ಜಲ ಶಕ್ತಿ ಸಚಿವಾಲಯ

ಜಲ ಜೀವನ್ ಮಿಷನ್: 2021-22 ನೇ ಸಾಲಿಗೆ ರಾಜ್ಯವಾರು ಯೋಜನಾ ಪರಿಶೀಲನೆ ಆರಂಭ


ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ವಾರ್ಷಿಕ ಉದ್ದೇಶಿತ ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸಲು ಒಂದು ತಿಂಗಳ ಕಾರ್ಯಕ್ರಮ

ಗ್ರಾಮೀಣ ಪ್ರದೇಶಗಳ ಮನೆ-ಮನೆಗೆ ಕೊಳಾಯಿ ಮೂಲಕ ನೀರು ಪೂರೈಕೆ ಮಾಡಲು 2021-22ರಲ್ಲಿ ದೇಶಾದ್ಯಂತ 1 ಲಕ್ಷ ಕೋಟಿ ರೂ.ಗಿಂತಲೂ ಅಧಿಕ ಹೂಡಿಕೆ ಮಾಡಲು ಯೋಜಿಸಲಾಗಿದೆ

Posted On: 08 APR 2021 4:22PM by PIB Bengaluru

2024 ವೇಳೆಗೆ ಪ್ರತಿ ಗ್ರಾಮೀಣ ಮನೆಗೆ ಕೊಳಾಯಿ ನೀರಿನ ಸಂಪರ್ಕ (ಎಫ್ಎಚ್ಟಿಸಿ) ಒದಗಿಸು ಗುರಿಯೊಂದಿಗೆ ಆಗಸ್ಟ್ 15, 2019 ರಂದು ಘೋಷಿಸಲಾದ  ʻಜಲ ಜೀವನ್ ಮಿಷನ್ - ಹರ್ ಘರ್ ಲ್‌ʼ ಯೋಜನೆಯ ಮೂರನೇ ವರ್ಷದ ಅನುಷ್ಠಾನಕ್ಕೆ ನಾವು ಕಾಲಿರಿಸಿದ್ದೇವೆ. 2021-22 ಸಾಲಿನಲ್ಲಿ ಇದಕ್ಕಾಗಿ 50,011 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ. ಹಿನ್ನೆಲೆಯಲ್ಲಿ ಜಲ ಶಕ್ತಿ ಸಚಿವಾಲಯವು 2021 ಏಪ್ರಿಲ್ 9 ರಿಂದ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶದೊಂದಿಗೆ ʻರಾಷ್ಟ್ರೀಯ ಜಲ ಜೀವನ್ ಮಿಷನ್ʼ ವಾರ್ಷಿಕ ಯೋಜನಾ ಪರಿಶೀಲನೆಯನ್ನು ಆರಂಭಿಸಲು ಸಜ್ಜಾಗಿದೆ. ಒಂದು ತಿಂಗಳ ಅವಧಿಯ ಕಾರ್ಯಕ್ರಮವನ್ನು ಪ್ರತಿದಿನ ಎರಡು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗ ಉದ್ದೇಶಿತ ವಾರ್ಷಿಕ ಕ್ರಿಯಾಯೋಜನೆಗಳ (ಎಎಪಿ) ಕಠಿಣ ಪರಿಶೀಲನೆ ಮೂಲಕ ಕೈಗೊಳ್ಳಲಾಗುತ್ತದೆ. ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಸಿದ್ಧಪಡಿಸಿರುವ ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸುವ ಮೊದಲು ʻಕುಡಿಯುವ ನೀರು ಪೂರೈಕೆ ಇಲಾಖೆʼ (ಡಿಡಬ್ಲ್ಯೂಎಸ್‌) ಕಾರ್ಯದರ್ಶಿಗಳ ನೇತೃತ್ವದ, ವಿವಿಧ ಕೇಂದ್ರ ಸಚಿವಾಲಯಗಳು/ ಇಲಾಖೆಗಳು ಹಾಗೂ ನೀತಿ ಆಯೋಗದ ಇತರ ಸದಸ್ಯರನ್ನು ಒಳಗೊಂಡ ಸಮಿತಿಯು ಕಠಿಣ ಪರಿಶೀಲನೆಗೆ ಒಳಪಡಿಸಲಿದೆ. ನಂತರ, ವರ್ಷವಿಡೀ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.  ಜೊತೆಗೆ, ʻಜಲ ಜೀವನ್ ಮಿಷನ್‌ʼ ಗುರಿ ಸಾಧನೆಯ ನಿಟ್ಟಿನಲ್ಲಿ ವಾರ್ಷಿಕ ಕ್ರಿಯಾ ಯೋಜನೆಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ನಿಯಮಿತವಾಗಿ ಕ್ಷೇತ್ರ ಭೇಟಿಗಳು, ಪರಿಶೀಲನಾ ಸಭೆಗಳನ್ನು ನಡೆಸಲಾಗುತ್ತದೆ.

2021-22 ಆರ್ಥಿಕ ವರ್ಷ ಆರಂಭವಾಗಿರುವ ಹಿನ್ನೆಲೆಯಲ್ಲಿ, ವಾರ್ಷಿಕ ಕ್ರಿಯಾ ಯೋಜನೆಗಳನ್ನು (ಎಎಪಿಗಳು) ಅಂತಿಮಗೊಳಿಸುವ ಕಠಿಣ ಜಂಟಿ ಪರಿಶೀಲನಾ ಅಭ್ಯಾಸವು ಏಪ್ರಿಲ್    9 ರಿಂದ ಶುರುವಾಗಲಿದೆ.  ಹಾಲಿ ವರ್ಷವು ʻಜಲ ಜೀವನ ಮಿಷನ್‌ʼ ಪಾಲಿಗೆ ಬಹಳ ನಿರ್ಣಾಯಕವಾಗಿದೆ. ಇದಕ್ಕಾಗಿ ಕಠಿಣ ದತ್ತಾಂಶ ವಿಶ್ಲೇಷಣೆ, ಕಳೆದ ಎರಡು ವರ್ಷಗಳ ಪ್ರಗತಿ ಆಧಾರದ ಮೇಲೆ ಕಾಮಗಾರಿಯನ್ನು ಅನುಷ್ಠಾನಗೊಳಿಸುವ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಸಾಮರ್ಥ್ಯ, ಅವುಗಳ ಸನ್ನದ್ಧತೆ ಮುಂತಾದವುಗಳನ್ನು ಆಧರಿಸಿದ ತೀವ್ರ ತೆರನಾದ ಯೋಜನೆಯ ಅಗತ್ಯವಿದೆ. ಯೋಜನೆ ಅನುಷ್ಠಾನ ಸಮಯದಲ್ಲಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು - ಕಳಪೆ ನೀರಿನ ಗುಣಮಟ್ಟ ಪ್ರದೇಶಗಳು, ಬರಪೀಡಿತ ಮತ್ತು ಮರುಭೂಮಿ ಪ್ರದೇಶಗಳ ಗ್ರಾಮಗಳು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸಂಖ್ಯಾಬಾಹುಳ್ಯವಿರುವ ಗ್ರಾಮಗಳು, ತೀವ್ರವಾದ ಮಸ್ತಿಷ್ಕೋದ್ರೇಕ (ಜಾಪನೀಸ್ಎನ್ಸಫಲೈಟಿಸ್‌-ಅಕ್ಯೂಟ್ಎನ್ಸಫಲೈಟಿಸ್ಸಿಂಡ್ರೋಮ್‌ - ಜೆಇ-ಎಇಎಸ್‌) ಎಂದು ಕರೆಯಲಾಗುವ ಒಂದು ಬಗೆಯ ಮೆದುಳಿನ ಉರಿಯೂತ ಸಮಸ್ಯೆ) ಬಾಧಿತ 60 ಮತ್ತು 117 ಮಹತ್ವಾಕಾಂಕ್ಷೆಯ ಜಿಲ್ಲೆಗಳು ಹಾಗೂ ಸಂಸದರ ಆದರ್ಶ ಗ್ರಾಮ ಯೋಜನೆ ಗ್ರಾಮಗ ಎಲ್ಲಾ ಮನೆಗಳಿಗೆ ಕಾಲಮಿತಿಯೊಳಗೆ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಲು ಆದ್ಯತೆ ನೀಡಬೇಕಾಗಿದೆ.

 ಜಲ ಜೀವನ ಮಿಷನ್ಗೆ 50,000 ಕೋಟಿ ರೂ.ಗಳ ಆಯವ್ಯಯ ಹಂಚಿಕೆಯ ಜೊತೆಗೆ, ನೀರು ಮತ್ತು ನೈರ್ಮಲ್ಯಕ್ಕಾಗಿ ಸ್ಥಳೀಯ ಸಂಸ್ಥೆಗಳು/ಗ್ರಾಪ ಪಂಚಾಯತ್ಗಳಿಗೆ ಆಯಾ ರಾಜ್ಯಗಳ ಪಾಲಿಗೆ ತಕ್ಕಂತೆ  15ನೇ ಹಣಕಾಸು ಆಯೋಗದ ಅಡಿಯಲ್ಲಿ ಹಾಗೂ ಬಾಹ್ಯ ನೆರವಿನ ಯೋಜನೆಗಳ ಭಾಗವಾಗಿ 26,940 ಕೋಟಿ ರೂ.ಗಳ ಖಚಿತ ನಿಧಿ  ಲಭ್ಯವಿದೆ. ಹೀಗಾಗಿ, 2021-22 ಅವಧಿಯಲ್ಲಿ ಗ್ರಾಮೀಣ ಮನೆಗಳಿಗೆ ನಲ್ಲಿ ನೀರು ಪೂರೈಕೆಯನ್ನು ಖಾತರಿಪಡಿಸಲು ದೇಶಾದ್ಯಂತ 1 ಲಕ್ಷ ಕೋಟಿ ರೂ.ಗಿಂತಲೂ ಅಧಿಕ ಹೂಡಿಕೆ ಮಾಡಲು ಯೋಜಿಸಲಾಗಿದೆ. ʻಹರ್ ಘರ್ ಜಲ್ʼ ಸಾಧನೆಗಾಗಿ ಮೂರು ವರ್ಷಗಳವರೆಗೆ ರೀತಿಯ ಹೂಡಿಕೆ ಮುಂದುವರಿಯುವ ಸಾಧ್ಯತೆಯಿದೆ.

ಶೇ. 100ರಷ್ಟು ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸುವ ಮತ್ತು ಒಟ್ಟಾರೆ ಕುಡಿಯುವ ನೀರಿನ ಭದ್ರತೆಯನ್ನು ಸಾಧಿಸುವ ಗುರಿಯೊಂದಿಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ರಾಜ್ಯ ಕ್ರಿಯಾ ಯೋಜನೆಯನ್ನು ತಯಾರಿಸುತ್ತವೆ. ಇದೊಂದು ನಿಯಂತ್ರಕ ಯೋಜನೆಮಾಸ್ಟರ್ಪ್ಲಾನ್‌ʼ) ಆಗಿದ್ದು, ನಿಗದಿತ ಗುರಿಯನ್ನು ಸಾಧಿಸಲು ಮಾರ್ಪಡಿಸಬೇಕಾದ ಹಳೆಯ ಯೋಜನೆಗಳು/ ಅನುಷ್ಠಾನಗೊಳಿಸಬೇಕಾದ ಹೊಸ ಯೋಜನೆಗಳು, ಯೋಜನೆಗಳ ಆರಂಭ ಮತ್ತು ಮುಕ್ತಾಯದ ಗಡುವು ಸೇರಿದಂತೆ ವಿಸ್ತೃತವಾದ ವಿವರಗಳನ್ನು ಅದು ಒಳಗೊಂಡಿರುತ್ತದೆ. ಇದು ಸಂಯೋಜನೆಯ ಮೂಲಗಳನ್ನು ಗುರುತಿಸುವ ಜೊತೆಗೆ, ನೀರಿನ ಪೂರೈಕೆಯ ನೈಜ ಸಮಯದ ಮೇಲ್ವಿಚಾರಣೆ ಮತ್ತು ಅಳತೆಗಾಗಿ ಸೆನ್ಸರ್ ಆಧಾರಿತ ಐಒಟಿ(ಇಂಟರ್ನೆಟ್ಆಫ್ಥಿಂಗ್ಸ್‌) ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುತ್ತದೆ; ರಾಜ್ಯಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ನೀತಿ (&ಎಂ ನೀತಿ)ಯನ್ನು ದೃಢಪಡಿಸುತ್ತದೆ, ಮಾಹಿತಿ ಶಿಕ್ಷಣ ಸಂವಹನ/ವರ್ತನೆಯ ಬದಲಾವಣೆ ಸಂವಹನ (ಐಇಸಿ/ಬಿಸಿಸಿ),  ನೀರಿನ ಗುಣಮಟ್ಟ ಮೇಲ್ವಿಚಾರಣೆ ಮತ್ತು ಕಣ್ಗಾವಲು ಚಟುವಟಿಕೆಗಳನ್ನು ತೀವ್ರಗೊಳಿಸುತ್ತದೆ.

ಉದ್ದೇಶಿತ ಕ್ರಿಯಾ ಯೋಜನೆಯು (2021-22) ʻಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿʼಗಳು (ವಿಡಬ್ಲ್ಯುಎಸ್ಸಿಗಳು)/ʻಪಾನಿ ಸಮಿತಿʼಗಳ ಬಲವರ್ಧನೆ, ಕುಡಿಯುವ ನೀರಿನ ಮೂಲ ಬಲವರ್ಧನೆ, ನೀರು ಸರಬರಾಜು ಮೂಲಸೌಕರ್ಯ, ತ್ಯಾಜ್ಯ ನೀರಿನ ಸಂಸ್ಕರಣೆ ಮತ್ತು ಮರುಬಳಕೆ, ಮತ್ತು ಹಳ್ಳಿಯಲ್ಲಿ ನೀರು ಸರಬರಾಜು ವ್ಯವಸ್ಥೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕುರಿತಾದ ಅಂಶಗಳನ್ನು ಒಳಗೋಂಡ ʻಗ್ರಾಮ ಗ್ರಾಮ ಕ್ರಿಯಾ ಯೋಜನೆಗಳ (ವಿಎಪಿ) ಸಿದ್ಧತೆ ಹಾಗೂ ಅನುಮೋದನೆಯಂತಹ ಸಹಾಯಕ ಚಟುವಟಿಕೆಗಳಿಗೆ ಮತ್ತಷ್ಟು ಒತ್ತು ನೀಡುತ್ತದೆ. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ತೀವ್ರ ತೆರನಾದ ತರಬೇತಿ ಮತ್ತು ಕೌಶಲ್ಯ ಕಾರ್ಯಕ್ರಮಗಳನ್ನೂ ಯೋಜಿಸಬೇಕು. ವಿಶೇಷವಾಗಿ ನೀರಿನ ಗುಣಮಟ್ಟದ ನಿಗಾಕ್ಕೆ ಮತ್ತು ಸ್ಥಳೀಯ ಸಮುದಾಯದ ಸದಸ್ಯರನ್ನು ಮೇಸ್ತ್ರಿಗಳು, ಪ್ಲಂಬರ್ಗಳು, ಎಲೆಕ್ಟ್ರಿಷಿಯನ್ಗಳು, ಮೋಟಾರು ಮೆಕ್ಯಾನಿಕ್ಗಳು, ಫಿಟ್ಟರ್, ಪಂಪ್ಆಪರೇಟರ್ಳಾಗಿ ಬಳಸಿಕೊಳ್ಳಲು ಪ್ರತಿ ಗ್ರಾಮದಲ್ಲಿ 5 ಜನರನ್ನು ತರಬೇತುಗೊಳಿಸಬೇಕು.

ಜಲ ಜೀವನ್ಮಿಷನ್ಅಡಿಯಲ್ಲಿ ಶಾಲೆಗಳು, ಅಂಗನವಾಡಿ ಕೇಂದ್ರಗಳು (ಎಡಬ್ಲ್ಯುಸಿ) ಮತ್ತು ಆಶ್ರಮಶಾಲೆಗಳಲ್ಲಿ ಕೊಳಾಯಿ ನೀರಿನ ಸಂಪರ್ಕವನ್ನು ಒದಗಿಸುವ ವಿಶೇಷ ಅಭಿಯಾನಕ್ಕೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಹಲವು ರಾಜ್ಯಗಳು ಎಲ್ಲಾ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ 100% ಗುರಿ ಸಾಧನೆಯನ್ನು ವರದಿ ಮಾಡುತ್ತಿವೆ. ಉಳಿದ ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಅಂಗನವಾಡಿ ಕೇಂದ್ರಗಳಲ್ಲಿ ಕುಡಿಯಲು, ಮಧ್ಯಾಹ್ನದ ಊಟದ ತಯಾರಿಗೆ, ಕೈ ತೊಳೆಯಲು ಮತ್ತು ಶೌಚಾಲಯಗಳಲ್ಲಿ ಬಳಸಲು ಕೊಳಾಯಿ ಮೂಲಕ ನೀರು (ಪಿಡಬ್ಲ್ಯೂಎಸ್) ಒದಗಿಸುವಿಕೆಯನ್ನು ಪೂರ್ಣಗೊಳಿಸಬೇಕು. ಸಂಸ್ಥೆಗಳಲ್ಲಿ, ಮಳೆನೀರು ಕೊಯ್ಲು ಮತ್ತು ತ್ಯಾಜ್ಯ ನೀರಿನ ಮರುಬಳಕೆಯನ್ನು ದೊಡ್ಡ ಮಟ್ಟದಲ್ಲಿ ಉತ್ತೇಜಿಸಲಾಗುತ್ತಿದೆ. ಇದರಿಂ ನೀರಿನ ಭದ್ರತೆಗಾಗಿ ಹಾಗೂ  ಹಳ್ಳಿಗಳಲ್ಲಿ ಸುಧಾರಿತ ನೈರ್ಮಲ್ಯಕ್ಕಾಗಿ ನಮ್ಮ ಭವಿಷ್ಯದ ಪೀಳಿಗೆಯಲ್ಲಿ ಸಮಗ್ರ ನೀರಿನ ನಿರ್ವಹಣೆ ಮನೋಭಾವ ಬೆಳೆಸಲು ಅನುಕೂಲವಾಗುತ್ತದೆ.

ಇದಲ್ಲದೆ, ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಅವುಗಳ ಉತ್ತಮ ಭೌತಿಕ ಮತ್ತು ಆರ್ಥಿಕ ಪ್ರಗತಿ, ಕೊಳಾಯಿ ನೀರನ ಪೂರೈಕೆ ಯೋಜನೆಗಳ ಕಾರ್ಯನಿರ್ವಹಣೆ ಮತ್ತು ನಿಧಿಯನ್ನು ಬಳಸಿಕೊಳ್ಳುವ ಸಾಮರ್ಥ್ಯ ಆಧಾರದ ಮೇಲೆ ಕಾರ್ಯಕ್ಷಮತೆ ಪ್ರೋತ್ಸಾಹ ಧನವನ್ನು ಪಡೆಯುವ ಅವಕಾಶವನ್ನೂ ಹೊಂದಿವೆ. 2020-21ರಲ್ಲಿ ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ಸಿಕ್ಕಿಂ, ಗುಜರಾತ್ ಮತ್ತು ಹಿಮಾಚಲ ಪ್ರದೇಶ ಏಳು ರಾಜ್ಯಗಳು ಜಲ ಜೀವನ್ಮಿಷನ್ಅಡಿಯಲ್ಲಿ 465 ಕೋಟಿ ರೂ.ಗಳ ಕಾರ್ಯಕ್ಷಮತೆಯ ಪ್ರೋತ್ಸಾಹ ಧನವನ್ನು ಪಡೆದಿವೆ.

ಜಲ ಜೀವನ್ ಮಿಷನ್

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ವಾರ್ಷಿಕ ಕ್ರಿಯಾ ಯೋಜನೆಗಳನ್ನು (2021-22) ಅಂತಿಮಗೊಳಿಸಲು ಸಭೆಗಳ ಸಮಯಸೂಚಿ

ದಿನಾಂಕ

ನಿಗದಿತ ಸಮಯ

ವಾರ - 1

09.04.21(ಶುಕ್ರವಾರ)

ಲಡಾಖ್‌(ಬೆಳಗ್ಗೆ 10:30 -ಮಧ್ಯಾಹ್ನ 12:00)

 

10.04.21(ಶನಿವಾರ)

ತ್ರಿಪುರಾ (ಬೆಳಗ್ಗೆ 10:30 -ಮಧ್ಯಾಹ್ನ 12:00)

ಸಿಕ್ಕಿಂ(ಮಧ್ಯಾಹ್ನ 12:00 -01:30)

ವಾರ - 2

12.04.21(ಸೋಮವಾರ)

ಜಮ್ಮು ಮತ್ತು ಕಾಶ್ಮೀರ (ಬೆಳಗ್ಗೆ 10:30 -ಮಧ್ಯಾಹ್ನ 12:00)

ಹರಿಯಾಣ(ಮಧ್ಯಾಹ್ನ 12:00 -01:30)

13.04.21(ಮಂಗಳವಾರ)

 

ಒಡಿಶಾ(ಮಧ್ಯಾಹ್ನ 12:00 -01:30)

15.04.21(ಗುರುವಾರ)

ಜಾರ್ಖಂಡ್(ಬೆಳಗ್ಗೆ 10:30 -ಮಧ್ಯಾಹ್ನ 12:00)

ನಾಗಾಲ್ಯಾಂಡ್(ಮಧ್ಯಾಹ್ನ 12:00 -01:30)

16.04.21(ಶುಕ್ರವಾರ)

ಆಂಧ್ರಪ್ರದೇಶ(ಬೆಳಗ್ಗೆ 10:30 -ಮಧ್ಯಾಹ್ನ 12:00)

ಮಣಿಪುರ(ಮಧ್ಯಾಹ್ನ 12:00 -01:30)

17.04.21(ಶನಿವಾರ)

ಮಧ್ಯಪ್ರದೇಶ(ಬೆಳಗ್ಗೆ 10:30 -ಮಧ್ಯಾಹ್ನ 12:00)

ಕರ್ನಾಟಕ(ಮಧ್ಯಾಹ್ನ 12:00 -01:30)

ವಾರ - 3

19.04.21(ಸೋಮವಾರ)

ಪಂಜಾಬ್(ಬೆಳಗ್ಗೆ 10:30 -ಮಧ್ಯಾಹ್ನ 12:00)

ಮೇಘಾಲಯ(ಮಧ್ಯಾಹ್ನ 12:00 -01:30)

20.04.21(ಮಂಗಳವಾರ)

ಛತ್ತೀಸ್ಗಢ(ಬೆಳಗ್ಗೆ 10:30 -ಮಧ್ಯಾಹ್ನ 12:00)

ಅರುಣಾಚಲ ಪ್ರದೇಶ(ಮಧ್ಯಾಹ್ನ 12:00 -01:30)

22.04.21(ಗುರುವಾರ)

ಮಹಾರಾಷ್ಟ್ರ(ಬೆಳಗ್ಗೆ 10:30 -ಮಧ್ಯಾಹ್ನ 12:00)

ಕೇರಳ(ಮಧ್ಯಾಹ್ನ 12:00 -01:30)

23.04.21(ಶುಕ್ರವಾರ)

ಉತ್ತರ ಪ್ರದೇಶ

(ಬೆಳಗ್ಗೆ 10:30 - ಮಧ್ಯಾಹ್ನ 12:00)

ಬಿಹಾರ(ಮಧ್ಯಾಹ್ನ 12:00 -01:30)

 

ಉತ್ತರಾಖಂಡ

(ಮಧ್ಯಾಹ್ನ 02:30 – 04:00 ಗಂಟೆ)

24.04.21(ಶನಿವಾರ)

ರಾಜಸ್ಥಾನ(ಬೆಳಗ್ಗೆ 10:30 -ಮಧ್ಯಾಹ್ನ 12:00)

ಅಸ್ಸಾಂ(ಮಧ್ಯಾಹ್ನ 12:00 -01:30)

ವಾರ - 4

26.04.21(ಸೋಮವಾರ)

ತಮಿಳುನಾಡು(ಬೆಳಗ್ಗೆ 10:30 -ಮಧ್ಯಾಹ್ನ 12:00)

ಗುಜರಾತ್

(ಮಧ್ಯಾಹ್ನ 12:00 -01:30)

 

ಹಿಮಾಚಲ ಪ್ರದೇಶ

(ಮಧ್ಯಾಹ್ನ 02:30 – 04:00 ಗಂಟೆ)

27.04.21(ಮಂಗಳವಾರ)

ಪಶ್ಚಿಮ ಬಂಗಾಳ(ಬೆಳಗ್ಗೆ 10:30 -ಮಧ್ಯಾಹ್ನ 12:00)

ಮಿಜೋರಾಂ(ಮಧ್ಯಾಹ್ನ 12:00 -01:30)

28.04.21(ಬುಧವಾರ)

ಗೋವಾ(ಬೆಳಗ್ಗೆ 10:30 -11:30)

ಪುದುಚೆರಿ(ಬೆಳಗ್ಗೆ 11:30 -ಮಧ್ಯಾಹ್ನ 12:30)

ಅಂಡಮಾನ್‌ & ನಿಕೋಬಾರ್ದ್ವೀಪ (ಮಧ್ಯಾಹ್ನ 12:30 -01:30)

ತೆಲಂಗಾಣ(ಮಧ್ಯಾಹ್ನ 03:00 -04:00)

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯೋಜನೆಯನ್ನು ಘೋಷಿಸಿದ ಸಂದರ್ಭದಲ್ಲಿ, ʻಜಲ ಜೀವನ್ ಮಿಷನ್ʼ ಅನ್ನು ರಾಜ್ಯಗಳ ಸಹಭಾಗಿತ್ವದಲ್ಲಿ ಜಾರಿಗೆ ತರಲಾಗುವುದು ಹೇಳಿದ್ದರು. ಜೊತೆಗೆ  ನೀರನ್ನು ಪ್ರತಿಯೊಬ್ಬರಿಗೂ ಸಂಬಂಧಿಸಿದ ವ್ಯವಹಾರವನ್ನಾಗಿ ಮಾಡಬೇಕಾಗಿದೆ ಎಂದು ಪ್ರತಿಪಾದಿಸಿದ್ದರು.

ಮಾರ್ಚ್ 22, 2021ರಂದು ʻಜಲ ಶಕ್ತಿ ಅಭಿಯಾನʼ   2ನೇ ಆವೃತ್ತಿಯನ್ನು ಪ್ರಾರಂಭಿಸಿದ ಪ್ರಧಾನ ಮಂತ್ರಿಯವರು, ಮಳೆ ನೀರು ಎಲ್ಲಿ ಮತ್ತು ಯಾವಾಗ ಬೀಳುತ್ತದೆಯೋ ಅಲ್ಲಿಯೇ ಅದನ್ನು ಹಿಡಿಯುವಂತೆ ದೇಶದ ಜನತೆಗೆ ಕರೆ ನೀಡಿದರು. ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆಯನ್ನು ಒಳಗೊಳ್ಳುವ ಮತ್ತು ಸಹಭಾಗಿತ್ವದಲ್ಲಿ ಕೆಲಸ ಮಾಡುವ ಮೂಲಕ ಹಾಗೂ ಜಲಜೀವನ್ಮಿಷನ್ ಯೋಜನೆ ಸಿದ್ಧತೆ ಮತ್ತು ಯೋಜನಾ ಅನುಷ್ಠಾನವನ್ನು ಸಹಭಾಗಿತ್ವದ ರೀತಿಯಲ್ಲಿ ಮಾಡಬೇಕೆಂಬ ಪ್ರಧಾನಿಯವರ ದೃಷ್ಟಿಕೋನವನ್ನು ಸಾಕಾರಗೊಳಿಸುವುದೇ ವಾರ್ಷಿಕ ಯೋಜನಾ ಅಭ್ಯಾಸದ ಉದ್ದೇಶವಾಗಿದೆ.  ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ, ಸರಕಾರೇತರ ಸೇವಾ ಸಂಸ್ಥೆಗಳು(ಎನ್ಜಿ), ಸ್ವಯಂಸೇವಾ ಸಂಸ್ಥೆಗಳು, ಸ್ವ-ಸಹಾಯ ಗುಂಪುಗಳು ಮುಂತಾದವು ಅನುಷ್ಠಾನ ಸಹಾಯಕ ಸಂಸ್ಥೆಗಳಾಗಿ, ಸ್ಥಳೀಯ ಗ್ರಾಮ ಸಮುದಾಯಗಳನ್ನು ಬೆಂಬಲಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಇದಲ್ಲದೆ, 124 - ಹೆಸರಾಂತ ರಾಷ್ಟ್ರೀಯ ಮಟ್ಟದ ನ್ಜಿಒಗಳು, ಟ್ರಸ್ಟ್ಗಳು, ಪ್ರತಿಷ್ಠಾನಗಳು, ಸೇವಾ ಸಂಸ್ಥೆಗಳು ಮತ್ತು ವಿಶ್ವಸಂಸ್ಥೆಯ ಏಜೆನ್ಸಿಗಳು ಸಹ ʻಹರ್ ಘರ್ ಜಲ್ʼ ಗುರಿಯನ್ನು ಸಾಧಿಸುವಲ್ಲಿ ಕ್ಷೇತ್ರ ಪಾಲುದಾರರಾಗಿ ಕಾರ್ಯನಿರ್ವಹಿಸುವ ಮೂಲಕ ತಮ್ಮನ್ನು ತೊಡಗಿಸಿಕೊಂಡಿವೆ.

2021 ಫೆಬ್ರವರಿ 1ರಂದು ಬಜೆಟ್ ಮಂಡನೆಯ ಬಳಿಕ, ಮೂಲಸೌಕರ್ಯಕ್ಕೆ ಸಂಬಂಧಿತ ಎಲ್ಲ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಪ್ರಧಾನಿ ಕಾರ್ಯಸೂಚಿಯನ್ನು ನಿಗದಿಪಡಿಸಿದ್ದು, ಯೋಜನೆಗೆ ಸಂಬಂಧಿಸಿದ ಎಲ್ಲಾ ಪಾಲುದಾರರೊಂದಿಗೆ ಸಮಾಲೋಚನೆಯ ಮೂಲಕ ಇದನ್ನು ಪೂರೈಸುವಂತೆ ಸೂಚಿಸಿದ್ದಾರೆ.

  • ಪಾಲ್ಗೊಳ್ಳುವಿಕೆ ಖಾತರಿಯೊಂದಿಗೆ ಯೋಜನೆಯನ್ನು ತ್ವರಿತವಾಗಿ ಮತ್ತು ವ್ಯಾಪಕ ಮಟ್ಟದಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರಗಳು, ತಜ್ಞರು, ವಿಶ್ವಸಂಸ್ಥೆಯ ಏಜೆನ್ಸಿಗಳು, ವಲಯದ ಪಾಲುದಾರರು, ನ್ಜಿಒಗಳು ಮುಂತಾದ ವಿವಿಧ ಮಧ್ಯಸ್ಥಗಾರರ ಅಭಿಪ್ರಾಯಗಳನ್ನು ಪಡೆಯಲು ಫೆಬ್ರವರಿ 16 ಮತ್ತು 17 ರಂದು ವೆಬಿನಾರ್ನಡೆಸಲಾಗಿದ್ದು, ಪ್ರಧಾನಿ ಮೋದಿ ವೆಬಿನಾರ್ಉದ್ದೇಶಿಸಿ ಮಾತನಾಡಿದರು. ಜಲ ಜೀವನ್ಮಿಷನ್ಗೆ ಸಂಬಂಧಿಸಿದ ನಿರ್ದಿಷ್ಟ ಪಾಲುದಾರರೊಂದಿಗೆ ಕೇಂದ್ರ ಜಲಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಸಹಾಯಕ ಸಚಿವ ಶ್ರೀ ತರನ್ಲಾಲ್ ಕಟಾರಿಯಾ ಅವರು ಸಮಾಲೋಚನೆ ನಡೆಸಿದರು. ಇದಕ್ಕೆ ಮತ್ತಷ್ಟು ಒತ್ತು ನೀಡುವ ಸಲುವಾಗಿ, ಜಲ ಜೀವನ್ ಮಿಷನ್ ಕುರಿತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಸಚಿವರ ಜತೆ ವರ್ಚ್ಯುಯಲ್ಸಮಾವೇಶವನ್ನು ಸಹ ನಡೆಸಲಾಯಿತು. ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಸಾಮಾನ್ಯ ಗುರಿಯನ್ನು ಸಾಧಿಸಲು ಅಂದರೆ ಪ್ರತಿ ಮನೆಗೆ ಸುರಕ್ಷಿತ ಕೊಳವೆ ನೀರು ಪೂರೈಕೆಯ ಉದ್ದೇಶ ಸಾಧಿಸಲು ಒಗ್ಗಟ್ಟಿನಿಂದ ಕೆಲಸ ಮಾಡುವಂತಾಗುವುದು ಇದ ಉದ್ದೇಶವಾಗಿತ್ತು.

2019 ಆಗಸ್ಟ್ನಲ್ಲಿ ಯೋಜನೆ ಆರಂಭಿಸಿದಾಗಿನಿಂದ ಕೋವಿಡ್-19 ಸಾಂಕ್ರಾಮಿಕ, ಲಾಕ್ಡೌನ್ಗಳು ಮತ್ತು ಭಾರಿ ಸವಾಲುಗಳ ನಡುವೆಯೂ ಇದುವರೆಗೂ 4.07 ಕೋಟಿ ಗ್ರಾಮೀಣ ಕುಟುಂಬಗಳಿಗೆ ಕೊಳಾಯಿ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ. ಪ್ರಸ್ತುತ, 7.30 ಕೋಟಿಗೂ ಹೆಚ್ಚು ಅಂದರೆ 38% ಗ್ರಾಮೀಣ ಕುಟುಂಬಗಳು ನಲ್ಲಿಗಳ ಮೂಲಕ ಶುದ್ಧ ಕುಡಿಯುವ ನೀರನ್ನು ಪಡೆಯುತ್ತಿವೆ. ಪ್ರತಿ ಗ್ರಾಮೀಣ ಕುಟುಂಬಕ್ಕೆ ನಲ್ಲಿ ನೀರು ಸರಬರಾಜು ಒದಗಿಸುವ