ಪ್ರಧಾನ ಮಂತ್ರಿಯವರ ಕಛೇರಿ

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನ ಮಂತ್ರಿ ಅವರ ಉತ್ತರ

Posted On: 10 FEB 2021 11:44PM by PIB Bengaluru

ಗೌರವಾನ್ವಿತ ಸ್ಪೀಕರ್ ಸರ್,

ವಂದನಾ ಗೊತ್ತುವಳಿಯ ಮೇಲಣ ಚರ್ಚೆಯಲ್ಲಿ ಭಾಗವಹಿಸುತ್ತಾ ಕೆಲವು ಸಂಗತಿಗಳನ್ನು ಹೇಳಲಿಚ್ಛಿಸುತ್ತೇನೆ ಮತ್ತು ಗೌರವಾನ್ವಿತ ರಾಷ್ಟ್ರಪತಿಗಳಿಗೆ ಅವರ ಪ್ರೇರಣಾದಾಯಕ ಭಾಷಣಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ರಾಷ್ಟ್ರಪತಿಗಳ ಭಾಷಣವು ಭಾರತದ 130 ಕೋಟಿ ನಾಗರಿಕರ ದೃಢ ನಿರ್ಧಾರ ಮತ್ತು ಸಂಕಲ್ಪದ ಪ್ರತಿಬಿಂಬ; ಅದೂ ಕಠಿಣ ಮತ್ತು ಸವಾಲಿನ ಅವಧಿಯಲ್ಲಿ, ದೇಶವು ತನ್ನ ಹಾದಿಯನ್ನು ಹೇಗೆ ಆಯ್ಕೆ ಮಾಡಿಕೊಂಡಿದೆ, ಹಾದಿಯನ್ನು ಅನುಸರಿಸಿ, ತನ್ನ ಗುರಿಗಳನ್ನು ಸಾಧಿಸುತ್ತಾ ಹೇಗೆ ಮುಂದುವರೆದಿದೆ ಎಂಬುದೂ ಇದರಲ್ಲಿ ಅಡಕವಾಗಿದೆ. ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಎಲ್ಲಾ ಸಂಗತಿಗಳನ್ನು ವಿವರವಾಗಿ ಪ್ರಸ್ತಾಪಿಸಿದ್ದಾರೆ. ಅವರ ಭಾಷಣದ ಪ್ರತಿಯೊಂದು ಶಬ್ದವೂ ದೇಶವಾಸಿಗಳಲ್ಲಿ ಹೊಸ ನಂಬಿಕೆಯನ್ನು ಮೂಡಿಸುತ್ತದೆ ಮತ್ತು ದೇಶಕ್ಕಾಗಿ ಏನನ್ನಾದರೂ ಮಾಡಲು ಪ್ರತಿಯೊಬ್ಬ ನಾಗರಿಕನನ್ನೂ ಹುರಿದುಂಬಿಸುತ್ತದೆ. ಇದಕ್ಕಾಗಿ ನಮ್ಮ ಕೃತಜ್ಞತೆಯನ್ನು ಸಲ್ಲಿಸಲು ಪದಗಳೇ ಇಲ್ಲ. ಸದನದಲ್ಲಿ 15 ಗಂಟೆಗಳಿಗೂ ಅಧಿಕ ಅವಧಿಯ ಚರ್ಚೆ ನಡೆದಿದೆ. ಸುಮಾರು ಮಧ್ಯರಾತ್ರಿ 12 ಗಂಟೆಯವರೆಗೆ ನಮ್ಮೆಲ್ಲಾ ಗೌರವಾನ್ವಿತ ಸಂಸದರು ತಮ್ಮ ಪ್ರಜ್ಞೆಯನ್ನು ಜಾಗೃತಾವಸ್ಥೆಯಲ್ಲಿಟ್ಟಿದ್ದರು. ಅವರು ಜವಾಬ್ದಾರಿಯುತರಾಗಿ ಚರ್ಚೆಯಲ್ಲಿ ಬಿರುಸಿನಿಂದ ಮತ್ತು ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಚರ್ಚೆಯಲ್ಲಿ ಪಾಲ್ಗೊಂಡ ಎಲ್ಲಾ ಗೌರವಾನ್ವಿತ ಸಂಸದರಿಗೆ  ನಾನು ನನ್ನ ಹೃದಯ ತುಂಬಿದ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಚರ್ಚೆಯಲ್ಲಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಂಡಿರುವವರು ಮಹಿಳಾ ಸಂಸದರು, ಅವರು ತಮ್ಮ ತೀಕ್ಷ್ಣ ಬುದ್ಧಿಮತ್ತೆಯಿಂದ ಪ್ರತಿಯೊಂದು ಚಿಂತನೆಯನ್ನೂ ಎಚ್ಚರಿಕೆಯ ಸಂಶೋಧನೆಯೊಂದಿಗೆ ಬೆಂಬಲಿಸುವ ಯತ್ನವನ್ನು ಮಾಡಿದ್ದಾರೆ, ಅವರಿಗೆ ನನ್ನ ವಿಶೇಷ ಕೃತಜ್ಞತೆಗಳು. ಎಲ್ಲಾ ಮಹಿಳಾ ಸಂಸದರಿಗೆ ಅವರ ಜ್ಞಾನಕ್ಕೆ, ಅರಿವಿಗೆ ಮತ್ತು ಅವರು ಮಾಡಿಕೊಂಡ ಸಿದ್ಧತೆಗೆ ಹಾಗು ಅದನ್ನು  ಮಂಡಿಸಿದ ರೀತಿಗೆ ನಾನು ಆಭಾರಿಯಾಗಿದ್ದೇನೆ. ಅವರ ಮೌಲ್ಯಯುತ ತರ್ಕಬದ್ಧ ಒಳನೋಟಗಳು ಸದನವನ್ನು ಶ್ರೀಮಂತಗೊಳಿಸಿವೆ ಮತ್ತು ಚರ್ಚೆಯನ್ನು ಬಹಳ ಸಂಪದ್ಭರಿತ ಮಾಡಿವೆ, ಅದಕ್ಕಾಗಿ ಅವರಿಗೆ ಅಭಿನಂದನೆಗಳು.

ಗೌರವಾನ್ವಿತ ಸ್ಪೀಕರ್ ಸರ್,

ಭಾರತವು ನಮ್ಮ ಸ್ವಾತಂತ್ರ್ಯದ 75 ನೇ ವರ್ಷದ ಹೊಸ್ತಿಲಿನಲ್ಲಿದೆ. ಇಂತಹ 75 ವರ್ಷಗಳ ಮೈಲಿಗಲ್ಲನ್ನು ತಲುಪಿರುವುದು ಪ್ರತಿಯೊಬ್ಬ ಭಾರತೀಯರಿಗೆ ಭಾರೀ ಹೆಮ್ಮೆಯ ಸಂಗತಿಯಾಗಿದೆ. ಇದು ನಮ್ಮ ಭವಿಷ್ಯದ ಪ್ರಗತಿಯ ಆಚರಣೆ. ಆದುದರಿಂದ ಭಾರತೀಯ ಭೂಗೋಳದ ಯಾವುದೇ ಮೂಲೆಯಲ್ಲಿರಲಿ, ಅಥವಾ ಯಾವುದೇ ಸಾಮಾಜಿಕ ಅಥವಾ ಆರ್ಥಿಕ ವಲಯಕ್ಕೆ ಸೇರಿದವರಾಗಿರಲಿ, ಅಥವಾ ಯಾವುದೇ ಸಾಮಾಜಿಕ ಸಮುದಾಯಕ್ಕೆ ಸೇರಿದವರಾಗಿರಲಿ, ನಾವೆಲ್ಲರೂ ನಮ್ಮ ಸ್ವಾತಂತ್ರ್ಯದಿಂದ ಪ್ರೇರಿತರಾಗಿದ್ದೇವೆ ಮತ್ತು ಹೊಸ ಹುರುಪಿನೊಂದಿಗೆ, ಸಂಭ್ರಮದೊಂದಿಗೆ ಭಾರತವು ತನ್ನ ಸ್ವಾತಂತ್ರ್ಯದ ನೂರು ವರ್ಷಗಳನ್ನು ಆಚರಿಸುವ 2047 ನ್ನು ತಲುಪಲು ನಿರ್ಧಾರ ಮಾಡಿಕೊಂಡಿದ್ದೇವೆ. ಭಾರತದ ಸ್ವಾತಂತ್ರ್ಯದ ಶತಮಾನವನ್ನು ತಲುಪಲು ನಮ್ಮೆದುರು 25 ವರ್ಷಗಳಿವೆ. 25 ವರ್ಷಗಳಲ್ಲಿ, ದೇಶವು ಎಷ್ಟು ಪ್ರಗತಿಯನ್ನು ಸಾಧಿಸಬೇಕು ಮತ್ತು ದೇಶವು ಜಾಗತಿಕ ನಕಾಶೆಯಲ್ಲಿ ಯಾವ ಸ್ಥಾನದಲ್ಲಿ ವಿರಾಜಮಾನವಾಗಿರಬೇಕು ಎಂಬುದು ಎಲ್ಲಾ ಭಾರತೀಯರ ಮುನ್ನೋಟದಲ್ಲಿರಬೇಕು. ಅಭಿವೃದ್ಧಿಗೆ ಪರಿಸರ ವ್ಯವಸ್ಥೆಯನ್ನು ಒದಗಿಸುವುದು ಸಂಸತ್ತಿನ, ಪವಿತ್ರ ಭೂಮಿಯ ಮತ್ತು  ಒಕ್ಕೂಟದ ಜವಾಬ್ದಾರಿಯಾಗಿದೆ.

ಗೌರವಾನ್ವಿತ ಸ್ಪೀಕರ್ ಸರ್.

ನಮ್ಮ ದೇಶ ಸ್ವಾತಂತ್ರ್ಯ ಪಡೆದಾಗ, ಕೊನೆಯ ಬ್ರಿಟಿಷ್ ಕಮಾಂಡರ್, ದೇಶ ಬಿಡುವಾಗ ಹೇಳಿದ್ದರು-ಭಾರತವು ಹಲವು ದೇಶಗಳ ಬೃಹತ್ ಖಂಡ ಮತ್ತು ಯಾವ ಶಕ್ತಿಯೂ ಅದನ್ನು ಏಕೀಕೃತ ದೇಶವನ್ನಾಗಿ ಮಾಡಲಾರದು ಎಂದು. ಆದರೆ ಭಾರತೀಯರು ಅಂತಹ ಎಲ್ಲಾ ಸಂಶಯಗಳನ್ನು ಧ್ವಂಸ ಮಾಡಿದರು. ನಾವು ಅಂತಹ ಎಲ್ಲಾ ಸಂಶಯದ ಮನಸ್ಸುಗಳನ್ನು ಮುಚ್ಚಿ ಹಾಕಿದೆವು. ನಮ್ಮ ಪುನರುಜ್ಜೀವನ, ಸಾಂಸ್ಕೃತಿಕ ಏಕತೆ, ಮತ್ತು ಪರಂಪರೆಗಳೊಂದಿಗೆ, ಇಂದು ಸಮಗ್ರ ದೇಶವನ್ನು ಬಲವಾದ ಸ್ಥಾನದಲ್ಲಿ ನಿಲ್ಲಿಸುವ ಮೂಲಕ ನಾವು ವಿಶ್ವಕ್ಕೆ ಆಶಾಕಿರಣವಾಗಿದ್ದೇವೆ. 75 ವರ್ಷಗಳ ಪ್ರಯಾಣದಲ್ಲಿ ನಮಗಿದನ್ನು ಸಾಧಿಸಲು ಸಾಧ್ಯವಾಯಿತು. ಹಲವರು ಭಾರತದಲ್ಲಿ  ಪ್ರಜಾಪ್ರಭುತ್ವ ಎಂಬುದು ಪವಾಡವಾಗುತ್ತದೆ, ಮರೀಚಿಕೆಯಾಗುತ್ತದೆ ಎಂದು ಹೇಳಿದ್ದರು. ಭ್ರಮೆಯನ್ನೂ ನಾವು ಹೊಸಕಿ ಹಾಕಿದ್ದೇವೆ. ಪ್ರಜಾಪ್ರಭುತ್ವ ನಮ್ಮ ಡಿ.ಎನ್..ಯಲ್ಲಿದೆ. ಮತ್ತು ನಮ್ಮ ನಾಡಿ ಮಿಡಿತ ಇದನ್ನು ಪ್ರತಿಧ್ವನಿಸುತ್ತದೆ. ಪ್ರಜಾಪ್ರಭುತ್ವದ ಸ್ಪೂರ್ತಿ ನಮ್ಮ ಚಿಂತನೆಗಳಲ್ಲಿ, ಉಪಕ್ರಮಗಳಲ್ಲಿ ಮತ್ತು ಪ್ರಯತ್ನಗಳಲ್ಲಿ ಸೇರಿಕೊಂಡಿದೆ. ಹಲವಾರು ಚುನಾವಣೆಗಳು ಮತ್ತು ಆಡಳಿತಗಳ ಬದಲಾವಣೆಯ ಬಳಿಕವೂ ನಾವು ಚೈತನ್ಯವನ್ನು, ಸ್ಪೂರ್ತಿಯನ್ನು ಇನ್ನಷ್ಟು ಬಲಪಡಿಸಿಕೊಂಡಿದ್ದೇವೆ. ದೇಶವು ಪೂರ್ಣಹೃದಯದಿಂದ ಪ್ರತೀ ಹೊಸ ಆಡಳಿತವನ್ನು ಒಪ್ಪಿಕೊಂಡು ಮುನ್ನಡೆದಿದೆ.

ಇದು 75 ವರ್ಷಗಳ ಸಂದರ್ಭ. ನಮ್ಮದು ವೈವಿಧ್ಯಮಯ ದೇಶ ಮತ್ತು ಆದುದರಿಂದ ನಮ್ಮ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗೌರವಿಸಬೇಕು. ನಮ್ಮಲ್ಲಿ ನೂರಕ್ಕೂ ಅಧಿಕ ಭಾಷೆಗಳಿವೆ, ಮತ್ತು ಉಪಭಾಷೆಗಳಿವೆ. ವೈವಿಧ್ಯಮಯ ವೇಷ ಭೂಷಣಗಳಿವೆ. ಮತ್ತು ವೈವಿಧ್ಯಮಯ ಸಂಸ್ಕೃತಿಗಳಿವೆ. ಆದಾಗ್ಯೂ ನಾವು ಏಕೀಕೃತ ಗುರಿಗಳನ್ನು ಹೊಂದಿದ್ದೇವೆ ಮತ್ತು ಅವುಗಳನ್ನು ಸಾಧಿಸಲು ಒಂದೇ ಹಾದಿಗುಂಟ ಪರಸ್ಪರ ಜೋಡಣೆಯಾಗಿದ್ದೇವೆ. ಇಂದು ನಾವು ಭಾರತದ ಬಗ್ಗೆ ಮಾತನಾಡುವಾಗ, ನಾನು ಸ್ವಾಮಿ ವಿವೇಕಾನಂದರ ಮಾತುಗಳನ್ನು ನೆನಪಿಸಿಕೊಳ್ಳಲು ಇಚ್ಛಿಸುತ್ತೇನೆ. ಅವರು ಹೇಳಿದ್ದರುಪ್ರತೀ ದೇಶಕ್ಕೂ ಸಾರಲು ಒಂದು ಸಂದೇಶವಿದೆ, ಈಡೇರಿಸಿಕೊಳ್ಳಲು ಉದ್ದೇಶವೊಂದಿದೆ, ತಲುಪಲು ಒಂದು ನಿರ್ದಿಷ್ಟ ಸ್ಥಾನವಿದೆ”. ಕೊರೊನಾ ಸ್ಫೋಟದ

 

 

 

ಸಂದರ್ಭದಲ್ಲಿ ಭಾರತವು ಅದನ್ನು ನಿಭಾಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಮಾತ್ರವಲ್ಲ. ವಿಶ್ವಕ್ಕೆ ಸಹಾಯ ಮಾಡುವಂತಾದುದು ನಮಗೆ ನಿಜವಾಗಿಯೂ ಒಂದು ಹೊರಳುದಾರಿಯ ಮೈಲಿಗಲ್ಲು. ನಾವು ವಿವೇಕಾನಂದರ ಭಾವನೆಗಳನ್ನು ಅಳವಡಿಸಿಕೊಂಡು ವೇದಗಳಿಂದ ಸಂಸ್ಕಾರ ಪಡೆದುಕೊಂಡು ಬೆಳೆದಿದ್ದೇವೆ. सर्वे भवन्तु सुखिन: ये सर्वे भवन्तु सुखिन: सर्वे संतु निरामया। ಅಂದರೆ ಎಲ್ಲಾ ಭಾವನೆಗಳು ಶಾಂತಿಯನ್ನು ತರಲಿ. ಯಾರೊಬ್ಬರೂ ಅನಾರೋಗ್ಯದಿಂದ ಬಳಲದೇ ಇರಲಿ ಎಂಬುದು ಇದರ ತಾತ್ಪರ್ಯವಾಗಿದೆ. ಭಾರತವು ಇದನ್ನು ಕೊರೊನಾ ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ ಸಾಧಿಸಿ ತೋರಿಸಿದೆ. ನಮ್ಮ ದೇಶ ಮತ್ತು ನಾಗರಿಕರು ಭಾರತವನ್ನು ಸ್ವಾವಲಂಬಿ ಆತ್ಮನಿರ್ಭರ ದೇಶವನ್ನಾಗಿಸಲು ಸಾಕಷ್ಟು ದೃಢವಾದ ಕ್ರಮಗಳನ್ನು ಕೈಗೊಂಡಿದ್ದಾರೆ. ಎರಡನೇ ವಿಶ್ವಯುದ್ಧ ಮುಕ್ತಾಯಗೊಂಡ ಬಳಿಕದ ಸಮಯವನ್ನು ನಾವು ನೆನಪಿಸಿಕೊಳ್ಳದೇ ಇರಲು ಹೇಗೆ ಸಾಧ್ಯ. ಮತ್ತು ಎರಡು ಯುದ್ಧಗಳು ವಿಶ್ವವನ್ನು ನಡುಗಿಸಿದ್ದನ್ನು, ದ್ವಂಸ ಮಾಡಿದ್ದನ್ನು ಮರೆಯಲು ಹೇಗೆ ಸಾಧ್ಯ?. ಮಾನವತೆ ಮತ್ತು ಮನುಷ್ಯ ಮೌಲ್ಯಗಳು ಎರಡೂ ಗಂಡಾಂತರದಲ್ಲಿದ್ದವು. ಪರಿಸ್ಥಿತಿ ಗಂಭೀರವಾಗಿತ್ತು ಮತ್ತು ಎರಡನೇ ಮಹಾಯುದ್ಧೋತ್ತರದಲ್ಲಿ ಜಗತ್ತಿನಾದ್ಯಂತ ಹೊಸ ವಿಶ್ವ ವ್ಯವಸ್ಥೆಯೊಂದು ರೂಪುಗೊಂಡಿತ್ತು. ಶಾಂತಿಯನ್ನು ಮರುಸ್ಥಾಪಿಸಲು ಪ್ರತಿಜ್ಞೆಗಳನ್ನು ಕೈಗೊಳ್ಳಲಾಯಿತು ಮತ್ತು ಜಗದಗಲ ಮಿಲಿಟರಿಯೇತರ ಸಹಕಾರದ ಮಂತ್ರ ಬಲಗೊಳ್ಳತೊಡಗಿತು. ವಿಶ್ವ ಸಂಸ್ಥೆ ಸ್ಥಾಪನೆಯಾಯಿತು. ವಿವಿಧ ಇಂತಹ ಏಜೆನ್ಸಿಗಳು ಮತ್ತು ವ್ಯವಸ್ಥೆಗಳು ಸ್ಥಾಪನೆಯಾಗಿ ರಾಷ್ಟ್ರಗಳು ವ್ಯವಸ್ಥಿತವಾಗಿ ಶಾಂತಿ ಮತ್ತು ಪ್ರಗತಿಯ ಪಥದತ್ತ ತರಬಲ್ಲಂತಹ ಸ್ಥಿತಿ ಏರ್ಪಟ್ಟಿತು. ಆದಾಗ್ಯೂ ಅನುಭವ ಇತರ ಫಲಿತಾಂಶಗಳನ್ನೂ ಒದಗಿಸಿತು. ಒಂದೆಡೆ ಪ್ರತೀ ದೇಶವೂ ಶಾಂತಿಯ ಬಗ್ಗೆ ಮಾತನಾಡಲು ಆರಂಭ ಮಾಡಿತು. ಅಧಿಕಾರ ಮತ್ತು ಶಕ್ತಿ ಇದ್ದ ಹಲವು ರಾಷ್ಟ್ರಗಳು ಶಾಂತಿ ಮಾತುಕತೆಯ ನಡುವೆಯೇ ಅವುಗಳ ಮಿಲಿಟರಿ ಮೂಲಸೌಕರ್ಯವನ್ನು ಹೆಚ್ಚಿಸಲು ಪ್ರಾರಂಭ ಮಾಡಿದವು. ವಿಶ್ವ ಸಂಸ್ಥೆ ಸ್ಥಾಪನೆಯ ಬಳಿಕ, ಅವುಗಳ ಮಿಲಿಟರಿ ಶಕ್ತಿ  ಬಹುಪಾಲು ಹೆಚ್ಚಳವಾಯಿತು. ಸಣ್ಣ ದೇಶಗಳು ಕೂಡಾ ಮಿಲಿಟರಿ ಬಲದಲ್ಲಿ ಸ್ಪರ್ಧೆಗೆ ಬಿದ್ದವು. ಶಾಂತಿ ಮಾತುಕತೆಗಳು ಬಹುವಾಗಿ ನಡೆದವು ಎಂಬುದರಲ್ಲಿ ಸಂಶಯವಿಲ್ಲ. ಆದರೆ ಸಂದರ್ಭದಲ್ಲಿ ಹಲವಾರು ಬಲಿಷ್ಟ ಶಕ್ತಿಗಳು ತಮ್ಮೆಲ್ಲಾ ಪ್ರಯತ್ನಗಳನ್ನು ಅವುಗಳ ಮಿಲಿಟರಿ ಶಕ್ತಿಯನ್ನು ಅಭಿವೃದ್ಧಿ ಮಾಡಲು ಬಳಸಿದವು ಎಂಬ ಸಂಗತಿಯನ್ನು ನಿರ್ಲಕ್ಷ ಮಾಡಲಾಗದು. ಅವಧಿಯಲ್ಲಿಯೇಮಿಲಿಟರಿ ಪಡೆಗಳನ್ನು ಬಲಪಡಿಸಲು ಮತ್ತು ಆಧುನೀಕರಣ ಮಾಡಲು ಅನ್ವೇಷಣೆಗಳು ಮತ್ತು ಸಂಶೋಧನೆಗಳು ನಡೆದವು. ಕೊರೋನೋತ್ತರ ಕಾಲದಲ್ಲಿ ಕೂಡಾ ಹೊಸ ಜಾಗತಿಕ ವ್ಯವಸ್ಥೆಯೊಂದು ಮೂಡಿ ಬರುತ್ತಿರುವುದನ್ನು ಕಾಣಬಹುದು. ಸಹಕಾರ ಮತ್ತು ಬಾಂಧವ್ಯ ಅಭಿವೃದ್ಧಿಯ ಹೊಸ ಪರಿಸರ ವ್ಯವಸ್ಥೆಯೊಂದು ಜಗತ್ತಿನಾದ್ಯಂತ ಅಸ್ತಿತ್ವ ಕಾಣುತ್ತಿದೆ.

ವಿಶ್ವಯುದ್ಧೋತ್ತರ ಕಾಲಘಟ್ಟದಲ್ಲಿ ನಾವು ಬರೇ ಮೂಕ ಪ್ರೇಕ್ಷಕರಾಗಿ ಉಳಿಯಬೇಕೇ ಅಥವಾ ಹೊಸದಾಗಿ ರೂಪುಗೊಳ್ಳುತ್ತಿರುವ ವಿಶ್ವ ವ್ಯವಸ್ಥೆಯಲ್ಲಿ ನಾವು ಮರು ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನಗಳನ್ನು ಮಾಡಬೇಕೇ ಎಂಬುದನ್ನು ನಾವೀಗ ನಿರ್ಧರಿಸಿಕೊಳ್ಳಬೇಕಾಗಿದೆ. ಭಾರತಕ್ಕೆ ಆಗ ಅಂತಹ ಪರಿಸ್ಥಿತಿ ಬಂದಿತ್ತು. ಈಗ ಕೊರೋನೋತ್ತರ ಕಾಲಘಟ್ಟದಲ್ಲಿ ಹೊಸ ವಿಶ್ವ ವ್ಯವಸ್ಥೆ ರೂಪುಗೊಳ್ಳುತ್ತಿದೆ, ಮತ್ತು ಅದು ಅನಿವಾರ್ಯವೂ ಆಗಿದೆ. ಬರೇ ಕಾಲ ಮಾತ್ರ ಇದು ಯಾವ ರೂಪದಲ್ಲಿ ಅಸ್ತಿತ್ವಕ್ಕೆ ಬರುತ್ತದೆ ಮತ್ತು ಇದನ್ನು ಯಾರು ಆರಂಭಿಸುತ್ತಾರೆ ಎಂಬುದನ್ನು ಹೇಳಬಲ್ಲುದು. ಜಗತ್ತು ಬಿಕ್ಕಟ್ಟನ್ನು ಎದುರಿಸುತ್ತಿರುವ ರೀತಿ , ಜಗತ್ತು ಅದರ ಬಗೆ ಚಿಂತಿಸುವಂತೆ ಮಾಡಿದೆ. ಮತ್ತು ಅದು ಮಾಡಲೇ ಬೇಕಾಗಿದೆ. ಹಿನ್ನೆಲೆಯಲ್ಲಿ ಭಾರತವು ವಿಶ್ವದಿಂದ ಪ್ರತ್ಯೇಕವಾಗಿ ಉಳಿಯುವುದು ಸಾಧ್ಯವಿಲ್ಲ. ನಾವು ಏಕಾಂಗಿಯಾಗಿರುವುದೂ ಸಾಧ್ಯವಿಲ್ಲ. ನಾವೀಗ ಬಲಿಷ್ಟ ಆಟಗಾರನಾಗಿ ಮೂಡಿ ಬರಬೇಕಾಗಿದೆ. ನಾವು ವಿಶ್ವದಲ್ಲಿ ನಮ್ಮ ಕೀರ್ತಿಪತಾಕೆಯನ್ನು ನಮ್ಮ ಬೃಹತ್ ಜನಸಂಖ್ಯೆಯೊಂದರ ಆಧಾರದಿಂದಲೇ ಸ್ಥಾಪಿಸಲು ಸಾಧ್ಯವಿಲ್ಲ. ಅದು ನಮ್ಮ ಶಕ್ತಿ ಹೌದು, ಆದರೆ ಅದೊಂದೇ ಸಾಕಾಗಲಾರದು. ಹೊಸ ವಿಶ್ವ ವ್ಯವಸ್ಥೆಯಲ್ಲಿ ಭಾರತವು ತನ್ನನ್ನು ತಾನು ಬಲಿಷ್ಟಪಡಿಸಿಕೊಳ್ಳಬೇಕು ಮತ್ತು ಸ್ವಾವಲಂಬಿಯಾಗಬೇಕು ಹಾಗು ಇದಕ್ಕೆ ಉತ್ತರವೇ ಆತ್ಮ ನಿರ್ಭರ ಭಾರತ. ನಾವು ಈಗಾಗಲೇ ಔಷಧ ವಲಯದಲ್ಲಿ ಸ್ವಾವಲಂಬಿಯಾಗಿದ್ದೇವೆ. ನಾವು ಜಗತ್ತಿನ ಕ್ಷೇಮದಲ್ಲಿ ಪ್ರಮುಖ ಪಾತ್ರವನ್ನು ವಹಿಸಬಲ್ಲೆವು. ಭಾರತ ಹೆಚ್ಚು ಹೆಚ್ಚು ಸ್ವಾವಲಂಬಿಯಾದಷ್ಟು ಮತ್ತು ಸಾಮರ್ಥ್ಯ ವರ್ಧಿಸಿಕೊಂಡಷ್ಟೂ ಮಾನವ ಕುಲದ ಕ್ಷೇಮಪಾಲನೆಯಲ್ಲಿ ವಿಶ್ವದಲ್ಲಿ ಅದರ ಪಾತ್ರ ಪ್ರಮುಖವಾಗುತ್ತಾ ಹೋಗುತ್ತದೆ. ನಮ್ಮಲ್ಲಿ, ನಮ್ಮ ರಕ್ತದಲ್ಲಿಯೇ सर्वे भवन्तु सुखिनः  ಎಂಬ ಮಂತ್ರವಿದೆ. ಆದುದರಿಂದ ನಾವು ಆತ್ಮನಿರ್ಭರ ಭಾರತದ ಘೋಷಣೆಯನ್ನು ಇನ್ನಷ್ಟು ಬಲಪಡಿಸಿಕೊಳ್ಳುವುದು ಬಹಳ ನಿರ್ಣಾಯಕ ಸಂಗತಿಯಾಗಿದೆ. ಮತ್ತು ನೆನಪಿಡಿ, ಇದು ಯಾವುದೇ ರಾಜಕಾರಣಿಯ ಘೋಷಣೆ ಅಲ್ಲ, ಅಥವಾ ಸರಕಾರದ ಧ್ವನಿ ಅಲ್ಲ. ಈಗಿನ ದಿನಗಳಲ್ಲಿ ಭಾರತದ ಮೂಲೆ ಮೂಲೆಗಳಲ್ಲಿವೋಕಲ್ ಫಾರ್ ಲೋಕಲ್ಘೋಷಣೆ ಅನುರಣಿಸುತ್ತಿದೆ. ನಾವು ಕೈಹಾಕುವ ಮುಂದಿನ ಪ್ರತಿಯೊಂದು ಉತ್ಪನ್ನವೂ ಸ್ಥಳೀಯ ಉತ್ಪನ್ನವಾಗಿರುವುದನ್ನು ನೋಡುವುದು ಬಹಳ ದೊಡ್ಡ ಸಂಗತಿ. ಸ್ವ ಹೆಮ್ಮೆಯ ಭಾವನೆ ಸ್ವಾವಲಂಬಿ ಭಾರತಕ್ಕೆ ಬಹಳ ಮುಖ್ಯ. ಮತ್ತು ನಮ್ಮ ಚಿಂತನೆ, ನಮ್ಮ ನೀತಿಗಳು, ನಮ್ಮ ನಿರ್ಧಾರಗಳು ಭಾರತವನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಯಾವೆಲ್ಲಾ ಬದಲಾವಣೆಗಳು ಅವಶ್ಯವೋ ಅವುಗಳನ್ನೆಲ್ಲ ತರುವ ನಿಟ್ಟಿನಲ್ಲಿರಬೇಕು. ಇದು ನನ್ನ ಅಭಿಪ್ರಾಯ.

ಚರ್ಚೆಯಲ್ಲಿ ಬಹುತೇಕ ಪ್ರತಿಯೊಬ್ಬ ಸದಸ್ಯರೂ ಕೊರೊನಾವನ್ನು ಪ್ರಸ್ತಾಪಿಸಿದರು. ವಿಷಯ ನಮಗೆ ತೃಪ್ತಿಯ ಸಂಗತಿಯೂ ಹೌದು ಮತ್ತು ಹೆಮ್ಮೆಯ ಸಂಗತಿಯೂ ಹೌದು. ವಿಶ್ವವು ಕೊರೊನಾ ಸ್ಫೋಟದಿಂದುಂಟಾದ ಬಿಕ್ಕಟ್ಟಿನಲ್ಲಿ ಬೃಹತ್ತಾದುದನ್ನು ನಿರೀಕ್ಷಿಸುತ್ತಿದೆ. ಮತ್ತು ಬಹಳಷ್ಟು ಮಂದಿ ಶ್ರೇಷ್ಠ ತಜ್ಞರು ಜಾಗತಿಕ ಸಾಂಕ್ರಾಮಿಕ ಪರಿಣಾಮವನ್ನು ಊಹಿಸುವುದರಲ್ಲಿ ತೊಡಗಿದ್ದಾರೆ. ಭಾರತದಲ್ಲಿಯೂ ಭಯವನ್ನು ಹರಡಲು ಹಲವಾರು ಪ್ರಯತ್ನಗಳು ನಡೆದವು. ಅದು ಅಪರಿಚಿತ ವೈರಿಯಾದುದರಿಂದ ಯಾವುದನ್ನೂ ವಿಶ್ವಾಸದಿಂದ ದೃಢವಾಗಿ ಹೇಳುವಂತಿರಲಿಲ್ಲ ಮತ್ತು ಮಾಡುವಂತಿರಲಿಲ್ಲ. ಅಪರಿಚಿತ ವೈರಿಯ ವಿರುದ್ಧ ಯುದ್ಧವಾಗಿತ್ತದು. ಇಂತಹ ಬೃಹತ್ ದೇಶದ ಸಾಮರ್ಥ್ಯದ ಬಗ್ಗೆ, ಅದರ ಜನದಟ್ಟಣೆಯ ಬಗ್ಗೆ ಸಂಶಯ ತಾಳುವುದು ಸಹಜವಾಗಿತ್ತು. ಇಲ್ಲಿ ಮೂಲಸೌಕರ್ಯಗಳ ಕೊರತೆ ಇತ್ತು. ಹಲವಾರು ದೊಡ್ದ ದೇಶಗಳು ಜಾಗತಿಕ ಸಾಂಕ್ರಾಮಿಕಕ್ಕೆ ಅದಾಗಲೇ ಬಲಿಯಾಗಿದ್ದವು, ಭಾರತವು ಸವಾಲನ್ನು ಹೇಗೆ ಎದುರಿಸುತ್ತದೆ ಎಂಬ ಪ್ರಶ್ನೆ ಬಂದಿತ್ತು. ಭಾರತದಲ್ಲಿ ಪರಿಸ್ಥಿತಿ ಕೈಮೀರಿದರೆ, ಹದಗೆಟ್ಟರೆ, ಆಗ ಇಡೀ ವಿಶ್ವವನ್ನು ರಕ್ಷಿಸುವುದು ಅಸಾಧ್ಯ ಎಂದು ಭಾವಿಸಲಾಗಿತ್ತು. ಇಂತಹ ಸ್ಥಿತಿಯಲ್ಲಿ, 130 ಕೋಟಿ ದೇಶವಾಸಿಗಳ  ಶಿಸ್ತು, ಅವರ ಬದ್ಧತೆ ಮತ್ತು ಅರ್ಪಣಾಭಾವ ಇಂದು ನಮ್ಮನ್ನು ಸಂರಕ್ಷಿಸಿದೆ. ಇದರ ಖ್ಯಾತಿ 130 ಕೋಟಿ ಹಿಂದೂಸ್ತಾನಿಗಳಿಗೆ ಸೇರಬೇಕಾಗಿದೆ. ಮತ್ತು ನಾವೆಲ್ಲ ಅದರ ವೈಭವ, ಯಶೋಗಾಥೆಯನ್ನು ಹಾಡಬೇಕಾಗಿದೆ. ಇದು ಭಾರತಕ್ಕೆ ತನ್ನ ಅಚ್ಚಳಿಯದ ಗುರುತು ಮೂಡಿಸಲು ಒಂದು ಅವಕಾಶವನ್ನು ಒದಗಿಸಿತು. ನಮ್ಮನ್ನು ಸತತವಾಗಿ ನಾವೇ ಶಪಿಸಿಕೊಳ್ಳುವುದರಿಂದ ವಿಶ್ವವು ನಮ್ಮನ್ನು ಒಪ್ಪಿಕೊಳ್ಳುವುವಂತೆ ಮಾಡುವುದು ಎಂದೆಂದೂ ಸಾಧ್ಯವಿಲ್ಲ. ನಾವು ನಮ್ಮ ಪರಿಸ್ಥಿತಿಯ ವಿರುದ್ದ ಹೋರಾಡಲು ಪ್ರಯತ್ನಗಳನ್ನು ಮಾಡಬೇಕಿತ್ತು ಮತ್ತು ನಮ್ಮ ಮಿತಿಗಳ ನಿಟ್ಟಿನಲ್ಲಿ ಕಾರ್ಯಾಚರಿಸಬೇಕಾಗಿತ್ತು. ನಾವು ಆತ್ಮವಿಶ್ವಾಸದೊಂದಿಗೆ ವಿಶ್ವವನ್ನು ಎದುರಿಸಲು ಅನುಭವವನ್ನು ಗಳಿಸಿಕೊಳ್ಳಬೇಕಿತ್ತುಆಗ ಮಾತ್ರ ಜಗತ್ತು ನಮ್ಮನ್ನು ಆದರಿಸುತ್ತದೆ. ನೀವು ನಿಮ್ಮದೇ ಮಗುವನ್ನು ಒಪ್ಪಿಕೊಳ್ಳದಿದ್ದರೆ ನಿಮ್ಮ ಸಮುದಾಯ ಅದನ್ನು ಒಪ್ಪಿಕೊಳ್ಳಬೇಕು ಎಂದು ಬಯಸಿದರೆ ಆಗ ಅದು ಎಂದೆಂದೂ ಸಾಧ್ಯವಿಲ್ಲ. ಇದು ಜಗತ್ತಿನ ನಿಯಮ ಮತ್ತು ನಾವದರ ಬಗ್ಗೆ ಮಾತನಾಡಬೇಕು.

ಶ್ರೀ ಮನೀಷ್ ತಿವಾರಿ ಜೀ ಅವರು ಕೊರೊನಾದಿಂದ ನಾವು ಪಾರಾಗಿರುವುದು ದೈವ ಕೃಪೆ ಎಂದು ಹೇಳಿದರು. ವಿಷಯದಲ್ಲಿ ನಾನು ಖಂಡಿತವಾಗಿ ಕೆಲವು ಅಂಶಗಳನ್ನು ಹೇಳಲಿಚ್ಚಿಸುತ್ತೇನೆ. ಖಂಡಿತವಾಗಿ ಇದು ದೈವ ಕೃಪೆ. ಇಡೀ ವಿಶ್ವ ಇದರಿಂದ ಗೊಂದಲದ ಗೂಡಾಗಿದ್ದಾಗ, ದೇವರ ದಯೆಯಿಂದ ನಾವು ಬದುಕುಳಿದೆವು. ವೈದ್ಯರು ಮತ್ತು ದಾದಿಯರ ರೂಪದಲ್ಲಿ ದೇವರು ಕಂಡುಬಂದರು. ವೈದ್ಯರು ಮತ್ತು ದಾದಿಯರು ಅವರ ಮಕ್ಕಳಿಗೆ ಸಂಜೆ ಹಿಂತಿರುಗಿ ಬರುತ್ತೇವೆ ಎಂದು ಹೇಳಿ ಹೋಗುತ್ತಿದ್ದರು. ಆದರೆ ಹದಿನೈದು ದಿನಗಳ ಕಾಲ ಹಲವಾರು ಸಂದರ್ಭಗಳಲ್ಲಿ ಅವರಿಗೆ ಹಿಂತಿರುಗಿ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಅವರು ನಮ್ಮೆಲ್ಲರ ಕಾಳಜಿ ವಹಿಸುತ್ತಿದ್ದ ವ್ಯಕ್ತಿ ರೂಪದ ದೇವರಾಗಿದ್ದರು. ನಾವು ಕೊರೊನಾ ಜಾಗತಿಕ ಸಾಂಕ್ರಾಮಿಕವನ್ನು ಸೋಲಿಸಿದ್ದರೆ ಅದು ನಮ್ಮ ನೈರ್ಮಲ್ಯ ಕಾರ್ಮಿಕರು, ಅವರಿಗೆ ಅದೊಂದು ಜೀವನ್ಮರಣ ಹೋರಾಟವಾಗಿದ್ದರೂ ಅವರು ಕಾರ್ಯನಿರ್ವಹಿಸಿದುದರಿಂದ. ಯಾರೊಬ್ಬರೂ ರೋಗಿಗಳ ಶುಶ್ರೂಷೆ ಮಾಡದಿರುವಂತಹ ಪರಿಸ್ಥಿತಿಯಲ್ಲಿ, ನಮ್ಮ ನೈರ್ಮಲ್ಯ ಕಾರ್ಮಿಕರು ದೇವರಂತೆ ಬಂದು ಸ್ವಚ್ಛ ಮತ್ತು ನೈರ್ಮಲ್ಯದ ವಾತಾವರಣದಲ್ಲಿ ಅವರನ್ನಿರಿಸಿದರು. ಆಂಬುಲೆನ್ಸ್ ಚಾಲಕರು ಸುಶಿಕ್ಷಿತರಾಗಿರಲಿಲ್ಲ. ಆದರೂ ಅವರಿಗೆ ತಾವು ಕೊರೊನಾ ಪಾಸಿಟಿವ್ ರೋಗಿಗಳನ್ನು ಸಾಗಿಸುತ್ತಿರುವುದು ತಿಳಿದಿರುತ್ತಿತ್ತು. ಆದರೂ ಅವರು ಮಾನವ ಕುಲಕ್ಕೆ ಸ್ವಾರ್ಥರಹಿತವಾದ ಸೇವೆ ನೀಡಿದರು. ಮತ್ತು ಆದುದರಿಂದ ದೇವರೇ ನಮ್ಮನ್ನು ಕಾಪಾಡಿದರು. ನಾವು ಅವರ ಬದ್ಧತೆಯ, ಖ್ಯಾತಿಯ ಕಥೆಗಳನ್ನು ಹೆಮ್ಮೆಯಿಂದ ಹಂಚಿಕೊಂಡಷ್ಟೂ ನಮ್ಮೊಳಗೇ ನಾವು ಸಶಕ್ತರು ಎಂಬ ಭಾವನೆ ಉಂಟಾಗುತ್ತದೆ. ಇನ್ನೂ ಅನೇಕರು ಹತಾಶೆಯ ಕಪಿಮುಷ್ಟಿಯಲ್ಲಿದ್ದಾರೆ, ನಾನು ಅವರಿಗೆ ಹೇಳಲು ಇಚ್ಛಿಸುತ್ತೇನೆ ಇತರ 130 ಕೋಟಿ ದೇಶವಾಸಿಗಳ ಧೈರ್ಯವನ್ನು ಗಮನಿಸಿ, ನಿಮಗೆ ಖಂಡಿತವಾಗಿಯೂ ಹೆಚ್ಚು ಶಕ್ತಿ ಬರುತ್ತದೆ.

ಗೌರವಾನ್ವಿತ ಸ್ಪೀಕರ್ ಸರ್,

ಕೊರೊನಾ ಸೋಂಕಿನ ಸ್ಪೋಟ ನಿಜವಾಗಿಯೂ ಒಂದು ಒರೆಗಲ್ಲು. ನೀವು ಬಿಕ್ಕಟ್ಟನ್ನು  ಎದುರಿಸುವಾಗ ನೈಜ ಅಗ್ನಿ ಪರೀಕ್ಷೆ ಎದುರಾಗುತ್ತದೆ. ಸಾಮಾನ್ಯ ದಿನಗಳಲ್ಲಿ ಅದರ ಬಗ್ಗೆ ನಿರ್ಲಕ್ಷದಿಂದಿರಲಾಗುತ್ತದೆ. ಅನಾಹುತ, ವಿಪತ್ತಿನಿಂದ ವಿಶ್ವದ ದೊಡ್ಡ ರಾಷ್ಟ್ರಗಳೂ ಬಾಧೆ ಅನುಭವಿಸಿದವು. ಬಿಕ್ಕಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ನೇರವಾಗಿ ಹಣಕಾಸು ನೆರವು ಮತ್ತು ವೈದ್ಯಕೀಯ ನೆರವು ಲಭಿಸುವಂತೆ ಖಾತ್ರಿಪಡಿಸುವುದು ಮೊದಲ ಕ್ರಮವಾಗಿತ್ತು. ಹಲವಾರು ದೇಶಗಳ ಖಜಾನೆಗಳು ಡಾಲರುಗಳಿಂದ, ಪೌಂಡುಗಳಿಂದ ತುಂಬಿದ್ದರೂ ಅವರ ನಾಗರಿಕರಿಗೆ ಸಾಕಷ್ಟು ನೆರವನ್ನು ಒದಗಿಸುವುದಕ್ಕೆ ಅವುಗಳಿಗೆ ಕೊರೊನಾ ಸ್ಫೋಟ ನಿರ್ಮಾಣ ಮಾಡಿದ ಅನಿರ್ದಿಷ್ಟತೆಯಿಂದಾಗಿ ಸಾಧ್ಯವಾಗಲಿಲ್ಲ. ಲಾಕ್ ಡೌನ್, ಕರ್ಫ್ಯೂ ಗಳು ಇದಕ್ಕೆ ಅಡ್ಡಿಯಾದವು. ಬ್ಯಾಂಕುಗಳು, ಅಂಚೆ ಕಚೇರಿಗಳು, ಮತ್ತು ಇತರ ಎಲ್ಲಾ ಸೌಲಭ್ಯಗಳನ್ನು ಇದ್ದಕ್ಕಿದ್ದಂತೆ ಮುಚ್ಚಬೇಕಾಯಿತು. ಉದ್ದೇಶಗಳು ಬಲಯುತವಾಗಿದ್ದವು ಮತ್ತು ಘೋಷಣೆಗಳನ್ನು ಮಾಡಲಾಯಿತು. ಆದರೆ ಭಾರತದಂತಹ ದೇಶದಲ್ಲಿ, ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ, ಸರಿ ಸುಮಾರು 75 ಕೋಟಿಗೂ ಅಧಿಕ  ಭಾರತೀಯರು ಎಂಟು ತಿಂಗಳ ಕಾಲ ತಮ್ಮ ಮನೆ ಬಾಗಿಲಿನಲ್ಲಿ ಪಡಿತರ ಪಡೆದರು. ಭಾರತವು ಜನಧನ್ ಖಾತೆಗಳ ಮೂಲಕಆಧಾರ ಕಾರ್ಡ್ ಮತ್ತು ಮೊಬೈಲ್ ಬ್ಯಾಂಕಿಂಗ್ ವರ್ಗಾವಣೆಗಳ ಮೂಲಕ ಎರಡು ಲಕ್ಷ ಕೋ. ರೂ.ಗಳ ಮೊತ್ತದ ಹಣಕಾಸು ನೆರವನ್ನು ಯಶಸ್ವಿಯಾಗಿ ವಿತರಿಸಿತು. ಇಂದು ಇದೇ ಸೌಲಭ್ಯಗಳು ನಮ್ಮ ದೇಶದ ಬಡ ಜನರನ್ನು ರಕ್ಷಿಸಲು ಬಂದಿವೆ. ಆಧಾರ್ ನ್ನು ಸ್ಥಗಿತ ಮಾಡಲು ಕೆಲವು ವಿರೋಧಿಗಳು ಒಂದು ಹಂತದಲ್ಲಿ ಹೇಗೆ ಸುಪ್ರೀಂ ಕೋರ್ಟನ್ನು ತಲುಪಿದ್ದರು ಎಂಬುದೊಂದು ಎಷ್ಟೊಂದು ದುರದೃಷ್ಟಕರ ಸಂಗತಿ. ನಾನು ದಿಗ್ಭ್ರಾಂತನಾಗಿದ್ದೆ ಮತ್ತು ಇಂದು ನಾನು ಇದನ್ನು ಪದೇ ಪದೇ ಹೇಳುತ್ತೇನೆ. ಗೌರವಾನ್ವಿತ ಸ್ಪೀಕರ್, ನನ್ನನ್ನು ಕ್ಷಮಿಸಿ. ನಾನು ನಿಮಗೆ ನನಗೆ ಒಂದು ನಿಮಿಷದ ವಿರಾಮ ನೀಡಿದುದಕ್ಕಾಗಿ ಕೃತಜ್ಞನಾಗಿದ್ದೇನೆ. ಕೆಲವೊಮ್ಮೆ ಅಜ್ಞಾನ ಸದನದಲ್ಲಿ ಬಹಳ ಪ್ರಮುಖ ಸಮಸ್ಯೆಯನ್ನು ಉಂಟು ಮಾಡುತ್ತದೆ

ಗೌರವಾನ್ವಿತ ಸ್ಪೀಕರ್ ಸರ್,

ಕ್ರಮವನ್ನು ಬೀದಿ ಬದಿಯ ವ್ಯಾಪಾರಿಗಳಿಗೆ ಕೊರೊನಾ ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ ಹಣಕಾಸು ನೆರವು ಮತ್ತು ಪರಿಹಾರ ನೀಡುವುದಕ್ಕಾಗಿ ಕೈಗೊಳ್ಳಲಾಯಿತು. ಇದನ್ನು ಯಶಸ್ವಿಯಾಗಿ ಸಾಧಿಸಲಾಯಿತು ಎಂಬುದಕ್ಕಾಗಿ ನನಗೆ ಸಂತೋಷವಿದೆ. ಗೌರವಾನ್ವಿತ ಅಧ್ಯಕ್ಷ ಸರ್, ಬಿಕ್ಕಟ್ಟಿನಲ್ಲಿಯೂ ನಾವು ಸರಣಿ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರುವುದರಲ್ಲಿ ನಿರತರಾದೆವು. ಭಾರತದ ಆರ್ಥಿಕತೆಯನ್ನು ಆಭಿವೃದ್ಧಿ ಮಾಡುವ ಉದ್ದೇಶದೊಂದಿಗೆ ನಾವು ಮುಂದುವರೆದೆವು. ನಾವು ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿತ್ತು. ನೀವು ಗಮನಿಸಿರಬಹುದು, ನಾವು ಹಲವು ಸುಧಾರಣೆಗಳನ್ನು ಜಾರಿಗೆ ತಂದ ಮೊದಲ ದಿನದಿಂದ ಟ್ರ್ಯಾಕ್ಟರು ಮತ್ತು ಅಟೋಮೊಬೈಲ್ ಗಳು ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿವೆ. ಜಿ.ಎಸ್.ಟಿ. ಸಂಗ್ರಹ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಅಂಕಿ ಅಂಶಗಳು ನಮ್ಮ ಆರ್ಥಿಕತೆಗೆ ಶಕ್ತಿಯನ್ನು ತುಂಬುತ್ತಿವೆ. ಭಾರತೀಯ ಆರ್ಥಿಕತೆ ಭಾರೀ ಉತ್ಸಾಹದಿಂದ ಮೂಡಿ ಬರುತ್ತಿದೆ ಎಂಬ ವಾಸ್ತವಿಕ ಸಂಗತಿಯನ್ನು ಇದು ಸೂಚಿಸುತ್ತಿದೆ. ಜಗತ್ತಿನಾದ್ಯಂತ ತಜ್ಞರು ಎರಡಂಕೆಯ ಬೆಳವಣಿಗೆಯನ್ನು ಪ್ರತಿಪಾದಿಸುತ್ತಿದ್ದಾರೆ. ಹಲವು ಪಂಡಿತರು ಎರಡಂಕಿ ಬೆಳವಣಿಗೆಯ ಸಾಧ್ಯತೆಯನ್ನು ಊಹಿಸಿದ್ದಾರೆ. ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲೂ, ಬಿಕ್ಕಟ್ಟಿನಲ್ಲಿಯೂ ದೇಶವು ಬೆಳವಣಿಗೆಯನ್ನು ಸಾಕ್ಷೀಕರಿಸಲಿದೆ ಮತ್ತು ನಾಗರಿಕರ ಆಶಯಗಳನ್ನು ಈಡೇರಿಸಲಿದೆ ಎಂಬ ಬಗ್ಗೆ ನನಗೆ ಭರವಸೆ ಇದೆ

ಗೌರವಾನ್ವಿತ ಸ್ಪೀಕರ್ ಸರ್,

ಕೊರೊನಾ ಅವಧಿಯಲ್ಲಿ ನಾವು ಮೂರು ಕೃಷಿ ಕಾಯ್ದೆಗಳನ್ನು ಮಂಡಿಸಿದ್ದೆವು. ಕೃಷಿ ಸುಧಾರಣೆಗಳು ಸಮಯದ ಆವಶ್ಯಕತೆಗಳು ಮತ್ತು ಹಿಂದಿನಿಂದಲೂ ಕೃಷಿ ವಲಯ ಎದುರಿಸಿಕೊಂಡು ಬಂದಿರುವ ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬಹಳ ನಿರ್ಣಾಯಕವಾದಂತಹವು. ಅದಕ್ಕೆ ಪುನಶ್ಚೇತನ ನೀಡಲು ನಾವು ಖಚಿತವಾಗಿಯೂ ದೃಢ ಮತ್ತು ಅವಿಶ್ರಾಂತ ಪ್ರಯತ್ನಗಳನ್ನು ಮಾಡಬೇಕಿದೆ. ನಿಟ್ಟಿನಲ್ಲಿ ನಾವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದ್ದೇವೆ. ಕೃಷಿ ವಲಯದಲ್ಲಿರುವ ಭವಿಷ್ಯದ ಸವಾಲುಗಳ ಬಗ್ಗೆ ತಜ್ಞರು ಗಮನ ಸೆಳೆದಿದ್ದಾರೆ. ಮತ್ತು ಅದು ನನ್ನ ಹೇಳಿಕೆ ಅಲ್ಲ. ಅದನ್ನು ಸಮರೋಪಾದಿಯಲ್ಲಿ ನಿಭಾಯಿಸಬೇಕಾಗಿದೆ. ಮತ್ತು ಆದುದರಿಂದ ನಾವು ಯಾವುದೇ ವಿಳಂಬವಿಲ್ಲದೆ ಕ್ರಮಗಳನ್ನು ಕೈಗೊಂಡಿದ್ದೇವೆ. ಇಲ್ಲಿ ಚರ್ಚೆ ನಡೆಯುತ್ತಿರುವಾಗ, ನಾನು ಗಮನಿಸಿದ್ದೇನೆ, ನನ್ನ ಮೌಲ್ಯಯುತವಾದ ವಿಪಕ್ಷವಿಶೇಷವಾಗಿ ಕಾಂಗ್ರೆಸ್ಸಿನ ನನ್ನ ಸ್ನೇಹಿತರು, ಕಾನೂನಿನ ಬಣ್ಣದ ಬಗ್ಗೆ, ಅದು ಕಪ್ಪೋ ಅಥವಾ ಬಿಳಿಯೋ ಎಂಬ ಬಗ್ಗೆ ಚರ್ಚಿಸುತ್ತಿದ್ದರು. ಅವರು ಅದರಲ್ಲಿರುವ ವಿಷಯದ ಬಗ್ಗೆ ಚರ್ಚೆ ನಡೆಸಿದ್ದರೆ ಮತ್ತು ಉದ್ದೇಶದ ಬಗ್ಗೆ ಚರ್ಚಿಸಿದ್ದರೆ ದೇಶದ ರೈತರಿಗೆ ಸರಿಯಾದ ಚಿತ್ರಣ ಸಿಗುತ್ತಿತ್ತು. ಮತ್ತು ಅದು ದೊಡ್ಡ ಸಂಗತಿಯಾಗುತ್ತಿತ್ತು.

ನಾನು ದಾದಾನನ್ನ ಸಹೋದರ ಅರ್ಥಪೂರ್ಣ ವಿಷಯಗಳ ಬಗ್ಗೆ ಚರ್ಚಿಸುತ್ತಾರೆ ಎಂದು ನಂಬಿದ್ದೆ. ಬಹಳ ಪೂರ್ವತಯಾರಿಯ ಬಳಿಕ ಅವರು ಅಭಿಪ್ರಾಯ ಮಂಡಿಸುವರೆಂದು ನಿರೀಕ್ಷಿಸಿದ್ದೆ. ಆದರೆ ವಿಷಾದದ ಸಂಗತಿ ಎಂದರೆ ಅವರು ತಮ್ಮ ಮಾತುಗಳನ್ನು ಪ್ರಧಾನ ಮಂತ್ರಿ ಮತ್ತು ಅವರ ತಂಡ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದನ್ನು, ನಾವು ಯಾಕೆ, ಎಲ್ಲಿ ಮತ್ತು ಹೇಗೆ ಅವರ ರಾಜ್ಯದಲ್ಲಿ ಪ್ರಯಾಣ ಮಾಡಿದೆವು ಎಂಬ ಬಗ್ಗೆ ಪ್ರಶ್ನಿಸುವುದಕ್ಕೆ ಸೀಮಿತ ಮಾಡಿಕೊಂಡರು. ಆದುದರಿಂದ, ವಿಷಾದದಿಂದ ದಾದಾ ಬಾರಿ ನಾವು ನಿಮ್ಮ ಅರಿವನ್ನು, ಜ್ಞಾನವನ್ನು ಕಳೆದುಕೊಂಡಿದ್ದೇವೆ. ಅದೇನೇ ಇರಲಿ, ಚುನಾವಣೆ ಬಳಿಕ ನಿಮಗೆ ಅವಕಾಶ ಸಿಕ್ಕಬಹುದು. ರಾಜ್ಯ ನಮಗೆ ಬಹಳ ಮುಖ್ಯ. ಆದುದರಿಂದ ನಮ್ಮ ಭೇಟಿಯ ವೇಳೆಯಲ್ಲಿ ನಾವು ಯಾವುದನ್ನೂ ಬಾಕಿಯಾಗಲು ಬಿಡಲಿಲ್ಲ. ದುರದೃಷ್ಟವಶಾತ್, ನೀವೆಲ್ಲಾ ಬಹಳಷ್ಟು ನಿರ್ಲಕ್ಷ ಮಾಡಿದ್ದೀರಿ, ಆದುದರಿಂದ ನಾವೀಗ ಅದಕ್ಕೆ ಅರ್ಹವಾಗಿರುವ ಮಹತ್ವವನ್ನು ನೀಡಬೇಕು. ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಾವದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. ದಿಲ್ಲಿ ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತ ಸಹೋದರರು ಮತ್ತು ಸಹೋದರಿಯರು ಅವರ ಸುತ್ತ ಹರಡಲಾಗುತ್ತಿರುವ ತಪ್ಪು ಗ್ರಹಿಕೆಯ ಮತ್ತು ವದಂತಿಗಳ ಬಲಿಪಶುಗಳು. ನಾನು ನನ್ನ ಭಾಷಣ ಮುಗಿಸಿದ ಮೇಲೆ ನೀವಿದನ್ನೆಲ್ಲ ಮಾಡಬಹುದು. ನಿಮಗೆ ಕೂಡಾ ಅವಕಾಶ ನೀಡಲಾಗಿದೆ. ನೀವು ಇಂತಹ ಶಬ್ದಗಳನ್ನು ಅವರಿಗಾಗಿ ಮಾತನಾಡಬಹುದು ಆದರೆ ನನಗಲ್ಲ. (ವಿಪಕ್ಷಗಳ ಹೇಳಿಕೆಗೆ ಪ್ರತಿಕ್ರಿಯಿಸುತ್ತ) ಪ್ರಿಯ ಶ್ರೀ ಕೈಲಾಶ್ ಚೌಧುರಿ ಜೀ ಇತ್ತ ನೋಡಿ, ನಾನು ನಿಮ್ಮ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇನೆ, ನೀವು ಎಲ್ಲೆಲ್ಲ ನೊಂದಾವಣೆಯನ್ನು, ದಾಖಲೀಕರಣವನ್ನು ಆಶಿಸಿದ್ದೀರೋ, ಅದನ್ನು ಮಾಡಲಾಗಿದೆ.

ಗೌರವಾನ್ವಿತ ಸ್ಪೀಕರ್ ಸರ್,

ಸದನವು ಚಳವಳಿನಿರತರಾಗಿರುವ ಎಲ್ಲಾ ರೈತ ಸ್ನೇಹಿತರ ಭಾವನೆಗಳನ್ನು ಗೌರವಿಸುತ್ತದೆ, ಮತ್ತು ಸರಕಾರ ಕೂಡಾ ಅವರನ್ನು ಗೌರವಿಸುವುದನ್ನು ಮುಂದುವರಿಸುತ್ತದೆ. ಮತ್ತು ಆದುದರಿಂದ, ಸರಕಾರದ ಹಿರಿಯ ಸಚಿವರು ಅವರೊಂದಿಗೆ ಪಂಜಾಬ್ ಚಳವಳಿ ಮತ್ತು ಬಳಿಕವೂ ಸತತ ಮಾತುಕತೆಯಲ್ಲಿದ್ದಾರೆ. ನಾವಿದನ್ನು ನಮ್ಮ ರೈತರ ಗೌರವ ಮತ್ತು ಏಕತೆಗಾಗಿ  ಮಾಡುತ್ತಿದ್ದೇವೆ. ಮತ್ತು ಅತ್ಯಂತ ಗೌರವದಿಂದ ಮಾಡುತ್ತಿದ್ದೇವೆ.

ಗೌರವಾನ್ವಿತ ಸ್ಪೀಕರ್,

ಅಲ್ಲಿ ನಿರಂತರ ಮಾತುಕತೆಗಳು ನಡೆಯುತ್ತಿವೆ. ಚಳವಳಿಯು ಪಂಜಾಬಿಗಷ್ಟೇ ಸೀಮಿತವಾಗಿದ್ದ ದಿನಗಳಿಂದಲೂ ಮಾತುಕತೆ ನಡೆದಿದೆ. ಅವರು ದಿಲ್ಲಿಯತ್ತ ಬಂದಾಗಲೂ ಮುಂದುವರಿದಿದೆ. ರೈತರ ಮನಸ್ಸಿನಲ್ಲಿರುವ ಸಂಶಯಗಳನ್ನು ತಿಳಿದುಕೊಳ್ಳಲು ಹಲವಾರು ಪ್ರಯತ್ನಗಳನ್ನು ಮಾಡಲಾಗಿದೆ. ಚರ್ಚೆಗಳಲ್ಲಿ ತಮ್ಮ ಪ್ರತಿಯೊಂದು ಕಳವಳಗಳನ್ನು ತಿಳಿಸುವಂತೆ ರೈತರನ್ನು ನಿರಂತರವಾಗಿ ಪ್ರೋತ್ಸಾಹಿಸಲಾಗಿದೆ. ನರೇಂದ್ರ ಸಿಂಗ್ ತೋಮರ್ ಜೀ ಇದನ್ನು ರಾಜ್ಯಸಭೆಯಲ್ಲಿ ವಿವರವಾಗಿ ಪ್ರಸ್ತಾಪಿಸಿದ್ದಾರೆ. ಅವರಿಗೆ ಒಂದೊಂದು ನಿಬಂಧನೆ/ಶರತ್ತುಗಳ ಬಗ್ಗೆ ಚರ್ಚೆ ನಡೆಸುವಂತೆಯೂ ಆಹ್ವಾನಿಸಲಾಗಿದೆ. ಒಂದು ವೇಳೆ ಕಾಯ್ದೆಯು ನಿಜವಾಗಿಯೂ ರೈತರಿಗೆ ಗಂಬೀರವಾಗಿ ಹಾನಿ ತರುವಂತಹ ಅಂಶಗಳನ್ನು ಹೊಂದಿದ್ದರೆ, ಆಗ ಅದನ್ನು ತಿದ್ದುವಲ್ಲಿ ಯಾವ ಹಾನಿಯೂ ಇಲ್ಲ ಎಂಬುದರಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ಇದು ದೇಶದ ನಾಗರಿಕರಿಗೆ ಸಂಬಂಧಿಸಿದ್ದು. ಯಾವುದಾದರೂ ಕೆಲವು ನಿರ್ಧಾರಗಳನ್ನು ಕೈಗೊಂಡರೆ, ಅದು ರೈತರ ಕಲ್ಯಾಣಕ್ಕಾಗಿ ಕೈಗೊಳ್ಳಲಾಗಿದೆ. ನಾವು ಕಾಯುತ್ತಿದ್ದೇವೆ ಮತ್ತು ಕಾಯುವಿಕೆಯನ್ನು ಮುಂದುವರಿಸುತ್ತೇವೆಒಂದು ವೇಳೆ ಅವರು ನಿರ್ದಿಷ್ಟವಾದುದನ್ನು ಹೇಳಿದರೆ ಮತ್ತು ಅದು ಸರಿಯಾಗಿದ್ದರೆ, ಆಗ ಕಾನೂನನ್ನು ಮರುಪರಿಶೀಲನೆಗೆ ಒಳಪಡಿಸಲು ನಮಗೆ ಯಾವ ಹಿಂಜರಿಕೆಯೂ ಇಲ್ಲ. ನಾವಿದನ್ನು ಅವರು ಪಂಜಾಬಿನಲ್ಲಿ ಪ್ರತಿಭಟನೆ ಆರಂಭ ಮಾಡಿದಂದಿನಿಂದಲೂ ಹೇಳುತ್ತಾ ಬಂದಿದ್ದೇವೆ. ಮೂರು ಕಾನೂನುಗಳನ್ನು ಅಧ್ಯಾದೇಶದ ಮೂಲಕ ಅನುಷ್ಠಾನಿಸಲಾಗಿತ್ತು, ಬಳಿಕ ಸಂಸತ್ತು ಇವುಗಳನ್ನು ಅಂಗೀಕರಿಸಿತು. ಕಾನೂನು ಅನುಷ್ಠಾನದ ಬಳಿಕ, ದೇಶದಲ್ಲಿ ಯಾವುದೇ ಮಂಡಿಯನ್ನು ಮುಚ್ಚಲಾಗಿಲ್ಲ, ಎಂ.ಎಸ್.ಪಿ.ಯನ್ನೂ ನಿಲ್ಲಿಸಲಾಗಿಲ್ಲ. ಸತ್ಯವನ್ನು ನಾವ್ಯಾರೂ ಮಾತನಾಡುತ್ತಿಲ್ಲ. ಇದರಲ್ಲಿ ಅರ್ಥ ಇಲ್ಲ. ಇದು ಮಾತ್ರವಲ್ಲ, ಎಂ.ಎಸ್.ಪಿ. ಯಲ್ಲಿ ಖರೀದಿ ಕೂಡಾ ಹೆಚ್ಚಾಗಿದೆ ಮತ್ತು ವಾಸ್ತವದ ಸ್ಥಿತಿ ಏನೆಂದರೆ ಹೊಸ ಕಾನೂನುಗಳ ಬಳಿಕ ಇದು ಹೆಚ್ಚಾಗಿದೆ.

ಗೌರವಾನ್ವಿತ ಸ್ಪೀಕರ್,

ಜಗಳಗಳು, ಗದ್ದಲಗಳು ಮತ್ತು ನಡೆಸಲಾಗುತ್ತಿರುವ ರಸ್ತೆ ತಡೆಗಳು ಮೊದಲೇ ನಿರ್ಧರಿಸಲ್ಪಟ್ಟ ಕ್ರಮಗಳು ಮತ್ತು ಇವು ರಾಜಕೀಯ ಆಟದ ಯೋಜನೆಗಳು. ಯೋಜಿತ ರಾಜಕೀಯ ವ್ಯೂಹ ಅನ್ವಯ ಹರಡಲಾಗುವ  ಸುಳ್ಳುಗಳು ಮತ್ತು ವದಂತಿಗಳು ಬಹಳ ಬೇಗ ಅನಾವರಣಗೊಳ್ಳುತ್ತಿವೆ. ಇದರಿಂದಾಗಿ ಅವರಿಗೆ ಅಲ್ಲಿರಲು ಕಷ್ಟವಾಗುತ್ತಿದೆ, ಆದುದರಿಂದ, ನೀವು ಹೊರಗೆ ಮಾಡಿದಂತಹ ಗದ್ದಲವನ್ನು ಇಲ್ಲಿಯೂ ಮಾಡುವುದನ್ನು ಮುಂದುವರಿಸಿದ್ದೀರಿ. ನಿಮ್ಮ ರಾಜಕೀಯ ಹೂಟದೊಂದಿಗೆ ಮುಂದುವರಿಯಿರಿ. ನಿಮಗೆ ಖಂಡಿತ ಹೇಳುತ್ತೇನೆ, ನೀವು ರೀತಿಯಿಂದ ಜನರ ವಿಶ್ವಾಸವನ್ನು ಗಳಿಸಲು ಶಕ್ತರಾಗುವುದಿಲ್ಲ.

ಗೌರವಾನ್ವಿತ ಸ್ಪೀಕರ್ ಸರ್,

ಅವರ ಹಿಂದಿನ ಯಾವುದೇ ಹಕ್ಕುಗಳನ್ನು ದರೋಡೆ ಮಾಡಲಾಗಿದೆಯೇ ಎಂಬುದನ್ನು ನಾನು ಯಾವುದೇ ರೈತರನ್ನು ಕೇಳಲು ಇಚ್ಛಿಸುತ್ತೇನೆ. ಅವರ ಸ್ವಾತಂತ್ರ್ಯವನ್ನು ಅಥವಾ ಸೌಲಭ್ಯಗಳನ್ನು ಕಾಯ್ದೆ ಅಧ್ಯಾದೇಶವಾದಾಗ ಅಥವಾ ಸಂಸತ್ತಿನಲ್ಲಿ ಅಂಗೀಕಾರವಾದ ಬಳಿಕ ಕಡಿತ ಮಾಡಲಾಗಿದೆಯೇ. ಇದರ ಬಗ್ಗೆ ಯಾರೊಬ್ಬರೂ ಚರ್ಚೆ ಮಾಡುವುದಿಲ್ಲ ಮತ್ತು ಉತ್ತರ ಕೊಡುವುದಿಲ್ಲ. ಪ್ರತಿಯೊಂದೂ ಹಿಂದಿದ್ದಂತೆ ಇದೆ- ಹೊಸ ಪರ್ಯಾಯಗಳನ್ನು ಶಿಫಾರಸು ಮಾಡಲಾಗಿದೆ ಮತ್ತು ಅದು ಕಡ್ಡಾಯ ಅಲ್ಲ ಎಂಬುದನ್ನು ಹೊರತುಪಡಿಸಿದರೆ. ಕಡ್ಡಾಯವಾಗಿದ್ದಾಗ ಮಾತ್ರ ಅದನ್ನು ಪ್ರತಿಭಟಿಸಿದರೆ ಅದರಲ್ಲಿ ನ್ಯಾಯ ಇರುತ್ತದೆ ಮತ್ತು ಅಲ್ಲಿ ಸಮರ್ಥನೆ ಇರುತ್ತದೆ. ಇಲ್ಲಿ ಇದು ಆಯ್ಕೆಗೆ ಬಿಟ್ಟಿದೆ. ನಿಮ್ಮ ಆಯ್ಕೆಯನ್ನು ಮಾಡಲು ನೀವು ಸ್ವತಂತ್ರರು. ಅಧ್ಯಾದೇಶದ ಮೂಲಕ ಮತ್ತು ಕಾನೂನಿನ ಮೂಲಕ, ನಾವು ರೈತರಿಗೆ ಹೆಚ್ಚು ಲಾಭದಾಯಕವಾದ ಮೂಲಸೌಕರ್ಯವನ್ನು ಮುಕ್ತವಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಕೊಟ್ಟಿದ್ದೇವೆ.(ಅಭಿರಂಜನ್ ಜೀ ದಯವಿಟ್ಟು..ಈಗ ಇದು ಬಹಳವಾಗಿದೆ..ನಿಮ್ಮನ್ನು ಗೌರವಿಸುವ ವ್ಯಕ್ತಿ ನಾನು) ನಾನು ಮೊದಲೇ ಹೇಳಿದ್ದೇನೆ, ನೀವು ಏನೆಲ್ಲಾ ಮಾಡಿದ್ದೀರೋ, ಅದೆಲ್ಲಾ ಇಲ್ಲಿ ದಾಖಲಾಗಿದೆ. ಬಂಗಾಳದಲ್ಲಿ ಟಿ.ಎಂ.ಸಿ. ಪಡೆಯುವುದಕ್ಕಿಂತ ಹೆಚ್ಚಿನ ಪ್ರಚಾರವನ್ನು ನೀವು ಪಡೆಯುತ್ತೀರಿ ಎಂಬುದು ಖಚಿತಏನು ವಿಷಯ?. ಹೌದು, ದಾದಾ, ಸಹೋದರ, ನೋಡಿ ನನ್ನಲ್ಲಿ ಮಾಹಿತಿ ಇದೆ, ನಿಮಗೆ ಚಿಂತೆ ಬೇಡ. ಅಭಿರಂಜನ್ ಜೀ ದಯವಿಟ್ಟು. ಅದು ನಿಮಗೆ ಸಂಬಂಧಿಸಿದ್ದಲ್ಲ. ನಾನು ನಿಮ್ಮ ಬಗ್ಗೆ ಬಹಳ ಗೌರವ ಇಟ್ಟುಕೊಂಡಿದ್ದೇನೆ. ನೀವು ಹೀಗೇಕೆ ವರ್ತಿಸುತ್ತೀರಿ ಎಂದು ಆಶ್ಚರ್ಯವಾಗುತ್ತಿದೆ. ನೀವು ಯಾಕೆ ಮಿತಿ ದಾಟುತ್ತಿದ್ದೀರಿ.

ಸ್ಪೀಕರ್ ಸರ್, ಕಾನೂನು ಹೇಗಿದೆ ಎಂದರೆ ಅದು ಯಾರನ್ನೂ ಬಂಧಿಸುವುದಿಲ್ಲ. ಅವುಗಳು ಆಯ್ಕೆಯನ್ನು ಹೊಂದಿವೆ ಮತ್ತು ಆದುದರಿಂದ ಅಲ್ಲಿ ಪ್ರತಿಭಟನೆಗಳಿಗೆ ಯಾವುದೇ ಕಾರಣಗಳಿಲ್ಲ. ಕಾನೂನನ್ನು ಹೇರಿದ್ದರೆ, ಆಗ ಖಂಡಿತವಾಗಿಯೂ ಚಳವಳಿ ಸಮರ್ಥನೀಯವಾಗುತ್ತಿತ್ತು. ಅದರಿಂದಾಗಿಯೇ, ನಾನು ಜನರಿಗೆ ಹೇಳುತ್ತಿದ್ದೇನೆ, ನಾವೀಗ ಹೊಸ ರೀತಿಯ ಚಳವಳಿಯನ್ನು ಕಾಣುತ್ತಿದ್ದೇವೆ. ನೈಜ ಚಳವಳಿಗಾರರು ಇಂತಹ ವಿಧಾನಗಳನ್ನು ಅನುಸರಿಸುವುದಿಲ್ಲ. ಆಂದೋಲನಜೀವಿಗಳು ಮಾತ್ರ ರೀತಿಯ ಪ್ರತಿಭಟನೆಗಳನ್ನು ಅಳವಡಿಸಿಕೊಳ್ಳುತ್ತಾರೆ. ಸುಳ್ಳುಗಳನ್ನು ಹಬ್ಬಿಸುವ ಮೂಲಕ ಕಳವಳಗಳನ್ನು ಉಂಟು ಮಾಡಿ ಅವರು ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಾರೆ. ಎಂದೆಂದೂ ಆಗಲಾರದ್ದನ್ನು ಊಹಿಸಿ ಯಾಕೆ ಭಯವನ್ನು ಸೃಷ್ಟಿ ಮಾಡುತ್ತೀರಿ. ಮತ್ತು ಸುಪ್ರಿಂ ಕೋರ್ಟಿನಿಂದ ತೀರ್ಪಿಗಾಗಿ ಕಾಯುತ್ತಿರುವ ಹಂತದಲ್ಲಿ ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ ದೇಶಾದ್ಯಂತ ಗಲಭೆಗಳಿಗೆ ಯಾಕೆ ಪ್ರಚೋದನೆ ನೀಡುತ್ತೀರಿ. ಪ್ರಜಾಪ್ರಭುತ್ವದಲ್ಲಿ ವಿಶ್ವಾಸ ಇಟ್ಟಿರುವ ಮತ್ತು ಅಹಿಂಸೆಯಲ್ಲಿ ನಂಬಿಕೆ ಇಟ್ಟಿರುವ ಎಲ್ಲರಿಗೂ ಇದೊಂದು ಕಳವಳಕಾರಿ ಸಂಗತಿ. ದಯವಿಟ್ಟು ತಾಳ್ಮೆಯಿಂದಿರಿ, ನಿಮಗೆ ಖಂಡಿತವಾಗಿಯೂ ಬಳಿಕ ಸಮಯ ಸಿಗುತ್ತದೆ.

ಗೌರವಾನ್ವಿತ ಸ್ಪೀಕರ್ ಸರ್,

ಅಲ್ಲಿ ಹಳೆಯ ಮಂಡಿಗಳಿಗೆ ಯಾವುದೇ ನಿರ್ಬಂಧ ಇಲ್ಲ. ಅದು ಮಾತ್ರವಲ್ಲ. ಬಜೆಟ್ ಅವುಗಳ ಆಧುನೀಕರಣಕ್ಕೆ ಹಣಕಾಸನ್ನು ಮೀಸಲಿಟ್ಟಿದೆ. ಗೌರವಾನ್ವಿತ ಸ್ಪೀಕರ್ ಸರ್, ನಿರ್ಧಾರವುಸರ್ವಜನ ಹಿತಾಯ, ಸರ್ವಜನ ಸುಖಾಯಎಂಬ ಎಲ್ಲರಿಗೂ ಸಮಾನತೆ ಮತ್ತು ಕಲ್ಯಾಣದ ದೃಷ್ಟಿಕೋನವನ್ನು ಆಧರಿಸಿದೆ. ಗೌರವಾನ್ವಿತ ಸ್ಪೀಕರ್ ಸರ್, ಸದನದ ಸದಸ್ಯರು ಖಚಿತವಾಗಿ ತಿಳಿದುಕೊಳ್ಳುತ್ತಾರೆ- ಕಾಂಗ್ರೆಸ್ ಮತ್ತು ಅದರ ದೊಡ್ಡ ಮಿತ್ರ ಪಕ್ಷಗಳು ಇಲ್ಲಿ ಅವರ ಚಿಂತನೆಯನ್ನು ಬಲಿಷ್ಟವಾಗಿ ಮಂಡಿಸಿದವು ಆದರೆ ನೈಜ ವಿಷಯಗಳನ್ನು ಮರೆಮಾಚಿದವು ಎಂಬುದನ್ನು. ಅವರು ವಿಷಯವನ್ನು ಆಳವಾಗಿ ಅಧ್ಯಯನ ಮಾಡಬೇಕು ಎಂಬುದನ್ನು ಯಾರಾದರೂ ನಿರೀಕ್ಷಿಸುತ್ತಾರೆ. ನಾನು ಇಲ್ಲಿ ಹೊಸ ತರ್ಕವನ್ನು ಕೇಳಿ ಆಶ್ಚರ್ಯಪಟ್ಟೆ. ಕೇಳದೇ ಇದ್ದುದನ್ನು ಯಾಕೆ ಕೊಡಬೇಕು ಎಂಬುದು ತರ್ಕ. ಎಲ್ಲಕ್ಕಿಂತ ಮೊದಲಾಗಿ, ಇದನ್ನು ಪಡೆದುಕೊಳ್ಳುವುದು ಅಥವಾ ಬಿಡುವುದು ಪೂರ್ಣವಾಗಿ ನಿಮ್ಮ ಆಯ್ಕೆ. ನಿಮ್ಮನ್ನು ಯಾರೊಬ್ಬರೂ ಬಲವಂತ ಮಾಡಿಲ್ಲ. ಅದು ಆಯ್ಕೆಗೆ ಬಿಟ್ಟದ್ದು. ಇದು ಇಂತಹ ಬೃಹತ್ ದೇಶಕ್ಕೆ ಒಂದು ವ್ಯವಸ್ಥೆ. ದೇಶದ ಕೆಲವು ಭಾಗಗಳು ಇದರಿಂದ ಖಂಡಿತವಾಗಿಯೂ ಲಾಭ ಪಡೆಯುತ್ತವೆ. ಕೆಲವಕ್ಕೆ ಲಾಭವಾಗಬಹುದು, ಇನ್ನು ಕೆಲವಕ್ಕೆ ಇಲ್ಲದಿರಬಹುದು. ಆದರೆ ಒಂದು ವಿಷಯ ಸ್ಪಷ್ಟವಾಗಿ ತಿಳಿದಿರಲಿ, ಇದು ಕಡ್ಡಾಯವಲ್ಲ. ಆದುದರಿಂದ ಅಲ್ಲಿ ಕೇಳದೇ ಇರುವುದನ್ನು ಕೊಡುತ್ತಿರುವ ಸಂಗತಿ ಇಲ್ಲ. ಆದರೂ ನಾನು ಪುನರುಚ್ಚರಿಸಲು ಇಚ್ಛಿಸುತ್ತೇನೆ, ವರದಕ್ಷಿಣೆಯ ವಿರುದ್ದ ಕಾನೂನು ಜಾರಿ ಮಾಡಿ ಎಂದು ಯಾರೂ ಕೇಳಿದ್ದಿಲ್ಲ.ಇದರ ಬಗ್ಗೆ ಯಾರೊಬ್ಬರೂ ಕೇಳಿದ್ದಿಲ್ಲ, ಆದರೆ ಕಾನೂನು ನಮ್ಮ ದೇಶದ ಅಭಿವೃದ್ಧಿಗಾಗಿ ತರಲಾಯಿತು.

ಗೌರವಾನ್ವಿತ ಸ್ಪೀಕರ್, ಇದನ್ನು ಗಮನಿಸಬಹುದು, ಯಾರೊಬ್ಬರೂ ಇದಕ್ಕಾಗಿ ಆಗ್ರಹಿಸಲಿಲ್ಲ. ಆದರೆ ತ್ರಿವಳಿ ತಲಾಖಿನ ವಿರುದ್ಧ ಪ್ರಗತಿಪರ ದೇಶವಾಗಿ ನಾವು ಕಾನೂನನ್ನು ತರುವುದು ಬಹಳ ಮುಖ್ಯವಾಗಿತ್ತು. ನಾವು ಬಾಲ್ಯ ವಿವಾಹವನ್ನು ತಡೆಯಬೇಕಿತ್ತು ಮತ್ತು ಅದಕ್ಕಾಗಿ ಬಾಲ್ಯ ವಿವಾಹವನ್ನು ತಡೆಗಟ್ಟುವ ಕಾನೂನನ್ನು ತರುವುದು ನಮಗೆ ಅನಿವಾರ್ಯವಾಗಿತ್ತು. ದೇಶವು ಪ್ರಗತಿ ಹೊಂದಲು ಮತ್ತು ಸಮೃದ್ಧಿ ಹೊಂದಲು ಇಂತಹ ಕಾನೂನುಗಳು ಅವಶ್ಯ. ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಬೇಕೆಂದು ಯಾರಾದರೂ ಆಗ್ರಹ ಮಾಡಿದ್ದರೇ?. ಅಥವಾ ಶಿಕ್ಷಣದ ಹಕ್ಕನ್ನು ಆಗ್ರಹಿಸಿದ್ದರೇ?. ಆದರೆ ಇಂತಹ ಕಾನೂನುಗಳು ಮತ್ತು ಸುಧಾರಣೆಗಳು ದೇಶದ ಅಭಿವೃದ್ಧಿಗೆ ಮತ್ತು ಪರಿವರ್ತನೆಗೆ ಬಹಳ ಅಗತ್ಯ. ದೇಶವು ಹಿಂದೆಂದಾದರೂ ಇಷ್ಟೊಂದು ಸುಧಾರಣೆಗಳನ್ನು ನೋಡಿತ್ತೇ? ವಿಶ್ವಕ್ಕೆ ಇದು ಗೊತ್ತಿದೆ ಮತ್ತು ಅವುಗಳನ್ನೂ ಒಪ್ಪಿಕೊಳ್ಳಲಿಲ್ಲವೇ?.

ಗೌರವಾನ್ವಿತ ಸ್ಪೀಕರ್ ಸರ್,

ಭಾರತದಲ್ಲಿಯ ಅತ್ಯಂತ ಹಳೆಯ ರಾಜಕೀಯ ಪಕ್ಷ ಎಂದರೆ ಕಾಂಗ್ರೆಸ್ ಎಂದು ನಾವು ನಂಬುತ್ತೇವೆ. ಅವರು ಸುಮಾರು ಆರು ದಶಕಗಳ ಕಾಲ ಏಕಾಂಗಿಯಾಗಿ ದೇಶ ಆಳಿದರು. ದುಖಃದ ಸಂಗತಿ ಎಂದರೆ, ಅವರ ಸದಸ್ಯರು ರಾಜ್ಯ ಸಭೆ ಮತ್ತು ಲೋಕ ಸಭೆಗಳಲ್ಲಿ ಪರಸ್ಪರ ವಿರುದ್ಧವಾದ ಹಾದಿಗಳನ್ನು  ಅನುಸರಿಸಿದರು. ಇಂತಹ ವಿಭಜನೆ ಇರುವ ಮತ್ತು ಗೊಂದಲದಿಂದ ಪೀಡಿತವಾಗಿರುವ ಪಕ್ಷವು ದೇಶಕ್ಕೆ ಯಾವುದೇ ಒಳಿತನ್ನು ಉಂಟು ಮಾಡಲಾರದು ಮತ್ತು ಅದು ದೇಶವಿಂದು ಎದುರಿಸುತ್ತಿರುವ ಹಲವಾರು ಬಿಕ್ಕಟ್ಟುಗಳನ್ನು ಪರಿಹರಿಸುವ ಬಗ್ಗೆ ಚಿಂತಿಸಲಾರದು. ಇದಕ್ಕಿಂತ ದೊಡ್ಡ ದುರಾದೃಷ್ಟ ಇರಲು ಸಾಧ್ಯವೇ?. ರಾಜ್ಯ ಸಭೆಯಲ್ಲಿಯ ಹಿರಿಯ ಕಾಂಗ್ರೆಸ್ ನಾಯಕರು ಪ್ರೇರಣಾದಾಯಕ ಮತ್ತು ಶ್ರೀಮಂತವಾದ ಚರ್ಚೆಗಳನ್ನು ಮಾಡಿದರು ಮತ್ತು ಅವರು ತಮ್ಮ ಅಭಿಪ್ರಾಯಗಳನ್ನು ವಿವರವಾಗಿ ಮಂಡಿಸಿದರು. , ಆದರೆ ಲೋಕ ಸಭೆಯಲ್ಲಿ ಕುಳಿತವರು...ಇದನ್ನು ಕಾಲಕ್ಕೆ ಬಿಡುವುದು ಉತ್ತಮ.

ಗೌರವಾನ್ವಿತ ಸ್ಪೀಕರ್ ಅವರೇ,

ನಾನು .ಪಿ.ಎಫ್. ನಿವೃತ್ತಿ ವೇತನ ಯೋಜನೆಯತ್ತ ನಿಮ್ಮ ಗಮನ ಸೆಳೆಯುತ್ತೇನೆ. ನನ್ನ ಆಡಳಿತದಲ್ಲಿ 2014 ಬಳಿಕ, ಕೆಲವರು ಬಹಳ ಸಣ್ಣ ನಿವೃತ್ತಿ ವೇತನವೆಂದು ರೂಪಾಯಿ 7 ಅಥವಾ 25 ಅಥವಾ 50 ಅಥವಾ 250 ರೂ. ಪಡೆಯುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದವು. ನಮ್ಮ ದೇಶದಲ್ಲಿ ಇದು ಪದ್ಧತಿಯಾಗಿತ್ತು. ಅವರ ನಿವೃತ್ತಿ ವೇತನ ಪಡೆಯಲು ಕಚೇರಿಗೆ ಹೋಗುವುದಕ್ಕಾಗಿ ಅದಕ್ಕಿಂತ ಹೆಚ್ಚಿನ ಹಣವನ್ನು ಅಟೋಗೆ ವ್ಯಯಿಸಬೇಕಾದ ಪರಿಸ್ಥಿತಿಯನ್ನು ನಾನು ಮನಗಂಡೆ. ಯಾರೊಬ್ಬರೂ ಅದಕ್ಕಾಗಿ ಬೇಡಿಕೆಯನ್ನಾಗಲೀ, ಆಗ್ರಹವನ್ನಾಗಲೀ ಮಂಡಿಸಲಿಲ್ಲ. ಸ್ಪೀಕರ್ ಸರ್ ನನಗೆ ಯಾವ ಕಾರ್ಮಿಕ ಸಂಘಟನೆಗಳಿಂದಲೂ ಅದಕ್ಕೆ ಅರ್ಜಿ ಬರಲಿಲ್ಲ. ನಾವು ತಿದ್ದುಪಡಿ ತಂದೆವು ಮತ್ತು ಕನಿಷ್ಠ ನಿವೃತ್ತಿ ವೇತನ ರೂಪಾಯಿ 1000 ಎಂದು ಖಚಿತಪಡಿಸಿದೆವು. ನಿರ್ಧಾರವನ್ನು ಯಾವುದೇ ಕೋರಿಕೆಯ ಮೇಲೆ ಜಾರಿ ಮಾಡಲಾದುದಲ್ಲ. ಯಾವುದೇ ರೈತ ಸಂಘಟನೆ ಸಣ್ಣ ರೈತರಿಗೆ ಕನಿಷ್ಟ ಹಣಕಾಸು ನೆರವು ನೀಡಬೇಕು ಎಂದು ನನ್ನನ್ನು ಕೇಳಿರಲಿಲ್ಲ. ಆದರೂ, ನಾವು ಅವರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನಾ ಮೂಲಕ ಹಣಕಾಸು ಬೆಂಬಲವನ್ನು ಖಾತ್ರಿಪಡಿಸಿದೆವು.

ಗೌರವಾನ್ವಿತ ಸ್ಪೀಕರ್ ಸರ್,

ಯಾವುದೇ ಆಧುನಿಕ ಸಮಾಜಕ್ಕೆ ಪರಿವರ್ತನೆ ಬಹಳ ಅಗತ್ಯ. ನಾವು ಹಿಂದೆಯೂ ಹೇಗೆ ಪ್ರತಿಭಟನೆಗಳು ನಡೆದಿದ್ದವು ಎಂಬುದನ್ನು ಸಾಕ್ಷೀಕರಿಸಿದ್ದೇವೆ. ಆದರೆ ಶ್ರೇಷ್ಠ ನಾಯಕರಾದ ರಾಜಾ ರಾಮ ಮೋಹನ್ ರಾಯ್, ಈಶ್ವರ ಚಂದ್ರ ವಿದ್ಯಾಸಾಗರ, ಜ್ಯೋತಿಭಾ ಫುಲೆ, ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಇತರ ಹಲವಾರು ಕ್ರಾಂತಿಕಾರಿಗಳು ಪ್ರವಾಹದ ವಿರುದ್ಧ ಈಜಿದರು ಮತ್ತು ಎಲ್ಲಾ ವೈರುಧ್ಯಗಳ ನಡುವೆ ಸಮಾಜದಲ್ಲಿ ಬಹಳ ದೊಡ್ಡ ಸಾಮಾಜಿಕ ಸುಧಾರಣೆಗಳಿಗೆ ನಾಂದಿ ಹಾಡಿದರು. ಇರುವ ವ್ಯವಸ್ಥೆಯಲ್ಲಿ ನೀವು ಯಾವುದೇ ಬದಲಾವಣೆಯನ್ನು ತರಲು ಉದ್ದೇಶಿಸಿದರೂ ಆರಂಭದಲ್ಲಿ ಇದಕ್ಕೆ  ವಿರೋಧವಿರುತ್ತದೆ. ಆದರೆ ಕಾಲಕ್ರಮೇಣ ಅವುಗಳ ಹಿಂದಿನ ಸತ್ಯ ಅರಿವಾಗುತ್ತಿದ್ದಂತೆ ಹೊಸ ನೀತಿ ನಿಯಮಗಳನ್ನು ಅವರು  ಅಂಗೀಕರಿಸುತ್ತಾರೆ.

ಭಾರತ ಬಹಳ ದೊಡ್ಡ ದೇಶವಾಗಿರುವುದರಿಂದ, ಯಾವುದೇ ಒಂದು ನಿರ್ಧಾರದ ಬಗ್ಗೆ ಒಟ್ಟಾಭಿಪ್ರಾಯಕ್ಕೆ ಇಡೀ ದೇಶ ಬರುವುದು ಅಸಾಧ್ಯದ ಸಂಗತಿ. ದೇಶ ವೈವಿಧ್ಯದಲ್ಲಿ ಶ್ರೀಮಂತವಾಗಿದೆ. ಕೆಲವು ಭಾಗಗಳಲ್ಲಿ ಇದರಿಂದ ಬಹಳ ಪ್ರಯೋಜನ ಸಾಧ್ಯವಾಗಬಹುದು, ಕೆಲವು ಭಾಗಗಳಿಗೆ ಇದು ಕಡಿಮೆ ಪ್ರಯೋಜನಕಾರಿಯಾಗಿರಬಹುದು. ಮತ್ತು ಕೆಲವು ಭಾಗಗಳು ಮೊದಲಿನ ಯೋಜನೆಗಳಲ್ಲಿದ್ದ ಸವಲತ್ತುಗಳಿಂದ ವಂಚಿತವಾಗಲೂಬಹುದು. ನಾವು ವಿಸ್ತಾರ ವ್ಯಾಪ್ತಿಯ ಹಿತಾಸಕ್ತಿಗಳಲ್ಲಿ ನಂಬಿಕೆ ಇರಿಸಿದೇವೆ. ಮತ್ತು ಆದುದರಿಂದ ತೆಗೆದುಕೊಂಡ ಎಲ್ಲಾ ನಿರ್ಧಾರಗಳೂ ಸಾಮಾಜಿಕ ಕಲ್ಯಾಣದ ದೃಷ್ಟಿಯಿಂದಸರ್ವ ಜನ ಹಿತಾಯ, ಸರ್ವ ಜನ ಸುಖಾಯಕ್ಕಾಗಿ ಕೈಗೊಂಡಂತಹವಾಗಿವೆ.

ಗೌರವಾನ್ವಿತ ಸ್ಪೀಕರ್,

ಯಾರಾದರೂ ಇದಕ್ಕಾಗಿ ಕೇಳಿದ್ದರೇ?” ಎಂಬ ಚಿಂತನೆಯನ್ನು ಅಂಗೀಕರಿಸಲು ನಾನು ನಿರಾಕರಿಸುತ್ತೇನೆ. ನಮ್ಮ ದೇಶವಾಸಿಗಳು ಯಾವುದಕ್ಕಾದರೂ ಬೇಡಿಕೆ ಸಲ್ಲಿಸಲು ನಾವೇನು ಸರ್ವಾಧಿಕಾರಿಗಳೇ?.ನಾವು ಅವರು ಬೇಡಿಕೆ ಮಂಡಿಸಬೇಕು ಎಂಬ ಶರತ್ತನ್ನು ವಿಧಿಸುವುದೇಕೆ?. ರೀತಿಯ ಚಿಂತನಾಕ್ರಮ ನಮ್ಮ ಪ್ರಜಾಸತ್ತಾತ್ಮಕ ಹಾದಿಗೆ ಸರಿಹೊಂದುವುದಿಲ್ಲ ಗೌರವಾನ್ವಿತ ಸ್ಪೀಕರ್ ಅವರೇ. ಸರಕಾರ ಸಹಾನುಭೂತಿಯಿಂದ ಇರಬೇಕಾಗುತ್ತದೆ. ಸರಕಾರವು ಪ್ರಜಾಸತ್ತಾತ್ಮಕ ರೀತಿಯಲ್ಲಿ ಜನರ ಕಲ್ಯಾಣದ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಮುಂದೆ ಬರಬೇಕಾಗುತ್ತದೆ. ಭಾರತದ ಜನತೆ ಆಯುಷ್ಮಾನ್ ಯೋಜನೆ ಬಗ್ಗೆ ಕೋರಿಕೆ ಮಂಡಿಸಿರಲಿಲ್ಲ. ಆದರೆ ನಾವು ವೈದ್ಯಕೀಯ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಬಡವರನ್ನು ರಕ್ಷಿಸಲು ಇದು ಅಗತ್ಯ ಎಂದು ಮನಗಂಡೆವು. ದೇಶವಾಸಿಗಳು ತಮ್ಮ ಬ್ಯಾಂಕ್ ಖಾತೆಗಳನ್ನು ಹೊಂದಲು ಪ್ರತಿಭಟನಾ ಮೆರವಣಿಗೆಗಳನ್ನು ಸಂಘಟಿಸಿರಲಿಲ್ಲ. ಅಥವಾ ಮನವಿಗಳನ್ನು ಸಲ್ಲಿಸಿರಲಿಲ್ಲ. ನಾವು ಘೋಷಿಸಿದ ಜನ ಧನ್ ಯೋಜನೆ ಅಡಿಯಲ್ಲಿ ಅವರು ತಮ್ಮ ವೈಯಕ್ತಿಕ ಖಾತೆಗಳನ್ನು ಪಡೆದುಕೊಂಡರು.

ಸ್ವಚ್ಛ ಭಾರತವನ್ನು ಯಾರಾದರೂ ಕೇಳಿದ್ದರೇ? ದೇಶವು ತಾನಾಗಿಯೇ ಇದನ್ನು ಅಳವಡಿಸಿಕೊಂಡಿತು ಮತ್ತು ಸ್ವಚ್ಛ ಭಾರತ ಆಂದೋಲನವನ್ನು ಮುಂದೆ ಕೊಂಡೊಯ್ದಿತು. ತಮ್ಮ ಮನೆಗಳಿಗೆ ಶೌಚಾಲಯ ಬೇಕು ಎಂದು ಯಾರಾದರೂ ನಮಗೆ ಹೇಳಿದ್ದರೇ....ಇಲ್ಲ, ಯಾರೊಬ್ಬರೂ ಹೇಳಿರಲಿಲ್ಲ.. ಅದರೆ ನಾವು ಮುಂದಡಿ ಇಟ್ಟೆವು ಮತ್ತು 10 ಕೋಟಿ ಮನೆಗಳಲ್ಲಿ ಶೌಚಾಲಯಗಳ ನಿರ್ಮಾಣವನ್ನು ಕೈಗೆತ್ತಿಕೊಂಡೆವು. ಇದು ಪ್ರಜಾಪ್ರಭುತ್ವ, ಸರ್ವಾಧಿಕಾರ ಅಲ್ಲ. ನಾನು ನಮ್ಮ ಜನರ ಭಾವನೆಗಳನ್ನು ಮತ್ತು ಅವಶ್ಯಕತೆಗಳನ್ನು ಮನಗಂಡೆ. ಮತ್ತು ಅವರ ಆಶೋತ್ತರಗಳನ್ನು ಈಡೇರಿಸಲು ಪೂರಕ ಕ್ರಮಗಳನ್ನು ನಾವು ಕೈಗೊಂಡೆವು. ನಾವು ಅವರ ಹಕ್ಕು ಆಗಿರುವ ಅಂಶಗಳಿಗೂ ಅವರು ಕೋರಿಕೆ ಮಂಡಿಸುವಂತೆ ಮಾಡಿದರೆ, ನಾವು ನಾಗರಿಕರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲಾರೆವು. ನಾವು ನಮ್ಮ ದೇಶದ ಅಭಿವೃದ್ಧಿಗಾಗಿ ಮಾಲಕತ್ವದ ಮತ್ತು ಹಕ್ಕುಗಳ ಚಿಂತನೆಯನ್ನು ಅವರಲ್ಲಿ ಉತ್ತೇಜಿಸಬೇಕು. ಸೌಲಭ್ಯಗಳಿಗಾಗಿ ಕೋರಿಕೆ ಸಲ್ಲಿಸುವಂತೆ ನಾವು ಬಲವಂತ ಮಾಡಿದರೆ ನಾಗರಿಕರು ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ನಮ್ಮ ನಾಗರಿಕರಲ್ಲಿ ಆತ್ಮ ವಿಶ್ವಾಸ ವರ್ಧಿಸಲು, ಸಾಮರ್ಥ್ಯ ಹೆಚ್ಚಿಸಲು ಸಾಕಷ್ಟು ಕ್ರಮಗಳನ್ನು ನಾವು  ಕೈಗೊಡಿದ್ದೇವೆ. ದಾದಾ..ಒಂದು ನಿಮಿಷ ಕೇಳಿ.. ನಾನು ಅದನ್ನೇ ಹೇಳುತ್ತಿದ್ದೇನೆ. ಅವರು ಆಶಿಸಿದರೆ ಹಳೆಯ ಸೌಲಭ್ಯಗಳನ್ನೇ ಬಳಸಿಕೊಳ್ಳಬಹುದು. ಹೊಸ ಯೋಜನೆಗಳನ್ನು ಅಳವಡಿಸಿಕೊಳ್ಳಲೇ ಬೇಕು ಎಂಬ ನಿರ್ಬಂಧ ಇಲ್ಲ.ಹಳೆಯ ಪ್ರಸ್ತಾವನೆಗಳನ್ನು ತೆಗೆದು ಹಾಕಿಲ್ಲ. ಅವರು ಅವುಗಳೊಂದಿಗೆ ಮುಂದೆ ಸಾಗಬಹುದು, ಇದು ನಾನು ವಿವರಿಸಲು ಯತ್ನಿಸುತ್ತಿರುವುದು.  

ಗೌರವಾನ್ವಿತ ಸ್ಪೀಕರ್ ಸರ್,

ನಮಗೆಲ್ಲಾ ಗೊತ್ತಿದೆನಿಂತ ನೀರು ಹಲವಾರು ರೋಗಗಳಿಗೆ ಕಾರಣವಾಗುತ್ತದೆ ಎಂಬುದು. ಹರಿಯುವ ನೀರು ಜೀವಿಗಳನ್ನು ಮತ್ತು ಜೀವನವನ್ನು ಶ್ರೀಮಂತವಾಗಿಸುತ್ತದೆ ಮತ್ತು ಸಂತೋಷವನ್ನು ತರುತ್ತದೆ. ಪ್ರಸ್ತುತವಾಗಿರುವುದು ಏನೇ ಇರಲಿ, ಅದು ಮುಂದುವರಿಯಲಿ. ಯಾರಾದರೂ ಏನಾದರೊಂದು ಕೇಳಿದಾಗ ಮಾತ್ರವೇ ನಾವು ಏನಾದರೂ ಕ್ರಮ ಕೈಗೊಳ್ಳಬೇಕು ಎಂಬುದು ಸರಿಯಲ್ಲ. ನಾವು ಸಮಯದ ಅವಶ್ಯಕತೆಗಳಿಗೆ ತಕ್ಕಂತೆ ಜವಾಬ್ದಾರಿಯುತ ನಿರ್ಧಾರಗಳನ್ನು ಕೈಗೊಳ್ಳಬೇಕು. ಯಥಾ ಸ್ಥಿತಿ.. ಮನೋಭಾವ ಯಾವುದೇ ದೇಶಕ್ಕೆ ಹಾನಿ ಮಾಡುವಲ್ಲಿ ಬಹಳ ದೊಡ್ಡ ಪಾತ್ರವನ್ನು ವಹಿಸುತ್ತದೆ. ಜಗತ್ತು ಈಗ ಬದಲಾಗುತ್ತಿದೆ. ನಾವು ಇನ್ನೂ ಎಷ್ಟು ಧೀರ್ಘ ಕಾಲ ಯಥಾಸ್ಥಿತಿಗೆ ಅಂಟಿಕೊಂಡಿರಬೇಕು. ಇಂತಹ ಅಂಟಿಕೊಂಡ ಮನೋಭಾವದೊಂದಿಗೆ ನಾವು ನಮ್ಮನ್ನು ಬದಲಾಯಿಸಿಕೊಳ್ಳಲಾರೆವು. ಮತ್ತು ಇದರಿಂದ ರಾಷ್ಟ್ರದ ಯುವಜನತೆ ಕಾಯುತ್ತ ಕುಳಿತುಕೊಳ್ಳಲಾರರು.

ಇಂದು, ನಾನು ನಾವು ಯಥಾಸ್ಥಿತಿಗೆ ಅಂಟಿಕೊಂಡರೆ ಏನಾಗಬಹುದು ಎಂಬುದರ ಬಗ್ಗೆ ಉಪಾಖ್ಯಾನಗಳನ್ನು, ಕಥೆಗಳನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಇದು 40-50 ವರ್ಷಗಳ ಹಿಂದಿನ ಕಥೆ. ನಾನು ಕೂಡಾ ಇದನ್ನು ಬೇರೊಬ್ಬರಿಂದ ಕೇಳಿಕೊಂಡದ್ದರಿಂದ ದಿನಾಂಕಗಳ ಬಗ್ಗೆ ಖಚಿತವಿಲ್ಲ. ನಾನು ಆಗ ಕೇಳಿದ್ದನ್ನು ಮತ್ತು ಇಂದು ನೆನಪಾದುದನ್ನು ಹಂಚಿಕೊಳ್ಳುತ್ತೇನೆ. ಅರವತ್ತರ ದಶಕದಲ್ಲಿ ರಾಜ್ಯದ ಕಾರ್ಮಿಕರ ವೇತನ ಹೆಚ್ಚಿಸುವುದಕ್ಕಾಗಿ ತಮಿಳುನಾಡಿನಲ್ಲಿ ಆಯೋಗವೊಂದನ್ನು ರಚಿಸಲಾಗಿತ್ತು. ಆಯೋಗದ ಅಧ್ಯಕ್ಷರು ಅತ್ಯಂತ ರಹಸ್ಯವಾದ ಲಕೋಟೆಯನ್ನು ಸ್ವೀಕರಿಸಿದರು. ಅದರಲ್ಲಿ ಅತ್ಯಂತ ರಹಸ್ಯವಾದ ಸಂಗತಿ ಅಡಗಿತ್ತು. ಅವರು ಅದರಲ್ಲಿ ಒಂದು ಅರ್ಜಿ ಇರುವುದನ್ನು ನೋಡಿದರು. ವ್ಯವಸ್ಥೆಯಲ್ಲಿ ಹಲವಾರು ವರ್ಷ ಪ್ರಾಮಾಣಿಕತೆಯಿಂದ ದುಡಿದರೂ ತನಗೆ  ಯಾವುದೇ ವೇತನ ಹೆಚ್ಚಳ ಆಗಿರಲಿಲ್ಲ ಆದುದರಿಂದ  ವೇತನ ಹೆಚ್ಚಿಸಬೇಕು ಎಂದು ವ್ಯಕ್ತಿಯೊಬ್ಬರು ಪತ್ರದ ಮೂಲಕ ವಿನಂತಿಸಿಕೊಂಡಿದ್ದರು. ಅಧ್ಯಕ್ಷರು ವ್ಯಕ್ತಿಗೆ ಉತ್ತರ ಬರೆದು ಅವರ ವಿವರಗಳನ್ನು ಒದಗಿಸುವಂತೆ ತಿಳಿಸಿದರು. ವ್ಯಕ್ತಿ ತಾನು ಸಚಿವಾಲಯದ ಮುಖ್ಯ ಕಾರ್ಯದರ್ಶಿ ಅವರ ಕಚೇರಿಯಲ್ಲಿ  ಸಿ.ಸಿ..ಆಗಿರುವುದಾಗಿ ಮರಳಿ ಉತ್ತರ  ಬರೆದರು. ಅಧ್ಯಕ್ಷರಿಗೆ ಸಿ.ಸಿ..ಬಗ್ಗೆ ಯಾವುದೇ ಸುಳಿವು ಇರದ್ದರಿಂದ ಕೆಲಸದ ಪಾತ್ರದ ಬಗ್ಗೆ ಇನ್ನಷ್ಟು ವಿವರಗಳನ್ನು ಒದಗಿಸುವಂತೆ ಮತ್ತೆ ಉತ್ತರ ಬರೆದರು.

ಆದರೆ ವ್ಯಕ್ತಿಯು ತಾನು ನಿಯಮಗಳಿಂದ ಬಂಧಿತನಾಗಿರುವುದರಿಂದ ತಾನು ವಿವರಗಳನ್ನು  ಹಂಚಿಕೊಳ್ಳಲಾರೆ, ತಾನು ಬಗ್ಗೆ ವಿವರಗಳನ್ನು 1975 ಬಳಿಕವೇ ನೀಡಬಹುದಾಗಿದೆ ಎಂದು ಉತ್ತರ ಬರೆದರು. ಹಾಗಿದ್ದರೆ ನೀವು ನನಗೇಕೆ ಈಗ ಕಿರುಕುಳ  ಕೊಡುತ್ತಿದ್ದೀರಿ. ಇದಕ್ಕೆ ಬದಲು ನೀವು 1975ರಲ್ಲಿ ಕಾರ್ಯಾಚರಣೆಗೆ ಬರುವ ಆಯೋಗವನ್ನು ಭೇಟಿಯಾಗಬೇಕು ಎಂದು ಅಧ್ಯಕ್ಷರು ಉತ್ತರಿಸಿದರು. ಆಗ ವ್ಯಕ್ತಿವಿಷಯ ಕೈಮೀರಿ ಹೋಗುತ್ತಿದೆ ಎಂದು ಅರಿತು ವಿವರಗಳನ್ನು ಹಂಚಿಕೊಳ್ಳಲು ಒಪ್ಪಿಕೊಂಡರು. ಬಳಿಕ ಅವರು ಮತ್ತೆ ಉತ್ತರ ಬರೆದರು. ಅದರಲ್ಲಿ ಅವರು ತಾನು ಮುಖ್ಯ ಕಾರ್ಯದರ್ಶಿಗಳ ಕಚೇರಿಯಲ್ಲಿ ಹಲವಾರು ವರ್ಷಗಳಿಂದ ಸಿ.ಸಿ..ಆಗಿ ಕೆಲಸ ಮಾಡುತ್ತಿದ್ದೇನೆ ಮತ್ತು ಸಿ.ಸಿ..ಅಂದರೆ ಚರ್ಚಿಲ್ ಸಿಗಾರ್ ಸಹಾಯಕ (ಚರ್ಚಿಲ್ ಸಿಗಾರ್ ಅಸಿಸ್ಟೆಂಟ್ ) ಎಂದರ್ಥ. ವಸ್ತುಸ್ಥಿತಿ  ಏನೆಂದರೆ 1940 ರಲ್ಲಿ ಬ್ರಿಟನ್ನಿನಲ್ಲಿ ಚರ್ಚಿಲ್ ಪ್ರಧಾನ ಮಂತ್ರಿಯಾದಾಗ ಅವರು ಬಳಸುತ್ತಿದ್ದ ಸಿಗಾರನ್ನು ಅವರಿಗೆ ತ್ರಿಚ್ಚಿಯಿಂದ ಪೂರೈಸಲಾಗುತ್ತಿತ್ತು. ಮತ್ತು ಸಿ.ಸಿ.. ಸಿಗಾರ್ ಪೂರೈಕೆಯನ್ನು ಖಾತ್ರಿಪಡಿಸುವುದಕ್ಕೆ ಜವಾಬ್ದಾರರಾಗಿದ್ದರು. ಆದುದರಿಂದ ಸಿ.ಸಿ.. ಹುದ್ದೆಯು ತ್ರಿಚ್ಚಿಯಿಂದ ಸಿಗಾರ್ ಪೂರೈಕೆಯನ್ನು ಖಾತ್ರಿಪಡಿಸುವುದಕ್ಕಾಗಿ ಇತ್ತು. 1945ರಲ್ಲಿ ಚರ್ಚಿಲ್ ಚುನಾವಣೆಯಲ್ಲಿ ಸೋತರು, ಆದರೂ ಹುದ್ದೆ ಹಾಗೆಯೇ ಉಳಿಯಿತು ಮತ್ತು ಪೂರೈಕೆಯೂ ಮುಂದುವರೆಯಿತು. ಭಾರತ ಸ್ವಾತಂತ್ರ್ಯ ಪಡೆಯಿತು. ಬಳಿಕವೂ ಹುದ್ದೆ ಮುಂದುವರೆಯಿತು ಸ್ಪೀಕರ್ ಸರ್. ಚರ್ಚಿಲ್ ಅವರಿಗೆ ಸಿಗಾರ್ ಪೂರೈಕೆ ಖಾತ್ರಿಪಡಿಸುವ ಜವಾಬ್ದಾರಿಯ ಹುದ್ದೆ ಮುಖ್ಯ ಕಾರ್ಯದರ್ಶಿಗಳ ಕಚೇರಿಯಲ್ಲಿ ಮತ್ತೂ ಮುಂದುವರೆಯಿತು ಮತ್ತು ಅದರಿಂದಾಗಿ ಮನುಷ್ಯ ಹಕ್ಕುದಾರಿಕೆಯಿಂದ ತನ್ನ ವೇತನದಲ್ಲಿ ಹೆಚ್ಚಳವನ್ನು ಆಗ್ರಹಿಸಿದ್ದ ಮತ್ತು ಭಡ್ತಿಯನ್ನೂ ಅಪೇಕ್ಷಿಸಿದ್ದರು.

ಈಗ ನೋಡಿ, ಯಥಾ ಸ್ಥಿತಿಯ ಪರಿಸ್ಥಿತಿ ಇದು. ಯಥಾ ಸ್ಥಿತಿ ಯಾಕೆ ಬೇಕು ಎಂದು ಪ್ರಶ್ನಿಸುವುದಕ್ಕೆ ಮತ್ತು ಹೊಸ ವ್ಯವಸ್ಥೆಯತ್ತ ಮರು ನೋಟ ಮಾಡುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ. ನಾನು ಮುಖ್ಯಮಂತ್ರಿಯಾದಾಗ, ಬಲೂನುಗಳನ್ನು ಹಾರಿ ಬಿಡಲಾದ ಮತ್ತು ಹಡಗುಗಳನ್ನು ಉಡಾಯಿಸಿದ ಸಂಖ್ಯೆಯ  ಬಗ್ಗೆ ದಿನನಿತ್ಯದ ವರದಿಗಳನ್ನು ಸ್ವೀಕರಿಸುತ್ತಿದ್ದೆ. ಬಹುಷಃ ಇದು ಎರಡನೆಯ ಮಹಾಯುದ್ದದ ಸಂದರ್ಭದಲ್ಲಿ ಆರಂಭವಾದುದಿರಬೇಕು. ಮತ್ತು ಅದು ಪದ್ಧತಿಯಂತೆ ಮುಂದುವರಿದುಕೊಂಡು ಬಂದಿತ್ತು. ಕಲ್ಪಿಸಿಕೊಳ್ಳಿ ಇಂತಹ ಪದ್ಧತಿಗಳು ನಮ್ಮ ವ್ಯವಸ್ಥೆಯಲ್ಲಿ ಈಗಲೂ ಎಲ್ಲಿಯಾದರೂ ಬೇರು ಬಿಟ್ಟಿರಬಹುದು. ನಾವು ರಿಬ್ಬನ್ ಗಳನ್ನು ತುಂಡರಿಸುವುದರಲ್ಲಿ, ದೀಪ ಬೆಳಗಿಸುವುದರಲ್ಲಿ ಮತ್ತು ಫೋಟೋಗೆ ನಿಲ್ಲುವುದರಲ್ಲಿ ಸಂತೋಷ ಕಾಣುತ್ತೇವೆ. ಮತ್ತು ಅದಷ್ಟು ಸಾಕೇ. ನಾವು ದೇಶವನ್ನು ಬದಲಿಸುವುದರಲ್ಲಿ ಪ್ರತಿಯೊಂದು ಜವಾಬ್ದಾರಿಯುತ ಪ್ರಯತ್ನಗಳನ್ನು ಮಾಡಬೇಕು. ತಪ್ಪುಗಳು ಆಗಬಹುದು. ಆದರೆ ಉದ್ದೇಶ ಒಳ್ಳೆಯದೇ ಆಗಿದ್ದರೆ, ಫಲಿತಾಂಶಗಳೂ ಉತ್ತಮವಾಗಿಯೇ ಇರುತ್ತವೆ. ಕೆಲವೊಮ್ಮೆ ನಾವು ಅಸಮಾನವಾದುದೊಂದನ್ನು ಕಳೆದುಕೊಳ್ಳಬಹುದು. ನನಗೆ ಖಚಿತವಾಗಿ ಗೊತ್ತಿದೆ, ನೀವು ಪ್ರಮಾಣ ಪತ್ರಗಳನ್ನು ದೃಢೀಕರಿಸಲು ಕಾರ್ಪೋರೇಟರುಗಳ ಮನೆಯ ಮುಂದೆ ಬಹಳ ದೊಡ್ಡ ಸರತಿ ಸಾಲು ಇರುತ್ತಿದ್ದುದನ್ನು ಗಮನಿಸಿರುತ್ತೀರಿ. ಅವರು ದಾಖಲೆಗಳಿಗೆ ಮುದ್ರೆ ಹಾಕದಿದ್ದರ, ವಾಸ್ತವದಲ್ಲಿ ಅದನ್ನು ಅವರು ತಾವೇ ಮಾಡುತ್ತಿರಲಿಲ್ಲ, ಅವರ ಮಕ್ಕಳೋ, ಸಂಬಂಧಿಕರೋ ಅವರಿಗಾಗಿ ಅದನ್ನು ಮಾಡುತ್ತಿದ್ದರು, ಮತ್ತು ವ್ಯವಸ್ಥೆ ಬಹಳ ಹಿಂದಿನಿಂದಲೂ ಮುಂದುವರಿದುಕೊಂಡು ಬಂದಿತ್ತು ಮತ್ತು ಯಾರೊಬ್ಬರೂ ಇದನ್ನು ಪ್ರಶ್ನಿಸಿರಲಿಲ್ಲ. ನಾನು ಅಧಿಕಾರ ಸ್ವೀಕರಿಸಿದಾಗ, ನಾವು ನಮ್ಮ ನಾಗರಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳೋಣ ಎಂದು ಹೇಳಿದೆ, ಮತ್ತು ಅದರಿಂದಾಗಿ ದೃಢೀಕರಣದ ಪದ್ಧತಿಯನ್ನು ತೆಗೆದು ಹಾಕಿದೆವು. ಜನರಿಗೆ ಇದರಿಂದ ಪ್ರಯೋಜನವಾಯಿತು. ನಾವು ಪರಿವರ್ತನೆಯತ್ತ ಮತ್ತು ಸುಧಾರಣೆಗಳತ್ತ ಸಾಗುವ ಪ್ರಯತ್ನಗಳನ್ನು, ಕೆಲಸಗಳನ್ನು  ಮಾಡಬೇಕು.

ನಾನು ಈಗಲೂ ನಮ್ಮ ಸಂದರ್ಶನ ಪ್ರಕ್ರಿಯೆಯ ಬಗ್ಗೆ ಗಂಭೀರವಾದ ವಿನೋದಪ್ರಜ್ಞೆಯನ್ನು  ಹೊಂದಿದ್ದೇನೆ. ಓರ್ವರು ಬಾಗಿಲಿನಿಂದ ಒಳ ಬರುತ್ತಾರೆ. ಮೂರು ಮಂದಿ ತೀರ್ಪುಗಾರರಂತೆ ಕುಳಿತಿರುತ್ತಾರೆ. ಅವರು ವ್ಯಕ್ತಿಯ ಮನಸ್ಥಿತಿಯನ್ನು ಓದುತ್ತಾರೆ. ಅವರು ಕೆಲವೊಮ್ಮೆ ಹೆಸರನ್ನು ಕೂಡಾ ಸರಿಯಾಗಿ ಕೇಳುವುದಿಲ್ಲ. ಮತ್ತು ಅವರು ಹೊರಗೆ ಹೋಗುತ್ತಾರೆ. ಸಂದರ್ಶನ ಕರೆ ಎಂದರೆ ಇಂತಹದ್ದು. ಅದರಿಂದ ಇಂತಹ ಆದೇಶಗಳು ಹೊರಬೀಳುತ್ತವೆ. ಬನ್ನಿ ಇಂತಹ ಗಿಮಿಕ್ಸ್ ಯಾಕೆ?. ಆತನ ಶಿಕ್ಷಣದ ಬಗ್ಗೆ ಮತ್ತು ಇತರ ಅರ್ಹತೆಗಳ ಬಗ್ಗೆ ಯಾಕೆ ದತ್ತಾಂಶ ಆಧಾರಗಳನ್ನು ಸೃಜಿಸಬಾರದು?. ಕಂಪ್ಯೂಟರ್ ಮೆರಿಟ್ ಪಟ್ಟಿಯನ್ನು ತಯಾರಿಸಲಿ. ವರ್ಗ 3 ಮತ್ತು 4 ಸಿಬ್ಬಂದಿಗಳನ್ನು ಆಯ್ಕೆ ಪ್ರಕ್ರಿಯೆಯಲ್ಲಿ  ವೈಫಲ್ಯದ ಪದ್ದತಿಯನ್ನು   ಅನುಸರಿಸಲಾಗುತ್ತಿತ್ತು. ಮತ್ತು ಜನರಿಗೂ ಉದ್ಯೋಗಗಳು ಮೆಚ್ಚುಗೆ ಮೇಲೆ .ಮಾತ್ರವೇ ಸಿಗುತ್ತದೆ ಎಂಬ ತಪ್ಪಾದ ತಿಳುವಳಿಕೆ ಇತ್ತು. ನಾವು ಪದ್ದತಿಯನ್ನೂ ತೆಗೆದು ಹಾಕಿದೆವು.

ನನ್ನ ಅಭಿಪ್ರಾಯದ ಪ್ರಕಾರ, ನಾವು ನಮ್ಮ ದೇಶದಲ್ಲಿ ಬದಲಾವಣೆಗಳನ್ನು ತರಬೇಕು. ವೈಫಲ್ಯಗಳ ಹೆದರಿಕೆಯಿಂದಾಗಿ ಯಥಾಸ್ಥಿತಿಯನ್ನು ಜನತೆ ಒಪ್ಪಿಕೊಳ್ಳುವುದು ದೇಶಕ್ಕೆ ಒಳ್ಳೆಯದಲ್ಲ. ನಾವು ವ್ಯವಸ್ಥೆಯನ್ನು ಬದಲು ಮಾಡಲು ಪ್ರಯತ್ನಗಳನ್ನು ಮಾಡಬೇಕು. ನಾವು ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ತರಬೇಕು.

ಗೌರವಾನ್ವಿತ ಸ್ಪೀಕರ್,

ನಮ್ಮ ದೇಶದಲ್ಲಿ ಕೃಷಿ ಮತ್ತು ಹೈನು ನಮ್ಮ ಪ್ರಾಚೀನ ಪರಂಪರೆ ಮತ್ತು ನಮ್ಮ ಸಂಸ್ಕೃತಿಯ ಭಾಗ. ಇದು ಮುಖ್ಯ ಕಾರ್ಯಚಟುವಟಿಕೆಯಾಗಿತ್ತು. ಇದರಿಂದಾಗಿ ನಮ್ಮ ರೈತರು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವಲ್ಲಿ ಬಹಳ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ನಮ್ಮ ಋಷಿ ಮುನಿಗಳು ಹಲವಾರು ಪ್ರಾಚೀನ ಗ್ರಂಥಗಳಲ್ಲಿ ಕೃಷಿಯ ವಿಷಯಗಳನ್ನು ಬರೆದಿದ್ದಾರೆ. ಬಹಳಷ್ಟು ಅತ್ಯುತ್ತಮ ಅನುಭವಗಳನ್ನು ದಾಖಲಿಸಲಾಗಿದೆ. ನಮ್ಮ ದೊರೆಗಳು ಕೂಡಾ ಹೊಲ ಉಳುವುದನ್ನು ತಿಳಿದಿದ್ದರು. ಜನಕ ದೇವನ ಕಥೆಯನ್ನು ಅಥವಾ ಕೃಷ್ಣ ದೇವರು ಮತ್ತು ಅವನ ಸಹೋದರ ಬಲರಾಮನ ಕಥೆಯನ್ನು ಕೇಳದವರಾರು.ಪ್ರತೀ ಸಮೃದ್ಧ, ಶ್ರೀಮಂತ ಕುಟುಂಬವೂ ಕೃಷಿ ಮತ್ತು ಹೈನುಗಾರಿಕೆಯಲ್ಲಿ ತೊಡಗಿಕೊಂಡಿತ್ತು. ಅದು ಬರೇ ಬೆಳೆ ಬೆಳೆಯುವುದಕ್ಕೆ ಸೀಮಿತವಾದುದಲ್ಲ. ಕೃಷಿಯು ಭಾರತದ ಸಂಸ್ಕೃತಿಯ ಮಹತ್ವದ ಭಾಗವಾಗಿತ್ತು ಮತ್ತು ಸಾಮಾಜಿಕ ರಚನೆಯ ಅಂಗವಾಗಿತ್ತು. ಮತ್ತು ಅದರಿಂದಾಗಿಯೇ ನಾವು ಅದು ನಮ್ಮ ಸಂಸ್ಕೃತಿಯಲ್ಲಿ ಅನುವಂಶೀಯವಾಗಿದೆ ಎಂದು ಪುನರುಚ್ಚರಿಸುತ್ತಿರುವುದು. ನಮ್ಮ ಹಬ್ಬಗಳು, ಜಯ ಮತ್ತು ಇತರ ಎಲ್ಲಾ ಪವಿತ್ರ ಸಂದರ್ಭಗಳು ಬೆಳೆಗೆ ಸಂಬಂಧಿಸಿದವಾಗಿವೆ. ಮತ್ತು ಕೃಷಿ ವರ್ತುಲಕ್ಕೆ ಸಂಬಂಧಿಸಿದವಾಗಿವೆ. ಇದು ನಮ್ಮ ಸಂಪ್ರದಾಯ. ನಮ್ಮ ಜಾನಪದ ಗೀತೆಗಳು ಮತ್ತು ಸಂಗೀತಗಳು ರೈತರ ಜೀವನ ಮತ್ತು ಆತನ ಬೆಳೆಗಳನ್ನು ಆಧರಿಸಿವೆ. ನಮ್ಮ ಹಬ್ಬಗಳನ್ನು ನಮ್ಮ ಋತುಮಾನದ ಬೆಳೆಗಳನ್ವಯ ಆಚರಿಸಲಾಗುತ್ತದೆ. ಇದು ನಮ್ಮ ದೇಶದ ವಿಶೇಷತೆನಾವು ಆಶೀರ್ವಾದಗಳನ್ನು ಹೇಳುವಾಗ ಮತ್ತು ಶುಭಾಶಯಗಳನ್ನು ಸಲ್ಲಿಸುವಾಗ ನಾವುಧನ ಧಾನ್ಯಶಬ್ದಗಳನ್ನು ಬಳಸುತ್ತೇವೆ, ಇದರ ಅರ್ಥ ಸಂಪತ್ತು ಮತ್ತು ಸಮೃದ್ಧಿ. ಎರಡು ಶಬ್ದಗಳು ವಿಭಜಿಸಲಾಗದಂತಹವು. ಇದು ನಮ್ಮ ಬೆಳೆಗಳಿಗೆ ಇರುವ ಮೌಲ್ಯ ಮತ್ತು ಮಹತ್ವ, ಪ್ರಾಮುಖ್ಯತೆ. ಇವು ನಮ್ಮ ಸಾಮಾಜಿಕ ನೇಯ್ಗೆಯಲ್ಲಿ ಅವಿಭಾಜ್ಯ ಅಂಗವಾಗಿದೆ. ಪ್ರಸ್ತುತ ಪರಿಸ್ಥಿತಿ ಹಳಿತಪ್ಪಿದೆ ಮತ್ತು ನಾವು ಅದರ ಘನತೆಯನ್ನು ಅತ್ಯಂತ ಆದ್ಯತೆಯೊಂದಿಗೆ ಮರುಸ್ಥಾಪನೆ ಮಾಡಬೇಕಾಗಿದೆ.

ಸ್ವಾತಂತ್ರ್ಯಾನಂತರ, ನಮ್ಮ ದೇಶದಲ್ಲಿ 28% ಕೃಷಿ ಕಾರ್ಮಿಕರಿದ್ದರು. ಕಳೆದ ದಶಕದ ಜನಗಣತಿಯಲ್ಲಿ ಸಂಖ್ಯೆ ಶೇ.55 ಕ್ಕೇರಿದೆ. ಇದು ಯಾವುದೇ ದೇಶಕ್ಕೆ ಗಂಭೀರ ಕಳವಳ ತರುವ ಸಂಗತಿ. ಕೃಷಿ ಭೂಮಿಯ ಗಾತ್ರ ಕಡಿಮೆಯಾಗುತ್ತಿರುವುದರಿಂದ ಪ್ರತಿಫಲ ಕೂಡಾ ಗಮನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಮತ್ತು ರೈತರು ಬಹಳಷ್ಟು ಬಿಕ್ಕಟ್ಟನ್ನು ಎದುರಿಸಬೇಕಾಗಿದೆ. ಇಂತಹ ಹತಾಶೆಯ ಪರಿಸ್ಥಿತಿಗಳು ಅವರು ಜೀತದಾಳುಗಳಂತೆ ಇತರರ ಕೃಷಿ ಭೂಮಿಯಲ್ಲಿ ದುಡಿಯುವ ಪರಿಸ್ಥಿತಿಯನ್ನು ತಂದಿಟ್ಟಿದೆ.

ಕೃಷಿ ವಲಯಕ್ಕೆ ಅದಕ್ಕೆ ಅವಶ್ಯ ಇರುವಷ್ಟು ಪ್ರಮಾಣದಲ್ಲಿ ಹೂಡಿಕೆ ಬರುತ್ತಿಲ್ಲ ಎಂಬುದೂ ದುರದೃಷ್ಟಕರ ಸಂಗತಿ. ಸರಕಾರಕ್ಕೆ ಬೇಕಾದಷ್ಟು ಪ್ರಮಾಣದಲ್ಲಿ ಇದನ್ನು ಮಾಡಲಾಗುತ್ತಿಲ್ಲ ಮತ್ತು ನಮ್ಮ ರಾಜ್ಯ ಸರಕಾರಗಳಾಗಲೀ ಅಥವಾ ರೈತರಾಗಲೀ ಬಹಳಷ್ಟನ್ನು ಮಾಡುವಂತಹ ಸ್ಥಿತಿಯಲ್ಲಿ ಇಲ್ಲ ಎಂಬುದೂ ಬೇಸರದ ಸಂಗತಿ. ರೈತರು ತಮ್ಮ ಅವಶ್ಯಕತೆಗಳನ್ನು ಬಹಳ ಕಷ್ಟದಿಂದ ಈಡೇರಿಸಿಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಅವರು ಏನನ್ನು ಸಂಪಾದಿಸುತ್ತಿದ್ದಾರೋ ಅದರಿಂದ ತಮ್ಮ ಕುಟುಂಬದ ಆವಶ್ಯಕತೆಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಆದುದರಿಂದ ಇಲ್ಲಿ ಹೂಡಿಕೆಯ ಅವಶ್ಯಕತೆ ಬಹಳಷ್ಟಿದೆ. ವಲಯದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆಯನ್ನು ಉತ್ತೇಜಿಸದೇ ಇದ್ದರೆ, ನಮ್ಮ ಕೃಷಿ ಕ್ಷೇತ್ರದಲ್ಲಿಯ ಮೂಲಸೌಕರ್ಯವನ್ನು  ಆಧುನೀಕರಿಸುವುದನ್ನು ಅಪೇಕ್ಷಿಸುವುದು ಸಾಧ್ಯವಿಲ್ಲ. ಸಣ್ಣ ರೈತರು ಪ್ರಯೋಜನಗಳನ್ನು ಪಡೆಯುವಂತಹ ಆಧುನಿಕ ಮೂಲಸೌಕರ್ಯವನ್ನು ಅಭಿವೃದ್ಧಿ ಮಾಡುವುದು ಬಹಳ ಮುಖ್ಯ. ನಮ್ಮ ಕೃಷಿ ವಲಯವನ್ನು ಬಲಪಡಿಸಲು ಇದು ಸಕಾಲ. ನಮ್ಮ ರೈತರನ್ನು ಸ್ವಾವಲಂಬಿಯಾಗಿಸುವುದು ಮತ್ತು ಅವರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾದಲು ಸ್ವಾತಂತ್ರ್ಯ ನೀಡುವುದು ಬಹಳ ಮುಖ್ಯ. ನಿಟ್ಟಿನಲ್ಲಿ ನಾವು ಈಗಿನಿಂದಲೇ ಪ್ರಯತ್ನಗಳನ್ನು ಮಾಡಬೇಕು. ಮಾರುಕಟ್ಟೆಯಲ್ಲಿರುವ ಈಗಿನ ಟ್ರೆಂಡ್ ಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ನಾವು ಮಾರುಕಟ್ಟೆ ಏನನ್ನು ಅಪೇಕ್ಷಿಸುತ್ತದೆಯೋ ಅದನ್ನು ಉತ್ಪಾದಿಸಬೇಕು ಮತ್ತು ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ನಮಗೊಂದು ಅವಕಾಶವನ್ನು ಸೃಷ್ಟಿ ಮಾಡಿಕೊಳ್ಳಬೇಕು. ನಮಗೆ ನಿರ್ದಿಷ್ಟ ಅವಶ್ಯಕತೆಗಳಿವೆ ಮತ್ತು ವಸ್ತುಗಳನ್ನು ಆಮದು ಮಾಡಲು ನಾವು ಪ್ರೋತ್ಸಾಹ ಕೊಡಬಾರದು. ನಾನು ನೆನಪಿಸಿಕೊಳ್ಳುತ್ತೇನೆ, ಬಹಳ ಹಿಂದೆ ನಾನು ಸಂಘಟನೆಗೆ ಕೆಲಸ ಮಾಡುತ್ತಿದ್ದಾಗ ಫಾರೂಕ್ ಸಾಹೇಬ್ ರಡಿಯಲ್ಲಿಯ ಉತ್ತರ ಭಾಗದಲ್ಲಿ ಕೆಲಸ ಮಾಡುವ ಅವಕಾಶ ದೊರಕಿತ್ತು. ಹರ್ಯಾಣಾದ ರೈತರೊಬ್ಬರು ಒಮ್ಮೆ ನನ್ನನ್ನು ಅವರ ಹೊಲಕ್ಕೆ ಕರೆದೊಯ್ದರು. ಅವರು ಬಹಳ ಸಾರಿ ಕೇಳಿಕೊಂಡದ್ದರಿಂದ ನಾನು ಅವರ ಆಹ್ವಾನವನ್ನು ತಳ್ಳಿ ಹಾಕುವಂತಿರಲಿಲ್ಲ. ಅವರಿಗೆ 1 ಅಥವಾ ಒಂದೂವರೆ ಎಕರೆಯಷ್ಟು ಸಣ್ಣ ಹಿಡುವಳಿ ಇತ್ತು. ಆದರೆ ಆತ ಬಹಳಷ್ಟು ಮುಂದುವರಿದಿದ್ದರು. ಅವರ ಒತ್ತಾಯದ ಮೇರೆಗೆ, ನಾನು ಬಹಳ ಕುತೂಹಲಿಯಾದೆ. ಅವರು ಕೂಡಾ ಹಂಚಿಕೊಳ್ಳಲು ರೋಮಾಂಚನಗೊಂಡಿದ್ದರು ಮತ್ತು ಆದುದರಿಂದ ನಾನು ಅಲ್ಲಿಗೆ ಭೇಟಿ ನೀಡಲು ಒಪ್ಪಿಕೊಂಡೆ. ಇದು ಸುಮಾರು 30-40 ವರ್ಷಗಳ ಹಿಂದಿನ ಸಂಗತಿ, 30 ವರ್ಷಗಳ ಹಿಂದೆ ಇರಬಹುದು. ಅವರು ದಿಲ್ಲಿಯ ಪಂಚತಾರ ಹೋಟೆಲೊಂದು ಆಮದು ಮಾಡುವ ಹೊರನಾಡಿನ ತಳಿಗಳ ಬಳಕೆ ಮೇಲೆ ಸಂಶೋಧನೆ ಮಾಡಿದ್ದರು. ಅವರಿಗೆ ಬೇಬಿ ಕಾರ್ನ್ ಅಥವಾ ಚೆರ್ರಿ ಟೊಮ್ಯಾಟೋ ಬೇಕಾಗಿದ್ದರೆ ಆತ ತನ್ನ ಸಣ್ಣ ಹೊಲದಲ್ಲಿ ನಿರ್ಬಂಧಿತ ವಾತಾವರಣದಲ್ಲಿ ಕೆಲವು ವಿಶೇಷ ತಜ್ಞರ ಸಹಾಯದಿಂದ ಬೆಳೆಯುತ್ತಿದ್ದರು. ಮತ್ತು ಬಹಳ ಬೇಗ ಇವುಗಳನ್ನು ದಿಲ್ಲಿಯ ಪಂಚತಾರ ಹೊಟೇಲುಗಳಿಗೆ ಪೂರೈಸಲು ಆರಂಭಿಸಿದರು. ನಾವು ವ್ಯವಸ್ಥೆಯನ್ನು ಸ್ವಲ್ಪ ಬದಲಾಯಿಸಬೇಕಾಗಿದೆ. ನಾವೆಂದಾದರೂ ಕಚ್ ಮರುಭೂಮಿಯಲ್ಲಿ ಸ್ಟ್ರಾಬರಿಗಳನ್ನು ಬೆಳೆವ ದಿನ ಬರುತ್ತದೆ ಎಂದು ಊಹಿಸಿಕೊಂಡಿದ್ದೇವೆಯೇ?. ನಾವು ಸ್ಟ್ರಾಬರಿಯನ್ನು ಶೀತ ವಲಯಗಳಲ್ಲಿ ಮಾತ್ರವೇ ಬೆಳೆಸಬಹುದೆಂದು ತಿಳಿದಿದ್ದೆವು.

ಮಧ್ಯಪ್ರದೇಶದಲ್ಲಿಯೂ ಸ್ಟ್ರಾಬರಿಯನ್ನು ಬೆಳೆಯಬಹುದು ಎಂಬುದನ್ನು ಕಂಡುಕೊಳ್ಳುವುದೇ ಬಹಳ ಉತ್ತೆಜನಕಾರಿ. ಬುಂದೇಲ್ ಖಂಡದಂತಹ ಪ್ರದೇಶಗಳಲ್ಲಿ, ನೀರಿನ ಕೊರತೆ ಇರುವಲ್ಲಿ ರೈತರು ಇದನ್ನು ಯಶಸ್ವಿಯಾಗಿ ಬೆಳೆಯುತ್ತಿದ್ದಾರೆ. ಇದು ನಮ್ಮ ಅಸಾಮಾನ್ಯ ಸಾಮರ್ಥ್ಯವನ್ನು ತೋರಿಸುತ್ತದೆ. ನಾವು ತೀರಾ ಸರಳವಾಗಿ ರೈತರಿಗೆ ಮಾರ್ಗದರ್ಶನ ಮಾಡಬೇಕು ಮತ್ತು ಹೊಸ ಬೆಳೆಗಳ ತಳಿಯೊಂದಿಗೆ ಪ್ರಯೋಗ ಮಾಡಲು ಅವರಿಗೆ ಉತ್ತೇಜನ ನೀಡಬೇಕು. ನಮ್ಮ ರೈತರು ಬಹಳ ಬೇಗದಲ್ಲಿಯೇ ಮುಂಚೂಣಿಗೆ ಬಂದು ನಮ್ಮ ಕೃಷಿ ಪದ್ಧತಿಗಳನ್ನು ಮರು ಕಲ್ಪಿಸಿಕೊಳ್ಳುತ್ತಾರೆ ಎಂಬ ಬಗ್ಗೆ ನನಗೆ ದೃಢವಾದ ನಂಬಿಕೆ ಇದೆ. ಹಿಂದೆ ತಮ್ಮ ಕೈಸುಟ್ಟುಕೊಂಡ ಅನುಭವ ಇರುವ ಅವರ ವಿಶ್ವಾಸ ಮತ್ತು ನಂಬಿಕೆಯನ್ನು ಗೆಲ್ಲುವುದು ಅಷ್ಟು ಸುಲಭವಲ್ಲ. ನಾವು ಅವರಲ್ಲಿ ಆತ್ಮ ವಿಶ್ವಾಸ ತುಂಬಬೇಕು. ಮತ್ತು ಸ್ವಲ್ಪ ಭೂಮಿಯೊಂದಿಗೆ ಅವರಿಗೆ ಮಾರ್ಗದರ್ಶನ ಮಾಡಿದರೆ ಅವರು ಅಭಿವೃದ್ಧಿಯ ಪಥದಲ್ಲಿ ಬಹಳ ಮುಂದೆ ಸಾಗಬಲ್ಲರು. ಇದು ಅವರಿಗೆ ಮೊದಲ ಹೆಜ್ಜೆ. ಒಮ್ಮೆ ಅವರಿಗೆ ಅರ್ಥವಾದರೆ ಅವರು ಪವಾಡಗಳನ್ನು ತರಬಲ್ಲರು. ಅದೇ ರೀತಿಯಲ್ಲಿ, ನಾವು ಕೃಷಿ ವಲಯದಲ್ಲಿ ಹೂಡಿಕೆಯನ್ನು ಹೆಚ್ಚಿಸಿದಷ್ಟೂ  ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಬಲ್ಲವು. ನಾವು ಜಾಗತಿಕ ಮಾರುಕಟ್ಟೆಯಲ್ಲಿ ನಮಗಾಗಿ ಅವಕಾಶಗಳನ್ನು ಸೃಷ್ಟಿಸಬಹುದು.

ನಮ್ಮ ಗ್ರಾಮೀಣ ಆರ್ಥಿಕತೆಯನ್ನು ಬದಲಾಯಿಸಲು, ಕೃಷಿ ವ್ಯಾಪಾರೋದ್ದಿಮೆಗಳಿಗೂ ಅವಶ್ಯ ಉತ್ತೇಜನ ಲಭಿಸಬೇಕು. ಆದುದರಿಂದ, ನಮ್ಮ ಎಲ್ಲಾ ಪ್ರಯತ್ನಗಳು ಮತ್ತು ಗಮನ ವಲಯವನ್ನು ಸಂಪೂರ್ಣ ಸ್ವಾವಲಂಬಿಯನ್ನಾಗಿಸುವ ದಿಕ್ಕಿನಲ್ಲಿರಬೇಕು. ಹಲವಾರು ಪ್ರತಿಕೂಲ ಪರಿಸ್ಥಿತಿಗಳಲ್ಲೂ ನಮ್ಮ ರೈತರು ದಾಖಲೆ ಉತ್ಪಾದನೆ ಮಾಡಿದ್ದಾರೆ. ಕೊರೊನಾ ಅವಧಿಯಲ್ಲಿಯೂ ಹಲವಾರು ರೈತರು ಗಮನಾರ್ಹ ಉತ್ಪಾದನೆಯನ್ನು ಮಾಡಿದ್ದಾರೆ. ರೈತರ ಸಮಸ್ಯೆಗಳು ಪರಿಹಾರವಾಗುವಂತೆ ಖಾತ್ರಿಪಡಿಸುವುದು ನಮ್ಮ ಎಲ್ಲರ ಜವಾಬ್ದಾರಿ. ಅವರು ಎದುರಿಸುತ್ತಿರುವ ಸವಾಲುಗಳ ಜೊತೆ ಸೆಣಸಲು ಸಾಕಷ್ಟು ಕ್ರಮಗಳನ್ನು ನಾವು ಕೈಗೊಳ್ಳಬೇಕು. ಕೃಷಿ ಸುಧಾರಣೆಗಳು ಸರಿಯಾದ ದಿಕ್ಕಿನಲ್ಲಿಯ ಸಣ್ಣ ಮೆಟ್ಟಿಲುಗಳು. ನಾವು ರೈತರಿಗೆ ಸಮಾನ ಅವಕಾಶಗಳನ್ನು ಮತ್ತು ಆಧುನಿಕ ತಂತ್ರಜ್ಞಾನವನ್ನು ಒದಗಿಸುವ ಅಗತ್ಯವಿದೆ. ಇದು ಅವರಲ್ಲಿ ಸ್ವ ನಂಬಿಕೆ ಮತ್ತು ವಿಶ್ವಾಸವನ್ನು ತುಂಬುತ್ತದೆ. ನಾವು ವಿಷಯಗಳನ್ನು ಆಶಾವಾದದೊಂದಿಗೆ ಮತ್ತು ಮುಂಜಾಗರೂಕತೆಯೊಂದಿಗೆ ನಿಭಾಯಿಸಬೇಕಾದ ಅಗತ್ಯವಿದೆ.

ಇಂತಹ ಹಳೆಯ ಅಸಂಗತ ಚಿಂತನೆಗಳು ಮತ್ತು ಮಾನದಂಡಗಳು ರೈತರ ಪರಿಸ್ಥಿತಿಯನ್ನು ಸುಧಾರಿಸುವುದು ಸಾಧ್ಯವಿದ್ದರೆ ಅದನ್ನು ಹಲವು ವರ್ಷಗಳ ಹಿಂದೆಯೇ ಸಾಧಿಸಬಹುದಾಗಿತ್ತು. ನಾವು ಎರಡನೇ ಹಸಿರು ಕ್ರಾಂತಿಯ ಬಗ್ಗೆ ಮಾತನಾಡಿದ್ದೆವು. ನಾವು ಬೆಳವಣಿಗೆಗೆ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ನಾವು ಅವುಗಳ ಮೇಲೆ ಅವಲಂಬಿತವಾಗಿರಬೇಕು. ಇದು ರಾಜಕೀಯದ ವಿಷಯವಾಗಬಾರದು. ದೇಶದ ಉನ್ನತಿಗೆ ಇದು ಸಮಯದಲ್ಲಿ ಆಗಬೇಕಾದ ಕೆಲಸ. ಮತ್ತು ನಾವೆಲ್ಲರೂ ಕಾರಣಕ್ಕಾಗಿ ಒಗ್ಗೂಡಬೇಕು. ಇದು ಆಡಳಿತ ಪಕ್ಷ  ಮತ್ತು ವಿಪಕ್ಷಗಳ  ಸಾಮೂಹಿಕ  ಜವಾಬ್ದಾರಿ. ನಾವು 18 ನೇ ಶತಮಾನದ ಚಿಂತನೆಯನ್ನು ಇಟ್ಟುಕೊಂಡು 21 ನೇ ಶತಮಾನದಲ್ಲಿ ನಮ್ಮ ಕೃಷಿ ವಲಯವನ್ನು ಪ್ರಗತಿಯತ್ತ ಕೊಂಡೊಯ್ಯುವುದಾಗಲೀ ಅದರಲ್ಲಿ ಯಶಸ್ಸು ಸಾಧಿಸುವುದಾಗಲೀ ಸಾಧ್ಯವಾಗದು. ನಾವು ಮಿತಿಯೊಳಗಿನ ಚಿಂತನಾ ಕ್ರಮದಿಂದ ಹೊರಬರಬೇಕು.

ನಮ್ಮ ರೈತರು ಬಡತನದ ವಿಷವರ್ತುಲದಲ್ಲಿ ಸಿಲುಕಿಕೊಂಡಿರಬೇಕು ಎಂದು ಯಾರೂ ಬಯಸುವುದಿಲ್ಲ. ಅವರು ಗುಣಮಟ್ಟದ ಜೀವನವನ್ನು ನಡೆಸುವ ಹಕ್ಕಿನಿಂದ ವಂಚಿತರಾಗಿದ್ದಾರೆ. ಅವರು ಅವಲಂಬಿತರಾಗಿರಬಾರದು ಮತ್ತು ಗುಲಾಮಗಿರಿಯಲ್ಲಿರಬಾರದು ಎಂದು ನಾನು ಆಶಿಸುತ್ತೇನೆ. ಅವರು ಸರಕಾರದ ದಾನ ಧರ್ಮ ಅವಲಂಬಿಸಿ ಜೀವನ ಮಾಡುವಂತಹ ಸ್ಥಿತಿ ಬರಬಾರದು. ಇದು ನಮ್ಮೆಲ್ಲರ ಜವಾಬ್ದಾರಿ. ನಾವು ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಮತ್ತು ನಮ್ಮ ರೈತರು ಸಮೃದ್ಧಿ ಸಾಧಿಸುವಂತೆ ಮಾಡಬೇಕು ಹಾಗು ರಾಷ್ಟ್ರದ ಅಭಿವೃದ್ಧಿಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಕೊಡುಗೆ ಕೊಡುವಂತಾಗಬೇಕು. ನಾವು ಅವರಿಗೆ ಸಾಧ್ಯ ಇರುವ ಎಲ್ಲಾ ಬೆಳವಣಿಗೆಯ ಅವಕಾಶಗಳನ್ನು ನೀಡಿದರೆ ಅವರು ಸಾಧಿಸಲು ಬದ್ದರಾಗುತ್ತಾರೆ.

ಸರ್ದಾರ್ ವಲ್ಲಭ ಭಾಯಿ ಪಟೇಲ್ ಆಗಾಗ ಹೇಳುತ್ತಿದ್ದರು, ಒಂದು ಸ್ವತಂತ್ರ ದೇಶ ಗುಲಾಮಗಿರಿಯ ದುರ್ನಾತದೊಂದಿಗೆ ಮುಂದುವರಿದರೆ, ಆಗ ಸ್ವಾತಂತ್ರ್ಯದ ಸ್ಫೂರ್ತಿ ಬಹಳ ವ್ಯಾಪಕವಾಗಿ ಮತ್ತು ದೂರಕ್ಕೆ ಹರಡಲಾರದು ಎಂದು. ನಮ್ಮ ಸಣ್ಣ ರೈತರು ತಮ್ಮ ಹೊಸ ಹಕ್ಕುಗಳನ್ನು ಗಳಿಸಿಕೊಳ್ಳುವವರೆಗೆ ನಾವು ಸಂಪೂರ್ಣ ಸ್ವಾತಂತ್ರ್ಯವನ್ನು ಉತ್ತೇಜಿಸಲಾರೆವು. ಆದುದರಿಂದ ನಾವೆಲ್ಲಾ ಒಟ್ಟಾಗಿ ಗಮನೀಯ ಬದಲಾವಣೆಗಳನ್ನು ತರಬೇಕು ಮತ್ತು ರೈತರಿಗೆ ಅವಶ್ಯವಾದ ಬೆಂಬಲವನ್ನು ನೀಡಬೇಕು ಮತ್ತು ಅವರನ್ನು ಬಹಳ ಧೀರ್ಘ ಕಾಲದಿಂದ ಬಾಕಿ ಇರುವ ಅಭಿವೃದ್ಧಿಯ ಕಡೆಗಿನ ಓಟಕ್ಕೆ ತಯಾರು ಮಾಡಬೇಕು. ಪ್ರಯತ್ನಗಳು ಕಲ್ಯಾಣಕ್ಕಾಗಿ ಮಾಡುವ ಉತ್ತಮ ಕ್ರಮಗಳೇ ಹೊರತು ಯಾವುದೇ ದುರುದ್ದೇಶದಿಂದ ಕೂಡಿದವುಗಳಲ್ಲ.

ನಮ್ಮ ಸರಕಾರ ಪ್ರತೀ ಹಂತದಲ್ಲಿಯೂ ಸಣ್ಣ ರೈತರನ್ನು ಬೆಂಬಲಿಸಿದೆ. ಬೀಜದಿಂದ ಹಿಡಿದು ಮಾರುಕಟ್ಟೆಯವರೆಗೆ ರೈತರಿಗೆ ಬೆಂಬಲ ನೀಡಲು ಕಳೆದ ಆರು ವರ್ಷಗಳಲ್ಲಿ ನಾವು ಇಂತಹ ಹಲವಾರು ಸಣ್ಣ ಮತ್ತು ದೊಡ್ಡ ಮಧ್ಯಪ್ರವೇಶಗಳನ್ನು ತಂದಿದ್ದೇವೆ. ಉದಾಹರಣೆಗೆ ಡೈರಿ ಮತ್ತು ಸಹಕಾರಿ ವಲಯಗಳು. ಅವು ಬಲಿಷ್ಟವಾಗಿವೆ  ಮತ್ತು ತಮ್ಮ ಮೌಲ್ಯ ಸರಪಳಿಯನ್ನು ಬಲಿಷ್ಟಪಡಿಸಿಕೊಂಡಿವೆ.

ವಲಯದಲ್ಲಿ ಸರಕಾರದ ಮಧ್ಯಪ್ರವೇಶದಿಂದಾಗಿ ಉತ್ತಮ ಬೆಳವಣಿಗೆ ಸಾಧ್ಯವಾಗಿದೆ. ನಾವು ಗಮನವನ್ನು ನಿಧಾನವಾಗಿ ಹಣ್ಣು ಮತ್ತು ತರಕಾರಿಗಳುಧಾನ್ಯ-ಕಾಳುಗಳ ವಲಯಕ್ಕೆ ಹಾಗು ತೋಟಗಾರಿಕೆ ಕ್ಷೇತ್ರಗಳತ್ತಲೂ ಹರಿಸಲಿದ್ದೇವೆ ಮತ್ತು ಅವುಗಳನ್ನು ಬಲಪಡಿಸಲಿದ್ದೇವೆ. ವಲಯಗಳು ಬಹಳ ಶಕ್ತಿಶಾಲಿಯಾಗಲಿವೆ. ನಾವು ಬಹಳ ಯಶಸ್ವಿಯಾದ ವ್ಯಾಪಾರೋದ್ಯಮ ಮಾದರಿಯನ್ನು ಹೊಂದಿದ್ದೇವೆ. ಮತ್ತು ನಾವದನ್ನು ಅನುಷ್ಠಾನಕ್ಕೆ ತರಬೇಕಾಗಿದೆ. ನಾವು ಅವರಿಗೆ ಪರ್ಯಾಯ ಮಾರುಕಟ್ಟೆಯನ್ನು ಒದಗಿಸಬೇಕಾದ ಅಗತ್ಯವಿದೆ.

ನಮ್ಮ ಸರಕಾರ ಕೈಗೊಂಡ ಇನ್ನೊಂದು ಪ್ರಮುಖ ಕ್ರಮ ಎಂದರೆ ಹತ್ತು ಸಾವಿರ ಕೃಷಿಕರ ಉತ್ಪಾದನಾ ಸಂಘಟನೆಗಳ ರಚನೆ. ಇದರಿಂದ ಸಣ್ಣ ರೈತರು ಬಲಿಷ್ಠ ಶಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಾಗಲಿದೆ. ಎಫ್.ಪಿ..ಗಳ ರಚನೆಯೊಂದಿಗೆ ಮಹಾರಾಷ್ಟ್ರವು ಅನುಭವ ಪಡೆದಿದೆ ಮತ್ತು ಕಮ್ಯೂನಿಸ್ಟ್ ರಾಜ್ಯವಾದ ಕೇರಳವು  ಬಹಳ ದೊಡ್ಡ ಸಂಖ್ಯೆಯಲ್ಲಿ ಎಫ್.ಪಿ..ಗಳನ್ನು ರಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಇತರ ಹಲವು ರಾಜ್ಯಗಳು ಇದನ್ನು ಅನುಸರಿಸುತ್ತಿವೆ. ಇದರಿಂದಾಗಿ ರೈತರು ತಮ್ಮ ಆಯ್ಕೆಯ ಮಾರುಕಟ್ಟೆಯನ್ನು ನಿರ್ಮಾಣ ಮಾಡಲು ಏಕೀಕೃತ ಶಕ್ತಿಯಾಗಿ ರೂಪುಗೊಳ್ಳಲಿದ್ದಾರೆ. 10 ಸಾವಿರ ಎಫ್.ಪಿ..ಗಳ ರಚನೆಯೊಂದಿಗೆ, ನೀವು ಸಣ್ಣ ರೈತರ ಶಕ್ತಿಯನ್ನು ಅವರ ಗ್ರಾಮಗಳಲ್ಲಿ ಕಾಣಲಿದ್ದೀರಿ. ರೈತರು ಮಾರುಕಟ್ಟೆಯನ್ನು ನಿರ್ದೇಶಿಸಲಿದ್ದಾರೆ ಮತ್ತು ಬಹಳ ಬಲಿಷ್ಟವಾಗಿ ಮೂಡಿ ಬರಲಿದ್ದಾರೆ ಎಂಬುದು ನನ್ನ ಭಾವನೆ. ಎಫ್.ಪಿ..ಗಳ ಮೂಲಕ ರೈತರಿಗೆ ಅಡೆ ತಡೆ ಇಲ್ಲದೆ ಬ್ಯಾಂಕುಗಳಿಂದ ಹಣಕಾಸು ನೆರವು ಪಡೆಯಲಿದ್ದಾರೆ ಮತ್ತು ಸಣ್ಣ ದಾಸ್ತಾನುಗಾರಗಳ ಬೆಂಬಲವನ್ನೂ ಅವರು ಗಳಿಸಲಿದ್ದಾರೆ. ಅವರು ಸ್ವಲ್ಪ ಶಕ್ತಿವಂತರಾದರೆ, ಅವರು ಅವರದೇ ಶೀತಲ ದಾಸ್ತಾನುಗಾರಗಳ ಸೌಲಭ್ಯವನ್ನು ಹೊಂದಬಲ್ಲರು. ಸ್ವಸಹಾಯ ಗುಂಪುಗಳ ಜೊತೆಗಿರುವ ಏಳು ಕೋಟಿ ಸಹೋದರಿಯರನ್ನು ಸಶಕ್ತೀಕರಣ ಮಾಡಲು ಸರಕಾರವು ಒಂದು ಲಕ್ಷ ಕೋಟಿ ಮೊತ್ತದ ಹಣಕಾಸನ್ನು ತೆಗೆದಿರಿಸಿದೆ. ಅವರೆಲ್ಲಾ ರೈತರ ಹೆಣ್ಣು ಮಕ್ಕಳು. ಒಂದಲ್ಲ ಒಂದು ರೀತಿಯಲ್ಲಿ ಅವರು ಕೃಷಿ ಕುಟುಂಬಗಳ ಜೊತೆ ಸಂಪರ್ಕ ಹೊಂದಿರುವವರು. ಜಾಲವನ್ನು ರೈತ ಸಮುದಾಯದ ಕಲ್ಯಾಣಕ್ಕೆ ಬಳಸಿಕೊಳ್ಳಲಾಗುವುದು. ಅವು ಆರ್ಥಿಕ ಚಟುವಟಿಕೆಯ ಬೃಹತ್ ಕೇಂದ್ರಗಳಾಗಿ ಮೂಡಿ ಬರುತ್ತಿವೆ. ನಾನು ನೆನಪಿಸಿಕೊಳ್ಳುತ್ತೇನೆ, ಗುಜರಾತಿನ ಭಲ್ಸಾಡ್ ಬುಡಕಟ್ಟು ವಲಯದಲ್ಲಿ ಎಸ್.ಎಚ್.ಜಿ.ಗಳ ಬೆಂಬಲದೊಂದಿಗೆ ನಾವು ಬುಡಕಟ್ಟು ಜನರು ಹೊಂದಿದ್ದ ಸಣ್ಣ ಸಣ್ಣ ಭೂಮಿಯಲ್ಲಿ ಒಂದು ಯೋಜನೆಯನ್ನು ಹಮ್ಮಿಕೊಂಡಿದ್ದೆವು.

ಡಾ. .ಪಿ.ಜೆ. ಅಬ್ದುಲ್ ಕಲಾಂ ಒಮ್ಮೆ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಇಲ್ಲಿಗೆ ಭೇಟಿ ನೀಡಿದರು ಎಂಬುದು ನಮಗೆ ಗೌರವದ ಸಂಗತಿ. ಅವರು ಹೇಳಿದ್ದರು, ಅಲ್ಲಿ ಯಾವುದೇ ಶಿಷ್ಟಾಚಾರ ಇರಬಾರದು ಎಂದವರು ಹೇಳಿದ್ದರು ಮತ್ತು ಅವರು ರೈತರ ಜೊತೆ ಕೆಲ ಕಾಲ ಕಳೆಯುವ ಆಶಯ ವ್ಯಕ್ತಪಡಿಸಿದ್ದರು. ಇದು ಅತ್ಯಂತ ಯಶಸ್ವಿಯಾದ ಯೋಜನೆಯಾಗಿತ್ತು ಮತ್ತು ಬುಡಕಟ್ಟು ಪ್ರದೇಶದಲ್ಲಿ ಮಹಿಳೆಯರು ಬಹಳ ಶ್ರಮಪಟ್ಟು ಕೆಲಸ ಮಾಡುತ್ತಿದ್ದರು. ಇಲ್ಲಿ ಅವರು ಅಣಬೆ ಮತ್ತು ಗೇರು ಕೃಷಿ ಮಾಡುತ್ತಿದ್ದರು ಮತ್ತು ಇದು ಗೋವಾದಲ್ಲಿ ಬೆಳೆಯುತ್ತಿರುವಂತಹ ಗುಣಮಟ್ಟವನ್ನು ಹೊಂದಿತ್ತು. ಅವರು ತಮಗಾಗಿಯೇ ಮಾರುಕಟ್ಟೆಯನ್ನು ಕೂಡಾ ಸೃಷ್ಟಿ ಮಾಡಿಕೊಂಡಿದ್ದರು. ಅವರೆಲ್ಲಾ ಸಣ್ಣ ಕೃಷಿಕರು. ಅವರು ಹೊಂದಿದ್ದು ಕೂಡಾ ಬರೇ ಸಣ್ಣ ಹಿಡುವಳಿ, ಆದರೆ ಅವರ ಕಠಿಣ ಶ್ರಮ ಅವರಿಗೆ ಪ್ರತಿಫಲ ನೀಡಿತು ಮತ್ತು ಡಾ. ಕಲಾಂ ಅವರೂ ಕೃಷಿಕರ ಯಶೋಗಾಥೆಯನ್ನು ತಾವೇ ಕಣ್ಣಾರೆ ನೋಡಿದ್ದರ ಬಗ್ಗೆ ಬರೆದಿದ್ದರು. ಇದರಿದಾಗಿಯೇ, ನಾನು ನಾವು ಹೊಸ ಚಿಂತನೆಗಳೊಂದಿಗೆ ಮತ್ತು ಯೋಜನೆಗಳೊಂದಿಗೆ ಮುಂದೆ ಸಾಗಬೇಕು ಎಂದು ಹೇಳುತ್ತೇನೆ

ನಾವು ಬೇಳೆ-ಕಾಳು, ದ್ವಿದಳ ಧಾನ್ಯಗಳನ್ನು ಖರೀದಿಸುವಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದೆವು. ನಾವು 2014 ರಲ್ಲಿ ರೈತರಲ್ಲಿ ಒಂದು ಕೋರಿಕೆ ಮಂಡಿಸಿದೆವು. ಅವರು ಕಠಿಣ ದುಡಿಮೆ ಮಾಡಿದರು ಮತ್ತು ನಮ್ಮನ್ನು ಸಮಸ್ಯೆಗಳಿಂದ ಬಿಡುಗಡೆ ಮಾಡಿದರು ಹಾಗು ಅವರಿಗಾಗಿ ಮಾರುಕಟ್ಟೆಗಳನ್ನು ರೂಪಿಸಿಕೊಂಡರು. ದಿನಗಳಲ್ಲಿ ನಾನು ಕೂಡಾ ಸಣ್ಣ ರೈತರು ಹೇಗೆ ನೇರವಾಗಿ ಅವರ ಉತ್ಪನ್ನಗಳನ್ನು -ನಾಮ್ ಮೂಲಕ ಆನ್ ಲೈನ್ಆಫ್ ಲೈನ್ ವೇದಿಕೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿದ್ದೇನೆ. ನಾವು ಕೊರೊನಾ ಅವಧಿಯಲ್ಲಿ ಕಿಸಾನ್ ರೈಲುಗಳು  ಮತ್ತು ಕಿಸಾನ್ ವಿಮಾನಗಳ ಮೂಲಕ ಪ್ರಯೋಗಗಳನ್ನು ಮಾಡಿದ್ದೇವೆ. ಇದು ಸಣ್ಣ ರೈತರಿಗೆ ಬೃಹತ್ ಮಾರುಕಟ್ಟೆಗಳನ್ನು ನೇರವಾಗಿ ತೆರೆದುಕೊಟ್ಟಿದೆ. ಮತ್ತು ಅವರ ಉತ್ಪಾದನೆಗಳಿಗೆ ಉತ್ತಮ ಮೌಲ್ಯ ಪಡೆಯಲು ಅನುಕೂಲಗಳನ್ನು ಮಾಡಿಕೊಟ್ಟಿದೆ.

ರೈಲುಗಳು ಗಾಲಿ ಮೇಲಣ ಶೀತಲ ದಾಸ್ತಾನುಗಾರಗಳಾಗಿದ್ದವು. ನಾನು ಸದನದಲ್ಲಿರುವ ಸಚಿವರು ಕಿಸಾನ್ ರೈಲುಗಳು ಸರಳವಾಗಿ ಸಾಗಾಟ ಸೌಲಭ್ಯದಂತೆ ಕಾಣುತ್ತವೆ ಆದರೆ ಅವು ಸಣ್ಣ, ಅತಿ ದೂರದ ಪ್ರದೇಶದ ಸಣ್ಣ ರೈತರನ್ನು ಇತರ ರಾಜ್ಯಗಳ ಬೃಹತ್ ಮಾರುಕಟ್ಟೆಗಳ ಜೊತೆ ಜೋಡಿಸುತ್ತವೆ ಎಂಬುದನ್ನು ಗಮನಿಸಬೇಕು ಎಂದು ಆಶಿಸುತ್ತೇನೆ. ಇದರ ಪರಿಣಾಮ ನೋಡಿ. ನಾಸಿಕದ ಓರ್ವ ರೈತರು ಮುಝಾಫರ್ ನಗರದ ವ್ಯಾಪಾರೋದ್ಯಮಿಯೊಬ್ಬರ ಜೊತೆ ಸಂಪರ್ಕಿಸಲ್ಪಟ್ಟರು. ಅವರ ವ್ಯಾಪಾರೋದ್ಯಮ ಬಹಳ ದೊಡ್ಡದೇನೂ ಆಗಿರಲಿಲ್ಲ. ಆದರೆ, ಅವರು ತಮ್ಮ 30 ಕಿಲೋ ದಾಳಿಂಬೆಯನ್ನು 124 ರೂಪಾಯಿಗಳ ಅತ್ಯಲ್ಪ ಖರ್ಚಿನಲ್ಲಿ ದೊಡ್ಡ ಮಾರುಕಟ್ಟೆಗೆ ಕಳುಹಿಸಲು ಸಾಧ್ಯವಾಯಿತು. ಕೊರಿಯರ್ ಕೂಡಾ ಸಣ್ಣ ಮೊತ್ತದಲ್ಲಿ ಸಾಗಾಟ ಮಾಡಲು ಒಪ್ಪುತ್ತಿರಲಿಲ್ಲ. ಆದರೆ ಮೂಲಸೌಕರ್ಯ ಸೌಲಭ್ಯದಿಂದಾಗಿ ಸಣ್ಣ ರೈತರು ಕೂಡಾ ತಮ್ಮ ಕೃಷಿ ಉತ್ಪನ್ನಗಳನ್ನು ದೊಡ್ಡ ಮಾರುಕಟ್ಟೆಗಳಲ್ಲಿ ನೇರವಾಗಿ ಮಾರಾಟ ಮಾಡಲು ಶಕ್ತರಾದರು.

60 ರೂಪಾಯಿಯ ಕನಿಷ್ಠ ಖರ್ಚಿನಲ್ಲಿ ಯಾರೋ ಒಬ್ಬರು ಮೊಟ್ಟೆಗಳನ್ನು ಕಳುಹಿಸಿದ್ದನ್ನು ನಾನು ನೋಡಿದ್ದೇನೆ. ಅವರು ಅದನ್ನು ಸುರಕ್ಷಿತವಾಗಿ ಸಕಾಲದಲ್ಲಿ ಕಳುಹಿಸಬಹುದು ಮತ್ತು ಅದು ಉತ್ತಮ ರೀತಿಯಲ್ಲಿ ಮಾರಲ್ಪಡುತ್ತದೆ. ದೀಪಾವಳಿ ಸಂದರ್ಭದಲ್ಲಿ ದಾನಪುರದಲ್ಲಿ ಸಣ್ಣ ರೈತರು ಕಿವಿಯನ್ನು ಮಾರಾಟ ಮಾಡಬಲ್ಲರು. ಅವರು 62 ರೂಪಾಯಿಗಳ ಕನಿಷ್ಠ ವೆಚ್ಚದಲ್ಲಿ ಅವರ 60 ಕಿಲೋ ಕಿವಿಗೆ ಬೇರೊಂದು ರಾಜ್ಯದಲ್ಲಿ ದೊಡ್ಡ ಮಾರುಕಟ್ಟೆಯನ್ನು ಪಡೆಯಬಲ್ಲರು. ಕಿಸಾನ್ ರೈಲ್ ಒಂದು ಸಣ್ಣ ಅನ್ವೇಷಣೆ, ಆದರೆ ಅದು ಬಹಳ ಬೃಹತ್ ಪ್ರಮಾಣದ ಪರಿವರ್ತನೆಯನ್ನು ತರುತ್ತಿದೆ. ನಾವು ಯಶೋಗಾಥೆಯ ಉದಾಹರಣೆಗಳನ್ನು ನೋಡಿದ್ದೇವೆ.

ಗೌರವಾನ್ವಿತ ಸ್ಪೀಕರ್ ಸರ್,

ಚೌಧುರಿ ಚರಣ್ ಸಿಂಗ್ ಭಾರತದ ಆರ್ಥಿಕತೆಯ ಬಗ್ಗೆ ಪುಸ್ತಕವೊಂದನ್ನು ಬರೆದಿದ್ದಾರೆ. ಪುಸ್ತಕದಲ್ಲಿ ಅವರು ಆಹಾರ ಒದಗಿಸಲು ಇಡೀ ದೇಶವನ್ನು ಒಂದು ಪ್ರದೇಶ ಎಂದು ಪರಿಗಣಿಸಬೇಕು ಎಂದು ಸಲಹೆ ಮಾಡಿದ್ದಾರೆ. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಮತ್ತು ನಾನು ಪುಸ್ತಕದಿಂದ ಉಲ್ಲೇಖಿಸುತ್ತೇನೆ, ಅಲ್ಲಿ ರಾಜ್ಯಗಳ ಗಡಿಯಾಚೆಗೂ ಸರಕುಗಳ ಸಾಗಾಣಿಕೆಗೆ ಯಾವುದೇ ನಿರ್ಬಂಧ ಇರಬಾರದು. ಕೃಷಿ ಸುಧಾರಣೆಗಳು, ಕಿಸಾನ್ ರೈಲ್, -ನಾಮ್, ಮಂಡಿಗಳಿಗೆ ಇಲೆಕ್ತ್ರಾನಿಕ್ಸ್ ಪ್ಲೇಟ್ ಗಳು, ಮತ್ತು ಸಗಟು ಮಾರುಕಟ್ಟೆಗಳು-ಇವೆಲ್ಲ ನಮ್ಮ ಸಣ್ಣ ರೈತರಿಗೆ ಬೃಹತ್ ಅವಕಾಶಗಳನ್ನು ಒದಗಿಸಲು ಕೈಗೊಳ್ಳಲಾದ ಸಣ್ಣ ಕ್ರಮಗಳು

ಗೌರವಾನ್ವಿತ ಸ್ಪೀಕರ್ ಸರ್,

ಇವರು.. ಹಲವು ದಶಕಗಳಿಂದ ದೇಶವನ್ನು ಆಳಿದ್ದಾರೆ. ಅವರು ರೈತರ ಸಮಸ್ಯೆಗಳ ಬಗ್ಗೆ ತಿಳಿದಿರಲಿಲ್ಲ ಎಂಬ ಹೇಳಿಕೆಯನ್ನು ಒಪ್ಪಲು ನಾನು ನಿರಾಕರಿಸುತ್ತೇನೆ. ಅವರಿಗೆ ಬಹಳ ಚೆನ್ನಾಗಿ ತಿಳಿದಿತ್ತು, ಅವರು ತಿಳಿದುಕೊಂಡಿದ್ದರು ಮತ್ತು ಆದುದರಿಂದ ನಾನು ಇಂದು ಅವರದೇ ಮಾತುಗಳಲ್ಲಿ ಅವರಿಗೆ ನೆನಪು ಮಾಡಿಕೊಡುತ್ತಿದ್ದೇನೆ. ಅವರು ಇಲ್ಲಿ ಹಾಜರಿಲ್ಲ, ನನಗದು ಗೊತ್ತಿದೆ, ಆದರೆ ರಾಷ್ಟ್ರದ ಹಿತಾಸಕ್ತಿಯ ಕಾರಣದಿಂದ ನಾನು ವಿವರಿಸಬೇಕಾಗಿದೆ ಮತ್ತು ಅದು ಬಹಳ ಮುಖ್ಯ.

ನಾನು ಒಂದು ಹೇಳಿಕೆಯನ್ನು ಉಲ್ಲೇಖಿಸುತ್ತೇನೆ- “ರಾಜ್ಯವು ತನ್ನ .ಪಿ.ಎಂ.ಸಿ. ಕಾಯ್ದೆಯನ್ನು 2005 ವರ್ಷದಲ್ಲಿ ತಿದ್ದುಪಡಿ ಮಾಡಲು ಕ್ರಮಗಳನ್ನು ಕೈಗೊಂಡಿತು. ನೇರ ಮಾರುಕಟ್ಟೆ, ಗುತ್ತಿಗೆ ಕೃಷಿ, ಖಾಸಗಿ ಮಾರುಕಟ್ಟೆ ಸ್ಥಾಪನೆಗೆ ಅವಕಾಶ, ಬಳಕೆದಾರ, ಕೃಷಿಕರ ಮಾರುಕಟ್ಟೆ, -ವ್ಯಾಪಾರ ಮತ್ತು ಅಧಿಸೂಚಿತ ನಿಯಮಗಳನ್ನು 2007ರಲ್ಲಿ ಅನುಷ್ಠಾನಕ್ಕೆ ತರಲು ನಿಬಂಧನೆಗಳನ್ನು ತಿದ್ದುಪಡಿ ಮಾಡಿದೆ. ವಸ್ತು ಸ್ಥಿತಿ ಎಂದರೆ ರಾಜ್ಯದಲ್ಲಿ ಈಗಾಗಲೇ 24 ಖಾಸಗಿ ಮಾರುಕಟ್ಟೆಗಳು ಅಸ್ತಿತ್ವಕ್ಕೆ ಬಂದಿವೆ”. ಮಾತುಗಳು ಯಾರವು?. ನಾವು .ಪಿ.ಎಂ.ಸಿ. ಕಾಯ್ದೆಗಳನ್ನು ತಿದ್ದುಪಡಿ ಮಾಡಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತಿರುವ ವ್ಯಕ್ತಿ ಯಾರು? ಇಂತಹ ಎಲ್ಲಾ 24 ಮಾರುಕಟ್ಟೆಗಳು ಕಾರ್ಯಾಚರಿಸುತ್ತಿವೆ ಎಂದು ಸಾಧನೆಯನ್ನು  ಹೆಮ್ಮೆಯಿಂದ  ಬಿತ್ತರಿಸಿದ ಮತ್ತು ಅದಕ್ಕೆ ಭಾಜನ ಎಂದುಕೊಂಡವರಾರು?. ಇವು ಡಾ. ಮನಮೋಹನ್ ಸಿಂಗ್ ಅವರ ಸರಕಾರದಲ್ಲಿ ಕೃಷಿ ಸಚಿವರಾಗಿದ್ದ ಶ್ರೀ ಶರದ್ ಪವಾರ್ ಅವರು ಹೆಮ್ಮೆಯಿಂದ ಹೇಳಿಕೊಂಡ ಮಾತುಗಳು. ಆದರೆ ಅವರು ಇಂದು ಅನುಕೂಲಕರ ರೀತಿಯಲ್ಲಿ ಸುಲಭವಾಗಿ ಇದರಿಂದ ದೂರ ಹೋಗುತ್ತಿದ್ದಾರೆ. ಆದುದರಿಂದ, ಅವರು ಈಗ ತಪ್ಪು ದಾರಿಗೆ ಎಳೆಯುತ್ತಿರುವ ರೈತರ ಕುರಿತಂತೆ ಅವರ ಉದ್ದೇಶಗಳ ಬಗ್ಗೆ ನನಗೆ ಸಂಶಯವಿದೆ.

ವಿವಿಧ ಮಂಡಿಗಳು ಪೂರ್ಣವಾಗಿ ಕಾರ್ಯಾಚರಿಸುತ್ತಿವೆ. ಮಂಡಿ ಮಾಲಕರು ಮತ್ತು ಮಧ್ಯವರ್ತಿಗಳು ದರ ಸಿಂಡಿಕೇಟ್ ಸೃಷ್ಟಿ ಮಾಡುತ್ತಾರೆ ಎಂಬ ಸಂಶಯದ ಕುರಿತಂತೆ ಪ್ರಶ್ನಿಸಿದಾಗ, ಆಗ ಶ್ರೀ ಶರದ್ ಪವಾರ್ ಬಹಳ ಆಸಕ್ತಿದಾಯಕವಾದಂತಹ ಉತ್ತರ ಕೊಡುತ್ತಾರೆ. ಅವರು ತಾವೇ .ಪಿ.ಎಂ.ಸಿ. ಸುಧಾರಣೆಗಳನ್ನು ರೈತರನ್ನು ರಕ್ಷಿಸಲು ತರಲಾಗಿದೆ ಮತ್ತು ಅವರಿಗೆ ಪರ್ಯಾಯ ಮಾರುಕಟ್ಟೆಯನ್ನು ಒದಗಿಸುವುದಕ್ಕಾಗಿ ತರಲಾಗಿದೆ ಎನ್ನುತ್ತಾರೆ. ಅವರು ಮತ್ತೂ ಮುಂದುವರಿದು ಹೇಳುತ್ತಾರೆ ಹೆಚ್ಚು ವ್ಯಾಪಾರೋದ್ಯಮಿಗಳು ನೊಂದಾಯಿಸಿಕೊಂಡರೆ ಆಗ ಹೆಚ್ಚುವ ಸ್ಪರ್ಧೆಯಿಂದ ಮಂಡಿಗಳಲ್ಲಿಯ ಅಪವಿತ್ರ ಮೈತ್ರಿ ತಾನಾಗಿಯೇ ನಾಶವಾಗುತ್ತದೆ. ಆದುದರಿಂದ ನಾವು ವಿಷಯವನ್ನು ಬಹಳ ಆಳವಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ.

ವಿವಿಧ ರಾಜ್ಯಗಳ ಎಲ್ಲಾ ಸ್ನೇಹಿತರು ಇಲ್ಲಿ ಕುಳಿತಿದ್ದಾರೆ, ಅವರೂ ಕೃಷಿ ಸುಧಾರಣೆಗಳನ್ನು ಮಾಡಲು ಸಣ್ಣ ಮತ್ತು ದೊಡ್ಡ ಪ್ರಯತ್ನಗಳನ್ನು ಮಾಡಿದವರು. ನಾವು ಇಂತಹ 1500 ಅಪ್ರಸ್ತುತ ಕಾಯ್ದೆಗಳನ್ನು ತೆಗೆದುಹಾಕಿದ್ದೇವೆ. ನಾವು ಪ್ರಗತಿಪರ ರಾಜಕೀಯದ ಬೆಂಬಲಿಗರು ಮತ್ತು ಅದನ್ನು ಪ್ರತಿಪಾದಿಸುವವರು. ನಾವು ಹಿಂಜರಿತದಂತಹ  ರಾಜಕೀಯ ಮಾಡುವವರಲ್ಲ. ಭೋಜಪುರಿಯಲ್ಲಿ ಒಂದು ಹೇಳಿಕೆ ಇದೆ ಖೇಲಾಬ್, ಖೇಲಾನ್ ದೇಬ್, ಖೇಲ್ ಭೀ ಬಿಗಾದಾತ್ಅರ್ಥ ನಾವು ಆಟ ಆಡುವುದಿಲ್ಲ, ನಾವು ನಿಮಗೆ ಆಟ ಆಡಲು ಬಿಡುವುದಿಲ್ಲ. ಮತ್ತು ಅದಕ್ಕೆ ಬದಲಾಗಿ ಆಟವನ್ನು ಕೂಡಾ ಹಾಳುಗೆಡಹುತ್ತೇವೆ.

ಗೌರವಾನ್ವಿತ ಸ್ಪೀಕರ್ ಸರ್,

ದೇಶದ ಸಾಮರ್ಥ್ಯವನ್ನು ವರ್ಧಿಸಲು ನಮಗೆ ಎಲ್ಲರ ಕೊಡುಗೆಯೂ ಬೇಕು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ಕಚ್ ನಿಂದ ಕಾಮಾಖ್ಯದವರೆಗೆ  ನಮ್ಮೆಲ್ಲಾ ನಾಗರಿಕರು ತಮ್ಮ ಬೆವರು ಮತ್ತು ರಕ್ತ ಸೇರಿಸಿದರೆ ದೇಶ ಪ್ರಗತಿಯಾಗುತ್ತದೆ. ದೇಶಕ್ಕೆ ಸಾರ್ವಜನಿಕ ರಂಗ ಅವಶ್ಯ ಎಂಬುದಾದರೆ, ಆಗ ರಾಷ್ಟ್ರದ ಅಭ್ಯುದಯದಲ್ಲಿ ಖಾಸಗಿ ರಂಗದ ಸಹಭಾಗಿತ್ವವೂ ಅಷ್ಟೇ ಮುಖ್ಯ ಎಂಬುದನ್ನು ನಾನು ಕಾಂಗ್ರೆಸ್ಸಿನಲ್ಲಿಯ ನನ್ನ ಸ್ನೇಹಿತರಿಗೆ ನೆನಪಿಸಲಿಚ್ಛಿಸುತ್ತೇನೆ

ಜಗತ್ತು ಬದಲಾಗಿದೆ. ದೇಶವು ತನ್ನದೇ ಸಮಾಜವನ್ನು ಬಲಪಡಿಸಿಕೊಂಡಿದೆ. ಪ್ರತಿಯೊಬ್ಬರಿಗೂ ಅವಕಾಶಗಳು ದೊರೆಯಬೇಕು. ಮಾನಹಾನಿಕಾರಕ ಭಾಷೆಯನ್ನು ಬಳಸುವುದು ಮತ್ತು ಇನ್ನೊಬ್ಬರನ್ನು ಕ್ರೂರ ಎಂದು ಬಣ್ಣಿಸುವುದು, ಘೋಷಿಸುವುದು ಮತ ಬ್ಯಾಂಕ್ ರಾಜಕಾರಣದ ಹಳೆಯ ಪದ್ಧತಿ. ನಾನು ಕೆಂಪುಕೋಟೆಯಿಂದ ಮಾತನಾಡುವಾಗ ಹೇಳಿದ್ದೆ-ದೇಶಕ್ಕೆ ಸಂಪತ್ತು ಸೃಷ್ಟಿ ಮಾಡುವವರು ಬೇಕು ಎಂಬುದಾಗಿ. ನಾವು ಬಡವರಿಗೆ ಅವಶ್ಯ ಇರುವುದನ್ನು ಒದಗಿಸಲು ಸಂಪತ್ತನ್ನು ಬೇರೆ ರೀತಿಯಲ್ಲಿ ಹೇಗೆ ಉತ್ಪಾದಿಸಬಹುದು. ಉದ್ಯೋಗಾವಕಾಶಗಳನ್ನು ಹೇಗೆ ಸೃಷ್ಟಿ ಮಾಡಬಹುದು?. ದೇಶದಲ್ಲಿ ಎಲ್ಲವನ್ನೂ ಅಧಿಕಾರಶಾಹಿಯೇ ಮಾಡುತ್ತಾರೆಯೇ?. .ಎಸ್.ಎಸ್. ರಸಗೊಬ್ಬರ ಕಾರ್ಖಾನೆಯನ್ನು ನಡೆಸಬಲ್ಲರೇ?. ಒಮ್ಮೆ ಅವರು ..ಎಸ್. ಆದರೆ ಅವರು ರಾಸಾಯನಿಕ ಕಾರ್ಖಾನೆಯನ್ನು ಅಥವಾ ವಿಮಾನವನ್ನು ನಡೆಸಬೇಕೇ?. ಯಾವ ರೀತಿಯ ಅಧಿಕಾರವನ್ನು ನಾವು ರೂಪಿಸಿದ್ದೇವೆ?. ದೇಶವನ್ನು ಬರೇ ..ಎಸ್.ಗಳಿಗೆ ನಿಭಾಯಿಸಲು ಒಪ್ಪಿಸುವ ಮೂಲಕ ನಾವು ಏನನ್ನು ಸಾಧಿಸಲಿದ್ದೇವೆ?. ಅವರು ದೇಶದ ನಾಗರಿಕರಾಗಿದ್ದರೆ ದೇಶದ ಯುವಜನತೆಯೂ ಆಗಿರುತ್ತಾರೆ. ನಾವು ಅವರಿಗೆ ಅವಕಾಶಗಳನ್ನು ಒದಗಿಸಿದಷ್ಟೂ ನಮಗೆ ಹೆಚ್ಚು ಹೆಚ್ಚು ಪ್ರಯೋಜನವಾಗುತ್ತದೆ.

ಗೌರವಾನ್ವಿತ ಸ್ಪೀಕರ್,

ನಾವು ಈಗ ಏನನ್ನು ಕಾಣುತ್ತಿದ್ದೇವೆಯೋ, ಅಲ್ಲಿ ಅವರ ನಿಲುವನ್ನು ಬೆಂಬಲಿಸಲು ತರ್ಕವಿಲ್ಲ. ಅವರು ಕಳವಳಆತಂಕಗಳ ಅಲೆಯನ್ನು ನಿರ್ಮಾಣ ಮಾಡಿ ವಾತಾವರಣವನ್ನು ಉದ್ವಿಗ್ನ ಮಾಡುತ್ತಿದ್ದಾರೆ, ಮೂಲಕ ಆಂದೋಲನಜೀವಿಗಳ ತಳಿಯನ್ನು ನಿರ್ಮಾಣ ಮಾಡುತ್ತಿದ್ದಾರೆ.

ಗೌರವಾನ್ವಿತ ಸ್ಪೀಕರ್ ಸರ್,

ನಾನು ರೈತರ ಪ್ರತಿಭಟನೆಯ ಪಾವಿತ್ರ್ಯವನ್ನು ಗೌರವಿಸುತ್ತೇನೆ. ಮತ್ತು ನಾನು ಶಬ್ದವನ್ನು ಬಹಳ ಜವಾಬ್ದಾರಿಯಿಂದ ಬಳಸುತ್ತಿದ್ದೇನೆ. ನಾನು ರೈತರ ಪ್ರತಿಭಟನೆಯನ್ನು ಶುದ್ದವಾದುದು ಎಂದು ಪರಿಗಣಿಸುತ್ತೇನೆ. ಭಾರತೀಯ ಪ್ರಜಾಪ್ರಭುತ್ವದಲ್ಲಿ ಆಂದೋಲನ (ಪ್ರತಿಭಟನೆ) ಎಂದೆಂದಿಗೂ ಪ್ರಮುಖವಾಗಿ ಇರುತ್ತದೆ. ಆದರೆ ಕೆಲವು ಪ್ರತಿಭಟನಕಾರರು ಅದನ್ನು ತಮ್ಮ ಸ್ವಹಿತಾಸಕ್ತಿಗಳಿಗಾಗಿ ಬಳಸಿದರೆ ಅಂತಹ ಪ್ರತಿಭಟನೆಗಳ ಗತಿ ಏನು?. ಮೂರು ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯಲ್ಲಿ ಶಿಕ್ಷೆಗೆ ಒಳಗಾದವರ ಭಾವಚಿತ್ರವನ್ನು, ಜೈಲಿನಲ್ಲಿರುವ ದಂಗೆಕೋರರ, ಭಯೋತ್ಪಾದಕರ, ನಕ್ಸಲರ ಮತ್ತು ಮತೀಯ ಶಕ್ತಿಗಳ ಭಾವಚಿತ್ರವನ್ನು ಹಿಡಿದು ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಸಾಗುವುದರ ಹಿಂದಿನ ಕಾರಣವನ್ನು ಯಾರಾದರೂ ನನಗೆ ವಿವರಿಸಬಹುದೇ. ಇದು ಪ್ರತಿಭಟನೆಯನ್ನು ದಾರಿತಪ್ಪಿಸಲು ಮಾಡುವ ಪ್ರಯತ್ನವಲ್ಲವೇ?.

ಗೌರವಾನ್ವಿತ ಸ್ಪೀಕರ್,

ಟೋಲ್ ಪ್ಲಾಜಾಗಳು ದೇಶದಲ್ಲಿ ಎಲ್ಲಾ ಸರಕಾರಗಳು ಒಪ್ಪಿಕೊಂಡ ಒಂದು ವ್ಯವಸ್ಥೆ. ಅವುಗಳನ್ನು ಹಾಳುಗೆಡಹುವುದು, ಅವುಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಅವುಗಳು ಕಾರ್ಯಾಚರಿಸದಂತೆ ಮಾಡುವುದು-ಇವೆಲ್ಲಾ ನಡೆಯುತ್ತಿರುವ ಪ್ರತಿಭಟನೆಗೆ ಕಳಂಕ ತರುವ ಪ್ರಯತ್ನಗಳಲ್ಲವೇ?. ಪಂಜಾಬಿನ ನೆಲದಲ್ಲಿ ಹಲವಾರು ಟೆಲಿಕಾಂ ಗೋಪುರಗಳು ಹಾನಿಗೀಡಾಗಿರುವುದು ರೈತರ ಬೇಡಿಕೆಗಳಿಗೆ.ಯಾವ ರೀತಿಯಲ್ಲಿ ಸಂವಾದಿಯಾಗಿದೆ. ?. ಇದು ಆಂದೋಲನಜೀವಿಗಳು ಪವಿತ್ರ ಪ್ರತಿಭಟನೆಯನ್ನು ಹಾಳುಮಾಡುವ ಉದ್ದೇಶದಿಂದ ಕೈಗೊಂಡ ಕೃತ್ಯವೇ ಹೊರತು ಪ್ರತಿಭಟನಕಾರರದ್ದಲ್ಲ. ಆಂದೋಲನಜೀವಿಗಳು ಮತ್ತು ಆಂದೋಲನಕಾರಿಗಳ ನಡುವಣ ಭಿನ್ನತೆಯನ್ನು ನಮ್ಮ ದೇಶ ತಿಳಿದುಕೊಳ್ಳಲು ಇದು ಸಕಾಲ. ವಂಚಕರಿಂದ ನಾವು ನಮ್ಮ ದೇಶವನ್ನು ಉಳಿಸಿಕೊಳ್ಳಬೇಕಾಗಿದೆ. ಅವರು ಸುಳ್ಳುಗಳನ್ನು ಮತ್ತು ವದಂತಿಗಳನ್ನು ಹರಡುವುದರಲ್ಲಿ ನಿಷ್ಣಾತರು. ಅವರು ದೇಶವನ್ನು ತಪ್ಪುದಾರಿಗೆಳೆದು, ದೇಶವನ್ನು ಸ್ಥಗಿತಗೊಳಿಸಲು ಇಚ್ಛಿಸುವವರು. ನಮ್ಮ ದೇಶ ಬೃಹತ್ ದೇಶ, ಆದುದರಿಂದ ಸಾಮಾನ್ಯ ನಾಗರಿಕರ ಆಶೋತ್ತರಗಳೂ ಅದನ್ನು ಅನುಸರಿಸಿವೆ. ಮತ್ತು ನಾವು  ನಮ್ಮನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಿರಬೇಕು. ನಮ್ಮ ದೇಶದಲ್ಲಿ ಸದಾ ಸರಿಯಾದ ವಿಷಯಗಳನ್ನು ಮಾತನಾಡುವ ವರ್ಗವಿದೆ, ಅವರು ಸರಿಯಾಗಿರುವುದನ್ನು ಮಾತನಾಡುತ್ತಾರೆ. ಸರಿಯಾಗಿರುವುದನ್ನು ಮಾತನಾಡುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ವರ್ಗವು ಸರಿಯಾದ ಸಂಗತಿಗಳನ್ನು ಮಾಡುವ ಚಿಂತನೆ ಇರುವವರನ್ನು ದೂರ ಮಾಡುತ್ತದೆ. “ಸರಿಯಾದ ಸಂಗತಿಗಳನ್ನು ಮಾತನಾಡುವಪರವಾಗಿರುವವರುಸರಿಯಾದ ಕೆಲಸಗಳನ್ನು ಮಾಡುವವರದಾರಿಗೆ ತಾವಾಗಿಯೇ ಬರುತ್ತಾರೆ. ನಾವು ವ್ಯತ್ಯಾಸದ ಬಗೆ ಗಮನದಲ್ಲಿಟ್ಟಿರಬೇಕು. ಅವರು ಬರೇ ಮಾತನಾಡುತ್ತಾರೆ, ಆದರೆ ಏನಾದರೂ ಮಾಡುವುದರಲ್ಲಿ ನಂಬಿಕೆ ಇಟ್ಟಿರುವುದಿಲ್ಲಅವರು ಬರೇ ಮಾತನಾಡುತ್ತಾರೆ ಮತ್ತು ಅರ್ಥಪೂರ್ಣ ಕೆಲಸ ಮಾಡುವುದರಲ್ಲಿ ಅವರಿಗೆ ನಂಬಿಕೆ ಕಡಿಮೆ.ಚುನಾವಣಾ ಸುಧಾರಣೆಗಳ ಬಗ್ಗೆ ಮಾತನಾಡುವವರು, ತಾವೇ ಒಂದು ರಾಷ್ಟ್ರ ಒಂದು ಚುನಾವಣೆ ವಿರುದ್ಧ ಪ್ರತಿಭಟಿಸುತ್ತಾರೆ. ವೇದಿಕೆಗಳಿಂದ ಲಿಂಗ ನ್ಯಾಯದ  ಬಗ್ಗೆ ಗಟ್ಟಿಯಾಗಿ ಮಾತನಾಡುವ ಜನರೇ ತ್ರಿವಳಿ ತಲಾಖ್ ನ್ನು ಕೊನೆಗೊಳಿಸಲು ಹೊರಟಾಗ ಅದನ್ನು ವಿರೋಧಿಸುತ್ತಾರೆ. ಒಂದೆಡೆ ಅವರು ಪರಿಸರದ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಾರೆ, ಇನ್ನೊಂದೆಡೆ ಅವರು ಅಣುವಿದ್ಯುತ್ ಅಥವಾ ಜಲ ವಿದ್ಯುತ್ ಸ್ಥಳದಲ್ಲಿ ಧ್ವಜ ಹಿಡಿದು ಪ್ರತಿಭಟನೆ ಮಾಡುವವರಲ್ಲಿ ಮೊದಲಿಗರಾಗಿರುತ್ತಾರೆ. ಅವರು ದೇಶಾದ್ಯಂತ ಪ್ರತಿಭಟನೆಗಳಿಗೆ ಇಂಧನ ಹಾಕುತ್ತಾರೆ. ಇದಕ್ಕೆ ತಮಿಳುನಾಡು ಬಲಿಪಶುವಾಗಿದೆ.

ಇದೇ ರೀತಿಯಲ್ಲಿ, ಮೊದಲು ಅವರು ರಿಟ್ ಅರ್ಜಿ ಸಲ್ಲಿಸಿದರು. ಪಿ..ಎಲ್.ಗಳನ್ನು ಮತ್ತು ಮೇಲ್ಮನವಿಗಳನ್ನು ದಿಲ್ಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಕುರಿತಂತೆ ಸಲ್ಲಿಸಿದರು. ಇವಿಷ್ಟು ಸಾಕ್ಶ್ಯಾಧಾರಗಳು ಸಾಲವೇ ಅವರು ದೇಶವಾಸಿಗಳನ್ನು  ತಪ್ಪು ದಾರಿಗೆ ಎಳೆಯಲು ಮಾಡುತ್ತಿರುವ ಪ್ರಯತ್ನಗಳು ಇವು ಎಂದು ಸಾರಲು ಮತ್ತು ಇದರ ಬಗ್ಗೆ ಎಚ್ಚೆತ್ತುಕೊಂಡು ಅವರ ದುರುದ್ದೇಶಪೂರಿತ ಉದ್ದೇಶಗಳ ಬಗ್ಗೆ ತೆಗೆದುಕೊಳ್ಳಲು ಇದು ಸಕಾಲ.

ನಾನು ಗಮನಿಸುತ್ತಿದ್ದೇನೆ. ಕಳೆದ ಆರು ವರ್ಷಗಳಲ್ಲಿ ವಿಪಕ್ಷಗಳ ಕಾರ್ಯಪಟ್ಟಿ ಬದಲಾಗಿದೆ ಎಂಬುದನ್ನು. ನಾವು ಕೂಡಾ ವಿಪಕ್ಷದಲ್ಲಿದ್ದೆವು. ನಿಮ್ಮ ಗಮನಕ್ಕೆ ಬಂದಿರಬಹುದು ಆಗ ನಾವು ರಾಷ್ಟ್ರದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ, ಆಡಳಿತ ಪಕ್ಷದ ಭ್ರಷ್ಟ ನಾಯಕರನ್ನು ಖಂಡಿಸಲು ಧ್ವನಿ ಎತ್ತುತ್ತಿದ್ದೆವು. ನಾವು ನಮ್ಮ ಧ್ವನಿಯನ್ನು ಬಲಪಡಿಸಿಕೊಂಡು ನಾವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದ್ದೆವು. ಇಂದು ವಿಪಕ್ಷಗಳು ರಾಷ್ಟ್ರದ ಅಭಿವೃದ್ಧಿಯ ಕುರಿತು ಚರ್ಚಿಸಲು ಕನಿಷ್ಠ ಕಾಳಜಿಯನ್ನೂ ವ್ಯಕ್ತಪಡಿಸುತ್ತಿರುವುದು ನನಗೆ ದಿಗ್ಭ್ರಮೆಯನ್ನು ತಂದಿದೆ. ನಾನು ಅವರು ತಮ್ಮ ಕಳವಳಗಳನ್ನು ವ್ಯಕ್ತಪಡಿಸುತ್ತಾರೆ ಎಂದು ಕಾಯುತ್ತಿದ್ದೆ ಮತ್ತು ನನಗೆ ನಾವು ತೊಡಗಿರುವ ಉತ್ತಮ ಕೆಲಸಗಳನ್ನು ಹಂಚಿಕೊಳ್ಳಲು ಅವಕಾಶ ಸಿಗುತ್ತದೆ ಎಂದು ನಿರೀಕ್ಷೆಯಲ್ಲಿದ್ದೆ. ಅವರು ಅವಕಾಶವನ್ನು ನಮಗೆ ಒದಗಿಸಲಿಲ್ಲ. ಈಗ ಅಂತಹ ಕಳವಳಗಳಿಲ್ಲದಿರುವುದರಿಂದ, ನಿರ್ಣಾಯಕ ವಿಷಯಗಳ ಬಗ್ಗೆ ಅವರಿಗೆ ಹೇಳುವುದಕ್ಕೇನೂ ಉಳಿದಿಲ್ಲ. ಆದುದರಿಂದ ಅವರು ಎಷ್ಟು ರಸ್ತೆಗಳನ್ನು ಮತ್ತು ಸೇತುವೆಗಳನ್ನು ನಿರ್ಮಿಸಲಾಗಿದೆ ಎಂದು ಕೇಳುವುದನ್ನು ನಿಲ್ಲಿಸಿದ್ದಾರೆ. ಗಡಿ ನಿರ್ವಹಣೆಯ ಸ್ಥಿತಿ ಗತಿಯ ಬಗ್ಗೆ ಅಥವಾ ರೈಲ್ವೇ ಮಾರ್ಗಗಳ ಬಗ್ಗೆಯೂ ಅವರು ಕೇಳಲಾರರು. ಅವರು ಇಂತಹ ವಿಷಯಗಳನ್ನು ಚರ್ಚಿಸುವುದರಲ್ಲಿ ಕನಿಷ್ಠ ಆಸಕ್ತಿ ಹೊಂದಿದ್ದಾರೆ.

ಗೌರವಾನ್ವಿತ ಸ್ಪೀಕರ್ ಸರ್,

21 ನೇ ಶತಮಾನದಲ್ಲಿ ಮೂಲಸೌಕರ್ಯಗಳು ಬಹಳ ಪ್ರಮುಖವಾದ ಪಾತ್ರವನ್ನು ವಹಿಸಲಿವೆ. ಭಾರತದ ಪ್ರಗತಿಯಾಗಬೇಕಿದ್ದರೆ, ಆಗ ಬಹಳ ಅಗತ್ಯವಾಗಿ ಆಗಬೇಕಾಗಿರುವುದೆಂದರೆ ನಾವು ನಮ್ಮ ಮೂಲಸೌಕರ್ಯವನ್ನು ಬಲಪಡಿಸಬೇಕಾಗಿದೆ. ಆತ್ಮ ನಿರ್ಭರ ಭಾರತವನ್ನು ಬಹಳ ಬಿರುಸಾಗಿ ಅನುಷ್ಠಾನ ಮಾಡಬೇಕಿದ್ದರೆ, ನಾವೆಲ್ಲರೂ ಇದು ಕಾಲದ ಅವಶ್ಯಕತೆ ಎಂಬುದನ್ನು ಒಪ್ಪಿಕೊಳ್ಳಬೇಕು ಮತ್ತು ಅನುಷ್ಠಾನವನ್ನು ಖಾತ್ರಿಪಡಿಸಬೇಕು.

ನಾವು ಬಲಿಷ್ಟವಾದ ಮತ್ತು ಆಧುನಿಕ ಮೂಲಸೌಕರ್ಯವನ್ನು ಹೊಂದಿದ್ದರೆ, ನಮ್ಮ ದೇಶವು ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸುತ್ತದೆ ಮತ್ತು ಅಭಿವೃದ್ಧಿಯು ವಿಸ್ತಾರ ವ್ಯಾಪ್ತಿಯಲ್ಲಾಗುತ್ತದೆ. ನಮ್ಮ ಪ್ರಯತ್ನಗಳು ನಿಟ್ಟಿನಲ್ಲಿರಬೇಕು. ಆಧುನಿಕ ಮೂಲಸೌಕರ್ಯಗಳ ಪರಿಣಾಮ ಎಂದರೆ ಹೊಸ ಬೆಳವಣಿಗೆಯ ಅವಕಾಶಗಳನ್ನು ಒದಗಿಸುವುದು. ಮತ್ತು ಅವಕಾಶ ವಂಚಿತರು ಹಾಗು ಮಧ್ಯಮವರ್ಗದವರಿಗೆ ಅಭಿವೃದ್ಧಿಗೆ ಅವಕಾಶ ನೀಡುವ ಪರಿಸರವನ್ನು ಒದಗಿಸುವುದು. ಇದು ಅಮೋಘ ಪ್ರಮಾಣದಲ್ಲಿ ಉದ್ಯೋಗಾವಕಾಶಗಳ ಸಾಧ್ಯತೆಯನ್ನು  ತೆರೆಯುತ್ತದೆ. ಇದಕ್ಕೆ ಆರ್ಥಿಕತೆಯಲ್ಲಿ ಬಹುಪಾಲು ವರ್ಧಿಸುವಂತಹ ಪರಿಣಾಮವನ್ನು ತರುವ ಸಾಮರ್ಥ್ಯ ಇದೆ. ಆದುದರಿಂದ ನಮ್ಮ ಪ್ರಮುಖ ಗಮನ ದೇಶದಲ್ಲಿ ಅತ್ಯಾಧುನಿಕ ಮೂಲಸೌಕರ್ಯವನ್ನು ಖಾತ್ರಿಪಡಿಸುವುದರ ಮೇಲಿರಬೇಕಾಗಿದೆ. ಇದು ಚುನಾವಣೆಯಲ್ಲಿ ಗೆಲ್ಲಲು ಪತ್ರಿಕೆಗಳಲ್ಲಿ ಹೊಸ ರಸ್ತೆಯ ನಿರ್ಮಾಣವನ್ನು ಘೋಷಿಸುವ ಮೂಲಕ ಮತಬ್ಯಾಂಕನ್ನು ಹೆಚ್ಚಿಸುವ ಕಾರ್ಯಸೂಚಿಯಲ್ಲ. ಇನ್ನೊಂದು ಸಂದರ್ಭದಲ್ಲಿ ಚುನಾವಣೆಗಳಲ್ಲಿ ಗೆಲ್ಲಲು ಅದೇ ರಸ್ತೆಯಲ್ಲಿ ಬಿಳಿ ಪಟ್ಟಿಗಳನ್ನು ಹಾಕುವುದೇಕೆ. ಮೂರನೆ ಬಾರಿ ಅಲ್ಲಿ ಸ್ವಲ್ಪ ಮಣ್ಣು ಹಾಕಿ. ಮೂಲಸೌಕರ್ಯ ಅಭಿವೃದ್ಧಿ ಜನರ ತೀರ್ಪನ್ನು ದುರುಪಯೋಗ ಮಾಡುವುದಕ್ಕಲ್ಲ. ಇದು ನಮ್ಮ ಜೀವಿಸುವ ಗುಣಮಟ್ಟವನ್ನು ಎತ್ತರಿಸಲು ಮಾಡುವ ಪ್ರಾಮಾಣಿಕ ಪ್ರಯತ್ನ. ಆದುದರಿಂದ ನಾವು ಮೂಲಸೌಕರ್ಯದ ಮಹತ್ವವನ್ನು ಮನಗಾಣುತ್ತಿದ್ದೇವೆ. 110 ಲಕ್ಷ ಕೋ.ರೂ. ಗಳ ವಿಶೇಷ ಪ್ರಸ್ತಾವನೆಯ ಯೋಜನೆಗಳ ಜೊತೆ, ನಾವು ಪ್ರಸಕ್ತ ಬಜೆಟಿನಲ್ಲಿ ದೇಶವನ್ನು ಬೆಳವಣಿಗೆ ಮತ್ತು ಅಭಿವೃದ್ಧಿಯತ್ತ ಕೊಂಡೊಯ್ಯಲು ಮಹತ್ವಾಕಾಂಕ್ಷೆಯ ಮೊತ್ತವನ್ನು ತೆಗೆದಿರಿಸಿದ್ದೇವೆ

ದೇಶದ 27 ನಗರಗಳಲ್ಲಿ ಮೆಟ್ರೋ ರೈಲುಗಳೊಂದಿಗೆ, ಆರು ಲಕ್ಷಕ್ಕೂ ಅಧಿಕ  ಗ್ರಾಮಗಳಿಗೆ ವೇಗದ ಅಂತರ್ಜಾಲ, ವಿದ್ಯುತ್ತಿಗೆ ಸಂಬಂಧಪಟ್ಟಂತೆ ಒಂದು ದೇಶ ಒಂದು ಗ್ರಿಡ್ ಯೋಜನೆಗಳೊಂದಿಗೆ ನಾವು ಚಿಂತನೆಯನ್ನು ಅನುಷ್ಟಾನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೇವೆ. ಇಂದು ಭಾರತ ಸೌರ ವಿದ್ಯುತ್ ಸಹಿತ ಮರುನವೀಕೃತ ಇಂಧನಕ್ಕೆ ಸಂಬಂಧಿಸಿದಂತೆ ಜಗತ್ತಿನ ಐದು ಪ್ರಮುಖ ರಾಷ್ಟ್ರಗಳಲ್ಲಿ ಸ್ಥಾನ ಪಡೆದಿದೆ. ಭಾರತವು ಶೀಘ್ರವೇ  ಅತ್ಯಂತ ದೊಡ್ಡ ಸೌರ ಮತ್ತು ಪವನ ಹೈಬ್ರಿಡ್ ವಿದ್ಯುತ್ ಕೇಂದ್ರವನ್ನು ಪಡೆಯಲಿದೆ. ನಾವು ಅಭಿವೃದ್ಧಿಯಲ್ಲಿ ಹೊಸ ಗುಣಮಾನಗಳನ್ವಯ ಹೊಸ ಶಕೆಯನ್ನು ಕಾಣುತ್ತಿದ್ದೇವೆ.

ನಾವು ದೇಶದ ವಿವಿಧ ಭಾಗಗಳಲ್ಲಿ ಅದರಲ್ಲೂ ವಿಶೇಷವಾಗಿ ಪೂರ್ವ ಭಾರತದಲ್ಲಿ ಅಸಮಾನವಾದ ಬೆಳವಣಿಗೆಯನ್ನು ಗಮನಿಸಿದ್ದೇವೆ. ನಾವು ಪೂರ್ವ ಭಾರತವನ್ನು ಅಭಿವೃದ್ಧಿ ಮಾಡಲು ಬಯಸುವುದಾದರೆ, ಆಗ ನಾವು ಅದನ್ನು ಪಶ್ಚಿಮ ಭಾರತದ ಆರ್ಥಿಕ ಅಭಿವೃದ್ಧಿಯ ಮಟ್ಟಕ್ಕೆ ತರಬೇಕು. ರೀತಿಯಲ್ಲಿ ಒಂದಾಗಿ ದೇಶದ ಆಂತರಿಕ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಆದುದರಿಂದ, ನಾವು ನಮ್ಮ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಪೂರ್ವದ ರಾಜ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡಿದ್ದೇವೆ ಮತ್ತು ಮೂಲಕ ಅವುಗಳನ್ನು ಮುಖ್ಯ ವಾಹಿನಿಗೆ ತರಲು ಯತ್ನಿಸಿದ್ದೇವೆ. ಅದು ಅನಿಲ ಕೊಳವೆ ಮಾರ್ಗ ಹಾಕುವುದಿರಲಿ, ರಸ್ತೆಗಳ ನಿರ್ಮಾಣ ಇರಲಿ, ಮತ್ತು ವಿಮಾನ ನಿಲ್ದಾಣಗಳ ನಿರ್ಮಾಣ ಇರಲಿ, ರೈಲ್ವೇ ಮಾರ್ಗಗಳನ್ನು ನಿರ್ಮಾಣ ಮಾಡುವುದಿರಲಿ, ಅಂತರ್ಜಾಲ ಸಂಪರ್ಕ ಒದಗಿಸುವುದಿರಲಿ ಮತ್ತು ಈಶಾನ್ಯ ಹಾಗು ಇತರ ರಾಜ್ಯಗಳನ್ನು ಜೋಡಿಸುವ ಜಲಮಾರ್ಗಗಳ ..ಯೋಜನೆಗಳಿರಲಿ, ಅವುಗಳ ಮೂಲಕ ನಾವು ರಾಷ್ಟವನ್ನು ಸಮತೋಲಿತ ಅಭಿವೃದ್ಧಿಯತ್ತ ಕೊಂಡೊಯ್ಯುವುದಕ್ಕೆ ಗಮನ ಕೊಟ್ಟಿದ್ದೇವೆ ಎಂಬ ಬಗ್ಗೆ ನನಗೆ ಭರವಸೆ ಇದೆದೇಶದ ಯಾವುದೇ ಭಾಗವೂ ಬೆಳವಣಿಗೆ ಅಭಿವೃದ್ದಿಯ ಪಯಣದಲ್ಲಿ ಹಿಂದುಳಿಯಬಾರದು ಎಂಬುದನ್ನು ನಾವು ಖಾತ್ರಿಪಡಿಸುತ್ತಿದ್ದೇವೆ.

ಇದು ಪ್ರಗತಿಶೀಲ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಲು ನಮ್ಮ ಚಿಂತನೆ. ಆದುದರಿಂದ, ನಾವು ಪೂರ್ವ ಭಾರತದತ್ತ ಹೆಚ್ಚಿನ ಗಮನವನ್ನು ಕೊಡುತ್ತಿದ್ದೇವೆ. ಮತ್ತು ಆಂದೋಲನ ಮಾದರಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ಸಿ.ಎನ್.ಜಿ., ಪಿ.ಎನ್.ಜಿ., ನಗರ ಅನಿಲ ವಿತರಣಾ ವ್ಯವಸ್ಥೆಯ ಜಾಲವನ್ನು ಸುಮಾರು ಡಜನ್ನಿನಷ್ಟು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಸ್ಥಾಪಿಸಿದ್ದೇವೆ. ಅನಿಲ ಕೊಳವೆ ಜಾಲ ರಾಜ್ಯಗಳಲ್ಲಿ ರಸಗೊಬ್ಬರ ಉತ್ಪಾದನಾ ವಲಯಕ್ಕೆ ಹೆಚ್ಚಿನ ಬಲವನ್ನು ತಂದಿದೆ. ಮೊದಲು ಮುಚ್ಚಲ್ಪಟ್ಟಿದ್ದ ಹಲವು ರಸಗೊಬ್ಬರ ಕಾರ್ಖಾನೆಗಳು ಈಗ ಪುನಶ್ಚೇತನ ಪಡೆದಿವೆ. ಅನಿಲ ಮತ್ತು ಕೊಳವೆ ಮಾರ್ಗದ ಮೂಲಸೌಕರ್ಯವನ್ನು ಹೆಚ್ಚಿಸುವ ಮೂಲಕ ಕಾರ್ಖಾನೆಗಳಿಗೆ ಮತ್ತೊಮ್ಮೆ ತೆರೆಯಲ್ಪಡುವ ಅವಕಾಶವನ್ನು ಒದಗಿಸಲು ನಾವು ದೃಢ ನಿರ್ಧಾರ ಮಾಡಿದ್ದೆವು.

ಗೌರವಾನ್ವಿತ ಸ್ಪೀಕರ್ ಸರ್,

ಕಳೆದ ಹಲವಾರು ವರ್ಷಗಳಿಂದ ಸರಕು ಸಾಗಾಣಿಕೆಗಾಗಿಯೇ ಮೀಸಲಾಗಿರುವ ಕಾರಿಡಾರಿನ ಬಗ್ಗೆ ಕೇಳುತ್ತಿದ್ದೆವು. ಸರಕು ಸಾಗಾಣಿಕೆಗಾಗಿಯೇ ಇರುವ ಕಾರಿಡಾರಿನ ಸ್ಥಿತಿ ನಾವು ಅಧಿಕಾರ ವಹಿಸಿಕೊಳ್ಳುವಾಗ ಏನಾಗಿತ್ತು?. ಒಂದು ಕಿಲೋ ಮೀಟರ್ ಕಾಮಗಾರಿಯಷ್ಟೇ ಪೂರ್ಣಗೊಂಡಿತ್ತು. ಇಂದು ಆರು ವರ್ಷಗಳಲ್ಲಿ ಸುಮಾರು 600 ಕಿಲೋ ಮೀಟರ್ ಉದ್ದವನ್ನು ಕಾರ್ಯಾಚರಣೆಗೆ ಬಿಟ್ಟುಕೊಡಲಾಗಿದೆ. ಮತ್ತು ಸೆಕ್ಷನ್ನಿನಲ್ಲಿ ಸರಕುಗಳ ಲೋಡಿಂಗ್ ನಡೆಯುತ್ತಿದೆ. ಯು.ಪಿ..ಅಧಿಕಾರದಲ್ಲಿದ್ದಾಗ ಗಡಿ ಮೂಲಸೌಕರ್ಯವನ್ನು  ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿತ್ತು. ಮತ್ತು ಅದನ್ನು ಬೇಜವಾಬ್ದಾರಿಯಿಂದ ನಿರ್ವಹಿಸಲಾಗುತ್ತಿತ್ತು. ಯಾವುದೇ ದೇಶದ ಭದ್ರತೆಗೆ ಇದು ಬಹಳ ನಿರ್ಣಾಯಕ. ಇಂತಹ ವಿಷಯಗಳನ್ನೆಲ್ಲ ಬಹಿರಂಗವಾಗಿ ಚರ್ಚಿಸಲಾಗದು, ಯಾಕೆಂದರೆ ಅವು ರಾಷ್ಟ್ರದ ಭದ್ರತೆಗೆ ಸಂಬಂಧಿಸಿದವು. ಇದು ಅತ್ಯಂತ ಕಳವಳದ ಸಂಗತಿ. ಅವರು ಅಲ್ಲಿ ಜನಪ್ರಿಯ ಮತಬ್ಯಾಂಕ್ ಇಲ್ಲದಿರುವುದರಿಂದಜನಸಂಖ್ಯೆ ಇಲ್ಲದಿರುವುದರಿಂದ ಅವರು ಅದರ ಬಗ್ಗೆ ಚಿಂತಿಸುತ್ತಿರಲಿಲ್ಲ. ಮತ್ತು ಅದು ಮಹತ್ವದ್ದು ಎಂದು ಪರಿಗಣಿಸಲೂ ಇಲ್ಲ. ಅಲ್ಲಿರುವುದು ಕೇವಲ ಸೇನೆಯ ಮನುಷ್ಯರು, ಮತ್ತೆ ನೋಡೋಣ ಎಂಬ ಧೋರಣೆ ಅವರದಾಗಿತ್ತು. ದುರದೃಷ್ಟವಶಾತ್, ರಕ್ಷಣಾ ಸಚಿವರು ಕೂಡಾ ಒಮ್ಮೆ ಸಂಸತ್ತಿನಲ್ಲಿ ಹೇಳಿದ್ದರು-ವೈರಿ ದೇಶ ಅದರ ಪ್ರಯೋಜನಕ್ಕಾಗಿ ಬಳಸಬಹುದಾದುದರಿಂದ ಗಡಿ ಮೂಲಸೌಕರ್ಯವನ್ನು ಹೆಚ್ಚಿಸಬೇಕಾದ ಅಗತ್ಯ ಇಲ್ಲ ಎಂದಿದ್ದರು. ಇದಕ್ಕಿಂತ ಹೆಚ್ಚಿನ ಅವಮಾನಕಾರಕವಾದುದೇನಾದರೂ ಇದೆಯೇ. ನಾವು ಚಿಂತನಾಕ್ರಮದ ವಿರುದ್ಧ ನಿಂತೆವು ಮತ್ತು ನಮ್ಮ ಗಡಿ ಮೂಲಸೌಕರ್ಯ ಅಭಿವೃದ್ಧಿಗೆ ಹಾಕಲಾದ ಗುರಿಗಳನ್ನು ಮತ್ತು ನಿರೀಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯಾಚರಿಸಿದೆವು

ಎಲ್..ಸಿ.ಯಲ್ಲಿ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ನನ್ನ ಅಂದಾಜಿನ ಪ್ರಕಾರ 75 ಕ್ಕೂ ಅಧಿಕ ಸೇತುವೆಗಳ ಕಾಮಗಾರಿಗೆ ವೇಗ ದೊರಕಿದೆ. ಇದಕ್ಕಾಗಿ ನಾವು ಹಲವು ನೂರು ಕಿಲೋ ಮೀಟರುಗಳಷ್ಟು ರಸ್ತೆಗಳನ್ನು ಈಗಾಗಲೇ ನಿರ್ಮಾಣ ಮಾಡಿದ್ದೇವೆ. ನಾವು ನಮ್ಮ ಬದ್ಧತೆಯ ಸುಮಾರು 75% ನಷ್ಟು ಕೆಲಸಗಳನ್ನು ಪೂರೈಸಿದ್ದೇವೆ ಮತ್ತು ನಾವು ಇನ್ನು ಮುಂದೆಯೂ ದೇಶದ ಇತರ ಭಾಗಗಳಲ್ಲಿ ಇದನ್ನು ಮುಂದುವರಿಸುತ್ತೇವೆ. ಹಿಮಾಚಲ ಪ್ರದೇಶದಲ್ಲಿರುವ ಅಟಲ್ ಸುರಂಗ ಸ್ಥಿತಿಯ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಇದು ಅಟಲ್ ಜೀ ಅವರ ಜೀವಿತಾವಧಿಯಲ್ಲಿ ರೂಪಿಸಲಾದ ಕನಸಿನ ಯೋಜನೆಯಾಗಿತ್ತು. ದುಖದ ಸಂಗತಿ ಎಂದರೆ ಯೋಜನೆಯು ಕೆಂಪು ಪಟ್ಟಿಯಲ್ಲಿ ಸಿಲುಕಿಕೊಂಡಿತು ಮತ್ತು ಅದು ಈಡೇರದೆ ಬಾಕಿಯಾಯಿತು. ಸ್ವಲ್ಪ ಅವಧಿಯಲ್ಲಿ ಇದರ ಸಣ್ಣ ಭಾಗದ ಕೆಲಸ ನಡೆಯಿತು ಮತ್ತು ಬಳಿಕ ಮತ್ತೆ ಸ್ಥಗಿತಗೊಂಡಿತು. ಒಂದಲ್ಲ ಒಂದು ಕಾರಣಕ್ಕೆ ಯೋಜನೆ ಬೆಳಕು ಕಾಣಲೇ ಇಲ್ಲ. ಕಳೆದ ಆರು ವರ್ಷಗಳಲ್ಲಿ ನಾವು ಅದನ್ನು ಬೆಂಬತ್ತಿದೆವು ಮತ್ತು ಇಂದು ಸುರಂಗ ಸಾರ್ವಜನಿಕ ಬಳಕೆಗಾಗಿ  ಕಾರ್ಯಾಚರಿಸುತ್ತಿದೆ. ದೇಶದ ಸೇನೆ ಮತ್ತು ನಾಗರಿಕರು ಅಲ್ಲಿ ಮುಕ್ತವಾಗಿ ಓಡಾಟ ಮಾಡುತ್ತಿದ್ದಾರೆ. ಆರು ತಿಂಗಳಿಂದ ಸಂಚಾರಕ್ಕೆ ಮುಚ್ಚಲ್ಪಡುತ್ತಿದ್ದ ರಸ್ತೆಗಳು ಈಗ ಸಂಚಾರಕ್ಕೆ ಮುಕ್ತವಾಗಿವೆ. ಮತ್ತು ಅಟಲ್ ಸುರಂಗ ಅವರಿಗೆ ವರದಾನವಾಗಿದೆ.

ಇದೇ ರೀತಿ, ನಾನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ, ದೇಶವು ಯಾವುದೇ ಬಿಕ್ಕಟ್ಟನ್ನು ಎದುರಿಸುವ ಪರಿಸ್ಥಿತಿ ಬಂದರೆ ಅದನ್ನು ನಾವೇ ನಿಭಾಯಿಸಲು ಸಮರ್ಥರಾಗಿದ್ದೇವೆ. ನಮ್ಮ ಸಶಸ್ತ್ರ ಪಡೆಗಳು ಅತ್ಯಂತ ಕೆಟ್ಟ ಬೆದರಿಕೆಗಳನ್ನು ಕೂಡಾ ನಿಭಾಯಿಸಲು ಪೂರ್ಣವಾಗಿ ಸಿದ್ಧವಾಗಿವೆ. ನಮ್ಮ ಸೇನೆ ನಮ್ಮ ದೇಶದ ಹೆಮ್ಮೆಯನ್ನು ಎತ್ತಿ ಹಿಡಿಯಲು ಬದ್ಧವಾಗಿದೆ, ಮತ್ತು ನಂಬಿಕೆ ಇಡಿ -ಅವರೆಂದೂ ವಿರೋಧಿಗಳ ಎದುರು ತಲೆ ಬಾಗಿಸಲಾರರು. ಅವರು ಅತ್ಯಂತ ಅರ್ಪಣಾ ಭಾವ ಮತ್ತು ಸಮಗ್ರತೆಯಿಂದ ಅವರ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲೂ ಕೂಡಾ ಅವರು ಮುಂಜಾಗರೂಕತೆಯಿಂದ ತಮ್ಮ ಕರ್ತವ್ಯಗಳನ್ನು ಮಾಡುತ್ತಿದ್ದಾರೆ. ನಾವು ನಮ್ಮ ಸಮರ್ಥ ಜವಾನರ ಬಗ್ಗೆ ಮತ್ತು ಸಶಸ್ತ್ರ ಪಡೆಗಳ ಬಗ್ಗೆ ಅತ್ಯಂತ ಹೆಮ್ಮೆಯನ್ನು ಹೊಂದಿದ್ದೇವೆ. ಅತ್ಯಂತ ದೃಢ ವಿಶ್ವಾಸದೊಂದಿಗೆ ದೇಶವು ಪ್ರಗತಿ ಮತ್ತು ಅಭಿವೃದ್ಧಿಗೆ ಸಂಬಂಧಿಸಿ ನಿರ್ಣಾಯಕ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ನಾನೊಮ್ಮೆ ಗಜಲ್ ನಲ್ಲಿ ಕೇಳಿದ್ದೆ. ನಾನು ಬಗ್ಗೆ ಹೆಚ್ಚು ಗಮನಿಸಿಲ್ಲದೇ ಇದ್ದರೂ, ಸಾಲುಗಳು ನನ್ನಲ್ಲಿ ಮಾರ್ದನಿಸುತ್ತಿರುತ್ತವೆ. ಸಾಲುಗಳು ಹೀಗಿವೆ-ನಾನು ಬದುಕಿದ ಜೀವನದ ಕಥೆಗಳನ್ನು ನಿನ್ನೆದುರು  ಹಾಡುತ್ತೇನೆ. ನಾನು ಭಾವಿಸುತ್ತೇನೆ-ನನ್ನನ್ನು ಬಿಟ್ಟು ಹೋದ ಗೆಳೆಯರು ಅವರ ಬದುಕಿನ ದಿನಗಳ ಕಥೆಯನ್ನು ನಮಗೆ ಹೇಳಿದರು ಎಂದು. ಅದರಲ್ಲಿ ಅವರು ಬದುಕಿದ ಮತ್ತು ಬೆಳೆದ ಸಂಗತಿಗಳಿದ್ದವು. ಅವರು ತಮ್ಮ ಜೀವನದಲ್ಲಿ ಏನೇನು ಮಾಡಿದ್ದರೋ ಅದನ್ನು ಹಂಚಿಕೊಳ್ಳುತ್ತಿದ್ದರು. ಆದುದರಿಂದ ನಾನು ಈಗ ಯೋಚಿಸುವುದೇನೆಂದರೆ ಇದು ಮುನ್ನಡೆಯಲು ಸಕಾಲ ಮತ್ತು ಧೈರ್ಯ ಹಾಗು..ನೊಂದಿಗೆ ಮುಂದಡಿ ಇಡಲು ಸಕಾಲ. ಕೊರೋನೋತ್ತರ ಕಾಲದಲ್ಲಿ ರೂಪುಗೊಳ್ಳುತ್ತಿರುವ ಹೊಸ ವಿಶ್ವ ವ್ಯವಸ್ಥೆಯಲ್ಲಿ ನಾವುಯಾವುದೂ ಬದಲಾಗದುಮತ್ತುಅದು ಸರಿ (ಈಟ್ಸ್ .ಕೆ.) “ ಎಂಬಂತಹ  ಹಿಂಜರಿಯುವ ಮನಸ್ಥಿತಿಯನ್ನು ತೊರೆಯಬೇಕು ಎಂಬುದನ್ನು ನಾನು  ಪುನರುಚ್ಚರಿಸುತ್ತೇನೆ. ನಾವು 130 ಕೋಟಿ ಭಾರತೀಯರ ಸಾಮರ್ಥ್ಯದಲ್ಲಿ ನಂಬಿಕೆ, ವಿಶ್ವಾಸದೊಂದಿಗೆ ಮುನ್ನಡೆಯುತ್ತಿದ್ದೇವೆ. ಖಂಡಿತವಾಗಿಯೂ ಅಲ್ಲಿ ಮಿಲಿಯಾಂತರ ಸಮಸ್ಯೆಗಳಿವೆ ಆದರೆ ಅಲ್ಲಿ ಬಿಲಿಯಾಂತರ ಪರಿಹಾರಗಳೂ ಇವೆ.

ನಮ್ಮದು ಬಲಿಷ್ಟ ರಾಷ್ಟ್ರ ಮತ್ತು ನಾವು ಬೆಳವಣಿಗೆಯ ಹಾಗು ಅಭಿವೃದ್ಧಿಯ ಪಥದಲ್ಲಿ ಸಾಗುವಾಗ ನಮ್ಮ ಸಾಂವಿಧಾನಿಕ ಚೌಕಟ್ಟನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ಮುನ್ನಡೆಯುತ್ತೇವೆ ಎಂಬ ನಂಬಿಕೆ ನನ್ನದಾಗಿದೆ. ಈಗ ಮಧ್ಯವರ್ತಿಗಳ ಸಂಸ್ಕೃತಿ ಅಂತ್ಯಗೊಂಡಿದೆ ಎಂಬುದು ಸತ್ಯ. ಅಭಿವೃದ್ಧಿಯ ಪ್ರಯಾಣದಲ್ಲಿ ದೇಶದ ಮಧ್ಯಮ ವರ್ಗ ಬಹಳ ಪ್ರಮುಖವಾದಂತಹ ಪಾತ್ರವನ್ನು ವಹಿಸಲಿದೆ. ಆದುದರಿಂದ ಸರಕಾರವು ಅದರ ಉದ್ಧಾರದ ನಿಟ್ಟಿನಲ್ಲಿ ತ್ವರಿತಗತಿಯಿಂದ ಕಾರ್ಯನಿರತವಾಗಿದೆ. ಇದಕ್ಕಾಗಿ ಸರಕಾರ ಎಲ್ಲಾ ರೀತಿಯ ನ್ಯಾಯಯುತ ಮೂಲಸೌಕರ್ಯಗಳನ್ನು ಒದಗಿಸುತ್ತಿದೆ.

ಗೌರವಾನ್ವಿತ ಅಧ್ಯಕ್ಷರೇ,

ಸರಕಾರವು ದೇಶದಲ್ಲಿ ಬೆಳವಣಿಗೆ ಮತ್ತು ಪ್ರಗತಿಯ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು ಸತತ ಪ್ರಯತ್ನಗಳನ್ನು ಅದಮ್ಯ ವಿಶ್ವಾಸದಿಂದ ಮಾಡುತ್ತಿದೆ. ಇಂತಹ ಹಲವು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಬಹಳ ಸ್ಪಷ್ಟವಾಗಿ ಮಂಡಿಸಿದ್ದಕ್ಕಾಗಿ ನಾನು ಗೌರವಾನ್ವಿತ ರಾಷ್ಟ್ರಪತಿಗಳಿಗೆ ಅತ್ಯಂತ ಋಣಿಯಾಗಿದ್ದೇನೆ. ರಾಜಕೀಯ ಅಜೆಂಡಾ ಇರುವವರಿಗೆ ನನ್ನ ಶುಭಾಶಯಗಳು. ಆದರೆ ನಾವು ರಾಷ್ಟ್ರೀಯ ಕಾರ್ಯಪಟ್ಟಿಯೊಂದಿಗೆ ಮುಂದುವರಿಯುತ್ತಿದ್ದೇವೆ. ಮತ್ತು ನಾವು ಅವುಗಳೊಂದಿಗೆ ಮುಂದುವರಿಯುತ್ತೇವೆ. ನಾನು ಮತ್ತೊಮ್ಮೆ ದೇಶದ ರೈತರಿಗೆ ಸಮಸ್ಯೆಗಳನ್ನು ಒಗ್ಗೂಡಿ ಬಗೆಹರಿಸುವ ಉದ್ದೇಶದೊಂದಿಗೆ ಮಾತುಕತೆಗೆ ಬರುವಂತೆ ಆಹ್ವಾನ ನೀಡಲು ಇಚ್ಛಿಸುತ್ತೇನೆ. ನಿರೀಕ್ಷೆಗಳೊಂದಿಗೆ ನಾನು ನಮ್ಮ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಅವರ ಭಾಷಣಕ್ಕಾಗಿ ಮತ್ತೊಮ್ಮೆ ಕೃತಜ್ಞತೆ ಸಲ್ಲಿಸುವುದರೊಂದಿಗೆ ನನ್ನ ಮಾತುಗಳನ್ನು ಮುಕ್ತಾಯ ಮಾಡುತ್ತೇನೆ

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1699371) Visitor Counter : 404