ಸಂಪುಟ
ಎಸ್ಟೋನಿಯಾ, ಪರುಗ್ವೆ ಮತ್ತು ಡೊಮಿನಿಕನ್ ಗಣರಾಜ್ಯದಲ್ಲಿ 3 ಭಾರತೀಯ ಅಭಿಯಾನಗಳನ್ನು ಆರಂಭಿಸಲು ಸಂಪುಟದ ಅನುಮೋದನೆ
Posted On:
30 DEC 2020 3:40PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2021ರಲ್ಲಿ ಎಸ್ಟೋನಿಯಾ, ಪೆರುಗ್ವೆ ಮತ್ತು ಡೊಮಿನಿಕನ್ ಗಣರಾಜ್ಯಗಳಲ್ಲಿ ಭಾರತೀಯ ಅಭಿಯಾನ ಆರಂಭಿಸಲು ತನ್ನ ಅನುಮೋದನೆ ನೀಡಿದೆ.
ಅನುಷ್ಠಾನದ ಕಾರ್ಯತಂತ್ರ:
ಈ ರಾಷ್ಟ್ರಗಳಲ್ಲಿ ಭಾರತೀಯ ಅಭಿಯಾನವನ್ನು ತೆರೆಯುವುದು, ಭಾರತದ ರಾಜತಾಂತ್ರಿಕ ಹೆಜ್ಜೆಗುರುತುಗಳನ್ನು ವಿಸ್ತರಿಸಲು, ರಾಜಕೀಯ ಸಂಬಂಧಗಳನ್ನು ಗಾಢವಾಗಿಸಲು, ದ್ವಿಪಕ್ಷೀಯ ವ್ಯಾಪಾರ, ಹೂಡಿಕೆ ಮತ್ತು ಆರ್ಥಿಕ ಚಟುವಟಿಕೆಗಳ ಬೆಳವಣಿಗೆಯನ್ನು ಶಕ್ತಗೊಳಿಸಲು, ಬಲಿಷ್ಠ ಜನ ಸಂಪರ್ಕಗಳಿಗೆ ಅನುಕೂಲವಾಗುವಂತೆ, ಬಹುಪಕ್ಷೀಯ ವೇದಿಕೆಗಳಲ್ಲಿ ರಾಜಕೀಯ ಪ್ರಭಾವವನ್ನು ಹೆಚ್ಚಿಸಲು ಮತ್ತು ಭಾರತದ ವಿದೇಶಾಂಗ ನೀತಿಗಳ ಉದ್ದೇಶಗಳಿಗೆ ಬೆಂಬಲವನ್ನು ಪಡೆಯಲು ಸಹಾಯ ಮಾಡುತ್ತದೆ.
ಈ ರಾಷ್ಟ್ರಗಳಲ್ಲಿನ ಭಾರತೀಯ ಅಭಿಯಾನ ಭಾರತೀಯ ಸಮುದಾಯಕ್ಕೆ ಉತ್ತಮ ನೆರವು ನೀಡುತ್ತದೆ ಮತ್ತು ಅವರ ಹಿತಾಸಕ್ತಿಗಳನ್ನು ಕಾಪಾಡುತ್ತದೆ.
ಉದ್ದೇಶಗಳು:
ಸ್ನೇಹಪರ ರಾಷ್ಟ್ರಗಳ ಸಹಭಾಗಿತ್ವದ ಮೂಲಕ ಭಾರತದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸುವುದು ನಮ್ಮ ವಿದೇಶಾಂಗ ನೀತಿಯ ಉದ್ದೇಶವಾಗಿದೆ. ವಿಶ್ವದಾದ್ಯಂತ ನಮ್ಮ ಸಹಯೋಗಿ ರಾಷ್ಟ್ರಗಳೊಂದಿಗಿರುವ ಪ್ರಸಕ್ತ ಅಭಿಯಾನ ಮತ್ತು ಪೋಸ್ಟ್ ಗಳು, ನಮ್ಮ ಬಾಂಧವ್ಯದ ವಾಹಕಗಳಾಗಿ ಕಾರ್ಯನಿರ್ವಹಿಸುತ್ತಿವೆ.
ಈ ಮೂರು ಹೊಸ ಅಭಿಯಾನಗಳನ್ನು ತೆರೆಯುವ ನಿರ್ಧಾರ ನಮ್ಮ ಅಭಿವದ್ಧಿ ಮತ್ತು ವೃದ್ಧಿಯ ರಾಷ್ಟ್ರೀಯ ಆದ್ಯತೆ ಅಥವಾ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅನುಸರಣೆಯಲ್ಲಿ ದೂರದೃಷ್ಟಿಯ ಕ್ರಮವಾಗಿದೆ. ಭಾರತದ ರಾಜತಾಂತ್ರಿಕತೆಯ ಉಪಸ್ಥಿತಿ ಇತರ ವಿಷಯಗಳೊಂದಿಗೆ, ಭಾರತೀಯ ಕಂಪನಿಗಳಿಗೆ ಮಾರುಕಟ್ಟೆ ಪ್ರವೇಶವನ್ನು ಒದಗಿಸುತ್ತದೆ ಮತ್ತು ಸರಕು ಮತ್ತು ಸೇವೆಗಳ ಭಾರತೀಯ ರಫ್ತು ಹೆಚ್ಚಿಸುತ್ತದೆ. ಇದು ಸ್ವಾವಲಂಬಿ ಭಾರತ ಅಥವಾ ‘ಆತ್ಮನಿರ್ಭರ ಭಾರತ್’ ಗುರಿಯೊಂದಿಗೆ ದೇಶೀಯ ಉತ್ಪಾದನೆ ಮತ್ತು ಉದ್ಯೋಗವನ್ನು ಹೆಚ್ಚಿಸಲು ನೇರ ಪರಿಣಾಮ ಬೀರುತ್ತದೆ.
****
(Release ID: 1684838)
Visitor Counter : 296
Read this release in:
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam