ಚುನಾವಣಾ ಆಯೋಗ
ಮತ ಎಣಿಕೆಗೆ ಕೋವಿಡ್ ಶಿಷ್ಟಾಚಾರದಂತೆ ಸಜ್ಜಾಗಿರುವ ಚುನಾವಣೆ ನಡೆದ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು
Posted On:
01 MAY 2021 5:53PM by PIB Bengaluru
ಮುಖ್ಯ ಚುನಾವಣೆ ಆಯುಕ್ತ ಶ್ರೀ ಸುಶೀಲ್ ಚಂದ್ರ ಅವರಿಂದು ವರ್ಚುವಲ್ ಸಭೆಯ ಮೂಲಕ ಐದು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತ ಎಣಿಕೆಗೆ ಮಾಡಿಕೊಂಡಿರುವ ಸಿದ್ಧತೆಗಳ ಕುರಿತಂತೆ ಆಯೋಗದ ಹಿರಿಯ ಅಧಿಕಾರಿಗಳು ಮತ್ತು ಸಿಇಓಗಳೊಂದಿಗೆ ಪರಾಮರ್ಶೆ ನಡೆಸಿದರು. ಶ್ರೀ ಚಂದ್ರ ಆಯೋಗದ ಎಲ್ಲಾ ಸೂಚನೆಗಳನ್ನು ಪಾಲಿಸಬೇಕೆಂದು ನಿರ್ದೇಶನ ನೀಡಿದರು. ಎಲ್ಲಾ ಎಣಿಕೆ ಕೇಂದ್ರಗಳು ಸಂಪೂರ್ಣವಾಗಿ ಕೋವಿಡ್ ಮಾರ್ಗಸೂಚಿಗಳಿಗೆ ಅನುಗುಣವಾಗಿರಬೇಕು ಎಂದು ಅವರು ನಿರ್ದೇಶಿಸಿದರು. ಸಾಂಕ್ರಾಮಿಕ ರೋಗದ ಸವಾಲಿನ ಸಂದರ್ಭದಲ್ಲೂ ಮತದಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸಿಇಒಗಳಿಗೆ ಸಿಇಸಿ ಮೆಚ್ಚುಗೆ ವ್ಯಕ್ತಪಡಿಸಿದರು.
2. ಚುನಾವಣೆ ನಡೆದ ಐದು ರಾಜ್ಯಗಳು/ಕೇಂ.ಪ್ರ. ಅಂದರೆ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳಲ್ಲಿ ಮತ್ತು ಉಪ ಚುನಾವಣೆ ನಡೆದ ಲೋಕಸಭಾ ಕ್ಷೇತ್ರಗಳು/ವಿಧಾನಸಭಾ ಕ್ಷೇತ್ರಗಳ ಮತಎಣಿಕೆಯೂ 2.5.2021ರಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ. ಚುನಾವಣಾ ಆಯೋಗ ಐದು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 822 ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು ಉಪ ಚುನಾವಣೆ ನಡೆದ 13 ರಾಜ್ಯಗಳ 4 ಲೋಕಸಭಾ ಕ್ಷೇತ್ರ ಮತ್ತು 13 ವಿಧಾನಸಭಾ ಕ್ಷೇತ್ರಗಳ ಸುಗಮ ಮತ್ತು ಸುರಕ್ಷಿತ ಮತಎಣಿಕೆಗಾಗಿ ವ್ಯಾಪಕ ಸಿದ್ಧತೆ ಮಾಡಿಕೊಂಡಿದೆ.
3. ಈ ಮುನ್ನ 28/4/2021ರಂದು ಆಯೋಗ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿವರವಾದ ಸೂಚನೆಯನ್ನು ನೀಡಿದೆ, ಎಣಿಕೆಗೆ ಸಂಬಂಧಿಸಿದ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳು / ಸೂಚನೆಗಳ ಜೊತೆಗೆ, ಇದರಲ್ಲಿ ಇತರ ಕೆಲವು ಸೇರಿವೆ:
i. ಮತ ಎಣಿಕೆ ಕೇಂದ್ರಗಳಲ್ಲಿ ಕೋವಿಡ್ ಸಂಬಂಧಿತ ನಿಯಮಗಳನ್ನು ಪಾಲಿಸುತ್ತಿರುವುದನ್ನು ಖಾತ್ರಿಪಡಿಸಲು ನೋಡಲ್ ಆರೋಗ್ಯ ಅಧಿಕಾರಿಯ ನೆರವಿನ ಜೊತೆಗೆ ಡಿಇಓ ಪ್ರತಿ ಮತಎಣಿಕೆ ಕೇಂದ್ರದ ನೋಡಲ್ ಅಧಿಕಾರಿಯಾಗಿರುತ್ತಾರೆ.
ii. ಎಣಿಕೆ ಕೇಂದ್ರಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂಬ ಬಗ್ಗೆ ಸಂಬಂಧಪಟ್ಟ ಆರೋಗ್ಯ ಪ್ರಾಧಿಕಾರಗಳಿಂದ ಅನುಸರಣೆ ಪ್ರಮಾಣಪತ್ರವನ್ನು ಪಡೆಯಲಾಗುವುದು.
iii. ಆರ್.ಟಿ.-ಪಿ.ಸಿ.ಆರ್/ಆರ್.ಎ.ಟಿ. ಪರೀಕ್ಷೆ ಅಥವಾ ಎರಡು ಡೋಸ್ ಕೋವಿಡ್ -19 ವಿರುದ್ಧದ ಲಸಿಕೆ ಪಡೆಯದ ಯಾವುದೇ ಅಭ್ಯರ್ಥಿ/ಅವರ ಏಜೆಂಟ್ ಗೆ ಮತಎಣಿಕೆ ಕೇಂದ್ರದ ಒಳಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಮತ್ತು ಅವರು ಮತ ಎಣಿಕೆಯ 48 ಗಂಟೆಗಳ ಮೊದಲು ಆರ್.ಟಿ.-ಪಿ.ಸಿ.ಆರ್/ಆರ್.ಎ.ಟಿ. ಪರೀಕ್ಷೆ ಅಥವಾ ಎರಡು ಡೋಸ್ ಕೋವಿಡ್ -19 ವಿರುದ್ಧದ ಲಸಿಕೆ ಪಡೆದ ಪ್ರಮಾಣಪತ್ರ ಸಲ್ಲಿಸಬೇಕು.ಡಿಇಓ ಅವರು ಅಭ್ಯರ್ಥಿಗಳು/ಮತ ಎಣಿಕೆ ಏಜೆಂಟರಿಗೆ ಮತ ಎಣಿಕೆಗೆ ಒಂದು ದಿನ ಮೊದಲು ಆರ್.ಟಿ.-ಪಿ.ಸಿ.ಆರ್/ಆರ್.ಎ.ಟಿ. ಪರೀಕ್ಷೆಗೆ ವ್ಯವಸ್ಥೆ ಮಾಡಬೇಕು.ಸಂಬಂಧಿತ ಆರ್.ಓ.ಗಳಿಗೆ ಅಭ್ಯರ್ಥಿಗಳು ಮತಎಣಿಕೆ ಏಜೆಂಟರುಗಳ ಪಟ್ಟಿಯನ್ನು ಮತ ಎಣಿಕೆಗೆ ನಿಗದಿಯಾಗಿರುವ ದಿನಾಂಕಕ್ಕೆ ಮೂರು ದಿನಗಳ ಮೊದಲೇ 17.00ಗಂಟೆಯೊಳಗೆ ಸಲ್ಲಿಸಿರಬೇಕು (ಆರ್.ಓ. ಕೈಪಿಡಿ ಪ್ಯಾರಾ 15.12.2)
4. ಆಯೋಗವು ಈಗಾಗಲೇ 27.4.2021ರ ತನ್ನ ಸೂಚನೆಯ ರೀತ್ಯ ವಿಜಯೋತ್ಸವಗಳನ್ನು ನಿಷೇಧಿಸಿದೆ. ವಿಜಯದ ಮೆರವಣಿಗೆಯನ್ನು ನಿಷೇಧಿಸುವುದರಿಂದ ಸಂಬಂಧಪಟ್ಟ ರಾಜ್ಯ / ಕೇಂದ್ರಾಡಳಿತ ಪ್ರದೇಶ ನಿಗದಿಪಡಿಸಿದ ಸಂಖ್ಯೆಯ ಮಿತಿಗಳನ್ನು ಮೀರಿ ಕ್ಷೇತ್ರ(ಗಳು) ಎಲ್ಲಿಯಾದರೂ ವಿಜಯಶಾಲಿ ಅಭ್ಯರ್ಥಿಗಳ ಬೆಂಬಲಿಗರಿಂದ ಮೆರವಣಿಗೆ ಅಥವಾ ಯಾವುದೇ ರೀತಿಯ ಸಮಾವೇಶವೂ ನಿಷೇಧಕ್ಕೆ ಒಳಪಟ್ಟಿರುತ್ತದೆ ಎಂದು ನಿರ್ದೇಶಿಸಲಾಗಿದೆ. ಎಣಿಕೆಯ ಹಿನ್ನೆಲೆಯಲ್ಲಿ ಆಯೋಗವು ಈ ರಾಜ್ಯಗಳು/ಕೇಂ.ಪ್ರ.ಗಳ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿ, ಇಸಿಐನ ಎಲ್ಲ ನಿರ್ದೇಶನಗಳು ಮತ್ತು ಸಮಾವೇಶ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಎನ್.ಡಿಎಂಎ/ಎಸ್.ಡಿ.ಎಂ.ಎ. ಹಾಲಿ ಸೂಚನೆಗಳು ಪಾಲನೆಯ ಬಗ್ಗೆ ಖಾತ್ರಿ ಪಡಿಸಿಕೊಳ್ಳುವಂತೆ ನಿರ್ದೇಶಿಸಿದೆ.
5. ಮತಎಣಿಕೆ ಏಜೆಂಟ್ ಗಳಿಗೆ ಆರ್.ಟಿ.ಪಿ.ಸಿ,ಆರ್/ಆರ್.ಎ.ಟಿ. ಪರೀಕ್ಷೆಗಳನ್ನು ಖಾತ್ರಿಪಡಿಸಲು ಇಸಿಐ ನಿರ್ದೇಶನಗಳನ್ನು ಅನುಸರಿಸಲಾಗುತ್ತಿದೆ. ಮುಖ್ಯ ಚುನಾವಣಾ ಅಧಿಕಾರಿಗಳಿಂದ ಪಡೆದ ಮಾಹಿತಿಯ ಪ್ರಕಾರ, ಸ್ಪರ್ಧಿಸುವ ಅಭ್ಯರ್ಥಿಗಳು ನಿಗದಿತ ಸಮಯದ ವೇಳೆಗೆ ಐದು ರಾಜ್ಯಗಳು/ ಕೇಂ.ಪ್ರ.ದಲ್ಲಿ ಅಂದಾಜು 1,50,000 ಎಣಿಕೆಯ ಏಜೆಂಟ್ ಗಳ (ಬದಲಿ ಸೇರಿದಂತೆ) ವಿವರಗಳನ್ನು ನೀಡಿದ್ದಾರೆ. ಈ ಪೈಕಿ ಶೇ.90ಕ್ಕೂ ಹೆಚ್ಚು ಜನರಿಗೆ ಆರ್.ಟಿ.ಪಿ.ಸಿ.ಆರ್ /ಆರ್.ಎ.ಟಿ. ಪರೀಕ್ಷೆ ನಡೆಸಲಾಗಿದೆ. ಉಳಿದವರಿಗೆ ಇಂದು ಪರೀಕ್ಷಾ ಸೌಲಭ್ಯವನ್ನು ಡಿಇಓ ಕಲ್ಪಿಸಿದ್ದಾರೆ. ಪರೀಕ್ಷೆಯ ವರದಿಗಳನ್ನು ಯಾವುದೇ ಅಧಿಕೃತ ಪ್ರಯೋಗಾಲಯದಿಂದ ಪಡೆದುಕೊಳ್ಳುವಂತೆ ಆಯೋಗವು ನಿರ್ದೇಶಿಸಿದೆ. ಇದನ್ನು ಲೋಕಸಭೆಗಳು/ವಿಧಾನಸಭೆಗಳ ಉಪ ಚುನಾವಣೆಗೂ ಅನ್ವಯವಾಗುತ್ತದೆ.
6. ಎಣಿಕೆಯ ಪ್ರಕ್ರಿಯೆಯನ್ನು ಸರಿದೂಗಿಸಲು ಆಯೋಗವು ಅಧಿಕಾರ ಹೊಂದಿರುವ ಮಾಧ್ಯಮಗಳಿಗೆ ಆರ್.ಟಿ.ಪಿ.ಸಿ.ಆರ್/ಆರ್.ಎ.ಟಿ. ಪರೀಕ್ಷೆಗಳನ್ನು ಸಹ ಸುಗಮಗೊಳಿಸಲಾಗುತ್ತಿದೆ. ಅಂದಾಜು 12000 ಮಾಧ್ಯಮ ಪ್ರತಿನಿಧಿಗಳಿಗೆ ಎಣಿಕೆ ಕೇಂದ್ರಗಳಿಂದ ಪ್ರಕ್ರಿಯೆಯನ್ನು ವರದಿ ಮಾಡಲು ಅಧಿಕಾರ ಪತ್ರಗಳನ್ನು ನೀಡಲಾಗಿದೆ.
7. 2016ರ ಚುನಾವಣೆಯ ವೇಳೆ 1002 ಮತ ಎಣಿಕೆ ಕೋಣೆಗಳಲ್ಲಿ ನಡೆದಿದ್ದಕ್ಕೆ ಹೋಲಿಸಿದರೆ 2364 ಮತಎಣಿಕೆ ಕೋಣೆಗಳಲ್ಲಿ ಮತ ಎಣಿಕೆ ನಡೆಯಲಿದೆ, ಇದು ಮತಎಣಿಕೆ ಕೋಣೆಯಲ್ಲಿ ಶೇ.200ರಷ್ಟು ಹೆಚ್ಚಳವಾಗಿದೆ. ಕೋವಿಡ್ ಸುರಕ್ಷತಾ ಕ್ರಮಗಳು/ಮಾರ್ಗಸೂಚಿಗಳು ಮತ್ತು ಸಂಬಂಧಿತ ಕ್ರಮಗಳ ಕುರಿತು ಆಯೋಗದ ನಿರ್ದೇಶನಗಳನ್ನು ಇದು ಗಮನದಲ್ಲಿಟ್ಟುಕೊಂಡಿದ್ದು (1) ಮತಕೇಂದ್ರಗಳಲ್ಲಿ ಗಣನೀಯ ಹೆಚ್ಚಳಕ್ಕೆ (2) ಅಂಚೆ ಮತಪತ್ರದಲ್ಲಿ ಜಿಗಿತಕ್ಕೆ ಕಾರಣವಾಗಿದೆ.
8. 5 ರಾಜ್ಯ/ಕೇಂ.ಪ್ರ.ಗಳಲ್ಲಿ ಹಿರಿಯ ನಾಗರಿಕರು (80 ವರ್ಷಕ್ಕಿಂತ ಮೇಲ್ಪಟ್ಟವರು), ಪಿಡಬ್ಲ್ಯುಡಿ, ಕೋವಿಡ್ ಪೀಡಿತ ಮತ್ತು ಅಗತ್ಯ ಸೇವೆಗಳ ಉದ್ಯೋಗಿಗಳ ವಿಭಾಗಗಳಲ್ಲಿ ಮತದಾರರಿಗೆ ಅಂಚೆ ಮತಪತ್ರ ಸೌಲಭ್ಯಗಳನ್ನು ವಿಸ್ತರಿಸುವ ಆಯೋಗದ ಕ್ರಮಗಳು ಅಂಚೆ ಮತಪತ್ರಗಳಲ್ಲಿ ಶೇ.400 ಹೆಚ್ಚಳಕ್ಕೆ ಸಾಕ್ಷಿಯಾಗಿದೆ (2016 ರಲ್ಲಿ 2.97 ಲಕ್ಷ ಇದ್ದದ್ದು 2021ರಲ್ಲಿ 13.16 ಲಕ್ಷಕ್ಕೆ ಏರಿದೆ).
9. ಆಯೋಗವು 822 ಆರ್.ಓ.ಗಳು ಮತ್ತು 7000 ಎ.ಆರ್.ಓ.ಗಳನ್ನು ಈ ಐದು ರಾಜ್ಯಗಳು/ಕೇಂ.ಪ್ರ.ಗಳಲ್ಲಿ ಮತ ಎಣಿಕೆಗೆ ನಿಯುಕ್ತಿಗೊಳಿಸಿದೆ. ಸೂಕ್ಷ್ಮ ವೀಕ್ಷಕರು ಸೇರಿದಂತೆ ಅಂದಾಜು 95000 ಮತಎಣಿಕೆ ಅಧಿಕಾರಿಗಳು ಎಣಿಕೆಯ ಕಾರ್ಯ ನಿರ್ವಹಿಸಲಿದ್ದಾರೆ.
10.ಆಯೋಗವು ಅಂದಾಜು 1100 ಮತಎಣಿಕೆ ವೀಕ್ಷಕರನ್ನು ಮತಎಣಿಕೆ ಪ್ರಕ್ರಿಯೆ ವೀಕ್ಷಣೆಗೆ ನಿಯೋಜಿಸಿದೆ. ಸಾಂಕ್ರಾಮಿಕ ಸಂಬಂಧಿ ಕಾರಣದಿಂದ ಯಾವುದೇ ಬದಲಾವಣೆಗಾಗಿ ಹೆಚ್ಚುವರಿ ಮೀಸಲು ಮತಎಣಿಕೆ ವೀಕ್ಷಕರನ್ನು ಕೂಡ ನಿಯುಕ್ತಿಗೊಳಿಸಲಾಗಿದೆ.
***
(Release ID: 1715488)
Visitor Counter : 174