ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಹಿಮಾಲಯದ ನೀರ್ಗಲ್ಲು ಜಲಾನಯನ ಪ್ರದೇಶದ ಉಪಗ್ರಹ ಆಧಾರಿತ ರಿಯಲ್ ಟೈಮ್ ನಿಗಾ ವ್ಯವಸ್ಥೆಯಿಂದ ಪ್ರವಾಹ ಮುನ್ನೆಚ್ಚರಿಕೆ ಬಲವರ್ಧನೆ ಮತ್ತು ವಿಪತ್ತು ಅಪಾಯ ಕನಿಷ್ಠಗೊಳಿಸಬಹುದು

Posted On: 20 APR 2021 12:06PM by PIB Bengaluru

ಹಿಮಾಲಯದ ನೀರ್ಗಲ್ಲು  ಜಲಾನಯನ ಪ್ರದೇಶದ ಮೇಲೆ ಉಪಗ್ರಹ ಆಧಾರಿತ ರಿಯಲ್ ಟೈಮ್  ನಿಗಾ ವ್ಯವಸ್ಥೆಯಿಂದಾಗಿ ಭಾಗದಲ್ಲಿ ಪ್ರವಾಹ ಅಪಾಯವನ್ನು ಅರ್ಥಮಾಡಿಕೊಳ್ಳುವುದು ಸುಧಾರಿಸಲಿದೆ ಮತ್ತು ಮುಂಚಿತವಾಗಿಯೇ ಪ್ರವಾಹ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಕೈಗೊಳ್ಳಲು ಅನುಕೂಲವಾಗಲಿದೆ ಹಾಗೂ ಮೂಲಕ ವಿಪತ್ತನ್ನು ತಪ್ಪಿಸಲು ಸಹಾಯಕವಾಗಲಿದ್ದು, ಇದರಿಂದ ಪ್ರಾಣಹಾನಿ ತಪ್ಪಿಸಬಹುದು ಎಂದು ಇತ್ತೀಚಿನ ಅಧ್ಯಯನದಿಂದ ತಿಳಿದುಬಂದಿದೆ.

ಹಿಮನದಿ ಸರೋವರ ಸ್ಫೋಟ ಪ್ರವಾಹ(ಜಿಎಲ್ಒಎಫ್) ವೇಳೆ ಪ್ರಾಣ ಹಾನಿಯಾಗುವುದನ್ನು ತಪ್ಪಿಸಲು ಇದನ್ನು ಭವಿಷ್ಯದ ಕಾರ್ಯತಂತ್ರವನ್ನಾಗಿ ಬಳಸಬಹುದು ಎಂದು ಐಐಟಿ ಕಾನ್ಪುರದ ವಿಜ್ಞಾನಿಗಳು ಮಾಡಿದ ಅಧ್ಯಯನದಿಂದ ತಿಳಿದುಬಂದಿದೆ. ಅಧ್ಯಯನವನ್ನು ಕಾನ್ಪುರ ಐಐಟಿಯ ಪ್ರೊ|| ಡಾ. ತನುಜಾ ಶುಕ್ಲಾ ಮತ್ತು ಸಹಾಯಕ ಪ್ರೊ|| ಇಂದ್ರಶೇಖರ್ ಸೇನ್ ಅವರು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನೆರವಿನೊಂದಿಗೆ ಕೈಗೊಂಡಿದ್ದು, ಅದು ಇತ್ತೀಚೆಗೆ ಅಂತಾರಾಷ್ಟ್ರೀಯ ಜರ್ನಲ್ಸೈನ್ಸ್ನಲ್ಲಿ ಪ್ರಕಟಗೊಂಡಿದೆ.

ಹವಾಮಾನದ ವೈಪರೀತ್ಯದ ಕಾರಣದಿಂದಾಗಿ ತಾಪಮಾನ ಮತ್ತು ಭಾರೀ ಮಳೆ ಬೀಳುವುದು ಸಂದರ್ಭಗಳು ಹೆಚ್ಚಾಗಿದೆ. ಭೂಮಿಯಮೂರನೇ ದ್ರುವಎಂದು ಸೂಕ್ತವಾಗಿ ಕರೆಯಲ್ಪಡುವ ಹಿಮಾಲಯ ಪ್ರದೇಶವು ಗ್ರಹದ ದೃವದ ಹೊರಗಿನ ಅತಿದೊಡ್ಡ ಹಿಮಚ್ಛಾದಿತ ಪ್ರದೇಶವಾಗಿದೆ. ಇಲ್ಲಿನ ನೀರ್ಗಲ್ಲುಗಳು ಅತ್ಯಂತ ವೇಗವಾಗಿ ಕರಗಿ ಹೊಸ  ಸರೋವರಗಳನ್ನು ಸೃಷ್ಟಿಸುತ್ತವೆ ಮತ್ತು ಹಾಲಿ ಇರುವ ಸರೋವರಗಳನ್ನು ವಿಸ್ತರಿಸುತ್ತಿವೆ. ಅಲ್ಲದೆ ಏರುತ್ತಿರುವ ತಾಪಮಾನ ಮತ್ತು ವಿಪರೀತ ಮಳೆಯಿಂದಾಗಿ ಪ್ರದೇಶಗಳು ವಿವಿಧ ಬಗೆಯ  ನೈಸರ್ಗಿಕ ಅಪಾಯಗಳಿಗೆ ಗುರಿಯಾಗುತ್ತದೆ, ಅದರಲ್ಲಿ  ವಿನಾಶಕಾರಿ ನೀರ್ಗಲ್ಲು ಸರೋವರ ಸ್ಫೋಟ ಪ್ರವಾಹ(ಜಿಎಲ್ಒಎಫ್ಎಸ್) ವೂ ಸೇರಿದೆ.

ನೈಸರ್ಗಿಕ ಅಣೆಕಟ್ಟುಗಳನ್ನು ಒಳಗೊಂಡ ನೀರ್ಗಲ್ಲು ಕಣಿವೆಗಳು ಸ್ಫೋಟಗೊಂಡಾಗ ಅಥವಾ ಕಣಿವೆಯ ಮಟ್ಟ ದಿಢೀರ್ ಏರಿಕೆಯಾದಾಗ ಮತ್ತು ಭಾರೀ ಪ್ರಮಾಣದ ನೀರಿನ ಹೊರ ಹರಿವು ಉಂಟಾದಾಗ ಜಿಎಲ್ಒಎಫ್ ಗಳು ಸಂಭವಿಸುತ್ತವೆ. ಇದರಿಂದಾಗಿ ಕೆಳ ಭಾಗದಲ್ಲಿ ಭಾರೀ ವಿಪತ್ತು ಉಂಟಾಗುತ್ತದೆ. ಉದಾಹರಣೆಗೆ 2013ರಲ್ಲಿ ಹಿಮಪಾತವು ಉತ್ತರ ಭಾರತದ ಚೋರಾಬರಿ ಸರೋವರನ್ನು ಹಿಮ್ಮೆಟ್ಟಿಸಲು ಕಾರಣವಾಯಿತು ಮತ್ತು ಹಠಾತ್ ನೀರು, ಬಂಡೆಗಳನ್ನು ಬಿಡುಗಡೆ ಮಾಡಿದ್ದರಿಂದ 5,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಹವಾಮಾನ ವೈಪರೀತ್ಯದಿಂದಾಗಿ ಇಂತಹ ಘಟನೆಗಳು ಆಗಾಗ್ಗೆ ಸಂಭವಿಸುವ ಸಾಧ್ಯತೆ ಇರುತ್ತದೆ ಮತ್ತು ಹಿಮಾಲಯದ ಪ್ರದೇಶಗಳಲ್ಲಿ ಅವುಗಳ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಹಿಮಾಲಯದ ಭೂಪ್ರದೇಶದಲ್ಲಿ ಸವಾಲು ಇದ್ದು, ಒಟ್ಟಾರೆ ಪ್ರದೇಶದಲ್ಲಿ  ದೂರಸಂಪರ್ಕ ಕೊರತೆಯಿಂದಾಗಿ ಪ್ರದೇಶದಲ್ಲಿ ಮುಂಚಿತವಾಗಿಯೇ ಪ್ರವಾಹದ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವುದು ವಾಸ್ತವವಾಗಿ ಅಸಾಧ್ಯವಾಗಿದೆ

ವಿಜ್ಞಾನಿಗಳು ತಮ್ಮ ಇತ್ತೀಚಿನ ವರದಿಯಲ್ಲಿ ಗುಡ್ಡಗಳ ಪ್ರದೇಶದಲ್ಲಿ ಕರಗಿದ ನೀರಿನ ಪ್ರಮಾಣ ಹೆಚ್ಚುತ್ತಿದೆ. ಇದಕ್ಕೆ ಬಹುತೇಕ ಸಾಮಾನ್ಯವಾಗಿ ಮುಂಗಾರು ಋತುಮಾನದ (ಜೂನ್-ಜುಲೈ-ಆಗಸ್ಟ್) ಕಾಲಾವಧಿಯಲ್ಲಿ ಸಂಭವಿಸುವ ಮೇಘ ಸ್ಫೋಟಗಳು ಕಾರಣ ಎಂದಿದ್ದಾರೆ. ಆದರೆ ಇತ್ತೀಚೆಗೆ (2021 ಫೆಬ್ರವರಿ 7) ಇದ್ದಕ್ಕಿದ್ದಂತೆ ಗಂಗಾ ನದಿಯ ಉಪ  ನದಿ ಧೌಲಿ ಗಂಗಾದಲ್ಲಿ ಇದ್ದಕ್ಕಿದ್ದಂತೆ ಹೆಚ್ಚಾದ ಹಿಮಪಾತ ಒಣಋತುಮಾನದಲ್ಲಿ ಕಾಲಮಿತಿ ಹೆಚ್ಚಳದ ಅಗತ್ಯವನ್ನು ಸೂಚಿಸಿತ್ತು. ಮೇಲ್ಭಾಗದ ಧೌಲಿ ಗಂಗಾ ಜಲಾನಯನ ಪ್ರದೇಶದಲ್ಲಿ  ಹಿಮಪಾತಗಳು, ಹಿಮ ಬೀಳುವುದು, ಬಂಡೆಗಳ ಕುಸಿತಗಳು ಮತ್ತು ಇತರೆ ಗುರುತಿಸಲಾಗದ ಸಣ್ಣ ಅವಘಢಗಳಿಂದಾಗಿ ಇಂತಹ ಸಂದರ್ಭಗಳಲ್ಲಿ ಕರಗಿದ ನೀರು ಹೆಚ್ಚಾಗಿ ದೊಡ್ಡ ಸರೋವರಗಳ ಮೂಲಕ ಭಾಗದಲ್ಲಿ ಹೆಚ್ಚಿನ ಹಾನಿ ಉಂಟುಮಾಡುತ್ತವೆ.  

ಐಐಟಿ ಕಾನ್ಪುರ ತಂಡ ಜಿಎಲ್ಒಎಫ್ ತಪ್ಪಿಸುವ ಪ್ರಯತ್ನಗಳ ಬಗ್ಗೆ ಸಲಹೆ ನೀಡಿದೆ. ಇದರಲ್ಲಿ ಉಪಗ್ರಹ ಆಧಾರಿತ ನಿಗಾ ನಿಲ್ದಾಣ ಜಾಲ ಸೃಷ್ಟಿ ಸೇರಿದಂತೆ ಜಿಎಲ್ಒಎಫ್ ಅಪಾಯದ ಕುರಿತು ರಿಯಲ್ ಟೈಮ್ ದತ್ತಾಂಶ ಮತ್ತು ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡುವುದು ಒಳಗೊಂಡಿದೆ.

ನಿಗಾ ಉಪಕರಣಗಳನ್ನು ಉಪಗ್ರಹದ ಜಾಲದ ಜೊತೆ ಜೋಡಿಸುವುದರಿಂದ ಹವಾಮಾನದ ಕುರಿತು ಬೆಂಬಲ ನೀಡುವುದಷ್ಟೇ ಅಲ್ಲದೆ ದೂರದ ಗುಡ್ಡಗಾಡು ಪ್ರದೇಶಗಳಿಗೆ ಸಂಪೂರ್ಣ ದೂರಸಂಪರ್ಕ ವ್ಯವಸ್ಥೆಯನ್ನು ಒದಗಿಸುತ್ತದೆ ಮತ್ತು ಮೂಲಕ ಹೆಚ್ಚಿನ ದೂರಸಂಪರ್ಕ ನಿಷ್ಕ್ರಿಯವಾಗಿರುವ ಕಣಿವೆಗಳು, ಗುಡ್ಡಗಾಡು ಪ್ರದೇಶ, ಕಡಿದಾದ ಪ್ರದೇಶಗಳಿಗೆ  ಸಂಪರ್ಕ ಲಭ್ಯವಾಗುತ್ತದೆ ಎಂದು ಲೇಖಕರು ವಿವರಿಸಿದ್ದಾರೆ.

ಪಬ್ಲಿಕೇಷನ್ ಲಿಂಕ್ : DOI: 10.1126/science.abh3558

ಹೆಚ್ಚಿನ ಮಾಹಿತಿಗೆ, ಪ್ರೊ. ಇಂದ್ರ ಶೇಖರ್ ಸೇನ್ (isen@iitk.ac.in  ಅವರನ್ನು ಸಂಪರ್ಕಿಸಬಹುದು

***



(Release ID: 1712932) Visitor Counter : 227