ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಸದಾ ರಕ್ತದಲ್ಲಿನ ಸಕ್ಕರೆ ಅಂಶದ ಮಟ್ಟದ ಬಗ್ಗೆ ನಿಗಾ ಮತ್ತು ನಿಯಂತ್ರಣದಲ್ಲಿಡಿ:ಮಧುಮೇಹ ರೋಗಿಗಳಿಗೆ ಸಲಹೆ

ಸೌಮ್ಯ ಲಕ್ಷಣಗಳ ಕೋವಿಡ್ -19 ರೋಗಿಗಳಿಗೆ ಸ್ಟೀರಾಯ್ಡ್ ಕಡ್ಡಾಯವಾಗಿ ಬೇಡವೇ ಬೇಡ: ಏಮ್ಸ್ ನಿರ್ದೇಶಕರು

ಸದಾ ಜಾಗೃತರಾಗಿರಿ, ಸಣ್ಣ ರೋಗಲಕ್ಷಣವನ್ನೂ ಉಪೇಕ್ಷಿಸಬೇಡಿ, ಮ್ಯೂಕರ್ ಮೈಕೋಸಿಸ್ ನಿಂದ ಸುರಕ್ಷಿತವಾಗಿರಿ

Posted On: 21 MAY 2021 1:07PM by PIB Bengaluru

ಕಪ್ಪು ಶಿಲೀಂಧ್ರ ಸೋಂಕು ಎಂದೇ ಕರೆಸಿಕೊಂಡಿರುವ ಮ್ಯೂಕರ್ ಮೈಕೋಸಿಸ್, ಹೊಸ ಕಾಯಿಲೆಯೇನಲ್ಲ. ಸಾಂಕ್ರಾಮಿಕ ರೋಗಕ್ಕೂ ಮೊದಲೇ ಇಂಥ ಸೋಂಕುಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಅಂತಹ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ ಇತ್ತು. ಆದರೆ ಈಗ, ಕೋವಿಡ್ -19ರಿಂದಾಗಿ, ಈ ಅಪರೂಪದ ಮತ್ತು  ಮಾರಣಾಂತಿಕ ಶಿಲೀಂಧ್ರ ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದೆ. ಕೊರೊನಾ ವೈರಾಣು ಕಾಯಿಲೆ ಸಂಬಂಧಿತ ಮ್ಯೂಕರ್ ಮೈಕೋಸಿಸ್ (ಸಿಎ.ಎಂ) ಕೋವಿಡ್ ನಿಂದ ಚೇತರಿಸಿಕೊಳ್ಳುತ್ತಿರುವವರಲ್ಲಿ ಮತ್ತು ಗುಣಮುಖರಾದವರಲ್ಲಿ ಕಾಣಿಸುತ್ತಿದೆ. ನಾವು ಇದೇ ವಿಚಾರದ ನಮ್ಮ ಹಿಂದಿನ ಲೇಖನದ ಮೇಲೆ, ನಾವು ನಮ್ಮನ್ನು ಮತ್ತು ನಮ್ಮ ಆಪ್ತೇಷ್ಟರನ್ನು ಈ ಕಪ್ಪು ಶಿಲೀಂಧ್ರ ಸೋಂಕಿನಿಂದ ರಕ್ಷಿಸಿಕೊಳ್ಳುವುದು ಹೇಗೆ ಎಂದು ತಿಳಿಯೋಣ.    

 

 

ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅವರು ಕಳೆದ ವಾರ ಪತ್ರಿಕಾ ಗೋಷ್ಠಿಯ ವೇಳೆ ಹೆಚ್ಚುತ್ತಿರುವ ಪ್ರಕರಣಗಳ ಕುರಿತಂತೆ ವಿವರ ನೀಡಿದ್ದರು. “ಈ ಮೊದಲು, ಡಯಾಬಿಟಿಸ್ ಮೆಲ್ಲಿಟಸ್‌ -ಮಧುಮೇಹದಿಂದ ಬಳಲುತ್ತಿರುವ ಜನರಲ್ಲಿ ಮ್ಯೂಕರ್ ಮೈಕೋಸಿಸ್ ಅನ್ನು ಸಾಮಾನ್ಯವಾಗಿ ಗುರುತಿಸಲಾಗುತ್ತಿತ್ತು, ಅಂದರೆ ಒಬ್ಬರ ರಕ್ತದಲ್ಲಿನ ಸಕ್ಕರೆ (ಗ್ಲೂಕೋಸ್) ಮಟ್ಟವು ಅಸಹಜವಾಗಿ ಅಧಿಕವಾಗಿರುವ ಸ್ಥಿತಿ. ಕೀಮೋಥೆರಪಿಗೆ ಒಳಗಾಗುವ ಕ್ಯಾನ್ಸರ್ ರೋಗಿಗಳು, ಅಂಗಾಂಗ ಕಸಿ ಮಾಡಿಸಿಕೊಂಡವರು ಮತ್ತು ರೋಗನಿರೋಧಕ ಔಷಧಿಗಳನ್ನು ತೆಗೆದುಕೊಳ್ಳುವ ಜನರಲ್ಲಿ (ಪ್ರತಿ ರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಔಷಧಿಗಳು) ಸಹ ಅದು ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಕೋವಿಡ್-19 ಮತ್ತು ಅದರ ಚಿಕಿತ್ಸೆಯಿಂದಾಗಿ, ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಏಮ್ಸ್ ನಲ್ಲಿಯೇ ಶಿಲೀಂಧ್ರಗಳ ಸೋಂಕಿನ 20ಕ್ಕೂ ಹೆಚ್ಚು ಪ್ರಕರಣಗಳಿವೆ, ಇವರೆಲ್ಲ ಕೋವಿಡ್ ಸೋಂಕಿತರೆ. ಅನೇಕ ರಾಜ್ಯಗಳಲ್ಲಿ 400 ರಿಂದ 500 ಪ್ರಕರಣಗಳನ್ನು ವರದಿಯಾಗಿವೆ, ಅವರೆಲ್ಲರೂ ಕೋವಿಡ್ ರೋಗಿಗಳೇ.”

ಕೋವಿಡ್ 19 ರೋಗಿಗಳನ್ನು ಚೇತರಿಕೆಯ ವೇಳೆ ಅಥವಾ ನಂತರ ಅದು ಹೇಗೆ ಮತ್ತು ಏಕೆ ಬಾಧಿಸುತ್ತದೆ?

ಕೋವಿಡ್-19 ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳು ಲಿಂಫೋಸೈಟ್‌ ಗಳ ಸಂಖ್ಯೆಯನ್ನು ತಗ್ಗಿಸುತ್ತದೆ.

ಲಿಂಫೊಸೈಟಗಳು  ಬಿಳಿರಕ್ತಕಣಗಳಲ್ಲಿ ಒಂದು ಬಗೆಯಾಗಿದ್ದು ಇದು ಸೂಕ್ಷ್ಮಜೀವಿ  ವೈರಾಣುಗಳು, ಬ್ಯಾಕ್ಟೀರಿಯಾ ಮತ್ತು ಪರಾವಲಂಬಿಗಳಂತಹ ರೋಗಕಾರಕಗಳ ವಿರುದ್ಧ ನಮ್ಮ ದೇಹವನ್ನು ರಕ್ಷಿಸುವ ಕಾರ್ಯ ನಿರ್ವಹಿಸುತ್ತದೆ. ಲಿಂಫೋಸೈಟ್ಸ್ ಸಂಖ್ಯೆ ಕಡಿಮೆಯಾದರೆ, ಲಿಂಫೋಪೆನಿಯಾಗೆ ಕಾರಣವಾಗಿ   ಅವಕಾಶವಾದಿ ಶಿಲೀಂಧ್ರಕ್ಕೆ  ಕೋವಿಡ್-19 ರೋಗಿಗಳಲ್ಲಿ ಸೋಂಕಿಗೆ ದಾರಿ ಮಾಡಿಕೊಡುತ್ತದೆ.

ರೋಗ ನಿರೋಧಕ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸದ ರೋಗಿಗಳಲ್ಲಿ ಮ್ಯೂಕರ್ ಮೈಕೊಸಿಸ್ ಸಂಭವಿಸುವ ಅವಕಾಶ ಹೆಚ್ಚಾಗಿರುತ್ತದೆ, ಮತ್ತು ಕೋವಿಡ್-19 ಚಿಕಿತ್ಸೆಯು ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯವನ್ನು ನಿಗ್ರಹಿಸಲು ಒಲವು ತೋರುತ್ತಿರುವುದರಿಂದ, ಇದು ಅಂತಹ ರೋಗಿಗಳು ಕಪ್ಪು ಶಿಲೀಂಧ್ರ ಸೋಂಕಿಗೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ.

 

ರೋಗ ಮತ್ತು ರೋಗ ಲಕ್ಷಣಗಳು:

ಮ್ಯೂಕರ್ ಮೈಕೋಸಿಸ್ ಅನ್ನು ಮಾನವ ದೇಹದ ಯಾವ ಅಂಗದ ಮೇಲೆ ಆಕ್ರಮಣ ಮಾಡುತ್ತದೆ ಎಂಬುದರ ಆಧಾರದ ಮೇಲೆ ವರ್ಗೀಕರಿಸಬಹುದು. ಬಾಧಿತ ದೇಹದ ಭಾಗವನ್ನು ಅವಲಂಬಿಸಿ ಸೋಂಕಿನ ಲಕ್ಷಣಗಳು ಮತ್ತು ರೋಗಲಕ್ಷಣಗಳು ಸಹ ಬದಲಾಗುತ್ತವೆ.

•       ರೈನೋ ಆರ್ಬಿಟಲ್ ಸೆರೆಬ್ರಲ್ ಮ್ಯೂಕರ್ ಮೈಕೋಸಿಸ್: ಶಿಲೀಂಧ್ರದ ಬಿಜಕಣಗಳು ಗಾಳಿಯಲ್ಲಿದ್ದು  ಉಸಿರಾಟದ ಮೂಲಕ ಸೋಂಕು ಉಂಟಾಗಬಹುದು. ಇದು ಮೂಗು, ಕಣ್ಣು / ಕಣ್ಣಿನ ಸುತ್ತಲ ಮೂಳೆ, ಬಾಯಿಯ ಕುಳಿ ಮತ್ತು ಮೆದುಳಿಗೂ ಸಹ ಸೋಂಕು ಹರಡುತ್ತದೆ. ತಲೆನೋವು, ಮೂಗಿನಲ್ಲಿ ತೊಂದರೆ, ಸಿಂಬಳ (ಹಸಿರು ಬಣ್ಣ), ಹಣೆ ಭಾಗದಲ್ಲಿ ನೋವು, ಮೂಗಿನಲ್ಲಿ ರಕ್ತಸ್ರಾವ, ಮುಖದ ಮೇಲೆ ಊತ, ಮುಖದ ಮೇಲೆ ಸಂವೇದನೆ ಕೊರತೆ ಮತ್ತು ಚರ್ಮದ ಬಣ್ಣ ಮಾಸುವುದು ಇದರ ಲಕ್ಷಣಗಳಾಗಿವೆ.

•       ಶ್ವಾಸಕೋಶದ ಮ್ಯೂಕರ್ ಮೈಕೋಸಿಸ್: ಸೂಕ್ಷ್ಮಾಣುಜೀವಿಗಳನ್ನು ಉಸಿರಾಡಿದಾಗ ಮತ್ತು ಅದು ಉಸಿರಾಟದ ವ್ಯವಸ್ಥೆಯನ್ನು ತಲುಪಿದಾಗ, ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಜ್ವರ, ಎದೆ ನೋವು, ಕೆಮ್ಮು ಮತ್ತು ರಕ್ತ ಕಾರುವ ಕೆಮ್ಮು ಇದರ ಲಕ್ಷಣಗಳಾಗಿವೆ.

ಈ ಶಿಲೀಂಧ್ರ ಜಠರ ಕರುಳಿನ ಪ್ರದೇಶ, ಚರ್ಮ ಮತ್ತು ಇತರ ಅಂಗಗಳಿಗೆ ಸಹ ಸೋಂಕು ತರುತ್ತದೆ ಆದರೆ ಇದರ ಸಾಮಾನ್ಯ ರೂಪವೆಂದರೆ ರೈನೋ ಸೆರೆಬ್ರಲ್ ಮ್ಯೂಕರ್ ಮೈಕೋಸಿಸ್.

ಕೋವಿಡ್ ರೋಗಿಗಳು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು:

ಕೆಳಗಿನ ವೈದ್ಯಕೀಯ ಪರಿಸ್ಥಿತಿಗಳನ್ನು ಹೊಂದಿರುವ ಜನರು ಹೆಚ್ಚು ಜಾಗರೂಕರಾಗಿರಬೇಕು, ಅವರು ತಮ್ಮ ಆರೋಗ್ಯದ ಬಗ್ಗೆ ನಿರಂತರವಾಗಿ ನಿಗಾ ಇಡಬೇಕು ಮತ್ತು ಈ ಕೆಳಗಿನ ರೋಗ ತಡೆಗಟ್ಟುವ ಕ್ರಮಗಳನ್ನು ಸಹ ಅನುಸರಿಸಬೇಕು.

ಮಧುಮೇಹ ರೋಗಿ (ಅನಿಯಂತ್ರಿತ ಮಧುಮೇಹ) + ಸ್ಟೀರಾಯ್ಡ್ ಬಳಕೆ + ಕೋವಿಡ್ ಸೋಂಕು ದೃಢ - ಈ ಮೂರೂ ಸೇರಿದರೆ ಈ ಸೋಂಕು ತಗಲುವ ಅಪಾಯ ಇರುತ್ತದೆ. ಆದ್ದರಿಂದ ಮಧುಮೇಹ ರೋಗಿಗಳು ಯಾವಾಗಲೂ ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟದ ನಿಗಾ ಇಡಬೇಕು ಮತ್ತು ನಿಯಂತ್ರಿಸಬೇಕು.

ಸ್ಟೀರಾಯ್ಡ್ ಗಳ ದುರ್ಬಳಕೆ ಒಬ್ಬರ ರೋಗನಿರೋಧಕ ಶಕ್ತಿಯ ಮೇಲೆ ನೇರವಾಗಿ ಪರಿಣಾಮ ಬೀರುವ ಆತಂಕ ಇರುತ್ತದೆ.

ಸೌಮ್ಯ ಲಕ್ಷಣ ಹೊಂದಿರುವ ಕೋವಿಡ್ ಸೋಂಕಿನ ರೋಗಿಗಳು ಸ್ಟೀರಾಯ್ಡ್ ತೆಗೆದುಕೊಳ್ಳುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು. ಒಂದೆಡೆ, ಸೌಮ್ಯ ಕೋವಿಡ್ ಪ್ರಕರಣಗಳ ಚಿಕಿತ್ಸೆಯಲ್ಲಿ ಸ್ಟೀರಾಯ್ಡ್‌ ಗಳಿಂದ ಯಾವುದೇ ಪ್ರಯೋಜನವಿಲ್ಲ. ಮತ್ತೊಂದೆಡೆ, ಸ್ಟೀರಾಯ್ಡ್ ಗಳನ್ನು ತೆಗೆದುಕೊಳ್ಳುವುದರಿಂದ ಮ್ಯೂಕರ್ ಮೈಕೋಸಿಸ್ ನಂತಹ ಎರಡನೇ ಸೋಂಕಿನ ಅಪಾಯವನ್ನೂ ಹೆಚ್ಚಿಸುತ್ತದೆ. ಕೋವಿಡ್-19 ನಿಂದ ಚೇತರಿಸಿಕೊಂಡ ನಂತರವೂ ಇದು ಶಿಲೀಂಧ್ರಗಳ ಸೋಂಕಿನ ಹೆಚ್ಚಿನ ಅಪಾಯಕ್ಕೆ ಕಾರಣವಾಗುತ್ತದೆ. ಆದ್ದರಿಂದ ಕೋವಿಡ್-19 ಸೋಂಕಿತ ವ್ಯಕ್ತಿಯ ಆಕ್ಸಿಜನ್ ಸ್ಯಾಚುರೇಷನ್ ಮಟ್ಟವು ಸಾಮಾನ್ಯವಾಗಿದ್ದರೆ ಮತ್ತು ಆತ/ಆಕೆ ಚಿಕಿತ್ಸಾಲಯದಲ್ಲಿ ಸೌಮ್ಯ ಎಂದು ವರ್ಗೀಕೃತವಾಗಿದ್ದರೆ, ಸ್ಟೀರಾಯ್ಡ್‌ ಗಳನ್ನು ಸಂಪೂರ್ಣವಾಗಿ ತಪ್ಪಿಸಬೇಕು.

ಸ್ಟೀರಾಯ್ಡ್ ತೆಗೆದುಕೊಳ್ಳುವವರು ತಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಹ ಪರೀಕ್ಷಿಸಿಕೊಳ್ಳಬೇಕು. ಬಹಳಷ್ಟು ಪ್ರಕರಣಗಳಲ್ಲಿ, ಮಧುಮೇಹಿ ಅಲ್ಲದವರಲ್ಲೂ ಸ್ಟಿರಾಯ್ಡ್ ತೆಗೆದುಕೊಂಡ ತರುವಾಯ ರಕ್ತದಲ್ಲಿನ ಸಕ್ಕರೆಯ ಅಂಶದ ಮಟ್ಟ 300ರಿಂದ 400ಕ್ಕೆ ಹೆಚ್ಚಳವಾಗುತ್ತದೆ. ಹಾಗಾಗಿ, ಸಕ್ಕರೆಯ ಮಟ್ಟವನ್ನು ನಿರಂತರವಾಗಿ ಪರೀಕ್ಷಿಸಿಕೊಳ್ಳುವುದು ಅಗತ್ಯ.

“ಕೋವಿಡ್-19 ರೋಗಿಗಳು ಸ್ಟೀರಾಯ್ಡ್ ನ ಹೈಡೋಸ್ ತೆಗೆದುಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಸಾಧಾರಣ ಮತ್ತು ಸೌಮ್ಯ ಡೋಸೇ ಸಾಕಾಗುತ್ತದೆ. ದತ್ತಾಂಶದ ಪ್ರಕಾರ, ಸ್ಟೀರಾಯ್ಡ್ ಗಳನ್ನು 5ರಿಂದ 10 ದಿನಗಳ ಕಾಲ (ಗರಿಷ್ಠ) ಮಾತ್ರ ಕೊಡಬೇಕು. ಮಿಗಿಲಾಗಿ ಸ್ಟೀರಾಯ್ಡ್ ಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತವೆ. ನಂತರ ಅದನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ.” ಇದು ಶಿಲೀಂಧ್ರ ಸೋಂಕಿನ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ ಎಂದು ಪ್ರೊ. ಗುಲೇರಿಯಾ ಹೇಳುತ್ತಾರೆ.

ಮಾಸ್ಕ್ ಧರಿಸುವುದು ಕಡ್ಡಾಯ. ಗಾಳಿಯಲ್ಲಿ ಕಂಡುಬರುವ ಶಿಲೀಂಧ್ರ ಸೂಕ್ಷ್ಮ ಜೀವಿಗಳು ಮೂಗಿನ ಮೂಲಕ ಸುಲಭವಾಗಿ ದೇಹಕ್ಕೆ ಪ್ರವೇಶಿಸಬಹುದು. ಹೀಗಾಗಿ ಸೋಂಕು ತಡೆಗಟ್ಟಲು ಎರಡು ಮಾಸ್ಕ್ ಧರಿಸುವುದು ಮುಖ್ಯವಾಗುತ್ತದೆ, ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡುವ ಅಥವಾ ಭೇಟಿ ನೀಡುವ ಜನರು ಈ ಬಗ್ಗೆ ನಿರ್ದಿಷ್ಟವಾಗಿ ಗಮನ ಹರಿಸಬೇಕು.

 

ಎಲ್ಲೆಲ್ಲಿ ಈ ಶಿಲೀಂಧ್ರಗಳು ಪತ್ತೆಯಾಗುತ್ತವೆ?

ಮ್ಯೂಕರ್ ಮೈಕೋಸಿಸ್ ಎನ್ನುವುದು ಮ್ಯೂಕರ್ ಮೈಸೆಟ್ಸ್ ಎಂದು ಕರೆಯಲಾಗುವ ಬೂಷ್ಟುಗಳಿಂದ ಉಂಟಾಗುತ್ತದೆ. ಇದು ನೈಸರ್ಗಿಕವಾಗಿ ಗಾಳಿ, ನೀರು ಮತ್ತು ಆಹಾರದಲ್ಲೂ ಕಂಡುಬರುತ್ತದೆ.  ಗಾಳಿಯಲ್ಲಿರುವ ಶಿಲೀಂಧ್ರಗಳ ಬೀಜಿಕೆಗಳು ಉಸಿರಾಟದ ಮುಲಕ ದೇಹವನ್ನು ಪ್ರವೇಶಿಸಬಹುದು ಅಥವಾ ಸುಟ್ಟ, ಕೊಯ್ದುಕೊಂಡ ಅಥವಾ ಚರ್ಮದ ಗಾಯದ ಮೂಲಕವೂ ದೇಹ ಸೇರಬಹುದು.

ಆರಂಭದಲ್ಲೇ ಈ ಸೋಂಕಿನ ಪತ್ತೆಯು ಮುಂದೆ ದೃಷ್ಟಿ ಹೀನತೆ ಅಥವಾ ಮೆದುಳಿನ ಮೇಲೆ ಆಗಬಹುದಾದ ಹಾನಿಯನ್ನು ತಡೆಯುತ್ತದೆ.

ಅನುಸರಿಸಬೇಕಾದ ಇತರ ರೋಗತಡೆ ಕ್ರಮಗಳು:

1.      ಆರ್ದ್ರಕ (ಹ್ಯುಮಿಡಿಫೈಯರ್)ಗಳನ್ನು ಸ್ವಚ್ಛಗೊಳಿಸುವುದು ಮತ್ತು ಬದಲಿಸುವುದು (ಆಮ್ಲಜನಕ ಸಾಂಧ್ರಕವನ್ನು ಬಳಸುವವರಿಗೆ)

2.      ಆರ್ದ್ರಕದ ಬಾಟಲಿಯಲ್ಲಿ ಸ್ಟೆರೈಲ್ ಆದ ಸಾಮಾನ್ಯ ಸಲೈನ್ ಬಳಸಬೇಕು ಮತ್ತು ಪ್ರತಿದಿನ ಬದಲಾಯಿಸಬೇಕು

3.      ಮಾಸ್ಕ್ ಗಳನ್ನು ಪ್ರತಿದಿನ ಸ್ವಚ್ಛಗೊಳಿಸಿ ಸೋಂಕುರಹಿತಗೊಳಿಸ ಬೇಕು.

ಸಣ್ಣ ರೋಗಲಕ್ಷಣವನ್ನೂ ಉಪೇಕ್ಷೇಸಬೇಡಿ:

ಕಣ್ಣು ಮತ್ತು ಮೂಗಿನ ಸುತ್ತ ನೋವು ಮತ್ತು ಕೆಂಪಾಗುವುದು, ಜ್ವರ (ಸಾಮಾನ್ಯವಾಗಿ ಸೌಮ್ಯ), ಎಪಿಸ್ಟಾಕ್ಸಿಸ್ (ಮೂಗಿನಿಂದ ರಕ್ತಸ್ರಾವ), ಮೂಗಿನ ಅಥವಾ ಹಣೆಯ ಭಾಗದಲ್ಲಿ ಕಿರಿಕಿರಿ, ತಲೆನೋವು, ಕೆಮ್ಮು, ಉಸಿರಾಟದ ತೊಂದರೆ, ರಕ್ತದ ವಾಂತಿ, ಬದಲಾದ ಮಾನಸಿಕ ಸ್ಥಿತಿ ಮತ್ತು ಭಾಗಶಃ ದೃಷ್ಟಿ ಹೀನತೆ.

ವೈದ್ಯರು ಮತ್ತು ಇತರ ಆರೋಗ್ಯ ಆರೈಕೆ ಕಾರ್ಯಕರ್ತರ ಜವಾಬ್ದಾರಿಗಳು

ಕೋವಿಡ್-19 ರೋಗಿಗಳನ್ನು ಬಿಡುಗಡೆ ಮಾಡುವಾಗ, ಮುಂಚಿನ ಲಕ್ಷಣಗಳು ಅಥವಾ ಮ್ಯೂಕರ್ ಮೈಕೋಸಿಸ್ ನ ಲಕ್ಷಣಗಳ ಬಗ್ಗೆ ಸಲಹೆ ನೀಡಿ; ಅಂದರೆ ಮುಖದ ನೋವು, ಕಟ್ಟಿಕೊಳ್ಳುವುದು, ಅತಿಯಾದ ವಿಸರ್ಜನೆ, ಹಲ್ಲುಗಳು ಸಡಿಲಗೊಳಿಸುವುದು, ಎದೆ ನೋವು ಮತ್ತು ಉಸಿರಾಟದ ಸಮಸ್ಯೆ.

****



(Release ID: 1720728) Visitor Counter : 1153