ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಸೂಪರ್ ಕಂಪ್ಯೂಟಿಂಗ್ ನಲ್ಲಿ ಮುಂದಾಳುವಾಗಿ ಹೊರಹೊಮ್ಮುತ್ತಿರುವ ಭಾರತ

Posted On: 06 APR 2021 5:01PM by PIB Bengaluru

ತೈಲ ಪರಿಶೋಧನೆ, ಪ್ರವಾಹ ಮುನ್ಸೂಚನೆ ಮತ್ತು ಜೀನೋಮಿಕ್ಸ್ ಹಾಗೂ ಔಷಧ ಅನ್ವೇಷಣೆಯಂತಹ ಕ್ಷೇತ್ರಗಳಲ್ಲಿನ ಶೈಕ್ಷಣಿಕ, ಸಂಶೋಧಕರು, ಎಂ.ಎಸ್‌.ಎಂ.ಇ.ಗಳು ಮತ್ತು ನವೋದ್ಯಮಗಳ ಹೆಚ್ಚುತ್ತಿರುವ ಗಣಕೀಕೃತ ಬೇಡಿಕೆಗಳನ್ನು ಪೂರೈಕೆಯನ್ನು ಉತ್ತೇಜಿಸಲು ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಅಭಿಯಾನ (ಎನ್‌.ಎಸ್‌.ಎಂ)ದೊಂದಿಗೆ ಭಾರತವು ವೇಗವಾಗಿ ಪವರ್ ಕಂಪ್ಯೂಟಿಂಗ್‌ ನಲ್ಲಿ ಮುಂದಾಳುವಾಗಿ ಹೊರಹೊಮ್ಮುತ್ತಿದೆ. 
ಕಂಪ್ಯೂಟಿಂಗ್ ಮೂಲಸೌಕರ್ಯವನ್ನು ಈಗಾಗಲೇ ನಾಲ್ಕು ಪ್ರಮುಖ ಸಂಸ್ಥೆಗಳಲ್ಲಿ ಸ್ಥಾಪಿಸಲಾಗಿದ್ದು, 9ಕ್ಕೂ ಹೆಚ್ಚು ಸಂಸ್ಥೆಗಳಲ್ಲಿ ಸ್ಥಾಪನಾ ಕಾರ್ಯ ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಎನ್.ಎಸ್.ಎಂ.ನ IIನೇ ಹಂತದಲ್ಲಿ 2021ರ ಸೆಪ್ಟೆಂಬರ್ ಹೊತ್ತಿಗೆ ಮುಗಿಯಲಿದ್ದು, ಇದು ದೇಶದ ಕಂಪ್ಯೂಟಿಂಗ್ ಶಕ್ತಿಯನ್ನು 16 ಪೆಟಾಫ್ಲಾಪ್ (ಪಿ.ಎಫ್.)ಗಳಿಗೆ ತೆಗೆದುಕೊಂಡು ಹೋಗಲಿದೆ. ಭಾರತದಲ್ಲಿ ಜೋಡಣೆ ಮತ್ತು ಉತ್ಪಾದನೆಯೊಂದಿಗೆ ಸೂಪರ್ ಕಂಪ್ಯೂಟಿಂಗ್ ಮೂಲಸೌಕರ್ಯವನ್ನು ಭಾರತದ ಒಟ್ಟು 14 ಪ್ರಮುಖ ಸಂಸ್ಥೆಗಳಲ್ಲಿ ಸ್ಥಾಪಿಸಲು ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲಾಗಿದೆ. ಇವುಗಳಲ್ಲಿ ಐಐಟಿಗಳು, ಎನ್.ಐ.ಟಿಗಳು, ರಾಷ್ಟ್ರೀಯ ಪ್ರಯೋಗಾಲಯಗಳು ಮತ್ತು ಐ.ಐ.ಎಸ್.ಇ.ಆರ್.ಗಳು ಸೇರಿವೆ.
ಎನ್.ಎಸ್.ಎಂ. ಹಂತ Iರಲ್ಲಿ ಯೋಜಿತ ಮೂಲಸೌಕರ್ಯಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ ಮತ್ತು ಹಂತ IIರ ಸ್ಥಾಪನೆ ಶೀಘ್ರವೇ ಆಗಲಿದೆ. ಹಂತ IIIನ್ನು ಈ ವರ್ಷ ಆರಂಭಿಸಲಾಗಿದ್ದು, ಇದು ಕಂಪ್ಯೂಟಿಂಗ್ ವೇಗವನ್ನು 45ಪೆಟಫ್ಲಾಪ್ ಗಳಿಗೆ ತಲುಪಿಸಲಿದೆ. ಇದರಲ್ಲಿ ರಾಷ್ಟ್ರೀಯ ಸೌಲಭ್ಯವಾಗಿ ತಲಾ 3ಪಿಎಫ್ ನ ಮೂರು ಸಿಸ್ಟಮ್ ಗಳು ಮತ್ತು 20 ಪಿಎಫ್ ನ ಒಂದು ಸಿಸ್ಟಮ್ ಸೇರಿದೆ. 
ರಾಷ್ಟ್ರೀಯ ಜ್ಞಾನ ಜಾಲ (ಎನ್.ಕೆ.ಎನ್) ಬೆಂಬಲ ವ್ಯವಸ್ಥೆಯೊಂದಿಗೆ ಸೂಪರ್ ಕಂಪ್ಯೂಟಿಂಗ್ ಗ್ರಿಡ್ ನಲ್ಲಿ ಅವುಗಳನ್ನು ಸಂಪರ್ಕಿಸುವ ಮೂಲಕ ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಅಭಿಯಾನವನ್ನು ದೇಶದ ಸಂಶೋಧನಾ ಸಾಮರ್ಥ್ಯ ಮತ್ತು ದಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಆರಂಭಿಸಲಾಗಿದೆ. ಎನ್.ಎಸ್.ಎಂ. ದೇಶಾದ್ಯಂತದ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಸೂಪರ್ ಕಂಪ್ಯೂಟಿಂಗ್ ಸೌಲಭ್ಯದ ಗ್ರಿಡ್ ಅನ್ನು ಸ್ಥಾಪಿಸುತ್ತಿದೆ. ಇದರಲ್ಲಿ ಭಾಗಶಃ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದರೆ, ಮತ್ತೆ ಭಾಗಶಃ ದೇಶೀಯವಾಗಿ ನಿರ್ಮಿಸಲಾಗುತ್ತಿದೆ. ಈ ಅಭಿಯಾನವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್.ಟಿ.) ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂ.ಇ.ಐಟಿವೈ) ಜಂಟಿಯಾಗಿ ನಿರ್ವಹಿಸುತ್ತಿದೆ ಮತ್ತು ಇದನ್ನು ಪುಣೆಯ ಮುಂದುವರಿದ ಕಂಪ್ಯೂಟಿಂಗ್ ಅಭಿವೃದ್ಧಿ ಕೇಂದ್ರ (ಸಿ-ಡಾಕ್)  ಮತ್ತು ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರ (ಐಐಎಸ್ಸಿ.) ಅನುಷ್ಠಾನಗೊಳಿಸುತ್ತಿದೆ.   
ಪರಮ್ ಶಿವೆ, ದೇಶೀಯವಾಗಿ ಜೋಡಣೆಯಾದ ಪ್ರಥಮ ಸೂಪರ್ ಕಂಪ್ಯೂಟರ್ ಆಗಿದ್ದು, ಅದನ್ನು ಐಐಟಿ (ಬಿ.ಎಚ್.ಯು.)ನಲ್ಲಿ ಸ್ಥಾಪಿಸಲಾಗಿದೆ, ನಂತರ ಪರಮ್ ಶಕ್ತಿ, ಪರಮ್ ಬ್ರಹ್ಮ, ಪರಮ್ ಯುಕ್ತಿ, ಪರಮ್ ಸಂಜ್ಞಾನಕ್ ಗಳನ್ನು  ಅನುಕ್ರಮವಾಗಿ ಐಐಟಿ  ಖರಗ್ಪುರ, ಐಐಎಸ್ಇಆರ್, ಪುಣೆ, ಜೆಎನ್.ಸಿಎಎಸ್.ಆರ್. ಬೆಂಗಳೂರು ಮತ್ತು ಐಐಟಿ ಕಾನ್ಪುರದಲ್ಲಿ ಸ್ಥಾಪಿಸಲಾಗಿದೆ. 
ಎಚ್‌.ಪಿ.ಸಿ ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ನ ಸಮೀಕರಣದೊಂದಿಗೆ ಸೂಪರ್‌ ಕಂಪ್ಯೂಟಿಂಗ್‌ ನಲ್ಲಿ ಮುಂಚೂಣಿಯ ಸ್ಥಾನದತ್ತ ಸಾಗುತ್ತಿರುವ ಭಾರತ ಪಯಣದಲ್ಲಿ ಈಗ ಹೊಸ ಆಯಾಮ ಸೇರ್ಪಡೆಯಾಗಿದೆ. ಸಿ-ಡಾಕ್ ನಲ್ಲಿ 200ಎಐ ಪಿಎಫ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ನ ಸೂಪರ್ ಕಂಪ್ಯೂಟಿಂಗ್ ವ್ಯವಸ್ಥೆಯನ್ನು ರೂಪಿಸಲಾಗಿದೆ ಮತ್ತು ಸ್ಥಾಪಿಸಲಾಗಿದೆ, ಇದು ಎಐಗೆ ಸಂಬಂಧಿಸಿದ ಕಂಪ್ಯೂಟಿಂಗ್-ವೇಗವನ್ನು ಹಲವಾರು ಪಟ್ಟು ಹೆಚ್ಚಿಸಿ ಅನೂಹ್ಯವಾದ ದೊಡ್ಡ-ಪ್ರಮಾಣದ ಎಐ ಕೆಲಸದ ಹೊರೆಗಳನ್ನು ನಿಭಾಯಿಸುತ್ತದೆ.
ಪರಮ್ ಸಿದ್ಧಿ – ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಅತಿ ಹೆಚ್ಚಿನ ಸಾಮರ್ಥ್ಯದ ಕಂಪ್ಯೂಟಿಂಗ್ –ಕೃತಕ ಬುದ್ಧಿಮತ್ತೆ (ಎಚ್.ಪಿ.ಸಿ.-ಎ.ಐ)ಯ ಸೂಪರ್ ಕಂಪ್ಯೂಟ್ ಆಗಿದೆ, 2020ರ ನವೆಂಬರ್ 16ರಂದು ಬಿಡುಗಡೆ ಮಾಡಲಾದ ಇದು ವಿಶ್ವದ ಅಗ್ರ 500 ಅತ್ಯಂತ ಶಕ್ತಿಶಾಲಿ ಸೂಪರ್ ಕಂಪ್ಯೂಟರ್ ಗಳ ಪೈಕಿ 62ನೇ ಜಾಗತಿಕ ಶ್ರೇಯಾಂಕ ಪಡೆದ ಸಾಧನೆ ಮಾಡಿದೆ.
ಈ ಅಭಿಯಾನ, 4500ಕ್ಕೂ ಹೆಚ್ಚು ಎಚ್.ಪಿ.ಸಿ. ಅರಿವಿನ ಮಾನವ ಶಕ್ತಿ ಮತ್ತು ಬೋಧಕರನ್ನು ಈವರೆಗೆ ತರಬೇತಿಗೊಳಿಸುವ ಮೂಲಕ ಮುಂದಿನ ಪೀಳಿಗೆಯ ಸೂಪರ್ ಕಂಪ್ಯೂಟರ್ ತಜ್ಞರನ್ನು ರೂಪಿಸುತ್ತಿದೆ. ಎಚ್.ಪಿ.ಸಿ. ತರಬೇತಿಯ ಚಟುವಟಿಕೆಗಳನ್ನು ವಿಸ್ತರಿಸಲು, ಎಚ್.ಪಿ.ಸಿ. ಮತ್ತು ಎ.ಐ.ನಲ್ಲಿ ತರಬೇತಿ ನೀಡಲು ನಾಲ್ಕು ಎನ್.ಎಸ್.ಎಂ. ನೋಡಲ್ ಕೇಂದ್ರಗಳನ್ನು ಐಐಟಿ ಖರಗ್ಪುರ, ಐಐಟಿ ಮದ್ರಾಸ್, ಐಐಟಿ ಗೋವಾ ಮತ್ತು ಐಐಟಿ ಪಾಲಕ್ಕಾಡ್ ನಲ್ಲಿ ಸ್ಥಾಪಿಸಲಾಗಿದೆ.  ಈ ಕೇಂದ್ರಗಳು ಎಚ್.ಪಿ.ಸಿ. ಮತ್ತು ಎ.ಐ.ನಲ್ಲಿ ಆನ್ ಲೈನ್ ತರಬೇತಿ ಕಾರ್ಯಕ್ರಮಗಳನ್ನೂ ನಡೆಸಿವೆ.
ಎನ್.ಎಸ್.ಎಂ.ನಿಂದ ಮುನ್ನಡೆಸುತ್ತಿರುವ, ಭಾರತದ ಸಂಶೋಧನಾ ಸಂಸ್ಥೆಗಳ ಜಾಲ, ಉದ್ಯಮದ ಸಹಯೋಗದೊಂದಿಗೆ, ಭಾರತದಲ್ಲಿ ಹೆಚ್ಚು ಹೆಚ್ಚು ಭಾಗಗಳನ್ನು ತಯಾರಿಸುವ ತಂತ್ರಜ್ಞಾನ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ. ಮೊದಲ ಹಂತದಲ್ಲಿ, ಭಾರತದಲ್ಲಿ 30 ಪ್ರತಿಶತದಷ್ಟು ಮೌಲ್ಯವರ್ಧನೆ ಮಾಡಲಾಗಿದ್ದು, ಇದನ್ನು ಎರಡನೇ ಹಂತದಲ್ಲಿ 40 ಪ್ರತಿಶತದವರೆಗೆ ಹೆಚ್ಚಿಸಲಾಗುತ್ತಿದೆ. ಭಾರತವು ದೇಶೀಯ ಸರ್ವರ್ (ರುದ್ರ) ಅನ್ನು ಅಭಿವೃದ್ಧಿಪಡಿಸಿದೆ, ಇದು ಎಲ್ಲಾ ಸರ್ಕಾರಗಳು ಮತ್ತು ಪಿಎಸ್.ಯುಗಳ ಎಚ್‌.ಪಿ.ಸಿ. ಅವಶ್ಯಕತೆಗಳನ್ನು ಪೂರೈಸುತ್ತದೆ.
ಮೂರು ಹಂತಗಳೂ ಸುಮಾರು 75 ಸಂಸ್ಥೆಗಳಿಗೆ ಮತ್ತು ಸಾವಿರಕ್ಕೂ ಹೆಚ್ಚು ಸಕ್ರಿಯ ಸಂಶೋಧಕರಿಗೆ, ಸೂಪರ್ ಕಂಪ್ಯೂಟಿಂಗ್ ವ್ಯವಸ್ಥೆಯ ಬೆನ್ನೆಲುಬಾದ ರಾಷ್ಟ್ರೀಯ ಜ್ಞಾನ ಜಾಲ (ಎನ್.ಕೆ.ಎನ್) ಮೂಲಕ ಕಾರ್ಯ ನಿರ್ವಹಿಸುವ ಶಿಕ್ಷಣ ವೇತ್ತರಿಗೆ ಉನ್ನತ ಸಾಮರ್ಥ್ಯದ ಕಂಪ್ಯೂಟಿಂಗ್ (ಎಚ್.ಪಿ.ಸಿ.) ಸೌಲಭ್ಯಕ್ಕೆ ಪ್ರವೇಶಾವಕಾಶ ನೀಡಲಿದೆ. 
 

  

****



(Release ID: 1709957) Visitor Counter : 179