ಭೂವಿಜ್ಞಾನ ಸಚಿವಾಲಯ

ಯಾವುದೇ ಉಷ್ಣ ಮಾರುತ ಪರಿಸ್ಥಿತಿಯ ಸಂಭವನೀಯತೆ ಇಲ್ಲ

Posted On: 14 MAY 2021 9:31AM by PIB Bengaluru

ಭಾರತ ಹವಾಮಾನ ಇಲಾಖೆಯ ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರದ (ಐಎಂಡಿ) ಪ್ರಕಾರ:

ಮುಂದಿನ 24 ಗಂಟೆಗಳ ಕಾಲ ಪ್ರಸ್ತುತ ತಾಪಮಾನ ಸ್ಥಿತಿ ಮತ್ತು ಎಚ್ಚರಿಕೆ (ಮೇ 14, 2021: ಭಾರತೀಯ ಕಾಲಮಾನ 07.45 ಗಂಟೆ)

ನಿನ್ನೆ (ಭಾರತೀಯ ಕಾಲಮಾನ ಮೇ 13,  ಗಂಟೆ 05.30ರಿಂದ ಮೇ 14 ಗಂಟೆ 05.30ರವರೆಗೆ) ಗಮನಿಸಲಾದ ಉಷ್ಣ ಮಾರುತ ಮತ್ತು ಗರಿಷ್ಠ ತಾಪಮಾನ.

  • ಗಮನಿಸಲಾದ ಉಷ್ಣ ಮಾರುತ: ಇಲ್ಲ.
  • ಗರಿಷ್ಠ ತಾಪಮಾನ: -

13-05-2021ರಂದು ವಿದರ್ಭದ ಹೆಚ್ಚಿನ ಸ್ಥಳಗಳಲ್ಲಿ; ತೆಲಂಗಾಣದ ಅನೇಕ ಸ್ಥಳಗಳಲ್ಲಿ; ಪಶ್ಚಿಮ ಮಧ್ಯಪ್ರದೇಶದ ಕೆಲವು ಸ್ಥಳಗಳಲ್ಲಿ ಮತ್ತು ರಾಜಸ್ಥಾನ, ಗುಜರಾತ್, ಪೂರ್ವ ಮಧ್ಯಪ್ರದೇಶ ಮತ್ತು ಮಧ್ಯ ಮಹಾರಾಷ್ಟ್ರದ ಅಲಲ್ಲಿ ಚದುರಿದಂತೆ ಗರಿಷ್ಠ 40.0° ಸೆಂಟಿಗ್ರೇಡ್ಗಿಂತಲೂ ಹೆಚ್ಚು ತಾಪಮಾನ  ದಾಖಲಾಗಿದೆ.

  • 13-05-2021ರಂದು ಇದ್ದಂತೆ ಗರಿಷ್ಠ ತಾಪಮಾನ ಇಳಿಮುಖ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೆಲವು ಸ್ಥಳಗಳಲ್ಲಿ; ಸೌರಾಷ್ಟ್ರ ಮತ್ತು ಕಚ್, ಕೊಂಕಣ ಮತ್ತು ಗೋವಾ ಹಾಗೂ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ನ ಅಲಲ್ಲಿ ಚದುರಿದಂತೆ ಗರಿಷ್ಠ ತಾಪಮಾನವು  ಸಾಮಾನ್ಯಕ್ಕಿಂತ (1.6° ಸೆಂಟಿಗ್ರೇಡ್ನಿಂದ 3.0° ಸೆಂಟ್ರಿಗ್ರೇಡ್‌) ಹೆಚ್ಚಾಗಿದೆ.   ಹಿಮಾಚಲ  ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ದೆಹಲಿ, ಉತ್ತರ ಪ್ರದೇಶ ಮತ್ತು ಜಾರ್ಖಂಡ್ನಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆ (-5.1°ಸೆಂಟಿಗ್ರೇಡ್ಅಥವಾ ಅದಕ್ಕಿಂತ ಹೆಚ್ಚು) ದಾಖಲಾಗಿದೆ. ಬಿಹಾರ ಮತ್ತು ಉತ್ತರ ಒಡಿಶಾದ ಅನೇಕ ಸ್ಥಳಗಳಲ್ಲಿಪಶ್ಚಿಮ ಬಂಗಾಳದ ಗಂಗಾ ನದಿ ಜಲಾನಯನ ಪ್ರದೇಶದ ಅಲ್ಲಲ್ಲಿ ಚದುರಿದಂತೆ ಮತ್ತು ಜಮ್ಮು, ಕಾಶ್ಮೀರ, ಲಡಾಖ್, ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಮುಜಫರಾಬಾದ್ ಮತ್ತು ಉತ್ತರ ಮಧ್ಯಪ್ರದೇಶದ ಅಲ್ಲಲ್ಲಿ ಚದುರಿದಂತೆಪಶ್ಚಿಮ ರಾಜಸ್ಥಾನ ಮತ್ತು ಛತ್ತೀಸ್ಗಢದ ಅನೇಕ ಸ್ಥಳಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ (-3.1° ಸೆಂಟಿಗ್ರೇಡ್ನಿಂದ -5.0° ಸೆಂಟಿಗ್ರೇಡ್‌) ತಾಪಮಾನ ಗಮನಿಸಲಾಗಿದೆಉಪ ಹಿಮಾಲಯ ಭಾಗದ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ಮತ್ತು ರಾಯಲಸೀಮಾದ ಕೆಲವು ಸ್ಥಳಗಳಲ್ಲಿ;   ಅರುಣಾಚಲ ಪ್ರದೇಶದ ಅಲಲ್ಲಿ ಚದುರಿದಂತೆಅಸ್ಸಾಂ ಮತ್ತು ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ, ಮಧ್ಯಪ್ರದೇಶದ ಕೇಂದ್ರಭಾಗ, ಒಡಿಶಾದ ಎಲ್ಲೆಡೆ, ದಕ್ಷಿಣ ಮಧ್ಯ ಮಹಾರಾಷ್ಟ್ರ ಮತ್ತು ಕರ್ನಾಟಕದ ಉತ್ತರ ಒಳನಾಡು; ಕೇರಳ ಮತ್ತು ಮಾಹೆಯ ಹೆಚ್ಚಿನ ಸ್ಥಳಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ (-1.6° ಸೆಂಟಿಗ್ರೇಡ್ನಿಂದ -3.0°ಸೆಂಟಿಗ್ರೇಡ್‌) ತಾಪಮಾನ ದಾಖಲಾಗಿದೆ; ಪೂರ್ವ ಮಧ್ಯಪ್ರದೇಶದ ಅನೇಕ ಸ್ಥಳಗಳಲ್ಲಿ; ಆಂಧ್ರಪ್ರದೇಶ ಕರಾವಳಿ ಮತ್ತು ಯಾನಮ್ ಕೆಲವು ಸ್ಥಳಗಳಲ್ಲಿ ಮತ್ತು ಗುಜರಾತ್ ಪ್ರಾಂತ್ಯದ ಅಲ್ಲಲ್ಲಿ ಮತ್ತು ನೈಋತ್ಯ ಮಧ್ಯಪ್ರದೇಶದ ಅಲಲ್ಲಿ ಚದುರಿದಂತೆ ಮತ್ತು ದೇಶದ ಉಳಿದ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನ ದಾಖಲಾಗಿದೆ. ಚಂದ್ರಾಪುರದಲ್ಲಿ (ವಿದರ್ಭ) (ಅನುಬಂಧ 2) 42.8° ಸೆಂಟಿಗ್ರೇಡ್ಗರಿಷ್ಠ ತಾಪಮಾನ ವರದಿಯಾಗಿದೆ.
  • ನಿನ್ನೆ, ಚಂದ್ರಾಪುರದಲ್ಲಿ (ವಿದರ್ಭ) 42.8° ಸೆಂಟಿಗ್ರೇಡ್ಗರಿಷ್ಠ ತಾಪಮಾನ ವರದಿಯಾಗಿದೆ.

ಮುಂದಿನ 24 ಗಂಟೆಗಳಿಗೆ ಉಷ್ಣ ಮಾರುತ ಎಚ್ಚರಿಕೆಗಳು (ಭಾರತೀಯ ಕಾಲಮಾನ ಮೇ 14 ಗಂಟೆ 05.30ರಿಂದ ಮೇ 15 ಗಂಟೆ 0530ರವರೆಗೆ):

  • ಮುಂದಿನ 24 ಗಂಟೆಗಳಲ್ಲಿ ಯಾವುದೇ ಉಷ್ಣ ಮಾರುತದ ಪರಿಸ್ಥಿತಿಗಳು ಸಂಭವಿಸುವ ಸಾಧ್ಯತೆಯಿಲ್ಲ.

(ಗ್ರಾಫಿಕ್ಸ್ನಲ್ಲಿ ವಿವರಗಳಿಗಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ

ನಿರ್ದಿಷ್ಟ ಸ್ಥಳ ಕುರಿತಾದ ಮುನ್ಸೂಚನೆ ಮತ್ತು ಎಚ್ಚರಿಕೆಗಾಗಿ ದಯವಿಟ್ಟು MAUSAM ಆ್ಯಪ್ ಡೌನ್ಲೋಡ್ಮಾಡಿ. ಕೃಷಿಹವಾಮಾನ ಸಲಹೆಗಾಗಿ MEGHDOOT  ಆ್ಯಪ್ ಮತ್ತು ಮಿಂಚಿನ ಎಚ್ಚರಿಕೆಗಾಗಿ DAMINI  ಆ್ಯಪ್ ಹಾಗೂ ಜಿಲ್ಲಾವಾರು ಎಚ್ಚರಿಕೆಗಾಗಿ ರಾಜ್ಯ ಎಂಸಿ /ಆರ್ಎಂಸಿ ವೆಬ್ಸೈಟ್ಗಳಿಗೆ ಭೇಟಿ ನೀಡಿ.

***


(Release ID: 1718565) Visitor Counter : 220