ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಕೈಯಿಂದ ಮಾಡುವ ರೈಲು ಹಳಿಗಳ ತ್ಯಾಜ್ಯ ಸ್ವಚ್ಛತೆಯನ್ನು ಬದಲಾಯಿಸಲಿರುವ ಸ್ವಯಂ ಚಾಲಿತ ತ್ಯಾಜ್ಯ ಸ್ವಚ್ಛತಾ ವಾಹನ

Posted On: 05 APR 2021 3:22PM by PIB Bengaluru

ಇನ್ನೂ ರೂಢಿಯಲ್ಲಿರುವ ರೈಲ್ವೆ ಹಳಿಗಳ ಮೇಲೆ ಬಿದ್ದಿರುವ ಮಾನವ ತ್ಯಾಜ್ಯವನ್ನು ಕೈಯಿಂದ ಸ್ವಚ್ಛ ಮಾಡುವ ಪದ್ಧತಿಯನ್ನು ಶೀಘ್ರವೇ ಸ್ವಯಂ ಚಾಲಿತ ರೈಲು ಹಳಿ ಮಲ ಸ್ವಚ್ಛತೆಯ ವಾಹನ  ಬದಲಾಯಿಸಲಿದೆ. 

ದೇಶದಲ್ಲಿ 1993ರಿಂದ ಮಾನವರಿಂದ ಮಲ ಸ್ವಚ್ಛತೆಯನ್ನು ನಿಷೇಧಿಸಿದ್ದರೂ, ರೈಲು ಹಳಿಗಳ ಮೇಲೆ ಬಿದ್ದ ಮಲವನ್ನು ಪೊರಕೆಯಿಂದ ಮತ್ತು ಲೋಹದ ಪಟ್ಟಿಗಳಿಂದ ಶುಚಿ ಮಾಡುವ ಪುರುಷರು ಮತ್ತು ಮಹಿಳೆಯರು ಕಂಡು ಬರುತ್ತಿದ್ದರು. ಹಳಿಗಳಿಂದ ಕಸ, ನೈಟ್ ಸಾಯಿಲ್, ಅತಿಯಾದ ಕೊಳಕು, ಎಣ್ಣೆ ಮತ್ತು ಇತರ ಅಂಟಿಕೊಂಡ ವಸ್ತುಗಳನ್ನು ತೆಗೆದ ನಂತರ ಅಧಿಕ ಒತ್ತಡದ ನೀರಿನ ಜೆಟ್‌ ಗಳಿಂದ  ಸ್ವಚ್ಛಗೊಳಿಸಲಾಗುತ್ತದೆ.

ಭೋಪಾಲ್ ನ ರಾಷ್ಟ್ರೀಯ ತಾಂತ್ರಿಕ ಶಿಕ್ಷಕರ ತರಬೇತಿ ಮತ್ತು ಸಂಶೋಧನಾ ಸಂಸ್ಥೆ (ಎನ್.ಐ.ಟಿ.ಟಿ.ಟಿ.ಆರ್.)ನ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಡಾ. ಶರದ್ ಕೆ ಪ್ರಧಾನ್ ಅವರು ಮೇಕ್ ಇನ್ ಇಂಡಿಯಾ ಉಪಕ್ರಮದ ನಿಟ್ಟಿನಲ್ಲಿ, ಬಹು ಕಾರ್ಯಾಚರಣೆಯ ರೈಲು ಹಳಿ ಮೇಲಿನ ಮಲ ಸ್ವಚ್ಛ ಮಾಡುವ ವಾಹನವನ್ನು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ (ಡಿ.ಎಸ್.ಟಿ.) ಇಲಾಖೆಯ ಮುಂದುವರಿದ ಉತ್ಪಾದನಾ ತಂತ್ರಜ್ಞಾನ ಕಾರ್ಯಕ್ರಮದ ಬೆಂಬಲದೊಂದಿಗೆ  ಅಭಿವೃದ್ಧಿಪಡಿಸಿದೆ. ಈ ತಂತ್ರಜ್ಞಾನಕ್ಕೆ ರಾಷ್ಟ್ರೀಯ ಪೇಟೆಂಟ್ ಪ್ರಕಟಿಸಲಾಗಿದೆ.

ಒಣ ಮತ್ತು ಹಸಿ ತ್ಯಾಜ್ಯವನ್ನು ಹೀರಿಕೊಳ್ಳುವ, ಗಾಳಿ ಮತ್ತು ನೀರನ್ನು ಸಿಂಪರಿಸುವ ಕೊಳವೆ, ನಿಯಂತ್ರಣ  ವ್ಯವಸ್ಥೆಯೊಂದಿಗೆ ಸಜ್ಜಾಗಿರುವ ರಸ್ತೆ ಮತ್ತು ರೈಲು ಹಳಿಯಲ್ಲಿ ಸಾಗುವ ಸ್ವಯಂ ಚಾಲಿತ ವಾಹನ  ರೈಲು ಮತ್ತ ರಸ್ತೆಯ ಸೇರ್ಪಡೆಗಳನ್ನು ಹೊಂದಿದ್ದು, ಬಹು ಕಾರ್ಯಾಚರಣೆಯದಾಗಿದ್ದು, ಸುಗಮವಾಗಿ ಚಲಾಯಿಸಬಹುದಾಗಿದೆ. ತೀವ್ರವಾಗಿ ಬದಲಾಗುತ್ತಿರುವ ವಾತಾವರಣದಲ್ಲಿ ಶುಚಿತ್ವದ ಸಕಾಲದ ನಿಯಂತ್ರಣಕ್ಕಾಗಿ ಪ್ರದರ್ಶನ ಘಟಕವನ್ನು ಒದಗಿಸಲಾಗಿದೆ. ರೈಲ್ವೆ ಹಳಿಯ ಸ್ವಯಂಚಾಲಿತ ಶುಚಿಗೊಳಿಸುವಿಕೆಯನ್ನು ಕೈಗೊಳ್ಳಲು ಚಾಲಕನ ಜೊತೆಗೆ ಒಬ್ಬ ವ್ಯಕ್ತಿ ಮಾತ್ರ ಇದ್ದರೆ ಸಾಕು.

ಒಮ್ಮೆ ಒಣ ಮತ್ತು ಹಸಿ ತ್ಯಾಜ್ಯದ ಹಿರಿಕೊಳ್ಳುವಿಕೆ ಮುಗಿದ ತರುವಾಯ, ಮಾನವ ತ್ಯಾಜ್ಯಅಥವಾ ಅರೆ ಘನ ತ್ಯಾಜ್ಯವೇನಾದರೂ ಹಳಿಗಳ ಮೇಲೆ ಉಳಿದಿದ್ದಲ್ಲಿ, ಅದನ್ನು ತೆರವು ಮಾಡಲು ನೀರಿನ ಕೊಳವೆಗಳು ನೀರನ್ನು ರಭಸದಿಂದ ಸಿಂಪರಣೆ ಮಾಡಲು ಆರಂಭಿಸುತ್ತವೆ. ಮತ್ತೊಂದು ವಿಭಾಗದ ಕೊಳವೆಗಳು ನೊಣಗಳು, ಇಲಿಗಳು ಮತ್ತು ಇತರ ಕೀಟಗಳನ್ನು ತೊಡೆದುಹಾಕಲು ಸೋಂಕುನಿವಾರಕಗಳನ್ನು ಹಳಿಗಳ ಮೇಲೆ ಸಿಂಪಡಿಸುತ್ತವೆ.

ನೀರಿನ ಜೆಟ್ ಗಳು ಎರಡು ಹಳಿಗಳ ನಡುವೆ ಇರುವ ಹಸಿ ಕೊಳೆ ಮತ್ತು ಮಾನವ ತ್ಯಾಜ್ಯವನ್ನು ಸಂಪೂರ್ಣವಾಗಿ ತೆಗೆದುಹಾಕುತ್ತವೆ. ಒಣ ಮತ್ತು ಹಸಿ ತ್ಯಾಜ್ಯವೆರಡನ್ನೂ ಪ್ರತ್ಯೇಕ ಟ್ಯಂಕ್ ಗಳಲ್ಲಿ ಸಂಗ್ರಹಿಸುತ್ತವೆ ಸಂಪೂರ್ಣ ತುಂಬಿದ ಬಳಿಕ ಸ್ಥಳೀಯ ಪುರಸಭೆಯ ಸೂಕ್ತ ತ್ಯಾಜ್ಯ ಸಂಗ್ರಹಣಾ ತಾಣದಲ್ಲಿ ಸುರಿಯುತ್ತವೆ. ಹಳಿಗೆ ಸಮಾನಾಂತರವಾಗಿ ಕಂದಕದಿಂದ ಗಲೀಜನ್ನು ತೆರವುಗೊಳಿಸಲು ಇದಕ್ಕೆ ಜಾಯ್‌ ಸ್ಟಿಕ್-ನಿಯಂತ್ರಿತ ಟೆಲಿಸ್ಕೋಪಿಂಗ್ ಹೀರುವ ಕೊಳವೆಯನ್ನು ಅಳವಡಿಸಲಾಗಿದೆ. ಒಳಚರಂಡಿಯಿಂದ ತ್ಯಾಜ್ಯ ಹೀರುವಂತೆ ಟೆಲಿಸ್ಕೋಪಿಂಗ್ ಕೊಳವೆಯನ್ನು ಪಕ್ಕದ ಕಂದಕದಲ್ಲಿ ಸುಲಭವಾಗಿ ಇರಿಸಬಹುದು.

ಇದು ರಸ್ತೆ ಮತ್ತು ರೈಲು ಹಳಿಯ ಮೇಲೆ ಸಾಗುವ ವಾಹನವಾಗಿದ್ದು, ಇದನ್ನು ಹಳಿ ಮತ್ತು ರಸ್ತೆಯಲ್ಲಿ ಸಾಮಗ್ರಿ/ತ್ಯಾಜ್ಯ ಸಾಗಿಸುವ ವಾಹನವಾಗಿ ಭಾರತೀಯ ರೈಲ್ವೆ ಬಳಸುತ್ತದೆ. ಇದನ್ನು ಭಾರತೀಯ ರೈಲ್ವೆ ನಿರ್ವಹಣೆ/ಪರಿಶೀಲನೆ ವಾಹನವಾಗಿ ಮತ್ತು ಸೋಂಕು ನಿರೋಧಕ ಸಿಂಪರಣೆಯ ವಾಹನವಾಗಿಯೂ ಬಳಸಬಹುದು.  ತ್ಯಾಜ್ಯ ಸ್ವಚ್ಛತೆಯಲ್ಲದ ವಿಧಾನದಲ್ಲಿ, ಇದನ್ನು ಭಾರತೀಯ ರೈಲ್ವೆ ಸಾರಿಗೆ ಮತ್ತು ಪರಿಶೀಲನಾ ವಾಹನವಾಗಿಯೂ ಬಳಸಬಹುದು. ಯಶಸ್ವಿ ಅಭಿವೃದ್ಧಿ ಮತ್ತು ಪರೀಕ್ಷೆಯ ಬಳಿಕ, ಅಭಿವೃದ್ಧಿ ಪಡಿಸಲಾದ ವಾಹನವನ್ನು ಭಾರತೀಯ ರೈಲ್ವೆ ತನ್ನ ಎಲ್ಲ ನಿಲ್ದಾಣಗಳಿಗೂ ತ್ಯಾಜ್ಯ ಸ್ವಚ್ಛತೆ ವಾಹನವಾಗಿ ಬಳಸಬಹುದು. ಹೀಗೆ ಅಭಿವೃದ್ಧಿ ಪಡಿಸಲಾಗಿರುವ ಈ ಅಲ್ಪ ನಿರ್ವಹಣಾ ವೆಚ್ಚದ ವಾಹನವನ್ನು ಹಾಲಿ ಇರುವ ಸಂಶೋಧನಾ ಪ್ರಯತ್ನಗಳಿಗೆ ಹೋಲಿಸಿದರೆ ಹಚ್ಚು ಸಮರ್ಥವಾಗಿಲು ಇದರ  ಸಾಂದ್ರ ಗಾತ್ರ, ಹಿಂದೆ ಮತ್ತು ಮುಂದೆ ಸಾಗುವ ವ್ಯವಸ್ಥೆ ಮತ್ತು ನಿರಂತರ ಮತ್ತು ಮರುಕಳಿಸುವ ಕ್ರಮದ ವ್ಯವಸ್ಥೆ ಅಳವಡಿಸಲಾಗಿದೆ,

ಪ್ರಾಯೋಗಿಕ ಪರೀಕ್ಷೆಯ ಬಳಿಕ, ಉತ್ಪಾದನಾ ಕೈಗಾರಿಕೆಗಳು ಡಾ. ಶರದ್ ಕೆ ಪ್ರಧಾನ್ ಅವರೊಂದಿಗೆ ಸೇರಿ ದೊಡ್ಡ ಪ್ರಮಾಣದಲ್ಲಿ ಇದನ್ನು ವಾಣಿಜ್ಯ ಉದ್ದೇಶಕ್ಕೆ ಉತ್ಪಾದಿಸಬಹುದಾಗಿದೆ.

ಹೆಚ್ಚಿನ ವಿವರಗಳಿಗೆ ಡಾ. ಶರದ್ ಕೆ ಪ್ರಧಾನ್ (spradhan@nitttrbpl.ac.in, 9300802353) ಅವರನ್ನು ಸಂಪರ್ಕಿಸಬಹುದು.

 

https://static.pib.gov.in/WriteReadData/userfiles/image/1newMSU1.png

 

 

 

 

 

 

 

ಚಿತ್ರ: ಅಭಿವೃದ್ಧಿಪಡಿಸಲಾದ ವಾಹನದ ಮಾದರಿ

ಪ್ರಸ್ತಾಪಿತ ಬಹು ಕಾರ್ಯನಿರ್ವಹಣೆಯ ರೈಲು ಹಳಿ ತ್ಯಾಜ್ಯ ಸ್ವಚ್ಛತೆ ವಾಹನ (1) ಭಾರತೀಯ ರೈಲ್ವೆಯ ಹಳಿಗಳ ಶುಚಿಗೊಳಿಸುವಿಕೆ ಸಮಸ್ಯೆಗಳನ್ನು ಪರಿಹರಿಸಲು ವಿನ್ಯಾಸ ಮಾಡಿದ ಯಂತ್ರವಾಗಿದೆ (2). ವಾಹನವು ಬಹುಕಾರ್ಯಾಚರಣೆಯ, ಡೀಸೆಲ್ ಎಂಜಿನ್ ಚಾಲಿತ ರಸ್ತೆ ಮತ್ತು ರೈಲುಹಳಿಗಳ ಮೇಲೆ ಸಾಗುವ ವಾಹನವಾಗಿದೆ (3). ಒಣ ತ್ಯಾಜ್ಯ (4) ಮತ್ತು ಹಸಿ ತ್ಯಾಜ್ಯ ಹೀರುವ ಘಟಕಗಳ ಸಂಯೋಜನೆಯ (5) ಮೂಲಕ ಸ್ವಚ್ಛತೆಯ ಕಾರ್ಯವನ್ನು ಸಾಧಿಸಲಾಗುತ್ತದೆ. ಪ್ಲಾಸ್ಟಿಕ್ ಚೀಲಗಳು, ತ್ಯಾಜ್ಯ ಕಾಗದಗಳು, ಪುಡಿಮಾಡಿದ ಪ್ಲಾಸ್ಟಿಕ್ ಬಾಟಲಿಗಳು, ಪಾನೀಯ ಡಬ್ಬಗಳು, ಪ್ಲಾಸ್ಟಿಕ್ ತಟ್ಟೆಗಳು, ಪ್ಲಾಸ್ಟಿಕ್ ಚೀಲಗಳು ಮತ್ತು ಮಾನವ ತ್ಯಾಜ್ಯದಿಂದ ಹಿಡಿದು ಎಲ್ಲಾ ಕಸವನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ಈ ಹಳಿ ಸ್ವಚ್ಛಗೊಳಿಸುವ ವಾಹನವನ್ನು ವಿನ್ಯಾಸಗೊಳಿಸಲಾಗಿದೆ. ಸ್ವಭಾವದಲ್ಲಿ ಜಿಗುಟಾದ ಅಥವಾ ಉಳಿಕೆ ತ್ಯಾಜ್ಯವನ್ನು ಹೆಚ್ಚಿನ ಒತ್ತಡದ ನೀರಿನ ಜೆಟ್‌ ಗಳು (6) ಹಳಿಗಳ ಉದ್ದಕ್ಕೂ ಹರಿಯುವ ಚರಂಡಿಗಳ ಕಡೆಗೆ ತಳ್ಳುತ್ತವೆ, ಮತ್ತು ನಿಯಂತ್ರಿತ ಟೆಲಿಸ್ಕೋಪಿಂಗ್ ಹೀರುವ ಕೊಳವೆ (7) ಯನ್ನು ಸುಲಭವಾಗಿ ಹೀರುವಂತೆ ಪಕ್ಕದ ಒಳಚರಂಡಿ ತ್ಯಾಜ್ಯ ಕಂದಕದ ಸೂಕ್ತ ಸ್ಥಾನದಲ್ಲಿ ಇಡಬಹುದಾಗಿದೆ. ಕೀಟನಾಶಕ ಘಟಕವನ್ನು (8) ಕೀಟಗಳು, ಜಿರಳೆ ಮತ್ತು ಇಲಿಗಳನ್ನು ಕೊಲ್ಲಲು ಕೀಟನಾಶಕವನ್ನು ಸಿಂಪಡಿಸುವ ನಳಿಕೆಯೊಂದಿಗೆ ವಾಹನದ ಹಿಂಭಾಗದಲ್ಲಿ ಇರಿಸಲಾಗುತ್ತದೆ.

https://static.pib.gov.in/WriteReadData/userfiles/image/Untitled-3copyAQXP.jpg

ಚಿತ್ರ: ಅಭಿವೃದ್ಧಿಪಡಿಸಲಾದ ವಾಸ್ತವ ವಾಹನದ ಮುಂಬದಿಯ ನೋಟ

https://static.pib.gov.in/WriteReadData/userfiles/image/Untitled-5copy4J0O.jpg

 

ಚಿತ್ರ: ಅಭಿವೃದ್ಧಿಪಡಿಸಲಾದ ವಾಸ್ತವ ವಾಹನದ ಹಿಂಬದಿಯ ನೋಟ

******


(Release ID: 1709811) Visitor Counter : 324