ಇಂಧನ ಸಚಿವಾಲಯ

ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಇಂಧನ ವಲಯದ ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಗಳು ಸಮುದಾಯದೊಂದಿಗೆ ಕೈಜೋಡಿಸಿವೆ.

Posted On: 16 MAY 2021 12:15PM by PIB Bengaluru

ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ವಿದ್ಯುತ್ ಸಚಿವಾಲಯ ಅಧೀನದಲ್ಲಿರುವ ಸಾರ್ವಜನಿಕ ಸಂಸ್ಥೆಗಳು ಭಾರತದಾದ್ಯಂತ ಇರುವ ಪ್ರತಿಯೊಬ್ಬ ಉದ್ಯೋಗಿಯನ್ನು ಮತ್ತು ನೆರೆಯ ಸಮುದಾಯವನ್ನು ತಲುಪಲು ಬಹಳ ಕಾರ್ಯತಂತ್ರಗಳನ್ನು ರೂಪಿಸುತ್ತಿವೆ.

ಸಾರ್ವಜನಿಕ ಸಂಸ್ಥೆಗಳು ಒಟ್ಟು 200ಕ್ಕೂ ಹೆಚ್ಚು ಸ್ಥಳಗಳಲ್ಲಿ ಕೋವಿಡ್ ಆರೈಕೆ ಸೌಲಭ್ಯಗಳನ್ನು ಸ್ಥಾಪಿಸಿವೆ, ಇದು ತಮ್ಮ ಸ್ವಂತ ಉದ್ಯೋಗಿಗಳಿಗೆ ಮತ್ತು ಗುತ್ತಿಗೆ ನೌಕರರಿಗೆ ಮತ್ತು ಅವರ ಕುಟುಂಬಗಳಿಗೆ ಹೆಚ್ಚಿನ ಸೋಂಕಿನ ಪ್ರಮಾಣವನ್ನು ಹೊಂದಿರುವ ಪ್ರದೇಶಗಳಲ್ಲಿ ಮತ್ತು ಮಧ್ಯಮ ಸೋಂಕಿತ ವ್ಯಕ್ತಿಗಳ ಅಗತ್ಯಗಳಿಗನುಗುಣವಾಗಿ, ಪ್ರತ್ಯೇಕತೆಯ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಆಕ್ಸಿಜನ್ ಸೌಲಭ್ಯಗಳೊಂದಿಗೆ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸುತ್ತವೆ. ಇದರಿಂದಾಗಿ ಈಗಾಗಲೇ ಹೆಚ್ಚು ಒತ್ತಡಕ್ಕೊಳಗಾದ ಖಾಸಗಿ ಮತ್ತು ಸರ್ಕಾರಿ ಆರೋಗ್ಯ ರಕ್ಷಣೆಯ ಮೂಲಸೌಕರ್ಯಗಳ ಮೇಲೆ ಪ್ರಕರಣಗಳ ಹೊರೆ ಕಡಿಮೆಯಾಗುತ್ತದೆ. ಪ್ರತ್ಯೇಕ ಕೇಂದ್ರಗಳನ್ನು ಸ್ಥಾಪಿಸುವುದು, ಮುಖಗವಸುಗಳ ವಿತರಣೆ, ಸ್ಯಾನಿಟೈಜರ್ಗಳು, ಆಮ್ಲಜನಕ ಸೌಲಭ್ಯವುಳ್ಳ ಹಾಸಿಗೆಗಳನ್ನು ಒದಗಿಸುವುದು, ರಾಷ್ಟ್ರೀಯ ರಾಜಧಾನಿ ಪ್ರದೇಶದ (ಎನ್ಸಿಆರ್) ವಿವಿಧ ಸ್ಥಳಗಳಲ್ಲಿ ಲಸಿಕೆ ಶಿಬಿರಗಳನ್ನು ಆಯೋಜಿಸುವುದರ ಜೊತೆಗೆ  ಆಮ್ಲಜನಕ ಸಾಂದ್ರಕಗಳನ್ನು, ಆಮ್ಲಜನಕ ಘಟಕಗಳು, ಇತ್ಯಾದಿಗಳನ್ನು ಒದಗಿಸುವ ಮೂಲಕ ನಾಗರಿಕರಿಗಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಸಂಸ್ಥೆಗಳು ಪೂರ್ವಭಾವಿಯಾಗಿ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.  ಇದರ ಜೊತೆಗೆ  ಇಂಧನ ವಲಯದ  ಸಂಸ್ಥೆಗಳು  ಪಿಎಂ-ಕೇರ್ಸ್ ಫಂಡ್ ಗೆ ಸುಮಾರು 925 ಕೋಟಿ ರೂಪಾಯಿಗಳ  ದೇಣಿಗೆ ನೀಡಿವೆ.

ರಾಷ್ಟ್ರೀಯ ಜಲವಿದ್ಯುತ್ ನಿಗಮ (ಎನ್ಎಚ್ಪಿಸಿ) ಸಿಎಸ್ಆರ್ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ) ಬೆಂಬಲದ ರೂಪದಲ್ಲಿ ರೂ .41.89 ಲಕ್ಷ ನೀಡುತ್ತಿದೆ, ಇದನ್ನು ಸಿದ್ಧಾರ್ಥನಗರ (ಯುಪಿ) ಜಿಲ್ಲಾಧಿಕಾರಿಯವರಿಗೆ ಉತ್ತರ ಪ್ರದೇಶದ ಸಿದ್ಧಾರ್ಥ್ ನಗರ ಜಿಲ್ಲಾ ಆಸ್ಪತ್ರೆಯಲ್ಲಿ ಒಂದು ಆಮ್ಲಜನಕ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಕೊಡಲಾಗುತ್ತಿದೆ.  ಸರ್ಕಾರೀ ಆಸ್ಪತ್ರೆ ಜಿಲ್ಲೆ  ಡಿಯೋರಿಯಾ ಗೆ ಎಲ್ -2 ಕೋವಿಡ್ ಸೌಲಭ್ಯಕ್ಕಾಗಿ 60 ಆಮ್ಲಜನಕ ಸಾಂದ್ರಕಗಳನ್ನು (5 ಎಲ್ ಟಿ ಎಂ ಸಾಮರ್ಥ್ಯ) ಒದಗಿಸಲು ಡಿಒ, ಡಿಯೋರಿಯಾಕ್ಕೆ ರೂ .45 ಲಕ್ಷದ ಮತ್ತೊಂದು ಸಿಎಸ್ಆರ್ ಬೆಂಬಲವನ್ನು ಒದಗಿಸಲಾಗುತ್ತಿದೆ.  ಸಿಎಸ್ಆರ್ ಅಡಿಯಲ್ಲಿ ಬಾದ್ಶಾ ಖಾನ್ (ಬಿ.ಕೆ) ಜಿಲ್ಲೆಯ ಫರಿದಾಬಾದ್ನ ಜಿಲ್ಲಾ ಜನರಲ್ ಆಸ್ಪತ್ರೆಯಲ್ಲಿ ಸಿಲಿಂಡರ್ಗಳನ್ನು ತುಂಬುವ ಸೌಲಭ್ಯದೊಂದಿಗೆ ಎನ್ಎಚ್ಪಿಸಿ 1000 ಎಲ್ಪಿಎಂ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಿದೆ. ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಮತ್ತು ಶೀಘ್ರದಲ್ಲೇ ಇದನ್ನು ಅಂತಿಮಗೊಳಿಸಲಾಗುವುದು. ಎಂಟು ವಾರಗಳ ಅವಧಿಯಲ್ಲಿ ಘಟಕವನ್ನು ಸ್ಥಾಪಿಸಲಾಗುವುದು.

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ (ಎನ್ಟಿಪಿಸಿ) - ಮತ್ತೊಂದು ಪ್ರಮುಖ ಇಂಧನ ವಲಯದ ಸಂಸ್ಥೆಯು, ಎನ್ಸಿಆರ್ ಅಡಿಯಲ್ಲಿ  11 ಆಮ್ಲಜನಕ ಉತ್ಪಾದನಾ ಘಟಕಗಳಿಗೆ, ಜೊತೆಗೆ ಬಾಟ್ಲಿಂಗ್ ಸೌಲಭ್ಯವನ್ನು ಹೊಂದಿರುವ 2 ದೊಡ್ಡ ಆಮ್ಲಜನಕ ಉತ್ಪಾದನಾ ಘಟಕಗಳಿಗೆ ಆದೇಶಗಳನ್ನು ನೀಡಿದೆ. ಇದಲ್ಲದೆ, ಕಂಪನಿಯು ಇತರ ರಾಜ್ಯಗಳ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕಗಳನ್ನು ಸ್ಥಾಪಿಸಲು ಸಿಎಸ್ಆರ್ ಅಡಿಯಲ್ಲಿ ವಿಸ್ತೃತ ಬೆಂಬಲದ ಜೊತೆಗೆ ಇತರ ರಾಜ್ಯಗಳ 8 ವಿವಿಧ ಸ್ಥಳಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸುತ್ತಿದೆ.

ಹಾಗೆಯೇ, ಇಂಧನ ಸಚಿವಾಲಯದ ಮತ್ತೊಂದು ಪ್ರಮುಖ ಸಂಸ್ಥೆ ಆರ್ ಇ ಸಿ ಲಿಮಿಟೆಡ್ (ಆರ್ ಇ ಸಿಎಲ್) ತನ್ನ ಸಿಎಸ್ಆರ್ ವಿಭಾಗ ಆರ್ಇಸಿ ಫೌಂಡೇಶನ್ ನ ಮೂಲಕ  ಪುಣೆಯ ಡಾಲ್ವಿ ಆಸ್ಪತ್ರೆಯಲ್ಲಿ ನಿಮಿಷಕ್ಕೆ 1700 ಲೀಟರ್ ಉತ್ಪಾದಿಸುವ ಆಮ್ಲಜನಕ ಉತ್ಪಾದಕ ಘಟಕ (ಸಂಪೂರ್ಣವಾಗಿ) ಮತ್ತು 150 ಕೆವಿ ಜನರೇಟರಿಗಾಗಿ 2.21 ಕೋಟಿ ರೂ.ಗಳ ಆರ್ಥಿಕ ನೆರವು ನೀಡಿದೆ.    ಮತ್ತೊಂದು ಸಿಎಸ್ಆರ್ ಉಪಕ್ರಮದಲ್ಲಿ, ಆರ್ ಇಸಿ ಫೌಂಡೇಶನ್ ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲಿ ರುದ್ರಪುರದ ಪಂಡಿತ್ ರಾಮ್ ಸುಮೇರ್ ಶುಕ್ಲಾ ಸ್ಮೃತಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸಹಾಯ ಮಾಡಿದೆ. ಇದನ್ನು ಕೋವಿಡ್ ಚಿಕಿತ್ಸಾ ಕೇಂದ್ರವಾಗಿ ಪರಿವರ್ತಿಸಲಾಗಿದೆ. ಕೇಂದ್ರವು 36 ಹಾಸಿಗೆಗಳ ಐಸಿಯು ವಾರ್ಡ್ ಸೇರಿದಂತೆ 300 ಹಾಸಿಗೆಗಳ ಆಸ್ಪತ್ರೆಯನ್ನು ಹೊಂದಿದೆ ಮತ್ತು ಪ್ರತ್ಯೇಕತಾ ಕೇಂದ್ರ, ಪರೀಕ್ಷಾ ಕೇಂದ್ರ ಮುಂತಾದ ಸೌಲಭ್ಯಗಳನ್ನು ಹೊಂದಿದೆ. ಈ ಯೋಜನೆಯು ಸಾಂಕ್ರಾಮಿಕ ರೋಗಕ್ಕೆ ಸ್ಥಳೀಯ ಆಡಳಿತದ ಕ್ಷಿಪ್ರ ಪ್ರತಿಕ್ರಿಯೆಗೆ ಅನುಕೂಲವಾಗಲು ಸಮಯಕ್ಕೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ಮತ್ತು ಸೇವೆಗಳು ದೊರಕುವಂತೆ  ಜಿಲ್ಲೆಯ ವೈದ್ಯಕೀಯ ಮೂಲಸೌಕರ್ಯಗಳನ್ನು ಬಲಪಡಿಸಿದೆ. 

ಇದಲ್ಲದೆ, ಸಿಎಸ್ಆರ್ ಅಡಿಯಲ್ಲಿ, ಹೆಚ್ಚುವರಿ 7 ಸ್ಥಳಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆಗೆ ಆರ್ ಇಸಿಎಲ್ ಸಹಕರಿಸುತ್ತಿದೆ :  ಅವುಗಳೆಂದರೆ ಪಿಥೋರಗಢ, ಉತ್ತರಾಖಂಡ; ಖಗೇರಿಯಾದ ಮೂಲ ಆಸ್ಪತ್ರೆಯಲ್ಲಿ 1000 ಎಲ್ ಟಿ ಎಂ; ಚತ್ರಾದ ಜಿಲ್ಲಾ ಆಸ್ಪತ್ರೆಯಲ್ಲಿ 600 ಎಲ್ಪಿಎಂ; ಚಂಬಾದ ಹಂಟರ್ಗಂಜ್ ಸಿಎಚ್ಸಿಯಲ್ಲಿ 600 ಎಲ್ಪಿಎಂ; ಸಿವಿಲ್ ಆಸ್ಪತ್ರೆಯಲ್ಲಿ 400 ಎಲ್ಎಲ್ಪಿಎಂ, ಬಾರನ್; ಬರಾನ್ ಮಲ್ಲಾಪುರಂ ಜಿಲ್ಲಾ ಆಸ್ಪತ್ರೆಯಲ್ಲಿ 1250 ಎಲ್ಪಿಎಂ.

ಸಿಎಸ್ಆರ್ ಉಪಕ್ರಮದ ಭಾಗವಾಗಿ, ಪಿಜಿಸಿಐಎಲ್ (ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್) 2 ಸ್ಥಳಗಳಲ್ಲಿ ಆಕ್ಸಿಜನ್ ಘಟಕಗಳ ಸ್ಥಾಪನೆಯನ್ನು ಉತ್ತೇಜಿಸುತ್ತಿದೆ, ಅವುಗಳೆಂದರೆ, ಜೈಸಲ್ಮೇರ್ (ರಾಜಸ್ಥಾನ) 50 ಎನ್ಎಂ3 ಮತ್ತು ಗುರುಗ್ರಾಮ್ (ಹರಿಯಾಣ): ಟಾವೊ ದೇವಿ ಲಾಲ್ ಕ್ರೀಡಾಂಗಣದಲ್ಲಿ 2 x 50 ಎನ್ಎಂ 3.

***




(Release ID: 1719125) Visitor Counter : 165