ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ಬೆಂಗಳೂರು ಮೆಟ್ರೋ 2ನೇ ಹಂತದ ಉದ್ಘಾಟನೆ


ತ್ವರಿತ ಸಾರಿಗೆ ಮತ್ತು ಸ್ಮಾರ್ಟ್ ಸಾರಿಗೆ ಆಯ್ಕೆಗೆ ಬೆಂಗಳೂರು ಮಿಷನ್ 2022ರ ಗುರಿ ಸಾಧನೆಯತ್ತ ಹೆಜ್ಜೆ

ಹಂತ -2ರಲ್ಲಿ 74 ಕಿ.ಮೀ ಉದ್ದದ ಮಾರ್ಗವು 62 ನಿಲ್ದಾಣಗಳನ್ನು ಒಳಗೊಂಡಿದ್ದು, ಹಂತ -1ರ ನೇರಳೆ ಮತ್ತು ಹಸಿರು ಮಾರ್ಗಗಳಿಗೆ ವಿಸ್ತರಣೆಯನ್ನೂ ಒಳಗೊಂಡಿರುತ್ತದೆ, ಎಲ್ಲ ನಾಲ್ಕು ದಿಕ್ಕುಗಳಲ್ಲಿ ಒಟ್ಟು 34 ಕಿ.ಮೀ ಮತ್ತು ಎರಡು ಹೊಸ ಮಾರ್ಗಗಳಿವೆ

ಪ್ರಕಟಣಾ ದಿನಾಂಕ: 14 JAN 2021 6:14PM by PIB Bengaluru


ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ (ಸ್ವತಂತ್ರ ನಿರ್ವಹಣೆ) ಖಾತೆ ರಾಜ್ಯ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಡಿ.ವಿ. ಸದಾನಂದಗೌಡ ಅವರು, ಇಂದು ನಮ್ಮ ಮೆಟ್ರೋದ ಎರಡನೇ ಹಂತದಲ್ಲಿ ಯಲಚೇನಹಳ್ಳಿಯಿಂದ ಸಿಲ್ಕ್ ಇನ್ ಸ್ಟಿಟ್ಯೂಟ್ ಮೆಟ್ರೋ ನಿಲ್ದಾಣದವರೆಗಿನ 6 ಕಿಮೀ ಉದ್ದದ ವಿಸ್ತರಿತ ಮಾರ್ಗದ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.   
ನಂತರ ಮಾತನಾಡಿದ ಕೇಂದ್ರ ಸಚಿವ ಸದಾನಂದ ಗೌಡ, ನಗರಗಳಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಮತ್ತು ವಾಯು ಮಾಲಿನ್ಯ ತಡೆಗೆ ಮೆಟ್ರೋ ರೈಲು ಉಪಯುಕ್ತವಾಗಿದೆ. ಸಮಯದ ಉಳಿತಾಯಕ್ಕೂ ಈ ಯೋಜನೆ ಸಹಕಾರಿ ಎಂದರು.
ಬೆಂಗಳೂರಿನ ಒಂದು ಕೊನೆಯಿಂದ ಮತ್ತೊಂದಕ್ಕೆ ಹೋಗಲು 2 ಗಂಟೆಯ ಸಮಯ ಬೇಕಾಗುತ್ತದೆ. ಈ ಅವಧಿಯನ್ನು ಕಡಿಮೆ ಮಾಡಲು ಮತ್ತು ಜನರಿಗೆ ತ್ವರಿತ, ಸುರಕ್ಷಿತ ಪ್ರಯಾಣದ ಖಾತ್ರಿಗೆ ಮೆಟ್ರೋ ರೈಲು ಅತ್ಯುಪಯುಕ್ತವಾಗಿದೆ ಎಂದರು.  
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಮೆಟ್ರೋ ಮಾರ್ಗದ ವಿಸ್ತರಣೆಯಿಂದ ಬೆಂಗಳೂರು ನಗರದ ಜನತೆಗೆ ಅನುಕೂಲವಾಗಿದೆ. ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಬೆಂಗಳೂರು ಒಂದಾಗಿದ್ದು, ಈ ಮಹಾ ನಗರವನ್ನು ಮಾದರಿ ನಗರವಾಗಿ ಮಾಡಲು, ವಿಶ್ವದರ್ಜೆಯ ಸೌಲಭ್ಯ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಕಲ್ಪಿಸಿದೆ ಎಂದರು.
ಭಾರತದ 75ನೇ ಸ್ವಾತಂತ್ರ್ಯ ದಿನ ಆಚರಿಸುವ ಹೊತ್ತಿಗೆ 75 ಮೆಟ್ರೋ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸುವುದು ಸರ್ಕಾರದ ಗುರಿಯಾಗಿದ್ದು, ಹೆಚ್ಚುತ್ತಿರುವ ಜನಸಂಖ್ಯೆಯ ಪ್ರಯಾಣಕ್ಕೆ ಅನುಕೂಲವಾಗಲಿದೆ ಎಂದರು.
ಮೆಟ್ರೋ ಮಾರ್ಗದ ವಿಸ್ತರಣೆ ಮತ್ತು ಇಂದಿನ ಎಫ್.ಓ.ಬಿ.ಗಳು ಬೆಂಗಳೂರು ಮಿಷನ್ 2022ರ ಗುರಿಗಳ ನಿಟ್ಟಿನಲ್ಲಿದ್ದು, ನಗರದಲ್ಲಿ ತ್ವರಿತ ಸಾರಿಗೆ ಮತ್ತು ಸ್ಮಾರ್ಟ್ ಸಾರಿಗೆ ಆಯ್ಕೆಗೆ ಅವಕಾಶ ನೀಡುತ್ತವೆ. 
ಬೆಂಗಳೂರು ಮೆಟ್ರೋ ರೈಲು ಯೋಜನೆ ಎರಡನೇ ಹಂತದಲ್ಲಿ 74 ಕಿ.ಮೀ. ಉದ್ದದ ಮಾರ್ಗದಲ್ಲಿ 62 ನಿಲ್ದಾಣಗಳಿದ್ದು, 1ನೇ ಹಂತದ ನೆರಳೆ ಮತ್ತು ಹಸಿರು ಮಾರ್ಗಗಳೆಡರಲ್ಲೂ ನಾಲ್ಕೂ ದಿಕ್ಕಿನಲ್ಲಿ ಒಟ್ಟಾರೆ 34 ಕಿ.ಮೀ.ಗೆ ವಿಸ್ತರಣೆ ಮತ್ತು ಎರಡು ಹೊಸ ಮಾರ್ಗ ಅಂದರೆ, ಗೊಟ್ಟಿಗೆರೆ – ನಾಗವಾರದ ನಡುವೆ21 ಕಿ.ಮೀ. ಉದ್ದದ ಮಾರ್ಗ ಮತ್ತು ಆರ್.ವಿ. ರಸ್ತೆ – ಬೊಮ್ಮಸಂದ್ರ ನಡುವೆ 19 ಕಿ.ಮೀ. ಉದ್ದದ ಮಾರ್ಗ ಒಳಗೊಂಡಿದೆ.  ಈ ಯೋಜನೆಯನ್ನು 30,695 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿದೆ.  ಈ ವಿಸ್ತರಣೆಯು ಪ್ರಸಕ್ತ ಕಾರ್ಯಾಚರಣೆಯಲ್ಲಿರುವ ಯಲಚೇನಹಳ್ಳಿ ನಿಲ್ದಾಣದ ಬಳಿಕ 5 ಹೊಸ ನಿಲ್ದಾಣಗಳನ್ನು ಒಳಗೊಂಡಿದೆ ಅವುಗಳೆಂದರೆ  ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಾಜರಹಳ್ಳಿ, ತಲಘಟ್ಟಪುರ ಮತ್ತು ಸಿಲ್ಕ್ ಇನ್ ಸ್ಟಿಟ್ಯೂಟ್.  ಈ ವಿಸ್ತರಣೆಯು ಪ್ರಸಕ್ತ ಕಾರ್ಯಾಚರಣೆಯಲ್ಲಿರುವ 24.2 ಕಿ.ಮೀ. ಉದ್ದದ ಹಸಿರು (ಉತ್ತರ-ದಕ್ಷಿಣ) ಮಾರ್ಗದ ದಕ್ಷಿಣ ತುದಿಯ 6 ಕಿ.ಮೀ. ಉದ್ದದ ಮೇಲ್ಸೇತುವೆಯ ಮೆಟ್ರೋ ಮಾರ್ಗವಾಗಿದೆ. ಈ ವಿಸ್ತರಣೆಯೊಂದಿಗೆ ಉತ್ತರ – ದಕ್ಷಿಣ ಕಾರಿಡಾರ್ ನ ಉದ್ದ 30.2 ಕಿ.ಮೀ. ಆಗಿದೆ.  ಮೇಲ್ಸೇತುವೆಯ ಭಾಗ 213 ಸ್ಪ್ಯಾನ್ ಒಳಗೊಂಡಿದೆ.  ಈ ಕಾಮಗಾರಿ 1032 ಸ್ತಂಭಗಳು, 223 ಪಿಯರ್ಸ್ ಮತ್ತು 1998 ಸೂಪರ್ ಸ್ಟ್ರಕ್ಚರ್ ಘಟಕಗಳನ್ನು ಮತ್ತು 665 ಸಂಖ್ಯೆ ಗಿರ್ಡರ್ ಗಳನ್ನು ಒಳಗೊಂಡಿದೆ. ಕಾಂಕ್ರೀಟ್ ಪ್ರಮಾಣ 2,10,965 ಕಮ್ ಮತ್ತು 20,500 ಮೆಟ್ರಿಕ್ ಟನ್ ಉಕ್ಕಿನಂತಹ ಪ್ರಮುಖ ವಸ್ತುಗಳನ್ನು ಕಾಮಗಾರಿಯಲ್ಲಿ ಬಳಸಲಾಗಿದೆ. ವಿದ್ಯುದ್ದೀಕರಣ ಕಾರ್ಯಗಳಿಗಾಗಿ, ಸಿಗ್ನಲಿಂಗ್ ಮತ್ತು ದೂರಸಂಪರ್ಕ, ‘ಅತ್ಯಾಧುನಿಕ ಉಪಕರಣಗಳ’ ಜೊತೆಗೆ, 765 ಕಿ.ಮೀ ಕೇಬಲ್ ಮತ್ತು ವಿವಿಧ ಗಾತ್ರದ ತಂತಿಗಳನ್ನು ಹಾಕಲಾಗಿದೆ. ಮೆಟ್ರೋದ ಕೆಲವು ವೈಶಿಷ್ಟ್ಯಗಳು:
ಪ್ರಯಾಣಿಕರ ಅನುಕೂಲಕ್ಕಾಗಿ, ಪ್ರತಿ ನಿಲ್ದಾಣವೂ 8 ಎಸ್ಕಲೇಟರ್ ಗಳು ಮತ್ತು 4 ಎಲಿವೇಟರ್ ಗಳಿಂದ ಸಜ್ಜಾಗಿದ್ದು, ಒಟ್ಟಾರೆ ಅನುಕ್ರಮವಾಗಿ 40 ಎಸ್ಕಲೇಟರ್ ಗಳು ಮತ್ತು 20 ಎಲಿವೇಟರ್ ಗಳಿವೆ. 
ಈ ವಿಸ್ತರಣಾ ಮಾರ್ಗದ ಎಲ್ಲ 5 ನಿಲ್ದಾಣಗಳೂ ಛಾವಣಿಯ ಮೇಲಿನ 1.2 ಮೆ.ವ್ಯಾ ಸಾಮರ್ಥ್ಯದ ಸೌರ ವಿದ್ಯುತ್ ಒಳಗೊಂಡಿವೆ. ಸೌರ ಘಟಕಗಳ ಸ್ಥಾಪನೆಯನ್ನು 2021ರ ಮಾರ್ಚ್ ಒಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಇದೇ ಮೊದಲ ಬಾರಿಗೆ ಮೆಟ್ರೋ ಸೌರ ವಿದ್ಯುತ್ ಸಾಮರ್ಥ್ಯವನ್ನು ಸ್ಥಾಪಿಸುತ್ತಿದೆ.
ಇಂಧನ ದಕ್ಷತೆಯ ಎಲ್.ಇ.ಡಿ. ದೀಪಗಳನ್ನು ಎಲ್ಲ 5 ನಿಲ್ದಾಣಗಳಲ್ಲಿ ಒದಗಿಸಲಾಗಿದೆ.
ಎಲ್ಲ ನಿಲ್ದಾಣಗಳಲ್ಲೂ  ಪ್ರವೇಶ/ನಿರ್ಗಮನ ಒದಗಿಸಲಾಗಿದ್ದು, ಹೊಸದಾಗಿ ಒದಗಿಸಲಾಗಿರುವ ಸರ್ವೀಸ್ ರಸ್ತೆಗೆ ತೆರೆದುಕೊಂಡಿದೆ. ಬಸ್ ಮಾರ್ಗಗಳು, ಟ್ಯಾಕ್ಸಿ ಮತ್ತು ಆಟೋಗಳಿಗೆ ಪಿಕಪ್ ಮತ್ತು ಡ್ರಾಪ್ ಪ್ರದೇಶವನ್ನು ಸರ್ವೀಸ್ ರಸ್ತೆಯಲ್ಲಿ ಗುರುತಿಸಲಾಗಿದೆ.
ದೈಹಿಕ ಮತ್ತು ದೃಷ್ಟಿ ವಿಶೇಷ ಚೇತನ ವ್ಯಕ್ತಿಗಳಿಗಾಗಿ, ಎಲ್ಲ ಸೌಲಭ್ಯಗಳು ಅಂದರೆ ರ‍್ಯಾಪ್ ಗಳು, ಲಿಫ್ಟ್, ಪ್ರತ್ಯೇಕ ಶೌಚಾಲಯಗಳು, ಸ್ಪರ್ಶ ಮಾರ್ಗ, ಮತ್ತು ರೈಲುಗಳಲ್ಲಿ ಮೀಸಲಿಟ್ಟ ಸ್ಥಳವನ್ನು ಒದಗಿಸಲಾಗಿದೆ
ಬಹು ಮಾಧ್ಯಮ ಸಂಯೋಗ
ಬಸ್ ನಿಲ್ದಾಣದ ಸಹ ಗುರುತಿಸುವಿಕೆಗಾಗಿ ಐದೂ ನಿಲ್ದಾಣಗಳ ಎರಡೂ ಬದಿಗಳಲ್ಲಿ ಸಮರ್ಪಿತ ಮಾದರಿಯ ಬದಲಾವಣೆ ಸೇವೆಯ ಮಾರ್ಗಗಳನ್ನು ರೂಪಿಸಲಾಗಿದೆ ಮತ್ತು ಅಲ್ಲದೆ ಮಧ್ಯಂತರ ಸಾರ್ವಜನಿಕ ಸಾರಿಗೆ (ಐಪಿಟಿ) ಗೆ ಜಾಗವನ್ನು ಒದಗಿಸಿದೆ.
ಒಂದು ದೇಶ ಒಂದು ಕಾರ್ಡ್ 
ಈಗ ಉದ್ಘಾಟನೆಯಾದ 5 ನಿಲ್ದಾಣಗಳಲ್ಲಿ ತೆರೆದ ಲೂಪ್ ಎನ್‌.ಸಿ.ಎಂ.ಸಿ. ‘ಒಂದು ರಾಷ್ಟ್ರ ಒಂದು ಕಾರ್ಡ್’ ಬಳಸಿ ಪ್ರಯಾಣವನ್ನು ಮಾಡಲು ಬೆಂಗಳೂರು ಮೆಟ್ರೋ ಸ್ವಯಂ ಚಾಲಿತ ದರ ಸಂಗ್ರಹಣೆ (ಎ.ಎಫ್.ಸಿ.)ಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ನಿಯೋಜಿಸಿದೆ. 
42 ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 42 ಕಿ.ಮೀ ಉದ್ದದ ಜಾಲದ 40 ನಿಲ್ದಾಣಗಳಲ್ಲಿನ ಎ.ಎಫ್‌.ಸಿ ವ್ಯವಸ್ಥೆಯನ್ನು ಎನ್‌.ಸಿ.ಎಂ.ಸಿ.ಗೆ ನವೀಕರಿಸಲಾಗುತ್ತಿದೆ.
ಹಂತ -1ರ ಮಾರ್ಗ ಸೇರಿದಂತೆ ಎನ್‌.ಸಿ.ಎಂ.ಸಿ ಆಧಾರಿತ ಟಿಕೆಟಿಂಗ್ ಸೇವೆ 2021ರ ಆಗಸ್ಟ್ 15 ರೊಳಗೆ ಪ್ರಯಾಣಕ್ಕೆ ಲಭ್ಯವಾಗಲಿದೆ. ನಂತರ, ಪಶ್ಚಿಮ ವಿಸ್ತರಣೆ ಸೇರಿದಂತೆ ಬೆಂಗಳೂರಿನಲ್ಲಿ 55 ಕಿ.ಮೀ ದೂರದಲ್ಲಿರುವ ಸಂಪೂರ್ಣ ಮೆಟ್ರೋ ಜಾಲನಲ್ಲಿ ಪ್ರಯಾಣಕ್ಕಾಗಿ ಹಣ ಪಾವತಿಸಲು ಪ್ರಯಾಣಿಕರು ರೂಪೇ ಕಾರ್ಡ್ ಅಥವಾ ಯಾವುದೇ ಇತರ ಎನ್‌.ಸಿ.ಎಂ.ಸಿ ಕಂಪ್ಲೈಂಟ್ ಬ್ಯಾಂಕ್ ಬಳಸಬಹುದು 


****


(ಪ್ರಕಟಣೆ ಐ.ಡಿ.: 1688663) ವಿಸಿಟರ್ ಕೌಂಟರ್ : 245
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Manipuri , Tamil