ಹಣಕಾಸು ಸಚಿವಾಲಯ

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಸರಕು ವ್ಯಾಪಾರ ಕೊರತೆ ಇಳಿಕೆ


ಚೀನಾ ಮತ್ತು ಅಮೆರಿಕಾ ಜೊತೆ ವ್ಯಾಪಾರ ಸಮತೋಲನ ಸುಧಾರಣೆ

17 ವರ್ಷಗಳ ಬಳಿಕ ಚಾಲ್ತಿ ಖಾತೆಯಲ್ಲಿ ಉಳಿತಾಯದ ನಿರೀಕ್ಷೆಯಲ್ಲಿ ಭಾರತ

ವಿದೇಶಿ ವಿನಿಮಯ ಮೀಸಲು ಸಾರ್ವಕಾಲಿಕ ಹೆಚ್ಚಳ, 2021ರ ಜನವರಿ 8 ರಂದು 586.1 ಬಿಲಿಯನ್ ಅಮೆರಿಕನ್ ಡಾಲರ್

ಭಾರತದ ಬಾಹ್ಯ ಸಾಲ 2.0 ಬಿಲಿಯನ್ ಅಮೆರಿಕನ್ ಡಾಲರಿನಷ್ಟು ಇಳಿಕೆ

ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ ಆರ್.ಬಿ.ಐ.ಯ ಮಧ್ಯಪ್ರವೇಶದಿಂದಾಗಿ ರೂಪಾಯಿ ಮೌಲ್ಯದ ಏಕಪಕ್ಷೀಯ ಬೆಲೆ ಏರಿಕೆ ಮತ್ತು ಚಂಚಲತೆಯ ನಿಯಂತ್ರಣಕ್ಕೆ ಯಶಸ್ಸು

Posted On: 29 JAN 2021 3:33PM by PIB Bengaluru

ಕೋವಿಡ್ -19 ಜಾಗತಿಕ ಸಾಂಕ್ರಾಮಿಕವು 2020ರಲ್ಲಿ ಅತ್ಯಂತ ದಾರುಣವಾದ  ಜಾಗತಿಕ ಹಿಂಜರಿತಕ್ಕೆ ಕಾರಣವಾಗಿದೆ. ಆದರೆ ಅದರ ಆರ್ಥಿಕ ಪರಿಣಾಮವು ಆರಂಭದಲ್ಲಿ ಭಯಪಟ್ಟುದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕಂಡುಬಂದಿದೆ. ಇದರಿಂದುಂಟಾದ ಆರ್ಥಿಕ ಬಿಕ್ಕಟ್ಟಿನ ಪರಿಣಾಮವಾಗಿ  ಜಾಗತಿಕ ವ್ಯಾಪಾರದಲ್ಲಿ ಇಳಿಕೆಯಾಗಿದೆ, ಸರಕುಗಳ ದರದಲ್ಲಿ ಇಳಿಕೆಯಾಗಿದೆ ಮತ್ತು ಬಾಹ್ಯ ಹಣಕಾಸು ಪರಿಸ್ಥಿತಿಗಳು ಬಿಗಿಯಾಗಿವೆ ಮತ್ತು ಚಾಲ್ತಿ ಖಾತೆಯ ಶಿಲ್ಕಿನಲ್ಲಿ  ವಿವಿಧ ರೀತಿಯ ಪರಿಣಾಮಗಳುಂಟಾಗಿವೆ ಹಾಗು ವಿವಿಧ ದೇಶಗಳ ಕರೆನ್ಸಿಗಳು ಅದರ ಪರಿಣಾಮವನ್ನು ಅನುಭವಿಸುವಂತಾಗಿದೆ. ಜಾಗತಿಕ ಸರಕು ವ್ಯಾಪಾರ 2020 ರಲ್ಲಿ 9.2 ಪ್ರತಿಶತದಷ್ಟು  ಕಡಿಮೆಯಾಗಬಹುದು ಎಂದು ಕೇಂದ್ರ ಹಣಕಾಸು ಹಾಗು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು ಮಂಡಿಸಿದ 2020-21 ಆರ್ಥಿಕ ಸಮೀಕ್ಷೆ ಹೇಳಿದೆ.

ಆರ್ಥಿಕ ಸಮೀಕ್ಷೆಯು ಭಾರತದ ಆಮದು ಪ್ರಮಾಣದಲ್ಲಿ ಇಳಿಕೆಯಾಗಿರುವುದನ್ನು ಗಮನಿಸಿದೆ.ಆದಾಗ್ಯೂ ಆಮದು ಪ್ರಮಾಣವು ರಫ್ತನ್ನು ಮೀರಿಸಿದೆ. ಇದರಿಂದ 2020-21 ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ  57.5 ಬಿಲಿಯನ್ ಅಮೆರಿಕನ್ ಡಾಲರಿನಷ್ಟು ಸಣ್ಣ ಪ್ರಮಾಣದ ವ್ಯಾಪಾರ ಕೊರತೆ ಉಂಟಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕೊರತೆ 125.9 ಬಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು.

ಚಾಲ್ತಿ ಖಾತೆ:

  • ರಫ್ತು

2020-21 ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಸರಕುಗಳ ರಫ್ತು (-) 15.7 ಪ್ರತಿಶತದಷ್ಟು ಇಳಿಕೆಯಾಗಿದೆ ಅಂದರೆ 200.8 ಬಿಲಿಯನ್ ಅಮೇರಿಕನ್ ಡಾಲರಿಗೆ ಇಳಿಕೆಯಾಗಿದೆ. 2019-20 ಏಪ್ರಿಲ್ಡಿಸೆಂಬರ್ ಅವಧಿಯಲ್ಲಿ ಪ್ರಮಾಣ 238.3 ಬಿಲಿಯನ್ ಅಮೆರಿಕನ್ ಡಾಲರಿನಷ್ಟಿತ್ತು. ಪೆಟ್ರೋಲಿಯಂ, ತೈಲ  ಮತ್ತು ಲ್ಯೂಬ್ರಿಕೆಂಟ್ ಗಳು (ಪಿ..ಎಲ್) ರಫ್ತು ಪರಿಶೀಲನೆಯಲ್ಲಿರುವ ಅವಧಿಯ ರಫ್ತು ಸಾಧನೆಯ ಮೇಲೆ ಋಣಾತ್ಮಕ ಪರಿಣಾಮ ಬೀರಿವೆ. ಪಿ..ಎಲ್. ಯೇತರ ರಫ್ತು ಧನಾತ್ಮಕವಾಗಿದ್ದು, 2020-21 ತೃತೀಯ ತ್ರೈಮಾಸಿಕದಲ್ಲಿ ರಫ್ತು ಸಾಧನೆ ಹೆಚ್ಚಳಕ್ಕೆ ಸಹಾಯವಾಗಿದೆ. ಪಿ..ಎಲ್. ಯೇತರ ರಫ್ತುಗಳು, ಕೃಷಿ ಮತ್ತು ಇತರ ಉತ್ಪನ್ನಗಳು, ಔಷಧಿ ಮತ್ತು ಫಾರ್ಮಾಸ್ಯೂಟಿಕಲ್ಸ್ ಗಳು, ಅದಿರುಗಳು, ಖನಿಜಗಳು ಹೆಚ್ಚಳವಾಗಿವೆ ಎಂದು 2020-21 ಆರ್ಥಿಕ ಸಮೀಕ್ಷೆ ಹೇಳಿದೆ.

  • ಆಮದುಗಳು

ಒಟ್ಟು ಸರಕುಗಳ ಆಮದು 2020-21 ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ (-) 29.1 ಪ್ರತಿಶತ ಇಳಿಕೆಯಾಗಿ 258.3 ಬಿಲಿಯನ್ ಡಾಲರಿಗೆ ಇಳಿದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 364.2 ಬಿಲಿಯನ್ ಅಮೆರಿಕನ್ ಡಾಲರುಗಳಷ್ಟಾಗಿತ್ತು. ಪಿ..ಎಲ್. ಆಮದುಗಳಲ್ಲಿಯ ಕುಸಿತ ಒಟ್ಟು ಆಮದಿನ ಬೆಳವಣಿಗೆಯನ್ನು  ಕಡಿಮೆ ಮಾಡಿದೆ. 2020-21 ಮೊದಲ ತ್ರೈಮಾಸಿಕದಲ್ಲಿ ಅಮದು ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ, ಬಳಿಕದ ತ್ರೈಮಾಸಿಕಗಳಲ್ಲಿ ಇಳಿಕೆ ಇನ್ನಷ್ಟು ಅನುಕೂಲಕರ ಪ್ರಮಾಣವನ್ನು ದಾಖಲಿಸಿದೆ. ಚಿನ್ನ ಮತ್ತು ಬೆಳ್ಳಿ ಆಮದಿನಲ್ಲಿ ಧನಾತ್ಮಕ ಬೆಳವಣಿಗೆ ತೀವ್ರಗೊಂಡಿದೆ ಮತ್ತು ಪಿ..ಎಲ್. ಯೇತರ, ಚಿನ್ನ ಅಲ್ಲದ ಮತ್ತು ಬೆಳ್ಳಿ ಆಮದಿನ ಪ್ರಮಾಣದಲ್ಲಿ ಕುಸಿತವನ್ನು ಕಿರುದು ಮಾಡಿದೆ.ರಸಗೊಬ್ಬರಗಳು, ತೈಲ, ಔಷಧಿ ಮತ್ತು ಫಾರ್ಮಾಸ್ಯೂಟಿಕಲ್ ಗಳು ಹಾಗು ಕಂಪ್ಯೂಟರ್ ಹಾರ್ಡ್ ವೇರ್ ಮತ್ತು ಇತರ ಸಾಮಗ್ರಿಗಳು ಪಿ..ಎಲ್. ಯೇತರ, ಚಿನ್ನ ರಹಿತ ಮತ್ತು ಬೆಳ್ಳಿ ಆಮದಿನ ಬೆಳವಣಿಗೆಯ ಮೇಲೆ ಧನಾತ್ಮಕ ಪರಿಣಾಮವನ್ನುಂಟು ಮಾಡಿವೆ, ಆಮದು ಕಡಿಮೆಯಾಗಿರುವುದರಿಂದ ಚೀನಾ ಮತ್ತು ಅಮೆರಿಕಾ ನಡುವಣ ವ್ಯಾಪಾರ ಸಮತೋಲನ ಸುಧಾರಣೆಯಾಗಿದೆ ಎಂದು 2020-21 ಆರ್ಥಿಕ ಸಮೀಕ್ಷೆ ಹೇಳಿದೆ.

  • ಸೇವೆಗಳು

ಒಟ್ಟು ಸೇವೆಗಳ ಪಾವತಿ 41.7 ಬಿಲಿಯನ್ ಅಮೆರಿಕನ್ ಡಾಲರುಗಳಾಗಿದ್ದು, 2020 ಏಪ್ರಿಲ್ ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಸ್ಥಿರವಾಗಿದೆ.ವರ್ಷದ ಹಿಂದೆ ಇದೇ ಅವಧಿಗೆ ಪ್ರಮಾಣ 40.5 ಬಿಲಿಯನ್ ಅಮೆರಿಕನ್ ಡಾಲರ್ ಇತ್ತು. ಸೇವಾ ವಲಯದ ಪುನಶ್ಚೇತನ ಸಾಫ್ಟ್ ವೇರ್ ಸೇವೆಗಳಿಂದಾಗಿದೆ. ಒಟ್ಟು ಸೇವಾ ರಫ್ತಿನಲ್ಲಿ ಕ್ಷೇತ್ರದ ಪಾಲು 49 ಪ್ರತಿಶತದಷ್ಟಾಗಿದೆ ಎಂದು 2020-21 ಆರ್ಥಿಕ ಸಮೀಕ್ಷೆ ಹೇಳಿದೆ.

ನಿವ್ವಳ ಖಾಸಗಿ ವರ್ಗಾವಣೆ ಪಾವತಿಗಳು, ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಸಿಬ್ಬಂದಿಗಳು  ಮಾಡುವ ಠೇವಣಿಗಳಿಂದ ಬಂದಿದ್ದು ಹಣಕಾಸು ವರ್ಷ 2020-21 ಮೊದಲಾರ್ಧದಲ್ಲಿ ಒಟ್ಟು 35.8 ಬಿಲಿಯನ್ ಅಮೆರಿಕನ್ ಡಾಲರುಗಳಷ್ಟಾಗಿವೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದರಲ್ಲಿ 6.7 ಪ್ರತಿಶತದಷ್ಟು ಇಳಿಕೆಯಾಗಿದೆ.

ಹಣಕಾಸು ವರ್ಷ 2020-21 ಮೊದಲಾರ್ಧದಲ್ಲಿ ಸರಕುಗಳ ಆಮದಿನಲ್ಲಿ ಭಾರೀ ಕಡಿತವಾಗಿದೆ ಮತ್ತು ಸಂಚಾರ ಸೇವೆಯಲ್ಲಿ ಕಡಿತವಾಗಿರುವುದರಿಂದ ಚಾಲ್ತಿ ಪಾವತಿಯಲ್ಲಿ ಕುಸಿತವಾಗಿದೆ.. ಇದರಿಂದ ಚಾಲ್ತಿ ಖಾತೆಯಲ್ಲಿ 34.7 ಬಿಲಿಯನ್ ಅಮೆರಿಕನ್ ಡಾಲರ್ (ಜಿ.ಡಿ.ಪಿ. 3.1 ಪ್ರತಿಶತ) ಹೆಚ್ಚುವರಿ ಉಳಿತಾಯವಾಗಿದೆ. ಭಾರತವು ವಾರ್ಷಿಕ ಚಾಲ್ತಿ ಖಾತೆ ಉಳಿತಾಯವನ್ನು 17 ವರ್ಷಗಳ ಬಳಿಕ ದಾಖಲಿಸುವ ನಿರೀಕ್ಷೆ ಇದೆ ಎಂದು 2020-21 ಆರ್ಥಿಕ ಸಮೀಕ್ಷೆ ಅಂದಾಜು ಮಾಡಿದೆ.

ಬಂಡವಾಳ ಖಾತೆ:

ಬಂಡವಾಳ ಖಾತೆಯಲ್ಲಿಯ ಶಿಲ್ಕು ಎಫ್,ಡಿ.. ಮತ್ತು ಎಫ್.ಪಿ.. ಒಳಹರಿವಿನಿಂದಾಗಿ ಹೆಚ್ಚಳವಾಗಿದೆ. 2020 ಏಪ್ರಿಲ್-ಅಕ್ಟೋಬರ್ ನಡುವಣ ಅವಧಿಯಲ್ಲಿ ನಿವ್ವಳ ಎಫ್.ಡಿ. ಹರಿವು 27.5 ಬಿಲಿಯನ್ ಅಮೆರಿಕನ್ ಡಾಲರುಗಳಷ್ಟಾಗಿತ್ತು. 2019-20 ಅವಧಿಯ ಮೊದಲ ಏಳು ತಿಂಗಳುಗಳಿಗೆ ಹೋಲಿಸಿದರೆ  14.8 ಪ್ರತಿಶತ ಹೆಚ್ಚಳ ದಾಖಲಾಗಿದೆ. ಚಾಲ್ತಿ ಮತ್ತು ಬಂಡವಾಳ ಖಾತೆಗಳಲ್ಲಿ ಬೆಳವಣಿಗೆಗಳು  ವಿದೇಶಿ ವಿನಿಮಯ ಮೀಸಲು ಸಾರ್ವಕಾಲಿಕ ಪ್ರಮಾಣದಲ್ಲಿ ಹೆಚ್ಚಲು ಕಾರಣವಾಗಿವೆ. 2021 ಜನವರಿ 8 ರಂದು ಇದು 586.1 ಬಿಲಿಯನ್ ಅಮೆರಿಕನ್ ಡಾಲರುಗಳಷ್ಟಾಗಿದೆ.

2020 ಸೆಪ್ಟೆಂಬರ್ ಅಂತ್ಯದಲ್ಲಿ, ಭಾರತದ ಬಾಹ್ಯ ಸಾಲ 556.2 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ. 2020 ಮಾರ್ಚ್ ಅಂತ್ಯಕ್ಕೆ ಹೋಲಿಸಿದಾಗ 2.0 ಬಿಲಿಯನ್ ಅಮೆರಿಕನ್ ಡಾಲರ್ (0.4 ಪ್ರತಿಶತ) ಇಳಿಕೆಯಾಗಿದೆ. ಜಿ.ಡಿ.ಪಿ. ಯೊಂದಿಗೆ ಇದರ ಅನುಪಾತದಲ್ಲಿ ಆಂಶಿಕ ಏರಿಕೆಯಾಗಿದ್ದು ಅದು 21.6 ಪ್ರತಿಶತದಷ್ಟಾಗಿದೆ. ಸಾಲ ಚಂಚಲತೆ ಸೂಚ್ಯಂಕಗಳಾದ ವಿದೇಶೀ ವಿನಿಮಯ ಮೀಸಲು , ಒಟ್ಟು ಮತ್ತು ಅಲ್ಪಾವಧಿ ಸಾಲ(ಮೂಲ ಮತ್ತು ಉಳಿಕೆ) ಹಾಗು ಅಲ್ಪಾವಧಿ ಸಾಲ (ಮೂಲ, ಅವಧಿ ಪೂರ್ಣಗೊಂಡ) ಹಾಗು ಒಟ್ಟು ವಿದೇಶಿ ಸಾಲದ ಅನುಪಾತಗಳಲ್ಲಿ ಸುಧಾರಣೆಯಾಗಿದೆ.ಸಾಲ ಸೇವಾ ಅನುಪಾತ (ಅಸಲು ಮರುಪಾವತಿ ಮತ್ತು ಬಡ್ಡಿ ಪಾವತಿ) 2020 ಸೆಪ್ಟೆಂಬರ್ ಅಂತ್ಯಕ್ಕೆ 9.7 ಪ್ರತಿಶತಕ್ಕೆ ಏರಿಕೆಯಾಗಿದೆ. 2020 ಮಾರ್ಚ್ ತಿಂಗಳಾಂತ್ಯಕ್ಕೆ ಇದು 6.5 ಪ್ರತಿಶತದಷ್ಟಿತ್ತು. ಇದು ಕಡಿಮೆ ಚಾಲ್ತಿ ಪಾವತಿಯನ್ನು ಪ್ರತಿನಿಧಿಸುತ್ತದೆ

ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ ಆರ್.ಬಿ.. ಮಧ್ಯಪ್ರವೇಶ ಆರ್ಥಿಕ ಚಂಚಲತೆ ಮತ್ತು ರೂಪಾಯಿಯ ಏಕಪಕ್ಷೀಯ ಮೌಲ್ಯವರ್ಧನೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ ಎಂದು ಆರ್ಥಿಕ ಸಮೀಕ್ಷೆ, 2020-21 ಹೇಳಿದೆ. ಹಣದುಬ್ಬರ ನಿಯಂತ್ರಣಕ್ಕೆ ಆರ್.ಬಿ..ಯು ಬಿಗಿಯಾದ ಹಣಕಾಸು ನೀತಿ ಅನುಸರಿಸುತ್ತಿರುವುದರಿಂದ ಇನ್ನೊಂದೆಡೆ ಬೆಳವಣಿಗೆಗೆ ಉತ್ತೇಜನ ದೊರಕಿದೆ. ಮೇಲೆ ಹೇಳಲಾದ ಹಿನ್ನಡೆಗಳ ಹೊರತಾಗಿಯೂ ರಪ್ತು ಉತ್ತೇಜನಕ್ಕೆ ಉತ್ಪಾದನಾ ಆಧಾರಿತ ಪ್ರೋತ್ಸಾಧನ, ರಫ್ತು ಮಾಡಲಾದ ವಸ್ತುಗಳ ತೆರಿಗೆಗಳ ಕಡಿತ, ವ್ಯಾಪಾರವನ್ನು ಉತ್ತೇಜಿಸಲು ಸಾಗಾಣಿಕ ಮೂಲಸೌಕರ್ಯಗಳ ಸುಧಾರಣೆ ಇತ್ಯಾದಿಗಳು ರಫ್ತು ಮಾಡಲು ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡಲಿವೆ.

***


(Release ID: 1693854) Visitor Counter : 312