ಚುನಾವಣಾ ಆಯೋಗ
ವಿಧಾನಸಭಾ ಸದಸ್ಯರು (ಎಂ.ಎಲ್.ಎ.ಗಳು)ಗಳಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಉಪ ಚುನಾವಣೆ
Posted On:
18 FEB 2021 2:36PM by PIB Bengaluru
ವಿಧಾನಸಭಾ ಸದಸ್ಯರಿಂದ ಆಯ್ಕೆಯಾಗಬೇಕಾದ ಕರ್ನಾಟಕ ವಿಧಾನ ಪರಿಷತ್ತಿನ ಒಂದು ಹುದ್ದೆ ಖಾಲಿ ಇದೆ. ಖಾಲಿ ಇರುವ ಸ್ಥಾನದ ವಿವರ ಇಂತಿದೆ:
ಸದಸ್ಯರ ಹೆಸರು
|
ಚುನಾವಣೆ ಸ್ವರೂಪ
|
ಹುದ್ದೆ ಖಾಲಿಯಾಗಲು ಕಾರಣ
|
ಇರುವ ಅವಧಿ
|
ಎಸ್.ಎಲ್. ಧರ್ಮೇಗೌಡ
|
ಶಾಸಕರ ಮೂಲಕ
|
28.12.2020ರಂದು ಮರಣ
|
17.06.2024 ರವರೆಗೆ
|
- ಆಯೋಗವು ವಿಧಾನಸಭಾ ಸದಸ್ಯರುಗಳಿಂದ ವಿಧಾನಪರಿಷತ್ತಿನ ಮೇಲೆ ತಿಳಿಸಲಾದ ಸ್ಥಾನ ತುಂಬಲು ಉಪ ಚುನಾವಣೆ ನಡೆಸಲು ನಿರ್ಧರಿಸಿದ್ದು, ವೇಳಾಪಟ್ಟಿ ಕೆಳಕಂಡಂತಿದೆ:
ಕ್ರ.ಸಂ.
|
ಪ್ರಕ್ರಿಯೆ
|
ದಿನಾಂಕ
|
-
|
ಅಧಿಸೂಚನೆಯ ಪ್ರಕಟಣೆ
|
25ನೇ ಫೆಬ್ರವರಿ, 2021 (ಗುರುವಾರ)
|
-
|
ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ
|
04ನೇ ಮಾರ್ಚ್, 2021 (ಗುರುವಾರ)
|
-
|
ನಾಮಪತ್ರಗಳ ಪರಿಶೀಲನೆ
|
05ನೇ ಮಾರ್ಚ್, 2021 (ಶುಕ್ರುವಾರ)
|
-
|
ನಾಮಪತ್ರ ಹಿಂಪಡೆಯುವ ಕೊನೆಯ ದಿನಾಂಕ
|
08ನೇ ಮಾರ್ಚ್, 2021 (ಸೋಮವಾರ)
|
-
|
ಮತದಾನದ ದಿನಾಂಕ
|
15ನೇ ಮಾರ್ಚ್, 2021 (ಸೋಮವಾರ)
|
-
|
ಮತದಾನದ ಅವಧಿ
|
ಬೆಳಗ್ಗೆ 09:00 ರಿಂದ ಸಂಜೆ 04:00
|
-
|
ಮತ ಎಣಿಕೆ
|
15ನೇ ಮಾರ್ಚ್, 2021 (ಸೋಮವಾರ) ಸಂಜೆ 05:00 ಗಂಟೆಗೆ
|
-
|
ಯಾವ ದಿನಾಂಕಕ್ಕೆ ಮುನ್ನ ಚುನಾವಣೆ ಪೂರ್ಣಗೊಳ್ಳಬೇಕು.
|
18ನೇ ಮಾರ್ಚ್, 2021 (ಗುರುವಾರ)
|
- ಸಂಪೂರ್ಣ ಚುನಾವಣೆ ಪ್ರಕ್ರಿಯೆಯ ವೇಳೆ ಎಲ್ಲ ವ್ಯಕ್ತಿಗಳೂ ಪಾಲಿಸಬೇಕಾದ ವಿಸ್ತೃತ ಮಾರ್ಗಸೂಚಿ: -
I. ಎಲ್ಲ ಚುನಾವಣೆ ಸಂಬಂಧಿ ಚಟುವಟಿಕೆಯ ವೇಳೆ ಪ್ರತಿಯೊಬ್ಬ ವ್ಯಕ್ತಿಯೂ ಮಾಸ್ಕ್ ಧರಿಸತಕ್ಕದ್ದು. II. ಕೊಠಡಿ/ಸಭಾಂಗಣ/ಚುನಾವಣೆಗೆ ಬಳಸಲಾಗುವ ಪ್ರದೇಶದ ಪ್ರವೇಶದಲ್ಲಿ:
(a) ಎಲ್ಲ ವ್ಯಕ್ತಿಗಳ ಥರ್ಮಲ್ ಸ್ಕ್ಯಾನಿಂಗ್ ನಡೆಸಬೇಕು
(b) ಎಲ್ಲ ತಾಣಗಳಲ್ಲೂ ಕರ ನೈರ್ಮಲ್ಯಕ ಲಭ್ಯವಿರಬೇಕು.
III. ರಾಜ್ಯ ಸರ್ಕಾರ ಮತ್ತು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಕೋವಿಡ್ -19 ಮಾರ್ಗಸೂಚಿಯ ರೀತ್ಯ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು.
- ಚುನಾವಣೆಯನ್ನು ನಡೆಸಲು ವ್ಯವಸ್ಥೆ ಮಾಡುವಾಗ ಕೋವಿಡ್-19 ನಿಯಂತ್ರಣ ಕ್ರಮಗಳ ಬಗ್ಗೆ ಈಗಿರುವ ಸೂಚನೆಗಳನ್ನು ಪಾಲಿಸಲಾಗುತ್ತಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಲು ರಾಜ್ಯದ ಹಿರಿಯ ಅಧಿಕಾರಿಯನ್ನು ನಿಯೋಜಿಸಲು ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶಿಸಲಾಗಿದೆ.
***
(Release ID: 1701649)
Visitor Counter : 250