ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಡಿ ಬರುವ ಎನ್ಎಸ್ಎಫ್ ಡಿಸಿ ಮತ್ತು ಎನ್ ಬಿಸಿಎಫ್ ಡಿಸಿಗಳಿಂದ ಜಂಟಿ ಸಿಎಸ್ಆರ್  ಕೋವಿಡ್ ಪರಿಹಾರ ಉಪಕ್ರಮಗಳು

Posted On: 11 MAY 2021 2:46PM by PIB Bengaluru

ರಾಷ್ಟ್ರೀಯ ಪರಿಶಿಷ್ಟಜಾತಿ ಹಣಕಾಸು ಮತ್ತು ಅಭಿವೃದ್ಧಿ ನಿಗಮ ಹಾಗೂ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ(ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಡಿ ಬರುವ ಪಿಎಸ್ ಯುಗಳು)ಗಳು ಜಂಟಿಯಾಗಿ ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆ(ಏಪ್ರಿಲ್-ಮೇ 2021) ಸಮಯದಲ್ಲಿ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಮತ್ತು ಕೋವಿಡ್-19 ರೋಗಿಗಳಿಗೆ ನೆರವಾಗಲು ಕೆಳಗಿನ ಪರಿಹಾರವನ್ನು ಕ್ರಮಗಳನ್ನು ಕೈಗೊಂಡಿವೆ

ಆಹಾರ ವಿತರಣಾ ಕಾರ್ಯಕ್ರಮ:

ದೆಹಲಿ, ಮುಂಬೈ ಮತ್ತು ಬೆಂಗಳೂರು ನಗರಗಳಲ್ಲಿ ಲಾಕ್ ಡೌನ್ ವೇಳೆ ವಲಸೆ ಕಾರ್ಮಿಕರು, ದಿನಗೂಲಿ ನೌಕರರು, ಹಿರಿಯ ನಾಗರಿಕರು, ನಿರಾಶ್ರಿತ ವ್ಯಕ್ತಿಗಳು ಮತ್ತು ಇತರೆ ಅಗತ್ಯ ಜನರಿಗೆ ಆಹಾರ ವಿತರಣೆಗೆ ಅನುಮೋದನೆ ನೀಡಿದೆ. ಆಹಾರ ವಿತರಣಾ ಕಾರ್ಯಕ್ರಮದಡಿ 15 ದಿನಗಳ ಕಾಲ ಅಗತ್ಯ ಜನರಿಗೆ 39,000 ಆಹಾರ ಪೊಟ್ಟಣಗಳನ್ನು ನೀಡಲಾಗುವುದು. ಕಾರ್ಯಕ್ರಮ 08.05.2021ರಿಂದ ಮುಂಬೈನಲ್ಲಿ ಆರಂಭವಾಗಿದೆ. ಬೆಂಗಳೂರು ಮತ್ತು ದೆಹಲಿಗಳಲ್ಲಿ ಆಹಾರ ವಿತರಣಾ ಕಾರ್ಯಕ್ರಮ 11.05.2021ರಿಂದ ಆರಂಭವಾಗಲಿದೆ. ಆಹಾರ ವಿತರಣಾ ಕಾರ್ಯಕ್ರಮವನ್ನು ಎನ್ಎಸ್ಎಫ್ ಡಿಸಿ ಮತ್ತು ಎನ್ ಬಿಸಿಎಫ್ ಡಿಸಿ, ಸ್ಥಳೀಯ ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುತ್ತಿವೆ.

ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ಸಾಮಗ್ರಿಗಳಿಗೆ ಅವಕಾಶ

ಆಕ್ಸಿಜನ್ ಸಿಲಿಂಡರ್ ಗಳು(39 ಸಿಲಿಂಡರ್ ಗಳು), ಒಂದು ಆಕ್ಸಿಜನ್ ಸಾಂದ್ರಕ ಮತ್ತು ಬಿಪಾಪ್ ಯಂತ್ರವನ್ನು ಸರ್ಕಾರಿ ಆಸ್ಪತ್ರೆಗಳಾದ(ಆಚಾರ್ಯ ಶ್ರೀ ಭಿಕ್ಷು ಆಸ್ಪತ್ರೆ ಮತ್ತು ಸ್ವಾಮಿ ದಯಾನಂದ ಆಸ್ಪತ್ರೆ) ಮತ್ತು ದೆಹಲಿಯ ಒಂದು ಎನ್ ಜಿಒಗೆ ನೀಡಲು ಅನುಮೋದಿಸಲಾಗಿದೆ.

***(Release ID: 1717719) Visitor Counter : 220