ರೈಲ್ವೇ ಸಚಿವಾಲಯ
ವಿವಿಧ ರಾಜ್ಯಗಳಿಗೆ ಆಕ್ಸಿಜನ್ ಎಕ್ಸ್ ಪ್ರೆಸ್ ನ 161 ಟ್ಯಾಂಕರ್ ಗಳು ಈವರೆಗೆ ಸಂಚಾರ: 2511 ಮೆಟ್ರಿಕ್ ಟನ್ ದ್ರವ ವೈದ್ಯಕೀಯ ಆಮ್ಲಜನಕ -ಎಲ್.ಎಂ.ಒ ವಿತರಣೆ
ಹಪಾದಿಂದ ಹೊರಟ ಮೊದಲ ಆಕ್ಸಿಜನ್ ಎಕ್ಸ್ ಪ್ರೆಸ್ ರಾಜಸ್ಥಾನ [ಕೊಟ]ದತ್ತ ಪಯಣ
40 ಆಕ್ಸಿಜನ್ ಎಕ್ಸ್ ಪ್ರೆಸ್ ನಿಂದ ಯಾನ ಪೂರ್ಣ
ಈವರೆಗೆ ಮಹಾರಾಷ್ಟ್ರಕ್ಕೆ 174 ಮೆಟ್ರಿನ್ ಟನ್ ಪೂರೈಕೆ, ಉತ್ತರ ಪ್ರದೇಶಕ್ಕೆ 689 ಮೆಟ್ರಿಕ್ ಟನ್, ಮಧ್ಯಪ್ರದೇಶಕ್ಕೆ 190 ಮೆಟ್ರಿಕ್ ಟನ್, ಹರ್ಯಾಣ 259 ಮೆಟ್ರಿಕ್ ಟನ್, ತೆಲಂಗಾಣ 123 ಮೆಟ್ರಿಕ್ ಟನ್ ಮತ್ತು ದೆಹಲಿಗೆ 1053 ಮೆಟ್ರಿಕ್ ಟನ್ ಪೂರೈಕೆ
Posted On:
06 MAY 2021 7:16PM by PIB Bengaluru
ಕೋವಿಡ್-19 ಸಂಕಷ್ಟ ಪರಿಸ್ಥಿತಿಯಲ್ಲಿ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಹೊಸ ಪರಿಹಾರಗಳನ್ನು ಕಂಡುಕೊಳ್ಳುತ್ತಿರುವ ಭಾರತೀಯ ರೈಲ್ವೆ ವಿವಿಧ ರಾಜ್ಯಗಳಿಗೆ ದ್ರವ ವೈದ್ಯಕೀಯ ಆಮ್ಲಜನಕ [ಎಲ್.ಎಂ.ಒ] ಪೂರೈಸುವ ಮೂಲಕ ಪರಿಹಾರ ದೊರಕಿಸಿಕೊಡುವ ತನ್ನ ಪ್ರಯಾಣವನ್ನು ಮುಂದುವರೆಸಿದೆ. ಈ ವರೆಗೆ ರೈಲ್ವೆ 161 ಟ್ಯಾಂಕರ್ ಗಳ ಮೂಲಕ 2511 ಮೆಟ್ರಿಕ್ ಟನ್ [ಅಂದಾಜು] ಎಲ್.ಎಂ.ಒ ವಿತರಿಸಿದೆ. ಇಲ್ಲಿಯತನಕ 40 ಆಕ್ಸಿಜನ್ ಎಕ್ಸ್ ಪ್ರೆಸ್ ತನ್ನ ಯಾನವನ್ನು ಪೂರ್ಣಗೊಳಿಸಿದೆ.
ಮನವಿ ಸಲ್ಲಿಸುವ ರಾಜ್ಯಗಳಿಗೆ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಅಗತ್ಯವಿರುವಷ್ಟು ಎಲ್.ಎಂ.ಒ ತಲುಪಿಸಲು ಭಾರತೀಯ ರೈಲ್ವೆ ಪ್ರಯತ್ನದಲ್ಲಿ ನಿರತವಾಗಿದೆ.
ಈವರೆಗೆ ಮಹಾರಾಷ್ಟ್ರಕ್ಕೆ 174 ಮೆಟ್ರಿನ್ ಟನ್ ಪೂರೈಕೆ, ಉತ್ತರ ಪ್ರದೇಶಕ್ಕೆ 689 ಮೆಟ್ರಿಕ್ ಟನ್, ಮಧ್ಯಪ್ರದೇಶಕ್ಕೆ 190 ಮೆಟ್ರಿಕ್ ಟನ್, ಹರ್ಯಾಣ 259 ಮೆಟ್ರಿಕ್ ಟನ್, ತೆಲಂಗಾಣ 123 ಮೆಟ್ರಿಕ್ ಟನ್ ಮತ್ತು ದೆಹಲಿಗೆ 1053 ಮೆಟ್ರಿಕ್ ಟನ್ ಪೂರೈಕೆ ಮಾಡಲಾಗಿದೆ.
ಪ್ರಸ್ತುತ 22 ಟ್ಯಾಂಕರ್ ಗಳು 400 ಟನ್ ಎಲ್.ಎಂ.ಒ ಹೊತ್ತು ಸಾಗಿದ್ದು, ಮಧ್ಯಪ್ರದೇಶ, ಹರ್ಯಾಣ, ರಾಜಸ್ಥಾನ ಮತ್ತು ದೆಹಲಿಗೆ ತಲುಪುವ ನಿರೀಕ್ಷೆಯಿದೆ. ಹೊಸ ಆಕ್ಸಿಜನ್ ಪೂರೈಕೆ ಮಾಡುವುದು ಕ್ರಿಯಾತ್ಮಕ ಕಸರತ್ತು ಆಗಿದ್ದು, ಅಂಕಿ ಸಂಖ್ಯೆಗಳು ಎಲ್ಲಾ ಕಾಲದಲ್ಲೂ ಆಪ್ಡೇಟ್ ಆಗುತ್ತಿವೆ.
*****
(Release ID: 1716672)
Visitor Counter : 174