ಹಣಕಾಸು ಸಚಿವಾಲಯ
ಭಾರತದ ಅಭಿವೃದ್ಧಿ ಕಾರ್ಯತಂತ್ರಕ್ಕೆ ಸುಸ್ಥಿರ ಅಭಿವೃದ್ಧಿ ಮೂಲ; ಏಕರೂಪ ಆರ್ಥಿಕ ಪ್ರಚೋದನೆ ಮತ್ತು ವ್ಯಾಪಕ ಶ್ರೇಣಿಯ ಆರ್ಥಿಕ ಸುಧಾರಣೆ: ಆರ್ಥಿಕ ಸಮೀಕ್ಷೆ
ಸ್ವಯಂಪ್ರೇರಿತ ರಾಷ್ಟ್ರೀಯ ವಿಮರ್ಶೆ (ವಿಎನ್ಆರ್) ಎಸ್ಡಿಜಿಎಸ್ ಪರಿಶೀಲನೆ ಮತ್ತು ಅನುಸರಣೆಗಾಗಿ ಸುಸ್ಥಿರ ಅಭಿವೃದ್ಧಿ ಕುರಿತು ವಿಶ್ವಸಂಸ್ಥೆಯ ಉನ್ನತ ಮಟ್ಟದ ರಾಜಕೀಯ ವೇದಿಕೆಗೆ (ಎಚ್ಎಲ್ಪಿಎಫ್) ಪ್ರಸ್ತುತಪಡಿಸಲಾಗಿದೆ.
ರಾಜ್ಯ ಮತ್ತು ಉಪ-ರಾಜ್ಯ ಮಟ್ಟದಲ್ಲಿ ಎಸ್ಡಿಜಿಎಸ್ನ ಸ್ಥಳೀಕರಣವು ಸಮನ್ವಯ, ಒಮ್ಮುಖ ಮತ್ತು ದತ್ತಾಂಶ ನಿರ್ವಹಣೆಯನ್ನು ಹೆಚ್ಚು ನಿಖರ ಮತ್ತು ಊಹಿಸಬೇಕಾದ ಅಗತ್ಯವಿದೆ
ಭಾರತದಿಂದ ಹವಾಮಾನ ಕ್ರಮಕ್ಕಾಗಿ ಹಣಕಾಸು ಸಜ್ಜುಗೊಳಿಸಲು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ಸಮಗ್ರ ವಿಧಾನವು ಅಗತ್ಯವಾಗಿರಬೇಕು
ಹವಾಮಾನ ಹಣಕಾಸು, ಪಾರದರ್ಶಕತೆ ಯಾಂತ್ರಿಕತೆ, ಸಾಮಾನ್ಯ ಸಮಯ ಚೌಕಟ್ಟುಗಳು ಮತ್ತು ದೀರ್ಘಾವಧಿಯ ಹವಾಮಾನ ಹಣಕಾಸು ವ್ಯಾಖ್ಯಾನಗಳ ಬಗ್ಗೆ ಒಮ್ಮತವನ್ನು ಸಾಧಿಸುವುದು ಕಾಪ್ 26 ರಲ್ಲಿ ಮೊದಲ ಆದ್ಯತೆಯಾಗಿದೆ
ಜಾಗತಿಕ ಹಸಿರು ಬಾಂಡ್ಗಳ ಸಂಚಿತ ವಿತರಣೆಯು 2020 ರಲ್ಲಿ 1 ಟ್ರಿಲಿಯನ್ ಅಮೆರಿಕಾ ಡಾಲರ್ ಗಳನ್ನು ದಾಟಿದೆ
ಸೌರಶಕ್ತಿ ಕ್ರಾಂತಿಗಾಗಿ ಅಂತರರಾಷ್ಟ್ರೀಯ ಸೌರ ಒಕ್ಕೂಟದ ಅಡಿಯಲ್ಲಿ ಪ್ರಾರಂಭಿಸಲಾದ ‘ವಿಶ್ವ ಸೌರ ಬ್ಯಾಂಕ್’ ಮತ್ತು ‘ಒನ್ ಸನ್ ಒನ್ ವರ್ಲ್ಡ್ ಒನ್ ಗ್ರಿಡ್ ಉಪಕ್ರಮ’
Posted On:
29 JAN 2021 3:26PM by PIB Bengaluru
17 ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ (ಎಸ್‌ಡಿಜಿ) ಸುಸ್ಥಿರ ಅಭಿವೃದ್ಧಿಯ 2030 ಕಾರ್ಯಸೂಚಿಯು ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಆಯಾಮಗಳನ್ನು ಸಂಯೋಜಿಸುವ ಮೂಲಕ ಭಾರತಕ್ಕೆ ಸಮಗ್ರ ಅಭಿವೃದ್ಧಿ ಕಾರ್ಯಸೂಚಿಯನ್ನು ಒಳಗೊಂಡಿದೆ. 2020-21ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ. ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದರು. ರಾಷ್ಟ್ರಗಳಾದ್ಯಂತ ಮತ್ತು ರಾಷ್ಟ್ರಗಳ ಒಳಗೆ ಮಾತ್ರವಲ್ಲದೆ ಪೀಳಿಗೆಯಾದ್ಯಂತ ನೀತಿಯನ್ನು ಸಾಧಿಸಲು ಮನವಿ ಮಾಡಿದರು. ಇದರಿಂದ ಕೊವಿಡ್-19 ಸೋಂಕಿನ ವಿರುದ್ಧ ಹೋರಾಡಬಹುದು ಎಂದರು.
ಭಾರತ ಮತ್ತು ಎಸ್‌ಡಿಜಿಗಳು
ಎಸ್‌ಡಿಜಿಗಳನ್ನು ಸರ್ಕಾರದ ನೀತಿಗಳು, ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಮುಖ್ಯವಾಹಿನಿಗೆ ತರಲು ಭಾರತ ಹಲವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಸಮೀಕ್ಷೆ ತಿಳಿಸುತ್ತದೆ. ಈ ನಿಟ್ಟಿನಲ್ಲಿ ಅದು ಈ ಕೆಳಗಿನವುಗಳನ್ನು ಉಲ್ಲೇಖಿಸುತ್ತದೆ:
- ಸುಸ್ಥಿರ ಅಭಿವೃದ್ಧಿಯ ಕುರಿತ ವಿಶ್ವಸಂಸ್ಥೆಯ ಉನ್ನತ ಮಟ್ಟದ ರಾಜಕೀಯ ವೇದಿಕೆಗೆ (ಎಚ್‌ಎಲ್‌ಪಿಎಫ್) ಪ್ರಸ್ತುತಪಡಿಸಿದ ಸ್ವಯಂಪ್ರೇರಿತ ರಾಷ್ಟ್ರೀಯ ವಿಮರ್ಶೆಯು (ವಿಎನ್ಆರ್) ಎಸ್ಡಿಜಿಗಳನ್ನು ನಿರಂತರ ನಿಶ್ಚಯ ಮತ್ತು ಪ್ರತಿಕ್ರಿಯೆಯ ಮೂಲಕ ಪರಿಶೀಲಿಸಲು ಮತ್ತು ಅನುಸರಿಸಲು ಒದಗಿಸುತ್ತದೆ. ಈ ಪ್ರಕ್ರಿಯೆಯು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಖರ್ಚಿನಲ್ಲಿ ಬರುವಂತೆ ಮಾಡಿದ್ದು, ಇದರಿಂದ ಖಾಸಗಿ ವಲಯದ ಸಕ್ರಿಯ ಭಾಗವಹಿಸುವಿಕೆ ಸಾಧ್ಯವಾಗುತ್ತದೆ.
- ಎಸ್ಡಿಜಿಗಳ ಸ್ಥಳೀಕರಣ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಸ್‌ಡಿಜಿಗಳನ್ನು ತಮ್ಮದೇ ನಿರ್ದಿಷ್ಟ ಸಂದರ್ಭಗಳಲ್ಲಿ ಅನುಷ್ಠಾನಗೊಳಿಸಲು ಪ್ರತ್ಯೇಕ ಸಾಂಸ್ಥಿಕ ರಚನೆಗಳನ್ನು ರಚಿಸಿವೆ. ಸಮನ್ವಯ, ಒಮ್ಮುಖ ಮತ್ತು ದತ್ತಾಂಶ ನಿರ್ವಹಣೆಯನ್ನು ಹೆಚ್ಚು ನಿಖರವಾಗಿಸಲು ಮತ್ತು ಊಹಿಸುವಲ್ಲಿ ಕೆಲವು ರಾಜ್ಯಗಳು ಪ್ರತಿ ಇಲಾಖೆಯೊಳಗೆ ಮತ್ತು ಜಿಲ್ಲಾ ಮಟ್ಟದಲ್ಲಿ ನೋಡಲ್ ಕಾರ್ಯವಿಧಾನಗಳನ್ನು ರಚಿಸಿವೆ.
ಕೊವಿಡ್-19 ಸಾಂಕ್ರಾಮಿಕ ರೋಗದಿಂದ ಹಿಂದೆಂದೂ ಕಂಡರಿಯದ ಬಿಕ್ಕಟ್ಟು ನಿರ್ಮಾಣವಾಗಿ ಹೊರಹೊಮ್ಮುತ್ತಿರುವ ಸವಾಲುಗಳನ್ನು ಸಮೀಕ್ಷೆಯು ಗುರುತಿಸುತ್ತದೆ ಮತ್ತು ಸುಸ್ಥಿರ ಅಭಿವೃದ್ಧಿಯು ಭಾರತದ ಅಭಿವೃದ್ಧಿ ಕಾರ್ಯತಂತ್ರಕ್ಕೆ ಕೇಂದ್ರವಾಗಿ ಉಳಿಯುತ್ತದೆ ಎಂದು ಉಲ್ಲೇಖಿಸುತ್ತದೆ.
ಹವಾಮಾನ ಬದಲಾವಣೆ
ಸಾಮಾನ್ಯವಾದರೂ ವಿಭಿನ್ನವಾದ ಜವಾಬ್ದಾರಿಗಳು ಮತ್ತು ಆಯಾ ಸಾಮರ್ಥ್ಯಗಳು ಮತ್ತು ಇಕ್ವಿಟಿಯ ತತ್ವಗಳ ಪ್ರಕಾರ ಭಾರತ ತನ್ನ ಜವಾಬ್ದಾರಿಗಳನ್ನು ಪೂರೈಸಲು ಹಲವಾರು ಪೂರ್ವಭಾವಿ ಹವಾಮಾನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸುತ್ತದೆ. ಭಾರತದ ಹವಾಮಾನ ಬದಲಾವಣೆಯ ರಾಷ್ಟ್ರೀಯ ಕ್ರಿಯಾ ಯೋಜನೆ (ಎನ್‌ಎಪಿಸಿಸಿ), ಜವಾಹರಲಾಲ್ ನೆಹರು ರಾಷ್ಟ್ರೀಯ ಸೌರ ಮಿಷನ್ (ಜೆಎನ್‌ಎನ್‌ಎಸ್‌ಎಂ), ಹವಾಮಾನ ಬದಲಾವಣೆ ಕ್ರಿಯಾ ಯೋಜನೆ (ಸಿಸಿಎಪಿ), ಹವಾಮಾನ ಬದಲಾವಣೆ ಮತ್ತು ಅನುಷ್ಠಾನದ ರಾಷ್ಟ್ರೀಯ ಹೊಂದಾಣಿಕೆಯ ನಿಧಿ ಮುಂತಾದ ಕ್ರಮಗಳ ಕುರಿತು ಸರ್ಕಾರದ ಕೆಲವು ಪ್ರಮುಖ ಉಪಕ್ರಮಗಳನ್ನು ಉಲ್ಲೇಖಿಸಲಾಗಿದೆ. ಭಾರತದಲ್ಲಿ (ಹೈಬ್ರಿಡ್ ಮತ್ತು) ಎಲೆಕ್ಟ್ರಿಕ್ ವೆಹಿಕಲ್ (ಫೇಮ್ ಇಂಡಿಯಾ) ಯೋಜನೆಯು ವೇಗವಾಗಿ ಅಳವಡಿಕೆಯಾಗುತ್ತಿದೆ. ಉತ್ಪಾದನೆಯೂ ವೇಗವನ್ನು ಪಡೆದುಕೊಂಡಿದೆ.
01.01.2021ರಂದು ಭಾರತದ ಎನ್‌ಡಿಸಿ ಪರಿಣಾಮಕಾರಿಯಾಗಿ ಪ್ರಾರಂಭವಾಯಿತು. ಇದರ ಪರಿಣಾಮವಾಗಿ ಹವಾಮಾನ ಬದಲಾವಣೆಯ ಕ್ರಿಯೆಯ ನಿರ್ಣಾಯಕ ಸಹಾಯಕನಾಗಿ ಹಣಕಾಸಿನ ಮಹತ್ವವನ್ನು ಸಮೀಕ್ಷೆಯು ಪ್ರದರ್ಶಿಸುತ್ತದೆ. ಸೂಕ್ತ ಹವಾಮಾನ ಕ್ರಮಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು ಪಡೆಯಲು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಗ್ರ ವಿಧಾನದ ಅಗತ್ಯವಿದೆ ಎಂದು ಅದು ಸ್ಪಷ್ಟವಾಗಿ ಹೇಳುತ್ತದೆ.
ಅಭಿವೃದ್ಧಿ ಹೊಂದಿದ ದೇಶಗಳು ಬದ್ಧತೆಯಿಂದ ಆರಂಭಿಸಿದ ವರ್ಷಕ್ಕೆ 100 ಬಿಲಿಯನ್ ಯುಎಸ್ ಡಾಲರ್‌ಗಳನ್ನು ಜಂಟಿಯಾಗಿ ಒಟ್ಟುಗೂಡಿಸುವ ಹವಾಮಾನ ಹಣಕಾಸು ಗುರಿಯನ್ನು ಅಭಿವೃದ್ಧಿ ಹೊಂದಿದ ದೇಶಗಳ ಪಕ್ಷಗಳು ಪೂರೈಸುವ ವರ್ಷ 2020 ಎಂದು ಭಾವಿಸಲಾಗಿತ್ತು. ಸಿಒಪಿ26 ಅನ್ನು 2021 ಕ್ಕೆ ಮುಂದೂಡುವುದರಿಂದ 2025 ರ ನಂತರದ ಗುರಿಯನ್ನು ತಿಳಿಸಲು ಮಾತುಕತೆ ನಡೆಸಲು ಮತ್ತು ಇತರ ಸಾಕ್ಷ್ಯ ಆಧಾರಿತ ಕೆಲಸಗಳನ್ನು ಕೈಗೊಳ್ಳಲು ಕಡಿಮೆ ಸಮಯ ಉಳಿಯುತ್ತದೆ. ಆದರೆ ಹವಾಮಾನ ಹಣಕಾಸು, ಪಾರದರ್ಶಕತೆ ಕಾರ್ಯವಿಧಾನ, ಸಾಮಾನ್ಯ ಸಮಯದ ಚೌಕಟ್ಟುಗಳು ಮತ್ತು ದೀರ್ಘಾವಧಿಯ ಹವಾಮಾನ ಹಣಕಾಸುಗಳ ವ್ಯಾಖ್ಯಾನದಲ್ಲಿ ಒಮ್ಮತವನ್ನು ಸಾಧಿಸುವ ವಿಷಯವು ಸಿಒಪಿ26 ರಲ್ಲಿ ಮೊದಲ ಆದ್ಯತೆಯಾಗಿ ಮುಂದುವರಿಯುತ್ತದೆ ಎಂಬುದು ಸ್ಪಷ್ಟವಾಗಿದೆ.
ಸುಸ್ಥಿರ ಹವಾಮಾನ ಹಣಕಾಸು
ಆರ್ಥಿಕ ಸಮೀಕ್ಷೆಯು ಸರ್ಕಾರದ ಅಭಿವೃದ್ಧಿ ಆದ್ಯತೆಗಳನ್ನು ಪೂರೈಸಲು ಸುಸ್ಥಿರ ಹಣಕಾಸಿನ ಮಹತ್ವವನ್ನು ತೋರಿಸುತ್ತದೆ ಮತ್ತು ಈ ನಿಟ್ಟಿನಲ್ಲಿ ಕೈಗೊಂಡ ಕೆಲವು ಹಂತಗಳನ್ನು ಉಲ್ಲೇಖಿಸುತ್ತದೆ:
- 2015 ರಲ್ಲಿ ಅಂತಿಮಗೊಳಿಸಲಾದ ಜವಾಬ್ದಾರಿಯುತ ಹಣಕಾಸಿಗಾಗಿ ರಾಷ್ಟ್ರೀಯ ಸ್ವಯಂಪ್ರೇರಿತ ಮಾರ್ಗಸೂಚಿಗಳು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಅತ್ಯುತ್ತಮ ಅಭ್ಯಾಸಗಳನ್ನು ಸಂಯೋಜಿಸುವ ಮತ್ತು ಹೊಂದಾಣಿಯಾಗುವ ಹಣಕಾಸು ವಲಯ-ನಿರ್ದಿಷ್ಟ ಮಾರ್ಗಸೂಚಿಗಳಾಗಿವೆ.
- ಆರ್‌ಬಿಐ ಸಾಮಾಜಿಕ ಮೂಲಸೌಕರ್ಯ ಮತ್ತು ಸಣ್ಣ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಸಾಲ ನೀಡುವುದನ್ನು ಆದ್ಯತೆಯ ವಲಯದ ಗುರಿಗಳಲ್ಲಿ ಸೇರಿಸಿತ್ತು.
- ವ್ಯವಹಾರದ ಜವಾಬ್ದಾರಿಯ ಪರಿಕಲ್ಪನೆಯನ್ನು ಮುಖ್ಯವಾಹಿನಿಗೆ ತರಲು 2009 ರಲ್ಲಿ ‘ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಸ್ವಯಂಪ್ರೇರಿತ ಮಾರ್ಗಸೂಚಿಗಳನ್ನು’ ಹೊರಡಿಸಲಾಯಿತು.
- ಪಟ್ಟಿ ಮಾಡಲಾದ ಮತ್ತು ಪಟ್ಟಿಮಾಡದ ಕಂಪನಿಗಳಿಗೆ ವ್ಯವಹಾರ ಜವಾಬ್ದಾರಿ ವರದಿ (ಬಿಆರ್‌ಆರ್) ಸ್ವರೂಪಗಳನ್ನು ಪರಿಶೀಲಿಸಲು ಮತ್ತು ನವೀಕರಿಸಲು ಸಮಿತಿಯನ್ನು ರಚಿಸಲಾಯಿತು
ಸಾಮಾಜಿಕ ಕಲ್ಯಾಣ ಉದ್ದೇಶದ ಕೈಗೂಡುವಿಕೆಗಾಗಿ ಕಾರ್ಯ ನಿರ್ವಹಿಸುವ ಸಾಮಾಜಿಕ ಉದ್ಯಮಗಳು ಬಂಡವಾಳವನ್ನು ಸಂಗ್ರಹಿಸಲು ಸೆಬಿಯ ನಿಯಂತ್ರಕ ವ್ಯಾಪ್ತಿಯಲ್ಲಿ ಭಾರತವು ಸಾಮಾಜಿಕ ಸ್ಟಾಕ್ ಎಕ್ಸ್ಚೇಂಜ್ (ಎಸ್ಎಸ್ಇ) ರಚಿಸುವ ದಿಕ್ಕಿನಲ್ಲಿ ಸಾಗುತ್ತಿದೆ.
ಚೀನಾದ ನಂತರ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಭಾರತವು ಎರಡನೇ ಅತಿದೊಡ್ಡ ಹಸಿರು ಬಾಂಡ್ ಮಾರುಕಟ್ಟೆಯಾಗಿದೆ ಎಂದು ಸಮೀಕ್ಷೆ ಉಲ್ಲೇಖಿಸಿದೆ. 2017 ರಲ್ಲಿ, ಭಾರತದಲ್ಲಿ ಗ್ರೀನ್ ಬಾಂಡ್ ವಿತರಣೆಗೆ ವೇಗ ನೀಡಲು, ಸೆಬಿ ಭಾರತೀಯ ಷೇರು ವಿನಿಮಯ ಕೇಂದ್ರಗಳಲ್ಲಿ ಹಸಿರು ಬಾಂಡ್‌ಗಳ ಪಟ್ಟಿ ಸೇರಿದಂತೆ ಹಸಿರು ಬಾಂಡ್‌ಗಳ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿತು. 2020 ರ ಡಿಸೆಂಬರ್ 24 ರ ಹೊತ್ತಿಗೆ, ಎಂಟು ಇಎಸ್‌ಜಿ ಮ್ಯೂಚುವಲ್ ಫಂಡ್‌ಗಳನ್ನು ಭಾರತದಲ್ಲಿ ಪ್ರಾರಂಭಿಸಲಾಗಿದೆ.
ಅಂತಾರಾಷ್ಟ್ರೀಯ ಹಂತದಲ್ಲಿ ಭಾರತದ ಉಪಕ್ರಮಗಳು
- ಜಾಗತಿಕವಾಗಿ ಸೌರಶಕ್ತಿ ಕ್ರಾಂತಿಯನ್ನು ತರಲು ಜಾಗತಿಕ ಆಮದಿನ ಅಂತರರಾಷ್ಟ್ರೀಯ ಸೌರ ಒಕ್ಕೂಟ (ಐಎಸ್‌ಎ) ಇತ್ತೀಚೆಗೆ ಎರಡು ಹೊಸ ಉಪಕ್ರಮಗಳನ್ನು ಪ್ರಾರಂಭಿಸಿದೆ-“ವಿಶ್ವ ಸೋಲಾರ್ ಬ್ಯಾಂಕ್ ಮತ್ತು "ಒನ್ ಸನ್ ಒನ್ ವರ್ಲ್ಡ್, ಒನ್ ಗ್ರಿಡ್ ಉಪಕ್ರಮ" – ಇದರಿಂದ ಜಾಗತಿಕವಾಗಿ ಸೌರ ಕ್ರಾಂತಿಯನ್ನು ಉಂಟು ಮಾಡಬಹುದು. ಐಎಸ್ಎ ಸಚಿವಾಲಯ ಇತ್ತೀಚೆಗೆ ಜಾಗತಿಕ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳನ್ನು ಒಳಗೊಂಡ ‘ಸುಸ್ಥಿರ ಹವಾಮಾನ ಕ್ರಮಕ್ಕಾಗಿ ಒಕ್ಕೂಟ’ ವನ್ನು ಪ್ರಾರಂಭಿಸಿದೆ. ಸದಸ್ಯ ರಾಷ್ಟ್ರಗಳಿಗೆ ಅತ್ಯಾಧುನಿಕ ಮತ್ತು ಮುಂದಿನ ಪೀಳಿಗೆಯ ಸೌರ ತಂತ್ರಜ್ಞಾನಗಳನ್ನು ಪ್ರದರ್ಶಿಸುವ ಉದ್ದೇಶದಿಂದ ಇದು ಸೆಪ್ಟೆಂಬರ್ 2020 ರಲ್ಲಿ ಪ್ರಥಮ ವಿಶ್ವ ಸೌರ ತಂತ್ರಜ್ಞಾನ ಶೃಂಗಸಭೆಯನ್ನು (ಡಬ್ಲ್ಯೂಎಸ್‌ಟಿಎಸ್) ಆಯೋಜಿಸಿದೆ.
- ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟ: ಒಕ್ಕೂಟವು ರಾಷ್ಟ್ರೀಯ ಸರ್ಕಾರಗಳ ನೇತೃತ್ವದಲ್ಲಿ ಮತ್ತು ನಿರ್ವಹಿಸಲ್ಪಡುವ ಅಂತರ್ಗತ ಬಹು-ಪಾಲುದಾರರ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲಿ ಮೂಲಸೌಕರ್ಯದ ವಿಪತ್ತು ಸ್ಥಿತಿಸ್ಥಾಪಕತ್ವದ ವಿವಿಧ ಅಂಶಗಳ ಬಗ್ಗೆ ಜ್ಞಾನವನ್ನು ಉತ್ಪಾದಿಸಲಾಗುತ್ತದೆ ಮತ್ತು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಸಿಡಿಆರ್‌ಐ ವಿದ್ಯುತ್ ಮತ್ತು ಸಾರಿಗೆ ಕ್ಷೇತ್ರದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವ ಕಾರ್ಯ ನಿರ್ವಹಿಸುತ್ತಿದೆ. ಎಲ್ಲಾ ಖಂಡಗಳ ದೇಶಗಳನ್ನು ಸೇರಿಸಲು ಮತ್ತು ವಿವಿಧ ಹಂತದ ಅಭಿವೃದ್ಧಿ ಮತ್ತು ಅಪಾಯಗಳಲ್ಲಿ ತನ್ನ ಸದಸ್ಯತ್ವವನ್ನು ವಿಸ್ತರಿಸಲು ಯೋಜಿಸಿದೆ.
***
(Release ID: 1693485)
Visitor Counter : 2865