ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ವಯಸ್ಕರಲ್ಲಿ ಮಧ್ಯಮ ಪ್ರಮಾಣದ ಕೋವಿಡ್-19 ಸೋಂಕಿನ ಚಿಕಿತ್ಸೆಗಾಗಿ ಝೈಡಸ್‌ ಸಂಸ್ಥೆಯ ಡಿಬಿಟಿ-ಬಿಐಆರ್‌ಎಸಿ ಅನುಮೋದಿತ 'ವಿರಾಫಿನ್' ಔಷಧ ಬಳಸಲು ತುರ್ತು ಸಮ್ಮತಿ  


(ಚಿಕಿತ್ಸೆ ಪಡೆದ ರೋಗಿಗಳಲ್ಲಿ 91.15% ಮಂದಿಗೆ 7ನೇ ದಿನದ ವೇಳೆಗೆ ಆರ್‌ಟಿ-ಪಿಸಿಆರ್ ಫಲಿತಾಂಶ ನೆಗೆಟಿವ್‌ ಬಂದಿದ್ದು,ಈ ಔಷಧವು ರೋಗಿಗಳಲ್ಲಿ ಪೂರಕ ಆಮ್ಲಜನಕದ ಅಗತ್ಯದ ಸಮಯವನ್ನು ಗಮನಾರ್ಹವಾಗಿ ಕಡಿಮೆಮಾಡುತ್ತದೆ)

ಚಿಕಿತ್ಸಾತ್ಮಕಪ್ರಯೋಗಗಳಿಗಾಗಿ ಡಿಬಿಟಿ-ಬಿಐಆರ್‌ಎಸಿ ಕೋವಿಡ್-19 ಸಂಶೋಧನಾಒಕ್ಕೂಟದ ಅನುಮೋದನೆ ಪಡೆದಿದೆ

Posted On: 24 APR 2021 12:10PM by PIB Bengaluru

ಭಾರತದ ಔಷಧ ಮಹಾ ನಿಯಂತ್ರಕರು (ಡಿಸಿಜಿಐ) ಸಾಧಾರಣ ಅಥವಾ ಮಧ್ಯಮ ಪ್ರಮಾಣದ ಕೋವಿಡ್-19ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಝೈಡಸ್ ಕ್ಯಾಡಿಲಾ ಅವರ 'ವಿರಾಫಿನ್'  ಬಳಸಲು ʻಭಾರತೀಯ ಔಷಧಮಹಾ ನಿಯಂತ್ರಕರುʼ (ಡಿಸಿಜಿಐ) ನಿರ್ಬಂಧಿತ ತುರ್ತು ಬಳಕೆಯ ಅನುಮೋದನೆ ನೀಡಿದ್ದಾರೆ. ʻವಿರಾಫಿನ್ʼ ಎಂಬುದು ʻಪೆಗ್ಯೆಲೇಟೆಡ್ ಇಂಟರ್‌ಫೆರಾನ್ಆಲ್ಫಾ-2ಬಿ (PegIFN) ಆಗಿದ್ದು, ಇದನ್ನು ಸೋಂಕಿನಆರಂಭಿಕ ಹಂತಗಳಲ್ಲಿ ರೋಗಿಗೆ ಚರ್ಮದ ಅಡಿಗೆ ಚುಚ್ಚುಮದ್ದಿನ ರೂಪದಲ್ಲಿ ನೀಡಿದಾಗ ಅವರು ವೇಗವಾಗಿಚೇತರಿಸಿಕೊಳ್ಳಲು ನೆರವಾಗುತ್ತದೆ.

ʻವಿರಾಫಿನ್ʼನ ಅಭಿವೃದ್ಧಿಗಾಗಿ, ಎರಡನೇ ಹಂತದಮಾನವ ಚಿಕಿತ್ಸಾತ್ಮಕ ಪ್ರಯೋಗ ಅಧ್ಯಯನಗಳನ್ನು ನಡೆಸಲು ಡಿಬಿಟಿ-ಬಿಐಆರ್‌ಎಸಿ ಕೋವಿಡ್ 19 ಸಂಶೋಧನಾ ಒಕ್ಕೂಟವು ʻಎನ್‌ಬಿಎಂʼ ಮೂಲಕ ನೀಡಿದ ಬೆಂಬಲವನ್ನು ಜೈಡಸ್ ಶ್ಲಾಘಿಸಿದೆ. ಅಧ್ಯಯನಗಳು ʻವಿರಾಫಿನ್ʼನ ಸುರಕ್ಷತೆ,ಸಹನೀಯತೆ ಮತ್ತು ಪರಿಣಾಮಕಾರಿತ್ವವನ್ನು ದೃಢಪಡಿಸಿವೆ. ಅಧ್ಯಯನಗಳ ಪ್ರಕಾರ ರೊಗಿಯ ದೇಹದಲ್ಲಿ ವೈರಸ್ನ ಹೊರೆಯನ್ನು ʻವಿರಾಫಿನ್‌ʼ ಕಡಿಮೆ ಮಾಡುತ್ತದೆ ಮತ್ತು ಉತ್ತಮರೀತಿಯಲ್ಲಿ ರೋಗವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಉದಾಹರಣೆಗೆ ಪೂರಕ ಆಮ್ಲಜನಕದ ಅಗತ್ಯವನ್ನುಕಡಿಮೆ ಮಾಡುವುದು, ಆ ಮೂಲಕಕಡಿಮೆ ಆಮ್ಲಜನಕದಮಟ್ಟದಿಂದಾಗಿ ಉಂಟಾಗುವ ಉಸಿರಾಟದ ಉದ್ವಿಗ್ನತೆಯನ್ನು ಕಡಿಮೆ ಮಾಡುವುದು ಇತ್ಯಾದಿ. 

ಈಸಾಧನೆಯ ಬಗ್ಗೆ ಮಾತನಾಡಿದ ಡಿಬಿಟಿಕಾರ್ಯದರ್ಶಿ ಮತ್ತು ಬಿಐಆರ್‌ಎಸಿ ಅಧ್ಯಕ್ಷ ಡಾ. ರೇಣು ಸ್ವರೂಪ್ ಅವರು, "ಕೋವಿಡ್-19ಸಾಂಕ್ರಾಮಿಕದ ತೀವ್ರತೆಯನ್ನು ತಗ್ಗಿಸುವ ಕಾರ್ಯತಂತ್ರಗಳು ಮತ್ತು ನಿಯಂತ್ರಣ ಕ್ರಮಗಳ ನಿಟ್ಟಿನಲ್ಲಿಕಾರ್ಯಮಗ್ನವಾಗಲು ನಮ್ಮಕೈಗಾರಿಕೆಗಳಿಗೆ ಸಾಧ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸರಕಾರ ಬದ್ಧವಾಗಿದೆ. ʻವಿರಾಫಿನ್‌ʼಗೆ ಒದಗಿಸಲಾದ ತುರ್ತು ಅನುಮೋದನೆಯು ಮತ್ತೊಂದು ಮೈಲಿಗಲ್ಲಾಗಿದ್ದು, ವೈದ್ಯಕೀಯ ಸೌಲಭ್ಯಪೂರೈಕೆದಾರರಿಗೆ ಇದು ವರದಾನವಾಗಿದೆ. ಈ ಸಾಧನೆಗಾಗಿ ಮಾಡಲಾದ ಪ್ರಯತ್ನಗಳನ್ನು ನಾನು ತುಂಬಾ ಪ್ರಶಂಸಿಸುತ್ತೇನೆ,ʼʼ ಎಂದರು.

ಈ ಪ್ರಕಟಣೆಯ ಬಗ್ಗೆ ಉತ್ಸುಕರಾಗಿ ಮಾತನಾಡಿದ ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕಡಾ. ಶರ್ವಿಲ್ ಪಟೇಲ್ ಅವರು,"ಆರಂಭದಲ್ಲೇ ನಾವು ಚಿಕಿತ್ಸೆಯನ್ನುನೀಡಿದಾಗ ಅದು ವೈರಾಣು ಹೊರೆಯನ್ನುಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತುಆ ಮೂಲಕ ಉತ್ತಮ ರೋಗನಿರ್ವಹಣೆಗೆ ಸಹಾಯ ಮಾಡುತ್ತದೆ ಎಂಬುದುಅರಿವಿಗೆ ಬಂದಿದೆ.  ನಿರ್ಣಾಯಕ ಸಮಯದಲ್ಲಿ ಇದು ರೋಗಿಗಳ ನೆರವಿಗೆ ಬಂದಿದೆ. ಕೋವಿಡ್-19 ವಿರುದ್ಧ ನಾವು ಸಂಘಟಿತ ಹೋರಾಟ ನಡೆಸುತ್ತಿರುವಈ ಸಂದರ್ಭದಲ್ಲಿ ರೋಗಿಗಳಿಗೆ ತುರ್ತು ಚಿಕಿತ್ಸಾ ಸೌಲಭ್ಯವನ್ನು ಒದಗಿಸುವುದನ್ನು ನಾವು ಮುಂದುವರಿಸುತ್ತೇವೆ,ʼʼಎಂದರು.

ಮೂರನೇ ಹಂತದ ವೈದ್ಯಕೀಯ ಪ್ರಯೋಗ ಅಧ್ಯಯನ ವರದಿಗಳ ಪ್ರಕಾರ, ʻವಿರಾಫಿನ್ʼ ಚುಚ್ಚುಮದ್ದನ್ನು ರೋಗಿಗಳ ಚರ್ಮದಅಡಿಗೆ ನೀಡಿದಾಗ 7ನೇ ದಿನದ ವೇಳೆಗೆ ಅವರ ಆರ್‌ಟಿ-ಪಿಸಿಆರ್ ಫಲಿತಾಂಶ ನಕಾರಾತ್ಮಕವಾಗಿದೆ. ಅಲ್ಲದೆ,ಇತರೆ ವೈರಾಣು ವಿರೋಧಿ ಔಷಧಗಳಿಗೆ ಹೋಲಿಸಿದರೆ, ಇದರ ಬಳಕೆಯಿಂದ ತ್ವರಿತ ಚೇತರಿಕೆ ಕಂಡುಬಂದಿದೆ. 

ಡಿಬಿಟಿ ಬಗ್ಗೆ: ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಜೈವಿಕತಂತ್ರಜ್ಞಾನ ಇಲಾಖೆಯು (ಡಿಬಿಟಿ)ಕೃಷಿ, ಆರೋಗ್ಯ ರಕ್ಷಣೆ, ಪ್ರಾಣಿ ವಿಜ್ಞಾನ, ಪರಿಸರ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಜೈವಿಕತಂತ್ರಜ್ಞಾನದ ಬಳಕೆ ಮತ್ತು ಅನ್ವಯವನ್ನು ಉತ್ತೇಜಿಸುತ್ತದೆ. ಜೈವಿಕ ತಂತ್ರಜ್ಞಾನ ಸಂಶೋಧನೆಯಲ್ಲಿಹೊಸ ಎತ್ತರವನ್ನು ಸಾಧಿಸಲು; ಜೈವಿಕತಂತ್ರಜ್ಞಾನವನ್ನು ಸಂಪತ್ತಿನ ಸೃಷ್ಟಿಗಾಗಿ ಹಾಗೂ ಸಾಮಾಜಿಕ ನ್ಯಾಯವನ್ನು ಖಾತರಿಪಡಿಸಲು- ವಿಶೇಷವಾಗಿ ಬಡವರ ಕಲ್ಯಾಣಕ್ಕಾಗಿ ಭವಿಷ್ಯದ ಪ್ರಮುಖ ಸಾಧನವಾಗಿ ರೂಪಿಸಲು ಗಮನ ಕೇಂದ್ರೀಕರಿಸಲಾಗಿದೆ.  www.dbtindia.gov.in

ಬಿಐಆರ್‌ಎಸಿ ಬಗ್ಗೆ: ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ನೆರವು ಮಂಡಳಿ (ಬಿಆರ್‌ಎಸಿ)ಲಾಭರಹಿತ ವಿಭಾಗ-8, ʻಶೆಡ್ಯೂಲ್-ಬಿʼ ವರ್ಗದ ಸಾರ್ವಜನಿಕ ವಲಯದ ಉದ್ಯಮವಾಗಿದೆ. ಭಾರತ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) ಇದನ್ನುಸ್ಥಾಪಿಸಿದೆ. ಜೈವಿಕ ತಂತ್ರಜ್ಞಾನ ಉದ್ಯಮವನ್ನು ಸಬಲಗೊಳಿಸಿ, ಆ ಮೂಲಕ ವ್ಯೂಹಾತ್ಮಕ ಸಂಶೋಧನೆ ಮತ್ತುಆವಿಷ್ಕಾರ ಕೈಗೊಳ್ಳಲು ಹಾಗೂ ರಾಷ್ಟ್ರೀಯವಾಗಿ ಪ್ರಸ್ತುತವೆನಿಸುವ ಉತ್ಪನ್ನಗಳ ಅಭಿವೃದ್ಧಿ ಅಗತ್ಯಗಳನ್ನುಪೂರೈಸುವ ಉದ್ದೇಶದೊಂದಿಗೆ ಒಂದು ಸಂಪರ್ಕ ಸಂಸ್ಥೆಯಾಗಿ ಇದನ್ನು ಸ್ಥಾಪಿಸಲಾಗಿದೆ. www.birac.nic.in

ಝೈಡಸ್ ಕ್ಯಾಡಿಲಾ ಬಗ್ಗೆ: ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್ ಎಂದೂ ಕರೆಯಲಾಗುವ ಇದು ಭಾರತದ ಬಹುರಾಷ್ಟ್ರೀಯ ಔಷಧೀಯಕಂಪನಿಯಾಗಿದ್ದು, ಗುಜರಾತ್‌ನ ಅಹಮದಾಬಾದ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಇದುಪ್ರಾಥಮಿಕವಾಗಿ ಜೆನೆರಿಕ್ ಔಷಧಿಗಳ ತಯಾರಿಕೆಯಲ್ಲಿ ತೊಡಗಿದೆ. ಹೆಚ್ಚಿನ ಮಾಹಿತಿಗಾಗಿ, http://www.zyduscadila.com/  ಗೆ ಲಾಗ್ ಆನ್ ಮಾಡಿರಿ.

***



(Release ID: 1713794) Visitor Counter : 237