ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ 11 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಕ್ಸಿಜನ್, ವೆಂಟಿಲೇಟರ್, ಔಷಧಗಳು, ಆಸ್ಪತ್ರೆ ಹಾಸಿಗೆಗಳ ಲಭ್ಯತೆ ಕುರಿತು ಪರಾಮರ್ಶೆ ನಡೆಸಿದ ಕೇಂದ್ರ ಆರೋಗ್ಯ ಸಚಿವರು


ಕೋವಿಡ್-19 ವಿರುದ್ಧದ ಸಮರದಲ್ಲಿ ಭಾರತ ಸರ್ಕಾರದ ನಿರಂತರ ಬೆಂಬಲ ಮುಂದುವರಿಸುವುದಾಗಿ ಭರವಸೆ

Posted On: 17 APR 2021 3:59PM by PIB Bengaluru

ಭಾರತ ಸರ್ಕಾರದ ಶ್ರೇಣೀಕೃತ, ಪೂರ್ವಭಾವಿ ಮತ್ತು ಕ್ರಿಯಾಶೀಲ ವಿಧಾನಕ್ಕೆ ಅನುಗುಣವಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅಧ್ಯಕ್ಷತೆಯಲ್ಲಿಂದು ಇತ್ತೀಚೆಗೆ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರುಗಳೊಂದಿಗೆ ಸೋಂಕು ತಡೆ, ನಿಯಂತ್ರಣ ಮತ್ತು ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಯಿತು. ಸಭೆ ಸುಮಾರು 3 ಗಂಟೆಗೂ ಅಧಿಕ ಕಾಲ ನಡೆಯಿತು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೆಂದರೆ ಮಹಾರಾಷ್ಟ್ರ, ಛತ್ತೀಸ್ ಗಢ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಕೇರಳ, ಪಶ್ಚಿಮಬಂಗಾಳ, ದೆಹಲಿ, ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶ ಸೇರಿದ್ದು, ರಾಜ್ಯಗಳಲ್ಲಿ ಹೊಸದಾಗಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಭಾರೀ ಹೆಚ್ಚಳವಾಗಿದೆ.

https://static.pib.gov.in/WriteReadData/userfiles/image/image001PHT2.jpg https://static.pib.gov.in/WriteReadData/userfiles/image/image002PIPV.jpg

ಕೇಂದ್ರ ಆರೋಗ್ಯ ಸಚಿವರು, ಒಟ್ಟಾರೆ ಅನಿರೀಕ್ಷಿತ ರೀತಿಯಲ್ಲಿ ಹೊಸ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಸಮಗ್ರ ಚಿತ್ರಣವನ್ನು ನೀಡಿದರು. ಅವರು ಭಾರತದಲ್ಲಿ 2021 ಏಪ್ರಿಲ್ 12ರಂದು ಒಂದೇ ದಿನ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಅಂದರೆ ಇಡೀ ವಿಶ್ವದಲ್ಲಿ ಪ್ರತಿ ದಿನ ಹೊಸದಾಗಿ ಪತ್ತೆಯಾಗುತ್ತಿರುವ ಸೋಂಕು ಪ್ರಕರಣಗಳಿಗಿಂತ ಅಧಿಕವಾಗಿದೆ ಎಂದರು. 2021 ಏಪ್ರಿಲ್ 12 ವೇಳೆಗೆ ಭಾರತ ಒಟ್ಟಾರೆ ಜಗತ್ತಿನಲ್ಲಿರುವ ಶೇ.22.8ರಷ್ಟು ಪ್ರಕರಣಗಳು ವರದಿಯಾಗಿವೆ ಎಂದರು. ಅವರು ಭಾರತದಲ್ಲಿ ಸದ್ಯ ಹೊಸ ಕೋವಿಡ್ ಪ್ರಕರಣಗಳ ಪ್ರಗತಿ ದರ ಶೇ.7.6ರಷ್ಟಿದೆ. ಇದು 2020 ಜೂನ್ ತಿಂಗಳಲ್ಲಿ ಇದ್ದ ಪ್ರಗತಿ ದರ ಶೇ.5.5ಕ್ಕೆ ಹೋಲಿಸಿದರೆ ಶೇ. 1.3 ಪಟ್ಟು ಹೆಚ್ಚಾಗಿದೆ. ಇದರಿಂದಾಗಿ ಒಟ್ಟಾರೆ ಪ್ರತಿ ದಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಅಪಾಯಕಾರಿ ರೀತಿಯಲ್ಲಿ ಹೆಚ್ಚಾಗುತ್ತಿದ್ದು, ಸದ್ಯ 16,79,000 ಸಕ್ರಿಯ ಪ್ರಕರಣಗಳಿವೆ. ಅಲ್ಲದೆ ಸೋಂಕಿತರ ಸಾವಿನ ಪ್ರಮಾಣದಲ್ಲೂ ಸಹ ಭಾರೀ ಏರಿಕೆಯಾಗಿ ಶೇ.10.2ರಷ್ಟು ದಾಖಲಾಗಿದೆ. ಪ್ರತಿ ದಿನದ ಹೊಸ ಪ್ರಕರಣಗಳು ಮತ್ತು ಹೊಸದಾಗಿ ಗುಣಮುಖರಾಗುತ್ತಿರುವ ನಡುವಿನ ಅಂತರ ಹೆಚ್ಚಾಗುತ್ತಿದ್ದು, ಅದು ಸಕ್ರಿಯ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವ ಜೊತೆಗೆ ಸೋಂಕಿತರ ಗುಣಮುಖರಾಗುವುದಕ್ಕಿಂತ ಹೆಚ್ಚಿನ ವೇಗದಲ್ಲಿ ಸೋಂಕು ವ್ಯಾಪಿಸುತ್ತಿರುವುದು ಪ್ರತಿಫಲನಗೊಂಡಿದೆಎಂದು ಹೇಳಿದರು. ಎಲ್ಲಾ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗಾಗಲೇ ಅಧಿಕ ಸೋಂಕು ಪ್ರಕರಣಗಳ ಗಡಿ ದಾಟಿದೆ. ಅವುಗಳಲ್ಲಿ ಕೆಲವು ಜಿಲ್ಲೆಗಳೆಂದರೆ ಮುಂಬೈ, ನಾಗ್ಪುರ, ಪುಣೆ, ನಾಸಿಕ್, ಥಾಣೆ, ಲಖನೌ, ರಾಯ್ ಪುರ್, ಅಹಮದಾಬಾದ್ ಮತ್ತು ಔರಂಗಾಬಾದ್ ಮತ್ತಿತರ ನಗರಗಳು, ಇಲ್ಲಿ ಅದೇ ಪ್ರವೃತ್ತಿ ಕಂಡುಬರುತ್ತಿದೆ.

ಅಲ್ಲದೆ ಡಾ. ಹರ್ಷವರ್ಧನ್ ಅವರು ಬಿಕ್ಕಟ್ಟನ್ನು ಎದುರಿಸಲು ಆರೋಗ್ಯ ಮೂಲಸೌಕರ್ಯ ಏರಿಕೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ಸಾಂಕ್ರಾಮಿಕ ಆರಂಭವಾದಾಗ ನಮ್ಮಲ್ಲಿ ಒಂದೇ ಒಂದು ಪ್ರಯೋಗಾಲಯವಿತ್ತು. ಈಗ 2463 ಪ್ರಯೋಗಾಲಯಗಳಿದ್ದು, ಅವುಗಳ ಪ್ರತಿ ದಿನ ಪರೀಕ್ಷಾ ಸಾಮರ್ಥ್ಯ 15 ಲಕ್ಷವಾಗಿದೆ. ಕಳೆದ 24 ಗಂಟೆಗಳಲ್ಲಿ 14,95,397 ಪರೀಕ್ಷೆಗಳನ್ನು ನಡೆಸಲಾಗಿದ್ದು, ಒಟ್ಟಾರೆ 26,88,06,123 ಪರೀಕ್ಷೆಗಳನ್ನು ಈವರೆಗೆ ನಡೆಸಲಾಗಿದೆ. ಕೋವಿಡ್ ತೀವ್ರತೆಯನ್ನು ಆಧರಿಸಿ ಚಿಕಿತ್ಸೆ ನೀಡಲು ಮೂರು ಹಂತದ ಆರೋಗ್ಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗಿದೆ. ಅದರಲ್ಲಿ ಇದೀಗ 2084 ನಿರ್ದಿಷ್ಟ ಕೋವಿಡ್ ಆಸ್ಪತ್ರೆಗಳು(ಕೇಂದ್ರ ಸರ್ಕಾರದ ಅಧೀನದ 89 ಮತ್ತು ವಿವಿಧ 1995 ರಾಜ್ಯಗಳಿಗೆ ಸಂಬಂಧಿಸಿದವು) ಎಂದು 4043 ನಿರ್ದಿಷ್ಟ ಕೋವಿಡ್ ಆರೋಗ್ಯ ಕೇಂದ್ರಗಳು ಮತ್ತು 12,673 ಕೋವಿಡ್ ಆರೈಕೆ ಕೇಂದ್ರಗಳು ಇವೆ. ಒಟ್ಟಾರೆ ಕೋವಿಡ್ ನಿರ್ದಿಷ್ಟ ಆಸ್ಪತ್ರೆಗಳಲ್ಲಿ 4,68,974 ಹಾಸಿಗೆಗಳು ಸೇರಿದಂತೆ ಒಟ್ಟಾರೆ 18,52,265 ಹಾಸಿಗೆಗಳು ಸೇರಿವೆ. ಕಳೆದ ಒಂದು ವರ್ಷದಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ  34,228 ವೆಂಟಿಲೇಟರ್ ಗಳನ್ನು ಅನುಮೋದಿಸಿದೆ ಎಂದು ಆರೋಗ್ಯ ಸಚಿವರು ಹೇಳಿದರು. ಅಲ್ಲದೆ ಜೀವರಕ್ಷಕ ಯಂತ್ರಗಳನ್ನು ಹೊಸದಾಗಿ ಪೂರೈಕೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು. ಅವುಗಳಲ್ಲಿ ಮಹಾರಾಷ್ಟ್ರಕ್ಕೆ 1121 ವೆಂಟಿಲೇಟರ್, ಉತ್ತರ ಪ್ರದೇಶಕ್ಕೆ 1700, ಜಾರ್ಖಂಡ್ ಗೆ 1500 ಗುಜರಾತ್ ಗೆ 1600, ಮಧ್ಯಪ್ರದೇಶಕ್ಕೆ  152 ಮತ್ತು ಛತ್ತೀಸ್ ಗಢಕ್ಕೆ 230 ವೆಂಟಿಲೇಟರ್ ಪೂರೈಸಲಾಗುವುದು.

ಜನಸಂಖ್ಯೆಯ ಪ್ರತಿಯೊಂದು ವರ್ಗದಲ್ಲಿನ ನಿರ್ದಿಷ್ಟ ಫಲಾನುಭವಿಗಳ ಸಂಖ್ಯೆ ಕುರಿತಂತೆ ವಿವರ ನೀಡಿದ ಡಾ. ಹರ್ಷವರ್ಧನ್, ಲಸಿಕೆ ಕೊರತೆಯ ವಿಚಾರದ ಕುರಿತು ವಿವರ ನೀಡಿದರು. ಪೈಕಿ 14 ಕೋಟಿ 15 ಲಕ್ಷ ಡೋಸ್ ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಿದ್ದು, ಈವರೆಗೆ(ನಷ್ಟವಾದುದು ಸೇರಿ) ಒಟ್ಟಾರೆ 12 ಕೋಟಿ 57 ಲಕ್ಷ 18 ಸಾವಿರ ಡೋಸ್ ಲಸಿಕೆ ಬಳಕೆಯಾಗಿದೆ. ಸುಮಾರು ಒಂದು ಕೋಟಿ 58 ಲಕ್ಷ ಡೋಸ್ ಲಸಿಕೆ ಇನ್ನೂ ರಾಜ್ಯಗಳ ಬಳಿ ಲಭ್ಯವಿದೆ ಮತ್ತು ಒಂದು ಕೋಟಿ 16 ಲಕ್ಷ 84 ಸಾವಿರ ಡೋಸ್ ಪೂರೈಕೆ ಪ್ರಗತಿಯಲ್ಲಿದ್ದು ಮುಂದಿನ ವಾರ ಅದು ತಲುಪಲಿದೆ. ಪ್ರತಿ 7 ದಿನಗಳ ನಂತರ ಎಲ್ಲಾ ಸಣ್ಣ ರಾಜ್ಯಗಳಲ್ಲೂ ದಾಸ್ತಾನಿನ ಮರು ಪರಿಶೀಲನೆ ನಡೆಸಲಾಗುತ್ತಿದೆ. ದೊಡ್ಡ ರಾಜ್ಯಗಳಲ್ಲಿ ನಾಲ್ಕು ದಿನಗಳಿಗೊಮ್ಮೆ ಲಸಿಕೆ ಲಭ್ಯತೆ ಪರಿಶೀಲನೆ ನಡೆಸಲಾಗುತ್ತಿದೆ ಎಂದರು. ಲಸಿಕೆಯ ಕೊರತೆ ಇಲ್ಲ ಎಂದು ಬಲವಾಗಿ ಪ್ರತಿಪಾದಿಸಿದ ಅವರು, ಲಸಿಕೀಕರಣ ಅಭಿಯಾನವನ್ನು ಮತ್ತಷ್ಟು ತೀವ್ರಗೊಳಿಸುವಂತೆ ಒತ್ತಿ ಹೇಳಿದರು.

ಎನ್ ಸಿಡಿಸಿ  ನಿರ್ದೇಶಕರಾದ ಡಾ. ಎಸ್.ಕೆ. ಸಿಂಗ್, ರಾಜ್ಯಗಳ ವಿಸ್ತೃತ ಸ್ಥಿತಿಗತಿಯ ವಿಶ್ಲೇಷಣೆಯನ್ನು ಮಂಡಿಸಿದರು. ಪ್ರತಿ ದಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು, ಹಲವು ಜಿಲ್ಲೆಗಳಲ್ಲಿ ಪ್ರತಿ ದಿನ ಪಾಸಿಟಿವಿಟಿ ದರ ಹೆಚ್ಚಳ, ಸೋಂಕಿತರ ಮರಣ ಪ್ರಮಾಣ ಗಣನೀಯ ಹೆಚ್ಚಳ, ರಾಜ್ಯಗಳಲ್ಲಿ ಕ್ಲಿನಿಕಲ್ ಮೂಲಸೌಕರ್ಯ ಸೃಷ್ಟಿ ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ನಡುವೆ ಹೆಚ್ಚಿನ ಆರೋಗ್ಯ ರಕ್ಷಣಾ ಕಾರ್ಯಕರ್ತರ ಅಗತ್ಯತೆ ಕುರಿತ ವಿಷಯಗಳನ್ನು ಹಂಚಿಕೊಂಡರು.

ರಾಜ್ಯಗಳ ಆರೋಗ್ಯ ಸಚಿವರುಗಳು ಕೋವಿಡ್ ಪಾಸಿಟಿವ್ ಪ್ರಕರಣಗಳ ನಿರ್ಬಂಧ, ನಿಗಾ ಮತ್ತು ಚಿಕಿತ್ಸೆಗೆ ಕೈಗೊಂಡಿರುವ ಕ್ರಮಗಳು ಮತ್ತು ತಮ್ಮ ರಾಜ್ಯಗಳಲ್ಲಿ ಉತ್ತಮ ಪದ್ಧತಿಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು. ಅಲ್ಲದೆ ಆಕ್ಸಿಜನ್ ಸಿಲಿಂಡರ್ ಗಳ ಪೂರೈಕೆ ಹೆಚ್ಚಳ; ಆಸ್ಪತ್ರೆಗಳಲ್ಲಿ ರೆಮ್ ಡೆಸಿವರ್ ಪೂರೈಕೆ ವೃದ್ಧಿ; ವೆಂಟಿಲೇಟರ್ ಗಳ ದಾಸ್ತಾನು ಹೆಚ್ಚಳ ಮತ್ತು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆ ಡೋಸ್ ಪೂರೈಕೆ ಹೆಚ್ಚಳ ವಿಷಯಗಳನ್ನು ಚರ್ಚಿಸಲಾಯಿತು. ಹಲವು ರಾಜ್ಯಗಳು ವೈದ್ಯಕೀಯ ಆಕ್ಸಿಜನ್ ಪೂರೈಕೆ ಮಾರ್ಗಗಳನ್ನು ಬದಲಿಸುವ ವಿಚಾರವನ್ನು ಪ್ರಸ್ತಾಪಿಸಿದರು ಮತ್ತು ಕಾಳಸಂತೆಯಲ್ಲಿ ಅತ್ಯಧಿಕ ಬೆಲೆಗೆ ಮಾರಾಟವಾಗುತ್ತಿರುವ ರೆಮ್ ಡೆಸಿವರ್ ಅಗತ್ಯ ಔಷಧದ ಬೆಲೆಗೆ ಮಿತಿ ಹೇರುವಂತೆ ಕೋರಿದರು. ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿರುವ ಎರಡು ಬಗೆಯ ಸೋಂಕಿನ ಗುಣಲಕ್ಷಣಗಳ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಯಿತು. ದೆಹಲಿ ಸರ್ಕಾರ 2020ರಲ್ಲಿ ಮಾಡಿದ್ದಂತೆ ತುರ್ತು ಆರೋಗ್ಯ ಬಿಕ್ಕಟ್ಟು ಎದುರಿಸಲು ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಹಾಸಿಗೆಗಳನ್ನು ಒದಗಿಸುವಂತೆ ಮನವಿ ಮಾಡಿತು

https://static.pib.gov.in/WriteReadData/userfiles/image/image003BWB1.jpg

ಗೃಹ ಸಚಿವಾಲಯ, ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಹಂಚಿಕೆ ಮಾಡಿರುವ ವಾರ್ಷಿಕ ಶೇ.50ರಷ್ಟು ಹಣವನ್ನು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ 2021 ಏಪ್ರಿಲ್ 1ರವರೆಗೆ ಖರ್ಚು ಮಾಡಲಾಗದೆ ಉಳಿಸಿಕೊಂಡಿರುವ ಹಣವನ್ನು ಕೋವಿಡ್-19 ನಿರ್ವಹಣೆ ಉದ್ದೇಶಕ್ಕೆ ಬಳಸಿಕೊಳ್ಳಲು ಅನುಮತಿ ನೀಡುವುದಾಗಿ ಪುನರುಚ್ಚರಿಸಿತು.

ಕೇಂದ್ರ ಆರೋಗ್ಯ ಕಾರ್ಯದರ್ಶಿ, ವೈದ್ಯಕೀಯ ಆಕ್ಸಿಜನ್ ಪೂರೈಕೆ ಮತ್ತು ದೇಶದಲ್ಲಿ ರೆಮ್ ಡೆಸಿವರ್ ದಾಸ್ತಾನು ವೃದ್ಧಿಗೆ ಕೈಗೊಂಡಿರುವ ಕ್ರಮಗಳನ್ನು ರಾಜ್ಯಗಳಿಗೆ ವಿವರಿಸಿದರು ಮತ್ತು ಸಂಬಂಧ ಆರೋಗ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಡಿಪಿಐಐಟಿ ಕಾರ್ಯದರ್ಶಿ, ಫಾರ್ಮಸಿಟಿಕಲ್ ಕಾರ್ಯದರ್ಶಿ ಮತ್ತಿತರರೊಂದಿಗೆ ನಡೆಸಿದ ಹಲವು ಸಭೆಗಳು ಫಲಪ್ರದವಾಗಿದೆ. ದೇಶದಲ್ಲಿನ ನಾನಾ ಆಕ್ಸಿಜನ್ ಉತ್ಪಾದಕರು ರಾಜ್ಯಗಳಿಗೆ ವೈದ್ಯಕೀಯ ಆಕ್ಸಿಜನ್ ಪೂರೈಕೆಗೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಲಾಯಿತು. ಅಲ್ಲದೆ ರಾಜ್ಯಗಳಲ್ಲಿ ಉತ್ಪಾದನಾ ಘಟಕಗಳಿಂದ ಆಕ್ಸಿಜನ್ ಸಿಲಿಂಡರ್ ಗಳನ್ನು ಯಾವುದೇ ಅಡೆ ತಡೆ ಇಲ್ಲದೆ ಸಾಗಾಣೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಲಾಯಿತು.

ಕಳೆದ ಫೆಬ್ರವರಿಯಿಂದೀಚೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಕುರಿತು ಮತ್ತು ಬಹುತೇಕ ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಭಾರೀ ಏರಿಕೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಡಾ. ಹರ್ಷವರ್ಧನ್ ಅವರು, ರಾಜ್ಯಗಳು ಕೋವಿಡ್ ಆಸ್ಪತ್ರೆ ಸಂಖ್ಯೆ ಹೆಚ್ಚಳ, ಆಕ್ಸಿಜನ್ ಹಾಸಿಗೆಗಳು ಮತ್ತು ಇತರೆ ಮೂಲಸೌಕರ್ಯವನ್ನು ಹೆಚ್ಚಿಸುವ ಮೂಲಕ ಹೆಚ್ಚುತ್ತಿರುವ ಪ್ರಕರಣಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು. ರಾಜ್ಯಗಳು ತಮ್ಮ ಆಡಳಿತದ 5-6 ನಗರಗಳಿಗೆ ವಿಶೇಷ ಒತ್ತು ನೀಡಬೇಕು, ನಗರಗಳಲ್ಲಿನ ಅಥವಾ ನೆರೆ 2-3 ಜಿಲ್ಲೆಗಳ ವೈದ್ಯಕೀಯ ಕಾಲೇಜುಗಳನ್ನು ಗುರುತಿಸಬೇಕು ಎಂದು ಮನವಿ ಮಾಡಿದರು. ರಾಜ್ಯಗಳು ಮುಂಚಿತವಾಗಿಯೇ ಸೋಂಕನ್ನು ಪತ್ತೆಹಚ್ಚುವ ಮೂಲಕ ಪಾಸಿಟಿವ್ ಪ್ರಕರಣಗಳ ಪತ್ತೆಗೆ ಪ್ರಾಮಾಣಿಕ ಮತ್ತು ಪರಿಣಾಮಕಾರಿ ಚಿಕಿತ್ಸೆಗೆ ಕ್ರಮ ಕೈಗೊಂಡು ಆರೋಗ್ಯ ದುಸ್ಥಿತಿಗೆ ದೂಡದಂತೆ ಎಚ್ಚರಿಕೆ ವಹಿಸಬೇಕು ಎಂದರು. ಸಮುದಾಯ ಕ್ವಾರಂಟೈನ್ ರಚನೆಗೆ ದೊಡ್ಡ ನಿರ್ಬಂಧಿತ ವಲಯಗಳನ್ನು ರಚಿಸುವುದು ಕೂಡ ಕಾರ್ಯತಂತ್ರದ ಭಾಗವಾಗಿದೆ ಎಂದು ಸಲಹೆ ಮಾಡಿದರು. ಅಲ್ಲದೆ ಕೇಂದ್ರ ಸಚಿವರು ಸಂಬಂಧಿಸಿದ ಐಎನ್ಎಸ್ಎಸಿಒಜಿ ನೋಡಲ್ ಅಧಿಕಾರಿಗಳ ಸಮನ್ವಯದಿಂದ ಜಿನೋವಿಕ್ ಮ್ಯೂಟೆಂಟ್ (ರೋಗ ಕಾರಕ ರೂಪಾಂತರ ರೂಪಗಳನ್ನು) ಮೌಲ್ಯಮಾಪನ ಮಾಡಲು ಕ್ಲಿನಿಕಲ್ ಹಾಗೂ ಸಾಂಕ್ರಾಮಿಕಗಳ ಚಿತ್ರಗಳನ್ನು ಕಳುಹಿಸಬೇಕು ಎಂದು ಪುನರುಚ್ಚರಿಸಿದರು ಹಾಗೂ ಸಾರ್ವಜನಿಕ ಆರೋಗ್ಯ ಚಿತ್ರಣವನ್ನು ಕ್ಲಿನಿಕಲ್ ದೃಷ್ಟಿಯಲ್ಲಿ ಸಮೀಕರಿಸುವ ಪ್ರಯತ್ನ ನಡೆಸಬೇಕು ಎಂದರು. ಎನ್ ಸಿ ಡಿಸಿ ನಿರ್ದೇಶಕರು ವೈರಾಣುಗಳಿಗೆ ಸಂಬಂಧಿಸಿದಂತೆ ಜಿನೋಮ್ ಅರ್ಥಮಾಡಿಕೊಳ್ಳಲು ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.

ಶ್ರೀ ಸಿಂಗ್ ದೇವ್(ಛತ್ತೀಸ್ ಗಢ), ಶ್ರೀ ಸತ್ಯೇಂದ್ರ ಜೈನ್(ದೆಹಲಿ), ಡಾ. ಕೆ. ಸುಧಾಕರ್ (ಕರ್ನಾಟಕ), ಡಾ, ಪ್ರಭುರಾಮ್ ಚೌಧರಿ(ಮಧ್ಯಪ್ರದೇಶ), ಶ್ರೀ ರಾಜೇಶ್ ತೋಪೆ(ಮಹಾರಾಷ್ಟ್ರ), ಶ್ರೀ ಜೈ ಪ್ರತಾಪ್ ಸಿಂಗ್ (ಉತ್ತರ ಪ್ರದೇಶ), ಶ್ರೀಮತಿ ಕೆ.ಕೆ. ಶೈಲಜಾ(ಕೇರಳ), ಡಾ. ರಘು ಶರ್ಮಾ(ರಾಜಸ್ಥಾನ) ಹಾಗೂ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರುಗಳು ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದರು. ಎಲ್ಲ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಕಾರ್ಯದರ್ಶಿಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳು (ಆರೋಗ್ಯ) ಇವರು ವರ್ಚುವಲ್ ರೂಪದಲ್ಲಿ ಭಾಗವಹಿಸಿದ್ದರು.

***



(Release ID: 1712474) Visitor Counter : 235