ ಹಂತದಲ್ಲಿದ್ದು ಮುಂದಿನ 3 ದಿನಗಳಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಲಿವೆ. 

***



(Release ID: 1721286) Visitor Counter : 205