ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಜಾಗತಿಕ ಸಾಂಕ್ರಾಮಿಕದ ವಿರುದ್ಧ ಹೋರಾಟಕ್ಕಾಗಿ ಜಾಗತಿಕ ಸಮುದಾಯದಿಂದ ಬಂದಿರುವ ಕೋವಿಡ್-19 ಸಾಮಗ್ರಿಗಳನ್ನು ಸಮರ್ಪಕವಾಗಿ ಹಂಚಿಕೆ ಮಾಡಿದ ಭಾರತ ಸರಕಾರ


31 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿರುವ  38 ಸಂಸ್ಥೆಗಳ ವೈದ್ಯಕೀಯ ಮೂಲಸೌಕರ್ಯ ಬಲವರ್ಧನೆ

Posted On: 04 MAY 2021 2:51PM by PIB Bengaluru

ಭಾರತ ಸರಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಯೋಗದೊಂದಿಗೆ ಕೋವಿಡ್-19 ಜಾಗತಿಕ ಸಾಂಕ್ರಾಮಿಕದ ವಿರುದ್ಧ ಹೋರಾಟವನ್ನು ಇಡೀ ಸರಕಾರದ ಹೊಣೆಗಾರಿಕೆಧೋರಣೆ ಅಡಿಯಲ್ಲಿ ಮುನ್ನಡೆಸುತ್ತಿದೆ. ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಅಭೂತಪೂರ್ವ ರೀತಿಯಲ್ಲಿ ಹೆಚ್ಚುತ್ತಿದೆ. ಹಲವಾರು ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಮೂಲಸೌಕರ್ಯ ದೈನಂದಿನ ಪ್ರಕರಣಗಳ ಹೆಚ್ಚಳ ಮತ್ತು ಮರಣ ಪ್ರಮಾಣದಲ್ಲಿಯ ಹೆಚ್ಚಳದಿಂದಾಗಿ ಕುಸಿಯುತ್ತಿದೆ.

ಜಾಗತಿಕ ಸಾಂಕ್ರಾಮಿಕ ಕೋವಿಡ್-19 ವಿರುದ್ಧದ ಸಾಮೂಹಿಕ ಹೋರಾಟಕ್ಕೆ ಬೆಂಬಲಾರ್ಥವಾಗಿ ಜಾಗತಿಕ ಸಮುದಾಯವು ಭಾರತ ಸರಕಾರಕ್ಕೆ ಸಹಾಯಹಸ್ತವನ್ನು ನೀಡಿದೆ. ವೈದ್ಯಕೀಯ ಸಲಕರಣೆಗಳು, ಔಷಧಿಗಳು, ಆಮ್ಲಜನಕ ಕಾನ್ಸಂಟ್ರೇಟರ್ ಗಳು, ವೆಂಟಿಲೇಟರ್ ಗಳು ಇತ್ಯಾದಿಗಳನ್ನು ಹಲವು ದೇಶಗಳು ಒದಗಿಸುತ್ತಿವೆ.

ಭಾರತ ಪಡೆದಿರುವ ವೈದ್ಯಕೀಯ ಮತ್ತು ಇತರ ಪರಿಹಾರ ಹಾಗು ಪೂರಕ ಸಾಮಗ್ರಿಗಳನ್ನು ಸಮರ್ಪಕವಾಗಿ ವಿತರಣೆ ಮಾಡಲು  ವ್ಯವಸ್ಥಿತವಾದ ಯಾಂತ್ರಿಕ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲಾಗಿದೆ.

ಆಮ್ಲಜನಕ ಮತ್ತು ಆಮ್ಲಜನಕ ಸಂಬಂಧಿತ ಉಪಕರಣಗಳು ಇತ್ಯಾದಿಗಳನ್ನು ಒಳಗೊಂಡ  ಕೋವಿಡ್ ಸಂಬಂಧಿತ ಆಮದುಗಳ ಬಗ್ಗೆ ಭಾರತೀಯ ಕಸ್ಟಮ್ಸ್ ಸೂಕ್ಷ್ಮಗ್ರಾಹಿಯಾಗಿದೆ ಮತ್ತು ಅದು 24*7 ಅವಧಿಯೂ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸರಕುಗಳು ಬರುತ್ತಿದ್ದಂತೆ ತ್ವರಿತವಾಗಿ ಮತ್ತು ಗಂಟೆಯ ಒಳಗೆ ತ್ವರಿತ ವಿಲೇವಾರಿಯನ್ನು ಮಾಡುತ್ತಿದೆ. ತ್ವರಿತಗತಿಯಲ್ಲಿ ವಿಲೇವಾರಿ ಮಾಡುವುದಕ್ಕಾಗಿ ಕೈಗೊಂಡ ಕ್ರಮಗಳು ಕೆಳಗಿನಂತಿವೆ:

  • ಇತರ ಸರಕುಗಳಿಗೆ ಹೋಲಿಸಿದಾಗ ಸರಕುಗಳ ವಿಲೇವಾರಿಗೆ ಕಸ್ಟಮ್ಸ್ ವ್ಯವಸ್ಥೆಯು ಗರಿಷ್ಠ ಅದ್ಯತೆಯನ್ನು ನೀಡುತ್ತಿದೆ
  • ನೋಡಲ್ ಅಧಿಕಾರಿಗಳಿಗೆ ಮಿಂಚಂಚೆ ಮೂಲಕ ನಿಗಾ ವಹಿಸಲು ಮತ್ತು ತ್ವರಿತವಾಗಿ ವಿಲೇವಾರಿ ಮಾಡಲು ಸೂಚನೆಗಳು ರವಾನಿಸಲ್ಪಡುತ್ತವೆ.
  • ಕೋವಿಡ್ ಸಂಬಂಧಿತ ಆಮದು ಅನಿಶ್ಚಿತತೆಯ  ಕುರಿತಂತೆ ಹಿರಿಯ ಅಧಿಕಾರಿಗಳು ನಿಗಾ ವಹಿಸುವ ವ್ಯವಸ್ಥೆಯನ್ನು ಅನುಷ್ಠಾನಿಸಲಾಗುತ್ತಿದೆ.
  • ಅವಶ್ಯ ನಿಯಮಗಳ ಪಾಲನೆ ಮತ್ತು ಇತರ ಆವಶ್ಯಕತೆಗಳ ಬಗ್ಗೆ ವ್ಯಾಪಾರೋದ್ಯಮಿಗಳಿಗೆ ಸರಕು ನಿರ್ವಹಣೆ ಬಗ್ಗೆ ಮೊದಲೇ ಮಾಹಿತಿ ನೀಡಲಾಗುತ್ತದೆ.
  • ಮಾಹಿತಿ ಪ್ರಸರಣ ಕಾರ್ಯಚಟುವಟಿಕೆ ಮತ್ತು ಸಹಾಯ ಕೇಂದ್ರಗಳಿಂದಾಗಿ ಸರಕುಗಳು ಬಂದಾಕ್ಷಣವೇ ಅವುಗಳನ್ನು ವಿಲೇವಾರಿ ಮಾಡಿ ವ್ಯಾಪಾರೋದ್ಯಮಿಗಳಿಗೆ ಬಟವಾಡೆ ಮಾಡುವುದಕ್ಕೆ ಸಾಧ್ಯವಾಗುತ್ತದೆ.

ತ್ವರಿತ ವಿಲೇವಾರಿಯಲ್ಲದೆ ಅದರ ಜೊತೆಗೆ ಇತರ ಸವಲತ್ತುಗಳು,

  • ಕೋವಿಡ್ ಎದುರಿಸುವ ಸರಕುಗಳು ಎಂದು ಗುರುತಿಸಲಾದ ಸಾಮಗ್ರಿಗಳ  ಮೇಲಣ ಮೂಲ ಕಸ್ಟಮ್ಸ್ ಸುಂಕ ಮತ್ತು ಆರೋಗ್ಯ ತೆರಿಗೆಯನ್ನು ಭಾರತೀಯ ಕಸ್ಟಮ್ಸ್ ಮನ್ನಾ ಮಾಡಿದೆ.
  • ಉಚಿತವಾಗಿ ಆಮದು ಮಾಡಲಾಗಿದ್ದರೆ ಮತ್ತು ಅವುಗಳನ್ನು ಉಚಿತವಾಗಿ ವಿತರಣೆ ಮಾಡುವುದಾಗಿದ್ದಲ್ಲಿ, ರಾಜ್ಯ ಸರಕಾರಗಳ ಪ್ರಮಾಣ ಪತ್ರಗಳ ಆಧಾರದಲ್ಲಿ .ಜಿ.ಎಸ್.ಟಿ. ಯನ್ನು ಕೂಡಾ ಮನ್ನಾ ಮಾಡಲಾಗುವುದು.
  • ಇದಲ್ಲದೆ, ವೈಯಕ್ತಿಕ ಬಳಕೆಗಾಗಿ ಆಮ್ಲಜನಕ ಕಾನ್ಸಂಟ್ರೇಟರ್ ಗಳನ್ನು ಆಮದು ಮಾಡಿದರೆ, .ಜಿ.ಎಸ್.ಟಿ.ಯನ್ನು 28 % ನಿಂದ 12 % ಗೆ ಇಳಿಸಲಾಗುತ್ತದೆ.

ವಿದೇಶಗಳಿಂದ ಬಂದ ಪರಿಹಾರ ಸಾಮಗ್ರಿಗಳನ್ನು ದತ್ತಿ, ಸಹಾಯ ಮತ್ತು ದಾನಗಳಾಗಿ ಪಡೆದು ವಿತರಿಸಲು ಎಂ..ಎಚ್.ಎಫ್.ಡಬ್ಲ್ಯು ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿ (ಆರೋಗ್ಯ) ಅಧೀನದಲ್ಲಿ ಕೋಶವನ್ನು ರಚಿಸಲಾಗಿದೆ. ಕೋಶವು 2021 ಏಪ್ರಿಲ್ 26 ರಂದು ಕಾರ್ಯಾರಂಭ ಮಾಡಿದೆ. ಶಿಕ್ಷಣ ಸಚಿವಾಲಯದಿಂದ ಓರ್ವ ಜಂಟಿ ಕಾರ್ಯದರ್ಶಿಯನ್ನು, ಎಂ... ಯಿಂದ ಇಬ್ಬರು ಹೆಚ್ಚುವರಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳನ್ನು, ಕಸ್ಟಮ್ಸ್ ಮುಖ್ಯ ಕಮಿಶನರ್, ನಾಗರಿಕ ವಾಯುಯಾನ ಸಚಿವಾಲಯದ ಆರ್ಥಿಕ ಸಲಹೆಗಾರರು, ಡಿ.ಟಿ.., ಜಿ.ಎಚ್.ಎಸ್ತಾಂತ್ರಿಕ ಸಲಹೆಗಾರರು, ಎಚ್.ಎಲ್.ಎಲ್. ಪ್ರತಿನಿಧಿಗಳು, ಎಂ..ಎಚ್.ಎಫ್.ಡಬ್ಲ್ಯು.ನಿಂದ ಇಬ್ಬರು ಜಂಟಿ ಕಾರ್ಯದರ್ಶಿಗಳು ಮತ್ತು ಮಹಾಕಾರ್ಯದರ್ಶಿ ಜೊತೆ .ಆರ್.ಸಿ.ಎಸ್. ಇನ್ನೋರ್ವ ಪ್ರತಿನಿಧಿಯನ್ನು ಕೋಶಕ್ಕೆ  ನಿಯೋಜನೆ ಮಾಡಲಾಗಿದೆ.

 ಏಪ್ರಿಲ್ ಕೊನೆಯ ವಾರದಿಂದೀಚೆಗೆ ದೇಶದ ವಿವಿಧ ಭಾಗಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳವಾದ ಬಳಿಕ ಎಂ... ಮೂಲಕ ವಿವಿಧ ರಾಷ್ಟ್ರಗಳಿಂದ ವೈದ್ಯಕೀಯ ಸಾಮಗ್ರಿಗಳು ದೇಣಿಗೆ ರೂಪದಲ್ಲಿ ಬರಲಾರಂಭಿಸಿದೆ. ವಿವಿಧ ದೇಶಗಳು ನೀಡುತ್ತಿರುವ ವಿವಿಧ ಸಾಮಗ್ರಿಗಳು ದೇಶದ ವಿವಿಧ ಭಾಗಗಳಲ್ಲಿ ತಕ್ಷಣ ಮತ್ತು ತ್ವರಿತವಾಗಿ ಲಭ್ಯವಾಗಬೇಕಾದಂತಹ ವಸ್ತುಗಳಾಗಿವೆ ನೆರವು ಭಾರತ ಸರಕಾರವು ಈಗಾಗಲೇ ನೀಡುತ್ತಿರುವ ಸಹಾಯಕ್ಕೆ ಹೆಚ್ಚುವರಿಯಾಗಿದ್ದು, ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ ಲಭಿಸುವ  ನೆರವು ಆಗಿರುತ್ತದೆ. ಬಳಿಕ ಖಾಸಗಿ ಸಂಸ್ಥೆಗಳು, ಇತ್ಯಾದಿಗಳಿಂದ ಬರುವ ಪೂರೈಕೆಗಳನ್ನು ನೀತಿ ಆಯೋಗದ ಮೂಲಕ ರವಾನೆ ಮಾಡಲಾರಂಭಿಸಿದ್ದು ಅವುಗಳನ್ನು ಕೋಶವು ನಿರ್ವಹಿಸುತ್ತದೆ.

ಬಾಕಿ ಇರುವ ವಿಷಯಗಳ ಇತ್ಯರ್ಥಕ್ಕೆ ಗುಂಪು ಪ್ರತೀ ದಿನ ಬೆಳಿಗ್ಗೆ 9.30 ಗಂಟೆಗೆ ವರ್ಚುವಲ್ ಸಭೆ ನಡೆಸುತ್ತದೆ. ಎಂ... ದೈನಂದಿನ ಎಲ್ಲಾ ಮಾಹಿತಿಗಳು ಮತ್ತು ಎಂ..ಎಚ್.ಎಫ್.ಡಬ್ಲ್ಯು. ನಿಂದ ಅವುಗಳ  ಪರಿಹಾರ, ಹಾಗು ಡಿ.ಟಿ., ಜಿ.ಎಚ್.ಎಸ್, ಎಚ್.ಎಲ್.ಎಲ್. ಹಾಗು .ಆರ್.ಸಿ.ಎಸ್. ತಾಂತ್ರಿಕ ಸಲಹೆಗಾರರಿಂದ ಅವುಗಳ ಕ್ರಮಾನುಷ್ಠಾನವನ್ನು ವಾಟ್ಸಪ್ ಗುಂಪಿನ ಮೂಲಕ ಮಾಡಲಾಗುತ್ತದೆ.

ಇದರ ಜೊತೆಗೆ ನೀತಿ ಆಯೋಗದ ಸಿ... ಅಧೀನದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಇದರಲ್ಲಿ ಎಂ... ವ್ಯಯ ವಿಭಾಗದ ಕಾರ್ಯದರ್ಶಿ ಮತ್ತು ನೀತಿ ಆಯೋಗದ ಹಾಗು ಎಂ..ಎಚ್.ಎಫ್.ಡಬ್ಲ್ಯು. ಅಧಿಕಾರಿಗಳು ಒಳಗೊಂಡಿದ್ದಾರೆ. ಸಮಿತಿಯು ಇಡೀ ಕಾರ್ಯಾಚರಣೆಯ ಮೇಲುಸ್ತುವಾರಿ ಮಾಡಲಿದೆ.

ವಿದೇಶಗಳಿಂದ ಬರುವ ನೆರವಿನ ಪ್ರಸ್ತಾಪಗಳನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಲು ವಿದೇಶಿ ವ್ಯವಹಾರಗಳ ಸಚಿವಾಲಯವು ನೋಡಲ್ ಏಜೆನ್ಸಿಯಾಗಿರುತ್ತದೆ. ಮತ್ತು ಅದು ವಿದೇಶಗಳಲ್ಲಿರುವ ಮಿಶನ್ ಗಳ ಜೊತೆ ಸಮನ್ವಯ ಸಾಧಿಸುತ್ತದೆ. ಎಂ...ಯು ಮಂಡಳಿಗೆ ಅನ್ವಯವಾಗುವಂತೆ ತನ್ನದೇ ಎಸ್..ಪಿ. ಗಳನ್ನು ಹೊರಡಿಸಿದೆ

ಭಾರತೀಯ ರೆಡ್ ಕ್ರಾಸ್ ಸೊಸೈಟಿ

ಎಂ... ಮೂಲಕ ಲಭ್ಯವಾಗುವ ಎಲ್ಲಾ ಸರಕುಗಳಿಗೆ ಮತ್ತು ವಿದೇಶಗಳಿಂದ ದೇಣಿಗೆಯಾಗಿ ಬರುವ ಸರಕುಗಳಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಅದನ್ನು ಪಡೆಯುವ ಸಂಸ್ಥೆಯಾಗಿರುತ್ತದೆ. ಪ್ರಕ್ರಿಯೆ ಸಾಗುವ ಕೋಷ್ಟಕದನ್ವಯ ಸಂಬಂಧಿತ ಪತ್ರಗಳು ಸ್ವೀಕೃತವಾದಾಕ್ಷಣವೇ .ಆರ್.ಸಿ.ಎಸ್. ಅವಶ್ಯ ಪ್ರಮಾಣ ಪತ್ರಗಳನ್ನು ಕಸ್ಟಮ್ಸ್ ಪ್ರಕ್ರಿಯೆಗಾಗಿ ಮತ್ತು ವಿಮಾನ ನಿಲ್ದಾಣಗಳಲ್ಲಿ ನಿಯಂತ್ರಣ ನಿಯಮಾವಳಿಗಳ ಅನ್ವಯ ವಿಲೇವಾರಿಗಾಗಿ ಎಚ್.ಎಲ್.ಎಲ್.ಗೆ ಒದಗಿಸುತ್ತದೆ. ಎಂ..ಎಚ್.ಎಫ್.ಡಬ್ಲ್ಯು ಮತ್ತು ಎಚ್.ಎಲ್.ಎಲ್.ಗಳ ಜೊತೆ ಸಂಪರ್ಕವನ್ನು ಖಾತ್ರಿಪಡಿಸಿ ವಿಳಂಬವನ್ನು ಕಡಿಮೆ ಮಾಡಿ ತಕ್ಷಣವೇ ಅವುಗಳನ್ನು ಸಾಗಾಟ ಮಾಡುವುದಕ್ಕೂ  .ಆರ್.ಸಿ.ಎಸ್. ಕೈಜೋಡಿಸುತ್ತದೆ.

ಎಚ್.ಎಲ್.ಎಲ್/ಡಿ.ಎಂ..

ಎಚ್.ಎಲ್.ಎಲ್. ಲೈಫ್ ಕೇರ್ ಲಿಮಿಟೆಡ್ (ಎಚ್.ಎಲ್.ಎಲ್.) ಸಂಸ್ಥೆಯು .ಆರ್.ಸಿ.ಎಸ್. ಗೆ ಕಸ್ಟಮ್ಸ್ ಏಜೆಂಟ್ ಆಗಿರುತ್ತದೆ. ಮತ್ತು ಎಂ..ಎಚ್.ಎಫ್.ಡಬ್ಲ್ಯು.ಗೆ ವಿತರಣಾ ಮ್ಯಾನೇಜರ್ ಆಗಿರುತ್ತದೆ. ಸರಕುಗಳನ್ನು ವಿಮಾನ ನಿಲ್ದಾಣಗಳಲ್ಲಿಯೇ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ ಮತ್ತು ವಿತರಣೆಗಾಗಿ ಎಚ್.ಎಲ್.ಎಲ್.ನಿಂದ ಸಾಗಿಸಲ್ಪಡುತ್ತವೆ. ಒಂದು ವೇಳೆ ಮಿಲಿಟರಿ ವಿಮಾನ ನಿಲ್ದಾಣಗಳಿಗೆ ಸರಕುಗಳು ಬಂದರೆ ಅಥವಾ ಆಮ್ಲಜನಕ ಸ್ಥಾವರಗಳಂತಹ ಸಾಮಗ್ರಿಗಳು ಬಂದರೆ ಮಿಲಿಟರಿ ವ್ಯವಹಾರಗಳ ಇಲಾಖೆ ( ಡಿ.ಎಂ..) ಯು ಎಚ್.ಎಲ್.ಎಲ್. ಗೆ ನೆರವಾಗುತ್ತದೆ.

ಲಭ್ಯತೆಯ ಆಧಾರದಲ್ಲಿ  ಮತ್ತು ಜೀವವುಳಿಸಲು ಸಂಪನ್ಮೂಲಗಳ ತಕ್ಷಣದ ಬಳಕೆಯಾಗಬೇಕು ಎಂಬುದಕ್ಕಾಗಿ ಸರಕುಗಳು ಬರುತ್ತಿದ್ದಂತೆ ಅತ್ಯಲ್ಪ ಕಾಲದ ಸೂಚನೆಯ ಮೇರೆಗೆ ಅವುಗಳನ್ನು ವಿತರಿಸುವುದು ಬಹಳ ಅಗತ್ಯ. ವಿದೇಶಗಳಿಂದ ವಿವಿಧ ಸಂಖ್ಯೆಗಳಲ್ಲಿ, ವಿವಿಧ ರೀತಿಯ ವಸ್ತುಗಳು ವಿವಿಧ ಸಮಯಗಳಲ್ಲಿ ಬರುತ್ತಿವೆ. ಇದರಿಂದ ರಾಜ್ಯಗಳಿಗೆ ಸಾಧ್ಯವಾದಷ್ಟು ತ್ವರಿತವಾಗಿ ವಸ್ತುಗಳನ್ನು ತಲುಪಿಸಲು ವಿತರಣಾ ವ್ಯವಸ್ಥೆಯನ್ನು ಮರುರೂಪಿಸುವುದು ಅವಶ್ಯವಾಗಿದೆ. ದಾನಿ ರಾಷ್ಟ್ರಗಳು ಆಯಾ ರಾಷ್ಟ್ರಗಳಲ್ಲಿ ತಮ್ಮ ಸರಕುಗಳನ್ನು ದಾಖಲು ಮಾಡಿದ ಬಳಿಕವಷ್ಟೇ ಅವುಗಳ ವಿವರ ದೃಢೀಕರಿಸಲ್ಪಡುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಇಲ್ಲಿಗೆ ತಲುಪಿರುವ ಸಾಮಗ್ರಿಗಳು ಪಟ್ಟಿಯಲ್ಲಿ ನೀಡಿದಂತಹವುಗಳಾಗಿರುವುದಿಲ್ಲ. ಅಥವಾ ಅವುಗಳ ಪ್ರಮಾಣ ಬೇರೆ ಬೇರೆಯಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ವಿಮಾನ ನಿಲ್ದಾಣಗಳಲ್ಲಿಯೇ ಹೊಂದಾಣಿಕೆ ಮಾಡಬೇಕಾಗುತ್ತದೆ. ಅಂತಿಮ ಪಟ್ಟಿಯು ವಿವರವಾದ ಹೊಂದಾಣಿಕೆಯ ಬಳಿಕವೇ  ದೃಢೀಕರಿಸಲ್ಪಡುತ್ತದೆ. ಹೀಗಾಗಿ ಮಂಜೂರಾತಿ, ಅನುಮೋದನೆ ಮತ್ತು ವಿತರಣೆಗಾಗಿ ಸಾಗಾಟ ನಿಭಾವಣೆಗೆ ದಿನದ ಕಾಲಂಶಕ್ಕಿಂತ ಕಡಿಮೆ ಸಮಯಾವಕಾಶ ತಗಲುತ್ತದೆ. ಪರಿಸ್ಥಿತಿಯಲ್ಲಿ, ಇವುಗಳು ಸಮಯದೊಳಗೆ ಪೂರೈಕೆಯಾಗಬೇಕಾದ ಸಾಮಗ್ರಿಗಳಾಗಿರುವುದರಿಂದ  ಅವುಗಳನ್ನು ತಕ್ಷಣವೇ ವಿತರಣೆ ಮಾಡಲು ಮತ್ತು ಅವುಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಲು ಅನುಕೂಲವಾಗುವಂತೆ ಸಾಧ್ಯ ಇರುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅತ್ಯಲ್ಪ ಸಮಯದಲ್ಲಿ ಸಾಮಗ್ರಿಗಳನ್ನು ಬಿಡಿಸಲು, ಮತ್ತೆ ಪ್ಯಾಕಿಂಗ್ ಮಾಡಲು ಮತ್ತು ವಿತರಣೆಗಾಗಿ ರವಾನೆ ಮಾಡಲೂ ಸಾಧ್ಯ ಇರುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಸಮಾನ ರೀತಿಯಲ್ಲಿ ಹಂಚಿಕೆಯಾಗಬೇಕು ಮತ್ತು ತೃತೀಯ ಹಂತದ ಆರೋಗ್ಯ ರಕ್ಷಣಾ ಸೌಲಭ್ಯಗಳ ಮೇಲಣ ಒತ್ತಡವನ್ನೂ ಪರಿಗಣಿಸಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಹಂಚಿಕೆಯನ್ನು ಮಾಡಲಾಗಿದೆ. ಮೊದಲ ಕೆಲವು ದಿನಗಳಲ್ಲಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಸಂಖ್ಯೆ/ಒತ್ತಡ ಹೆಚ್ಚು ಇರುವ ಹಾಗು ಆವಶ್ಯಕತೆ ಅತ್ಯಂತ ಹೆಚ್ಚು ಇರುವ  ರಾಜ್ಯಗಳನ್ನು ಆಯ್ಕೆ ಮಾಡಿ ...ಎಂ.ಎಸ್. ಮತ್ತು ಇತರ ಕೇಂದ್ರೀಯ ಸಂಸ್ಥೆಗಳ ಮೂಲಕ ನೆರವು ಹಂಚಿಕೆ ಮಾಡಲಾಯಿತು. ದಿಲ್ಲಿ ಸುತ್ತ ಮುತ್ತ ಇರುವ ಮತ್ತು ಎನ್.ಸಿ.ಆರ್. ನಲ್ಲಿರುವ ಡಿ.ಆರ್.ಡಿ.. ಸೌಲಭ್ಯಗಳು ಸಹಿತ  ಕೇಂದ್ರ ಸರಕಾರಿ ಆಸ್ಪತ್ರೆಗಳಿಗೆ ಕೂಡಾ ನೆರವನ್ನು ಹಂಚಿಕೆ ಮಾಡಲಾಯಿತು. ಸಾಮಾನ್ಯವಾಗಿ ತೃತೀಯ ಹಂತದ ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ   ಕೋವಿಡ್ ಗಂಭೀರ ರೋಗ ಲಕ್ಷಣಗಳು ಇರುವ ಪ್ರಕರಣಗಳು ಹೆಚ್ಚು ಇರುವುದನ್ನು ಪರಿಗಣಿಸಲಾಯಿತು ಮತ್ತು ವಲಯದಲ್ಲಿ ಜನತೆಗೆ  ಗುಣಮಟ್ಟದ  ತೃತೀಯ ಹಂತದ ಆರೈಕೆಯನ್ನು ಒದಗಿಸುವ ಆಯಾ ಸಂಸ್ಥೆಯು ಏಕೈಕ ವ್ಯವಸ್ಥೆಯಾಗಿರುವುದನ್ನು ನೆರವು ಹಂಚಿಕೆ ಸಂದರ್ಭದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಯಿತು.

2021 ಮೇ 2 ರಂದು ಆರೋಗ್ಯ ಸಚಿವಾಲಯವು ಮಂಜೂರಾತಿಗಾಗಿ ರೂಪಿಸಿದ ಗುಣಮಟ್ಟದ ಕಾರ್ಯಾಚರಣಾ ಪ್ರಕ್ರಿಯೆಗಳನ್ವಯ:

  • ನೆರವಿನ ಪ್ರಮಾಣ ಸೀಮಿತವಾಗಿರುವುದರಿಂದಅವುಗಳ ಗರಿಷ್ಠ ಪ್ರಮಾಣದ ಬಳಕೆ ಆಗಬೇಕೆಂಬ ಕಾರಣದಿಂದ ಹೆಚ್ಚು ಹೊರೆ ಇರುವ ರಾಜ್ಯಗಳಿಗೆ ( ಸಕ್ರಿಯ ಪ್ರಕರಣಗಳು ಹೆಚ್ಚು ಸಂಖ್ಯೆಯಲ್ಲಿರುವ ರಾಜ್ಯಗಳು) ಹಾಗು ಅಲ್ಲಿ ಸಲಕರಣೆಗಳ/ಔಷಧಿಗಳ ಆವಶ್ಯಕತೆ ಹೆಚ್ಚು ಇರುವ ಕಾರಣಕ್ಕೆ ರಾಜ್ಯಗಳಿಗೆ ನೆರವನ್ನು ಒದಗಿಸಲಾಗಿದೆ.
  • ಇಂತಹ ನೆರವನ್ನು ಪ್ರತಿ ಬಾರಿಯೂ ವಿರಳವಾಗಿ, ಹೆಚ್ಚು ರಾಜ್ಯಗಳಿಗೆ ವಿತರಿಸುವುದರಿಂದ ನಿರೀಕ್ಷಿತ ಫಲಿತಾಂಶ ಸಾಧ್ಯವಾಗದು. ಮಾತ್ರವಲ್ಲ ಇದರಿಂದಾಗಿ ಸಣ್ಣ ಪ್ಯಾಕೇಟುಗಳನ್ನು ಬಹಳ ದೂರ ಸಾಗಿಸಬೇಕಾಗುತ್ತದೆ ಮತ್ತು ಸಮಯವೂ ಬಹಳ ತಗಲುತ್ತದೆ ಮತ್ತು ಸಂಪನ್ಮೂಲಗಳು ಪೋಲಾಗುವ ಸಾಧ್ಯತೆಯೂ ಇರುತ್ತದೆ.
  • ಆಸ್ಪತ್ರೆಗಳಿಗೆ ದಾಖಲಾಗುವ ವ್ಯಕ್ತಿಗಳ ಸಂಖ್ಯೆಯ ಹಿನ್ನೆಲೆಯಲ್ಲಿ ಹೆಚ್ಚು ಹೊರೆ ಹೊತ್ತಿರುವ ರಾಜ್ಯಗಳ ಆವಶ್ಯಕತೆಯೂ ಹೆಚ್ಚು ಇರುವುದನ್ನು ಮತ್ತು ಭಾರತ ಸರಕಾರದ ಸಂಪನ್ಮೂಲಗಳ ವಿತರಣೆ ಮೊದಲೇ ಆಗಿರುವುದನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ. ನೆರೆಯ ರಾಜ್ಯಗಳು/ನಗರಗಳಿಂದ ರೋಗಿಗಳು ಬರುವ, ಆಯಾ ವಲಯದ  ವೈದ್ಯಕೀಯ ಹಬ್ ಗಳೆಂದು ಪರಿಗಣಿತವಾಗಿರುವ ರಾಜ್ಯಗಳಿಗೆ ವಿಶೇಷ ಗಮನ ನೀಡಲಾಗಿದೆ. ಕೆಲವು ಪ್ರಕರಣಗಳಲ್ಲಿ ಸಂಪನ್ಮೂಲ ಬಹಳ ಕಡಿಮೆ ಇರುವ ರಾಜ್ಯಗಳಿಗೆಈಶಾನ್ಯ ಮತ್ತು ಗಿರಿ ರಾಜ್ಯಗಳಿಗೆ, ಟ್ಯಾಂಕರುಗಳು ತಲುಪಲಾರದ ರಾಜ್ಯಗಳಿಗೆ ಅಲ್ಲಿಯ ಆವಶ್ಯಕತೆಗಳನ್ನು ಈಡೇರಿಸುವುದಕ್ಕಾಗಿ ಇದರಲ್ಲಿ ಪರಿಗಣಿಸಬಹುದಾಗಿದೆ.

ಮೇಲ್ಕಾಣಿಸಿದ  ಮಾನದಂಡಗಳು ಮತ್ತು ತತ್ವಗಳ ಆಧಾರದಲ್ಲಿ ನಲವತ್ತು ಲಕ್ಷದಷ್ಟು ಸಂಖ್ಯೆಯ 24 ವಿವಿಧ ವರ್ಗಗಳ ವಸ್ತುಗಳನ್ನು ವಿವಿಧ ರಾಜ್ಯಗಳ 86 ಸಂಸ್ಥೆಗಳಿಗೆ ವಿತರಣೆ ಮಾಡಲಾಗಿದೆ.

 

ಸಲಕರಣೆಗಳಲ್ಲಿ ಬಹುಪಾಲು ಬಿ.ಪಿ..ಪಿ.ಯಂತ್ರಗಳು, ಆಮ್ಲಜನಕ, (ಆಮ್ಲಜನಕ ಕಾನ್ಸಂಟ್ರೇಟರ್ ಗಳು, ಆಮ್ಲಜನಕ ಸಿಲಿಂಡರ್ ಗಳು, ಪಿ.ಎಸ್.. ಆಮ್ಲಜನಕ ಸ್ಥಾವರಗಳು, ನಾಡಿ ಮಿಡಿತ ಆಕ್ಸಿಮೀಟರ್ ಗಳು) ಔಷಧಿಗಳು (ಫ್ಲೇವಿಪರಿವಿರ್ ಮತ್ತು ರೆಮಿಡಿಸಿವಿರ್), ಪಿ.ಪಿ.. (ಕವಚಗಳು, ಎನ್-95 ಮುಖಗವಸುಗಳು ಮತ್ತು ಗೌನ್ ಗಳು ) ಸೇರಿವೆ.

ಕೆಳಗಿನ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಒಂದೋ ಈಗಾಗಲೇ ಸಲಕರಣೆಗಳನ್ನು ಪಡೆದುಕೊಂಡಿವೆ ಅಥವಾ ಅವುಗಳನ್ನು ಅಲ್ಲಿಗೆ ರವಾನಿಸಲಾಗುತ್ತಿದೆ.

1.      ಆಂಧ್ರ ಪ್ರದೇಶ

2.      ಅಸ್ಸಾಂ

3.      ಬಿಹಾರ  

4.      ಚಂಡೀಗಢ 

5.      ಛತ್ತೀಸ್ ಗಢ  

6.      ದಿಯು ಮತ್ತು ನಗರ ಹವೇಲಿ   

7.      ದಿಲ್ಲಿ 

8.      ಗೋವಾ

9.      ಗುಜರಾತ್

10.  ಹರ್ಯಾಣಾ

11.  ಹಿಮಾಚಲ ಪ್ರದೇಶ

12.  ಜಮ್ಮು ಮತ್ತು ಕಾಶ್ಮೀರ

13.  ಜಾರ್ಖಂಡ

14.  ಕರ್ನಾಟಕ

15.  ಕೇರಳ

16.  ಲಡಾಖ್

17.  ಲಕ್ಷ ದ್ವೀಪ

18.  ಮಧ್ಯ ಪ್ರದೇಶ

19.  ಮಹಾರಾಷ್ಟ್ರ

20.  ಮಣಿಪುರ

21.  ಮೇಘಾಲಯ

22.  ಮಿಜೋರಾಂ

23.  ಒಡಿಶಾ

24.  ಪುದುಚೇರಿ

25.  ಪಂಜಾಬ್

26.  ರಾಜಸ್ಥಾನ

27.  ತಮಿಳು ನಾಡು

28.  ತೆಲಂಗಾಣ

29.  ಉತ್ತರ ಪ್ರದೇಶ

30.  ಉತ್ತರಾಖಂಡ

31.  ಪಶ್ಚಿಮ ಬಂಗಾಳ

ವಿವಿಧ ಉತ್ಪನ್ನಗಳು ಬರುತ್ತಿದ್ದು, ಉಳಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೂಡಾ ಬರಲಿರುವ ದಿನಗಳಲ್ಲಿ ಇದರ ವ್ಯಾಪ್ತಿಯಲ್ಲಿ ತರಲಾಗುವುದು.

ಕೆಳಗಿನ ಸಂಸ್ಥೆಗಳು (ಪ್ರಾದೇಶಿಕವಾರು) ಸಲಕರಣೆಗಳನ್ನು ಪಡೆದಿವೆ.

ದಿಲ್ಲಿ ಎನ್.ಸಿ.ಆರ್.

1.         ಎಲ್.ಎಚ್.ಎಂ.ಸಿ. ದಿಲ್ಲಿ

2.         ಸಫ್ದರ್ ಜಂಗ್ ಆಸ್ಪತ್ರೆ ದಿಲ್ಲಿ

3.         ಆರ್.ಎಂ.ಎಲ್. ಆಸ್ಪತ್ರೆ

4.         ...ಎಂ.ಎಸ್. ದಿಲ್ಲಿ

5.         ಡಿ.ಆರ್.ಡಿ.. ದಿಲ್ಲಿ.

6.         ದಿಲ್ಲಿಯಲ್ಲಿಯ 2 ಆಸ್ಪತ್ರೆಗಳು (ಮೋತಿ ನಗರ ಮತ್ತು ಪೂತ್ ಕಾಲನ್)

7.         ಎನ್..ಟಿ.ಆರ್.ಡಿ. ದಿಲ್ಲಿ.

8.         .ಟಿ.ಬಿ.ಪಿ. ನೊಯಿಡಾ

ಈಶಾನ್ಯ

9.         ಎನ್...ಜಿ.ಆರ್..ಎಚ್.ಎಂ.ಎಸ್ ಶಿಲ್ಲಾಂಗ್

10.       ಆರ್..ಎಂ.ಎಸ್. ಇಂಫಾಲಾ

ಉತ್ತರ

11.       ...ಎಂ.ಎಸ್. ಭಾತಿಂಡಾ

12.       ಪಿ.ಜಿ.. ಚಂಡೀಗಢ

13.       ಡಿ.ಆರ್.ಡಿ.  ಡೆಹ್ರಾಡೂನ್

14.       ...ಎಂ.ಎಸ್. ಝಾಜ್ಜರ್

ಪೂರ್ವ

15.       ...ಎಂ.ಎಸ್. ಋಷಿಕೇಶ್

16.       ...ಎಂ.ಎಸ್. ರಾಯ್ ಬರೇಲಿ

17.       ...ಎಂ.ಎಸ್. ದಿಯೋಘರ್

18.       ...ಎಂ.ಎಸ್. ರಾಯ್ ಪುರ

19.       ...ಎಂ.ಎಸ್. ಭುವನೇಶ್ವರ

20.       ...ಎಂ.ಎಸ್. ಪಟ್ನಾ

21.       ಡಿ.ಆರ್.ಡಿ.. ಪಟ್ನಾ

22.       ...ಎಂ.ಎಸ್. ಕಲ್ಯಾಣಿ

23.       ಡಿ.ಆರ್.ಡಿ. ವಾರಾಣಾಸಿ

24.       ಡಿ.ಆರ್.ಡಿ.. ಲಕ್ನೋ

25.       ಜಿಲ್ಲಾ ಆಸ್ಪತ್ರೆ ಫಿಲಿಭಿಟ್

ಪಶ್ಚಿಮ

26.       ...ಎಂ.ಎಸ್. ಜೋಧಪುರ

27.       ಡಿ.ಆರ್.ಡಿ.. ಡೆಹ್ರಾಡೂನ್

28.       ಡಿ.ಆರ್.ಡಿ.. ಅಹ್ಮದಾಬಾದ್

29.       ಸರಕಾರಿ ಉಪಗ್ರಹ ಆಸ್ಪತ್ರೆ ಜೈಪುರ.

ಕೇಂದ್ರೀಯ

30.       ...ಎಂ.ಎಸ್. ಭೋಪಾಲ್

ದಕ್ಷಿಣ 

31.       ...ಎಂ.ಎಸ್. ಮಂಗಳಗಿರಿ

32.       ...ಎಂ.ಎಸ್. ಬೀಬಿನಗರ್

33.       ಜೆ..ಪಿ.ಎಂ..ಆರ್. ಪುದುಚೇರಿ.

ಕೇಂದ್ರ ಸರಕಾರಿ ಮತ್ತು ಸಾರ್ವಜನಿಕ ರಂಗದ ಉದ್ದಿಮೆಗಳು

34.       ಸಿ.ಜಿ.ಎಚ್.ಎಸ್.

35.       ಸಿ.ಆರ್.ಪಿ.ಎಫ್.

36.       ಎಸ್...ಎಲ್.

37.       ರೈಲ್ವೇಗಳು

38.       .ಸಿ.ಎಂ.ಆರ್.

***


(Release ID: 1716202) Visitor Counter : 574