ರೈಲ್ವೇ ಸಚಿವಾಲಯ

ವಿಶ್ವದ ಅತಿ ಎತ್ತರದ ಅಪ್ರತಿಮ ಚೆನಾಬ್ ಸೇತುವೆಯ ಕಮಾನು ಮುಚ್ಚುವ ಕಾರ್ಯ ಪೂರ್ಣಗೊಳಿಸಿದ ರೈಲ್ವೆ


359 ಮೀಟರ್ ಎತ್ತರದಲ್ಲಿದೆ ಚೆನಾಬ್ ಸೇತುವೆ

ಭಾರತೀಯ ಇತಿಹಾಸದಲ್ಲಿ ಇತ್ತೀಚೆಗೆ ಯಾವುದೇ ಯೋಜನೆಯಲ್ಲೂ ಭಾರತ ಎದುರಿಸದ ಅತಿದೊಡ್ಡ ತಾಂತ್ರಿಕ ಸವಾಲು ಇದಾಗಿತ್ತು.

ಕತ್ರಾ – ಬನಿಹಾಲ್ ವಿಭಾಗವನ್ನು ಪೂರ್ಣಗೊಳಿಸುವತ್ತ ಪ್ರಮುಖ ಹೆಜ್ಜೆ

ತಳಪಾಯದ ರಕ್ಷಣೆ: ಇಂಡಿಯನ್ ಇನ್ಸ್ಟಿಟ್ಯೂ ಆಪ್ ಬೆಂಗಳೂರು.

Posted On: 05 APR 2021 3:22PM by PIB Bengaluru

ಅಪ್ರತಿಮ ಚೆನಾಬ್ ಸೇತುವೆಯ ಕಮಾನು ಮುಚ್ಚುವ ಕಾಮಗಾರಿಯನ್ನು ಭಾರತೀಯ ರೈಲ್ವೆ ಇಂದು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಚೆನಾಬ್ ಸೇತುವೆ ವಿಶ್ವದ ಅತಿದೊಡ್ಡ ರೈಲ್ವೆ ಸೇತುವೆಯಾಗಿದ್ದು, ಇದು ಉದಂಪುರ್ -ಶ್ರೀನಗರ್ – ಬಾರಾಮುಲ್ಲಾ ರೈಲ್ವೆ ಮಾರ್ಗವನ್ನು [ಯು.ಎಸ್.ಬಿ.ಆರ್.ಎಲ್] ಸಂಪರ್ಕಸುತ್ತದೆ.  ಈ ಅಸಾಧಾರಣ ಸೇತುವೆಗೆ ಉಕ್ಕಿನ ಕಮಾನು ಮುಚ್ಚುವ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಚಿನಾಬ್ ಸೇತುವೆ ಮೇಲೆ ನಿರ್ಮಿಸಿದ ಅತ್ಯಂತ ಕಠಿಣ ಕಾಮಗಾರಿ ಇದಾಗಿದೆ. ಈ ಕೆಲಸ  ಪೂರ್ಣಗೊಂಡಿರುವುದರಿಂದ ಬನಿಹಾಲ್ – ಕತ್ರಾ ನಡುವೆ 111 ಕಿಲೋಮೀಟರ್ ಉದ್ದದ ಅಂಕುಡೊಂಕು ಮಾರ್ಗದ ಹಾದಿ ಸುಗಮಗೊಂಡಂತಾಗಿದೆ. ಭಾರತೀಯ ರೈಲ್ವೆ ಇತಿಹಾಸದಲ್ಲಿ ಹಿಂದೆಂದೂ ಇಲ್ಲದಷ್ಟು ಸಿವಿಲ್ ತಾಂತ್ರಿಕ ಸವಾಲನ್ನು ಈ ಕಾಮಗಾರಿ ಒಳಗೊಂಡಿತ್ತು. ಇಂದು ಸೇತುವೆಯ ಅತ್ಯುನ್ನತ ಸ್ಥಳದಲ್ಲಿ 5.6 ಮೀಟರ್ ಉದ್ದದ ಲೋಹದ ತುಂಡು ಅಳವಡಿಸಲಾಗಿದ್ದು, ಇದು ಕಮಾನಿನ ಎರಡೂ ತೋಳುಗಳನ್ನು ಸೇರಿಕೊಂಡಿದೆ. ಇದು ಪ್ರಸ್ತುತ ನದಿಯ ಎರಡೂ ದಡಗಳನ್ನು ಆವರಿಸಿಕೊಂ.ಡಿದೆ ಇದರಿಂದ ಕಮಾನುಗಳ ಆಕಾರ ಪೂರ್ಣಗೊಂಡಂತಾಗಿದ್ದು, ಈ ಸೇತುವೆಯು ಕೆಳಗಿನಿಂದ ಮೇಲಿನವರೆಗೆ 359 ಮೀಟರ್ ಅಂತರ ಇರುವುದು ವಿಶೇಷವಾಗಿದೆ. ಪ್ರಮುಖವಾದ ಕಮಾನುಗಳ ಕೆಲಸ ಪೂರ್ಣಗೊಂಡ ನಂತರ ಅಲ್ಲಿ ಅಳವಡಿಸಲಾಗಿದ್ದ ಕೇಬಲ್ ಗಳನ್ನು ತೆಗೆದು, ಕಮಾನಿನ ಪಕ್ಕದಲ್ಲಿ ಕಾಂಕ್ರಿಟ್ ಹಾಕಿ, ಸ್ಟೀಲ್ ಸ್ಟ್ರಸ್ಟೆಲ್ ನಿರ್ಮಿಸುವ, ಟ್ರ್ಯಾಕ್ ನಿರ್ಮಾಣ ಕೆಲಸ ಆರಂಭಿಸಲಾಗುತ್ತಿದೆ.

ಕಾಮಗಾರಿ ಪೂರ್ಣಗೊಂಡ ನಂತರ ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಸಿಇಒ ಶ್ರೀ ಸುನೀತ್ ಶರ್ಮಾ, ಉತ್ತರ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಶ್ರೀ ಅಶುತೋಷ್ ಗಂಗಲ್ ಅವರೊಂದಿಗೆ ರೈಲ್ವೆ, ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು,  ವಾಣಿಜ್ಯ, ಕೈಗಾರಿಕೆ ಸಚಿವ ಶ್ರೀ ಪಿಯೂಷ್ ಗೋಯಲ್,  ವಿಡಿಯೋ ಕಾನ್ಪರೆನ್ಸ್ ಮೂಲಕ ಕಾಮಗಾರಿಯನ್ನು ಪರಿಶೀಲಿಸಿದರು. 

ಚೆನಾಬ್ ಸೇತುವೆಯ ಕಮಾನುಗಳ ಪ್ರಮುಖ ಲಕ್ಷಣಗಳು

 

  • ಕಾ‍ಶ್ಮೀರ ಕಣಿವೆಯಿಂದ ರಾಷ್ಟ್ರದ ಇತರೆ ಭಾಗಗಳಿಗೆ ಸಂಪರ್ಕಿಸುವ ಯು.ಎಸ್.ಬಿ.ಆರ್.ಎಲ್ ಯೋಜನೆಯ ಭಾಗವಾಗಿ ಭಾರತೀಯ ರೈಲ್ವೆಯಿಂದ ಚೆನಾಬ್ ನದಿಯಲ್ಲಿ ಈ ಅಸಾಧಾರಣ ಸೇತುವೆ ನಿರ್ಮಾಣ
  • 1315 ಮೀಟರ್ ಉದ್ದದ ಸೇತುವೆ.
  • ನದಿ ಪಾತ್ರದಿಂದ ಈ ಸೇತುವೆ 359 ಮೀಟರ್ ಎತ್ತರದಲ್ಲಿದ್ದು, ಇದು ವಿಶ್ವದ ಅತಿ ಎತ್ತರದ ಸೇತುವೆಯಾಗಿರುವುದು ವಿಶೇಷ.   
  • ಪ್ಯಾರೀಸ್ [ಫ್ರಾನ್ಸ್] ನ ಇಫೆಲ್ ಟವರ್ ಗಿಂತ 35 ಮೀಟರ್ ಎತ್ತರದಲ್ಲಿದೆ.
  • ಈ ಸೇತುವೆಯನ್ನು 28,660 ಮೆಟ್ರಿಕ್ ಟನ್ ಕಬ್ಬಿಣ, 10 ಲಕ್ಷ ಟನ್ ಭೂಮಿ ಕಾಮಗಾರಿ, 66,000 ಕಾಂಕ್ರೀಟ್ ಬಳಸಲಾಗಿದೆ ಮತ್ತು 26 ಕಿ.ಲೋ ಮೀಟರ್ ಮೋಟಾರು ವಾಹನ ಸಂಚರಿಸುವ ರಸ್ತೆಯನ್ನು ನಿರ್ಮಿಸಲಾಗಿದೆ. 
  • ಇಲ್ಲಿ ನಿರ್ಮಿಸಿರುವ ಕಮಾನುಗಳು ಉಕ್ಕಿನ ಪೆಟ್ಟಿಗೆಗಳನ್ನು ಒಳಗೊಂಡಿದೆ. ಸ್ಥಿರತೆಗಾಗಿ ಕಮಾನು ಪೆಟ್ಟೆಗೆಗಳಲ್ಲಿ ಕಾಂಕ್ರಿಟ್ ತುಂಬಿಸಲಾಗಿದೆ.
  • ಸೇತುವೆಯ ಒಟ್ಟು ತೂಕ 10,719 ಮೆಟ್ರಿಕ್ ಟನ್
  • ಭಾರತೀಯ ರೈಲ್ವೆಯಿಂದ ಮೊದಲ ಬಾರಿಗೆ ಓವರ್ ಹೆಡ್ ಕೇಬಲ್ ಗಳಿಂದ ಕಮಾನು ನಿರ್ಮಾಣ
  • ಅತ್ಯಾಧುನಿಕ “ಟೆಕ್ಲಾ” ತಂತ್ರಾಂಶದ ಮೂಲಕ ರಚನಾತ್ಮಕ ಚೌಕಟ್ಟು ನಿರ್ಮಿಸಿರುವುದು ವಿಶೇಷ.
  • 10 ಸೆಂಟಿಗ್ರೇಡ್ ನಿಂದ 40 ಸೆಂಟಿಗ್ರೇಡ್ ತಾಪಮಾನಕ್ಕೆ ತಕ್ಕಂತೆ ಹೊಂದುವ ಉಕ್ಕಿನಿಂದ ನಿರ್ಮಿಸಲಾದ ಸೇತುವೆ.

 

ಕೆಲವು ವೈಶಿಷ್ಟ್ಯಗಳನ್ನು ಈ ಕೆಳಕಂಡಂತೆ ಪಟ್ಟಿ ಮಾಡಲಾಗಿದೆ.

 

  1. ಗ್ರಾಹಕ: ಉತ್ತರ ರೈಲ್ವೆ
  2. ಅನುಷ್ಠಾನ ಸಂಸ್ಥೆ: ಎಂ/ಎಸ್ ಕೊಂಕಣ ರೈಲ್ವೆ ನಿಗಮ ಲಿಮಿಟೆಡ್
  3. ಸೇತುವೆಯ ಒಟ್ಟು ವೆಚ್ಚ 1486 ಕೋಟಿ ರೂ
  4. ನಿರ್ಮಾಣ: ಎಂ/ಎಸ್ ಚೆನಾಬ್ ಬ್ರಿಡ್ಜ್ ಪ್ರಾಜೆಕ್ಟ್ ಅಂಡರ್ ಟೇಕಿಂಗ್ [ ಅಲ್ಟ್ರಾ ಎ.ಎಫ್.ಸಿ.ಒ.ಎನ್.ಎಸ್ -ವಿ.ಎಸ್.ಎಲ್[ಜ.ವಿ]
  5. ಸೇತುವೆಯ ಒಟ್ಟು ಉದ್ದ 1,315 ಮೀಟರ್,
  6. ಒಟ್ಟು ಸ್ಪಾನ್ಸ್ ಗಳ ಸಂಖ್ಯೆ 17
  7. ಮುಖ್ಯ ಕಮಾನು ವ್ಯಾಪ್ತಿಯ ಉದ್ದ 467 ಮೀಟರ್ [ರೇಖೆ], 550 ಮೀಟರ್ [ಕರ್ವಿಲೀನಿಯರ್]
  8. ಸೇತುವೆಯ ಬಾಳಿಕೆಯ ಅವಧಿ 120 ವರ್ಷಗಳು
  9. ವಿನ್ಯಾಸದ ವೇಗ ಪ್ರತಿಗಂಟೆಗೆ 100 ಕಿಲೋಮೀಟರ್
  10. ಒಟ್ಟಾರೆ ಉಕ್ಕಿನ ಹೊದಿಕೆ :  28,660 ಮೆಟ್ರಿಕ್ ಟನ್ [ಅಂದಾಜು]
  11. ಗಾಳಿಯ ವೇಗದ ವಿನ್ಯಾಸ ಪ್ರತಿಗಂಟೆಗೆ 266 ಕಿಲೋಮೀಟರ್
  12. ವಿನ್ಯಾಸಕರು

ಎ. ವೈಡಕ್ಟ್ ಅಂಡ್ ಫೌಂಡೇಷನ್ಸ್ : ಎಂ/ಎಸ್ ಡಬ್ಲ್ಯೂಪಿ [ಫಿನ್ಲೆಂಡ್]

ಬಿ, ಕಮಾನು: ಎಂ.ಎಸ್. ಲಿಯೋಹರ್ಟ್, ಆಂಧ್ರ ಅಂಡ್ ಪಾರ್ಟರ್ [ಜರ್ಮನಿ]

ಸಿ. ತಳಪಾಯದ ರಕ್ಷಣೆ: ಇಂಡಿಯನ್ ಇನ್ಸ್ಟಿಟ್ಯೂ ಆಪ್ ಬೆಂಗಳೂರು.

 

13 ಸಲಹೆಗಾರರು:

ಎ. ಫೌಂಡೇಷನ್ ಅಂಡ್ ಫೌಂಡೇಷನ್ ಪ್ರೊಟೆಕ್ಷನ್: ಎಂ.ಎಸ್. ಯು.ಆರ್.ಎಸ್. ಯು.ಕೆ.

ಬಿ.ಸೂಪರ್ ಸ್ಟ್ರಕ್ಚರ್ ಅಪ್ ವೈಡಕ್ಟ್ ಅಂಡ್ ಆರ್ಚ್ : ಎಂ.ಎಸ್. ಕೋವೆಲ್. ಯು.ಕೆ.

14. ಇಳಿಜಾರು ಸ್ಥಿರತೆಯ ವಿಶ್ಲೇಷಣೆ: [ ಸ್ವಾಯತ್ತ ವಿಶ್ಲೇಷಣಾಕಾರರು] ಎಂ/ಎಸ್/ ಐಟಿಎಎಸ್ ಸಿಎ – ಯು.ಎಸ್.ಎ

15 ಇಳಿಜಾರು ಸ್ಥಿರತೆಯ ವಿಶ್ಲೇಷಣೆ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ದೆಹಲಿ

16. ಭೂಕಂಪನ ವಿಶ್ಲೇಷಣೆ: ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ, ದೆಹಲಿ ಅಂಡ್ ರೂರಾರ್ಕೀ

 

ಈ ಸೇತುವೆಯ ವಿಶಿಷ್ಟ ಲಕ್ಷ್ಣಗಳು

  • ಗಂಟೆಗೆ 266 ಕಿಲೋಮೀಟರ್ ವರೆಗೆ ಹೆಚ್ಚಿನ ಗಾಳಿಯನ್ನು ತಡೆದುಕೊಳ್ಳಲು ವಿನ್ಯಾಸಗೊಳಿಸಲಾದ ಸೇತುವೆ
  • ಮೊದಲ ಬಾರಿಗೆ ಭಾರತದಲ್ಲಿ ಡಿ.ಆರ್‍.ಸಿ.ಓ ನೊಂದಿಗೆ ಸಮಾಲೋಚಿಸಿ ಬ್ಲಾಸ್ಟ್ ಲೋಡ್ ಗಾಗಿ ಸಿದ್ಧಪಡಿಸಲಾದ ಸೇತುವೆ
  • ಒಂದು ಪಿಯರ್ ಟೆಸಲ್ ಅನ್ನು ತೆಗೆದುಹಾಕಿದ ನಂತರವೂ ಸೇತುವೆ ಗಂಟೆಗೆ 30 ಕಿಲೋಮೀಟರ್ ನಿರ್ಬಂಧಿತ ವೇಗದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ
  • ಭಾರತದಲ್ಲಿ ಅತಿ ಹೆಚ್ಚು ವಲಯ ವಿ ಭೂಕಂಪನ ಶಕ್ತಿಗಳನ್ನು ತಡೆಯುವಂತೆ ವಿನ್ಯಾಸಗೊಳಿಸಲಾದ ಸೇತುವೆ
  • ಭಾರತೀಯ ರೈಲ್ವೆಯಲ್ಲಿ ಮೊದಲ ಬಾರಿಗೆ ಅರೇ ಅಲ್ಟ್ರಾಸಾನಿಕ್ ಪರೀಕ್ಷಾ ಯಂತ್ರವನ್ನು ವೆಲ್ಡ್ಸ್ ಪರೀಕ್ಷೆಗೆ ಬಳಸಲಾಗುತ್ತಿದೆ.
  •  ಮೊದಲ ಬಾರಿಗೆ ಭಾರತೀಯ ರೈಲ್ವೆಯಲ್ಲಿ ಎನ್.ಎ.ಬಿ.ಎಲ್ ಮಾನ್ಯತೆ ಪಡೆದ ಪ್ರಯೋಗಾಲಯವನ್ನು ವೆಲ್ಡ್ ಪರೀಕ್ಷೆಗಾಗಿ ಸ್ಥಾಪನೆ
  • ಜಮ್ಮುವಿನ ತಾವಿ ಮತ್ತು ನವದೆಹಲಿಯನ್ನು ಸಂಪರ್ಕಿಸುವ ವಲಯದ ರಚನೆಯ ವಿವಿಧ ಭಾಗಗಳನ್ನು ಸೇರಲು 584 ಕಿಲೋಮೀಟರ್ ವೆಲ್ಡಿಂಗ್ ಮಾಡಲಾಗಿದೆ. 
  • ಶ್ರೀನಗರದಲ್ಲಿರುವ ಕೇಬಲ್ ಕ್ರೇನ್ ಪೈಲ್ವಾನ್ ಎತ್ತರ 127 ಮೀಟರ್. ಇದು 72 ಮೀಟರ್ ಎತ್ತರವಿರುವ ಕುತಬ್ ಮಿನಾರ್ ಗಿಂತ ಹೆಚ್ಚು ಎತ್ತರದಲ್ಲಿದೆ.
  • ಮೊದಲ ಬಾರಿಗೆ ಭಾರತೀಯ ರೈಲ್ವೆ ಎಂಡ್ ಲಾಂಚಿಂಗ್ ವಿಧಾನ ಬಳಸಿಕೊಂಡು ಬಾಗಿದ ವಯೋಡಕ್ಸ್ ನಿರ್ಮಿಸಿದೆ.
  • ಅತ್ಯಾಧುನಿಕ ಆರೋಗ್ಯ ಮೇಲ್ವಿಚಾರಣೆ ಮತ್ತು ಎಚ್ಚರಿಕೆ ವ್ಯವಸ್ಥೆಗಳು ಅತ್ಯಾಧುನಿಕ ಉಪಕರಣಗಳ ಮೂಲಕ ಯೋಜಿಸಲಾಗಿದೆ.

ಕಮಾನು ಮುಚ್ಚಿರುವ ಕುರಿತ ಮಾಹಿತಿ:

  • ಮುಚ್ಚುವ ಮೊದಲು ಮತ್ತು ಕಾರ್ಯಾಚರಣೆ ಸಂದರ್ಭದಲ್ಲಿ ಕಮಾನುಗಳು ಸ್ಟೇ ಕೇಬಲ್ ಗಳಿಂದ ಬೆಂಬಲಿತವಾಗಿವೆ.
  • 2021 ರ ಫೆಬ್ರವರಿ 20 ರಂದು ಕಮಾನು ಮುಚ್ಚುವ ಪ್ರಕ್ರಿಯೆ ಆರಂಭವಾಯಿತು., ಕಮಾನು ಮುಚ್ಚುವ ಸಮಾರಂಭದ ಮೊದಲು 7 ವಿಭಾಗಗಳನ್ನು ಮುಂಚಿತವಾಗಿ ಸ್ಥಾಪಿಸಲಾಯಿತು.
  • ಕಮಾನು ಮುಚ್ಚುವ ಸಮಯದಲ್ಲಿ ವಿಭಾಗ ಸಂಖ್ಯೆ ಡಬ್ಲ್ಯೂಟಿ 28 ಅನ್ನು ಸ್ಥಾಪಿಸಲಾಯಿತು. ಈ ವಿಭಾಗವು ಶಿಖರದ ಕೌರಿ ತುದಿಯಲ್ಲಿದೆ. [ಪಶ್ಚಿಮ ತುದಿಯಲ್ಲಿದೆ]
  • ಹೆಸರು : ಡಬ್ಲ್ಯೂಟಿ28: [ ಮೇಲ್ಭಾಗದ ತುತ್ತ ತುದಿಯ ಸಮೂಹ ಸ್ಥಳ]
  • ಗಾತ್ರ: 5.6 ಮೀಟರ್ 4.0, 0.98,[ ಎಲ್ ಬಿ ಎಚ್] ತೂಕ : 18.95 ಮೆಟ್ರಿಕ್ ಟನ್

ಕಮಾನು ಮುಚ್ಚಿದ ನಂತರ ಸ್ಟೇ ಕೇಬಲ್ ಗಳನ್ನು ತೆರವುಗೊಳಿಸುವುದು, ಸ್ವಯಂ ಕಾಂಪಾಕ್ಟ್ ಕಾಂಕ್ರೀಟ್ ಗಳೊಂದಿಗೆ ಕಾಂಕ್ರೀಟೀಕರಣ ಮಾಡುವುದು, ಮುಖ್ಯ ಕಮಾನಿನ ಮೇಲೆ ಡೆಕ್ ಕಾಮಗಾರಿ ಪ್ರಾರಂಭಿಸುವುದು, ಮುಂತಾದ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು.

ಪ್ರಮುಖ ಚಟುವಟಿಕೆಗಳ ಪ್ರಗತಿ

 

ಕ್ರಮ ಸಂಖ್ಯೆ.

ಚಟುವಟಿಕೆಗಳು

Scope                        ಪೂರ್ಣಗೊಂಡಿದ್ದು

Completed

1.

ಫ್ಯಾಬ್ರಿಕೇಷನ್

28,660 ಮೆಟ್ರಿಕ್ ಟನ್      28,595  ಮೆಟ್ರಿಕ್ ಟನ್

28,595 MT

2.

ಒಟ್ಟಾರೆ ನಿರ್ಮಾಣಕ್ಕೆ ಬಳಕೆ

28,660 ಮೆಟ್ರಿಕ್ ಟನ್      16,902 ಮೆಟ್ರಿಕ್ ಟನ್

16,902 MT

3.

ಕಮಾನು ನಿರ್ಮಾಣ

10,619 ಮೆಟ್ರಿಕ್ ಟನ್      10,236 ಮೆಟ್ರಿಕ್ ಟನ್

10,236 MT

4.

ರಾಕ್ ಬೋಲ್ಟ್ ಗಳು

69,343 ಆರ್.ಎಂ.ಟಿ.      66,683 ಆರ್.ಎಂ.ಟಿ.

66,683 Rmt

5.

ಶಾಟ್ ಕ್ರೀಟ್

75,061 ಎಸ್.ಕ್ಯೂ.ಎಂ    73,761 ಎಸ್.ಕ್ಯೂ.ಎಂ.

73,761 sqm

 

*****


(Release ID: 1709809) Visitor Counter : 316