ಹಣಕಾಸು ಸಚಿವಾಲಯ

2021 ರ ಜನವರಿಯಲ್ಲಿ ಬಹುತೇಕ 1.20 ಲಕ್ಷ ಕೋಟಿ ರೂ ತಲುಪಿದ ಜಿ.ಎಸ್.ಟಿ. ಆದಾಯ ಸಂಗ್ರಹ

Posted On: 31 JAN 2021 8:33PM by PIB Bengaluru

2021ರ ಜನವರಿ 31 ಸಂಜೆ 6 ಗಂಟೆ ವೇಳೆಗೆ  [2021.31.31] ಸರಕು ಮತ್ತು ಸೇವಾ ತೆರಿಗೆ ಜಿ.ಎಸ್.ಟಿ. ಆದಾಯ ಸಂಗ್ರಹ 1,19,847 ಕೋಟಿ ರೂಪಾಯಿಗೆ ತಲುಪಿದೆ. ಇದರಲ್ಲಿ ಸಿ.ಜಿ.ಎಸ್.ಟಿ 21,923 ಕೋಟಿ ರೂ, ಎಸ್.ಜಿ.ಎಸ್.ಟಿ 29,014 ಕೋಟಿ ರೂ, ಐ.ಜಿ.ಎಸ್.ಟಿ 60,923 ಕೋಟಿ ರೂ [ ವಸ್ತುಗಳ ಆಮದು ವಲಯದಿಂದ 27,424 ಕೋಟಿ ರೂ ಸೇರಿ] ಮತ್ತು  8,622 ಕೋಟಿ ರೂ ಸೆಸ್ [ ವಸ್ತುಗಳ ಆಮದು ವಲಯದಲ್ಲಿ 883 ಕೋಟಿ ರೂ ಸೇರಿ] ರೂಪದಲ್ಲಿ ಸಂಗ್ರಹವಾಗಿದೆ.

 ಕಳೆದ ಡಿಸೆಂಬರ್ ನಿಂದ 2021 ರ ಜನವರಿ 31 ರ ವರೆಗೆ 90 ಲಕ್ಷ ಜಿ.ಎಸ್.ಟಿ.ಆರ್-3 ಬಿ  ಸಲ್ಲಿಕೆಯಾಗಿದೆ.

ಸರ್ಕಾರ 24,531 ಕೋಟಿ ರೂ ಸಿ.ಜಿ.ಎಸ್.ಟಿ ಮತ್ತು ಐ.ಜಿ.ಎಸ್.ಟಿಯಿಂದ ಎಸ್.ಜಿ.ಎಸ್.ಟಿ. ಮೂಲಕ 19,371 ಕೋಟಿ ರೂ ಮೊತ್ತವನ್ನು ನಿಯಮಿತವಾಗಿ ಪಾವತಿಸಿದೆ. 2021 ರ ಜನವರಿ ತಿಂಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ನಿಯಮಿತ ಪಾವತಿಯ ನಂತರ ಸಿ.ಜಿ.ಎಸ್.ಟಿ ಯಲ್ಲಿ 46,454 ಕೋಟಿ ರೂ ಮತ್ತು ಎಸ್.ಜಿ..ಎಸ್.ಟಿ ಮೂಲಕ 48,385 ಕೋಟಿ ರೂ ಆದಾಯ ಬಂದಿದೆ.

ಕಳೆದ ಐದು ತಿಂಗಳಿಂದ ಜಿ.ಎಸ್.ಟಿಯಲ್ಲಿ ಆದಾಯ ಏರಿಕೆಯಾಗುತ್ತಿದ್ದು, 2021ರ ಜನವರಿಯಲ್ಲಿ ಇದಕ್ಕೂ ಹಿಂದಿನ ತಿಂಗಳಿಗೆ ಹೋಲಿಕೆ ಮಾಡಿದರೆ ಶೇ 8 ರಷ್ಟು ಪ್ರಗತಿಯಾಗಿತ್ತು. ಇದಕ್ಕೂ ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಕೆ ಮಾಡಿದರೆ ಈ ತಿಂಗಳಲ್ಲಿ ಸರಕುಗಳ ಆಮದು ವಲಯದಲ್ಲಿ ಶೇ 16 ರಷ್ಟು ಪ್ರಗತಿಯಾಗಿತ್ತು ಮತ್ತು ದೇಶೀಯ ವಹಿವಾಟಿನಲ್ಲಿ [ಸೇವೆಗಳ ಆಮದು ವಲಯದಿಂದ ಶೇ 6 ರಷ್ಟು  ಬೆಳವಣಿಗೆಯಾಗಿತ್ತು.

ಜಿ.ಎಸ್.ಟಿ ಜಾರಿಗೆ ಬಂದ ನಂತರದಿಂದ ಈವರೆಗೆ ಹೋಲಿಕೆ ಮಾಡಿದರೆ 2021 ರ ಜನವರಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಆದಾಯ ಹರಿದು ಬಂದಿದೆ ಮತ್ತು ಬಹುತೇಕ 1.2 ಲಕ್ಷ ಕೋಟಿ ರೂ ಗೆ ತಲುಪಿದೆ. ಕಳೆದ ತಿಂಗಳು 1.15 ಲಕ್ಷ ಕೋಟಿ ರೂ ಸಂಗ್ರಹವಾಗಿತ್ತು. ಕಳೆದ ನಾಲ್ಕು ತಿಂಗಳಿಂದ ಆದಾಯ ಒಂದು ಲಕ್ಷ ಕೋಟಿ ರೂ ದಾಟುತ್ತಿದೆ. ಈ ಬೆಳವಣಿಗೆಯನ್ನು ಗಮನಿಸಿದರೆ ಕೋವಿಡ್ ಸಾಂಕ್ರಾಮಿಕದ ನಂತರ ತ್ವರಿತವಾಗಿ ಆರ್ಥಿಕ ಪರಿಸ್ಥಿತಿ ಚೇತರಿಕೆಯಾಗುತ್ತಿರುವ ಸಂಕೇತವನ್ನು ಇದು ನೀಡಿದೆ. ನಕಲಿ ಬಿಲ್ ಗಳ ಬಗ್ಗೆ ನಿಕಟವಾಗಿ ನಿಗಾ ವಹಿಸಲಾಗುತ್ತಿದ್ದು, ಜಿ.ಎಸ್.ಟಿ, ಆದಾಯ ತೆರಿಗೆ, ಸೀಮಾಸುಂಕ ಒಳಗೊಂಡಂತೆ ಬಹುಹಂತಗಳಲ್ಲಿನ ದತ್ತಾಂಶಗಳ ವಿಶ್ಲೇಷಣೆ ಮತ್ತು ಪರಿಣಾಮಕಾರಿ ತೆರಿಗೆ ಆಡಳಿತವೂ ಕೂಡ ಕಳೆದ ಕೆಲವು ತಿಂಗಳಲ್ಲಿ ತೆರಿಗೆ ಸಂಗ್ರಹದ ಹೆಚ್ಚಳಕ್ಕೆ ಕಾರಣವಾಗಿದೆ.

ವರ್ಷದಿಂದ ವರ್ಷಕ್ಕೆ ಬೆಳವಣಿಗೆಯಾಗುತ್ತಿರುವ ಜಿ.ಎಸ್.ಟಿ ಟ್ರೆಂಡ್ ಗಮನಿಸಿದರೆ ಈ ಸಾಲಿನ ಹಣಕಾಸು ವರ್ಷದ ಮೊದಲ ಅರ್ಧವಾರ್ಷಿಕಕ್ಕೆ ಹೋಲಿಸಿದರೆ ಎರಡನೇ ಅರ್ಧವಾರ್ಷಿಕದ ಮೊದಲ ನಾಲ್ಕು ತಿಂಗಳಲ್ಲಿ ಶೇ 8 ರಷ್ಟು ಬೆಳವಣಿಗೆಯಾಗಿದ್ದು, ಇದಕ್ಕೂ ಹಿಂದಿನ ಅವಧಿಯಲ್ಲಿ [-] 24 ರಷ್ಟಿತ್ತು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿ.ಎಸ್.ಟಿ ಆದಾಯ ಸಂಗ್ರಹದ ಪಟ್ಟಿ ಈ ಕೆಳಕಂಡಂತಿದೆ.

 


(Release ID: 1693890) Visitor Counter : 270