ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಭಾರತ ಸ್ವಾತಂತ್ರ್ಯದ 75 ವರ್ಷಗಳ ಅಂಗವಾಗಿ "75" ಸರಣಿ ಪಿಂಚಣಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್

Posted On: 12 APR 2021 5:10PM by PIB Bengaluru

ಕೇಂದ್ರ ಈಶಾನ್ಯ ವಲಯದ ಅಭಿವೃದ್ಧಿ ಖಾತೆ (ಸ್ವತಂತ್ರ ನಿರ್ವಹಣೆ) ಸಹಾಯಕಸಚಿವ; ಪ್ರಧಾನಿ ಕಚೇರಿ ಖಾತೆ ಸಹಾಯಕ ಸಚಿವ; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿಗಳು, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಖಾತೆ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಭಾರತ ಸ್ವಾತಂತ್ರ್ಯದ 75 ವರ್ಷಗಳ ಅಂಗವಾಗಿ"75" ಸರಣಿ ಪಿಂಚಣಿ ಜಾಗೃತಿ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿದರು. ಭಾರತದ ಸ್ವಾತಂತ್ರ್ಯದ 75ನೇವರ್ಷದ ಸ್ಮರಣಾರ್ಥ "ಅಮೃತಮಹೋತ್ಸವ"ದ ಭಾಗವಾಗಿ, ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು "75" ಸರಣಿ ಅಂಕಿಯಿಂದ ಗುರುತಿಸಲ್ಪಟ್ಟ ವ್ಯಾಪಕ ಶ್ರೇಣಿಯ ಚಟುವಟಿಕೆಗಳನ್ನು ಆಯೋಜಿಸಲಿದೆ.

ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚಣೆಯನ್ನು ಪಿಂಚಣಿದಾರರು ಮತ್ತು ಹಿರಿಯ ನಾಗರಿಕರ ಉದ್ದೇಶಕ್ಕಾಗಿ ಸಮರ್ಪಿಸುವ ಮೂಲಕ ಹಮ್ಮಿಕೊಳ್ಳಲಾದ ಈ ಅಭಿಯಾನವು ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಅತ್ಯಂತ ನವೀನ ಹಾಗೂ ಸೃಜನಶೀಲ ವಿಧಾನವೆನಿಸಿದೆ ಎಂದು ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಹೇಳಿದರು. ಸಾಮಾಜಿಕ ವೇದಿಕೆಯ ಅತ್ಯಂತ ಕಿರಿಯ ಮಾಧ್ಯಮದ ಮೂಲಕ ಹಿರಿಯ ನಾಗರಿಕರಿಗಾಗಿ ಕೈಗೊಂಡ ಈ ಕಾರ್ಯಕ್ರಮವು "ಭಾರತದ ಅಮೃತ ಮಹೋತ್ಸವʼದ ನೈಜ ಸಾರವನ್ನು ಬಿಂಬಿಸುತ್ತದೆ ಎಂದು ಅವರು ಹೇಳಿದರು.

ಮುಂದಿನ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಗಾಗಿ ವಿವಿಧ ಚಟುವಟಿಕೆಗಳನ್ನು ರೂಪಿಸಲಾಗಿದೆ. ಈ ಪೈಕಿ, ಮುಂಬರುವ ವರ್ಷದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವಾರಕ್ಕೆ ಎರಡು ಟ್ವೀಟ್‌ಗಳ ಮೂಲಕ ಕೌಟುಂಬಿಕ ಪಿಂಚಣಿದಾರರಿಗೆ 75 ಪ್ರಮುಖ ಪಿಂಚಣಿ ನಿಯಮಗಳನ್ನು ಸರಣಿಯಾಗಿ ಪ್ರಸಾರ ಮಾಡುವುದು ಪ್ರಮುಖವಾದುದಾಗಿದೆ. ಕೌಟುಂಬಿಕ ಪಿಂಚಣಿದಾರರು ಸೇರಿದಂತೆ ಎಲ್ಲಾ ವರ್ಗಗಳಿಗೆ ಸೇರಿದ ಪಿಂಚಣಿದಾರರ ಕಲ್ಯಾಣಕ್ಕಾಗಿ ರೂಪಿಸಲಾದ ನಿಯಮಗಳು ಮತ್ತು ಹೊಸ ಇತ್ತೀಚಿನ ಸುಧಾರಣೆಗಳ ಬಗ್ಗೆ ಜಾಗೃತಿ ಮೂಡಿಸಲು ಈ ಟ್ವೀಟ್‌ಗಳನ್ನು ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳ (ಎಫ್ಎಕ್ಯೂ) ರೂಪದಲ್ಲಿ ಪ್ರಸ್ತುತಪಡಿಸಲಾಗುತ್ತದೆ.

ಇತರ "75" ಸಂಬಂಧಿತ ಚಟುವಟಿಕೆಗಳೆಂದರೆ, "ಭವಿಷ್ಯ"ದ (ಆನ್ ಲೈನ್ ಪಿಂಚಣಿ ಮಂಜೂರಾತಿ ಮಾಡ್ಯೂಲ್) ಬಗ್ಗೆ ಭಾರತ ಸರ್ಕಾರದ 75 ಕಚೇರಿಗಳ ಮೂಲಕ ತರಬೇತಿ ನೀಡುವುದು. ಈ ಎಲ್ಲಾ ಕಚೇರಿಗಳಿಗೆ ಮೊದಲು ವೀಡಿಯೊ ಕಾನ್ಫರೆನ್ಸ್ ಮೂಲಕ, ನಂತರ ಪ್ರಶ್ನೋತ್ತರ ಅಧಿವೇಶನ ಮೂಲಕ ತರಬೇತಿ ನೀಡಲಾಗುವುದು. ಕೇಂದ್ರ ಸರಕಾರದ ಸಂಸ್ಥೆಗಳಾದ್ಯಂತ ಏಪ್ರಿಲ್ 2021 ರಿಂದ ಅನೇಕ ಅಧಿವೇಶನಗಳ ಮೂಲಕ ಭವಿಷ್ಯದ ತರಬೇತಿ ಪ್ರಾರಂಭವಾಗಲಿದೆ. ದೇಶಾದ್ಯಂತ ವಿವಿಧ ಸ್ಥಳಗಳಲ್ಲಿರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಕಚೇರಿಗಳು ಕೂಡ ಈ ತರಬೇತಿಯ ವ್ಯಾಪ್ತಿಗೆ ಬರುತ್ತವೆ.

ಅದೇ ರೀತಿ, 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ಸರಕಾರಿ ಪಿಂಚಣಿದಾರರು ಮತ್ತು ಕೌಟುಂಬಿಕ ಪಿಂಚಣಿದಾರರಿಗೆ "75" ನಿಯಮದಂತೆ, ಪಿಂಚಣಿ ನಿಯಮಗಳ ಕುರಿತು ಆನ್‌ಲೈನ್ ಕಾರ್ಯಾಗಾರವನ್ನು ನಡೆಸಲಾಗುತ್ತದೆ. ಮೇ 2021 ರಿಂದ ಪ್ರಾರಂಭವಾಗುವ ವೀಡಿಯೊ ಕಾನ್ಫರೆನ್ಸ್ ಮೂಲಕ ದೇಶಾದ್ಯಂತ ಆನ್ ಲೈನ್ ಕಾರ್ಯಾಗಾರಗಳ ಸರಣಿಯನ್ನು ನಡೆಸಲಾಗುತ್ತದೆ. ಗರಿಷ್ಠ ಸಂಖ್ಯೆಯ ನಗರಗಳಲ್ಲಿ ಮತ್ತು ಪ್ರದೇಶವಾರು ಈ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ. "75" ರ ಪ್ರೇರಣೆಯಿಂದ, ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಅನುಭವ್ ಪೋರ್ಟಲ್‌ನಿಂದ ಈಗಾಗಲೇ ಒದಗಿಸಲಾದ ಅಥವಾ ಆಯ್ಕೆ ಮಾಡಲಾದ ಲೇಖನಗಳು ಸೇರಿದಂತೆ 75 "ಅನುಭವ್"ಬರಹಗಳನ್ನು ಡಿಜಿಟಲ್ ರೂಪದಲ್ಲಿ ಪ್ರಕಟಣೆಮಾಡಲಿದೆ. ಈಚಟುವಟಿಕೆಯನ್ನು ಜೂನ್ 2021ರಿಂದ ಅರಂಭಿಸಲಾಗುವುದು.

***



(Release ID: 1711812) Visitor Counter : 275