ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ರಾಸಾಯನಿಕ ಉತ್ಪಾದನೆಯಲ್ಲಿ ಸ್ಪರ್ಧಾತ್ಮಕತೆ ಮತ್ತು ಸುಸ್ಥಿರತೆಗಾಗಿ ಉತ್ಪಾದನಾ ಶ್ರೇಷ್ಠತೆ ಮತ್ತು ನಾವಿನ್ಯತೆ’ ಕುರಿತ ರಾಷ್ಟ್ರೀಯ ಸಂವಾದವನ್ನುದ್ದೇಶಿಸಿ ಶ್ರೀ ಡಿ.ವಿ. ಸದಾನಂದ ಗೌಡ ಭಾಷಣ


ಭಾರತದ ರಾಸಾಯನಿಕ ಉದ್ಯಮ 2025ರ ವೇಳೆಗೆ 304 ಮಿಲಿಯನ್ ಡಾಲರ್ ತಲುಪುವ ಸಾಧ್ಯತೆ - ಶ್ರೀ ಡಿ.ವಿ. ಸದಾನಂದ ಗೌಡ

Posted On: 06 APR 2021 5:54PM by PIB Bengaluru

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ ನವದೆಹಲಿಯಲ್ಲಿಂದು ನಡೆದ ರಾಸಾಯನಿಕ ಉತ್ಪಾದನೆಯಲ್ಲಿ ಸ್ಪರ್ಧಾತ್ಮಕತೆ ಮತ್ತು ಸುಸ್ಥಿರತೆಗಾಗಿ ಉತ್ಪಾದನಾ ಶ್ರೇಷ್ಠತೆ ಮತ್ತು ನಾವಿನ್ಯ’ ಕುರಿತ ರಾಷ್ಟ್ರೀಯ ಸಂವಾದವನ್ನುದ್ದೇಶಿಸಿ ವರ್ಚುವಲ್ ರೂಪದಲ್ಲಿ ಭಾಷಣ ಮಾಡಿದರು. ರಾಸಾಯನಿಕ ಮತ್ತು ಪೆಟ್ರೋ ಕೆಮಿಕಲ್ಸ್ ಕಾರ್ಯದರ್ಶಿ ಶ್ರೀ ಯೋಗೇಂದ್ರ ತ್ರಿಪಾಠಿ, ಹೆಚ್ಚುವರಿ ಕಾರ್ಯದರ್ಶಿ (ರಾಸಾಯನಿಕ) ಶ್ರೀ ಸಮೀರ್ ಕುಮಾರ್ ಬಿಸ್ವಾಸ್, ಭಾರತೀಯ ರಾಸಾಯನಿಕ ಮಂಡಳಿಯ ಮಹಾ ನಿರ್ದೇಶಕ ಶ್ರೀ ಎಚ್.ಎಸ್. ಕರನ್ ಗ್ಲೆ, ಎಚ್ಎಎಲ್ ಇಂಡಿಯಾ ಲಿಮಿಟೆಡ್ ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಎಸ್.ಪಿ. ಮೊಹಂತಿ, ಭಾರತದಲ್ಲಿನ ಯುಎನ್ಐಡಿಒ ಪ್ರಾದೇಶಿಕ ಪ್ರತಿನಿಧಿ ಡಾ. ರೆನೆ ವನ್ ಬೇರ್ಕೆಲ್ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

 

 

          ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಡಿ.ವಿ. ಸದಾನಂದ ಗೌಡ, ದೇಶ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ ಸಾಧನೆಯಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ವಲಯ ಅತ್ಯಂತ ಪ್ರಮುಖ ಪಾತ್ರವಹಿಸಲಿದೆ ಎಂದರು. ಭಾರತದ ರಾಸಾಯನಿಕ ಉದ್ಯಮ 2019ರಲ್ಲಿ 178 ಬಿಲಿಯನ್ ಡಾಲರ್ ತಲುಪಿದ್ದು, ಅದು 2025ರ ವೇಳೆಗೆ 304 ಬಿಲಿಯನ್ ಡಾಲರ್ ತಲುಪುವ ಸಾಧ್ಯತೆ ಇದೆ ಮತ್ತು ರಾಸಾಯನಿಕಕ್ಕೆ ಬೇಡಿಕೆ 2025ರ ವೇಳೆಗೆ ಪ್ರತಿ ವರ್ಷ ಶೇ.9ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದರು. ಉದ್ಯಮ ಮಹತ್ವಾಕಾಂಕ್ಷೆಯ ಪ್ರಗತಿಯ ಗುರಿ ಸಾಧನೆಗೆ ನೀತಿ ನಿರೂಪಣೆಗಳ ಹಸ್ತಕ್ಷೇಪ, ಕಂಪನಿ ಮಟ್ಟದ ಉಪಕ್ರಮಗಳು, ಉದ್ಯಮ ಶೈಕ್ಷಣಿಕ ಪಾಲುದಾರಿಕೆ, ಬುದ್ದಿವಂತ ಹೂಡಿಕೆಗಳು ಮತ್ತು ಹೆಚ್ಚಿನ ಅಂತಾರಾಷ್ಟ್ರೀಯ ಲಭ್ಯತೆ ಸೇರಿದಂತೆ ಹಲವು ಕ್ರಮಗಳ ಸಂಯೋಜನೆ ಅಗತ್ಯವಿದೆ ಎಂದರು. ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ (ಯುಎನ್ಐಡಿಒ) ಅಂತಾರಾಷ್ಟ್ರೀಯ ಉತ್ತಮ ಪದ್ಧತಿಗಳ ಮತ್ತು ನೀತಿ ಹಾಗೂ ತಾಂತ್ರಿಕ ನೆರವಿನ ಮೂಲಕ ದೇಶೀಯ ಕೈಗಾರಿಕೆಯನ್ನು ಬೆಂಬಲಿಸಲಿದೆ.

          ನಮ್ಮ ದೇಶದಲ್ಲಿ ರಾಸಾಯನಿಕ ಉದ್ಯಮ ಜನರ ಮೂಲ ಅಗತ್ಯಗಳನ್ನು ಈಡೇರಿಸುವಲ್ಲಿ ಮತ್ತು ಜೀವನಮಟ್ಟ ಸುಧಾರಿಸುವಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುತ್ತಿದೆ ಎಂದು ಸಚಿವರು ಹೇಳಿದರು. ರಾಸಾಯನಿಕ ವಲಯ ಜ್ಞಾನ ಮತ್ತು ಬಂಡವಾಳ ಹೆಚ್ಚು ಬೇಡುತ್ತಿದೆ. ಇದು ಕೈಗಾರಿಕೆ ಮತ್ತು ಕೃಷಿ ಅಭಿವೃದ್ಧಿಯಲ್ಲಿ ಪ್ರಮುಖವಾಗಿದೆ ಮತ್ತು ಜವಳಿ, ಕಾಗದ, ಬಣ್ಣ, ಸಾಬೂನು, ಡಿಟರ್ಜೆಂಟ್ ಮತ್ತು ಫಾರ್ಮಸುಟಿಕಲ್ಸ್ ಸೇರಿ ಇತರ ಕೈಗಾರಿಕೆಗಳ ಅಭಿವೃದ್ಧಿಗೆ ಉತ್ತಮ ನೆರವು ನೀಡುತ್ತಿದೆ. ರಾಸಾಯನಿಕ ಮತ್ತು ಆಗ್ರೋ ಕೆಮಿಕಲ್ ಉದ್ಯಮ ಆಹಾರ ಭದ್ರತೆಯನ್ನು ಖಾತ್ರಿಪಡಿಸುತ್ತದೆ ಮತ್ತು ಭಾರತದ ಅಭಿವೃದ್ಧಿ ಹಾಗೂ ಕೃಷಿ ಆರ್ಥಿಕತೆಯಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ಅಂತೆಯೇ ಸಿಂಥೆಟಿಕ್ ಫೈಬರ್ ಉದ್ಯಮ ಕೂಡ ಅತ್ಯಂತ ಮಹತ್ವದ್ದಾಗಿದ್ದು, ಅದು ಕೈಗೆಟಕುವ ದರದಲ್ಲಿ ಬಟ್ಟೆಗಳನ್ನು ಒದಗಿಸುತ್ತದೆ ಮತ್ತು ಫಾರ್ಮಸುಟಿಕಲ್ಸ್ ಉದ್ಯಮ ದೇಶದ ಬಹುದೊಡ್ಡ ಜನಸಂಖ್ಯೆಗೆ ಕಡಿಮೆ ದರದಲ್ಲಿ ಔಷಧಗಳನ್ನು ಲಭ್ಯವಾಗುವಂತೆ ಮಾಡುತ್ತಿದೆ.

          ಕೋವಿಡ್-19ನಂತಹ ಸಾಂಕ್ರಾಮಿಕ ಮತ್ತು ಜಾಗತಿಕ ಅನಿಶ್ಚಿತತೆಯ ಪರಿಸ್ಥಿತಿಯ ನಡುವೆಯೂ ಇಂದು ನಮ್ಮ ದೇಶೀಯ ಕೈಗಾರಿಕೆ ಮತ್ತು ಹೂಡಿಕೆದಾರರು ಹಿಂದೆಂದಿಗಿಂತಲೂ ಹೆಚ್ಚಿನ ವಿಶ್ವಾಸ ಮತ್ತು ಸಕಾರಾತ್ಮಕ ಭಾವನೆ ಹೊಂದಿದ್ದಾರೆ ಎಂದು ಸಚಿವರು ಹೇಳಿದರು. ಭಾರತೀಯ ಕಂಪನಿಗಳೂ ಮತ್ತು ಕೆಮಿಕಲ್ ಕೈಗಾರಿಕೆಗಳು ಈ ಅವಕಾಶದ ಲಾಭವನ್ನು ಮಾಡಿಕೊಳ್ಳಬೇಕು ಮತ್ತು ರಾಸಾಯನಿಕ ಉದ್ಯಮದಲ್ಲಿ ವ್ಯವಸ್ಥಿತ ಬದಲಾವಣೆಗಳನ್ನು ತರಬೇಕು ಎಂದು ಅವರು ಕರೆ ನೀಡಿದರು. ಭಾರತೀಯ ವಿಜ್ಞಾನಿಗಳು, ನೀತಿ ನಿರೂಪಕರು, ರೈತರು, ಎಂಎಸ್ಎಂಇಗಳು ಮತ್ತು ಉದ್ಯಮಿಗಳು ಹಾಗೂ ಉದ್ಯಮದ ನಾಯಕರು ಭಾರತವನ್ನು ಉತ್ಪಾದನಾ ತಾಣವನ್ನಾಗಿ ರೂಪಿಸಲಿದ್ದಾರೆ. ಆ ಮೂಲಕ ದೇಶದ ಉತ್ಪಾದಕರು ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳನ್ನು ಉತ್ಪಾದಿಸಿ ‘ಮೇಡ್ ಫಾರ್ ವರ್ಲ್ಡ್’ಗೆ ಪೂರೈಕೆಯನ್ನು ಖಾತ್ರಿಪಡಿಸಲಿದ್ದಾರೆ.

          ಭಾರತದ ರಾಸಾಯನಿಕ ಉದ್ಯಮ ವಲಯದಲ್ಲಿ ಬದಲಾವಣೆಗಳನ್ನು ತಂದು ಅದನ್ನು ಮತ್ತಷ್ಟು ಪರಿಣಾಮಕಾರಿ, ದಕ್ಷ ಮತ್ತು ಸ್ಪರ್ಧಾತ್ಮಕ, “ಪ್ರಗತಿ ಇಂಜಿನ್” ಆಗಿ ರೂಪಿಸುವ ನಿಟ್ಟಿನಲ್ಲಿ ಈ ಸಂವಾದ ಆಯೋಜಿಸಿರುವುದಕ್ಕೆ ಯುಎನ್ಐಡಿಒಗೆ ಸಚಿವರು ಕೃತಜ್ಞತೆಗಳನ್ನು ಸಲ್ಲಿಸಿದರು.

ಯುಎನ್ಐಡಿಒ ‘ಭಾರತದಲ್ಲಿ ಸ್ವಚ್ಛ ಉತ್ಪಾದನೆ’(ಸ್ವಚ್ಛ ಉದ್ಯೋಗ) ಅಡಿಯಲ್ಲಿ ಭಾರತದಲ್ಲಿ ರಾಸಾಯನಿಕ ಉತ್ಪಾದನೆಯಲ್ಲಿ ಸ್ಪರ್ಧಾತ್ಮಕತೆ ಮತ್ತು ಸುಸ್ಥಿರತೆಗಾಗಿ ಉತ್ಪಾದನಾ ಶ್ರೇಷ್ಠತೆ ಮತ್ತು ಆವಿಷ್ಕಾರ’ ಕುರಿತ ರಾಷ್ಟ್ರೀಯ ಸಂವಾದವನ್ನು ಆಯೋಜಿಸಿತ್ತು. ಈ ಸಂವಾದದಲ್ಲಿ ರಾಸಾಯನಿಕ ಉದ್ಯಮದ ಪ್ರಗತಿಗೆ ಇರುವ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ, ನೀತಿ ನಿರೂಪಕರಲ್ಲಿ ವೇಗವನ್ನು ತುಂಬುವುದು, ಉದ್ಯಮ ವಲಯ ಮತ್ತು ಇತರ ಭಾಗಿದಾರರ ನಡುವೆ ಜ್ಞಾನ ಹಾಗೂ ಕೌಶಲ್ಯ ಆಧಾರಿತ ಬದಲಾವಣೆಗಳನ್ನು ತರುವ ಮೂಲಕ ಭಾರತದ ಭವಿಷ್ಯದ ರಾಸಾಯನಿಕ ಉತ್ಪಾದನೆಯನ್ನು ಸುರಕ್ಷಿತಗೊಳಿಸುವುದಾಗಿದೆ.

ಯುಎನ್ಐಡಿಒ ವಿಶ್ವ ಸಂಸ್ಥೆಯ ಒಂದು ವಿಶೇಷ ಸಂಸ್ಥೆಯಾಗಿದ್ದು, ಅದು ಬಡತನ ಪ್ರಮಾಣ ತಗ್ಗಿಸಲು ಕೈಗಾರಿಕಾ ಅಭಿವೃದ್ಧಿ, ಅಂತರ್ಗತ ಜಾಗತೀಕರಣ ಮತ್ತು ಪರಿಸರಾತ್ಮಕ ಸುಸ್ಥಿರತೆಯನ್ನು ಉತ್ತೇಜಿಸುತ್ತದೆ.
 

*****



(Release ID: 1710149) Visitor Counter : 200