ಕೃಷಿ ಸಚಿವಾಲಯ

ಕೃಷಿ ಮೂಲಸೌಕರ್ಯ ನಿಧಿಯು ಕೃಷಿ ಪರಿಸರ ವ್ಯವಸ್ಥೆಯಲ್ಲಿನ ಎಲ್ಲಾ ಪಾಲುದಾರರ ಸಾಮೂಹಿಕ ಶಕ್ತಿಯನ್ನು ಒಟ್ಟುಗೂಡಿಸುತ್ತಿದೆ


ಕೃಷಿ ಮೂಲಸೌಕರ್ಯ ನಿಧಿಯಿಂದ 8,000 ಕೋಟಿ ರೂ.ಗಿಂತಲೂ ಅಧಿಕ ಸಾಲಕ್ಕಾಗಿ ಅರ್ಜಿಗಳನ್ನು ಸ್ವೀಕರಿಸಲಾಗಿದೆ,  ಸಾಲ ನೀಡಿಕೆ 4000 ಕೋಟಿ ರೂ. ದಾಟಿದೆ

8,000 ಕೋಟಿ ರೂ. ಗಿಂತಲೂ ಅಧಿಕ ಮೌಲ್ಯದ ಸಾಲಕ್ಕಾಗಿ ಅರ್ಜಿಗಳೊಂದಿಗೆ , ಕೃಷಿ ಮೂಲಸೌಕರ್ಯದಲ್ಲಿ ಹೊಸ ಪರಿವರ್ತನೆಗೆ ʻಎಐಎಫ್ʼ ಸಜ್ಜಾಗಿದೆ

ನವೀನ ಮೂಲಸೌಕರ್ಯ ಮತ್ತು ರೈತರ ಪಾಲುದಾರಿಕೆ ಮಾದರಿಗಳು  8,000 ಕೋಟಿ ರೂ. ಗಿಂತಲೂ ಅಧಿಕ ಕೃಷಿ ಮೂಲಸೌಕರ್ಯ ನಿಧಿಯಲ್ಲಿ ಬಲಿಷ್ಠವಾಗಿ ಹೊರಹೊಮ್ಮಿವೆ

Posted On: 28 APR 2021 9:36AM by PIB Bengaluru

ಕೃಷಿ ಮೂಲಸೌಕರ್ಯ ನಿಧಿಯು 8,216 ಕೋಟಿ ರೂ. ಮೌಲ್ಯದ ಸಾಲಕ್ಕಾಗಿ 8,665 ಅರ್ಜಿಗಳನ್ನು ಸ್ವೀಕರಿಸಿದ ಬಳಿಕ 8000 ಕೋಟಿ ರೂ. ಮೈಲುಗಲ್ಲನ್ನು ದಾಟಿದೆ. ಇದರಲ್ಲಿ ದೊಡ್ಡ ಪಾಲನ್ನು ಪ್ರಾಥಮಿಕ ಕೃಷಿ ಸಾಲ ಸಂಘಗಳು (ಪಿಎಸಿಎಸ್) (58%), ಕೃಷಿ-ಉದ್ಯಮಿಗಳು (24%) ಮತ್ತು ವೈಯಕ್ತಿಕ ರೈತರು (13%) ಹೊಂದಿದ್ದಾರೆ. ದೇಶಾದ್ಯಂತದ ರೈತರ  ಮೌಲ್ಯವನ್ನು ಹೆಚ್ಚಿಸುವ ವ್ಯಾಪಕ ಶ್ರೇಣಿಯ ಯೋಜನೆಗಳಿಗೆ ನಿಧಿಯಿಂದ ಪಡೆದ ಸಾಲವನ್ನು ಹೂಡಿಕೆ ಮಾಡಲಾಗುತ್ತದೆ. ಅರ್ಜಿಗಳ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳೆಂದರೆ ಆಂಧ್ರಪ್ರದೇಶ (2,125 ಅರ್ಜಿಗಳು), ಮಧ್ಯಪ್ರದೇಶ (1,830), ಉತ್ತರ ಪ್ರದೇಶ (1,255), ಕರ್ನಾಟಕ (1,071) ಮತ್ತು ರಾಜಸ್ಥಾನ (613). ರಾಜ್ಯಗಳ ಪೈಕಿ ಹೆಚ್ಚಿನವು ನಿಟ್ಟಿನಲ್ಲಿ ಮುನ್ನಡೆಯಲು ತಮ್ಮ ಬಲಿಷ್ಠ ಸಹಕಾರಿ ಜಾಲವನ್ನು ಬಳಸಿಕೊಳ್ಳುತ್ತಿವೆ. ಮಧ್ಯಪ್ರದೇಶ ವಿಚಾರದಲ್ಲಿ ವಿಭಿನ್ನವೆನಿಸಿದ್ದು, ರಾಜ್ಯದಿಂದ ʻಪಿಎಸಿಎಸ್ʼ ಹೊರತಾದ ಹೆಚ್ಚಿನ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕೃಷಿ ಮೂಲಸೌಕರ್ಯ ನಿಧಿಯು ಕೃಷಿ ಪರಿಸರ ವ್ಯವಸ್ಥೆಯಲ್ಲಿನ ಎಲ್ಲಾ ಪಾಲುದಾರರ ಸಾಮೂಹಿಕ ಶಕ್ತಿಯನ್ನು ಒಟ್ಟುಗೂಡಿಸುತ್ತದೆ.

ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ (ಡಿಎಸಿ & ಎಫ್ಡಬ್ಲ್ಯು) ಆನ್‌-ಗ್ರೌಂಡ್ಹೂಡಿಕೆಗಳ  ವೇಗ ಹೆಚ್ಚಿಸಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಇಲಾಖೆಯು ನೇರವಾಗಿ 150ಕ್ಕೂ ಹೆಚ್ಚು ʻಎಫ್ಪಿಒʼಗಳು ಮತ್ತು ಜೀವನೋಪಾಯ ಸಂಸ್ಥೆಗಳ ಜೊತೆಗೆ ʻಇಫ್ಕೊʼ( IFFCO) ʻಹ್ಯಾಫೆಡ್ʼ(HAFED), ʻನಾಫೆಡ್ʼ(NAFED) ಮತ್ತು ಇತರ ಸಂಸ್ಥೆಗಳ ಜತೆ ವ್ಯವಹರಿಸುತ್ತಿದೆ. ಇಲಾಖೆಯು ಕೃಷಿ ವ್ಯವಹಾರ ಸಮಾವೇಶವನ್ನು ಆಯೋಜಿಸಿತ್ತು. ಸಿಐಐ ಮತ್ತು ಎಫ್ಐಸಿಸಿಐ ಇದಕ್ಕೆ ಬೆಂಬಲಿಸಿದ್ದವು. 90ಕ್ಕೂ ಹೆಚ್ಚು ಕೃಷಿ ಸಂಬಂಧಿತ ವ್ಯವಹಾರ ಸಂಸ್ಥೆಗಳು ಇದರಲ್ಲಿ ಭಾಗವಹಿಸಿದ್ದವು; ಆರ್ಯ ಸಿಎಂಎ, ಮಹೀಂದ್ರಾ ಅಗ್ರಿ, ಟಾಟಾ ಕನ್ಸ್ಯೂಮರ್, ಇಫ್ಕೊ ಮತ್ತು ಎಸ್ಕಾರ್ಟ್ಸ್‌  ಕ್ರಾಪಿಂಗ್ ಸೊಲ್ಯೂಷನ್ಸ್ ಮುಂತಾದ ಕೃಷಿ ಸಂಬಂಧಿತ ವ್ಯಾಪಾರ ಸಂಸ್ಥೆಗಳು ರೈತರು, ರೈತ ಗುಂಪುಗಳು ಮತ್ತು ಸ್ಥಳೀಯ ಉದ್ಯಮಿಗಳ ಸಹಭಾಗಿತ್ವದ ಮೂಲಕ ʻಎಐಎಫ್ʼ ಅಡಿಯಲ್ಲಿ ಮೂಲಸೌಕರ್ಯಗಳನ್ನು ನಿರ್ಮಿಸುವಲ್ಲಿ ತಮ್ಮ ಪಾತ್ರದ ಬಗ್ಗೆ ಪ್ರಸ್ತುತಿಗಳನ್ನು ನೀಡಿದವು.

ಪ್ರಗತಿಯ  ಮೇಲ್ವಿಚಾರಣೆಗಾಗಿ ಮತ್ತು ಸಹ-ಕಲಿಕೆಗಳನ್ನು ಉತ್ತೇಜಿಸಲು ಇಲಾಖೆ ನಿಯಮಿತವಾಗಿ ರಾಜ್ಯಗಳ ಮೇಲ್ವಿಚಾರಣೆ ಕೈಗೊಳ್ಳುತ್ತಿದೆ. ಇದರ ಜೊತೆಗೆ, ರಾಜ್ಯ ಇಲಾಖೆಗಳ 190ಕ್ಕೂ ಹೆಚ್ಚು ಭಾಗಿದಾರರೊಂದಿಗೆ ರಾಜ್ಯ ಸಮಾವೇಶವನ್ನು ನಡೆಸಲಾಗಿದ್ದು, ಇದರಲ್ಲಿ ಆಂಧ್ರಪ್ರದೇಶ ತನ್ನ ʻಪಿಎಸಿಎಸ್ʼ ನೇತೃತ್ವದ ಮಾದರಿಯನ್ನು ಪ್ರದರ್ಶಿಸಿತು. ಮಧ್ಯಪ್ರದೇಶ ತನ್ನ ಸ್ಥಳೀಯ ಉದ್ಯಮಶೀಲತೆ ನೇತೃತ್ವದ ಮಾದರಿಯನ್ನು ಪ್ರದರ್ಶಿಸಿತು. ಸಮಾವೇಶದಿಂದ ರಾಜ್ಯಗಳು ಹೆಚ್ಚಿನ ಸಂಖ್ಯೆಯ ರೈತರು ಮತ್ತು ಸ್ಥಳೀಯ ಉದ್ಯಮಿಗಳೊಂದಿಗೆ ತೊಡಗಿಸಿಕೊಂಡಿವೆ.

ಉಪಕ್ರಮಗಳು ಒಟ್ಟಾರೆ ಅರ್ಜಿಗಳ ಹೆಚ್ಚಳಕ್ಕೆ ಕಾರಣವಾಗಿವೆ. ಜೊತೆಗೆ ವೈಯಕ್ತೀಕರಿಸಿದ ನೇಮಕಾತಿ ಕೇಂದ್ರಗಳು ಮತ್ತು ಕೃಷಿ ಯಂತ್ರೋಪಕರಣಗಳ ಬ್ಯಾಂಕುಗಳು (25 ಕೋಟಿ ರೂ. 130 ಅರ್ಜಿಗಳು), ಸ್ಮಾರ್ಟ್ ಮತ್ತು ನಿಖರ ಕೃಷಿಗೆ ಮೂಲಸೌಕರ್ಯದಂತಹ ನವೀನ ಮೂಲಸೌಕರ್ಯ (1,300 ಕೋಟಿ ರೂ. ಮೌಲ್ಯದ 200 ಅರ್ಜಿಗಳು) ಪ್ರಕಾರಗಳಲ್ಲಿ ಆಸಕ್ತಿ ಹೆಚ್ಚಳಕ್ಕೂ ಕಾರಣವಾಗಿವೆರೈತರು ಮತ್ತು ಕೃಷಿ ವ್ಯವಹಾರಗಳನ್ನು ಹೊಸ ಪಾಲುದಾರಿಕೆ ಮಾದರಿಗಳೊಂದಿಗೆ ಎಐಎಫ್ ಜೊತೆಗೂಡಿಸಿದೆ. `ಹಬ್ ಮತ್ತು ಸ್ಪೋಕ್' ಮಾದರಿಯಲ್ಲಿ ರೈತರ ಹೊಲಗಳ ಬಳಿ ವಿತರಣಾ ಮೂಲಸೌಕರ್ಯವನ್ನು ರೂಪಿಸುವಂತಹ ಪಾಲುದಾರಿಕೆ ಮಾದರಿಗಳು ಇದರಿಂದ ಹೊರಹೊಮ್ಮುತ್ತಿವೆ. ಕೃಷಿ ವ್ಯವಹಾರ ಸಂಸ್ಥೆಗಳು ʻಎಐಎಫ್ʼ ಮತ್ತು ಹೊಸ ಕೃಷಿ-ತಂತ್ರಜ್ಞಾನದ ಬಗ್ಗೆ ʻಎಫ್ಪಿಒʼಗಳಲ್ಲಿ ಜಾಗೃತಿ ಮೂಡಿಸುತ್ತಿದ್ದು, ಅವುಗಳ ಅನ್ವಯ ಮತ್ತು ಅಳವಡಿಕೆಗೆ ಬೆಂಬಲ ನೀಡುತ್ತಿವೆ. ಯೋಜನೆಗಾಗಿ Https://agriinfra.dac.gov.in URL ನೊಂದಿಗೆ ಒಂದು ಪೋರ್ಟಲ್ ಅನ್ನು ರೂಪಿಸಲಾಗಿದ್ದು, ಅಲ್ಲಿ ಅರ್ಜಿದಾರರು ಅರ್ಜಿಗಳನ್ನು ಸಲ್ಲಿಸಬಹುದು ಮತ್ತು ಎಲ್ಲಾ ಮಧ್ಯಸ್ಥಗಾರರು ಸಹ ಅರ್ಜಿಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಬಹುದು.

ಕೃಷಿ ವ್ಯವಹಾರಗಳು ಮತ್ತು ರೈತರನ್ನು ಒಟ್ಟುಗೂಡಿಸಲು, ರಾಜ್ಯಗಳಾದ್ಯಂತ ಸಹ-ಕಲಿಕೆಗಳನ್ನು ಉತ್ತೇಜಿಸಲು ಮತ್ತು ವಿಶ್ವ ದರ್ಜೆಯ ಕೃಷಿ-ಮೂಲಸೌಕರ್ಯ ನಿರ್ಮಾಣದ ನಿಟ್ಟಿನಲ್ಲಿ ಜಾಗತಿಕ ಮಾನದಂಡಗಳನ್ನು ಅನುಸರಿಸಲು ಸೂಕ್ತ ಉಪಕ್ರಮಗಳನ್ನು ಕೈಗೊಳ್ಳುವ ಮೂಲಕ ʻಕೃಷಿ ಮೂಲಸೌಕರ್ಯ ನಿಧಿʼ ವೇಗ ಪಡೆಯುತ್ತಿದೆ. ದೇಶದ ಕೃಷಿ ಮೂಲಸೌಕರ್ಯದ ಚಿತ್ರಣವನ್ನೇ ಕ್ರಾಂತಿಕಾರಿ ಸ್ವರೂಪದಲ್ಲಿ ಪರಿವರ್ತಿಸುವ ಸಾಮರ್ಥ್ಯವನ್ನು ಎಐಎಫ್ ಹೊಂದಿದೆ.

ಕೃಷಿ ಮೂಲಸೌಕರ್ಯ ನಿಧಿಯ ಬಗ್ಗೆ

ಕೃಷಿ ಮೂಲಸೌಕರ್ಯ ನಿಧಿಯು ಮಧ್ಯಮ ಮತ್ತು ದೀರ್ಘಾವಧಿಯ ಸಾಲ ಸೌಲಭ್ಯವಾಗಿದ್ದು, ಸುಗ್ಗಿಯ ನಂತರದ ನಿರ್ವಹಣಾ ಮೂಲಸೌಕರ್ಯ ಮತ್ತು ಸಮುದಾಯ ಕೃಷಿ ಸ್ವತ್ತುಗಳಿಗೆ ಸಂಬಂಧಿಸಿದ ಕಾರ್ಯಸಾಧ್ಯವಾದ ಯೋಜನೆಗಳಲ್ಲಿ ಹೂಡಿಕೆ ಮಾಡಲು ಸಾಲವನ್ನು ನೀಡಲಾಗುತ್ತದೆ. ಇದು ಬಡ್ಡಿ ರಿಯಾಯಿತಿ  ಮತ್ತು ಸಾಲ ಖಾತರಿಯನ್ನುಒಳಗೊಂಡಿದೆ. ಯೋಜನೆಯ ಅವಧಿ ಹಣಕಾಸು ವರ್ಷ 2020 ರಿಂದ ಹಣಕಾಸು ವರ್ಷ 2029 (10 ವರ್ಷಗಳು). ಯೋಜನೆಯಡಿ ರೂ. 1 ಲಕ್ಷ ಕೋಟಿ ರೂ.ಗಳನ್ನು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ವಾರ್ಷಿಕ 3% ಬಡ್ಡಿ ರಿಯಾಯಿತಿಯೊಂದಿಗೆ ಒದಗಿಸುತ್ತವೆ. ʻಸಿಜಿಟಿಎಂಎಸ್ʼ ಅಡಿಯಲ್ಲಿ ರೂ. 2 ಕೋಟಿ ರೂ.ವರೆಗಿನ ಸಾಲದ ವರೆಗೆ ಸಾಲ ಖಾತರಿಯನ್ನು ಇದು ಹೊಂದಿದೆಅರ್ಹ ಫಲಾನುಭವಿಗಳಲ್ಲಿ ರೈತರು, ಎಫ್ಪಿಒಗಳು, ಪಿಎಸಿಎಸ್, ಮಾರಾಟ ಸಹಕಾರಿ ಸಂಘಗಳು, ಸ್ವಸಹಾಯ ಸಂಘಗಳು, ಜಂಟಿ ಹೊಣೆಗಾರಿಕೆ ಗುಂಪುಗಳು (ಜೆಎಲ್ಜಿ), ವಿವಿಧೋದ್ದೇಶ ಸಹಕಾರಿ ಸಂಘಗಳು, ಕೃಷಿ ಉದ್ಯಮಿಗಳು, ನವೋದ್ಯಮಗಳು ಮತ್ತು ಕೇಂದ್ರ / ರಾಜ್ಯ ಸರಕಾರಿ ಸಂಸ್ಥೆಗಳು ಅಥವಾ ಸ್ಥಳೀಯ ಆಡಳಿತ ಸಂಸ್ಥೆ ಪ್ರಾಯೋಜಿತ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಯೋಜನೆಗಳು ಸೇರಿವೆ.

***



(Release ID: 1714742) Visitor Counter : 269