ಭೂವಿಜ್ಞಾನ ಸಚಿವಾಲಯ

ರಾಜಾಸ್ಥಾನ, ವಿದರ್ಭ ಮತ್ತು ತಮಿಳುನಾಡಿನ ಒಳನಾಡಿನಾದ್ಯಂತ ಏಪ್ರಿಲ್ 6ರಂದು ಚದುರಿದಂತೆ ಬಿಸಿ ಹವೆಯ ಅಲೆ ವಾತಾವರಣ ಸಂಭವ

Posted On: 06 APR 2021 1:07PM by PIB Bengaluru

ಭಾರತೀಯ ಹವಾಮಾನ ಇಲಾಖೆ (ಐ.ಎಂ.ಡಿ.)ಯ ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಕೇಂದ್ರದ ರೀತ್ಯ:

ಪ್ರಸಕ್ತ ತಾಪಮಾನ ಸ್ಥಿತಿ ಮತ್ತು ಮುಂದಿನ 24 ಗಂಟೆಗಳ ಅವಧಿಗೆ ಮುನ್ನೆಚ್ಚರಿಕೆ

ನಿನ್ನೆ (ಭಾರತೀಯ ಕಾಲಮಾನ ಏಪ್ರಿಲ್ 5ರ 0530ಗಂಟೆಯಿಂದ ಏಪ್ರಿಲ್ 6ರ 0530ಗಂಟೆಗಳವರೆಗೆ) ದಾಖಲಾದ ಬಿಸಿ ಹವೆ ಅಲೆ ಮತ್ತು ಗರಿಷ್ಠ ತಾಪಮಾನ

ಬಿಸಿ ಹವೆ ಅಲೆ:

ರಾಜಾಸ್ಥಾನದ ಕೆಲವು ಕಡೆ ಮತ್ತು ವಿದರ್ಭದಲ್ಲಿ ಚದುರಿದಂತೆ ಕೆಲವು ಕಡೆ ಬಿಸಿ ಹವೆಯ ವಾತಾವರಣ ಕಂಡುಬಂತು

ಗರಿಷ್ಠ ತಾಪಮಾನ:

· ಪಶ್ಚಿಮ ಮಧ್ಯಪ್ರದೇಶ, ವಿದರ್ಭ ಮತ್ತು ಮಹಾರಾಷ್ಟ್ರದ ಬಹುತೇಕ ಕಡೆಗಳಲ್ಲಿ ದಾಖಲಾಗಿದೆ; ರಾಜಾಸ್ಥಾನ, ಪೂರ್ವ ಉತ್ತರ ಪ್ರದೇಶ, ಒಡಿಶಾ, ಛತ್ತೀಸಗಢ, ಸೌರಾಷ್ಟ್ರ ಮತ್ತು ಕಚ್, ಪೂರ್ವ ಮಧ್ಯಪ್ರದೇಶ ಮತ್ತು ಮಧ್ಯ ಮಹರಾಷ್ಟ್ರದ ಕೆಲವು ಕಡೆಗಳಲ್ಲಿ ಮತ್ತು ಹರಿಯಾಣ, ಚಂಡೀಗಢ ಮತ್ತು ದೆಹಲಿ, ಪಶ್ಚಿಮ ಉತ್ತರ ಪ್ರದೇಶ, ಗುಜರಾತ್ ವಲಯ, ತೆಲಂಗಾಣ, ಕರ್ನಾಟಕದ ಉತ್ತರ ಒಳನಾಡು ಮತ್ತು ತಮಿಳುನಾಡು, ಪಾಂಡಿಚೇರಿ ಮತ್ತು ಕಾರೈಕಲ್ ನಲ್ಲಿ ಚದುರಿದಂತೆ ಗರಿಷ್ಠ ತಾಪಮಾನ 40.0°ಸೆ. ದಾಖಲಾಗಿದೆ.

· 05-04-2021ರಲ್ಲಿದ್ದಂತೆ ಗರಿಷ್ಠ ತಾಪಮಾನ: ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶದ ಅನೇಕ ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ (5.1 ° ಸೆ ಅಥವಾ ಅಧಿಕ) ಹೆಚ್ಚಾಗಿತ್ತು; ಹರಿಯಾಣ, ಚಂಡೀಗಢ ಮತ್ತು ದೆಹಲಿ, ಪಶ್ಚಿಮ ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಬಹುತೇಕ ಕಡೆಗಳಲ್ಲಿ; ಪಂಜಾಬ್ ಮತ್ತು ಅಸ್ಸಾಂ ಮತ್ತು ಮೇಘಾಲಯದ ಅನೇಕ ಕಡೆಗಳಲ್ಲಿ, ಪಂಜಾಬ್ ಮತ್ತು ಅಸ್ಸಾಂ ಮತ್ತು ಮೇಘಾಲಯದ ಹಲವೆಡೆಗಳಲ್ಲಿ ಸಾಮಾನ್ಯಕ್ಕಿಂತ (3.1° ಸೆ. ನಿಂದ 5.0 ° ಸೆ) ಹೆಚ್ಚಾಗಿತ್ತು; ಸೌರಾಷ್ಟ್ರ ಮತ್ತು ಕಚ್ ನಲ್ಲಿ ಚದುರಿದಂತೆ; ಮಧ್ಯಪ್ರದೇಶದ ಬಹುತೇಕ ಕಡೆಗಳಲ್ಲಿ, ಪೂರ್ವ ಉತ್ತರ ಪ್ರದೇಶ, ಜಾರ್ಖಂಡ್, ವಿದರ್ಭ, ಛತ್ತೀಸ್‌ ಗಢ ಮತ್ತು ಮಧ್ಯ ಮಹಾರಾಷ್ಟ್ರದ ಅನೇಕ ಸ್ಥಳಗಳಲ್ಲಿ ಸಾಮಾನ್ಯಕ್ಕಿಂತ (1.6° ಸೆ ನಿಂದ 3.0 ° ಸೆ)ಹೆಚ್ಚಾಗಿತ್ತು.; ಉಪ-ಹಿಮಾಲಯದ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ, ಒಡಿಶಾ, ಗುಜರಾತ್ ಪ್ರದೇಶ, ಕರಾವಳಿ ಕರ್ನಾಟಕ ಮತ್ತು ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂನ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಾಗಿತ್ತು. ಅದು ಹಿಮಾಚಲ ಪ್ರದೇಶದ ಕೆಲವು ಕಡೆಗಳಲ್ಲಿ ಗಣನೀಯವಾಗಿ (-3.1° ಸೆ ನಿಂದ -5.0 ° ಸೆ)ಕಡಿಮೆ ಇತ್ತು. ಇದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ತೆಲಂಗಾಣದಲ್ಲಿ ಚದುರಿದಂತೆ ಸಾಮಾನ್ಯಕ್ಕಿಂತ (-1.6° ಸೆ ನಿಂದ -3.0 ° ಸೆ) ಕಡಿಮೆ ಇತ್ತು ಮತ್ತು ದೇಶದ ಉಳಿದ ಭಾಗಗಳಲ್ಲಿ ಸಾಮಾನ್ಯದ ಸಮೀಪದಲ್ಲಿತ್ತು.

· ನಿನ್ನೆ ದೇಶದಲ್ಲಿ ಅತಿ ಹೆಚ್ಚು ಗರಿಷ್ಠ ತಾಪಮಾನ 43.5° ಸೆ. ಬ್ರಹ್ಮಪುರಿ (ವಿದರ್ಭ)ದಲ್ಲಿ ದಾಖಲಾಗಿತ್ತು.

ಮುಂದಿನ 24 ಗಂಟೆಗಳಲ್ಲಿ ಬಿಸಿ ಹವೆಯ ಅಲೆಯ ಮುನ್ಸೂಚನೆ (ಭಾರತೀಯ ಕಾಲಮಾನ ಏಪ್ರಿಲ್ 6ರ 0530 ಗಂಟೆಯಿಂದ ಏಪ್ರಿಲ್ 7ರ 0530 ಗಂಟೆಯವರೆಗೆ):

· ರಾಜಾಸ್ಥಾನ, ವಿದರ್ಭ ಮತ್ತು ತಮಿಳುನಾಡಿನ ಒಳನಾಡಿನಲ್ಲಿ ಚದುರಿದಂತೆ ಬಿಸಿ ಹವೆಯ ಅಲೆಯ ಪರಿಸ್ಥಿತಿ ಇರಲಿದೆ..

 

(ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ)

https://static.pib.gov.in/WriteReadData/specificdocs/documents/2021/apr/doc20214631.pdf

 

ಸ್ಥಳ ನಿರ್ದಿಷ್ಟ ಮುನ್ನೆಚ್ಚರಿಕೆ ಮತ್ತು ಹವಾಮಾನ ಮುನ್ಸೂಚನೆಗಳಿಗಾಗಿ ಮೌಸಮ್ ಆಪ್ MAUSAM APP ಕೃಷಿ ಸಂಬಂಧಿತ ಮುನ್ಸೂಚನೆಗಳಿಗೆ ಮೇಘದೂತ್ ಆಪ್ MEGHDOOT APP ಮತ್ತು ಮಿಂಚು, ಸಿಡಿಲಿನ ಮುನ್ನೆಚ್ಚರಿಕೆಗಾಗಿ ದಾಮಿನಿ ಆಪ್ DAMINI APP ಡೌನ್ ಲೋಡ್ ಮಾಡಿಕೊಳ್ಳಿ. ಜಿಲ್ಲಾವಾರು ಹವಾಮಾನ ಮುನ್ಸೂಚನೆಗಳಿಗಾಗಿ ಎಂ.ಸಿ /ಆರ್.ಎಂ.ಸಿ. ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.

*****



(Release ID: 1709853) Visitor Counter : 150