ಪ್ರಧಾನ ಮಂತ್ರಿಯವರ ಕಛೇರಿ
“ಅಜಾದಿ ಕಾ ಅಮೃತ್ ಮಹೋತ್ಸವ್” ಪೂರ್ವಭಾವೀ ಕಾರ್ಯಕ್ರಮಗಳ ಉದ್ಘಾಟನಾ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
Posted On:
12 MAR 2021 4:22PM by PIB Bengaluru
ವೇದಿಕೆಯಲ್ಲಿ ಹಾಜರಿರುವ ಗುಜರಾತ್ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವ ವ್ರತ ಜೀ, ಮುಖ್ಯಮಂತ್ರಿ ಶ್ರೀ ವಿಜಯ ರೂಪಾನಿ ಜೀ, ಕೇಂದ್ರ ಮಂತ್ರಿ ಮಂಡಲದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ಪ್ರಹ್ಲಾದ ಪಟೇಲ್ ಜೀ, ಲೋಕಸಭೆಯಲ್ಲಿ ನನ್ನ ಸಹವರ್ತಿಯಾಗಿರುವ ಶ್ರೀ ಸಿ.ಆರ್.ಪಾಟೀಲ್ ಜೀ, ಅಹ್ಮದಾಬಾದಿನ ನೂತನವಾಗಿ ಆಯ್ಕೆಯಾಗಿರುವ ಮೇಯರ್ ಶ್ರೀ ಕಿರೀಟಿ ಸಿಂಗ್ ಭಾಯಿ, ಸಾಬರಮತಿ ಆಶ್ರಮದ ಟ್ರಸ್ಟೀ ಆಗಿರುವ ಶ್ರೀ ಕಾರ್ತಿಕೇಯ ಸಾರಭಾಯಿ ಜೀ ಮತ್ತು ಸಾಬರಮತಿ ಆಶ್ರಮಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಗೌರವಾನ್ವಿತ ಅಮೃತ್ ಮೋದಿ ಜೀ, ಎಲ್ಲಾ ಗಣ್ಯರೇ, ಮಹಿಳೆಯರೇ, ಮಹನೀಯರೇ ಮತ್ತು ದೇಶಾದ್ಯಂತದ ನನ್ನ ಯುವ ಸಹೋದ್ಯೋಗಿಗಳೇ!.
ಇಂದು ಬೆಳಿಗ್ಗೆ ನಾನು ದಿಲ್ಲಿಯಿಂದ ಹೊರಟಾಗ, ಇದು ಬಹಳ ಅದ್ಭುತ ಕಾಕತಾಳೀಯವಾದ ಘಟನೆಯಾಯಿತು. ಅಮೃತ್ ಉತ್ಸವ ಮುಂದಿರುವಂತೆಯೇ ಮಳೆ ಮತ್ತು ಸೂರ್ಯ ಭಗವಾನ್ ದೇಶದ ರಾಜಧಾನಿಯನ್ನು ಆಶೀರ್ವದಿಸಿದರು. ಸ್ವತಂತ್ರ ಭಾರತದ ಈ ಚಾರಿತ್ರಿಕ ಅವಧಿಯನ್ನು ಸಾಕ್ಷೀಕರಿಸುವ ಸೌಭಾಗ್ಯ ನಮ್ಮೆಲ್ಲರಿಗೂ ಲಭಿಸಿದೆ. ಬಾಪುವಿನ ಕರ್ಮಭೂಮಿಯಲ್ಲಿ ಇಂದು ದಂಡಿ ಯಾತ್ರೆಯ ವಾರ್ಷಿಕೋತ್ಸವದಂದು ಚರಿತ್ರೆ ನಿರ್ಮಾಣವಾಗುತ್ತಿರುವುದನ್ನು ನಾವು ಸಾಕ್ಷೀಕರಿಸುತ್ತಿದ್ದೇವೆ. ಮತ್ತು ಚರಿತ್ರೆಯ ಭಾಗವಾಗುತ್ತಿದ್ದೇವೆ. ಇಂದಿನ ದಿನ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಮೊದಲ ದಿನ. ಅಮೃತ ಮಹೋತ್ಸವ ಇಂದು 2022ರ ಆಗಸ್ಟ್ 15 ಕ್ಕೆ 75 ವಾರಗಳ ಮುಂಚಿತವಾಗಿ ಆರಂಭಗೊಂಡಿದೆ. ಮತ್ತು ಅದು 2023 ರ ಆಗಸ್ಟ್ 15 ರವರೆಗೆ ಮುಂದುವರೆಯಲಿದೆ. ನಮ್ಮ ದೇಶದಲ್ಲಿ ಇಂತಹದೊಂದು ಸಂದರ್ಭ ಬಂದಾಗ ಅಲ್ಲಿ ಎಲ್ಲಾ ಯಾತ್ರೆಗಳ ಸಂಗಮ ಇರುತ್ತದೆ ಎಂದು ನಂಬಲಾಗುತ್ತದೆ. ಒಂದು ರಾಷ್ಟ್ರವಾಗಿ ನಮಗೆ ಈ ಸಂದರ್ಭವು ಶ್ರದ್ಧಾಪೂರ್ವಕವಾದ ಸಂದರ್ಭ. ನಮ್ಮ ಸ್ವಾತಂತ್ರ್ಯ ಹೋರಾಟದ ಹಲವಾರು ಪರಮ ಪವಿತ್ರ ಕೇಂದ್ರಗಳು ಸಾಬರಮತಿ ಆಶ್ರಮದ ಜೊತೆ ಬೆಸೆದುಕೊಳ್ಳತೊಡಗಿವೆ.
ಈ ಅಮೃತ ಉತ್ಸವವು ಇಂದು ಏಕಕಾಲದಲ್ಲಿ ಅಂಡಮಾನ್ ಸೆಲ್ಯುಲಾರ್ ಜೈಲು ಸಹಿತ ಹಲವಾರು ಕಡೆಗಳಲ್ಲಿ ಆರಂಭಗೊಳ್ಳುತ್ತಿದೆ. ಅರುಣಾಚಲ ಪ್ರದೇಶದಲ್ಲಿ ಶಿರೋಬಿಂದುವಿಗೆ ನಮಿಸುವ ಮೂಲಕ ಆರಂಭಗೊಳ್ಳುತ್ತಿದೆ. ಅದು ಅರುಣಾಚಲ ಪ್ರದೇಶದ ಕೇಕರ್ ಮೋನ್ಯಿಂಗ್ ಸ್ಥಳ, ಅದು ಆಂಗ್ಲೋ-ಭಾರತ ಯುದ್ದವನ್ನು ಸಾಕ್ಷೀಕರಿಸಿದೆ. ಮುಂಬಯಿಯಲ್ಲಿ ಆಗಸ್ಟ್ ಕ್ರಾಂತಿ ಮೈದಾನ, ಪಂಜಾಬಿನಲ್ಲಿ ಜಲಿಯನ್ ವಾಲಾ ಭಾಗ್ ಮತ್ತು ಉತ್ತರ ಪ್ರದೇಶದ ಮೀರತ್, ಕಕೋರಿ ಹಾಗು ಝಾನ್ಸಿಗಳಲ್ಲಿ ಇದು ಆರಂಭವಾಗಿದೆ. ಸ್ವಾತಂತ್ರ್ಯದ ಅಸಂಖ್ಯಾತ ಹೋರಾಟಗಳು, ಅಸಂಖ್ಯಾತ ತ್ಯಾಗಗಳು ಮತ್ತು ಅಪಾರ ಜನ ಸೈನ್ಯಗಳನ್ನು ಮತ್ತೆ ದೇಶಾದ್ಯಂತ ನೆನಪು ಮಾಡಿಕೊಳ್ಳಲಾಗುತ್ತಿದೆ. ಈ ಪವಿತ್ರ ಸಂದರ್ಭದಲ್ಲಿ ನಾನು ಬಾಪು ಅವರಿಗೆ ಪುಷ್ಪ ನಮನವನ್ನು ಸಲ್ಲಿಸುತ್ತೇನೆ. ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರಾಣಾರ್ಪನೆ ಮಾಡಿದ ಪ್ರತಿಯೊಬ್ಬ ಹೋರಾಟಗಾರರಿಗೆ ಮತ್ತು ದೇಶದ ಚಳವಳಿಯನ್ನು ಮುನ್ನಡೆಸಿದ ಶ್ರೇಷ್ಟ ವ್ಯಕ್ತಿತ್ವಗಳಿಗೆ ನಾನು ಗೌರವ ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಸ್ವಾತಂತ್ರ್ಯದ ಬಳಿಕವೂ ಸಾಂಪ್ರದಾಯಿಕ ಭದ್ರತಾ ಪರಂಪರೆಯನ್ನು ಜೀವಂತವಾಗಿಟ್ಟ ಧೈರ್ಯಶಾಲೀ ಸೈನಿಕರಿಗೆ, ದೇಶದ ಭದ್ರತೆಗಾಗಿ ಪರಮೋಚ್ಛ ತ್ಯಾಗ ಮಾಡಿದ ಸೈನಿಕರಿಗೆ, ಹುತಾತ್ಮರಾದವರಿಗೆ ನಾನು ಗೌರವದ ನಮನಗಳನ್ನು ಸಲ್ಲಿಸುತ್ತೇನೆ. ಸ್ವತಂತ್ರ ಭಾರತದ ಪುನರ್ನಿರ್ಮಾಣದ ಪ್ರಗತಿಯಲ್ಲಿ ಪ್ರತಿಯೊಂದು ಇಟ್ಟಿಗೆಗಳನ್ನಿಟ್ಟ ಮತ್ತು ದೇಶವನ್ನು ಸ್ವಾತಂತ್ರ್ಯದ 75 ನೇ ವರ್ಷದತ್ತ ಮುನ್ನಡೆಸಿದ ಸದ್ಗುಣಶೀಲ ಆತ್ಮಗಳಿಗೆ ನಾನು ಶಿರಬಾಗಿ ನಮಿಸುತ್ತೇನೆ.
ಸ್ನೇಹಿತರೇ,
ಮಿಲಿಯಾಂತರ ಜನರು ಶತಮಾನಗಳ ಕಾಲ ಸ್ವಾತಂತ್ರ್ಯದ ಸೂರ್ಯೋದಯಕ್ಕೆ ಕಾತರಿಸುತ್ತಿದ್ದಂತಹ ಗುಲಾಮಗಿರಿಯ ಅವಧಿಯನ್ನು ಕಲ್ಪಿಸಿಕೊಂಡರೆ, 75 ವರ್ಷಗಳ ಸ್ವಾತಂತ್ರ್ಯದ ಚಾರಿತ್ರಿಕ ಸಂದರ್ಭ ಎಷ್ಟೊಂದು ಪ್ರಖ್ಯಾತವಾದುದು, ಮಹತ್ವದ್ದು ಎಂಬುದು ಅರಿವಿಗೆ ಬರುತ್ತದೆ. ಈ ಉತ್ಸವವು ಭಾರತದ ಸನಾತನ ಪರಂಪರೆಯನ್ನೂ, ಸ್ವಾತಂತ್ರ್ಯ ಹೋರಾಟದ ನೆರಳನ್ನು ಮತ್ತು ಸ್ವತಂತ್ರ ಭಾರತದ ಪ್ರಗತಿಯ ದರ್ಶನವನ್ನೂ ಒಳಗೊಂಡಿದೆ. ಆದುದರಿಂದ ನಿಮ್ಮೆದುರು ಮಾಡಲಾಗಿರುವ ಪ್ರದರ್ಶಿಕೆಯು ಅಮೃತ್ ಉತ್ಸವದ ಐದು ಸ್ಥಂಭಗಳಿಗೆ ಹೆಚ್ಚಿನ ಒತ್ತು ನೀಡಿದೆ. ಆ ಐದು ಸ್ಥಂಭಗಳೆಂದರೆ ಸ್ವಾತಂತ್ರ್ಯ ಹೋರಾಟ, 75 ರ ಚಿಂತನೆ, 75 ರಲ್ಲಿ ಸಾಧನೆಗಳು, 75 ರಲ್ಲಿಯ ಕಾರ್ಯಕ್ರಮಗಳು ಮತ್ತು 75 ರ ನಿರ್ಧಾರಗಳು. ಇವು ಸ್ವತಂತ್ರ ಭಾರತಕ್ಕೆ ಮುನ್ನಡೆಯಲು ಕನಸು ಮತ್ತು ಕರ್ತವ್ಯಗಳಿಗೆ ಪ್ರೇರಣೆ ನೀಡಲಿದೆ. ಈ ಸಂದೇಶಗಳ ಆಧಾರದಲ್ಲಿ ’ಅಮೃತ ಉತ್ಸವ’ ಜಾಲತಾಣ ಜೊತೆಗೆ ಚರಕ ಅಭಿಯಾನ ಮತ್ತು ಆತ್ಮ ನಿರ್ಭರ ಇನ್ಕ್ಯುಬೇಟರ್ ಗಳನ್ನೂ ಇಂದು ಆರಂಭಿಸಲಾಗಿದೆ.
ಸಹೋದರರೇ ಮತ್ತು ಸಹೋದರಿಯರೇ,
ಆತ್ಮ ಗೌರವ ಮತ್ತು ತ್ಯಾಗದ ಬಗ್ಗೆ ಮುಂದಿನ ಜನಾಂಗಗಳಿಗೆ ಬೋಧಿಸಿದಾಗ ಮಾತ್ರ ದೇಶದ ಪ್ರಖ್ಯಾತಿ, ವೈಭವ ಪ್ರಜ್ಞಾವಸ್ಥೆಯಲ್ಲಿರುತ್ತದೆ ಎಂಬುದನ್ನು ಇತಿಹಾಸ ಸಾಕ್ಷೀಕರಿಸಿದೆ. ಆಗ ಮಾತ್ರ ಅದು ನಿರಂತರವಾದ ಪ್ರೇರಣೆಯನ್ನು ಒದಗಿಸಬಲ್ಲುದು. ದೇಶದ ಭವಿಷ್ಯ ಉಜ್ವಲವಾಗಿರಬೇಕಾದರೆ ಅದು ಅದರ ಹಿಂದಿನ ಅನುಭವಗಳನ್ನು ಕುರಿತ ಹೆಮ್ಮೆ ಮತ್ತು ಪರಂಪರೆಯನ್ನು ಹೊಂದಿದ್ದರೆ ಮಾತ್ರ ಸಾಧ್ಯವಾಗುತ್ತದೆ. ಭಾರತವು ಹೆಮ್ಮೆ ಪಡಲು ಶ್ರೀಮಂತವಾದ ಚರಿತ್ರೆ ಮತ್ತು ಪ್ರಜ್ಞಾಪೂರ್ವಕವಾದ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಆದುದರಿಂದ ಸ್ವಾತಂತ್ರ್ಯದ 75 ವರ್ಷಗಳ ಸಂದರ್ಭ ಪ್ರಸ್ತುತ ತಲೆಮಾರಿಗೆ ಅಮೃತದಂತೆ, ದೇಶಕ್ಕಾಗಿ ಬದುಕಲು ನಮ್ಮೆಲ್ಲರಿಗೂ ಪ್ರೇರಣೆ ನೀಡುವ ಸ್ಪರ್ಷಮಣಿಯಂತೆ ಮತ್ತು ದೇಶಕ್ಕಾಗಿ ಪ್ರತೀ ಸಂದರ್ಭದಲ್ಲಿಯೂ ಏನಾದರೊಂದು ಮಾಡಲು ಇರುವ ಅವಕಾಶದಂತೆ.
ಸ್ನೇಹಿತರೇ,
ನಮ್ಮ ವೇದಗಳಲ್ಲಿ ಬರೆದಿದೆ: मृत्योः मुक्षीय मामृतात् (ಸಾವಿನಿಂದ ಮುಕ್ತಿ ಎಂದರೆ ಅಮರತ್ವ) ಅಂದರೆ, ನಾವು ದುಃಖವನ್ನು ತೊರೆದು, ಹತಾಶೆ, ಕ್ಲೇಶ ಮತ್ತು ಹಾನಿಯನ್ನು ತೊರೆದು ಅಮರತ್ವದತ್ತ ಸಾಗಬೇಕು. ಇದು ಈ ಸ್ವಾತಂತ್ರ್ಯದ ಅಮೃತ ಉತ್ಸವದ ನಿರ್ಧಾರ. ಅಜಾದಿ ಅಮೃತ ಮಹೋತ್ಸವ ಎಂದರೆ ಸ್ವಾತಂತ್ರ್ಯದ ಶಕ್ತಿಯ ಅಮೃತ. ಸ್ವಾತಂತ್ರ್ಯ ಹೋರಾಟಗಾರರ ಪ್ರೇರಣೆಗಳ ಸ್ಪರ್ಶಮಣಿ. ಹೊಸ ಚಿಂತನೆಗಳು ಮತ್ತು ಪ್ರತಿಜ್ಞೆಗಳ ಸಂಗಮ ಮತ್ತು ಆತ್ಮನಿರ್ಭರದ ಸಂಕೇತ. ಆದುದರಿಂದ ಈ ಮಹೋತ್ಸವವು ರಾಷ್ಟ್ರ ಜಾಗೃತಿಯ ಹಬ್ಬ. ಉತ್ತಮ ಆಡಳಿತದ ಕನಸನ್ನು ನನಸು ಮಾಡುವ ಉತ್ಸವ. ಜಾಗತಿಕ ಶಾಂತಿಯ ಹಾಗು ಅಭಿವೃದ್ಧಿಯ ಹಬ್ಬ.
ಸ್ನೇಹಿತರೇ,
ಅಮೃತ ಉತ್ಸವವನ್ನು ದಂಡಿ ಯಾತ್ರಾ ದಿನದಂದು ಉದ್ಘಾಟಿಸಲಾಗುತ್ತಿದೆ. ಆ ಯಾತ್ರೆಗೆ ಆ ಚಾರಿತ್ರಿಕ ಘಟನೆಯನ್ನು ನೆನಪಿಸುವಂತೆ ಹಸಿರು ನಿಶಾನೆ ತೋರಲಾಗುತ್ತದೆ. ದಂಡಿ ಯಾತ್ರೆಯ ಸಂದೇಶ ಮತ್ತು ಪರಿಣಾಮ ಹಾಗು ಅಮೃತ ಉತ್ಸವದ ಮೂಲಕ ದೇಶವು ಮುನ್ನಡೆ ಸಾಧಿಸುವ ಹಂಬಲ ಪರಸ್ಪರ ಅದ್ಭುತ ಕಾಕತಾಳಿಯವಾದ ಸಂಗತಿಗಳು. ಗಾಂಧೀಜಿ ಅವರ ಈ ಒಂದು ಯಾತ್ರೆ ಜನಸಮೂಹವನ್ನು ಕೈಜೋಡಿಸುವಂತೆ ಮಾಡಲು ಪ್ರೇರಣೆಯಾಯಿತು ಮತ್ತು ಮುಂದೆ ಸ್ವಾತಂತ್ರ್ಯ ಹೋರಾಟವಾಯಿತು. ಈ ಒಂದು ಯಾತ್ರೆಯು ಭಾರತದ ಸ್ವಾತಂತ್ರ್ಯ ಕುರಿತ ಅದರ ಹಂಬಲವನ್ನು ಇಡೀ ವಿಶ್ವಕ್ಕೆ ಹರಡಿತು. ಇದು ಚಾರಿತ್ರಿಕ ಯಾಕೆಂದರೆ ಬಾಪು ಅವರ ದಂಡಿ ಯಾತ್ರೆ ಸ್ವಾತಂತ್ರ್ಯದ ಹಂಬಲವನ್ನು ಹಾಗು ಭಾರತದ ತತ್ವಗಳನ್ನು ಅಡಕಗೊಳಿಸಿತ್ತು.
ಉಪ್ಪನ್ನು ಎಂದೂ ಅದರ ತಯಾರಿಕಾ ವೆಚ್ಚದ ಮೇಲೆ ಮೌಲ್ಯಮಾಪನ ಮಾಡಲಾಗುತ್ತಿರಲಿಲ್ಲ. ನಮಗೆ ಉಪ್ಪು ಎಂದರೆ ಅದು ನಿಷ್ಟೆಯ, ಪ್ರಾಮಾಣಿಕತೆಯ ಮತ್ತು ನಂಬಿಕೆಯ ಪ್ರತೀಕ. ನಾವು ಈಗಲೂ ಹೇಳುತ್ತೇವೆ, ನಾವು ಈ ದೇಶದ ಉಪ್ಪು ತಿಂದಿದ್ದೇವೆ ಎಂಬುದಾಗಿ.ಇದು ಉಪ್ಪು ಬಹಳ ಅಮೂಲ್ಯವಾದುದು ಎಂಬುದಕ್ಕಲ್ಲ. ಅದು ಯಾಕೆಂದರೆ ಉಪ್ಪು ಶ್ರಮ ಮತ್ತು ಸಮಾನತೆಯನ್ನು ಪ್ರತಿನಿಧಿಸುತ್ತದೆ. ಆ ಕಾಲದಲ್ಲಿ ಉಪ್ಪು ಭಾರತದ ಸ್ವಾವಲಂಬನೆಯ ಸಂಕೇತವಾಗಿತ್ತು. ಬ್ರಿಟಿಷರು ಭಾರತದ ಮೌಲ್ಯಗಳಿಗೆ ಹಾನಿ ಮಾಡಿದ್ದಲ್ಲದೆ, ಈ ಸ್ವಾವಲಂಬನೆಗೂ ಧಕ್ಕೆ ತಂದರು. ಭಾರತದ ಜನರು ಇಂಗ್ಲೆಂಡಿನಿಂದ ಬರುವ ಉಪ್ಪನ್ನು ಅವಲಂಬಿಸಬೇಕಾಯಿತು. ಗಾಂಧೀಜಿ ಅವರು ದೇಶದ ಈ ನೋವನ್ನು ಅರ್ಥ ಮಾಡಿಕೊಂಡರು, ಜನರ ನಾಡಿ ಮಿಡಿತವನು ಅರ್ಥೈಸಿಕೊಂಡರು. ಮತ್ತು ಅದನ್ನು ಪ್ರತಿಯೊಬ್ಬ ಭಾರತೀಯರ ಚಳವಳಿಯನ್ನಾಗಿ ಮಾರ್ಪಡಿಸಿದರು ಮತ್ತು ಅದು ಪ್ರತಿಯೊಬ್ಬ ಭಾರತೀಯರ ನಿರ್ಧಾರವೂ ಆಯಿತು.
ಸ್ನೇಹಿತರೇ,
ಅದೇ ರೀತಿ ಭಾರತಕ್ಕೆ ವಿವಿಧ ಯುದ್ಧಗಳ ಮತ್ತು ಸ್ವಾತಂತ್ರ್ಯ ಚಳವಳಿಯ ವಿವಿಧ ಘಟಕಗಳ ಪ್ರೇರಣೆಗಳು ಮತ್ತು ಸಂದೇಶಗಳನ್ನು ಅಡಕಗೊಳಿಸಿಕೊಂಡು ಮುನ್ನಡೆಯಬಹುದಾದ ಅವಕಾಶಗಳು ಲಭಿಸಿದವು. 1857ರ ಸ್ವಾತಂತ್ರ್ಯ ಹೋರಾಟ, ವಿದೇಶದಿಂದ ಮಹಾತ್ಮಾ ಗಾಂಧಿ ಅವರ ಮರಳುವಿಕೆ, ದೇಶಕ್ಕೆ ಸತ್ಯಾಗ್ರಹದ ಶಕ್ತಿಯ ಮನವರಿಕೆ, ಲೋಕಮಾನ್ಯ ತಿಲಕರ ಸಂಪೂರ್ಣ ಸ್ವಾತಂತ್ರ್ಯದ ಕರೆ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನೇತೃತ್ವದಲ್ಲಿ ಅಜಾದ್ ಹಿಂದ್ ಪೌಜ್ ನ ದಿಲ್ಲಿ ಯಾತ್ರೆ ಮತ್ತು ದಿಲ್ಲಿ ಚಲೋ ಘೋಷಣೆಗಳನ್ನು ಭಾರತವು ಇಂದಿಗೂ ಮರೆಯಲಾರದು. 1942 ರ ಮರೆಯಲಾಗದ ಘಟನೆಯ ಜೊತೆ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಘೋಷಣೆ ಸಹಿತ ಅಲ್ಲಿ ಅಸಂಖ್ಯಾತ ಮೈಲಿಗಲ್ಲುಗಳಿವೆ. ಅವುಗಳಿಂದ ನಾವು ಪ್ರೇರಣೆ ಪಡೆಯಲು ಮತ್ತು ಶಕ್ತಿ ಪಡೆಯಲು ಸಾಧ್ಯವಿದೆ. ದೇಶವು ದಿನ ನಿತ್ಯ ತನ್ನ ಕೃತಜ್ಞತೆಯನ್ನು ಸಲ್ಲಿಸುವಂತಹ ಹಲವಾರು ಸ್ಪೂರ್ತಿಯುತ ಹೋರಾಟಗಾರರು ನಮ್ಮಲ್ಲಿದ್ದಾರೆ.
1857 ರ ಕ್ರಾಂತಿಯ ಧೈರ್ಯಶಾಲೀ ಮಂಗಲ್ ಪಾಂಡೇ ಮತ್ತು ತಾತ್ಯ ಟೋಪೇ ಇರಲಿ, ಬ್ರಿಟಿಷ್ ಸೇನೆಯ ವಿರುದ್ಧ ಕಾದಾಟ ನಡೆಸಿದ ಧೈರ್ಯಶಾಲೀ ರಾಣಿ ಲಕ್ಷ್ಮೀಬಾಯಿ, ಕಿತ್ತೂರಿನ ರಾಣಿ ಚೆನ್ನಮ್ಮ, ರಾಣಿ ಗೈದಿನ್ಲು, ಚಂದ್ರ ಶೇಖರ ಅಜಾದ್, ರಾಂ ಪ್ರಸಾದ್ ಬಿಸ್ಮಿಲ್, ಭಗತ್ ಸಿಂಗ್, ಸುಖ್ ದೇವ್, ರಾಜಗುರು, ಅಶ್ಫಾಕುಲ್ಲಾ ಖಾನ್, ಗುರು ರಾಮ್ ಸಿಂಗ್, ಟೈಟಸ್ ಜೀ, ಪೌಲ್ ರಾಮಸಾಮಿ, ಅಥವಾ ಅಸಂಖ್ಯಾತ ಜನನಾಯಕರಾದಂತಹ ಪಂಡಿತ್ ನೆಹರೂ, ಸರ್ದಾರ್ ಪಟೇಲ್, ಬಾಬಾ ಸಾಹೇಬ್ ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಮೌಲಾನಾ ಅಜಾದ್, ಖಾನ್ ಅಬ್ದುಲ್ ಗಫಾರ್ ಖಾನ್, ವೀರ ಸಾವರ್ಕರ್!, ಇರಲಿ- ಈ ಎಲ್ಲ ಶ್ರೇಷ್ಟ ವ್ಯಕ್ತಿತ್ವಗಳು ಸ್ವಾತಂತ್ರ್ಯ ಚಳವಳಿಯ ಪ್ರವರ್ತಕರು. ಇಂದು ನಾವು ಅವರ ಕನಸಿನ ಭಾರತವನ್ನು ನಿರ್ಮಾಣ ಮಾಡಲು ಅವರಿಂದ ಪ್ರೇರಣೆಯನ್ನು ಪಡೆದುಕೊಳ್ಳುತ್ತಿದ್ದೇವೆ.
ಸ್ನೇಹಿತರೇ,
ನಮ್ಮ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಡೆದ ಹಲವಾರು ಚಳವಳಿಗಳು ಮತ್ತು ಯುದ್ಧಗಳು ಪ್ರಸ್ತಾಪವೇ ಇಲ್ಲದೆ ಅವು ತೆರೆ ಮರೆಗೆ ಸರಿದಿವೆ. ಈ ಎಲ್ಲಾ ಹೋರಾಟಗಳೂ ಸುಳ್ಳಿನ ವಿರುದ್ಧ ಭಾರತದ ಸತ್ಯ ಘೋಷಣೆಯ ಶಕ್ತಿಶಾಲೀ ಘೋಷಣೆಗಳೇ ಆಗಿವೆ. ಮತ್ತು ಭಾರತದ ಸ್ವತಂತ್ರ ಪ್ರವೃತ್ತಿಗೆ ಸಾಕ್ಷಿಯಾಗಿವೆ. ಭಾರತದ ಅಂತಃಸಾಕ್ಷಿಯು ಅನ್ಯಾಯ, ಶೋಷಣೆ ಮತ್ತು ಹಿಂಸಾಚಾರದ ವಿರುದ್ಧ ಇರುವುದಕ್ಕೆ ಈ ಯುದ್ದಗಳು ಸಾಕ್ಷಿಯಾಗಿವೆ. ರಾಮನ ಕಾಲದಲ್ಲಿದ್ದಂತಹ ಈ ಪ್ರಜ್ಞೆ ಮಹಾಭಾರತದ ಕುರುಕ್ಷೇತ್ರದಲ್ಲಿತ್ತು ಮತ್ತು ಹಲ್ದೀಘಾಟಿನ ಯುದ್ಧಭೂಮಿಯಲ್ಲಿತ್ತು, ಶಿವಾಜಿಯ ಯುದ್ಧ ಕರೆಯಲ್ಲಿತ್ತು ಮತ್ತು ಅದೇ ಸನಾತನ ಪ್ರಜ್ಞೆ , ಅದೇ ಶೌರ್ಯ ಪ್ರತೀ ವಲಯ, ವಿಭಾಗ ಮತ್ತು ಭಾರತದ ಸಮಾಜದೊಳಗೆ ಜ್ವಲಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಬಲ ತುಂಬಿತು. जननि जन्मभूमिश्च, स्वर्गादपि गरीयसी ಅಂದರೆ ತಾಯಿ ಮತ್ತು ತಾಯ್ನೆಲ ಸ್ವರ್ಗಕ್ಕಿಂತ ಮಿಗಿಲು ಎಂಬ ಮಂತ್ರ ಇಂದಿಗೂ ನಮಗೆ ಪ್ರೇರಣೆಯನ್ನು ಒದಗಿಸುತ್ತಿದೆ.
ಕೋಲ್ ದಂಗೆ ಇರಲಿ, ಅಥವಾ ಹೋ ಚಳವಳಿ ಇರಲಿ, ಖಾಸಿ ಚಳವಳಿ ಅಥವಾ ಸಂತಾಲ್ ಕ್ರಾಂತಿ ಇರಲಿ, ಕಾಚಾರ್ ನಾಗಾ ಚಳವಳಿ ಅಥವಾ ಕುಕಾ ಚಳವಳಿ ಇರಲಿ, ಭಿಲ್ ಚಳವಳಿ ಅಥವಾ ಮುಂಡಾ ಕ್ರಾಂತಿಯಾಗಿರಲಿ, ಸನ್ಯಾಸಿ ಆಂದೋಲನ ಅಥವಾ ರಾಮೋಸಿ ದಂಗೆಯಾಗಿರಲಿ, ಕಿತ್ತೂರು ಚಳವಳಿಯಾಗಿರಲಿ, ಟ್ರಾವಂಕೂರ್ ಆಂದೋಲನವಾಗಿರಲಿ, ಬಾರ್ಡೋಲಿ ಸತ್ಯಾಗ್ರಹವಾಗಿರಲಿ, ಚಂಪಾರಣ್ಯ ಸತ್ಯಾಗ್ರಹ, ಸಂಭಾಲ್ಪುರ ಬಿಕ್ಕಟ್ಟು, ಚೌವಾರ್ ಬಂಡಾಯ, ಬುಂದೇಲ್ ಚಳವಳಿ..ಇಂತಹ ಹಲವಾರು ಚಳವಳಿಗಳು ಮತ್ತು ಆಂದೋಲನಗಳು ದೇಶದ ಪ್ರತೀ ಭಾಗಗಳಲ್ಲಿಯೂ ಸ್ವಾತಂತ್ರ್ಯದ ಕಿಡಿ ಎಲ್ಲಾ ಕಾಲದಲ್ಲಿಯೂ ಸದಾ ಜ್ವಲಿಸುತ್ತಿರುವಂತೆ ನೋಡಿಕೊಂಡವು. ಇದೇ ವೇಳೆ ನಮ್ಮ ಸಿಖ್ ಗುರು ಪರಂಪರೆ ನಮಗೆ ಹೊಸ ಶಕ್ತಿಯನ್ನು, ಉತ್ತೇಜನ, ಪ್ರೇರಣೆಯನ್ನು ನೀಡಿತು ಮತ್ತು ದೇಶದ ಸಂಸ್ಕೃತಿ ಹಾಗು ಪದ್ಧತಿಗಳ ರಕ್ಷಣೆಗೆ ತ್ಯಾಗ ಮಾಡುವುದಕ್ಕೆ ಹುರಿದುಂಬಿಸಿತು. ಅಲ್ಲಿ ನಾವು ಸದಾ ನೆನಪಿಡಬೇಕಾದ ಇನ್ನೊಂದು ಸಂಗತಿ ಇದೆ.
ಸ್ನೇಹಿತರೇ,
ನಮ್ಮ ಸಂತರು, ಆಚಾರ್ಯರು ಮತ್ತು ಶಿಕ್ಷಕರು ಈ ಸ್ವಾತಂತ್ರ್ಯದ ಚಳವಳಿಯ ಜ್ವಾಲೆಯನ್ನು ನಿರಂತರವಾಗಿ ಜಾಗೃತಗೊಳಿಸುತ್ತಾ ಬಂದರು. ಪೂರ್ವ-ಪಶ್ಚಿಮ, ಉತ್ತರ , ದಕ್ಷಿಣ ಸಹಿತ ಎಲ್ಲಾ ದಿಕ್ಕುಗಳಲ್ಲಿಯೂ ಮತ್ತು ಎಲ್ಲಾ ವಲಯಗಳಲ್ಲಿಯೂ ಈ ಜಾಗೃತಿ ನಡೆಯಿತು. ಇದೇ ರೀತಿಯಲ್ಲಿ ಭಕ್ತಿ ಚಳವಳಿ ದೇಶವ್ಯಾಪ್ತಿಯಲ್ಲಿ ಸ್ವಾತಂತ್ರ್ಯ ಚಳವಳಿಗೆ ವೇದಿಕೆಯನ್ನು ನಿರ್ಮಾಣ ಮಾಡಿತು. ಪೂರ್ವದಲ್ಲಿ ಸಂತರಾದ ಚೈತನ್ಯ ಮಹಾಪ್ರಭು, ರಾಮಕೃಷ್ಣ ಪರಮಹಂಸ ಮತ್ತು ಶ್ರೀಮಂತ ಶಂಕರದೇವ ಸಮಾಜಕ್ಕೆ ಮಾರ್ಗದರ್ಶನ ಮಾಡಿದರು ಮತ್ತು ಅವರ ಗುರಿಗಳತ್ತ ಗಮನ ಕೇಂದ್ರೀಕರಿಸಿದರು. ಪಶ್ಚಿಮದಲ್ಲಿ ಮೀರಾಬಾಯಿ, ಏಕನಾಥ್, ತುಕಾರಾಂ, ರಾಮದಾಸ, ನರ್ಸೀ ಮೆಹ್ತಾ, ಉತ್ತರದಲ್ಲಿ ಸಂತ ರಮಾನಂದ, ಕಬೀರದಾಸ, ಗೋಸ್ವಾಮಿ ತುಲಸೀದಾಸ, ಸೂರದಾಸ, ಗುರುನಾನಕ ದೇವ, ಸಂತ ರೈದಾಸ ಮತ್ತು ದಕ್ಷಿಣದಲ್ಲಿ ಮಧ್ವಾಚಾರ್ಯ, ನಿಂಬರಕಾಚಾರ್ಯ, ವಲ್ಲಭಾಚಾರ್ಯ, ರಾಮಾನುಜಾಚಾರ್ಯರು ಭಕ್ತಿ ಪಂಥದ ಕಾಲದಲ್ಲಿ ಸಮಾಜದ ಮೇಲೆ ಪ್ರಭಾವ ಬೀರಿದರು. ಮಲಿಕ್ ಮುಹಮ್ಮದ್ ಜಯೇಸಿ, ರಶ್ಕಾಣ್, ಸೂರದಾಸ್, ಕೇಶವದಾಸ, ವಿದ್ಯಾಪತಿ ಅವರೂ ಸಮಾಜದ ದೌರ್ಬಲ್ಯಗಳನ್ನು ಮೀರಲು ಉತ್ತೇಜನ ನೀಡಿದರು.
ಇಂತಹ ಹಲವಾರು ವ್ಯಕ್ತಿತ್ವಗಳ ಕಾರಣದಿಂದಾಗಿ ಈ ಚಳವಳಿ ಗಡಿಗಳನ್ನು ದಾಟಿತು ಮತ್ತು ಎಲ್ಲಾ ಭಾರತೀಯರನ್ನು ಆವರಿಸಿತು. ಇಂತಹ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಳಲ್ಲಿ, ಹಲವಾರು ಮಂದಿ ಹೋರಾಟಗಾರರು, ಸಂತರು, ಆತ್ಮಗಳು, ವೀರ ಹುತಾತ್ಮರು ಪಾಲ್ಗೊಂಡಿದ್ದರು, ಅವರ ಕಥೆ ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯ!. ಈ ಶ್ರೇಷ್ಟ ನಾಯಕರ ಜೀವನ ಚರಿತ್ರೆಯನ್ನು ಹೊರತೆಗೆದು ಜನ ಸಮೂಹದತ್ತ ಕೊಂಡೊಯ್ಯಬೇಕು. ಈ ಜನರ ಜೀವನ ಚರಿತ್ರೆಗಳು, ಅವರ ಬದುಕಿನ ಹೋರಾಟಗಳು, ನಮ್ಮ ಸ್ವಾತಂತ್ರ್ಯ ಹೋರಾಟದ ಏಳು ಬೀಳುಗಳು ನಮ್ಮ ಈಗಿನ ತಲೆಮಾರಿಗೆ ಜೀವನದ ಪ್ರತಿಯೊಂದು ಪಾಠಗಳನ್ನು ಕಲಿಸಬಲ್ಲವು.
ಸಹೋದರರೇ ಮತ್ತು ಸಹೋದರಿಯರೇ,
ಈ ನಾಡಿನ ವೀರ ಪುತ್ರ ಶ್ಯಾಮಜೀ ಕೃಷ್ಣ ವರ್ಮಾ ತಮ್ಮ ಕೊನೆಯ ಉಸಿರು ಇರುವವರೆಗೂ ಬ್ರಿಟಿಷರ ಮೂಗಿನಡಿಯಲ್ಲಿ ಹೇಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು. ಭಾರತ ಮಾತೆಯ ತೊಡೆಯ ಮೇಲೆ ಅವರ ಪಾರ್ಥಿವ ಅವಶೇಷಗಳು ಪವಡಿಸಬೇಕಾದರೆ ಏಳು ದಶಕಗಳು ಬೇಕಾದವು. ಅಂತಿಮವಾಗಿ ನಾನು ಶ್ಯಾಮ್ ಜೀ ಕೃಷ್ಣ ವರ್ಮಾ ಅವರ ಪಾರ್ಥಿವ ಅವಶೇಷಗಳನ್ನು 2003 ರಲ್ಲಿ ವಿದೇಶದಿಂದ ತಂದೆ. ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ಅನೇಕ ಹೋರಾಟಗಾರರಿದ್ದಾರೆ. ದಲಿತರು, ಆದಿವಾಸಿಗಳು, ಮಹಿಳೆಯರು, ಮತ್ತು ಯುವಕರು ಅಗಣಿತ ತ್ಯಾಗಗಳನ್ನು ಮಾಡಿದ್ದಾರೆ. ತಮಿಳುನಾಡಿನ 32 ವರ್ಷದ ಯುವಕ ಕೋಡಿ ಕಥಾ ಕುಮಾರನ್ ರನ್ನು ನೆನಪಿಸಿಕೊಳ್ಳಿ, ಬ್ರಿಟಿಷರು ತಲೆಗೆ ಗುಂಡು ಹೊಡೆದರೂ ಅವರು ದೇಶದ ಧ್ವಜ ನೆಲಕ್ಕೆ ಬೀಳಲು ಬಿಡಲಿಲ್ಲ. ತಮಿಳುನಾಡಿನಲ್ಲಿ ಕೋಡಿ ಕಥಾ ಎಂದರೆ ಧ್ವಜದ ಸಂರಕ್ಷಕ. ತಮಿಳುನಾಡಿನ ವೇಲು ನಾಚಿಯಾರ್ ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದ ಮೊದಲ ರಾಣಿ.
ಅದೇ ರೀತಿ, ನಮ್ಮ ದೇಶದ ಬುಡಕಟ್ಟು ಸಮಾಜವು ತನ್ನ ಶೌರ್ಯ ಮತ್ತು ವೀರತ್ವದಿಂದ ವಿದೇಶಿ ಶಕ್ತಿಯನ್ನು ಮೊಣಕಾಲೂರುವಂತೆ ಮಾಡಿದ್ದಿದೆ. ಜಾರ್ಖಂಡದಲ್ಲಿ ಬ್ರಿಟಿಷರಿಗೆ ಬಿರ್ಸಾ ಮುಂಡಾ ಸವಾಲೆಸೆದರಲ್ಲದೆ, ಮುರ್ಮು ಸಹೋದರರು ಸಂತಾಲ್ ಚಳವಳಿಯ ನಾಯಕತ್ವ ವಹಿಸಿದರು. ಒಡಿಶಾದಲ್ಲಿ ಬ್ರಿಟಿಷರ ವಿರುದ್ಧ ಚಕ್ರಾ ಬಿಸೋಯಿ ಯುದ್ಧ ಸಾರಿದರು. ಲಕ್ಷ್ಮಣ ನಾಯಕ್ ಅವರು ಗಾಂಧಿ ವಿಧಾನಗಳ ಮೂಲಕ ಜಾಗೃತಿ ಮೂಡಿಸಿದರು. ಆಂಧ್ರ ಪ್ರದೇಶದಲ್ಲಿ ಮನ್ಯಾಂ ವಿರುಡು ಮತ್ತು ಅಲ್ಲೂರಿ ಸಿರಾರಾಂ ರಾಜು ಅವರು ರಾಂಪಾ ಚಳವಳಿಯ ನೇತೃತ್ವ ವಹಿಸಿದರು. ಮಿಜೋರಾಂನ ಗುಡ್ಡಗಾಡುಗಳಲ್ಲಿ ಪಸಾಲ್ತಾ ಖುಂಗ್ಚೇರಾ ಬ್ರಿಟಿಷರನ್ನು ಎದುರಿಸಿದರು. ಅಸ್ಸಾಂ ಮತ್ತು ಈಶಾನ್ಯದ ಇತರ ಸ್ವಾತಂತ್ರ್ಯ