ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಸಿಎಸ್ಐಆರ್- ಸಿಎಂಇಆರ್ ಐ- ಈಶಾನ್ಯ ಭಾಗದ ಪ್ರಗತಿ ಸಾಧಿಸುವತ್ತ ಹೆಜ್ಜೆ
Posted On:
12 APR 2021 12:00PM by PIB Bengaluru
ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಮೇಘಾಲಯವನ್ನು ಪರಿವರ್ತಿಸುವ ಕುರಿತ ‘ಶೃಂಗಸಭೆ ಮತ್ತು ತಂತ್ರಜ್ಞಾನ ಮೇಳ’ದಲ್ಲಿ ಸಿಎಸ್ ಐಆರ್- ಸಿಎಂಇಆರ್ ಐ ತನ್ನ ತಂತ್ರಜ್ಞಾನಗಳನ್ನು ಪ್ರದರ್ಶಿಸಿತು. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಾರ್ತ್ ಈಸ್ಟ್ ಸೆಂಟರ್ ಫಾರ್ ಟೆಕ್ನಾಲಜಿ ಅಪ್ಲಿಕೇಷನ್ ಅಂಡ್ ರೀಚ್ (ನೆಕ್ಟಾರ್ ) ಇದನ್ನು ಏಪ್ರಿಲ್ 9 ಮತ್ತು 10ರಂದು ಮೇಘಾಲಯದ ಶಿಲ್ಲಾಂಗ್ ನ ರಾಜ್ಯ ಸಮಾವೇಶ ಕೇಂದ್ರದಲ್ಲಿ ಆಯೋಜಿಸಿತ್ತು.
ಸಮಾವೇಶದಲ್ಲಿ ಸಿಎಸ್ ಐಆರ್- ಸಿಎಂಇಆರ್ ಐ ಶುಂಠಿ- ಅರಿಶಿನ ಸಂಸ್ಕರಣಾ ತಂತ್ರಜ್ಞಾನಗಳು, ಘನ ತ್ಯಾಜ್ಯ ನಿರ್ವಹಣೆ, ಸೌರ ಮರ ಮತ್ತು ಕಲಾಕೃತಿಗಳು, ಸಂಪೂರ್ಣ ನೀರು ಶುದ್ಧೀಕರಣ ತಂತ್ರಜ್ಞಾನಗಳು (ಆರ್ಸೆನಿಕ್, ಕಬ್ಬಿಣ ಮತ್ತು ಪ್ಲೋರೈಡ್) ಮತ್ತು ಪರಿಹಾರಗಳು, ಕೊಳಚೆ ನೀರು ಸಂಸ್ಕರಣಾ ಘಟಕ ಮತ್ತು ಹೈಬ್ರಿಡ್ ಮಿನಿ-ಗ್ರಿಡ್ ಇತ್ಯಾದಿ ತಂತ್ರಜ್ಞಾನಗಳನ್ನು ಪ್ರದರ್ಶನಪಡಿಸಿದವು.
ಮೇಘಾಲಯದ ಮುಖ್ಯ ಕಾರ್ಯದರ್ಶಿ ಐಎಎಸ್ ಅಧಿಕಾರಿ ಶ್ರೀ ಎಂ,ಎಸ್. ರಾವ್ ಅವರು ಸಿಎಸ್ ಐಆರ್- ಸಿಎಂಇಆರ್ ಐ ತಂತ್ರಜ್ಞಾನ ಪ್ರದರ್ಶನಕ್ಕೆ ಭೇಟಿ ನೀಡಿದ್ದರು ಮತ್ತು ಸಿಎಸ್ ಐಆರ್- ಸಿಎಂಇಆರ್ ಐ ತಂತ್ರಜ್ಞಾನಗಳ ಬಗ್ಗೆ ವಿಶೇಷವಾಗಿ ಶುಂಠಿ-ಅರಿಶಿನ ಸಂಸ್ಕರಣಾ ಘಟಕ, ಸೌರ ಆಧಾರಿತ ಹೈಬ್ರಿಡ್ ಮಿನಿ ಗ್ರಿಡ್ ಮತ್ತು ಘನ ತ್ಯಾಜ್ಯ ವಿಲೇವಾರಿ ತಂತ್ರಜ್ಞಾನಗಳ ಬಗ್ಗೆ ವಿಶೇಷ ಆಸಕ್ತಿ ತೋರಿದರು. ಮೇಘಾಲಯವನ್ನು ಸಬಲೀಕರಣಗೊಳಿಸಲು ಮತ್ತು ಸುಸ್ಥಿರಗೊಳಿಸಲು ಸಿಎಸ್ ಐಆರ್- ಸಿಎಂಇಆರ್ ಐ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಅವಕಾಶಗಳ ಬಗ್ಗೆ ರಾವ್ ಆಸಕ್ತಿ ತೋರಿದರು. ಮೇಘಾಲಯದ ರಿ-ಭೋಯ್ ರೈತ ಒಕ್ಕೂಟದ ಜಂಟಿ ಕಾರ್ಯದರ್ಶಿ ಶ್ರೀ ಸಂಜಿಬ್ ಧರ್ , ಸಿಎಸ್ ಐಆರ್-ಸಿಎಂಇಆರ್ ಐನ ಶುಂಠಿ-ಅರಿಶಿನ ಸಂಸ್ಕರಣಾ ತಂತ್ರಜ್ಞಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಿಎಸ್ ಐಆರ್-ಸಿಎಂಇಆರ್ ಐನ ಸುಸ್ಥಿರ ಪರಿಕಲ್ಪನೆಗಳು ಮತ್ತು ಕೃಷಿ ತಾಂತ್ರಿಕ ಪ್ರಗತಿಯ ಬಗ್ಗೆ ಹೆಚ್ಚಿನ ಸಂಗತಿಗಳನ್ನು ಅರಿತುಕೊಳ್ಳಲು ಮತ್ತು ಮೇಘಾಲಯದ ಕೃಷಿ ಸಮುದಾಯಕ್ಕೆ ಅದನ್ನು ತಿಳಿಸಿಕೊಡಲು ತಾವು ದುರ್ಗಾಪುರದ ಸಿಎಸ್ ಐಆರ್- ಸಿಎಂಇಆರ್ ಐಗೆ ಭೇಟಿ ನೀಡುವ ಉದ್ದೇಶ ಹೊಂದಿರುವುದಾಗಿ ಅವರು ತಿಳಿಸಿದರು. ಮೇಘಾಲಯದ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯ ನಿರ್ದೇಶಕರು ಮತ್ತು ಅವರ ತಂಡ ಸಿಎಸ್ಐಆರ್-ಸಿಎಂಇಆರ್ ಐ ಅಧಿಕಾರಿಗಳೊಂದಿಗೆ ಚರ್ಚಿಸಿ ಮೇಘಾಲಯದಲ್ಲಿ ಸಿಎಸ್ಐಆರ್-ಸಿಎಂಇಆರ್ ಐ ತಂತ್ರಜ್ಞಾನಗಳ ಅನುಷ್ಠಾನ, ನವೋದ್ಯಮಗಳ ಸಂಪೋಷಣೆ, ಕೌಶಲ್ಯಾಭಿವೃದ್ಧಿ ಮತ್ತು ಸಂಶೋಧನಾ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕುವ ಅವಕಾಶಗಳು ಹಾಗು ಅನ್ವೇಷಿಸುವ ಬಗ್ಗೆ ಸಮಾಲೋಚಿಸಿದರು.
ಈಶಾನ್ಯ ಮಂಡಳಿಯ ನಿರ್ದೇಶಕರಾದ ಡಾ.ಅತನು ಸಹಾ, ಸಿಎಸ್ ಐಆರ್- ಸಿಎಂಇಆರ್ ಐ ನ ತಂತ್ರಜ್ಞಾನಗಳು ಮತ್ತು ಅವುಗಳನ್ನು ಈಶಾನ್ಯ ರಾಜ್ಯಗಳ ಸಹಕಾರದೊಂದಿಗೆ ಅಯಾ ರಾಜ್ಯಗಳಲ್ಲಿ ನಿಯೋಜಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಿದರು. ಅಲ್ಲದೆ, ಸಹಾ ಅವರು, ಈಶಾನ್ಯ ರಾಜ್ಯಗಳಲ್ಲಿ ಆ ತಂತ್ರಜ್ಞಾನಗಳನ್ನು ಅನುಷ್ಠಾನಗೊಳಿಸುವ ಮಾರ್ಗಗಳ ಬಗ್ಗೆ ಅನ್ವೇಷಿಸಲು ಮಂಡಳಿಯ ನಿರ್ದೇಶಕರಿಗೆ ವಿವರವಾದ ತಾಂತ್ರಿಕ ಪ್ರಸ್ತಾವಗಳನ್ನು ಕಳುಹಿಸುವಂತೆ ಸಿಎಸ್ ಐಆರ್-ಸಿಎಂಇಆರ್ ಐಗೆ ಮನವಿ ಸಲ್ಲಿಸಿದರು.
***
(Release ID: 1711163)
Visitor Counter : 178