ಅಣುಶಕ್ತಿ ಇಲಾಖೆ

ದೇಶದಲ್ಲಿ ಕೋವಿಡ್ -19 ಸಾಂಕ್ರಾಮಿಕದ ವಿರುದ್ಧ ಹೋರಾಡಲು ಅಗತ್ಯವಾದ ಮೂಲ ಸೌಕರ್ಯ ಅಭಿವೃದ್ಧಿಗೆ ಅಣು ಇಂಧನ ಇಲಾಖೆಯಿಂದ ಪೂರಕ ಕ್ರಮ: ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್

Posted On: 07 MAY 2021 4:16PM by PIB Bengaluru

ದೇಶದಲ್ಲಿ ಕೋವಿಡ್-19 ಸೋಂಕಿನ ವಿರುದ್ಧ ಹೋರಾಟ ಮಾಡಲು ಬಾಬಾ ಅಣು ಕೇಂದ್ರ ಮತ್ತು ಅಣು ಇಂಧನ ಇಲಾಖೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೊರೋನಾ ನಿಯಂತ್ರಣಕ್ಕೆ ಅಗತ್ಯವಾಗಿರುವ ಪರಿಕರಗಳು ಮತ್ತು ತಂತ್ರಜ್ಞಾನವನ್ನು ಒದಗಿಸುತ್ತಿದೆ ಎಂದು ಈಶಾನ್ಯ ವಲಯಗಳ ರಾಜ್ಯ ಸಚಿವ [ಸ್ವತಂತ್ರ]. ಪ್ರಧಾನಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಅಣು ಇಂಧನ ಮತ್ತು ಬಾಹ್ಯಾಕಾಶ ಇಲಾಖೆ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.  

ಆನ್ ಲೈನ್ ಮೂಲಕ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದರು.  ಕೋವಿಡ್ – 19 ಸಂದರ್ಭದಲ್ಲಿ ಸಾರ್ವಜನಿಕ ಕಲ್ಯಾಣ ದೃಷ್ಟಿಯಿಂದ ಕೈಗೊಂಡ ಕ್ರಮಗಳಿಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೋಬಾಲ್ಟ್ ಮೂಲವನ್ನು ಬಳಸಿಕೊಂಡು ಪಿಪಿಇ ಕಿಟ್ ಗಳನ್ನು ಕ್ರಿಮಿನಾಶಕಗೊಳಿಸುವ ತಂತ್ರಜ್ಞಾನ ಅಭಿವೃದ್ಧಿಯಿಂದ ಪಿಪಿಇ ಕಿಟ್ ಗಳ ಮರುಬಳಕೆ ಸಾಮರ್ಥ್ಯ ಹೆಚ್ಚಳಕ್ಕೆ ಸಹಕಾರಿಯಾಗಿದೆ. ಇದೇ ರೀತಿ ಎಚ್.ಇ.ಪಿ.ಎ ಪಿಲ್ಟರ್ ತಂತ್ರಜ್ಞಾನದ ಮೂಲಕ ಎನ್-99 ಮುಖಗವುಸುಗಳನ್ನು ಅಭಿವೃದ್ದಿಪಸಡಿಸಲಾಗಿದೆ. ಈ ಮುಖಗವಸು ಎನ್-95 ಮುಖಗವಸಿಗಿಂತ ಉತ್ತಮವಾಗಿದೆ ಮತ್ತು ಎನ್-99 ಮುಖಗವಸಿಗೆ ಮೂರು ಸ್ವಾಯತ್ತ ಪ್ರಯೋಗಾಲಯಗಳು ಮಾನ್ಯತೆ ನೀಡಿವೆ. ಇದು ಎನ್-95 ಮುಖಗವಸಿಗಿಂತ ಕಡಿಮೆ ಬೆಲೆ ಮತ್ತು ದೀರ್ಘ ಕಾಲ ಬಾಳಿಕೆ ಬರುತ್ತವೆ. ದೊಡ್ಡಮಟ್ಟದಲ್ಲಿ ಇವುಗಳನ್ನು ಉತ್ಪಾದಿಸಲು ತಂತ್ರಜ್ಞಾನವನ್ನು ವರ್ಗಾವಣೆ ಮಾಡಲಾಗಿದೆ.

ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗೆ ಅಣು ಇಂಧನ ಇಲಾಖೆಯು ಅಗತ್ಯವಾಗಿರುವ ರೀಏಜೆಂಟ್ಸ್ ಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ. ಜತೆಗೆ ಉಸಿರಾಟಕ್ಕೆ ಅಗತ್ಯವಾಗಿರುವ ಪರಿಕರಗಳು, ರೀಫೆರ್, ಪೋರ್ಟಬಲ್ ಪ್ಲಾಸ್ಮಾ ಕ್ರಿಮಿನಾಶಕ ಮತ್ತು ವೈದ್ಯಕೀಯ ತ್ಯಾಜ್ಯವನ್ನು ಸುಟ್ಟು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ತಂತ್ರಜ್ಞಾನ ಸಹ ಇದರಲ್ಲಿ ಸೇರಿದೆ ಎಂದು ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದರು.

ಎಲ್ಲಾ ಟಾಟಾ ಸ್ಮಾರಕ ಆಸ್ಪತ್ರೆಗಳಲ್ಲಿ ಶೇ 25 ರಷ್ಟು ಹಾಸಿಗೆಗಳು ಅಂದರೆ ಸುಮಾರು 600 ಹಾಸಿಗೆಗಳನ್ನು ಕೋವಿಡ್ ಸೋಂಕಿಗೆ ಒಳಗಾಗುವ ಕ್ಯಾನ್ಸರ್ ರೋಗಿಗಳಿಗೆ ಮೀಸಲಿರಿಸಲಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಅವರಿಗೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು. 6 ಎಲ್.ಪಿ.ಎಂ ನ ಸುಮಾರು 5000 ಆಮ್ಲಜನಕ ಸಾಂದ್ರಕಗಳನ್ನು ಟಾಟಾ ಸ್ಮಾರಕ ಕೇಂದ್ರ -ಟಿ.ಎಂ.ಸಿ ದೇಣಿಗೆಯಾಗಿ ಸ್ವೀಕರಿಸುತ್ತಿದೆ ಮತ್ತು ಹೆಚ್ಚಿನವುಗಳನ್ನು ದೇಶದ ಇತರೆ ಕ್ಯಾನ್ಸರ್ ಆಸ್ಪತ್ರೆಗಳಿಗೆ ವರ್ಗಾವಣೆ ಮಾಡುತ್ತಿದೆ.  ಕೋವಿಡ್-19 ಗೆ ಅನುವಂಶೀಯ ಸಂವೇದನೆಗಳನ್ನು ನಿರ್ಧರಿಸಲು ಟಾಟಾ ಸ್ಮಾರಕ ಆಸ್ಪತ್ರೆಯ ಸಹಯೋಗದಲ್ಲಿ “ ಕೋವಿಡ್-19 ಕಣ್ಗಾವಲು ಅಧ್ಯಯನ “ ನಡೆಯುತ್ತಿದೆ ಎಂದು ಡಾ. ಜಿತೇಂದ್ರ ಸಿಂಗ್ ಮಾಹಿತಿ ನೀಡಿದರು. ಇದು ಅಸಾಧಾರಣ ಮತ್ತು ಜಗತ್ತಿನ ಅತ್ಯಂತ ವಿರಳ ಅಧ್ಯಯನವಾಗಿದೆ. ಇದರ ಫಲಿತಾಂಶವನ್ನು ಜಗತ್ತಿನ ವೈಜ್ಞಾನಿಕ ಸಮುದಾಯಕ್ಕೆ ಶೀಘ್ರ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು. ಇದಲ್ಲದೇ ಕೋವಿಡ್-19 ರ ತೀವ್ರತೆಯ ಮೌಖಿಕ ಚಿಹ್ನೆಗಳ ಬಗ್ಗೆ ಕಂಡು ಹಿಡಿಯಲು ಅಧ್ಯಯನ ನಡೆಯುತ್ತಿದೆ ಎಂದರು.

ಕಳೆದ ಜೂನ್ ನಲ್ಲಿ “ಕೋವಿಡ್ ಬೀಪ್” ಅನ್ನು ಪ್ರಾರಂಭಿಸಿದ್ದನ್ನು ಸಚಿವ ಡಾ. ಜಿತೇಂದ್ರ ಸಿಂಗ್ ಸ್ಮರಿಸಿಕೊಂಡರು. ಅಣು ಇಂಧನ ಇಲಾಖೆ ಇದನ್ನು ಹೈದರಾಬಾದ್ ನ ಐಐಟಿ ಮತ್ತು ಹೈದರಾಬಾದ್ ನ ಇ.ಎಸ್.ಐ.ಸಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದ್ದು, ಈ ವ್ಯವಸ್ಥೆಯು ಕೋವಿಡ್-19 ಸೋಂಕಿತರಿಗೆ ಭಾರತದ ಮೊದಲ ದೇಶೀಯ, ವೆಚ್ಚ ಕಡಿಮೆ ಮಾಡುವ, ವೈಯರ್ ಲೆಸ್ ಫಿಸಿಯೋಲಾಜಿಕಲ್ ಪ್ಯಾರಾಮೀಟರ್ ಮಾನಿಟರಿಂಗ್ ಸಿಸ್ಟಮ್ ಆಗಿದೆ.  ದೇಶದಲ್ಲಿ ಖ‍್ಯಾತಿ ಪಡೆದಿರುವ ಸಂಸ್ಥೆಗಳ ನಡುವೆ ದೇಶ ಎದುರಿಸುತ್ತಿರುವ ಹೆಚ್ಚಿನ ಸವಾಲುಗಳಿಗೆ ಕನಿಷ್ಠ ವೆಚ್ಚದೊಂದಿಗೆ ಹೇಗೆ ಪರಿಹಾರಗಳನ್ನು ನೀಡಬಹುದು ಮತ್ತು ದೇಶವನ್ನು ನಿಜವಾದ ಅರ್ಥದಲ್ಲಿ ಆತ್ಮನಿರ್ಭರ್ ಮಾಡಲು ಸಾಧ್ಯ ಎಂಬುದಕ್ಕೆ “ಕೋವಿಡ್ ಬೀಪ್” ಒಂದು ಉತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.

ಅಣು ಇಂಧನ ಇಲಾಖೆಯ ಕಾರ್ಯದರ್ಶಿ ಶ್ರೀ ಕೆ.ಎನ್. ವ್ಯಾಸ್, ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ನ [ಎನ್.ಪಿ.ಸಿ.ಐ.ಎಲ್] ಸಿ.ಎಂ.ಡಿ ಶ್ರೀ ಎಸ್.ಕೆ. ಶರ್ಮಾ, ಬಿ.ಎ.ಆರ್.ಸಿ ನಿರ್ದೇಶಕ ಡಾ. ಎ.ಕೆ. ಮೊಹಂತಿ ಮತ್ತು ಹಿರಿಯ ಅಧಿಕಾರಿಗಳು ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದರು.

****



(Release ID: 1716909) Visitor Counter : 179