ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ವಲಸೆ ಮಕ್ಕಳ ಗುರುತಿಸುವಿಕೆ, ಪ್ರವೇಶ ಮತ್ತು ಶಿಕ್ಷಣ ಮುಂದುವರಿಕೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಶಿಕ್ಷಣ ಸಚಿವಾಲಯ

Posted On: 10 JAN 2021 3:52PM by PIB Bengaluru

ಕೋವಿಡ್-19 ಸಾಂಕ್ರಾಮಿಕ ಶಾಲೆಯಿಂದ ಹೊರಗುಳಿದ ಮಕ್ಕಳ ಮೇಲೆ ಬೀರಿರುವ ಪರಿಣಾಮವನ್ನು ತಗ್ಗಿಸಲು ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಶಾಲೆಯಿಂದ ಹೆಚ್ಚಿನ ಸಂಖ್ಯೆಯ ಮಕ್ಕಳು ಹೊರಗುಳಿಯದಂತೆ ಮಾಡಲು  ಸೂಕ್ತ ಕಾರ್ಯತಂತ್ರವನ್ನು ರೂಪಿಸುವುದು ಅತ್ಯಗತ್ಯವಾಗಿದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಅಂತಹ ಮಕ್ಕಳ ಪ್ರವೇಶ ಇಳಿಕೆ, ಕಲಿಕೆ ನಷ್ಟವಾಗಿ ಸಾಕಷ್ಟು ಕೆಡುಕಾಗಿದೆ, ಹಾಗಾಗಿ ಅವರಿಗೆ ಶಿಕ್ಷಣದ  ಲಭ್ಯತೆ, ಗುಣಮಟ್ಟ ಮತ್ತು ಸಮಾನತೆಗಾಗಿ ಕ್ರಮ ಕೈಗೊಳ್ಳಬೇಕಾಗಿದೆ.  

          ಶಿಕ್ಷಣ ಸಚಿವಾಲಯ ವಲಸೆ ಮಕ್ಕಳನ್ನು ಗುರುತಿಸುವುದು, ಅವರ ಪ್ರವೇಶ ಮತ್ತು ನಿರಂತರ ಶಿಕ್ಷಣವನ್ನು ಮುಂದುವರಿಸಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

          ಶಾಲೆಗೆ ಹೋಗುವ ಮಕ್ಕಳಿಗೆ ಸಮಾನ ಮತ್ತು ಗುಣಮಟ್ಟದ ಶಿಕ್ಷಣ ಲಭ್ಯವಾಗುವಂತೆ ಮಾಡುವುದು ಹಾಗೂ ಸಾಂಕ್ರಾಮಿಕದ ಪರಿಣಾಮ ದೇಶದಲ್ಲಿ ಶಾಲಾ ಶಿಕ್ಷಣದ ಮೇಲೆ ಮಾಡಿರುವ ಪರಿಣಾಮವನ್ನು ಕಡಿಮೆ ಮಾಡುವುದು ಅಗತ್ಯವಾಗಿದ್ದು, ಅದಕ್ಕಾಗಿ ಶಾಲೆ ಪುನರಾರಂಭವಾದಾಗ ಮತ್ತು ಆನಂತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅನುಸರಿಸಬೇಕಿರುವ ಕ್ರಮಗಳ ಕುರಿತು ಶಿಕ್ಷಣ ಸಚಿವಾಲಯ ವಿಸ್ತೃತವಾದ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಮಾರ್ಗಸೂಚಿಯ ಪ್ರಮುಖಾಂಶಗಳು ಈ ಕೆಳಗಿನಂತಿವೆ:

ಎ. ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ನಿರಂತರ ಶಿಕ್ಷಣ(ಒಒಎಸ್ ಸಿ) ಮತ್ತು ವಿಶೇಷ ಮಕ್ಕಳಿಗೆ ಆದ್ಯತೆ(ಸಿಡಬ್ಲ್ಯೂಎಸ್ಎನ್)

·  ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಸ್ವಯಂಸೇವಕರು, ಸ್ಥಳೀಯ ಶಿಕ್ಷಕರು ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯಿಂದ ಗುರುತಿಸುವುದು, ಅವರಿಗೆ ವಸತಿಯೇತರ ತರಬೇತಿಯನ್ನು ಮುಂದುವರಿಸುವುದು.

· ಸ್ವಯಂಸೇವಕರು – ವಿಶೇಷ ಬೋಧಕರ ಮೂಲಕ ಸಿಡಬ್ಲ್ಯೂಎಸ್ಎನ್ ಮಕ್ಕಳಿಗೆ ಗೃಹ ಆಧಾರಿತ ಶಿಕ್ಷಣವನ್ನು ಮುಂದುವರಿಸುವುದು.

  ಬಿ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸುವುದು

·   ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು 6 ರಿಂದ 18 ವರ್ಷ ವಯೋಮಿತಿಯ ಒಒಎಸ್ ಸಿ ಮಕ್ಕಳನ್ನು ನಿಖರವಾಗಿ ಗುರುತಿಸಲು ಸಮಗ್ರ ಮನೆ-ಮನೆ ಸಮೀಕ್ಷೆ ನಡೆಸಬೇಕು ಮತ್ತು ಅವರ ಪ್ರವೇಶಾತಿಗೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು. 

ಸಿ. ವಿಶೇಷ ದಾಖಲಾತಿ ಆಂದೋಲನ ಮತ್ತು ಜಾಗೃತಿ ಆಂದೋಲನ

·    ಶೈಕ್ಷಣಿಕ ವರ್ಷದ ಆರಂಭದಲ್ಲಿ ಪ್ರವೇಶೋತ್ಸವ, ಶಾಲಾ ಚಲೋ (ಶಾಲೆಯತ್ತ ನಡೆಯಿರಿ) ಅಭಿಯಾನ ಮತ್ತಿತರ ವಿಶೇಷ ದಾಖಲಾತಿ ಆಂದೋಲನಗಳನ್ನು ಕೈಗೊಳ್ಳುವುದು.

·   ಮಕ್ಕಳ ಹಾಜರಾತಿ ಮತ್ತು ಪ್ರವೇಶದ ಬಗ್ಗೆ ಸಮುದಾಯ ಮತ್ತು ಪೋಷಕರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವುದು.

· ಕೊರೊನಾಗೆ ಸಂಬಂಧಿಸಿದಂತೆ ಮಾಸ್ಕ್ ಧರಿಸುವುದು, ಆರು ಅಡಿ ಅಂತರ ಕಾಯ್ದುಕೊಳ್ಳುವುದು ಮತ್ತು ಸಾಬೂನು ಬಳಸಿ ಕೈ ತೊಳೆಯುವುದು ಈ ಮೂರು ನಡವಳಿಕೆಗಳ ಬಗ್ಗೆ ಜಾಗೃತಿ ಮೂಡಿಸುವುದು. ಈ ಕುರಿತು 6.11.2020ರಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಐಇಸಿ ಸಾಮಗ್ರಿಗಳನ್ನು ಹಂಚಿಕೊಳ್ಳಲಾಗಿದೆ.

ಡಿ. ಶಾಲೆಗಳು ಮುಚ್ಚಿದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನೆರವು

· ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಬೃಹತ್ ಪ್ರಮಾಣದ ಜಾಗೃತಿ ಮತ್ತು ನಿರ್ದಿಷ್ಟ ಮನೆಗಳಿಗೆ ಭೇಟಿಯ ಮೂಲಕ ಬೆಂಬಲ ನೀಡುವುದು.

· ಮನೋದರ್ಪಣ ವೆಬ್ ಪೋರ್ಟಲ್ ಮತ್ತು ಟೆಲಿ ಕೌನ್ಸಲಿಂಗ್ ಸಂಖ್ಯೆ ಬಳಸಿ, ಮಾರ್ಗದರ್ಶನ ಸೇವೆಗಳು ಮತ್ತು ಮಾನಸಿಕ – ಸಾಮಾಜಿಕ ಬೆಂಬಲ ಒದಗಿಸುವುದು.

· ಶೈಕ್ಞಣಿಕ ಸಾಮಗ್ರಿ ಮತ್ತು ಸಂಪನ್ಮೂಲಗಳ ವಿತರಣೆ, ಪೂರಕ ಸಾಮಗ್ರಿ, ಕಾರ್ಯಾಗಾರ ಮತ್ತು –ವರ್ಕ್ ಶೀಟ್ ಗಳ ಮೂಲಕ ಗೃಹ ಆಧಾರಿತ ಶಿಕ್ಷಣವನ್ನು ಬೆಂಬಲಿಸುವುದು.

· ಗ್ರಾಮಗಳ ಮಟ್ಟದಲ್ಲಿ ಸಣ್ಣ ಗುಂಪುಗಳ ಮೂಲಕ ಗಾಲಿಯ ಮೇಲೆ ತರಗತಿಗಳ ಆಯ್ಕೆಯನ್ನು ಪರಿಶೋಧಿಸುವುದು.

· ಮಕ್ಕಳಿಗೆ/ಆನ್ ಲೈನ್/ಡಿಜಿಟಲ್ ಸಂಪನ್ಮೂಲ, ಟಿವಿ, ರೇಡಿಯೋ ಮತ್ತಿತರವುಗಳ ಲಭ್ಯತೆ ಹೆಚ್ಚಿಸುವುದು ಮತ್ತು  ಕಲಿಕೆ ನಷ್ಟವನ್ನು ತಗ್ಗಿಸುವುದು.

·  ಸಕಾಲದಲ್ಲಿ ಮತ್ತು ಸುಲಭವಾಗಿ ಸಮವಸ್ತ್ರ, ಪಠ್ಯಪುಸ್ತಕ ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆ ಲಭ್ಯವಾಗುವಂತೆ ಮಾಡುವುದು.

·  ಡಿಬಿಟಿ ಮೂಲಕ ಸಿಡಬ್ಲ್ಯೂಎಸ್ಎನ್ ಅಡಿ ನೋಂದಣಿ ಮಾಡಿಕೊಂಡಿರುವ ಬಾಲಕಿಯರಿಗೆ ಸಕಾಲದಲ್ಲಿ  ಪ್ರೋತ್ಸಾಹ ದನ ಬಿಡುಗಡೆ ಮಾಡುವುದು.

· ಸ್ಥಳೀಯ ಮಟ್ಟದಲ್ಲಿ ಮಕ್ಕಳ ರಕ್ಷಣಾ ಕಾರ್ಯತಂತ್ರಗಳನ್ನು ಬಲವರ್ಧನೆಗೊಳಿಸುವುದು.

ಇ. ಶಾಲೆ ಪುನರಾರಂಭವಾದ ನಂತರ ವಿದ್ಯಾರ್ಥಿಗಳಿಗೆ ಬೆಂಬಲ

· ಶಾಲೆಗಳು ಪುನರಾರಂಭವಾದ ನಂತರ ಆರಂಭಿಕ ಹಂತದಲ್ಲಿ ಶಾಲೆಗಳನ್ನು ಸಿದ್ಧಗೊಳಿಸಲು ಮಾದರಿ ಅಥವಾ ಸಂಪರ್ಕ ಸೇತು ಕೋರ್ಸ್ ಗಳನ್ನು ನಡೆಸುವುದು. ಆ ಮೂಲಕ ಮಕ್ಕಳು ಶಾಲೆಯ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಮತ್ತು ಅವರಿಗೆ ಒತ್ತಡವಾಗದಂತೆ ಅಥವಾ ಅವರು ಹೊರಗುಳಿಯದಂತೆ ನೋಡಿಕೊಳ್ಳುವುದು.

· ಮಕ್ಕಳ ಕಲಿಕಾ ಹಂತವನ್ನು ಆಧರಿಸಿ ನಾನಾ ವರ್ಗದ ಮಕ್ಕಳನ್ನು ಬೇರೆ ಬೇರೆ ಹಂತಗಳಲ್ಲಿ ಗುರುತಿಸುವುದು.

· ಈ ವರ್ಷ ಶಾಲೆಯಿಂದ ಹೊರಗುಳಿಯುವುದನ್ನು ತಡೆಯಲು ಬಂಧನ ಮಾನದಂಡ ನಿಯಮಗಳನ್ನು ಸಡಿಲಿಸುವುದು.

· ಮಕ್ಕಳು ಓದುವುದನ್ನು ಮತ್ತು ಬರೆಯುವುದನ್ನು ಖಾತ್ರಿಪಡಿಸಲು ಜೊತೆಗೆ ಸಂಖ್ಯಾ ಕೌಶಲ್ಯಗಳನ್ನು ತಿಳಿಯಲು ಪಠ್ಯ ಪುಸ್ತಕಗಳಲ್ಲದೆ ಸೃಜನಾತ್ಮಕ ಬರವಣಿಗೆ ಮತ್ತು ಸಮಸ್ಯೆ ಬಿಡಿಸುವ ಪುಸ್ತಕಗಳ ಓದನ್ನು ಉತ್ತೇಜಿಸುವುದು.

· ಕಲಿಕೆ ನಷ್ಟ ಮತ್ತು ಅಸಮಾನತೆ ನಿವಾರಣೆಗೆ ದೊಡ್ಡ ಪ್ರಮಾಣದಲ್ಲಿ ಪರಿಹಾರ ಕಾರ್ಯಕ್ರಮಗಳು/ಕಲಿಕೆ ವೃದ್ಧಿ ಕಾರ್ಯಕ್ರಮಗಳನ್ನು ನಡೆಸುವುದು. 

ಎಫ್.  ಶಿಕ್ಷಕರ ಸಾಮರ್ಥ್ಯ ವೃದ್ಧಿ

· ಆನ್ ಲೈನ್ ನಿಷ್ ಥಾ ತರಬೇತಿ ಮಾದರಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಮತ್ತು ದೀಕ್ಷಾ ಪೋರ್ಟಲ್ ನಲ್ಲಿ ಸದ್ಯದಲ್ಲೇ ಕೊರೊನಾ ಪ್ರತಿಸ್ಪಂದನಾ ನಡವಳಿಕೆಯ ತರಬೇತಿ ಮಾದರಿಯನ್ನು ಅಳವಡಿಸಲಾಗುವುದು.

· ಮಕ್ಕಳ ಕಲಿಕೆ ಆನಂದವಾಗಿರಲು ಹಾಗೂ ಸಂತೋಷದಿಂದಿರುವಂತೆ ಮಾಡಲು ಎನ್ ಸಿಇಆರ್ ಟಿ ಸಿದ್ಧಪಡಿಸಿರುವ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಬಳಕೆ ಮಾಡುವುದು.

*****



(Release ID: 1687492) Visitor Counter : 1767