ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕಾರ್ಯ ಸ್ಥಳ (ಸರ್ಕಾರಿ ಮತ್ತು ಖಾಸಗಿ)ಗಳಲ್ಲಿ  ಕೋವಿಡ್ ಲಸಿಕೆ ಕೇಂದ್ರಗಳನ್ನು ಕಾರ್ಯಾಚರಣೆಗೊಳಿಸಲು ಮಾರ್ಗಸೂಚಿ ನೀಡಿದ ಕೇಂದ್ರ ಸರ್ಕಾರ


2021ರ ಏಪ್ರಿಲ್ 11ರಿಂದ ಎಲ್ಲ ಕಾರ್ಯ ಸ್ಥಳಗಳಲ್ಲಿ 45 ವರ್ಷ ಅಥವಾ ಮೇಲ್ಪಟ್ಟವರಿಗೆ ಕಾರ್ಯಸ್ಥಳದ ಲಸಿಕಾ ಕೇಂದ್ರಗಳಲ್ಲಿಯೇ ಲಸಿಕೆ ನೀಡಿಕೆ

Posted On: 07 APR 2021 7:02PM by PIB Bengaluru

2021 ಏಪ್ರಿಲ್ 1 ರಿಂದ 45 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಎಲ್ಲಾ ನಾಗರಿಕರಿಗೆ ಕೋವಿಡ್-19 ಲಸಿಕೆ ನೀಡಿಕೆ ವಿಸ್ತರಿಸುವುದರೊಂದಿಗೆ, ಕೇಂದ್ರ ಸರ್ಕಾರ ಪ್ರವರ್ಗದ ನಾಗರಿಕರಿಗೆ ಲಸಿಕೆ ನೀಡುವುದನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆ ಇಟ್ಟಿದೆ, ಇವರಲ್ಲಿ ಗಣನೀಯ ಪ್ರಮಾಣದ ಜನರು ಆರ್ಥಿಕ ರಂಗದ ಸಂಘಟಿತ ವಲಯದಲ್ಲಿದ್ದು, ಕಚೇರಿಗಳಲ್ಲಿ (ಸರ್ಕಾರಿ ಮತ್ತು ಖಾಸಗಿ) ಅಥವಾ ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಔಪಚಾರಿಕ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ.

ಆರೋಗ್ಯ ಸಚಿವಾಲಯವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, 100ರಷ್ಟು ಅರ್ಹ ಮತ್ತು ಇಚ್ಛಿಸುವ ಫಲಾನುಭವಿಗಳಿರುವ ಸಂಘಟಿತ ವಲಯದ ಕಾರ್ಯ ಕ್ಷೇತ್ರಗಳಲ್ಲಿ (ಸಾರ್ವಜನಿಕ ಮತ್ತು ಖಾಸಗಿ ಎರಡೂ ಕಡೆ) ನೀಡಲು, ಇವುಗಳನ್ನು ಪ್ರಸಕ್ತ ಕೋವಿಡ್ ಲಸಿಕೆ ಕೇಂದ್ರ (ಸಿವಿಸಿ)ಗಳೊಂದಿಗೆ ಜೋಡಿಸಿ, ಕೋವಿಡ್ -19 ಲಸಿಕೆ ನೀಡಿಕೆ ಅಧಿವೇಶನವನ್ನು ಈಗ ಆಯೋಜಿಸಲು ತಿಳಿಸಿದೆ. ಉಪಕ್ರಮದಲ್ಲಿ ರಾಜ್ಯಗಳಿಗೆ ಬೆಂಬಲ ನೀಡಲು, ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದ್ದು, ಕೇಂದ್ರ ಆರೋಗ್ಯ ಕಾರ್ಯದರ್ಶಿಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದನ್ನು ತಿಳಿಯಪಡಿಸಿದ್ದಾರೆ. ಮಾರ್ಗಸೂಚಿಗಳು ಸೂಕ್ತ ಮಾಹಿತಿಯೊಂದಿಗೆ ರಾಜ್ಯ ಮತ್ತು ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಿಗೆ ಬೆಂಬಲ ನೀಡುತ್ತವೆ ಮತ್ತು ಅಂತಹ ಕಾರ್ಯ ಸ್ಥಳದಲ್ಲಿ (ಸಾರ್ವಜನಿಕ ಮತ್ತು ಖಾಸಗಿ ಎರಡೂ ಕಡೆ) ಲಸಿಕೆ ಅಧಿವೇಶಗಳನ್ನು ಆಯೋಜಿಸಲು ಮಾರ್ಗದರ್ಶನ ಮಾಡುತ್ತವೆ. ಅಂತಹ ಕಾರ್ಯ ಸ್ಥಳ ಲಸಿಕಾ ಕೇಂದ್ರಗಳನ್ನು 2021 ಏಪ್ರಿಲ್ 11ರಿಂದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಆರಂಭಿಸಬಹುದಾಗಿದೆ.

ಕಾರ್ಯ ಸ್ಥಳದಲ್ಲಿ ಲಸಿಕೆ ನೀಡಿಕೆ ಸಿದ್ಧತೆ ಆರಂಭಿಸಲು ಖಾಸಗಿ/ಸಾರ್ವಜನಿಕ ವಲಯದ ಉದ್ಯೋಗಿಗಳು ಮತ್ತು ಆಡಳಿತಮಂಡಳಿಯೊಂದಿಗೆ ಸಮಾಲೋಚಿಸಲೂ ರಾಜ್ಯಗಳಿಗೆ ಸೂಚಿಸಲಾಗಿದೆ.

ಭಾರತ ಸರ್ಕಾರವು, ಲಸಿಕೆ ಅಭಿಯಾನ ಹೆಚ್ಚು ವಾಸ್ತವಿಕ ಮತ್ತು ಫಲಾನುಭವಿಗಳಿಗೆ ಹೆಚ್ಚು ಅಂಗೀಕಾರಾರ್ಹ ಮತ್ತು ಉದ್ದೇಶ ಈಡೇರಿಸುವುದಾಗಿದೆ ಎಂಬುದನ್ನು ಖಾತ್ರಿಪಡಿಸಲುರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಆಡಳಿತದೊಂದಿಗೆ ಸತತ ಸಮಾಲೋಚನೆ ನಡೆಸುವುದನ್ನು ಮುಂದುವರಿಸಿದೆ.

ಮಾರ್ಗಸೂಚಿಗಳು ಕೆಳಕಂಡಂತಿವೆ:

ಕಾರ್ಯಸ್ಥಳ (ಸರ್ಕಾರಿ ಮತ್ತು ಖಾಸಗಿ) ದಲ್ಲಿ ಕೋವಿಡ್ -19 ಲಸಿಕೆ ನೀಡಿಕೆಗೆ ಮಾರ್ಗಸೂಚಿ

ಹಿನ್ನೆಲೆ:

  1. ಕೋವಿಡ್ 19 ಲಸಿಕೆ ನೀಡಿಕೆ ಕುರಿತ ರಾಷ್ಟ್ರೀಯ ತಜ್ಞರ ಸಮಿತಿ (ಎನ್..ಜಿ.ವಿ..ಸಿ.) ಶಿಫಾರಸುಗಳ ರೀತ್ಯ, ಆದ್ಯತೆಯ ಗುಂಪಿನ ಫಲಾನುಭವಿಗಳಿಗೆ ಕೋವಿಡ್ -19 ಲಸಿಕೆ ನೀಡಿಕೆಯ ವ್ಯಾಪ್ತಿಯನ್ನು 2021 ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟ ಎಲ್ಲ ಸಾಮಾನ್ಯ ಜನರಿಗೂ ವಿಸ್ತರಿಸಲಾಗಿದೆ.
  2. 45-59 ರೊಳಗಿನ ವಯೋಮಾನದ ಗಣನೀಯ ಸಂಖ್ಯೆಯ (ಕೆಲವು ಪ್ರಕರಣಗಳಲ್ಲಿ 65 ವರ್ಷಗಳವರೆಗೆ) ಜನರು ನಮ್ಮ ಆರ್ಥಿಕತೆಯ ಸಂಘಟಿತ ವಲಯದಲ್ಲಿದ್ದಾರೆ. ಅವರು ಕಚೇರಿಗಳು (ಸರ್ಕಾರಿ ಮತ್ತು ಖಾಸಗಿ), ಉತ್ಪಾದನೆ ಮತ್ತು ಸೇವಾ ಕ್ಷೇತ್ರ ಇತ್ಯಾದಿ ಉದ್ಯೋಗದಲ್ಲಿ ಔಪಚಾರಿಕವಾಗಿ ತೊಡಗಿಕೊಂಡಿದ್ದಾರೆ.
  3. ಕೋವಿಡ್ -19 ಲಸಿಕೆಯ ನೀಡಿಕೆ ಅಧಿವೇಶನಗಳನ್ನು ಕಾರ್ಯಕ್ಷೇತ್ರದಲ್ಲಿ ಆಯೋಜಿಸಬಹುದಾಗಿದ್ದು, ಅದರಿಂದ 100ರಷ್ಟು ಅರ್ಹ ಮತ್ತು ಆಸಕ್ತಿ ಇರುವ ಫಲಾನುಭವಿಗಳಿಗೆ (ಲಸಿಕೆ ಪ್ರಮಾಣವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ಮತ್ತು ವ್ಯರ್ಥವಾಗುವುನ್ನು ಕಡಿಮೆ ಮಾಡಲು) ಕೋವಿಡ್ 19 ಲಸಿಕೆ ನೀಡಬಹುದು. ಕಾರ್ಯಕ್ಷೇತ್ರದಲ್ಲಿ ಲಸಿಕೆ ನೀಡಿಕೆ ಕಾರ್ಯಕ್ರಮ ಆಯೋಜಿಸುವುದರಿಂದ ಕಾರ್ಯ ಸ್ಥಳದಲ್ಲಿಯೇ ಲಸಿಕೆ ಸಿಗುವುದಷ್ಟೇ ಅಲ್ಲ, ಅದು ಅವರು ಲಸಿಕೆಗಾಗಿ ಪ್ರಯಾಣ ಮಾಡುವುದನ್ನೂ ತಪ್ಪಿಸುತ್ತದೆ, ಮೂಲಕ ಕೋವಿಡ್ -19 ಸೋಂಕಿಗೆ ಒಳಗಾಗುವ ಅಪಾಯವನ್ನೂ ತಗ್ಗಿಸುತ್ತದೆ.

2.   ಕೋವಿಡ್ -19 ಲಸಿಕೆ ನೀಡಲು ಕಾರ್ಯ ಕ್ಷೇತ್ರಗಳ ಗುರುತಿಸುವಿಕೆ:

  1. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಕಾರ್ಯ ಪಡೆಗಳು (ಡಿಟಿಎಫ್) ಮತ್ತು ಪಾಲಿಕೆಗಳ ಆಯುಕ್ತರ ಅಧ್ಯಕ್ಷತೆಯ ನಗರ ಕಾರ್ಯ ಪಡೆ (ಯುಟಿಎಫ್)ಗಳು ಕಚೇರಿಗಳ ಮುಖ್ಯಸ್ಥರು/ ಅಥವಾ ಸಂಬಂಧಿತ ಉದ್ಯೋಗದಾತರುಗಳೊಂದಿಗೆ ಸೂಕ್ತ ಸಮಾಲೋಚನೆಯ ಬಳಿಕ ಅಂತಹ ಸರ್ಕಾರಿ ಮತ್ತು ಖಾಸಗಿ ಕಾರ್ಯ ಸ್ಥಳಗಳನ್ನು ಗುರುತಿಸುತ್ತವೆ.
  2. ಕಾರ್ಯಕ್ಷೇತ್ರ ನಿರ್ವಹಣೆಗಾಗಿ, ಜಿಲ್ಲಾ ಆರೋಗ್ಯ ಪ್ರಾಧಿಕಾರಗಳು/ಖಾಸಗಿ ಕೋವಿಡ್ ಲಸಿಕಾ ಕೇಂದ್ರ (ಸಿವಿಸಿಗಳು)ಗಳೊಂದಿಗೆ ಸಹಯೋಗಕ್ಕಾಗಿ ಮತ್ತು ಲಸಿಕೆ ಚಟುವಟಿಕೆಗೆ ಬೆಂಬಲ ನೀಡಲು ತಮ್ಮ ಒಬ್ಬ ಹಿರಿಯ ಸಿಬ್ಬಂದಿಯನ್ನು ನೋಡಲ್ ಅಧಿಕಾರಿಯಾಗಿಕಾರ್ಯ ನಿರ್ವಹಿಸಲು ನಿಯುಕ್ತಿಗೊಳಿಸಲಾಗುತ್ತದೆ.
  3. ನೋಡಲ್ ಅಧಿಕಾರಿ ಕಾರ್ಯ ಸ್ಥಳದಲ್ಲಿನ ಸಿವಿಸಿಯಲ್ಲಿ ಲಸಿಕೆ ನೀಡಿಕೆಯ ಎಲ್ಲ ಅಂಶಗಳು ಅಂದರೆ ಫಲಾನುಭವಿಗಳ ನೋಂದಣಿ, ಭೌತಿಕ ಮತ್ತು ಐಟಿ ಮೂಲಸೌಕರ್ಯದ ಲಭ್ಯತೆ ಮತ್ತು ಲಸಿಕೆ ಇತ್ಯಾದಿಯ ಬಗ್ಗೆ ನಿಗಾ ವಹಿಸಲಿದ್ದಾರೆ.
  1. ಅರ್ಹ ಮತ್ತು ಅಸಕ್ತಿ ಇರುವ ಫಲಾನುಭವಿಗಳನ್ನು ಕಾರ್ಯಸ್ಥಳದಲ್ಲಿ ಗುರುತಿಸುವುದು
  1. ಕಾರ್ಯ ಕ್ಷೇತ್ರದಲ್ಲಿ 45 ವರ್ಷ ಅಥವಾ ಮೇಲ್ಪಟ್ಟ ವಯಸ್ಸಿನ ಫಲಾನುಭವಿಗಳು ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ, ಕಾರ್ಯಸ್ಥಳದ ಲಸಿಕೆ ನೀಡಿಕೆ ಕೇಂದ್ರದಲ್ಲಿ ಕುಟುಂಬದ ಅರ್ಹ ಸದಸ್ಯರೂ ಸೇರಿದಂತೆ ಯಾವುದೇ ಹೊರಗಿನ ವ್ಯಕ್ತಿಗಳಿಗೆ ಅವಕಾಶ ಇರುವುದಿಲ್ಲ.
  2. ಫಲಾನುಭವಿಗಳು ಕೋ-ವಿನ್ ಪೋರ್ಟಲ್ ನಲ್ಲಿ ಲಸಿಕೆ ಪಡೆಯುವ ಮೊದಲು ನೋಂದಾಯಿಸಿಕೊಳ್ಳಲೇಬೇಕು. ಸಿವಿಸಿ ನೋಡಲ್ ಅಧಿಕಾರಿಗಳು ಎಲ್ಲ ನಿರ್ದಿಷ್ಟ ಫಲಾನುಭವಿಗಳ ಅಂದರೆ ಕಾರ್ಯಸ್ಥಳದ ಉದ್ಯೋಗಿಗಳಿಗೆ ಮಾತ್ರ ನೋಂದಣಿ ಮತ್ತು ಸ್ಥಳದಲ್ಲಿಯೇ ನೋಂದಣಿ ಮಾಡಿಕೊಳ್ಳುವ ಸೌಲಭ್ಯವನ್ನು ಖಾತ್ರಿಪಡಿಸಬೇಕು.
  1. ಕೋ-ವಿನ್ ನಲ್ಲಿ ಸಿವಿಸಿಯಾಗಿ ಕಾರ್ಯಸ್ಥಳದ ನೋಂದಣಿ
  1. ಒಮ್ಮೆ ಕಾರ್ಯಸ್ಥಳ ಗುರುತಿಸಿದ ಬಳಿಕ, ಎಲ್ಲ ಅಂತ ಕಾರ್ಯಸ್ಥಳ ಲಸಿಕೆ ಕೇಂದ್ರಗಳನ್ನು ಕೋವಿನ್ ಪೋರ್ಟಲ್ ನಲ್ಲಿ ಸರ್ಕಾರಿ ಅಥವಾ ಖಾಸಗಿ ಕೋವಿಡ್ -19 ಲಸಿಕೆ ನೀಡಿಕೆ ಕೇಂದ್ರ (ಸಿವಿಸಿ) ಎಂದು ನೋಂದಾಯಿಸಬೇಕು.
  2. ಕಾರ್ಯಸ್ಥಳ ಸಿವಿಸಿಯ ಹೆಸರನ್ನು ಕೋ-ವಿನ್ ನಲ್ಲಿ ಪೂರ್ಣ ಹೆಸರಾಗಿ ನೋಂದಾಯಿಸಬೇಕು ಮತ್ತು ಅದು ನಿಖರತೆಗಾಗಿ ಸಂಕ್ಷಿಪ್ತ ರೂಪವಾಗಿರಬಾರದು.
  3. ಡಿಟಿಎಫ್ /ಯುಟಿಎಫ್ ಗಳು ಕಾರ್ಯಕ್ಷೇತ್ರ ಲಸಿಕಾ ಕೇಂದ್ರದಲ್ಲಿ ನಿರೀಕ್ಷಣಾ ಕೋಣೆ, ಲಸಿಕೆ ಕೊಠಡಿ ಮತ್ತು ನಿಗಾ ಕೊಠಡಿ ಹೀಗೆ ಮೂರು ಕೊಠಡಿಗಳು ಲಭ್ಯವಿದೆ ಎಂಬುದನ್ನು ಖಾತ್ರಿಪಡಿಸಬೇಕು. (ಅನುಬಂಧ ನೋಡಿ)

1). ಕೊಠಡಿಗಳು ಕಾರ್ಯಕ್ಷೇತ್ರದ ಆವರಣದ ಶಾಶ್ವತ ಕಟ್ಟಡ ಭಾಗವಾಗಿರಬೇಕು ಅಥವಾ ಹ್ಯಾಂಗರ್ ಗಳಂತಹ ಸೂಕ್ತ ಮತ್ತು ಸ್ಥಿರ ವಿನ್ಯಾಸ ರೂಪಿಸಬೇಕು. ತಾತ್ಕಾಲಿಕ ಶ್ಯಾಮಿಯಾನ / ಡೇರೆಯಂತಹ ವಿನ್ಯಾಸ ಬಳಸುವಂತಿಲ್ಲ.

  1. ಒಮ್ಮೆ ಪರಿಶೀಲಿಸಿದ ತರುವಾಯ, ಡಿಐಓ ಕಾರ್ಯಸ್ಥಳದ ಸಿವಿಸಿಯಲ್ಲಿ ಕೋವಿನ್ ಪೋರ್ಟಲ್ ಮೂಲಕ ನೋಂದಣಿ ಖಾತ್ರಿಪಡಿಸಬೇಕು.  

 

  1. ಕಾರ್ಯಸ್ಥಳದ ಸಿವಿಸಿ ಮತ್ತು ಸಾರ್ವಜನಿಕ ಹಾಗೂ ಖಾಸಗಿ ಸಿವಿಸಿಗಳೊಂದಿಗೆ ಸಂಪರ್ಕ
  1. ಸರ್ಕಾರಿ ಕಾರ್ಯ ಸ್ಥಳದಲ್ಲಿ ಪ್ರತಿ ಸಿವಿಸಿಯನ್ನು ಸರ್ಕಾರಿ ವೈದ್ಯಕೀಯ ಸೌಲಭ್ಯದಲ್ಲಿ ಅಸ್ತಿತ್ವದಲ್ಲಿರುವ ಮತ್ತು ಹತ್ತಿರದ ಸಿವಿಸಿಗೆ ಜೋಡಣೆ ಮಾಡಲಾಗುತ್ತದೆ.
  2. ಖಾಸಗಿ ಕಾರ್ಯ ಸ್ಥಳದಲ್ಲಿನ ಪ್ರತಿ ಸಿವಿಸಿಯನ್ನು ಖಾಸಗಿ ವೈದ್ಯಕೀಯ ಸೌಲಭ್ಯದಲ್ಲಿ ಅಸ್ತಿತ್ವದಲ್ಲಿರುವ ಮತ್ತು ಹತ್ತಿರದ ಸಿವಿಸಿಗೆ ಜೋಡಣೆ ಮಾಡಲಾಗುತ್ತದೆ.
  3. ಕಾರ್ಯ ಸ್ಥಳ ಸಿವಿಸಿಯನ್ನು ಜೋಡಣೆ ಮಾಡಲಾಗಿರುವ ಗೊತ್ತು ಪಡಿಸಿದ ಸರ್ಕಾರಿ ಮತ್ತು ಖಾಸಗಿ ಸಿವಿಸಿ ಕಾರ್ಯಸ್ಥಳ ಸಿವಿಸಿಗಳಲ್ಲಿ ಲಸಿಕಾ ತಂಡವನ್ನು ನಿಯೋಜಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ.
  4. ಕಾರ್ಯ ಸ್ಥಳ ಸಿವಿಸಿಯನ್ನು ಜೋಡಣೆ ಮಾಡಲಾಗಿರುವ ಗೊತ್ತುಪಡಿಸಿದ ಸರ್ಕಾರಿ ಮತ್ತು ಖಾಸಗಿ ಸಿವಿಸಿಯ ಮೇಲ್ವಿಚಾರಕರು ಕಾರ್ಯಸ್ಥಳ ಸಿವಿಸಿಯಲ್ಲಿ ಲಸಿಕಾ ಅಧಿವೇಶನವನ್ನು ಯೋಜಿಸುತ್ತಾರೆ. ಸಂಪನ್ಮೂಲಗಳ ಅತ್ಯುತ್ತಮ ಬಳಕೆಗಾಗಿ, ಲಸಿಕಾ ಅಧಿವೇಶನವನ್ನು ಕಾರ್ಯ ಸ್ಥಳ ಸಿವಿಸಿಯಲ್ಲಿ ಕನಿಷ್ಠ 50 ಫಲಾನುಭವಿಗಳು ಲಸಿಕೆಗಾಗಿ ನೋಂದಾಯಿಸಿಕೊಂಡ ನಂತರ ಆಯೋಜಿಸಲಾಗುತ್ತದೆ.
  5. ಕೋವಿಡ್-19 ಲಸಿಕೆಗಾಗಿ ಕಾರ್ಯ ಸ್ಥಳ ಸಿವಿಸಿಗಳೊಂದಿಗೆ ಜೋಡಣೆ ಮಾಡಲಾದ ಸರ್ಕಾರಿ ಅಥವಾ ಖಾಸಗಿ ಸಿವಿಸಿಗಳ ಮೇಲ್ವಿಚಾರಕರುಗಳು ಲಸಿಕೆ ನೀಡಲು ಮತ್ತು ಕಾರ್ಯ ಕ್ಷೇತ್ರ ಸಿವಿಸಿಗಳಿಂದ ಕೋ-ವಿನ್‌ ನಲ್ಲಿ ವರದಿ ಮಾಡುವುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಜವಾಬ್ದಾರರಾಗಿರುತ್ತಾರೆ.
  6. ಲಸಿಕೆ ನೀಡಿಕೆ ಅಧಿವೇಶನದ ಕಾರ್ಯಕ್ರಮಪಟ್ಟಿಯನ್ನು 15 ದಿನಗಳ ಮುಂಚಿತವಾಗಿ ಮಾಡಿ, ಕಾರ್ಯ ಸ್ಥಳಗಳಿಗೆ ತಿಳಿಸಬೇಕು, ಇದರಿಂದ ಲಸಿಕೆ ನೀಡಿಕೆ ದಿನಗಳಂದು ಅತಿ ಹೆಚ್ಚು ಹಾಜರಾತಿಯನ್ನು ಖಾತ್ರಿಪಡಿಸಬಹುದು. ಬಹುತೇಕ ಕಾರ್ಯ ಕ್ಷೇತ್ರಗಳಲ್ಲಿ, ಲಸಿಕೆಯ ಕಾರ್ಯಕ್ರಮ 15 ದಿನಗಳ ಒಳಗಾಗಿ ಮುಗಿದುಹೋಗಬಹುದು.
  1. ಶೀತಲೀಕರಣ ಕೇಂದ್ರಗಳೊಂದಿಗೆ ಕಾರ್ಯಸ್ಥಳ ಸಿವಿಸಿಯ ಸಂಪರ್ಕ  
  1. ಎಲ್ಲ ಸರ್ಕಾರಿ ಮತ್ತು ಖಾಸಗಿ ಸಿವಿಸಿಗಳನ್ನು ಈಗಾಗಲೇ ಲಸಿಕೆಯನ್ನು ಪಡೆದುಕೊಳ್ಳಲು ಕೆಲವೊಂದು ಶೀತಲೀಕರಣ ಕೇಂದ್ರದೊಂದಿಗೆ ಸಂಪರ್ಕಿಸಲಾಗಿದೆ. ಸಿವಿಸಿಗಳು ಸಹ ತಮಗೆ ಜೋಡಣೆಯಾದ ಕಾರ್ಯಸ್ಥಳದ ಸಿವಿಸಿಯಲ್ಲಿ ಲಸಿಕೆಯ ಅಗತ್ಯಕ್ಕಾಗಿ ಇದೇ ವ್ಯವಸ್ಥೆಯನ್ನು ಲಸಿಕೆ ಪಡೆಯಬೇಕು.

 

  1. ಕಾರ್ಯ ಕ್ಷೇತ್ರ ಸಿವಿಸಿಗಳಲ್ಲಿ ಆರೋಗ್ಯ ಮೂಲಸೌಕರ್ಯ ಮತ್ತು ಆರೋಗ್ಯ ಆರೈಕೆ ಕಾರ್ಯಕರ್ತರ ನಿಯೋಜನೆ
  1. ಕೆಲವೊಂದು ಕಾರ್ಯಕ್ಷೇತ್ರಗಳು ಆಸ್ಪತ್ರೆ, ಆರೋಗ್ಯ ಕೇಂದ್ರ, ನರ್ಸಿಂಗ್ ಕೇಂದ್ರ ಇತ್ಯಾದಿ ಸ್ವರೂಪದ ಆರೋಗ್ಯ ಮೂಲಸೌಕರ್ಯಗಳನ್ನು ಹೊಂದಿರುತ್ತವೆ. ಇಲ್ಲಿ ನಿರೀಕ್ಷಣೆ, ಲಸಿಕೆ ನೀಡಿಕೆ ಮತ್ತು ನಿಗಾ ಕೊಠಡಿಗಳಿಗೆ ಸೂಕ್ತ ಸ್ಥಳಾವಕಾಶ ಇದ್ದಲ್ಲಿ ಮೂಲಸೌಕರ್ಯವನ್ನು ಲಸಿಕಾ ತಾಣವಾಗಿ ಬಳಸಬಹುದು. (ಅನುಬಂಧನೋಡಿ)
  2. ಕಾರ್ಯ ಕ್ಷೇತ್ರ ಸಿವಿಸಿಯ ಆರೋಗ್ಯ ಮೂಲಸೌಕರ್ಯಗಳ ಕಾರ್ಯಕರ್ತರು (ಅಂದರೆ ವೈದ್ಯರು, ದಾದಿಯರು ಮತ್ತು ಇತರ ಸಿಬ್ಬಂದಿ)ಗಳನ್ನು ಕೋವಿಡ್ -19 ಲಸಿಕೆ ನೀಡಿಕೆ ಚಟುವಟಿಕೆಗೆ ಲಸಿಕಾ ತಂಡದ ಸದಸ್ಯರಾಗಿ ನಿಯೋಜಿಸಬಹುದು.
  3. ಸರ್ಕಾರಿ ಅಥವಾ ಖಾಸಗಿ ಸಿವಿಸಿಯ ಮೇಲ್ವಿಚಾರಕರು ತಮಗೆ ಜೋಡಿಸಲಾಗಿರುವ ಕಾರ್ಯಕ್ಷೇತ್ರ ಸಿವಿಸಿಗಳಲ್ಲಿ ಕೋವಿಡ್ -19 ಲಸಿಕೆ ನೀಡಿಕೆಯ ಕಾರ್ಯಕ್ರಮಕ್ಕೆ ಆರೋಗ್ಯ ಕಾರ್ಯಕರ್ತರನ್ನು ನಿಯುಕ್ತಿಗೊಳಿಸುವ ಮೊದಲು ಅವರಿಗೆ ತರಬೇತಿ ಕೊಡಿಸುವುದಕ್ಕೆ ಜವಾಬ್ದಾರರಾಗಿರುತ್ತಾರೆ.
  4. ಕೋವಿಡ್ 19 ಲಸಿಕೆ ನೀಡಿಕೆ ಚಟುವಟಿಕೆಯಲ್ಲಿ ತೊಡಗಿಕೊಂಡ ಕಾರ್ಯಕ್ಷೇತ್ರ ಸಿವಿಸಿಗಳ ಸಿಬ್ಬಂದಿ ಸಹ ಲಸಿಕೆ ನೀಡಿಕೆಯ ಅದೇ ಎಸ್..ಪಿ.ಗಳನ್ನು ಅನುಸರಿಯಬೇಕು ಮತ್ತು ..ಎಫ್..ಗಳು ಮತ್ತ ನಿರ್ವಹಣೆ ಸೇರಿದಂತೆ ವರದಿ ಮಾಡಬೇಕು.
  1. ಕಾರ್ಯಕ್ಷೇತ್ರ ಸಿವಿಸಿಯಲ್ಲಿ ಲಸಿಕಾ ತಂಡದ ನಿಯೋಜನೆ
  1. ಜಿಲ್ಲಾ ಆರೋಗ್ಯ ಪ್ರಾಧಿಕಾರಗಳು ಸಾಮಾನ್ಯವಾಗಿ ಸರ್ಕಾರಿ ಕಾರ್ಯಕ್ಷೇತ್ರ ಸಿವಿಸಿಗಳಿಗೆ ಲಸಿಕಾ ತಂಡವನ್ನು ನಿಯೋಜಿಸುತ್ತಾರೆ. ಖಾಸಗಿ ಸಿವಿಸಿಗಳು ಖಾಸಗಿ ಕಾರ್ಯಕ್ಷೇತ್ರಕ್ಕೆ ತಮ್ಮ ಲಸಿಕಾ ತಂಡವನ್ನು ನಿಯೋಜಿಸುತ್ತವೆ.
  2. ಒಂದು ಸಂಪೂರ್ಣ ತರಬೇತಾದ ಲಸಿಕಾ ತಂಡವನ್ನು ಕಾರ್ಯಕ್ಷೇತ್ರ ಸಿವಿಸಿಯಲ್ಲಿ 100 ಫಲಾನುಭವಿಗಳಿಗೆ ಲಸಿಕೆ ನೀಡುವ ಜವಾಬ್ದಾರಿ ನೀಡಲಾಗುತ್ತದೆ. ಒಂದೊಮ್ಮೆ 100 ಫಲಾನುಭವಿಗಳಿಗಿಂತಲೂ ಹೆಚ್ಚಾಗಿದ್ದಲ್ಲಿ, ಮತ್ತು ಲಸಿಕೆ ನೀಡಿಕೆಗೆ ಸೂಕ್ತ ಸ್ಥಳಾವಕಾಶ ಲಭ್ಯವಿದ್ದಲ್ಲಿ, ಹೆಚ್ಚುವರಿ ತಂಡಗಳನ್ನು ನಿಯೋಜಿಸಬಹುದಾಗಿರುತ್ತದೆ. (ಅನುಬಂಧ 1 ನೋಡಿ)
  3. ಕಾರ್ಯಸ್ಥಳದ ಆಡಳಿತವು ಲಸಿಕೆ ನೀಡಿಕೆಗೆ ಸೂಕ್ತ ಕೊಠಡಿ /ಸ್ಥಳಾವಕಾಶ (ನಿರೀಕ್ಷಣಾ ಕೊಠಡಿ, ಲಸಿಕಾ ಕೊಠಡಿ ಮತ್ತು ನಿಗಾ ಕೋಣೆ) ಒದಗಿಸುವ ಜವಾಬ್ದಾರಿ ಹೊಂದಿರುತ್ತದೆ.
  4. ಪ್ರತಿಯೊಂದು ತಂಡವೂ ಕೆಳಕಂಡವರನ್ನು ಒಳಗೊಂಡಿರುತ್ತದೆ:
    • ತಂಡದ ನಾಯಕ (ಅಗತ್ಯವಾಗಿ ಒಬ್ಬ ವೈದ್ಯರು),
    • ವ್ಯಾಕ್ಸಿನೇಟರ್ (ಲಸಿಕೆಯ ಚುಚ್ಚುಮದ್ದು ನೀಡಲು ಅಧಿಕೃತವಾಗಿ ನಿಯುಕ್ತರಾದವರು),
    • ಲಸಿಕಾ ಅಧಿಕಾರಿ -1 ಕೋವಿನ್ ನಲ್ಲಿ ಪರಿಶೀಲನೆ ಕಾರ್ಯ ಮಾಡಲು, ಮತ್ತು
    • ಲಸಿಕಾ ಅಧಿಕಾರಿಗಳು -2 ಮತ್ತು 3 ಗುಂಪು ನಿರ್ವಹಣೆ ಮತ್ತು ..ಎಫ್.. ನಿಗಾಕ್ಕಾಗಿ

ತಂಡದ ಪ್ರತಿಯೊಬ್ಬರ ಪಾತ್ರವನ್ನು ಅನುಬಂಧ 2ರಲ್ಲಿ ವಿವರಿಸಲಾಗಿದೆ.

 

  1. ಎಇಎಫ್.. ನಿರ್ವಹಣೆ:
  1. ಎಲ್ಲ ಕಾರ್ಯಸ್ಥಳದ ಸಿವಿಸಿಗಳು ತಂಡದ ನಾಯಕ/ ಮೇಲ್ವಿಚಾರಕರಾಗಿ ಒಬ್ಬ ವೈದ್ಯಾಧಿಕಾರಿ ಹೊಂದಿರಬೇಕು
  2. ಎಲ್ಲ ಕಾರ್ಯಸ್ಥಳ ಸಿವಿಸಿಗಳಲ್ಲಿ ಯಾವುದೇ ಪ್ರತಿಕೂಲ ಪರಿಸ್ಥಿತಿಯ ನಿರ್ವಹಣೆಗಾಗಿ ಅನಾಫಿಲ್ಯಾಕ್ಸಿಸ್ ಕಿಟ್ ಅನ್ನು ಹೊಂದಿರಬೇಕು ಮತ್ತು ಅಗತ್ಯವಿರುವ ಲಸಿಕೋತ್ತರ ವೈದ್ಯಕೀಯ ನಿರ್ವಹಣೆ ಸಂದರ್ಭದಲ್ಲಿ ಹತ್ತಿರದ ಆರೋಗ್ಯ ಸೌಲಭ್ಯ (..ಎಫ್‌. ನಿರ್ವಹಣಾ ಕೇಂದ್ರ)ಕ್ಕೆ ಸಂಪರ್ಕ ಕಲ್ಪಿಸಿರಬೇಕು. ಕಾರ್ಯ ಕ್ಷೇತ್ರ ಸಿವಿಸಿಯಿಂದ ..ಎಫ್‌..ಗಳ ನಿರ್ವಹಣಾ ಕೇಂದ್ರಕ್ಕೆ ಪ್ರಯಾಣದ ಸಮಯವು ಒಂದು ಗಂಟೆಗಿಂತ ಕಡಿಮೆ ಇರಬೇಕು.
  3. ಕಾರ್ಯಕ್ಷೇತ್ರ ಸಿವಿಸಿಯಲ್ಲಿ ಮೂಲಭೂತ ಜೀವ ರಕ್ಷಕ ಬೆಂಬಲ (ಬಿ.ಎಲ್‌ಯಎಸ್) ವ್ಯವಸ್ಥೆ, ಆಂಬ್ಯುಲೆನ್ಸ್ ಅನ್ನು ಕಡ್ಡಾಯವಾಗಿ ನಿಯೋಜಿಸಬೇಕು ಮತ್ತು ಅಗತ್ಯವಿದ್ದರೆ ಫಲಾನುಭವಿಗಳನ್ನು ಸಂಪರ್ಕಿತ ..ಎಫ್‌. ನಿರ್ವಹಣಾ ಕೇಂದ್ರಕ್ಕೆ ಸ್ಥಳಾಂತರಿಸಲು ಬಳಸಬೇಕು.

 

  1. ಕಾರ್ಯಸ್ಥಳ ಸಿವಿಸಿಯಲ್ಲಿ ಲಸಿಕೆ ನೀಡಿಕೆ:
  1. ಕಾರ್ಯ ಸ್ಥಳಗಳಲ್ಲಿ ನಡೆಸಲಾಗುವ ಇಂತಹ ಲಸಿಕಾ ಅಧಿವೇಶನಗಳಲ್ಲಿ ಒಂದೇ ರೀತಿಯ ಲಸಿಕೆ ನೀಡಲಾಗುವುದು. ಫಲಾನುಭವಿಗಳಿಗೆ 1 ಮತ್ತು 2ನೇ ಡೋಸ್ ಲಸಿಕೆಗಳಲ್ಲಿ ಬೇರೆ ಬೇರೆ ಲಸಿಕೆ ಮಿಶ್ರಣವನ್ನು ತಪ್ಪಿಸಲು ಇದು ಅವಶ್ಯಕವಾಗಿದೆ.
  2. ಕಾರ್ಯಸ್ಥಳದಲ್ಲಿನ ಫಲಾನುಭವಿಗಳು ಈಗಾಗಲೇ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಲ್ಲಿ, ಅದು ಕಾರ್ಯಸ್ಥಳದಲ್ಲಿ ನೀಡಲಾಗುವ ಲಸಿಕೆಯ ಸ್ವರೂಪದ್ದಲ್ಲದಿದ್ದಲ್ಲಿ, ಅವರಿಗೆ ಅಲ್ಲಿ ಲಸಿಕೆ ನೀಡಲಾಗುವುದಿಲ್ಲ. ಅಂತಹವರು ಸೂಕ್ತ ಲಸಿಕೆಯ ಎರಡನೇ ಡೋಸ್ ಅನ್ನು ಸೂಕ್ತ ಕೋವಿಡ್ ಲಸಿಕೆ ನೀಡಿಕೆ ಕೇಂದ್ರದಲ್ಲಿ ಪಡೆಯಬಹುದು. ಆದಾಗ್ಯೂ, ಮೊದಲ ಡೋಸ್‌ ನಲ್ಲಿ ಅದೇ ಲಸಿಕೆ ಪಡೆದವರಿಗೆ ಕಾರ್ಯಸ್ಥಳ ಸಿವಿಸಿಯಲ್ಲಿ ಎರಡನೇ ಡೋಸ್ ನೀಡಬಹುದು.
  3. ಕೋವಿನ್ ನಲ್ಲಿ ಲಭ್ಯವಿರುವಂತೆ ಫಲಾನುಭವಿಗಳ ಪೂರ್ಣ ಪಟ್ಟಿಯು ಎಲ್ಲ ಪರಿಶೀಲನೆಕಾರರು ಮತ್ತು ವ್ಯಾಕ್ಸಿನೇಟರ್ ಗಳಿಗೆ ಲಭ್ಯವಿರುತ್ತದೆ, ಸ್ಥಳದಲ್ಲೇ ನೋಂದಣಿಯ ಅವಕಾಶವೂ ಲಭ್ಯವಿರುತ್ತದೆ.
  4. ಪರಿಶೀಲನೆಕಾರರು ಆದ್ಯತೆಯ ಮೇಲೆ ಆಧಾರ್ ಬಳಸಿ ಪರಿಶೀಲನೆ ನಡೆಸುತ್ತಾರೆ (ಲಸಿಕಾ ಅಧಿಕಾರಿ -1).
  5. ಒಂದೊಮ್ಮೆ ಯಾವುದೇ ಕಾರಣಕ್ಕಾಗಿ ಆಧಾರ್ ಪ್ರಮಾಣೀಕರಣ ಸಾಧ್ಯವಾಗದೇ ಹೋದಲ್ಲಿ, ಪರಿಶೀಲನೆಕಾರರು ನೋಂದಣಿ ಸಮಯದಲ್ಲಿ ಫಲಾನುಭವಿ ಸೂಚಿಸಿದ ಭಾವಚಿತ್ರ ಸಹಿತ ಗುರುತಿನ ಚೀಟಿಯಿಂದ ಫಲಾನುಭವಿಯ ಗುರುತು ಮತ್ತು ಅರ್ಹತೆಯನ್ನು ಪರಿಶೀಲಿಸುತ್ತಾರೆ.
  6. ಆಧಾರ್ ಅಲ್ಲದೆ ಇತರ ಗುರುತಿನ ಚೀಟಿಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅನುಮೋದಿಸಿದೆ. ಅವುಗಳೆಂದರೆ: 1.ಮತದಾರರ ಗುರುತಿನ ಚೀಟಿ, 2.ಪಾಸ್ ಪೋರ್ಟ್, 3. ವಾಹನ ಚಾಲನಾ ಪರವಾನಗಿ, 4. ಪ್ಯಾನ್ ಕಾರ್ಡ್, 5. ಎನ್.ಪಿ.ಆರ್. ಅಡಿ ಆರ್.ಜಿ.. ನೀಡಿರುವ ಸ್ಮಾರ್ಟ್ ಕಾರ್ಡ್, 6. ಭಾವಚಿತ್ರ ಸಹಿತ ಪಿಂಚಣಿ ದಾಖಲೆ.
  7. ಪರಿಶೀಲನೆಯ ನಂತರ ಫಲಾನುಭವಿಯ ಗುರುತು ಮತ್ತು ಅರ್ಹತೆ ಸಾಬೀತಾದಲ್ಲಿ, ಫಲಾನುಭವಿಗೆ ಲಸಿಕೆ ನೀಡಲಾಗುತ್ತದೆ ಮತ್ತು ಆತನ/ ಆಕೆಯ ಲಸಿಕೆ ಸ್ಥಿತಿಯನ್ನು ನವೀಕರಿಸಲಾಗುತ್ತದೆ, ಇಲ್ಲದಿದ್ದರೆ ಫಲಾನುಭವಿಗೆ ಲಸಿಕೆ ನೀಡಲಾಗುವುದಿಲ್ಲ.
  8. ಎಲ್ಲಾ ಲಸಿಕೆಯನ್ನು ಒಂದೇ ಸಮಯದಲ್ಲಿ ಕೋ-ವಿನ್ ವ್ಯಾಕ್ಸಿನೇಟರ್ ಮಾಡ್ಯೂಲ್ ಮೂಲಕ ಸಕಾಲದಲ್ಲಿ ದಾಖಲಿಸಬೇಕು.
  9. ಕೋವಿನ್ ಮೂಲಕ ಫಲಾನುಭವಿಯ ಡಿಜಿಟಲ್ ಲಸಿಕಾ ಪ್ರಮಾಣ ಪತ್ರ ಸೃಷ್ಟಿಯಾಗುತ್ತದೆ. ಕಾರ್ಯ ಕ್ಷೇತ್ರ ಸಿವಿಸಿಯ ನೋಡಲ್ ವ್ಯಕ್ತಿ, ಪ್ರಥಮ ಮತ್ತು ದ್ವಿತೀಯ ಡೋಸ್ ಲಸಿಕೆಯನ್ನು ಫಲಾನುಭವಿಗಳಿಗೆ ನೀಡಿದ ತರುವಾಯ ಅದೇ ಸ್ಥಳದಲ್ಲಿ ಮುದ್ರಿತ ಲಸಿಕಾ ಪ್ರಮಾಣ ಪತ್ರ ನೀಡುವ ಜವಾಬ್ದಾರಿ ಹೊಂದಿರುತ್ತಾರೆ.
  10. ಕೋವಿಡ್-19 ಲಸಿಕೆಗಾಗಿ ಕಾರ್ಯಾಚರಣೆಯ ಮಾರ್ಗಸೂಚಿಗಳು ಮತ್ತು ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ವಿವರವಾದ ಯೋಜನೆ ಮತ್ತು ಕಾರ್ಯಾಚರಣೆಗಾಗಿ ಉಲ್ಲೇಖಿಸಬೇಕು. ಇವುಗಳು ಕೆಳಕಂಡ ಲಿಂಕ್ ನಲ್ಲಿ ಲಭ್ಯವಿದೆ

https://www.mohfw.gov.in/pdf/COVID19VaccineOG111Chapter16.pdf

https://www.mohfw.gov.in/pdf/GuidancedocCOWIN2.pdf

  1.  ಕಾರ್ಯಸ್ಥಳ ಸಿವಿಸಿಯಲ್ಲಿ ಲಸಿಕೆಯ ಮೇಲ್ವಿಚಾರಣೆ
  1. ಕೋವಿಡ್ -19 ಲಸಿಕೆ ನೀಡಿಕೆಗಾಗಿ ತಮ್ಮೊಂದಿಗೆ ಜೋಡಿಸಲಾಗಿರುವ ಕಾರ್ಯಸ್ಥಳದ ಸಿವಿಸಿಗಳ ಸರ್ಕಾರಿ ಅಥವಾ ಖಾಸಗಿ ಸಿವಿಸಿಗಳ ಮೇಲ್ವಿಚಾರಕರು ಲಸಿಕೆ ನೀಡಿಕೆಗೆ ಮುನ್ನ ಲಸಿಕೆ ನೀಡಿಕೆ ಸ್ಥಳದ ಸಿದ್ಧತೆಗಳ ಪರಾಮರ್ಶೆ ನಡೆಸಬೇಕು.
  2. ಜಿಲ್ಲಾ ಮತ್ತು ನಗರ ಕಾರ್ಯ ಪಡೆಗಳು ಕಾರ್ಯ ಕ್ಷೇತ್ರ ಸಿವಿಸಿಗಳಲ್ಲಿ ಕೆಳಕಂಡವುಗಳ ಖಾತ್ರಿಗಾಗಿ ಯಾದೃಚ್ಛಿಕವಾಗಿ ಮೇಲ್ವಿಚಾರಣೆ ನಡೆಸುತ್ತಾರೆ:
  • ಫಲಾನುಭವಿಗಳ ಪರಿಶೀಲನೆ ಸೇರಿದಂತೆ ಲಸಿಕೆಗಾಗಿ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ಅನುಸರಿಸಲಾಗಿದೆ, ಅರ್ಹ ಫಲಾನುಭವಿಗಳಿಗೆ ಮಾತ್ರ ಲಸಿಕೆ ನೀಡಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಲು
  • ಮಾನವ ಸಂಪನ್ಮೂಲಗಳ ತರಬೇತಿಯ ಬಗ್ಗೆ ತಿಳಿಯಲು
  • ..ಎಫ್‌. ನಿರ್ವಹಣೆಗಾಗಿ
  1.  ಕಾರ್ಯಸ್ಥಳದಲ್ಲಿ ಲಸಿಕೆ ನೀಡಿಕೆಗೆ ಹಣಕಾಸು ಮಾರ್ಗಸೂಚಿ:
  1. ಕೋವಿಡ್ -19 ಲಸಿಕೆ ನೀಡಿಕೆಯನ್ನು ಸರ್ಕಾರಿ ಕಾರ್ಯಸ್ಥಳದಲ್ಲಿ ಜಿಲ್ಲಾ ಆರೋಗ್ಯ ಪ್ರಾಧಿಕಾರ ಉಚಿತವಾಗಿ ಆಯೋಜಿಸುತ್ತದೆ.
  2. ಖಾಸಗಿ ಸಿವಿಸಿಗಳಲ್ಲಿ ಕೋವಿಡ್ -19 ಲಸಿಕೆ ನೀಡಿಕೆಯನ್ನು ಹಣ ಪಾವತಿಯ ಆಧಾರದಲ್ಲಿ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳಲ್ಲಿನ ದರಕ್ಕೆ ಸಮನಾಗಿ ಆಯೋಜಿಸುತ್ತವೆ.
    • ಸೇವಾ ಶುಲ್ಕ ಪ್ರತಿ ವ್ಯಕ್ತಿಗೆ ಪ್ರತಿ ಡೋಸ್ ಗೆ 100 ರೂ. ಮಾತ್ರ ಸೀಮಿತವಾಗಿರುತ್ತದೆ.
    • ಲಸಿಕಾ ವೆಚ್ಚ ಪ್ರತಿ ವ್ಯಕ್ತಿಗೆ ಪ್ರತಿ ಡೋಸ್ ಗೆ 150 ರೂ. ಆಗಿರುತ್ತದೆ.
    • ಖಾಸಗಿ ಆರೋಗ್ಯ ಸೌಲಭ್ಯಗಳಿಂದ ಪ್ರತಿ ವ್ಯಕ್ತಿಗೆ ಪ್ರತಿ ಡೋಸ್ ಗೆ ಪಡೆಯಬೇಕಾದ ಗರಿಷ್ಠ ಮೊತ್ತ 250 ರೂ. ಮಾತ್ರ.
  3. ಖಾಸಗಿ ವಲಯದ ಕಾರ್ಯ ಸ್ಥಳದಲ್ಲಿ ಲಸಿಕೆ ಹಾಕುವ ಖಾಸಗಿ ಆರೋಗ್ಯ ಸೌಲಭ್ಯವು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಗೊತ್ತುಪಡಿಸಿದ ಬ್ಯಾಂಕ್ ಖಾತೆಯಲ್ಲಿ ಲಸಿಕೆಗಳ ವೆಚ್ಚವನ್ನು ಜಮಾ ಮಾಡುತ್ತದೆ. ಆಸ್ಪತ್ರೆಗಳು ಸಂಬಂಧಪಟ್ಟ ಜಿಲ್ಲೆಯ ಉಸ್ತುವಾರಿ ಡಿಐಒಗೆ ಹಣ ಪಾವತಿಸಿದ ಪುರಾವೆಗಳನ್ನು ಒದಗಿಸುತ್ತವೆ. ಎನ್.ಎಚ್.. ಪೋರ್ಟಲ್ನಲ್ಲಿನ ಪಾವತಿ ಗೇಟ್‌ ವೇ ಅನ್ನು ಖಾಸಗಿ ಸಿವಿಸಿ ಉದ್ದೇಶಕ್ಕಾಗಿ ಬಳಸುತ್ತದೆ.

***


(Release ID: 1710373) Visitor Counter : 414