ಪ್ರಧಾನ ಮಂತ್ರಿಯವರ ಕಛೇರಿ

ಉತ್ಪಾದನೆ ಆಧಾರಿತ ಪ್ರೋತ್ಸಾಹದಾಯಕ ಯೋಜನೆ (PLI)ಗಳ ಕುರಿತು ವೆಬಿನಾರ್‌ನಲ್ಲಿ ಪ್ರಧಾನಿ ಅವರ ಭಾಷಣ


13 ಕ್ಷೇತ್ರಗಳಿಗೆ ಸರ್ಕಾರ ಬದ್ಧತೆಯನ್ನು ತೋರುತ್ತಿದೆ: ಪ್ರಧಾನ ಮಂತ್ರಿ

PLI ಗಳ ಕ್ಷೇತ್ರಗಳಿಗೆ ಸಂಬಂಧಿಸಿದ ಸಂಪೂರ್ಣ ಪರಿಸರ ವ್ಯವಸ್ಥೆ ಲಾಭದಾಯಕ: ಪ್ರಧಾನ ಮಂತ್ರಿ

ಉತ್ಪಾದನೆಯ ಪ್ರಮಾಣ ಮತ್ತು ವೇಗವನ್ನು ಹೆಚ್ಚಿಸಬೇಕಾಗಿದೆ: ಪ್ರಧಾನ ಮಂತ್ರಿ

ಭಾರತದಲ್ಲಿಯೇ ನಿರ್ಮಾಣ, ಜಗತ್ತಿಗಾಗಿ ನಿರ್ಮಾಣ: ಪ್ರಧಾನ ಮಂತ್ರಿ

ಭಾರತವು ವಿಶ್ವದಾದ್ಯಂತ ಬೃಹತ್‌ ಬ್ರ್ಯಾಂಡ್‌ ಆಗಿ ಬದಲಾಗಿದೆ. ಹೊಸತಾಗಿ ಆರಂಭಿಸಿರುವ ವಿಶ್ವಸನೀಯ ಬಾಂಧವ್ಯಗಳನ್ನು ಉಳಿಸಿಕೊಳ್ಳಲು ನವ ತಂತ್ರಗಾರಿಕೆಯನ್ನು ಹೆಣೆಯಬೇಕಿದೆ: ಪ್ರಧಾನ ಮಂತ್ರಿ 

Posted On: 05 MAR 2021 12:19PM by PIB Bengaluru

ನಮ್ಮ ಪ್ರಧಾನ ಮಂತ್ರಿ, ಶ್ರೀ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ, ವೆಬಿನಾರ್‌ ಒಂದನ್ನು ಉದ್ದೇಶಿಸಿ ಉತ್ಪಾದನೆ ಆಧಾರಿತ ಪ್ರೋತ್ಸಾಹದಾಯಕ ಯೋಜನೆಗಳ ಕುರಿತು ಮಾತನಾಡಿದರು. ವೆಬಿನಾರ್‌ ಅನ್ನು ಕೈಗಾರಿಕೆ ಹಾಗೂ ಆಂತರಿಕ ವ್ಯಾಪಾರ ಇಲಾಖೆ ಹಾಗೂ ನೀತಿ ಆಯೋಗದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.

ವರ್ಷದ ಕೇಂದ್ರ ಬಜೆಟ್‌ನಲ್ಲಿ ವಾಣಿಜ್ಯ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗಾಗಿ ಕೈಗೊಂಡ ಯೋಜನೆಗಳ ಕುರಿತು ಪ್ರಧಾನಿ ಮಾತನಾಡಿದರು. ಕಳೆದ ಆರೇಳು ವರ್ಷಗಳಲ್ಲಿ ಕೆಲವುಮೇಕ್‌ ಇನ್‌ ಇಂಡಿಯಾಉತ್ಪನ್ನಗಳನ್ನು ಪ್ರೋತ್ಸಾಹಿಸಲು ಹಲವು ಪ್ರಯತ್ನಗಳನ್ನು ಮಾಡಲಾಗಿದೆ. ಶ್ರಮಿಸಲಾಗಿದೆ. ಇದೀಗ ಪರಿಶ್ರಮದ ಫಲ ಪಡೆಯುವ ಕಾಲವಾಗಿದೆ. ಸದ್ಯ ನಮ್ಮ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಲು, ಉತ್ಪಾದನೆಯ ವೇಗವನ್ನು ಹೆಚ್ಚಿಸಲು ಅಭಿವೃದ್ಧಿಯತ್ತ ದಾಪುಗಾಲು ಹಾಕಬೇಕಿದೆ. ವಿಶ್ವದಾದ್ಯಂತ ಇರುವ ದೇಶಗಳು ಅಭಿವೃದ್ಧಿ ಹೊಂದಿದ ದೇಶಗಳಾಗಿ ಬದಲಾಗುವಲ್ಲಿ, ಅವರು ತಮ್ಮ ಉತ್ಪಾದನಾ ಪ್ರಮಾಣ ಹೆಚ್ಚಿಸಿರುವ ಬಗೆಯನ್ನು ತಮ್ಮ ಭಾಷಣದಲ್ಲಿ ಬಣ್ಣಿಸಿದರು. ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿದಷ್ಟೂ ದೇಶದಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತ ಹೋಗುತ್ತವೆ ಎಂದೂ ಅವರು ಹೇಳಿದರು.

ಸರ್ಕಾರದ ಯೋಚನೆಯು ಬಹು ಸ್ಪಷ್ಟವಾಗಿದೆ. ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಹಾಗೂ ಶೂನ್ಯ ಪರಿಣಾಮ ಶೂನ್ಯ ಪ್ರಮಾಣದ ದೋಷಗಳನ್ನು ನಿರೀಕ್ಷಿಸುತ್ತದೆ. ಸರ್ಕಾರವು ಕೈಗಾರಿಕೆಗಳಿಂದ ಮಾರುಕಟ್ಟೆಯವರೆಗೆ ಸರಳವಾಗಿ ಸಾಗುವ ಪ್ರತಿ ಹಂತವನ್ನೂ ಸರಳವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು. ಆಡಳಿತಾತ್ಮಕವಾಗಿ ಅನುಸರಣೆಯ ಹೊರೆಯನ್ನು ಹಗುರಗೊಳಿಸುವುದು, ಬಹುಮಾಧ್ಯಮದ ನಿರ್ಮಾಣಕಾರ್ಯಗಳನ್ನು ಕೈಗೊಂಡು ಸಾಗಾಣಿಕಾ ವೆಚ್ಚಗಳನ್ನು ಕಡಿಮೆಗೊಳಿಸುವುದು, ಜಿಲ್ಲಾ ಮಟ್ಟದ ರಫ್ತು ಕೇಂದ್ರಗಳನ್ನು ನಿರ್ಮಿಸುವುದುಇವೆಲ್ಲ ಕ್ರಮಕೈಗೊಳ್ಳಲಾಗುತ್ತದೆ. ಪ್ರತಿ ಹಂತದಲ್ಲಿಯೂ ಸರ್ಕಾರದ ಹಸ್ತಕ್ಷೇಪವಿದ್ದರೆ ಪರಿಹಾರಗಳಿಗಿಂತಲೂ ಸಮಸ್ಯೆಗಳೇ ಹೆಚ್ಚಾಗುತ್ತವೆ. ಹಾಗಾಗಿಯೇ ಸ್ವಯಂ ನಿಯಂತ್ರಣ, ಸ್ವಯಂ ದೃಢೀಕರಣ, ಸ್ವಯಂ ಪ್ರಮಾಣೀಕರಣಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಸದ್ಯ ಭಾರತೀಯ ಕಂಪನಿಗಳನ್ನು ನಿರ್ಮಿಸುವ ಹಾಗೂ ಭಾರತದಲ್ಲಿಯೇ ಉತ್ಪಾದಿಸುವ ಮಹತ್ವಕ್ಕೆ ಹೆಚ್ಚಿನ ಒತ್ತು ನೀಡಿ ಮಾತನಾಡಿದರು. ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಯೂ ಇರಬೇಕು. ನಮ್ಮ ಉತ್ಪನ್ನಗಳಿಗೆ ಜಾಗತಿಕ ಗುರುತು, ಜಾಗತಿಕ ಉತ್ಪಾದನಾ ಬೆಲೆ, ಜಾಗತಿಕ ಗುಣಮಟ್ಟ, ಮತ್ತು ಸಾಮರ್ಥ್ಯವನ್ನು ಬಲಪಡಿಸಬೇಕು. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಗರಿಷ್ಠ ಹೂಡಿಕೆಯನ್ನು ಆಕರ್ಷಿಸಲು ನಮ್ಮೆಲ್ಲ ಕ್ಷೇತ್ರಗಳ ಸಾಮರ್ಥ್ಯವನ್ನು ಹೆಚ್ಚಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಹಿಂದೆ ಇದ್ದ ಯೋಜನೆಗಳು ಹಾಗೂ ಈಗಿರುವ ಯೋಜನೆಗಳನ್ನು ಹೋಲಿಸುತ್ತ, ಸರ್ಕಾರ ನೀಡಿರುವ ಯೋಜನೆಗಳು ಹೇಗೆ ಭಿನ್ನವಾಗಿವೆ ಎಂಬುದನ್ನು ಪ್ರತಿಪಾದಿಸಿದರು. ಮೊದಲು ಕೈಗಾರಿಕಾ ಪ್ರೋತ್ಸಾಹಧನ, ನೀಡಲು ಮಾಹಿತಿ ಆಧಾರಿತ ಯೋಜನೆಗಳಿದ್ದವು. ಆದರೆ ಈಗ ಇವು ಉತ್ಪಾದನೆ ಹಾಗೂ ಕೆಲಸದ ಶೈಲಿಯನ್ನು ಆಧರಿಸಿವೆ. ಸ್ಪರ್ಧಾತ್ಮಕ ಪ್ರಕ್ರಿಯೆಯನ್ನು ಹೆಚ್ಚು ಆಧರಿಸಿದೆ. ಈಗ  PLI ಅಡಿ 13 ಕ್ಷೇತ್ರಗಳನ್ನು ಮೊದಲ ಬಾರಿಗೆ ತರಲಾಗಿದೆ. ಕ್ಷೇತ್ರಗಳ ಸಮಗ್ರ ವ್ಯವಸ್ಥೆಗೆ ಸೌಲಭ್ಯಗಳ ಲಾಭ ದೊರೆಯುತ್ತದೆ. ಸದ್ಯ ಆಟೊ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಬದಲಾವಣೆ ಎದ್ದು ಕಾಣುತ್ತದೆ. ವಾಹನಗಳ ಬಿಡಿಭಾಗಗಳು, ವೈದ್ಯಕೀಯ ಉಪಕರಣಗಳು, ಕಚ್ಚಾ ಸಾಮಗ್ರಿಗಳಲ್ಲಿ ಸ್ವಾವಲಂಬನೆ ಸಾಧಿಸುವುದು ಸುಲಭವಾಗುತ್ತದೆ. ಇಂಧನ ಕ್ಷೇತ್ರವನ್ನೂ ಆಧುನೀಕರಣಗೊಳಿಸಲಾಗುವುದು. ಆಧುನಿಕ ಸೆಲ್‌ ಬ್ಯಾಟರಿಗಳು, ಸೌರ ಫಲಕಗಳ ಉತ್ಪಾದನೆ, ಇದೇ ರೀತಿಯಲ್ಲಿ ಜವಳಿ ಹಾಗೂ ಆಹಾರ ಸಂಸ್ಕರಣೆಯ ಮೂಲಕ ಕೃಷಿ ಕ್ಷೇತ್ರಕ್ಕೂ ಸಂಪೂರ್ಣ ಲಾಭ ದೊರೆಯಲಿದೆ.

ಭಾರತೀಯ ಪ್ರಸ್ತಾವದಂತೆ ವಿಶ್ವಸಂಸ್ಥೆಯು 2023ನ್ನು ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿರುವುದು ನಮಗೆಲ್ಲ ಹೆಮ್ಮೆಯ ಮಾತಾಗಿದೆಭಾರತದ ಪ್ರಸ್ತಾವನೆಗೆ ವಿಶ್ವದ 70 ರಾಷ್ಟ್ರಗಳು ಬೆಂಬಲ ಸೂಚಿಸಿದವು. ಮತ್ತು ಅವಿರೋಧವಾಗಿ ಪ್ರಸ್ತಾಪಕ್ಕೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಕಿತ ದೊರೆಯಿತು. ಇದೂ ಸಹ ನಮ್ಮ ರೈತರಿಗೆ ಬೃಹತ್‌ ಅವಕಾಶವಾಗಿದೆ. 2023ರಲ್ಲಿ ಸಿರಿಧಾನ್ಯಗಳಲ್ಲಿ ದೊರೆಯುವ ಪೌಷ್ಟಿಕಾಂಶಗಳ ಬಗೆಗೆ ಬೃಹತ್‌ ಪ್ರಮಾಣದ ಅಭಿಯಾನವನ್ನು ಆರಂಭಿಸಬೇಕು ಎಂದೂ ಅವರು ತಮ್ಮ ಒತ್ತಾಸೆಯನ್ನು ವ್ಯಕ್ತಪಡಿಸಿದರು. ಸಿರಿಧಾನ್ಯಗಳ ಸೇವನೆಯಿಂದ ರೋಗಗಳಿಂದ ದೂರ ಉಳಿಯಬಹುದು. ನಿರೋಗಿಗಳಾಗಬಹುದು ಎಂಬುದನ್ನು ಜಗತ್ತಿಗೆ ಪ್ರಚುರ ಪಡಿಸಬೇಕಿದೆ ಎಂದು ಹೇಳಿದರು. ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದ ನಂತರ ಭಾರತದಲ್ಲಿ ಮತ್ತು ವಿಶ್ವದಾದ್ಯಂತ ಸಿರಿಧಾನ್ಯಗಳ ಬಳಕೆಗೆ ಬೇಡಿಕೆ ಹೆಚ್ಚಾಗುತ್ತದೆ. ಇದು ಖಂಡಿತವಾಗಿಯೂ ನಮ್ಮ ರೈತರಿಗೆ ಸಹಾಯ ಮಾಡಲಿದೆ. ಕೃಷಿ ಕ್ಷೇತ್ರ ಹಾಗೂ ಆಹಾರ ಸಂಸ್ಕರಣೆಯ ಕ್ಷೇತ್ರ ಸದವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದೂ ಅಭಿಪ್ರಾಯಪಟ್ಟರು.

ವರ್ಷದ ಬಜೆಟ್‌ನಲ್ಲಿ  ಒಟ್ಟು 2ಲಕ್ಷ ಕೋಟಿ ರೂಪಾಯಿಗಳನ್ನು  PLIಗೆ ಸಂಬಂಧಿಸಿದ ಯೋಜನೆಗಳಿಗಾಗಿ ಮೀಸಲು ಇಡಲಾಗಿದೆ. ಪ್ರತಿ ಉತ್ಪಾದನೆಯ ಶೇ 5ರಷ್ಟು ಭಾಗವನ್ನು ಪ್ರೋತ್ಸಾಹದಾಯಕವಾಗಿ ನೀಡಲಾಗುತ್ತದೆ. ಇದರರ್ಥ ಮುಂಬರಲಿರುವ ಐದು ವರ್ಷಗಳಲ್ಲಿ  $ 520 ಶತಕೋಟಿಗಳಷ್ಟು ಮೌಲ್ಯದ ಉತ್ಪಾದನೆಗೆ ಸಹಾಯ ಮಾಡಿದಂತಾಗುತ್ತದೆ. ಹದಿಮೂರು ಕ್ಷೇತ್ರಗಳು ಎರಡು ಪಟ್ಟು  ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಸಫಲವಾಗುತ್ತವೆ ಎಂಬ ಭರವಸೆಯನ್ನೂ ವ್ಯಕ್ತಪಡಿಸಿದರು.

PLI ಗೆ ಸಂಬಂಧಿಸಿದ ಘೋಷಣೆಗಳನ್ನು ಕೂಡಲೇ ಅನುಷ್ಠಾನಕ್ಕೆ ತರುವಲ್ಲಿ ತ್ವರಿತಗತಿಯ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಪ್ರಧಾನಿ ಮೋದಿ ಅವರು ಒತ್ತು ನೀಡಿ ಹೇಳಿದರು.   ಐಟಿ ಹಾರ್ಡ್‌ವೇರ್‌, ಟೆಲಿಕಾಂ ಸಲಕರಣೆಗಳ ಉತ್ಪಾದನೆಗಳನ್ನೂ ಯೋಜನೆ ಅಡಿಯಲ್ಲಿ ತರಲಾಗಿದೆ.ಇವುಗಳಿಂದಾಗಿ ಮೌಲ್ಯವರ್ಧನೆಯು ಆಗುತ್ತದೆ. ಹಾಗೂ ಉತ್ಪಾದನೆಯಲ್ಲಿಯೂ ಹೆಚ್ಚಳ ಕಂಡುಬರುತ್ತದೆ. ಐಟಿ ಹಾರ್ಡ್‌ವೇರ್‌ 3 ಟ್ರಿಲಿಯನ್‌ ರೂಪಾಯಿಗಳಷ್ಟುಮೌಲ್ಯದ ಉತ್ಪಾದನೆ ಹೆಚ್ಚಿಸುವ ಗುರಿ ಹೊಂದಿದೆ. ನಾಲ್ಕು ವರ್ಷಗಳಲ್ಲಿ 5–10 ಪ್ರತಿಶತದಷ್ಟಿರುವ ಇವುಗಳ ಮೌಲ್ಯವು ಮುಂಬರಲಿರುವ 5 ವರ್ಷಗಳಲ್ಲಿ ಶೇ 20–25ರಷ್ಟು ಹೆಚ್ಚಲಿದೆ.

ಇದರಂತೆಯೇ ಟೆಲಿಕಾಂ ಕ್ಷೇತ್ರದಲ್ಲಿ ಉಪಕರಣಗಳ ತ್ಪಾದನೆಯಲ್ಲಿ 2.5 ಲಕ್ಷ ಕೋಟಿ ರೂಪಾಯಿಗಳಷ್ಟು ಹೆಚ್ಚಳ ವರ್ಷ ಕಂಡು ಬರಲಿದೆ. ಕ್ಷೇತ್ರಗಳಿಂದ ನಾವು 2 ಲಕ್ಷ ಕೋಟಿ ಮೌಲ್ಯದಷ್ಟು ರಫ್ತನ್ನು ನಿರೀಕ್ಷಿಸುತ್ತಿದ್ದೇವೆ ಎಂದರು.

ವೈದ್ಯಕೀಯ ಕ್ಷೇತ್ರದಲ್ಲಿ 12 ಸಾವಿರ ಕೋಟಿ ರೂಪಾಯಿಗಳ ಬಂಡವಾಳವನ್ನು ಮುಂಬರಲಿರುವ 5–6 ವರ್ಷಗಳಲ್ಲಿ ನಿರೀಕ್ಷಿಸಲಾಗುತ್ತಿದೆ ಯೋಜನೆಯ ಅಡಿಯಲ್ಲಿ ಈಗಿರುವ 2 ಲಕ್ಷ ಕೋಟಿ, ಮೌಲ್ಯದ ಮಾರಾಟವು 3 ಲಕ್ಷ ಕೋಟಿ ವೈದ್ಯಕೀಯ ಉಪಕರಣಗಳ ಮಾರಾಟ ಹಾಗೂ ರಫ್ತು ಹೆಚ್ಚಾಗಲಿದೆ ಎಂದು ನಿರೀಕ್ಷಿಸಿದ್ದಾರೆ.

 ಭಾರತವು ಮನುಕುಲದ ಸೇವೆಯಲ್ಲಿ ತೊಡಗಿರುವುದು ಇಂದು ಜಾಗತಿಕವಾಗಿ ಬ್ರ್ಯಾಂಡ್‌ ಆಗಿದೆ. ಭಾರತದ ವಿಶ್ವಾಸಾರ್ಹತೆ, ಭಾರತದ ಅಸ್ಮಿತೆ ಖಂಡಿತವಾಗಿಯೂ ಮಹೋನ್ನತಿಗೆ ತಲುಪುತ್ತಿದೆ. ಬ್ರಾಂಡ್ ಇಂಡಿಯಾ  ಹೊಸ ಎತ್ತರಕ್ಕೆ ಏರುತ್ತಿದೆ. ನಮ್ಮ ಔಷಧಿಗಳ ಮೇಲೆ ನಂಬಿಕೆ ಹೆಚ್ಚಿದೆ. ಜಗತ್ತಿನಾದ್ಯಂತ ನಮ್ಮ ವೈದ್ಯರು, ವೈದ್ಯಕೀಯ ಪದ್ಧತಿ ಹಾಗೂ ಔಷಧಿಗಳ ಮೇಲೆ ನಂಬಿಕೆ ಹೆಚ್ಚಿದೆ. ನಂಬಿಕೆಯ ಗೌರವವನ್ನು ಉಳಿಸಿಕೊಳ್ಳಲು ವೈದ್ಯಕೀಯ ಕ್ಷೇತ್ರವು ಹೊಸ ತಂತ್ರಜ್ಞಾನಗಳನ್ನು ಬಳಸಬೇಕಿದೆ. ಹೊಸ ತಂತ್ರಗಾರಿಕೆಯನ್ನೂ ಅಳವಡಿಸಿಕೊಳ್ಳಬೇಕಿದೆ ಎಂದಿದ್ದಾರೆ. ವಿಶ್ವಾಸಾರ್ಹತೆಯನ್ನು ಲಾಭವಾಗಿ ಪರಿವರ್ತಿಸಿಕೊಂಡರೆ, ಅನುಕೂಲವಾಗಲಿದೆ. ಮೊಬೈಲ್‌ ಫೋನ್‌ ಕ್ಷೇತ್ರ ಹಾಗೂ ವಿದ್ಯತ್‌ ಉಪಕರಣದ ಕ್ಷೇತ್ರಗಳನ್ನೂ  PLI ಯೋಜನೆಯ ಅಡಿಗೆ ತಂದಿದ್ದು, 1300 ಕೋಟಿ ರೂ.ಬಂಡವಾಳ ಹೂಡಿದ್ದು, ಸಾವಿರಾರು ಉದ್ಯೋಗಾವಕಾಶವನ್ನು ಸೃಷ್ಟಿಸಿದೆ. ಕಳೆದ ವರ್ಷ 35000 ಕೋಟಿ ಮೌಲ್ಯದ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.

PLI ಯೋಜನೆಗಳು ಭಾರತದ ಎಂಎಸ್‌ಎಂಇ ವ್ಯವಸ್ಥೆಯ ಮೇಲೆ ಸಮಗ್ರವಾಗಿ ಬಲು ದೊಡ್ಡ ಪರಿಣಾಮ ಮೂಡಿಸಲಿದೆ. ಪ್ರತಿಕ್ಷೇತ್ರದಲ್ಲಿಯೂ ಅಗತ್ಯದ ಬಿಡಿಭಾಗಗಳ, ಹೊಸ ಪೂರೈಕೆದಾರರನ್ನು ಸೃಷ್ಟಿಸುವ ಕೆಲಸ ಮಾಡುತ್ತದೆ. ಸಮಗ್ರವ್ಯವಸ್ಥೆಯ ಸುಧಾರಣೆಯಲ್ಲಿ ಮೌಲ್ಯದ ಕೊಂಡಿಗಳನ್ನು ಪೂರೈಕೆದಾರರ ಆಧಾರದ ಮೇಲೆ ಬಲಗೊಳಿಸಲಾಗುತ್ತದೆ. ಕೈಗಾರಿಕೋದ್ಯಮಗಳು PLI ಯೋಜನೆಗಳ ಲಾಭ ಪಡೆಯಬೇಕು ಎಂದು ಕರೆ ನೀಡಿದರುಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಸೃಷ್ಟಿಸುವಲ್ಲಿ, ತಯಾರು ಮಾಡುವುದೇ ಕೈಗಾರಿಕೆಗಳ ಗುರಿಯಾಗಿರಬೇಕು. ಬದಲಾಗುತ್ತಿರುವ ಜಗತ್ತಿನ ಬೇಡಿಕೆ ಹಾಗೂ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡು ಅಗತ್ಯದ ಬದಲಾವಣೆಗಳನ್ನು ತರಬೇಕು. ಅನುಶೋಧನೆಯನ್ನು ಅಳವಡಿಸಿಕೊಳ್ಳಬೇಕು. ಸಂಶೋಧನೆ ಹಾಗೂ ಅಭಿವೃದ್ಧಿ ವಿಭಾಗದ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು. ಇದರಿಂದ ಮಾನವಶಕ್ತಿಯ ಕೌಶಲ ಹಾಗೂ ನವೀನ ತಂತ್ರಜ್ಞಾನದ ಬಳಕೆಯೂ ಹೆಚ್ಚಾಗಬೇಕು ಎಂದು ಕರೆ ನೀಡಿದರು.

***(Release ID: 1703113) Visitor Counter : 112