ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಥಾಮಸ್ ವಿಂಟರ್ ಬರ್ಗ್ ಅವರ “ಅನದರ್ ರೌಂಡ್’ ಭಾರತೀಯ ಪ್ರೀಮಿಯರ್ ಪ್ರದರ್ಶನದೊಂದಿಗೆ  ಆರಂಭವಾಗಲಿರುವ 51ನೇ ಇಫ್ಫಿ

51ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2021 ಜನವರಿ 16ರಂದು ಥಾಮಸ್ ವಿಂಟರ್ ಬರ್ಗ್ ಅವರ ಅನದರ್ ರೌಂಡ್ಸಿನಿಮಾದ ಭಾರತೀಯ ಪ್ರೀಮಿಯರ್ ಪ್ರದರ್ಶನದೊಂದಿಗೆ ಆರಂಭಗೊಳ್ಳಲಿದೆ. ಕೇನ್ಸ್ ಅತ್ಯುತ್ತಮ ನಟ ಪ್ರಶಸ್ತಿ ಪುರಸ್ಕೃತ ಮ್ಯಾಡ್ಸ್ ಮಿಕೆಲ್ಸೆನ್ ನಟಿಸಿರುವ ಚಲನಚಿತ್ರವು ಇಫ್ಫಿಯಲ್ಲಿ ಪ್ರದರ್ಶನಗೊಳ್ಳುತ್ತಿರುವ ರತ್ನಖಚಿತ ಸಾಲಿನ ಸಿನಿಮಾಗಳಲ್ಲಿ ಒಂದಾಗಿದೆ. ಚಲನಚಿತ್ರವು ಡೆನ್ಮಾರ್ಕ್ನಿಂದ ಆಸ್ಕರ್ಗೆ ಅಧಿಕೃತ ಪ್ರವೇಶ ಪಡೆದಿದೆ.

WhatsApp Image 2021-01-01 at 5.18.18 PM.jpeg

ಉತ್ಸವವು ವಿಶ್ವದ ಪ್ರೀಮಿಯರ್ ಮೆಹರುನಿಸಾಪ್ರದರ್ಶನಕ್ಕೂ ಸಾಕ್ಷಿಯಾಗಲಿದೆ. ಸಂದೀಪ್ ಕುಮಾರ್ ಅವರ ಚಿತ್ರ ಪ್ರೀಮಿಯರ್ ಮಿಡ್-ಫೆಸ್ಟ್ ನಲ್ಲಿ ಪ್ರದರ್ಶನಗೊಳ್ಳಲಿದೆ. ಅನುಪಮ ನಟ ಫಾರೂಖ್ ಜಾಫರ್ ನಟಿಸಿರುವ ಚಲನಚಿತ್ರವು ಮಹಿಳೆಯ ಜೀವಮಾನದ ಕನಸಿನ ಕಥೆಯನ್ನು ನಿರೂಪಿಸುತ್ತದೆ.

.WhatsApp Image 2021-01-01 at 5.18.42 PM.jpeg

ಕಿಶೋಶಿ ಕುರೋಸಾವಾ ಅವರ ಐತಿಹಾಸಿಕ ನಾಟಕ ವೈಫ್ ಆಫ್ ಸ್ಪೈಇಂಡಿಯಾ ಪ್ರೀಮಿಯರ್ ನೊಂದಿಗೆ ಉತ್ಸವ 2021 ಜನವರಿ 24ರಂದು ಕೊನೆಗೊಳ್ಳಲಿದೆ. ಜಪಾನಿನ ಚಲನಚಿತ್ರ ವೆನಿಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶನಕ್ಕಾಗಿ ರಜತ ಸಿಂಹ ಪ್ರಶಸ್ತಿ ಗಳಿಸಿತ್ತು.

.WhatsApp Image 2021-01-01 at 5.13.08 PM.jpeg

ಗೋವಾದಲ್ಲಿ 51ನೇ ಇಫ್ಫಿಯನ್ನು 2021 ಜನವರಿ 16ರಿಂದ 24ರವರೆಗೆ ಆಯೋಜಿಸಲಾಗಿದೆ. ಆವೃತ್ತಿಯನ್ನು ಹೈಬ್ರೀಡ್ ವಿಧಾನದಲ್ಲಿ ಪ್ರಥಮ ಬಾರಿಗೆ ನಡೆಸಲಾಗುತ್ತಿದ್ದು, ಇದರಲ್ಲಿ ಆನ್ ಲೈನ್ ಮತ್ತು ವ್ಯಕ್ತಿಶಃ ಆನಂದಾನುಭವ ಒಳಗೊಂಡಿದೆ. ಉತ್ಸವದಲ್ಲಿ ವಿಶ್ವಾದ್ಯಂತದ 224 ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಇದರಲ್ಲಿ 21 ಫೀಚರ್ ಫಿಲಂ ಅಲ್ಲದ ಮತ್ತು 26 ಫೀಚರ್ ಸಿನಿಮಾಗಳು ಭಾರತೀಯ ಪನೋರಮಾ ಸಿನಿಮಾ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿವೆ.

ಉತ್ಸವಕ್ಕೆ ಮಾಧ್ಯಮ ನೋಂದಣಿಯನ್ನು ಆರಂಭಿಸಲಾಗಿದ್ದು, 2021 ಜನವರಿ 10ರವರೆಗೆ ಲಭ್ಯವಿರುತ್ತದೆ 2021 ಜನವರಿ 1ಕ್ಕೆ ಅರ್ಜಿದಾರರಿಗೆ 21 ವರ್ಷ ವಯಸ್ಸು ತುಂಬಿರಬೇಕು ಮತ್ತು ಕನಿಷ್ಠ ಮೂರು ವರ್ಷಗಳ ಕಾಲ ಇಫ್ಫಿಯಂತಹ ಪ್ರಮುಖ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳ ವರದಿ ಮಾಡಿದ ವೃತ್ತಿಪರ ಅನುಭವವನ್ನು ಹೊಂದಿರಬೇಕು.

***


(Release ID: 1685767) Visitor Counter : 250