ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರು ಬಡ್ಡಿ ರಹಿತ ಸಾಲ ಬಾಬ್ತಿನ 813.24 ಕೋಟಿ ರೂ.ಗಳ ಚೆಕ್ ಅನ್ನು ʻಎಚ್.ಯು.ಆರ್.ಎಲ್.ʼಗೆ ಹಸ್ತಾಂತರಿಸಿದರು.

Posted On: 06 APR 2021 5:56PM by PIB Bengaluru

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾದ ಶ್ರೀ ಡಿ.ವಿ. ಸದಾನಂದ ಗೌಡ ಅವರು ಗೋರಖ್‌ಪುರ, ಸಿಂಡ್ರಿ ಮತ್ತು ಬರೌನಿ ಯೋಜನೆಗಳ ಪುನಶ್ಚೇತನಕ್ಕಾಗಿ ʻಹಿಂದೂಸ್ತಾನ್ ಉರ್ವರಕ್ ಮತ್ತು ರಸಾಯನ್ ಲಿಮಿಟೆಡ್‌ʼಗೆ (ಎಚ್‌.ಯು.ಆರ್‌.ಎಲ್) ಒಟ್ಟು 1257.82 ಕೋಟಿ ರೂ.ಗಳ ಬಡ್ಡಿರಹಿತ ಸಾಲದ ಬಾಬ್ತಿನ ಪೈಕಿ 813.24 ಕೋಟಿ ರೂ.ಗಳ ಚೆಕ್ ಅನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಹಸ್ತಾಂತರಿಸಿದರು. ʻಎಚ್‌.ಯು.ಆರ್‌.ಎಲ್‌.ʼ ಪರಿಸರ ಸ್ನೇಹಿ ಮತ್ತು ಇಂಧನ-ಪರಿಣಾಮಕಾರಿ ನೈಸರ್ಗಿಕ ಅನಿಲ ಆಧಾರಿತ ಹೊಸ ರಸಗೊಬ್ಬರ  ಘಟಕಗಳನ್ನು ನಿರ್ವಹಿಸುತ್ತದೆ, ಆ ಮೂಲಕ ಪೂರ್ವ ಭಾರತದಲ್ಲಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

 


 

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ʻಎಚ್‌.ಯು.ಆರ್‌.ಎಲ್‌ʼಗೆ ಬಡ್ಡಿ ರಹಿತ ಸಾಲ ಬಿಡುಗಡೆಯಿಂದಾಗಿ ಕೊರೊನೋತ್ತರ ಅವಧಿಯಲ್ಲಿ ಸಂಸ್ಥೆಯ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಬಲಪಡಿಸಲು ನೆರವಾಗುತ್ತದೆ ಎಂದು ಒತ್ತಿ ಹೇಳಿದರು. ಜೊತೆಗೆ ಇದರಿಂದ ಸಂಸ್ಥೆಗೆ ತನ್ನ ಯೋಜನೆಯನ್ನು ಸಕಾಲದಲ್ಲಿ ಅಂದರೆ 2021ರಲ್ಲಿ ಪೂರ್ಣಗೊಳಿಸಲು ಹಾಗೂ ದೇಶೀಯವಾಗಿ ಯೂರಿಯಾ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಭಾರತ ಸರಕಾರದ ಮಹತ್ವಾಕಾಂಕ್ಷೆಯ ʻಆತ್ಮನಿರ್ಭರ್‌ ಭಾರತ್‌ʼ ಅಭಿಯಾನವನ್ನು ಉತ್ತೇಜಿಸಲು ಸಹ ಸಹಾಯಕವಾಗಲಿದೆ ಎಂದರು. ಮೇಲಿನ ಮೂರು ಘಟಕಗಳ ಕಾರ್ಯಾರಂಭದಿಂದಾಗಿ ಭಾರತದ ಯೂರಿಯಾ ಆಮದು ಅವಲಂಬನೆ ವರ್ಷಕ್ಕೆ 38.1 ಲಕ್ಷ ಮೆಟ್ರಿಕ್‌ ಟನ್‌ನಷ್ಟು ಕಡಿಮೆಯಾಗಲಿದೆ ಮತ್ತು ಇದರಿಂದ ಬೊಕ್ಕಸಕ್ಕೆ ಭಾರಿ ಪ್ರಮಾಣದ ವಿದೇಶಿ ವಿನಿಮಯ ಉಳಿತಾಯವಾಗಲಿದೆ. ಪ್ರತಿ ಘಟಕದ ಸಾಮರ್ಥ್ಯವು ವಾರ್ಷಿಕ 12.7 ಲಕ್ಷ ಮೆಟ್ರಿಕ್‌ ಟನ್‌ ಆಗಿರಲಿದೆ. ʻಎಚ್‌.ಯು.ಆರ್‌.ಎಲ್‌ʼನ ಯೋಜನೆಗಳು ನೇರ ಮತ್ತು ಪರೋಕ್ಷವಾಗಿ ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಸಚಿವರು ಮಾಹಿತಿ ನೀಡಿದರು.

ಗೋರಖ್‌ಪುರ, ಬರೌನಿ, ಮತ್ತು ಸಿಂಡ್ರಿ ಯೋಜನೆಗಳು 28.02.2021ರ ವೇಳೆಗೆ ಕ್ರಮವಾಗಿ ಶೇ.89, ಶೇ. 85.1 ಮತ್ತು ಶೇ.86.1ರಷ್ಟು ಪ್ರಗತಿ ಸಾಧಿಸಿವೆ. ಈ ಯೋಜನೆಗಳು ಕಾರ್ಯಾರಂಭ ಮಾಡಿದ ನಂತರ, ನಮ್ಮ ದೇಶೀಯ ಸಾಮರ್ಥ್ಯ ಹೆಚ್ಚಳವಾಗಲಿದೆ ಮತ್ತು ಯೂರಿಯಾ ಉತ್ಪಾದನೆಯಲ್ಲಿ ದೇಶದ ಸ್ವಾವಲಂಬನೆಯೂ ಹೆಚ್ಚಲಿದೆ.

ಗೋರಖ್‌ಪುರ (ಉತ್ತರ ಪ್ರದೇಶ) ಸಿಂದ್ರಿ (ಜಾರ್ಖಂಡ್) ಮತ್ತು ಬರೌನಿ (ಬಿಹಾರ) ನಲ್ಲಿರುವ ʻಹಿಂದೂಸ್ತಾನ್ ಉರ್ವರಕ್ ಮತ್ತು ರಸಾಯನ್ ಲಿಮಿಟೆಡ್ʼನ (ಎಚ್‌.ಯು.ಆರ್‌.ಎಲ್‌) ಯೋಜನೆಗಳಿಗಾಗಿ ಕೇಂದ್ರ ಸರಕಾರವು 01.08.2018ರಂದು 1,257.82 ಕೋಟಿ ರೂ.ಗಳ ಬಡ್ಡಿ ರಹಿತ ಸಾಲ (ಐಎಫ್‌ಎಲ್‌) ಒದಗಿಸಲು ಅನುಮೋದನೆ ನೀಡಿದೆ. ಅದರಂತೆ, ರಸಗೊಬ್ಬರ ಇಲಾಖೆ ಮತ್ತು ʻಎಚ್‌.ಯು.ಆರ್‌.ಎಲ್‌ʼ ನಡುವೆ 08.09.2020ರಂದು ಸಾಲ ಒಪ್ಪಂದಕ್ಕೆ ಸಹಿ ಬಿದ್ದಿದೆ. ಅನುಮೋದನೆಯ ಪ್ರಕಾರ, ಬಡ್ಡಿ ರಹಿತ ಸಾಲದ (ಐಎಫ್‌ಎಲ್‌) ಒಟ್ಟು ಮೊತ್ತವನ್ನು 3 ವರ್ಷಗಳ ʻಐಡಿಸಿʼ (ನಿರ್ಮಾಣ ಸಮಯದ ಬಡ್ಡಿ) ವರೆಗೆ ವಿತರಿಸಬೇಕು. ಇದರ ವಿವರ ಈ ಕೆಳಗಿನಂತಿದೆ: - ಮೊತ್ತ

                                                                                                                               (ಕೋಟಿ ರೂ.ಗಳಲ್ಲಿ)

ಕ್ರ.
ಸಂ.

ʻಎಚ್‌.ಯು.ಆರ್‌.ಎಲ್‌ʼನ ಘಟಕದ ಹೆಸರು

1ನೇ ವರ್ಷದ ʻಐಡಿಸಿʼಯಲ್ಲಿ ಮೊತ್ತ

2ನೇ ವರ್ಷದ ʻಐಡಿಸಿʼಯಲ್ಲಿ ಮೊತ್ತ

3ನೇ ವರ್ಷದ ʻಐಡಿಸಿʼಯಲ್ಲಿ ಮೊತ್ತ

ಒಟ್ಟು

1

ಗೋರಖ್ಪುರ

42.23

168.90

211.15

422.28

2

ಸಿಂಡ್ರಿ

41.58

166.29

207.90

415.77

3

ಬರೌನಿ

41.98

167.91

209.88

419.77

 

ಒಟ್ಟು

125.79

503.1

628.93

1257.82

 

ʻಎಚ್‌.ಯು.ಆರ್‌.ಎಲ್‌ʼನ 3 (ಗೋರಖ್‌ಪುರ, ಸಿಂಡ್ರಿ ಮತ್ತು ಬರೌನಿ) ಯೋಜನೆಗಳಿಗೆ ಸಂಬಂಧಿಸಿದಂತೆ ಶೂನ್ಯ ದಿನಾಂಕ, 28.02.2021ರ ವರೆಗಿನ ಮೂಲ/ಪರಿಷ್ಕೃತ ವೇಳಾಪಟ್ಟಿ ಮತ್ತು ಒಟ್ಟಾರೆ ಪ್ರಗತಿ ಈ ಕೆಳಗಿನಂತಿದೆ:-

 

ಕ್ರ.ಸಂ.

ಎಚ್‌.ಯು.ಆರ್‌.ಎಲ್‌ ಘಟಕದ ಹೆಸರು

ಶೂನ್ಯ ದಿನಾಂಕ

ಮೂಲ ವೇಳಾಪಟ್ಟಿಯಂತೆ

ಯೋಜನೆ ಆರಂಭವಾಗಬೇಕಿದ್ದ ದಿನಾಂಕ

ಪರಿಷ್ಕೃತ ವೇಳಾಪಟ್ಟಿಯಂತೆ ಯೋಜನೆ ಆರಂಭವಾದ ದಿನಾಂಕ

28.02.2021 ವರೆಗೆ ಒಟ್ಟಾರೆ ಪ್ರಗತಿ

1

ಗೋರಖ್ಪುರ

ಫೆಬ್ರವರಿ,2018

ಫೆಬ್ರವರಿ,2021

ಜುಲೈ, 2021

89.00 %

2

ಬರೌನಿ

ಮೇ, 2018

ಮೇ, 2021

ಡಿಸೆಂಬರ್, 2021

85.1 %

3

ಸಿಂಡ್ರಿ

ಮೇ, 2018

ಮೇ, 2021

ಡಿಸೆಂಬರ್, 2021

86.1 %

       

 

 

 

 

 

 

 

 

   

 

****



(Release ID: 1710158) Visitor Counter : 236


Read this release in: English , Urdu , Hindi , Punjabi