ಜವಳಿ ಸಚಿವಾಲಯ

ಜನವರಿ 31 ರಿಂದ ಫೆಬ್ರವರಿ 4ರ ವರೆಗೆ ಭಾರತೀಯ ಅಂತಾರಾಷ್ಟ್ರೀಯ ರೇಷ್ಮೆ ಮೇಳ: ಕೇಂದ್ರ ಜವಳಿ ಸಚಿವರಾದ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಉದ್ಘಾಟನೆ

Posted On: 31 JAN 2021 7:33PM by PIB Bengaluru

8 ನೇ ಭಾರತ ಅಂತಾರಾಷ್ಟ್ರೀಯ ರೇಷ್ಮೆ  ಮೇಳವನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಜವಳಿ ಸಚಿವರಾದ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಇಂದು ವರ್ಚುವಲ್ ಮೂಲಕ ಉದ್ಘಾಟಿಸಿದರು.

2021ರ ಜನವರಿ 31 ರಿಂದ ಫೆಬ್ರವರಿ 4 ರ ವರೆಗೆ ನಡೆಯಲಿರುವ ಭಾರತ ರೇಷ್ಮೆ ರಫ್ತು ಉತ್ತೇಜನ ಮಂಡಳಿಯ ಸಹಯೋಗದಲ್ಲಿ ನಡೆಯುತ್ತಿರುವ ಅತ್ಯಂತ ದೊಡ್ಡ ರೇಷ್ಮೆ ಮೇಳ ಇದಾಗಿದ್ದು, ಎಲ್ಲಾ ರೇಷ್ಮೆ ಮಾರಾಟಗಾರರನ್ನು ಒಂದೆಡೆ ತಂದಿದೆ.

ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ವರ್ಚುವಲ್ ಮೂಲಕ ಆಯೋಜಿಸಲಾಗಿತ್ತು. ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಮತಿ ಸ್ಮೃತಿ ಇರಾನಿ, ಸುಮಾರು 200 ಕ್ಕೂ ಹೆಚ್ಚು ಸಾಗರೋತ್ತರ ರೇಷ್ಮೆ ಖರೀದಿದಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಇವರ ಜತೆ ಸಂಪರ್ಕವಿರುವ ಇಷ್ಟೇ ಸಂಖ್ಯೆಯ ಭಾರತೀಯರು ಸಹ ನೋಂದಣಿ ಮಾಡಿಕೊಂಡು ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ಈ ಮೇಳದಲ್ಲಿ ನೂರಕ್ಕೂ ಹೆಚ್ಚು ಖ್ಯಾತ ರೇಷ್ಮೆ ಉತ್ಪಾದನೆ ಮತ್ತು ಮಾರಾಟ ಕಂಪೆನಿಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಾರತೀಯ ರೇಷ್ಮೆಯ ಸೌಂದರ್ಯ ಮತ್ತು ಚೈತನ್ಯವನ್ನು ಆಚರಿಸಲು ಈ ವೈಭವದಲ್ಲಿ ಪಾಲ್ಗೊಳ್ಳುವಂತೆ ಪ್ರದರ್ಶನಕಾರರು  ಮತ್ತು ಸಾಗರೋತ್ತರ ಖರೀದಿದಾರರಿಗೆ ಸಚಿವರು ಕರೆ ನೀಡಿದರು.

 ರೇಷ್ಮೆ ಮತ್ತು ರೇಷ್ಮೆ ಆಧರಿತ ಉತ್ಪನ್ನಗಳ ಮೇಳವನ್ನು ಭಾರತೀಯ ರೇಷ್ಮೆ ರಫ್ತು ಉತ್ತೇಜನ ಮಂಡಳಿ ಮೇಳ ಆಯೋಜಿಸಿದ್ದು, ಕೇಂದ್ರ ಜವಳಿ ಮತ್ತು ವಾಣಿಜ್ಯ ಇಲಾಖೆ ಮೇಳಕ್ಕೆ ಪ್ರಯೋಜಕತ್ವ ನೀಡಿದೆ. ಭಾರತದಲ್ಲಿ ರೇಷ್ಮೆ ಉತ್ಪಾದನೆಗೆ ದೀರ್ಘ ಇತಿಹಾಸವಿದೆ ಮತ್ತು ಜಗತ್ತಿನಲ್ಲಿ ಎರಡನೇ ಅತಿ ಹೆಚ್ಚು ರೇಷ್ಮೆ ಉತ್ಪಾದನೆ ಮಾಡುವ ದೇಶ ಭಾರತ. ಇಡೀ ಜಗತ್ತಿನಲ್ಲಿ ಎಲ್ಲಾ ನಾಲ್ಕು ರೀತಿಯ ಪ್ರಮುಖ ರೇಷ್ಮೆಯನ್ನು ಭಾರತದಲ್ಲಿ ಮಾತ್ರ ಬೆಳೆಯಲಾಗುತ್ತದೆ. ಮಲಬರಿ, ಇರಿ, ತಸ್ಸಾರ್ ಮತ್ತು ಮುಗ ರೇಷ್ಮೆಯನ್ನು ಬೆಳೆಯಲಾಗುತ್ತಿದೆ. ಜವಳಿ ಕಾರ್ಖಾನೆಗಳು, ಬಟ್ಟೆ, ಸೀರೆ, ಕಾರ್ಪೆಟ್ ಗಳು, ಉನ್ನತ ಪ್ಯಾಷನ್ ರೇಷ್ಮೆ ವಸ್ತ್ರಗಳು, ಉಡುಗೊರೆ, ಶಿರೋವಸ್ತ್ರಗಳು, ಸ್ಟೋಲ್ ಗಳು, ಗೃಹೋಪಯೋಗಿ ವಸ್ತುಗಳು, ಪರದೆಗಳು ಸೀರೆಗಳನ್ನು ಉತ್ಪಾದಿಸುತ್ತಿವೆ. ರೇಷ್ಮೆಗೆ 11 ಜಿಯೋಗ್ರಾಫಿಕಲ್ ಇಂಡಿಕೇಷನ್ [ಜಿಐ] ಟ್ಯಾಗ್ ಹೊಂದಿದ್ದು, ಪೊಚಂಪಲ್ಲಿ ಇಕಟ್, ಚಂದೆರ್ ಪೌಲ್ ಸಿಲ್ಕ್, ಮೈಸೂರು ಸಿಲ್ಕ್, ಕಾಂಚಿಪುರಂ ಸಿಲ್ಕ್, ಮುಗ ಸಿಲ್ಕ್, ಸೇಲಂ ಸಿಲ್ಕ್, ಅರ್ನಿ ಸಿಲ್ಕ್, ಚಂಪ ಸಿಲ್ಕ್, ಭಾಗಲ್ಪುರ್ ಸಿಲ್ಕ್, ಬನಾರಾಸ್ ಬ್ರಾಕೋಡೆ ಮತ್ತು ಸೀರೆಗಳು ಮತ್ತಿತರ ಬ್ರ್ಯಾಂಡ್ ಗಳಿವೆ.

ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ  ಎದುರಾದ ಸವಾಲುಗಳನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ ಮತ್ತು  ಪರ್ಯಾಯ ವ್ಯಾಪಾರ ಮಾದರಿಗಳನ್ನು ಹುಡುಕುವ, ವರ್ಚುವಲ್ ಮೂಲಕ ಮೇಳ ಆಯೋಜಿಸುವ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಸಾಗರೋತ್ತರ ವ್ಯಾಪಾರ  ಪಾಲುದಾರರೊಂದಿಗೆ ವ್ಯವಹಾರ ಸಂಪರ್ಕಗಳನ್ನು ಪುನರುಜ್ಜೀವನಗೊಳಿಸಲು ಸಹಕಾರಿಯಾಗಲಿದೆ. 

***



(Release ID: 1693894) Visitor Counter : 187