ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಕೇಂದ್ರ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ಜಾರಿ ಕುರಿತ ಉನ್ನತ ಮಟ್ಟದ ಸಭೆ


ಶಾಲಾ ಶಿಕ್ಷಣದಲ್ಲಿ ಎನ್ ಇಪಿ ಅನುಷ್ಠಾನ ಯೋಜನೆ, ಸಾರ್ಥಕ್ಯೂ ಬಿಡುಗಡೆ ಮಾಡಿದ ಶ್ರೀ ರಮೇಶ್ ಪ್ರೋಖ್ರಿಯಾಲ್ ನಿಶಾಂಕ್

ಅಮೃತಮಹೋತ್ಸವ ಆಚರಣೆ ಭಾಗವಾಗಿ ‘ಗುಣಮಟ್ಟದ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಸಮಗ್ರ ಪ್ರಗತಿ’ (ಸಾರ್ಥಕ್ಯೂ) ಬಿಡುಗಡೆ

ಶಾಲಾ ಶಿಕ್ಷಣ ವಲಯದಲ್ಲಿ ಪರಿವರ್ತನಾ ಸುಧಾರಣೆಗಳನ್ನು ಕೈಗೊಳ್ಳಲು ಸಾರ್ಥಕ್ಯೂ ಅನ್ನು ಮಾರ್ಗದರ್ಶಕ ತಾರೆಯನ್ನಾಗಿ ಬಳಸಿಕೊಳ್ಳಲು ಶ್ರೀ ಪೋಖ್ರಿಯಾಲ್ ಕರೆ 

ಸಾರ್ಥಕ್ಯೂ ಯೋಜನೆ ಸಂವಾದಾತ್ಮಕ, ಹೊಂದಿಕೊಳ್ಳುವ ಮತ್ತು ಎಲ್ಲವನ್ನೂ ಒಳಗೊಂಡಿದೆ: ಶ್ರೀ  ಪೋಖ್ರಿಯಾಲ್

Posted On: 08 APR 2021 5:01PM by PIB Bengaluru

ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿಂದು ನೂತನ ರಾಷ್ಟ್ರೀಯ ಶಿಕ್ಷಣ ನೀತಿಎನ್ಇಪಿ2020 ಜಾರಿ ಕುರಿತು ಉನ್ನತ ಮಟ್ಟದ ಸಭೆ ನಡೆಯಿತು. ಉನ್ನತ ಶಿಕ್ಷಣ ಕಾರ್ಯದರ್ಶಿ ಶ್ರೀ ಅಮಿತ್ ಖರೆ, ಶಾಲಾ ಶಿಕ್ಷಣ ಕಾರ್ಯದರ್ಶಿ ಶ್ರೀಮತಿ ಅನಿತಾ ಕರ್ವಾಲ್ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು

2020 ಜುಲೈ 20ರಂದು ಹೊರಡಿಸಲಾಗಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ) 2020 ಗುರಿ ಮತ್ತು ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಾರ್ಯದಲ್ಲಿ ನೆರವು ನೀಡಲು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಗುಣಮಟ್ಟದ ಶಿಕ್ಷಣದ ಮೂಲಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಮಗ್ರ ಪ್ರಗತಿ(ಸಾರ್ಥಕ್ಯೂ) ಎಂಬ ಹೆಸರಿನ ಶಾಲಾ ಶಿಕ್ಷಣ ಸಲಹಾತ್ಮಕ ಅನುಷ್ಠಾನ ಯೋಜನೆಯನ್ನು ಅಭಿವೃದ್ಧಿಪಡಿಸಿದೆ. ಅನುಷ್ಠಾನ ಯೋಜನೆಯನ್ನು ಶಿಕ್ಷಣ ಸಚಿವರಾದ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಇಂದು ಬಿಡುಗಡೆ ಮಾಡಿದರು. ಭಾರತದ ಸ್ವಾತಂತ್ರ್ಯೋತ್ಸವದ 75 ವರ್ಷಗಳ ಅಮೃತ ಮಹೋತ್ಸವ ಆಚರಣೆಯ ಭಾಗವಾಗಿ ಇದನ್ನು ಸಿದ್ಧಪಡಿಸಲಾಗಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ 2020 ಕ್ರಿಯಾ ಯೋಜನೆಯನ್ನು ಒಂದು ವರ್ಷದೊಳಗೆ ಬಿಡುಗಡೆ ಮಾಡುವ ಮೂಲಕ ಮತ್ತೊಂದು ಮಹತ್ವದ ಸಾಧನೆಗೈಯ್ದಿದೆ.

ಯೋಜನೆಯನ್ನು ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿರುವ ಸ್ವರೂಪವನ್ನು ಮತ್ತು ಒಕ್ಕೂಟ ವ್ಯವಸ್ಥೆಯ ಆಶಯಗಳನ್ನು ಗಮನದಲ್ಲಿರಿಸಿಕೊಂಡು ರೂಪಿಸಲಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಯೋಜನೆಯನ್ನು ಸ್ಥಳೀಯ ಪರಿಸ್ಥಿತಿಗೆ ತಕ್ಕಂತೆ ಬದಲಾಯಿಸಿಕೊಂಡು ಮತ್ತು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಮಾರ್ಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಯೋಜನೆಯ ಅನುಷ್ಠಾನ, ಮುಂದಿನ 10 ವರ್ಷಗಳವರೆಗೆ ಎನ್ಇಪಿ ಜಾರಿಯ ಮಾರ್ಗಸೂಚಿಯನ್ನು ಹಾಕಿಕೊಡುತ್ತದೆ ಮತ್ತು ಯೋಜನೆಯ ಸುಗಮ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಇದು ಅತ್ಯಂತ ಮಹತ್ವದ್ದಾಗಿದೆ.

ಸಾರ್ಥಕ್ಯೂ ಅನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಸ್ವಾಯತ್ತ ಸಂಸ್ಥೆಗಳ ಜೊತೆ ವ್ಯಾಪಕ ಮತ್ತು ವಿಸ್ತೃತ ಸಮಾಲೋಚನೆ ಪ್ರಕ್ರಿಯೆ ಬಳಿಕ ಅಭಿವೃದ್ಧಿಪಡಿಸಲಾಗಿದ್ದು, ಅದಕ್ಕೆ ಎಲ್ಲ ಭಾಗೀದಾರರಿಂದ ಸಲಹೆಗಳನ್ನು ಸ್ವೀಕರಿಸಲಾಗಿತ್ತು. ಅವರುಗಳಿಂದ ಸುಮಾರು 7177 ಸಲಹೆಗಳು/ಮಾಹಿತಿಗಳನ್ನು ಸ್ವೀಕರಿಸಲಾಗಿತ್ತು. ಎನ್ಇಪಿ 2020 ನಾನಾ ಶಿಫಾರಸ್ಸುಗಳ ಕುರಿತು ಚರ್ಚಿಸಲು ಮತ್ತು ಅವುಗಳ ಅನುಷ್ಠಾನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ವಿಶೇಷವಾಗಿ   ಶಿಕ್ಷಕರ ಉತ್ಸವ ಶಿಕ್ಷಕ ಪರ್ವವನ್ನು 2020 ಸೆಪ್ಟೆಂಬರ್ 8 ರಿಂದ 25 ವರೆಗೆ ಆಯೋಜಿಸಲಾಗಿತ್ತು. ಅದರಲ್ಲಿ ಸುಮಾರು 15 ಲಕ್ಷ ಸಲಹೆಗಳನ್ನು ಸ್ವೀಕರಿಸಲಾಗಿತ್ತು

ಸಂದರ್ಭದಲ್ಲಿ ಮಾತನಾಡಿದ ಶ್ರೀ ರಮೇಶ್ ಪೋಖ್ರಿಯಾಲ್, ಶಾಲಾ ಶಿಕ್ಷಣ ವಲಯದಲ್ಲಿ ಪರಿವರ್ತನಾತ್ಮಕ ಸುಧಾರಣೆಗಳನ್ನು ಕೈಗೊಳ್ಳಲು ಯೋಜನೆಯನ್ನು ಮಾರ್ಗದರ್ಶಕ ತಾರೆಯನ್ನಾಗಿ ಬಳಸಿಕೊಳ್ಳಬೇಕು ಎಂದು ಎಲ್ಲ ಭಾಗೀದಾರರಿಗೆ ಕರೆ ನೀಡಿದರು. ನೂತನ ಶಿಕ್ಷಣ ನೀತಿಯಂತೆ ಯೋಜನೆ ಕೂಡ ಸಂವಾದಾತ್ಮಕ, ಹೊಂದಿಕೊಳ್ಳುವ ಮತ್ತು ಎಲ್ಲವನ್ನೂ ಒಳಗೊಂಡಿದೆ ಎಂದು ಅವರು ಹೇಳಿದರು. ಸಾರ್ಥಕ್ಯೂನಲ್ಲಿ ಪ್ರಮುಖವಾಗಿ ಗುರಿಗಳು, ಫಲಿತಾಂಶ ಮತ್ತು ಸಮಯದ ಚೌಕಟ್ಟುಗಳನ್ನು ವ್ಯಾಖ್ಯಾನಿಸಲಾಗಿದ್ದು, ಅಂದರೆ ಅದನ್ನು ಎನ್ಇಪಿಯ ಶಿಫಾರಸ್ಸುಗಳ ಜೊತೆ ಜೋಡಣೆ ಮಾಡಲಾಗಿದ್ದು, 297 ಕಾರ್ಯಗಳೊಂದಿಗೆ, ಜವಾಬ್ದಾರಿಯುತ ಸಂಸ್ಥೆಗಳೂ ಸೇರಿ 304 ಫಲಿತಾಂಶಗಳೊಂದಿಗ ಬೆಸೆಯಲಾಗಿದೆಯಾವ ವಿಧದಲ್ಲಿ ಉದ್ದೇಶಿತ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂಬ ಪ್ರಯತ್ನಗಳನ್ನು ಮಾಡಲಾಗಿದೆ. ಅದರಿಂದಾಗಿ ಹೊಸ ವ್ಯವಸ್ಥೆಯನ್ನು ಸೃಷ್ಟಿಸುವ ಬದಲು ಹಾಲಿ ಇರುವ ವ್ಯವಸ್ಥೆಯಲ್ಲೇ ಅವುಗಳನ್ನು ಮುಂದುವರಿಸಿಕೊಂಡು ಹೋಗಬಹುದಾಗಿದೆ. ಹಾಗಾಗಿ ಸಾರ್ಥಕ್ಯೂ ನೀತಿಯ ಉದ್ದೇಶ ಮತ್ತು ಸ್ಫೂರ್ತಿಯ ಬಗ್ಗೆ ನೋಡಿಕೊಳ್ಳಲಿದೆ ಮತ್ತು ಅದನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ.

ಸಾರ್ಥಕ್ಯೂ ಬದಲಾಗುತ್ತಿರುವ ಮತ್ತು ಕಾರ್ಯ ವಿಧಾನ ದಾಖಲೆಯನ್ನಾಗಿ ಸಿದ್ಧಪಡಿಸಲಾಗಿದ್ದು ಮತ್ತು ಅದು ವಿಸ್ತೃತವಾಗಿ ಸಲಹಾತ್ಮಕ ಮತ್ತು ಸೂಚಕ ಸ್ವರೂಪವನ್ನು ಹೊಂದಿದೆ ಮತ್ತು ಅದನ್ನು ಭಾಗಿದಾರರಿಂದ ಲಭ್ಯವಾಗುವ ಮಾಹಿತಿ/ಪ್ರತಿಕ್ರಿಯೆಗಳನ್ನು ಸ್ವೀಕರಿಸಿ ಕಾಲಕಾಲಕ್ಕೆ ಪರಿಷ್ಕರಿಸಲಾಗುವುದು.

ಸಾರ್ಥಕ್ಯೂ ಅನುಷ್ಠಾನದ ನಂತರ ಇಡೀ ಶಿಕ್ಷಣ ನೀತಿಯಲ್ಲಿ ಕೆಳಗಿನ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ:

  • ಶಾಲಾ ಶಿಕ್ಷಣ, ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ, ಶಿಕ್ಷಕರ ಶಿಕ್ಷಣ ಮತ್ತು ವಯಸ್ಕರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೊಸ ರಾಷ್ಟ್ರೀಯ ಮತ್ತು ರಾಜ್ಯ ಪಠ್ಯಕ್ರಮ ಚೌಕಟ್ಟು ನಿಗದಿ, ಅದು ಎನ್ಇಪಿಯ ಮನೋಭಾವ ಹೊಂದಿರಲಿದೆ ಮತ್ತು ಪಠ್ಯಕ್ರಮ ಸುಧಾರಣೆಗೆ  ಹಾದಿ ಸುಗಮಗೊಳಿಸಲಿದೆ.
  • ಒಟ್ಟು ಪ್ರವೇಶ ಪ್ರಮಾಣ(ಜಿಇಆರ್), ಒಟ್ಟಾರೆ ಪ್ರವೇಶ ಪ್ರಮಾಣ(ಎನ್ಇಆರ್) ಹೆಚ್ಚಳಕ್ಕೆ, ಎಲ್ಲ ಹಂತಗಳಲ್ಲಿ ಶಾಲೆ ತೊರೆಯುವವರ ಪ್ರಮಾಣ ಮತ್ತು  ಶಾಲೆಯಿಂದ ಹೊರಗುಳಿಯುವವರ, ಶಾಲೆಯನ್ನು ತೊರೆಯುವ ಮಕ್ಕಳ ಪ್ರಮಾಣ ತಗ್ಗಿಸಲು ನೆರವಾಗಲಿದೆ
  • ಮೂರನೇ ಗ್ರೇಡ್ ನಲ್ಲಿ ಸಂಖ್ಯಾಶಾಸ್ತ್ರ ಮತ್ತು ಮೂಲ ಸಾಕ್ಷರತೆ ಹಾಗು ಸಾರ್ವತ್ರಿಕ ಗುಣಮಟ್ಟ  ಹಾಗೂ ಇಸಿಸಿಇ ಲಭ್ಯತೆ ಹೆಚ್ಚಿಸುವುದು.
  • ಆರಂಭಿಕ ವರ್ಷಗಳಲ್ಲಿ ಮಾತೃಭಾಷೆ/ಸ್ಥಳೀಯ/ಪ್ರಾದೇಶಿಕ ಭಾಷೆಗಳ ಮೂಲಕ ಕಲಿಕೆ ಮತ್ತು ಬೋಧನೆಗೆ ಒತ್ತು ನೀಡಿ, ಎಲ್ಲ ಹಂತಗಳಲ್ಲಿ ಕಲಿಕಾ ಫಲಿತಾಂಶಗಳನ್ನು ಸುಧಾರಿಸುವುದು.
  • ಎಲ್ಲ ಹಂತಗಳಲ್ಲಿ ಪಠ್ಯ ಕ್ರಮಗಳಲ್ಲಿ ವೃತ್ತಿಪರ ಶಿಕ್ಷಣ, ಕ್ರೀಡೆ, ಕಲೆ, ಭಾರತೀಯ ಜ್ಞಾನ, 21ನೇ ಶತಮಾನದ ಕೌಶಲಗಳು, ಪೌರತ್ವದ ಮೌಲ್ಯಗಳು, ಪರಿಸರ ಸಂರಕ್ಷಣೆ, ಜಾಗೃತಿ ಮತ್ತಿತರ ಅಂಶಗಳನ್ನು ಸಂಯೋಜಿಸುವುದು.
  • ಎಲ್ಲ ಹಂತಗಳಲ್ಲಿ ಪ್ರಯೋಗಾತ್ಮಕ ಕಲಿಕೆಯನ್ನು ಪರಿಚಯಿಸುವುದು ಮತ್ತು ತರಗತಿಗಳ ಚಟುವಟಿಕೆಗಳಲ್ಲಿ ಶಿಕ್ಷಕರು ನವೀನ ಶಿಕ್ಷಣ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು.
  • ಮಂಡಳಿ ಪರೀಕ್ಷೆಗಳು ಮತ್ತು ಇತರೆ ಪ್ರವೇಶ ಪರೀಕ್ಷೆಗಳಲ್ಲಿ ಸುಧಾರಣೆಗಳನ್ನು ತರುವುದು.
  • ಉನ್ನತ ಗುಣಮಟ್ಟದ ಮತ್ತು ವೈವಿಧ್ಯಮಯವಾದ ಬೋಧನಾ-ಕಲಿಕಾ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸುವುದು.
  • ಪಠ್ಯ ಪುಸ್ತಕಗಳು ಪ್ರಾದೇಶಿಕ/ಸ್ಥಳೀಯ/ಮಾತೃ ಭಾಷೆಗಳಲ್ಲೇ ಲಭ್ಯವಾಗುವಂತೆ ಮಾಡುವುದು.
  • ಶಿಕ್ಷಕರ ಶಿಕ್ಷಣ ಕಾರ್ಯಕ್ರಮಗಳ ಗುಣಮಟ್ಟ ಸುಧಾರಿಸುವುದು.
  • ನಿರಂತರ ವೃತ್ತಿಪರ ಅಭಿವೃದ್ಧಿ ಮೂಲಕ ಹೊಸದಾಗಿ ನೇಮಕಗೊಂಡ ಶಿಕ್ಷಕರ ಗುಣಮಟ್ಟ ಸುಧಾರಿಸುವುದು ಮತ್ತು ಅವರ ಸಾಮರ್ಥ್ಯ ವೃದ್ಧಿಸುವುದು.
  • ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕಲಿಕೆಗೆ ಸುರಕ್ಷಿತ ಹಾಗೂ ಎಲ್ಲವನ್ನು ಒಳಗೊಂಡ  ಅನುಕೂಲಕರ ವಾತಾವರಣ ಸೃಷ್ಟಿಸುವುದು.
  • ಶಾಲೆಗಳ ನಡುವೆ ಸಂಪನ್ಮೂಲಗಳ ಹಂಚಿಕೆ ಮತ್ತು ಯಾವುದೇ ಅಡೆತಡೆ ಇಲ್ಲದಂತೆ ಮೂಲಸೌಕರ್ಯಗಳನ್ನು ಸುಧಾರಿಸುವುದು.
  • ಕಲಿಕಾ ಫಲಿತಾಂಶದಲ್ಲಿ ಏಕರೂಪದ ಮಾನದಂಡಗಳನ್ನು ಹೊಂದುವುದು ಮತ್ತು ರಾಜ್ಯಗಳಲ್ಲಿ ಎಸ್ಎಸ್ಎಗಳನ್ನು ಸ್ಥಾಪಿಸುವ ಮೂಲಕ ಆನ್ ಲೈನ್, ಪಾರದರ್ಶಕ ಸಾರ್ವಜನಿಕ ಬಹಿರಂಗ ವ್ಯವಸ್ಥೆಯನ್ನು ರೂಪಿಸುವುದು
  • ಶೈಕ್ಷಣಿಕ ಯೋಜನೆ ಮತ್ತು ಆಡಳಿತದಲ್ಲಿ ತಂತ್ರಜ್ಞಾನ ಸಂಯೋಜನೆ  ಮಾಡಿಕೊಳ್ಳುವುದು ಮತ್ತು ಐಸಿಟಿ ಲಭ್ಯತೆ ಹಾಗೂ ತರಗತಿಗಳಲ್ಲಿ ಗುಣಮಟ್ಟದ -ಪಠ್ಯ ಲಭ್ಯವಾಗುವಂತೆ ಮಾಡುವುದು.

'ಸಾರ್ಥಕ್ಯೂ' ನಮ್ಮ ವಿದ್ಯಾರ್ಥಿಗಳು ಮತ್ತು ಯುವಜನರು ವಿಭಿನ್ನ ರಾಷ್ಟ್ರೀಯ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸಲು ದಾರಿ ಮಾಡಿಕೊಡುವುದಲ್ಲದೆ, ರಾಷ್ಟ್ರೀಯ ಶಿಕ್ಷಣ ನೀತಿ 2020 ಭಾಗವಾಗಿರುವ ಭಾರತೀಯ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಮೈಗೂಡಿಸಿಕೊಂಡು 21ನೇ ಶತಮಾನದ ಕೌಶಲಗಳನ್ನು ಹೊಂದಲು ನೆರವಾಗುತ್ತದೆ. ಸಾರ್ಥಕ್ಯೂ ಅನುಷ್ಠಾನದಿಂದ 25 ಕೋಟಿ ವಿದ್ಯಾರ್ಥಿಗಳು 15 ಲಕ್ಷ ಶಾಲೆಗಳು, 94 ಲಕ್ಷ ಶಿಕ್ಷಕರು, ಶೈಕ್ಷಣಿಕ ಆಡಳಿತಗಾರರು, ಪೋಷಕರು ಸೇರಿದಂತೆ ಎಲ್ಲ ಭಾಗೀದಾರರಿಗೆ ಪ್ರಯೋಜನವಾಗಲಿದೆ. ಸಮಾನ ಮತ್ತು ನ್ಯಾಯುಯುತ ಸಮಾಜಕ್ಕೆ ಸಮುದಾಯದ ಶಿಕ್ಷಣ ಬೆನ್ನೆಲುಬಾಗಿದೆ ಎಂದು ಶ್ರೀ ಪೋಖ್ರಿಯಾಲ್ ಹೇಳಿದರು

***



(Release ID: 1710539) Visitor Counter : 316