ರೈಲ್ವೇ ಸಚಿವಾಲಯ

ಕಳೆದ 24 ತಾಸುಗಳಲ್ಲಿ ಸುಮಾರು 150 ಟನ್ ಆಮ್ಲಜನಕ ವಿತರಿಸಿದ ಆಕ್ಸಿಜನ್ ಎಕ್ಸ್‌ಪ್ರೆಸ್  ರೈಲುಗಳು


ಮಹಾರಾಷ್ಟ್ರ ಮತ್ತು ಉತ್ತರಪ್ರದೇಶಕ್ಕೆ ವಿತರಿಸಲು ದ್ರವೀಕೃತ ವೈದ್ಯಕೀಯ ಆಮ್ಲಜನಕದೊಂದಿಗೆ ನಾಸಿಕ್ ಮತ್ತು ಲಕ್ನೋಗೆ ಆಕ್ಸಿಜನ್ ಎಕ್ಸ್‌ಪ್ರೆಸ್  ರೈಲು ಆಗಮನ

ಮಾರ್ಗಮಧ್ಯೆ ನಾಗಪುರ ಮತ್ತು ವಾರಾಣಸಿಯಲ್ಲಿ ವೈದ್ಯಕೀಯ ಆಮ್ಲಜನಕ ಇರುವ ಕಂಟೈನರ್|ಗಳ ವಿತರಣೆ

ಆಕ್ಸಿಜನ್ ಪೂರೈಸಲು ಮತ್ತಷ್ಟು ರೈಲುಗಳು ಶೀಘ್ರ

ಆಕ್ಸಿಜನ್ ಎಕ್ಸ್‌ಪ್ರೆಸ್  ರೈಲುಗಳ ವೇಗದ ಪ್ರಯಾಣಕ್ಕೆ ನೆರವಾಗುತ್ತಿರುವ ಹಸಿರು ಕಾರಿಡಾರ್

Posted On: 24 APR 2021 6:49PM by PIB Bengaluru

ಕೋವಿಡ್-19 ಸೋಂಕಿನ ವಿರುದ್ಧ ದೇಶ ನಡೆಸುತ್ತಿರುವ ಸಮರೋಪಾದಿ ಹೋರಾಟಕ್ಕೆ ಭಾರತೀಯ ರೈಲ್ವೆ ಕೈಜೋಡಿಸಿದ್ದು, ದೇಶದ ವಿವಿಧ ಸ್ಥಳಗಳಿಗೆ ವೈದ್ಯಕೀಯ ಆಮ್ಲಜನಕವನ್ನು ತ್ವರಿತವಾಗಿ ಪೂರೈಸಲು ಅದು, ಆಕ್ಸಿಜನ್ ಎಕ್ಸ್‌ಪ್ರೆಸ್  ರೈಲುಗಳ ಸಂಚಾರ ಆರಂಭಿಸಿದೆ.

ದ್ರವೀಕೃತ ವೈದ್ಯಕೀಯ ಆಮ್ಲಜನಕ(ಎಲ್|ಎಂಒ) ಟ್ಯಾಂಕರ್|ಗಳನ್ನು ಹೊತ್ತ ಆಕ್ಸಿಜನ್ ಎಕ್ಸ್‌ಪ್ರೆಸ್  ರೈಲು ಮಹಾರಾಷ್ಟ್ರದ ನಾಸಿಕ್ ಮತ್ತು ಉತ್ತರಪ್ರದೇಶದ ಲಕ್ನೋಗೆ ಆಗಮಿಸಿದೆ.

ಮಾರ್ಗಮಧ್ಯೆ ರೈಲು ನಾಗಪುರ ಮತ್ತು ವಾರಾಣಸಿಯಲ್ಲಿ ದ್ರವೀಕೃತ ವೈದ್ಯಕೀಯ ಆಮ್ಲಜನಕ ಕಂಟೈನರ್|ಗಳನ್ನು ಇಳಿಸಿದೆ. ಅಲ್ಲದೆ, ಮೂರನೇ ಆಕ್ಸಿಜನ್ ಎಕ್ಸ್‌ಪ್ರೆಸ್  ರೈಲು ಲಕ್ನೋದಿಂದ ಪ್ರಯಾಣ ಆರಂಭಿಸಿದೆ.

ಆಂಧ್ರ ಪ್ರದೇಶ, ದೆಹಲಿ ಸೇರಿದಂತೆ ಹಲವು ರಾಜ್ಯಗಳು ವೈದ್ಯಕೀಯ ಆಮ್ಲಜನಕ ತರಿಸಿಕೊಳ್ಳಲು ಹೆಚ್ಚಿನ ಆಕ್ಸಿಜನ್ ರೈಲುಗಳ ಸಂಚಾರ ಆರಂಭಿಸುವಂತೆ ರೈಲ್ವೆ ಇಲಾಖೆ ಜತೆ ಸಮಾಲೋಚನೆ ನಡೆಸುತ್ತಿವೆ.

ದ್ರವೀಕೃತ ವೈದ್ಯಕೀಯ ಆಮ್ಲಜನಕ ತುಂಬಿದ ಟ್ಯಾಂಕರ್|ಗಳನ್ನು ಪ್ರಸ್ತುತ ವಿಶಾಖಪಟ್ಟಣ ಮತ್ತು ಬೊಕಾರೊದಿಂದ ಭಾರತೀಯ ರೈಲ್ವೆಯ ರೊ-ರೊ ಸೇವೆ ಮೂಲಕ ಸಾಗಿಸಲಾಗುತ್ತಿದೆ.

ಉತ್ತರಪ್ರದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಅಗತ್ಯಗಳನ್ನು ಪೂರೈಸುವ ಸಲುವಾಗಿ ರೈಲು ಸಂಚಾರ ಆರಂಭಿಸಲು ಲಕ್ನೋ ಮತ್ತು ವಾರಾಣಸಿ ನಡುವೆ ಹಸಿರು ಕಾರಿಡಡಾರ್ ಸೃಜಿಸಲಾಗಿದೆ. ಕಾರಿಡಾರ್| 270 ಕಿ.ಮೀ. ದೂರವನ್ನು 4 ತಾಸು 20 ನಿಮಿಷದಲ್ಲಿ ರೈಲು ಕ್ರಮಿಸಲಿದೆ. ರೈಲು ಪ್ರತಿ ತಾಸಿಗೆ ಸರಾಸರಿ 62.35 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ.

ಇದುವರೆಗೆ ಒಟ್ಟು 10 ಕಂಟೈನರ್|ಗಳಲ್ಲಿ ಸುಮಮಾರು 150 ಟನ್ ವೈದ್ಯಕೀಯ ಆಮ್ಲಜನಕವನ್ನು ಸಾಗಿಸಲಾಗಿದೆ.

ದೂರದ ಸ್ಥಳಗಳಿಗೆ ರಸ್ತೆ ಸಾರಿಗೆಗಿಂತ ರೈಲುಗಳಲ್ಲಿ ವೇಗವಾಗಿ ಮತ್ತು ಅಲ್ಪ ಸಮಯದಲ್ಲಿ ಆಮ್ಲಜನಿಕ ಸಾಗಣೆ ಮಾಡಲು ಸಾಧ್ಯ. ಉದ್ದೇಶದಿಂದ ಆಕ್ಸಿಜನ್ ಎಕ್ಸ್‌ಪ್ರೆಸ್ |ಗಳ  ಮೂಲಕ ಆಮ್ಲಜನಕ ಸಾಗಿಸಲಾಗುತ್ತಿದೆ. ಎಲ್ಲಕ್ಕಿಂತ ವಿಶೇಷವಾಗಿ, ದಿನದ 24 ತಾಸು ಕಾಲ ರೈಲುಗಳು ಸುಗಮವಾಗಿ ಸಂಚರಿಸುತ್ತವೆ.

ಭಾರತೀಯ ರೈಲ್ವೆ ಕಳೆದ ವರ್ಷ ಕೋವಿಡ್-19 ಸಂಕಷ್ಟ ಸಮಯದಲ್ಲೂ ದೇಶದ ಮೂಲೆ ಮೂಲೆಗೆ ಅಗತ್ಯ ಆಹಾರ ಪದಾರ್ಥಗಳು ಮತ್ತು ಸರಕುಗಳನ್ನು ನಿರಂತರ ಸಾಗಿಸಿ, ಸಂಕಷ್ಟದಲ್ಲಿದ್ದ ಜನರಿಗೆ ನೆರವಾಗಿತ್ತು. ಇದೇ ಸೇವೆಯನ್ನು ಈಗಲೂ ಸಹ  ಅದು ಮುಂದುವರಿಸಿದ್ದು, ತುರ್ತು ಸಮಯದಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದೆ.

***



(Release ID: 1714033) Visitor Counter : 182