ನಾಗರೀಕ ವಿಮಾನಯಾನ ಸಚಿವಾಲಯ
3 ದಿನಗಳಲ್ಲಿ ಉಡಾನ್ ಅಡಿ 22 ಮಾರ್ಗಗಳ ಉದ್ಘಾಟನೆ
ಈಶಾನ್ಯದಲ್ಲಿ 6 ಮಾರ್ಗಗಳ ಕಾರ್ಯಾಚರಣೆ
प्रविष्टि तिथि:
30 MAR 2021 4:57PM by PIB Bengaluru
ವಾಯುಯಾನ ಸಂಪರ್ಕವಿಲ್ಲದ ವಲಯಗಳನ್ನು ಸಂಪರ್ಕಿಸುವ ಪ್ರಯತ್ನವಾಗಿ ಕಳೆದ ಮೂರು ದಿನಗಳ ಅವಧಿಯಲ್ಲಿ ಉಡಾನ್ ಅಡಿಯಲ್ಲಿ 22 ಹೊಸ ಮಾರ್ಗಗಳಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ, ಈ ಪೈಕಿ 6 ಹೊಸ ಮಾರ್ಗಗಳು ಈಶಾನ್ಯ ಭಾರತದಲ್ಲಿವೆ. ನಿನ್ನೆ ಶಿಲ್ಲಾಂಗ್ (ಮೇಘಾಲಯ) ಮತ್ತು ಸಿಲ್ಚರ್ (ಅಸ್ಸಾಂ) ನಡುವೆ ಯಶಸ್ವಿಯಾಗಿ ವಿಮಾನ ಸಂಚಾರ ಆರಂಭಿಸಿದ ಬಳಿಕ ಇಂದು ಶಿಲ್ಲಾಂಗ್ (ಮೇಘಾಲಯ) ನಿಂದ ಅಗರ್ತಲಾ (ತ್ರಿಪುರ) ನಡುವೆ ಮೊದಲ ನೇರ ವಿಮಾನಕ್ಕೆ ಹಸಿರು ನಿಶಾನೆ ತೋರಿಸಲಾಗಿದೆ. ನಾಗರಿಕ ವಿಮಾನ ಯಾನ ಸಚಿವಾಲಯದ (ಎಂ.ಓ.ಸಿ.ಎ.) ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ದ ಹಿರಿಯ ಅಧಿಕಾರಿಗಳು ಮತ್ತು ಇತರ ಪ್ರಮುಖ ಬಾಧ್ಯಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಮಾರ್ಗಗಳ ಕಾರ್ಯಾಚರಣೆಯು ಉಡಾನ್ ಯೋಜನೆಯ ಉದ್ದೇಶಗಳಾದ ದೇಶದ ವಾಯುಯಾನ ಜಾಲ ಬಲಪಡಿಸುವ, ಅಗ್ಗದ ಮತ್ತು ಆರ್ಥಿಕವಾಗಿ ಲಾಭದಾಯಕವಾದ ಹಾಗೂ ಪ್ರಾದೇಶಿಕ ವಾಯು ಮಾರ್ಗದಲ್ಲಿನ ಲಾಭದಾಯಕ ಪ್ರಯಾಣಕ್ಕೆ ಅನುಗುಣವಾಗಿವೆ. ಈ ದಿನಾಂಕದವರೆಗೆ ಭಾರತದ ಉದ್ದಗಲ 347 ಮಾರ್ಗಗಳಲ್ಲಿ 57 ಸೇವೆಯೇ ಇಲ್ಲದ ಮತ್ತು ಕಡಿಮೆ ಸೇವಾ ವ್ಯಾಪ್ತಿಯ ವಿಮಾನ ನಿಲ್ದಾಣಗಳಲ್ಲಿ (5 ಹೆಲಿಪೋರ್ಟ್ ಗಳು + 2 ಜಲ ವಿಮಾನ ನಿಲ್ದಾಣಗಳು ಸೇರಿದಂತೆ) ಉಡಾನ್ ಯೋಜನೆಯಲ್ಲಿ ಕಾರ್ಯಾಚರಣೆ ಮಾಡಲಾಗಿದೆ.
2021ರ ಮಾರ್ಚ್ 28ರಂದು, 18 ಹೊಸ ಮಾರ್ಗಗಳಿಗೆ ಉಡಾನ್ ಯೋಜನೆ ಅಡಿಯಲ್ಲಿ ಹಸಿರು ನಿಶಾನೆ ತೋರಿಸಲಾಯಿತು. ಕಾರ್ಯಾಚರಣೆ ಆರಂಭಿಸಿದ ಮಾರ್ಗಗಳು ಗೋರಖ್ಪುರ (ಉತ್ತರ ಪ್ರದೇಶ)ದಿಂದ ಲಖನೌ (ಉತ್ತರ ಪ್ರದೇಶ) ಇದು ರಾಜ್ಯ ಬೆಂಬಲಿತ ಉಡಾನ್ ಮಾರ್ಗವಾಗಿದೆ, ಕರ್ನೂಲ್ (ಆಂಧ್ರಪ್ರದೇಶ) ನಿಂದ ಬೆಂಗಳೂರು (ಕರ್ನಾಟಕ), ವಿಶಾಖಪಟ್ಟಣ (ಆಂಧ್ರಪ್ರದೇಶ) ಮತ್ತು ಚೆನ್ನೈ (ತಮಿಳುನಾಡು), ಆಗ್ರದಿಂದ (ಉತ್ತರಪ್ರದೇಶ)ದಿಂದ ಬೆಂಗಳೂರು (ಕರ್ನಾಟಕ) ಮತ್ತು ಭೋಪಾಲ್ (ಮಧ್ಯಪ್ರದೇಶ), ಪ್ರಯಾಗ್ ರಾಜ್ ನಿಂದ (ಉತ್ತರ ಪ್ರದೇಶ)ದಿಂದ ಭುವನೇಶ್ವರ (ಒಡಿಶಾ) ಮತ್ತು ಭೋಪಾಲ್ (ಮಧ್ಯಪ್ರದೇಶ). ಈ ಮಾರ್ಗಗಳ ಜೊತೆಗೆ, ಹೊಸ ವಿಮಾನಗಳ ಸಂಪರ್ಕವನ್ನು ದಿಬ್ರೂಗಢ (ಅಸ್ಸಾಂ)ನಿಂದ ದಿಮಾಪುರ (ನಾಗಾಲ್ಯಾಂಡ್)ನಡುವೆ ಸ್ಥಾಪಿಸಲಾಗಿದೆ.
ಇಂಡಿಗೋ ಏರ್ ಲೈನ್ಸ್ ಗೆ ಶಿಲ್ಲಾಂಗ್ – ಅಗರ್ತಲಾ, ಶಿಲ್ಲಾಂಗ್ –ಸಿಲ್ಚರ್, ಕರ್ನೂಲ್ – ಬೆಂಗಳೂರು, ವಿಶಾಖಪಟ್ಟಣಂ ಮತ್ತು ಚೆನ್ನೈ ಮಾರ್ಗಗಳನ್ನು ಉಡಾನ್ 4 ಅಡಿಯಲ್ಲಿ ಕಳೆದ ವರ್ಷ ಹರಾಜು ಪ್ರಕ್ರಿಯೆಯಲ್ಲಿ ನೀಡಲಾಗಿತ್ತು. ಇದರ ಜೊತೆಗೆ ಆಗ್ರಾದಿಂದ ಬೆಂಗಳೂರು ಮತ್ತು ಆಗ್ರಾದಿಂದ ಭೋಪಾಲ್ ಮಾರ್ಗಗಳಿಗೆ ಉಡಾನ್ 3ರಡಿ, ಪ್ರಯಾಗ್ ರಾಜ್ ನಿಂದ ಭುವನೇಶ್ವರ್ ಮತ್ತು ಪ್ರಯಾಗ್ ರಾಜ್ ನಿಂದ ಭೋಪಾಲ್ ಮಾರ್ಗಕ್ಕೆ ಉಪಾಡನ್ 2 ಅಡಿ ಹಾಗೂ ದಿಬ್ರೂಗಢದಿಂದ ದೀಮಾಪುರ ನಡುವಿನ ಮಾರ್ಗವನ್ನು ಉಡಾನ್ 3 ಅಡಿ ಹರಾಜು ಪ್ರಕ್ರಿಯೆಯಲ್ಲಿ ಮಂಜೂರು ಮಾಡಲಾಗಿತ್ತು. ಅಲೈಯನ್ಸ್ ಏರ್ ಗೆ ಲಖನೌ – ಗೋರಖ್ಪುರ ಮಾರ್ಗವನ್ನು ಉಡಾನ್ 3ರಡಿ ಹರಾಜು ಪ್ರಕ್ರಿಯೆಯಲ್ಲಿ ನೀಡಲಾಗಿದೆ.
***
(रिलीज़ आईडी: 1708559)
आगंतुक पटल : 313