ಪ್ರಧಾನ ಮಂತ್ರಿಯವರ ಕಛೇರಿ

ಫೆಬ್ರವರಿ 17, ತಮಿಳುನಾಡಿನಲ್ಲಿ ತೈಲ ಮತ್ತು ಅನಿಲ ವಲಯದ ಪ್ರಮುಖ ಯೋಜನೆಗಳ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಮಂತ್ರಿ

Posted On: 15 FEB 2021 8:28PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ಫೆಬ್ರವರಿ 17ರಂದು ಸಂಜೆ 4.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ತಮಿಳುನಾಡಿನ ತೈಲ ಮತ್ತು ಅನಿಲ ವಲಯದ ಪ್ರಮುಖ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವರು ಮತ್ತು ರಾಷ್ಟ್ರಕ್ಕೆ ಸಮರ್ಪಿಸುವರು. ಪ್ರಧಾನಮಂತ್ರಿ ಅವರು ರಾಮನಾಥಪುರಂ-ತೂತುಕುಡಿ ನೈಸರ್ಗಿಕ ಅನಿಲ ಕೊಳವೆ ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸುವರು ಮತ್ತು ಮನಲಿಯ ಚೆನ್ನೈ ಪೆಟ್ರೋಲಿಯಂ ನಿಗಮ ನಿಯಮಿತದ ಗ್ಯಾಸೋಲಿನ್ ಡೆಸುಲ್ಫರೈಸೇಷನ್ ಘಟಕವನ್ನು ರಾಷ್ಟ್ರಕ್ಕೆ ಅರ್ಪಿಸುವರು. ಅವರು ನಾಗಪಟ್ಟಣನಲ್ಲಿ ಕಾವೇರಿ ಬೇಸಿನ್ ಸಂಸ್ಕರಣಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ಯೋಜನೆಗಳಿಂದ ಭಾರೀ ಪ್ರಮಾಣದಲ್ಲಿ ಸಾಮಾಜಿಕ-ಆರ್ಥಿಕ ಪ್ರಯೋಜನಗಳಾಗುವ ಜೊತೆಗೆ ದೇಶ ಊರ್ಜ ಆತ್ಮನಿರ್ಭರ ಭಾರತ ನಿರ್ಮಾಣ ನಿಟ್ಟಿನಲ್ಲಿ ಸಾಗಲು ಉತ್ತೇಜನ ನೀಡುತ್ತದೆ. ತಮಿಳುನಾಡಿನ ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಯೋಜನೆಗಳ ಕುರಿತು

ರಾಮನಾಥಪುರಂ-ತೂತುಕುಡಿ ಮಾರ್ಗ(143 ಕಿ.ಮೀ) ಇದ್ದು, ಇದು ಎನ್ನೋರ್-ತಿರುವಳ್ಳೂರ್-ಬೆಂಗಳೂರು-ಪುದುಚೇರಿ-ನಾಗಪಟ್ಟಣಂ-ಮಧುರೈ-ಟುಟಿಕಾರಿನ್ ನೈಸರ್ಗಿಕ ಅನಿಲ ಕೊಳವೆ ಮಾರ್ಗವನ್ನು ಸುಮಾರು 700 ಕೋಟಿ ರೂ. ವೆಚ್ಚದಲ್ಲಿ ಅಳವಡಿಸಲಾಗುವುದು. ಇದರಿಂದ ಒಎನ್ ಜಿಸಿ ಅನಿಲ ಘಟಕಗಳಿಗೆ ಮತ್ತು ಕೈಗಾರಿಕೆಗಳು ಹಾಗೂ ವಾಣಿಜ್ಯ ಗ್ರಾಹಕರಿಗೆ ನೈಸರ್ಗಿಕ ಅನಿಲವನ್ನು ಪೂರೈಸಲು ನೆರವಾಗುತ್ತದೆ.

ಮನಲಿಯ ಚೆನ್ನೈ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್(ಸಿಪಿಸಿಎಲ್)ನಲ್ಲಿ  ಗ್ಯಾಸೋಲೈನ್ ಡೆಸುಲ್ಫರೈಸೇಷನ್ ಘಟಕವನ್ನು ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಇದು ಕಡಿಮೆ ಸೆಲ್ಫರ್(8 ಪಿಪಿಎಂಗಿಂತ ಕಡಿಮೆ) ಅನ್ನು ಮತ್ತು ಪರಿಸರಸ್ನೇಹಿ ಗ್ಯಾಸೋಲಿನ್ ಉತ್ಪಾದಿಸಲಿದ್ದು, ಇದರಿಂದ ಮಾಲಿನ್ಯ ತಗ್ಗಿಸಲು ಮತ್ತು ಶುದ್ಧ ಪರಿಸರ ಕಾಯ್ದುಕೊಳ್ಳಲು ನೆರವಾಗಲಿದೆ.

ನಾಗಪಟ್ಟಣಂನಲ್ಲಿ ಕಾವೇರಿ ಬೇಸಿನ್ ರಿಫೈನರಿ ಘಟಕ ಸ್ಥಾಪಿಸಲಿದ್ದು, ಅದರ ವಾರ್ಷಿಕ ಸಾಮರ್ಥ್ಯ 9 ಮಿಲಿಯನ್ ಮೆಟ್ರಿಕ್ ಟನ್ ಆಗಿದೆ. ಅಂದಾಜು 31,500 ಕೋಟಿ ರೂ. ವೆಚ್ಚದಲ್ಲಿ ಐಒಸಿಎಲ್ ಮತ್ತು ಸಿಪಿಸಿಎಲ್ ಜಂಟಿಯಾಗಿ ಇದನ್ನು ಸ್ಥಾಪಿಸಲಿದೆ. ಇದರಿಂದ ಮೋಟಾರ್ ಸ್ಪಿರಿಟ್ ಮತ್ತು ಬಿಎಸ್-VI ಮಾನದಂಡದ ಡೀಸೆಲ್ ಹಾಗೂ ಮೌಲ್ಯವರ್ಧಿತ ಉತ್ಪನ್ನವಾಗಿ ಪ್ರೊಪಲೈನ್ ಅನ್ನು ಉತ್ಪಾದಿಸಲಾಗುವುದು

***


(Release ID: 1698366) Visitor Counter : 204