ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ಕಡಲು ಪರಿಸರಕ್ಕೆ ನಗರಗಳ ಪ್ಲಾಸ್ಟಿಕ್ ಸೇರುವುದನ್ನು ತಡೆಗಟ್ಟುವಿಕೆ ಕುರಿತು ಭಾರತ – ಜರ್ಮನಿ ನಡುವೆ ಒಪ್ಪಂದ


ಸ್ವಚ್ಛ ಭಾರತ್ ನಗರ ಅಭಿಯಾನದ ಉದ್ದೇಶಗಳಿಗೆ ಅನುಗುಣವಾಗಿ ರೂಪುಗೊಂಡ ಯೋಜನೆ

ಕಾನ್ಪುರ, ಕೊಚ್ಚಿ ಮತ್ತು ಪೋರ್ಟ್ ಬ್ಲೇರ್ ನಗರಗಳಿಗೆ ಈ ಯೋಜನೆಯಡಿ ಬೆಂಬಲ

Posted On: 19 APR 2021 3:18PM by PIB Bengaluru

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ [ಎಂ..ಎಚ್.ಯು.] ಭಾರತ ಸರ್ಕಾರ ಮತ್ತು ಜರ್ಮನಿ ಒಕ್ಕೂಟದ ಪರಿಸರ ಸಚಿವಾಲಯದ ಡಾಯ್ಚ ಗೆಸಲ್ಸ್ ಚಾಪ್ಟ್ಸ್ ಪುರ್ ಇಂಟರ್ ನ್ಯಾಷನಲ್ ಜುಸಾಮೆನಾರ್ಬಿಟ್ಗಾಗಿ [ಜಿಐಝೆಡ್] ಪರಿಸರ ಸಂರಕ್ಷಣೆ ಮತ್ತು ಅಣು ಸುರಕ್ಷತೆ ವಿಭಾಗದಿಂದ ನವದೆಹಲಿಯಲ್ಲಿಂದು ವರ್ಚುವಲ್ ಮೂಲಕ ಕಡಲು ಪರಿಸರಕ್ಕೆ ನಗರಗಳ ಪ್ಲಾಸ್ಟಿಕ್ ತಡೆ ಕುರಿತ ಒಪ್ಪಂದಕ್ಕೆ ಸಹಿ ಹಾಕಲಾಯಿತು

ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ -ಎಂ..ಎಚ್.ಯು. ಕಾರ್ಯದರ್ಶಿ ಶ್ರೀ ದುರ್ಗಾ ಶಂಕರ್ ಮಿಶ್ರಾ, “ 2021 ನೇ ವರ್ಷ ಎರಡೂ ದೇಶಗಳ ನಡುವೆ ಪರಸ್ಪರ ಸಹಕಾರ ಸಾಧಿಸಿರುವ ಕುರಿತ 63 ವರ್ಷಗಳ ಫಲಪ್ರದ ಅಭಿವೃದ್ಧಿಯ ಸೂಚಕವಾಗಿದೆ. ನಮ್ಮ ಜರ್ವನಿ ಪಾಲುದಾರರೊಂದಿಗೆ ಹೊಸ ಪ್ರಯತ್ನವನ್ನು ಆರಂಭಿಸಲು ತಮಗೆ ತುಂಬಾ ಸಂತಸವಾಗುತ್ತಿದೆಸುಸ್ಥಿರ ಘನ ತ್ಯಾಜ್ಯ ನಿರ್ವಹಣೆ ಮಾಡುವ ಉದ್ದೇಶದಿಂದ ಸ್ವಚ್ಛ ಭಾರತ್ ನಗರ ಅಭಿಯಾನದ ಉದ್ದೇಶಗಳಿಗೆ ಇದು ಪೂರಕವಾಗಿದೆ ಮತ್ತು ಬರುವ 2022 ವೇಳೆಗೆ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ನಿರ್ಮೂಲನೆ ಮಾಡುವ ಪ್ರಧಾನಮಂತ್ರಿ ಅವರ ಉದ್ದೇಶಗಳಿಗೆ ಅನುಗುಣವಾಗಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಎಂ..ಎಚ್.ಯು. ಹೆಚ್ಚುವರಿ ಕಾರ್ಯದರ್ಶಿ ಶ್ರೀ ಕುಮಾರನ್ ರಿಜ್ವಾಯಿ, ಜರ್ಮನಿ ಒಕ್ಕೂಟದ ಪರಿಸರ, ನೈಸರ್ಗಿಕ ಸಂರಕ್ಷಣೆ ಮತ್ತು ಅಣು ಸುರಕ್ಷತೆ [ಬಿ.ಎಂ.ಯು ಮಹಾ ನಿರ್ದೇಶಕ ಡಾ. ರೆಗಿನ ದುಬೆ, ಹವಾಮಾನ ಮತ್ತು ಪರಿಸರ ಇಲಾಖೆಯ ಮೊದಲ ಕಾರ್ಯದರ್ಶಿ ಡಾ. ಅಂಟ್ಜಿ ಬೆರ್ಗರ್, ಜರ್ಮನ್ ಯಾಂಡ್ ಗಣರಾಜ್ಯದ ರಾಯಭಾರಿ ಡಾ. ಜುಲಿಯೆ ರಿವೈರೆ ಮತ್ತು ಭಾರತದಲ್ಲಿನ ಜಿಐಝೆಡ್ ನಿರ್ದೇಶಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ವರ್ಚುವಲ್ ಸಮಾರಂಭದಲ್ಲಿ [ಉತ್ತರ ಪ್ರದೇಶ, ಕೇರಳ, ಅಂಡಮಾನ್ ಮತ್ತು ನಿಕೋಬಾರ್ ] ಒಪ್ಪಂದ ಅನುಷ್ಠಾನಗೊಳಿಸುವ ನಗರಗಳಾದ ಕಾನ್ಪುರ, ಕೊಚ್ಚಿ ಮತ್ತು ಪೋರ್ಟ್ ಬ್ಲೇರ್ ನಿಂದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಭಾರತದ ಗಣರಾಜ್ಯ ಮತ್ತು ರಿಪಬ್ಲಿಕ್ ಜರ್ಮನಿ ಗಣರಾಜ್ಯದ ನಡುವೆ 2019 ರಲ್ಲಿ ಸಾಗರ ತ್ಯಾಜ್ಯ ತಡೆತಟ್ಟುವಿಕೆ ಕುರಿತು ಸಹಕಾರ ಹೊಂದುವ ಸಂಬಂಧ ಜಂಟಿ ಘೋಷಣೆಯಡಿ ಇದನ್ನು ಜಾರಿ ಮಾಡಲಾಗುತ್ತಿದೆ. ಯೋಜನೆಯಡಿ ಕಡಲು ಪರಿಸರಕ್ಕೆ ಪ್ಲಾಸ್ಟಿಕ್ ಸೇರುವುದನ್ನು ತಡೆಗಟ್ಟುವ ವಿಷಯದಲ್ಲಿ ಸಹಕಾರ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ [ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ] ರಾಜ್ಯಗಳಾದ ಉತ್ತರ ಪ್ರದೇಶ, ಕೇರಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಇಲ್ಲಿನ ನಗರಗಳಾದ ಕಾನ್ಪುರ, ಕೊಚ್ಚಿ ಮತ್ತು ಪೋರ್ಟ್ ಬ್ಲೇರ್ ನಗರಗಳಲ್ಲಿ ಮುಂದಿನ ಮೂರೂವರೆ ವರ್ಷಗಳಲ್ಲಿ ಇದನ್ನು ಜಾರಿಗೊಳಿಸಲು ತೀರ್ಮಾನಿಸಲಾಗಿದೆ

ಸಾಗರ ಕಸ ಪರಿಸರ ವ್ಯವಸ್ಥೆಗೆ ಬೆದರಿಕೆಯಾಗಿದ್ದು, ಜಗತ್ತಿನಾದ್ಯಂತ ಮೀನುಗಾರಿಕೆ ಮತ್ತು ಪ್ರವಾಸೋದ್ಯಮದ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರುತ್ತದೆ. ಇದರಿಂದ ಹೆಚ್ಚುವರಿಯಾಗಿ ಆರ್ಥಿಕ ಬೆಳವಣಿಗೆಗೂ ಹೊಡೆತವಾಗಲಿದ್ದು, ಸೂಕ್ಷ್ಮ ಪ್ಲಾಸ್ಟಿಕ್ ನಿಂದ ಸಾರ್ವಜನಿಕ ಆರೋಗ್ಯಕ್ಕೆ  ಹಾನಿಯಾಗಲಿದೆ. ಸೂಕ್ಷ್ಮ ಪ್ಲಾಸ್ಟಿಕ್ ಸೇರ್ಪಡೆಯಾದರೆ ಆಹಾರ ಸರಪಳಿಯಲ್ಲಿ ವ್ಯತಿರಿಕ್ತ ದುಷ್ಪರಿಣಾಮಗಳಿಗೆ ನಾಂದಿಯಾಗುತ್ತದೆಇತ್ತೀಚಿನ ವರ್ಷಗಳಲ್ಲಿ ಸಾಗರಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಹೆಚ್ಚಾಗುತ್ತಿದ್ದು, ಇದರಿಂದ ಸಾಗರ ಪರಿಸರಕ್ಕೆ ಧಕ್ಕೆಯಾಗಿ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರುತ್ತಿವೆ. ಸಿಂಥೆಟಿಕ್ ವಸ್ತುಗಳು ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕ ಮತ್ತು ನೀತಿ ನಿರೂಪಕರು ಎಚ್ಚರಿಕೆ ಗಂಟೆ ಮೊಳಗಿಸಿದ್ದಾರೆ. ಶೇ 15 ರಿಂದ 20 ರಷ್ಟು ಪ್ಲಾಸ್ಟಿಕ್ ಗಳು ನದಿ ಮೂಲಕ ಸಾಗರ ಸೇರುತ್ತಿವೆ. ಇದರಲ್ಲಿ ಜಗತ್ತಿನ ಪ್ರಮುಖ ಮಾಲಿನ್ಯಕಾರಕ ನದಿಗಳು ಶೇ 90 ರಷ್ಟು ತ್ಯಾಜ್ಯದ ಕೊಡುಗೆ ನೀಡುತ್ತಿವೆ. ಇದರಲ್ಲಿ ಎರಡು ನದಿಗಳು ಭಾರತದಲ್ಲಿದ್ದು, ಅವು ಗಂಗಾ ಮತ್ತು ಬ್ರಹ್ಮಪುತ್ರ ನದಿಗಳಾಗಿವೆ

ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಸಾಗರ ಕಸದ ಬಗ್ಗೆ ನಿಖರ ಮಾಹಿತಿ ದೇಶದ ಹೆಚ್ಚಿನ ಭಾಗಗಳ ಜನರಿಗೆ ತಿಳಿದಿಲ್ಲ. ಸ್ವಚ್ಛ ಭಾರತ ನಗರ ಅಭಿಯಾನದಡಿ ಯೋಜನೆಗೆ ಬೆಂಬಲ ನೀಡಿದ್ದು, ನದಿ ಮತ್ತು ಜಲ ಮೂಲಗಳಿಂದ ಕಡಲಿಗೆ ಪ್ಲಾಸ್ಟಿಕ್ ತ್ಯಾಜ್ಯ ಸೇರುವುದನ್ನು ತಡೆಗಟ್ಟಲು  ವಿಶೇಷ ಗಮನ ಹರಿಸಲಾಗಿದೆ. ನಗರಗಳು ಪ್ಲಾಸ್ಟಿಕ್ ಸಂಗ್ರಹಣೆಯನ್ನು ಸುಧಾರಿಸಿ ವಿಂಗಡಣೆಯನ್ನು ಹೆಚ್ಚಿಸಬೇಕು ಮತ್ತು ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಸೂಕ್ತ ಮಾರುಕಟ್ಟೆ ದೊರಕಿಸಿಕೊಡಬೇಕು. ಮೂಲಕ ಜಲ ಮೂಲಗಳಿಗೆ ಪ್ಲಾಸ್ಟಿಕ್ ಸೇರುವುದನ್ನು ತಡೆಗಟ್ಟಬೇಕು. ಬಂದರು ಮತ್ತು ಸಾಗರ ವಲಯದ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಬೇಕಾಗಿದೆಪ್ಲಾಸ್ಟಿಕ್ ಮರು ಬಳಕೆದಾರು ಮತ್ತು ಮರು ಸಂಸ್ಕರಣಾ ಉದ್ಯಮದೊಂದಿಗೆ ಹೆಚ್ಚಿನ ಸಹಕಾರವನ್ನು ಸಂಯೋಜಿಸಲು ದತ್ತಾಂಶ ನಿರ್ವಹಣೆ, ವರದಿ ಮಾಡುವ ವ್ಯವಸ್ಥೆಗಳು, ನಾಗರಿಕ ಸಮಾಜದ ಒಳಗೊಳ್ಳುವಿಕೆ, ಡಿಜಿಟಲ್ ವೇದಿಕೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ನಗರ ಸಭೆಗಳಲ್ಲಿ ತ್ಯಾಜ್ಯವನ್ನು ಬೇರ್ಪಡಿಸುವ, ಸಂಗ್ರಹ, ಸಾಗಾಣೆ, ಸಂಸ್ಕರಣೆ, ವಿಲೇವಾರಿ ಮಾಡುವ ನಿಟ್ಟಿನಲ್ಲಿ ಸುಧಾರಣೆಗಳಾಗುವ ನಿರೀಕ್ಷೆಯಿದೆ. ಇದರಿಂದ ದಕ್ಷ ವ್ಯವಸ್ಥೆ ಸ್ಥಾಪಿಸಲು ಸಹಕಾರಿಯಾಗಲಿದೆ. ಯಾವುದೇ ತ್ಯಾಜ್ಯ ನದಿಗಳು ಮತ್ತು ಸಾಗರ ಪ್ರದೇಶಕ್ಕೆ ಸೇರುವುದನ್ನು ತಡೆಗಟ್ಟುವುದನ್ನು ಇದು ಖಚಿತಪಡಿಸುತ್ತದೆ

ಬೆಳವಣಿಗೆ ಭಾರತ ಜರ್ಮನಿ ನಡುವಿನ ದ್ವಿಪಕ್ಷೀಯ ಅಭಿವೃದ್ಧಿ ಅಡಿಯಲ್ಲಿ ಸುಸ್ಥಿರ ನಗರ ಪರಿವರ್ತನೆಗಾಗಿ ಕೆಲಸ ಮಾಡುವ ಮತ್ತೊಂದು ಯಶಸ್ವಿ ಸಹಯೋಗದ ಪ್ರಯತ್ನ ಎಂದು ಪರಿಗಣಿಸಲಾಗಿದೆ.

ಹೆಚ್ಚಿನ ಮಾಹಿತಿ ಕೆಳಕಂಡ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯ

Facebook Swachh Bharat Mission - Urban | @SUID.India

Twitter - @SwachhBharatGov| @giz_gmbh, giz_india

***



(Release ID: 1712691) Visitor Counter : 308