ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯ

ಆಹಾರ ಸಂಸ್ಕರಣಾ ಉದ್ಯಮದಲ್ಲಿ ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆಗೆ ಸಂಪುಟದ ಅನುಮೋದನೆ

Posted On: 31 MAR 2021 3:08PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಕೇಂದ್ರ ವಲಯದ ಯೋಜನೆಯಾದ "ಆಹಾರ ಸಂಸ್ಕರಣಾ ಉದ್ಯಮದಲ್ಲಿ ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆ" (ಪಿಎಲ್ಎಸ್ಎಫ್ಪಿಐ) ಗೆ ಅನುಮೋದನೆ ನೀಡಿದೆ. ಭಾರತದ ನೈಸರ್ಗಿಕ ಸಂಪನ್ಮೂಲವನ್ನು ಬಳಸಿಕೊಂಡು ಜಾಗತಿಕ ಆಹಾರ ಉತ್ಪಾದನಾ ಚಾಂಪಿಯನ್ಗಳ ಸೃಷ್ಟಿಗೆ ಬೆಂಬಲ ನೀಡಲು ಮತ್ತು ಆಹಾರ ಉತ್ಪನ್ನಗಳ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾರತೀಯ ಬ್ರಾಂಡ್ಗಳನ್ನು ಬೆಂಬಲಿಸಲು 10900 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ.

ಯೋಜನೆಯ ಉದ್ದೇಶಗಳು

ನಿಗದಿತ ಕನಿಷ್ಠ ಮಾರಾಟ ಮತ್ತು ಸಂಸ್ಕರಣಾ ಸಾಮರ್ಥ್ಯದ ವಿಸ್ತರಣೆಗೆ ಆಸಕ್ತಿ ಮತ್ತು ಬಲಿಷ್ಠ ಭಾರತೀಯ ಬ್ರ್ಯಾಂಡ್ಗಳನ್ನು ಉತ್ತೇಜಿಸಲು ವಿದೇಶದಲ್ಲಿ ಬ್ರ್ಯಾಂಡಿಂಗ್ ಮಾಡಲು ಕನಿಷ್ಠ ನಿಗದಿತ ಹೂಡಿಕೆ ಮಾಡಲು ಸಿದ್ಧವಿರುವ ಆಹಾರ ಉತ್ಪಾದನಾ ಘಟಕಗಳನ್ನು ಬೆಂಬಲಿಸುವುದು ಯೋಜನೆಯ ಉದ್ದೇಶವಾಗಿದೆ.

 • ಜಾಗತಿಕ ಆಹಾರ ಉತ್ಪಾದನಾ ಚಾಂಪಿಯನ್ಗಳ ಸೃಷ್ಟಿಗೆ ಬೆಂಬಲ
 • ಆಯ್ದ ಭಾರತೀಯ ಆಹಾರ ಉತ್ಪನ್ನಗಳ ಬ್ರಾಂಡ್ ಗಳನ್ನು ಜಾಗತಿಕವಾಗಿ ಕಾಣಿಸಿಕೊಳ್ಳಲು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವ್ಯಾಪಕವಾಗಿ ಸ್ವೀಕಾರವಾಗಲು ಬಲಪಡಿಸುವುದು
 • ಜಮೀನಿನ ಹೊರಗಿನ ಕೆಲಸಗಳ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು
 • ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಮತ್ತು ರೈತರಿಗೆ ಹೆಚ್ಚಿನ ಆದಾಯವನ್ನು ಖಾತರಿಪಡಿಸುವುದು

ಪ್ರಮುಖ ಅಂಶಗಳು

 • ಮೊದಲ ಅಂಶವು ನಾಲ್ಕು ಪ್ರಮುಖ ಆಹಾರ ಉತ್ಪನ್ನ ವಿಭಾಗಗಳ ಉತ್ಪಾದನೆಯನ್ನು ಉತ್ತೇಜಿಸುವುದಕ್ಕೆ ಸಂಬಂಧಿಸಿದೆ. ಅವುಗಳೆಂದರೆ, ಅಡುಗೆ ಮಾಡಲು ಸಿದ್ಧವಾದ / ತಿನ್ನಲು ಸಿದ್ಧವಾದ (ಆರ್ಟಿಸಿ / ಆರ್ಟಿಇ) ಆಹಾರಗಳು, ಸಂಸ್ಕರಿಸಿದ ಹಣ್ಣು ಮತ್ತು ತರಕಾರಿಗಳು, ಸಾಗರ ಉತ್ಪನ್ನಗಳು, ಮೊಝಾರೆಲ್ಲಾ ಚೀಸ್.
 • ಮುಕ್ತ ಶ್ರೇಣಿಯ ಮೊಟ್ಟೆ, ಕೋಳಿ ಮಾಂಸ, ಮೊಟ್ಟೆಯ ಉತ್ಪನ್ನಗಳನ್ನು ಒಳಗೊಂಡಂತೆ ಎಸ್ಎಂಇಗಳ ನಾವೀನ್ಯತೆಯ/ ಸಾವಯವ ಉತ್ಪನ್ನಗಳು ಮೇಲಿನ ಘಟಕದ ಅಡಿಯಲ್ಲಿ ಬರುತ್ತವೆ.
 • ಆಯ್ದ ಅರ್ಜಿದಾರರು ಮೊದಲ ಎರಡು ವರ್ಷಗಳಲ್ಲಿ ಅಂದರೆ 2021-22 ಮತ್ತು 2022-23ರಲ್ಲಿ ಘಟಕ ಮತ್ತು ಯಂತ್ರೋಪಕರಣಗಳಲ್ಲಿ ತಮ್ಮ ಅರ್ಜಿಯಲ್ಲಿ ನಮೂದಿಸಿದಂತೆ (ನಿಗದಿತ ಕನಿಷ್ಠ ಹೂಡಿಕೆಗೆ ಒಳಪಟ್ಟಿರುತ್ತದೆ) ಹೂಡಿಕೆಯನ್ನು ಕೈಗೊಳ್ಳಬೇಕಾಗುತ್ತದೆ.
 • 2020-21ರಲ್ಲಿ ಮಾಡಿದ ಹೂಡಿಕೆಯನ್ನು ಕಡ್ಡಾಯ ಹೂಡಿಕೆಯನ್ನು ಪೂರೈಸಲು ಪರಿಗಣಿಸಲಾಗುವುದು.
 • ನಾವೀನ್ಯತೆಯ/ ಸಾವಯವ ಉತ್ಪನ್ನಗಳನ್ನು ತಯಾರಿಸಲು ಆಯ್ಕೆ ಮಾಡಲಾದ ಘಟಕಗಳಿಗೆ ನಿಗದಿತ ಕನಿಷ್ಠ ಮಾರಾಟ ಮತ್ತು ಕಡ್ಡಾಯ ಹೂಡಿಕೆಯ ಷರತ್ತುಗಳು ಅನ್ವಯಿಸುವುದಿಲ್ಲ.
 • ಎರಡನೇ ಅಂಶವು ಬಲವಾದ ಭಾರತೀಯ ಬ್ರ್ಯಾಂಡ್ಗಳನ್ನು ಉತ್ತೇಜಿಸಲು ವಿದೇಶದಲ್ಲಿ ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಬೆಂಬಲಕ್ಕೆ ಸಂಬಂಧಿಸಿದೆ.
 • ವಿದೇಶದಲ್ಲಿ ಭಾರತೀಯ ಬ್ರಾಂಡ್ ಪ್ರಚಾರಕ್ಕಾಗಿ, ಅಂಗಡಿಯೊಳಗಿನ ಬ್ರ್ಯಾಂಡಿಂಗ್, ಶೆಲ್ಫ್ ಸ್ಪೇಸ್ ಬಾಡಿಗೆ ಮತ್ತು ಮಾರ್ಕೆಟಿಂಗ್ಗಾಗಿ ಅರ್ಜಿದಾರರ ಘಟಕಗಳಿಗೆ ಅನುದಾನವನ್ನು ನೀಡಲಾಗುವುದು.
 • 2021-22 ರಿಂದ 2026-27ರವರೆಗಿನ ಆರು ವರ್ಷಗಳ ಅವಧಿಯಲ್ಲಿ ಯೋಜನೆಯನ್ನು ಜಾರಿಗೆ ತರಲಾಗುವುದು.

ಉದ್ಯೋಗ ಸೃಷ್ಟಿ ಸಾಮರ್ಥ್ಯ ಸೇರಿದಂತೆ ಇತರ ಪರಿಣಾಮ

 • ಯೋಜನೆಯ ಅನುಷ್ಠಾನವು ಸಂಸ್ಕರಿಸಿದ ಆಹಾರ ಉತ್ಪಾದನೆ ಸಾಮರ್ಥ್ಯವನ್ನು 33,494 ಕೋಟಿ ರೂ. ಗಳಿಗೆ ವಿಸ್ತರಿಸಲು ನೆರವಾಗುತ್ತದೆ
 • 2026-27 ವೇಳೆಗೆ ಸುಮಾರು 2.5 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಸಲಿದೆ

ಹಣಕಾಸಿನ ಪರಿಣಾಮಗಳು

 

ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆಯಡಿ ವಿಭಾಗವಾರು ಮತ್ತು ವರ್ಷವಾರು ವಿನಿಯೋಗ

ಕೋಟಿ ರೂ.ಗಳಲ್ಲಿ

 

ಆರ್ಟಿಸಿ/ ಆರ್ಟಿಇ ಆಹಾರ

ಸಂಸ್ಕರಿತ

ಹಣ್ಣು ಮತ್ತು ತರಕಾರಿ

ಸಾಗರ

ಉತ್ಪನ್ನ

ಮೊಝೆರೆಲ್ಲಾ ಚೀಜ್

ಮಾರಾಟದ ಮೇಲೆ ಪ್ರೋತ್ಸಾಹ

ವಿದೇಶದಲ್ಲಿ ಬ್ರ್ಯಾಂಡಿಂಗ್ & ಮಾರುಕಟ್ಟೆ

ಆಡಳಿತ ವೆಚ್ಚ

ಒಟ್ಟು

2021-22

0

0

0

0

0

0

10

10

2022-23

280

272

58

20

630

375

17

1022

2023-24

515

468

122

40

1145

375

17

1537

2024-25

745

669

185

63

1662

275

17

1954

2025-26

981

872

246

70

2169

250

17

2436

2026-27

867

701

212

54

1833

125

17

1975

2027-28

794

601

170

36

1601

100

15

1716

ಒಟ್ಟು

4181

3582

993

283

9040

1500

110

10900

 

 

 

 

 

 

 

 

 

 

 

 

 

 

 

 

 

 

 

 

 

 

 

 

* ಇದರಲ್ಲಿ ಎಸ್ಎಂಇ ವಲಯದಲ್ಲಿನ ನವೀನ/ ಸಾವಯವ ಉತ್ಪನ್ನಗಳಿಗೆ ಮುಕ್ತ ಶ್ರೇಣಿಯ ಮೊಟ್ಟೆಗಳು, ಕೋಳಿ ಮಾಂಸ, ಮೊಟ್ಟೆ ಉತ್ಪನ್ನಗಳು ಮೀಸಲಿಟ್ಟಿರುವ 250 ಕೋಟಿ ರೂ . (ಅಂದಾಜು 2% ವಿನಿಯೋಗ) ಒಳಗೊಂಡಿದೆ.

ಅನುಷ್ಠಾನ ತಂತ್ರ ಮತ್ತು ಗುರಿ

 • ಅಖಿಲ ಭಾರತ ಆಧಾರದ ಮೇಲೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.
 • ಯೋಜನಾ ನಿರ್ವಹಣಾ ಸಂಸ್ಥೆ (ಪಿಎಂಎ) ಮೂಲಕ ಯೋಜನೆಯನ್ನು ಕಾರ್ಯಗತಗೊಳಿಸಬೇಕು.
 • ಯೋಜನಾ ನಿರ್ವಹಣಾ ಸಂಸ್ಥೆಯು ಅರ್ಜಿಗಳು / ಪ್ರಸ್ತಾಪಗಳ ಮೌಲ್ಯಮಾಪನ, ನೆರವಿನ ಅರ್ಹತೆಯ ಪರಿಶೀಲನೆ, ಪ್ರೋತ್ಸಾಹಕ ವಿತರಣೆಗೆ ಅರ್ಹವಾದ ಹಕ್ಕುಗಳ ಪರಿಶೀಲನೆಗೆ ಜವಾಬ್ದಾರವಾಗಿರುತ್ತದೆ.
 • ಯೋಜನೆಯಡಿಯಲ್ಲಿ ಪ್ರೋತ್ಸಾಹವನ್ನು 2026-27 ಕ್ಕೆ ಕೊನೆಗೊಳ್ಳುವ ಆರು ವರ್ಷಗಳವರೆಗೆ ಪಾವತಿಸಲಾಗುತ್ತದೆ. ಒಂದು ನಿರ್ದಿಷ್ಟ ವರ್ಷಕ್ಕೆ ಪಾವತಿಸಬೇಕಾದ ಪ್ರೋತ್ಸಾಹವನ್ನು ಮುಂದಿನ ವರ್ಷದಲ್ಲಿ ಪಾವತಿಸಬೇಕಾಗುತ್ತದೆ. ಯೋಜನೆಯ ಅವಧಿ ಆರು ವರ್ಷಗಳು, ಅಂದರೆ 2021-22 ರಿಂದ 2026-27.
 • ಯೋಜನೆಯು "ನಿಧಿ-ಸೀಮಿತ"ವಾಗಿದೆ. ಅಂದರೆ ವೆಚ್ಚವನ್ನು ಅನುಮೋದಿತ ಮೊತ್ತಕ್ಕೆ ನಿರ್ಬಂಧಿಸಲಾಗುತ್ತದೆ. ಪ್ರತಿ ಫಲಾನುಭವಿಗೆ ಪಾವತಿಸಬೇಕಾದ ಗರಿಷ್ಠ ಪ್ರೋತ್ಸಾಹವನ್ನು ಫಲಾನುಭವಿಯ ಅನುಮೋದನೆಯ ಸಮಯದಲ್ಲಿಯೇ ನಿಗದಿಪಡಿಸಲಾಗುತ್ತದೆ. ಸಾಧನೆ / ಕಾರ್ಯಕ್ಷಮತೆಯ ಹೊರತಾಗಿಯೂ, ಪ್ರೋತ್ಸಾಹವು ಗರಿಷ್ಠ ಮೊತ್ತವನ್ನು ಮೀರಬಾರದು.
 • ಯೋಜನೆಯ ಅನುಷ್ಠಾನವು ಸಂಸ್ಕರಿಸಿದ ಆಹಾರ ಉತ್ಪಾದನೆಯ ಸಾಮರ್ಥ್ಯವನ್ನು 33,494 ಕೋಟಿ ರೂ. ಗಳಿಗೆ ವಿಸ್ತರಿಸುತ್ತದೆ ಮತ್ತು 2026-27 ವೇಳೆಗೆ ಸುಮಾರು 2.5 ಲಕ್ಷ ಜನರಿಗೆ ಉದ್ಯೋಗವನ್ನು ಸೃಷ್ಟಿಸುತ್ತದೆ.

ಯೋಜನೆಯ ಅನುಷ್ಠಾನ:

 • ಯೋಜನೆಯನ್ನು ಸಂಪುಟ ಕಾರ್ಯದರ್ಶಿಯವರ ಅಧ್ಯಕ್ಷತೆಯ ಕಾರ್ಯದರ್ಶಿಗಳ ಸಶಕ್ತ ಗುಂಪು ಕೇಂದ್ರದಲ್ಲಿ ಮೇಲ್ವಿಚಾರಣೆ ಮಾಡುತ್ತದೆ
 • ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯವು ಯೋಜನೆಯಡಿಯಲ್ಲಿ ಅರ್ಜಿದಾರರ ಆಯ್ಕೆ,ಪ್ರೋತ್ಸಾಹ ಮತ್ತು ನಿಧಿಯನ್ನು ಬಿಡುಗಡೆಯನ್ನು ಅನುಮೋದಿಸುತ್ತದೆ,
 • ಅನುಷ್ಠಾನಕ್ಕಾಗಿ ವಿವಿಧ ಚಟುವಟಿಕೆಗಳನ್ನು ಒಳಗೊಂಡ ವಾರ್ಷಿಕ ಕ್ರಿಯಾ ಯೋಜನೆಯನ್ನು ಸಚಿವಾಲಯ ಸಿದ್ಧಪಡಿಸುತ್ತದೆ.
 • ಯೋಜನೆಯ ಮೂರನೇ ವ್ಯಕ್ತಿಯ ಮೌಲ್ಯಮಾಪನ ಮತ್ತು ಮಧ್ಯಕಾಲೀನ ಪರಾಮರ್ಶೆ ವ್ಯವಸ್ಥೆಯನ್ನು  ರೂಪಿಸಲಾಗುವುದು.

ರಾಷ್ಟ್ರೀಯ ಪೋರ್ಟಲ್ ಮತ್ತು ಎಂಐಎಸ್

 • ರಾಷ್ಟ್ರೀಯ ಮಟ್ಟದ ಪೋರ್ಟಲ್ ಅನ್ನು ಸ್ಥಾಪಿಸಲಾಗುವುದು, ಇದರಲ್ಲಿ ಯೋಜನೆಯಲ್ಲಿ ಭಾಗವಹಿಸಲು ಉದ್ಯಮಗಳು ಅರ್ಜಿ ಸಲ್ಲಿಸಬಹುದು.
 • ಯೋಜನೆಯ ಎಲ್ಲಾ ಚಟುವಟಿಕೆಗಳನ್ನು ರಾಷ್ಟ್ರೀಯ ಪೋರ್ಟಲ್ನಲ್ಲಿ ಕೈಗೊಳ್ಳಲಾಗುವುದು.

ಸಮನ್ವಯದ ಚೌಕಟ್ಟು

 • ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯವು ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆ (ಪಿಎಮ್ಕೆಎಸ್ವೈ) ಅಡಿಯಲ್ಲಿ, ಸಣ್ಣ ಮತ್ತು ಮಧ್ಯಮ ಆಹಾರ ಸಂಸ್ಕರಣಾ ಉದ್ಯಮಗಳ ಪೂರೈಕೆ ಸರಪಳಿ ಮೂಲಸೌಕರ್ಯಗಳ ಬಲವರ್ಧನೆ, ಸಂಸ್ಕರಣಾ ಸಾಮರ್ಥ್ಯಗಳ ವಿಸ್ತರಣೆ, ಕೈಗಾರಿಕಾ ಪ್ಲಾಟ್ಗಳ ಲಭ್ಯತೆಯನ್ನು ಹೆಚ್ಚಿಸುವುದು, ಕೌಶಲ್ಯ ಅಭಿವೃದ್ಧಿ, ಆರ್ & ಡಿ, ಪರೀಕ್ಷಾ ಸೌಲಭ್ಯಗಳಿಗೆ ಅನುಕೂಲ ಕಲ್ಪಿಸುವುದು ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲಾಗುವುದು.
 • ಇತರ ಕೃಷಿ ಸಚಿವಾಲಯಗಳು / ಇಲಾಖೆಗಳು ಜಾರಿಗೆ ತಂದಿರುವ ಹಲವಾರು ಯೋಜನೆಗಳು, ಅಂದರೆ ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ, ಪಶುಸಂಗೋಪನೆ ಮತ್ತು ಹೈನುಗಾರಿಕೆ, ಮೀನುಗಾರಿಕೆ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇತ್ಯಾದಿಗಳು ಆಹಾರ ಸಂಸ್ಕರಣೆಯ ಬೆಳವಣಿಗೆಯ ಮೇಲೆ ನೇರ ಅಥವಾ ಪರೋಕ್ಷ ಪರಿಣಾಮ ಬೀರುತ್ತವೆ.
 • ಪ್ರಸ್ತಾವಿತ ಯೋಜನೆಯಡಿ ಬರುವ ಅರ್ಜಿದಾರರಿಗೆ ಇತರ ಯೋಜನೆಗಳ ಅಡಿಯಲ್ಲಿ ಸಾಧ್ಯವಿರುವ ಸೇವೆಗಳನ್ನು ಪಡೆಯಲು ಅನುಮತಿ ನೀಡಲಾಗುತ್ತದೆ. ಹಾಗಾಗಿ, ಪಿಎಲ್ ಯೋಜನೆಯಡಿಯ ವ್ಯಾಪ್ತಿಯು ಬೇರೆ ಯಾವುದೇ ಯೋಜನೆಯ ಅರ್ಹತೆಯ ಮೇಲೆ ಪರಿಣಾಮ ಬೀರುವುದಿಲ್ಲ.

ಹಿನ್ನೆಲೆ

 • ಭಾರತದ ಆಹಾರ ಸಂಸ್ಕರಣಾ ಕ್ಷೇತ್ರವು ಅತಿ ಸಣ್ಣ ಉದ್ಯಮಗಳಿಂದ ದೊಡ್ಡ ಕೈಗಾರಿಕೆಗಳವರೆಗಿನ ಎಲ್ಲಾ ವಿಭಾಗಗಳಲ್ಲಿ ಉತ್ಪಾದನಾ ಉದ್ಯಮಗಳನ್ನು ಒಳಗೊಂಡಿದೆ.
 • ಸಂಪನ್ಮೂಲ, ಬೃಹತ್ ದೇಶೀಯ ಮಾರುಕಟ್ಟೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ತೇಜಿಸುವ ವಿಷಯದಲ್ಲಿ ಭಾರತವು ಸ್ಪರ್ಧಾತ್ಮಕ ಪ್ರಯೋಜನವನ್ನು ಹೊಂದಿದೆ.
 • ವಲಯದಲ್ಲಿರುವ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸಲು ಭಾರತೀಯ ಸಂಸ್ಥೆಗಳು ತಮ್ಮ ಜಾಗತಿಕ ಪ್ರತಿಸ್ಪರ್ಧಿಗಳೊಂದಿಗೆ ಉತ್ಪಾದನಾ ಪ್ರಮಾಣ, ಉತ್ಪಾದಕತೆ, ಮೌಲ್ಯವರ್ಧನೆ ಮತ್ತು ಜಾಗತಿಕ ಮೌಲ್ಯ ಸರಪಳಿಯೊಂದಿಗಿನ ಸಂಪರ್ಕಗಳ ವಿಷಯದಲ್ಲಿ ಸ್ಪರ್ಧಾತ್ಮಕ ಶಕ್ತಿಯನ್ನು ಸುಧಾರಿಸಿಕೊಳ್ಳಬೇಕಾದ ಅಗತ್ಯವಿದೆ.
 • ಭಾರತದ ಉತ್ಪಾದನಾ ಸಾಮರ್ಥ್ಯ ಮತ್ತು ರಫ್ತುಗಳನ್ನು ಹೆಚ್ಚಿಸಲು ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ನೀತಿ ಆಯೋಗದ ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆಯ ಆಧಾರದ ಮೇಲೆ ಆಹಾರ ಸಂಸ್ಕರಣಾ ಉದ್ಯಮಕ್ಕಾಗಿ ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆಯನ್ನು ರೂಪಿಸಲಾಗಿದೆ.

***(Release ID: 1708719) Visitor Counter : 221